Saturday, 9 July 2016

ಮಾಯ ನಗರಿ ದುಬೈ ಪ್ರವಾಸ

 
ಮಧ್ಯ ಏಷಿಯದ ಪ್ಯಾರಿಸ್ ಎಂದು ಕರೆಯಲ್ಪಡುವ, ದುಬೈಗೆ ನಾನು ಮತ್ತು ನನ್ನಯಜಮಾನರು
ಮಾರ್ಚ್ 8ನೇ ತಾರೀಖು 2012 ಸಂಜೆ 6ವರೆಗೆ, ಬೆಂಗಳೂರಿನಿಂದ ಹೊರಡುವ ಎಮಿರೇಟ್ಸ್ ಏರ್ ಬಸ್ಸುನಿಂದ
ಟೀಕೆಟ್ ಕಾದಿರಿಸಿ, ಮನೆಯನ್ನು ಮದ್ಯಾನ್ಹ3ವರೆಗೆ ಬಿಟ್ಟು ಹೊರೆಟೆವು.

  2 ದಿನ ದಿಂದ ಮನೆಯಲ್ಲಿ ಪ್ಯಾಕಿಂಗ್, ಮಗಳಿಗೆ ಎಲ್ಲಾ ತರಹದ ಪುಡಿಗಳು, ಹೂವು, ಸ್ವಲ್ಪ
ಸಿಹಿ, ನಮ್ಮ ಬಟ್ಟೆಗಳು 2 ಸೂಟ್ ಕೇಸ್ ಸೇರಿತು.  ಹಪ್ಪಳ ಸಂಡಿಗೆಗಳು ಒಂದು ಕಿಟ್ ಬ್ಯಾಗ್.  ನೋಡಲು
ಬಹಳ ದೊಡ್ಡದಾಗಿ ಕಾಣುತಿತ್ತು.  ಎಳೆದು ತರುವ ಮಾರ್ಕೋಪೋಲೋ ಹಾಗು ಅಮೇರಿಕನ್ ಸೂಟ್ ಕೇಸ್.
ಅದರ ಗಾತ್ರ ನೋಡಿದ್ರೆ ಏನೋ ಒಂದು ಕ್ವಿಂಟಲ್ ಇದೆಯೆನೋ ಅನ್ನಿಸುತ್ತಿತ್ತು.  ತೂಗಿದರೆ ಮೂರು ಸೇರಿ
30 ಕೆ.ಜಿ.  ಕೈಯಲ್ಲಿ ಇಬ್ಬರಲ್ಲೂ ಹ್ಯಾಂಡ್ ಬ್ಯಾಗ್, ಅದರಲ್ಲಿ ಹೂವುಗಳು. ಒಬ್ಬೊಬ್ಬರು 30 ಕೆ.ಜಿ. + 7 ಕೆ.ಜಿ.
ತೂಕ ತೆಗೆದುಕೊಂಡು ಹೊಗಬಹುದಿತ್ತು.  ಏರ್ ಪೋರ್ಟ್ ಹೊದ ತಕ್ಷಣ, ಅಲ್ಲಿ ಪಾಸ್ ಪೋರ್ಟ್ ಚೆಕ್ ಅಪ್
ಅಗಿ, ಬೋರ್ಡಿಂಗ್ ಪಾಸ್ ಸಿಕ್ಕಿ ವಿಮಾನ ಹತ್ತಲು ಹೊರೆಟೆವು.  ನಮ್ಮ ಜೊತೆಗೆ ನಮ್ಮ ಸ್ನೇಹಿತರ ತಾಯಿ
86 ವರುಷದವರು ಬಂದ್ದಿದ್ದರು.  ವಯಸ್ಸಾದವರಿಗೆ ಮೊದಲು ಪ್ರವೇಶ.  ಆಕೆ ವೀಲ್ ಚೇರ್ ನಲ್ಲಿ ಕುಳಿತಿದ್ದು,
ನಾವು ಅವರನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದರಿಂದ ಬೇಗ ಪ್ರವೇಶವಾಯಿತು.  ಗಗನ ಸಖಿಯರು
ಸ್ವಾಗತಿಸಿ ನಮ್ಮ ನಮ್ಮ ಜಾಗ ತೋರಿಸಿದರು.  ಮೊದರ ವಿಮಾನ ಪ್ರಯಾಣ.  ಕುತೂಹಲವಾಗಿ ಕಾಯುತ್ತಿದ್ದೆವು.
ನನ್ನ ಸೀಟ್ ಕಿಟಿಕಿಯ ಪಕ್ಕದ್ದು.  ಇನ್ನು ಹಗಲಿತ್ತು.  ಸೀಟ್ ಬೆಲ್ಟ್ ಹಾಕಿಕೊಳ್ಳಲು ಅನೌಸ್ಸ್ ಮಾಡಿದರು.
ವಿಮಾನದ ರೆಕ್ಕೆಗಳು ಮುಚ್ಚುತ್ತಿದ್ದಹಾಗೆ ರನ್ ವೇಯಲ್ಲಿ ಓಡಿ ಮೇಲೇರಿದಾಗ ಯಾವ ಜರ್ಕ್ ಸಹ ಅಗದೆ
ವಿಮಾನ ನಿಧಾನ ನಿಧಾನವಾಗಿ ಮೇಲೇರಿದುದು ಗೊತ್ತೇಅಗಲಿಲ್ಲ.

        ಕುಳಿತ ಸೀಟ್ ಮುಂದೆ ಟಿವಿ ಡಿಸ್‍ಪ್ಲೆ ಸ್ಕ್ರಿನ್ನಲ್ಲಿ, ಪೈಲೇಟ್‍ನ ಸುಸ್ವಾಗತ, ಗ್ಲೋಬಲ್ ಮ್ಯಾಪ್,
ಪ್ಲೆನ್ ಎಷ್ಟು ಎತ್ತರದಲ್ಲಿ ಹಾರುತ್ತಿದೆ, ಯಾವ ಸ್ಪೀಡ್ನಲ್ಲಿ, ಯಾವ ಪಾಯಿಂಟ್ನಲ್ಲಿ ಇದೆ, ತಾಪಾಮಾನ ಏಷ್ಟು,
ಎಲ್ಲಾ ತೋರಿಸುತ್ತಿತ್ತು.  ಸೇಫ್ಟಿ ರೂಲ್ಸ್, ಕಾಲುಗಳಿಗೆ ನೋವು ಬಂದರೆ, ಕುಳಿತಲ್ಲೆ ಮಾಡುವ ವ್ಯಾಯಾಮ,
ತೋರಿಸಲಾಗುತ್ತಿತ್ತು.  ದುಬೈ 2965ಕಿ.ಮಿ.  3 ಗಂಟೆ ಪ್ರಯಾಣ.  650 ರಿಂದ 750 ಕಿ.ಮಿ. ಪ್ರತಿ ಗಂಟೆಗೂ
ವೇಗ.  ಕಿಟಿಕಿಯಿಂದ ನೋಡಿದಾಗ, ಭಾರತೀಯ ಕಾಲಮಾನದ ಪ್ರಕಾರ 7ವರೆ ವರೆಗೂ ಬೆಳಕಿತ್ತು.  ಸೂರ್ಯಸ್ತ
ಬಹಳ ಚನ್ನಾಗಿ ಕಾಣುತ್ತಿತ್ತು.  ಕೆಳಗೆ ಗೋವ ಹತ್ತಿರ ಲೈಟ್ ಬ್ಲೂ ಅಗಿ ಸಮುದ್ರ ಕಾಣುತ್ತಿತ್ತು.  ನಂತರ
ಡೀಪ್ ಸೀ ಡಾರ್ಕ ಬ್ಲೂ ಅಗಿ ಕಾಣುತ್ತಿತ್ತು.  ವಿಮಾನ ಗೋವ ಪಕ್ಕದಿಂದ ಹಾರಿ ಅರಬ್ಬಿಸಮುದ್ರದಾಟಿ ಗಾಲ್ಪ್
ಅಫ್ ಅರೇಬಿಯ (ಅರೇಬಿಯನ್ ಸೀ) ಮೇಲೆ ಹಾರಿ ಮಸ್ಕೇಟ್ ಮೂಲಕ ದುಬೈ ತಲುಪಿತು.  ಇಳಿಯುವ
ಮೊದಲು ರಾತ್ರೆ ನಗರದಲ್ಲಿ ಕಂಗೋಳಿಸಿತ್ತಿದ್ದ, ದೀಪಗಳ ಸಾಲು ಸಾಲುಗಳೇ ನಗರ ಹೇಗೆ ಪ್ಲಾನ್ ಅಗಿ ಇದೆ
ಎಂಬುದನ್ನು ತೋರಿಸುತಿತ್ತು.  ಅಲ್ಲಿಂದಲೇ ಬ್ರುಜ್ ಖಲೀಫಾ ಟವರ್ ಕಾಣುತ್ತಿತ್ತು. ಟಿ,ವಿ.ಯಲ್ಲಿ,  ಮಕ್ಕಳ
ಒಂದು ಹಾಸ್ಯಮಾಯವಾದ ಸಿನಿಮಾ ನೋಡುತ್ತಿದ್ದರಿಂದ 3 ಗಂಟೆ ಕಳೆದ್ದದ್ದು ಗೊತ್ತಗಲಿಲ್ಲ.  ಇಳಿಯುವಾಗ
ನಾವು ಕೊನೆಯದಾಗಿ ಇಳಿದೆವು.  ಕಾರಣ  ನಮ್ಮ ಜೊತೆ ಬಂದ ಅಜ್ಜಿಯವರನ್ನು ನಿಧಾನವಾಗಿ ವೀಲ್ ಚೇರ್
ಮೂಲಕ ಹೊರಗೆ ಕರೆದುಕೊಂಡು ಬಂದೆವು.  ಮತ್ತೆ ಚಕ್ ಅಪ್ ಸ್ಕಾನಿಂಗ್ ಎಲ್ಲಾ ಕ್ಲೀಯರ್ ಮಾಡಿಕೊಂಡು
ಲಗೇಜ್ ಸಮೇತ ಹೊರಗೆ ಬಂದ್ವಿ.  ಅರುಣ, ಗುರು, ಫಣಿ, ಅಜ್ಜಿಯವರ ಮಗ ಸೊಸೆ ಕಾಯಿತ್ತಿದ್ದರು. ಅವರನ್ನು
ಸೇರಿ ಕೊಂಡ್ವಿ.

          ದುಬೈ ಏರ್ ಪೋರ್ಟ್ ಬಗ್ಗೆ ಹೇಳುವುದಾದರೆ, ಇದು ಪ್ರಪಂಚದಲ್ಲಿರುವ ಬಹು ದೊಡ್ಡ ಏರ್
ಪೋರ್ಟ್ ಗಳಲ್ಲಿ ಒಂದು.  ಒಂದು ಕಡೆ ಪೂರ್ತಿ ವಾಟರ್ ಫಲ್ಸ್, ಖರ್ಜೂರದ ಗಿಡಗಳು. ನೈಜ ಹಾಗು ಕೃತಕ
ಎರಡು ಇತ್ತು.  ಹೊರಗೆ ಬರಲು ನೆಲದ ಕನ್ವೇಯರ್ ಬೇಲ್ಟ್ 1 ರಿಂದ 2 ಕಿ.ಮಿ, ಇತ್ತು, ಅಷ್ಟು ದೂರ ನಡೆಯ
ಬೇಕಿತ್ತು.

         ಕಾರ್ ಪಾರ್ಕಿಂಗ್ ಹತ್ತಿರ ಕಾರುಗಳು ಹೂಗುತ್ತಿದ್ದಾಗ, ನಾನು ಕ್ರಾಸ್ ಮಾಡಲು ಯೋಚಿಸಯತ್ತಿದ್ದೆ,
ಎಲ್ಲೆಲ್ಲೂ ಕಾರುಗಳೆ, ನಂತರ ನನ್ನ ಮಗಳು ಹೇಳಿದಳು, ಇಲ್ಲಿ ಮೊದಲು ಪಾದಾಚಾರಿಗಳು ದಾಟಿದ ಮೇಲೆ ಕಾರ್
ಗಳು ದಾಟುವುದು. ಮೊದಲು ಪಾದಚಾರಿಗೆ ರಕ್ಷಣೆ.  ಯಾವ ಕಾರು ಬಂದರು ಕೈ ತೋರಿಸಿ ನಿಲ್ಲಿಸುವುದು ಬೇಡ,
ಅರಾಮಾಗಿ ದಾಟಬಹುದು.  ಸಿಟಿಯಲ್ಲಿ ಮಾತ್ರ ಎಲ್ಲಂದಲ್ಲಿಗೆ ದಾಟುವ ಹಾಗೆ ಇಲ್ಲ. ಪಾದಾಚಾರಿಗಳು ದಾಟುವ
ಕಡೆನೇ ದಾಟಬೇಕು.  ರೋಡ್ ರೂಲ್ಸ್ ಚೆನ್ನಾಗಿದೆ.  ಕಾನೂನು ಮುರಿದರೆ ಶಿಕ್ಷೆ ಅತಿಯಾಗಿದೆ. ಹೀಗಾಗಿ ಎಲ್ಲಾರು
ಕಾನೂನು ತಪ್ಪಿ ನಡೆಯುವುದೇ ಇಲ್ಲ.  ಈ ಆದರ್ಶ ನಮ್ಮ ಭಾರತದಲ್ಲಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.

         ಅಲ್ಲಿಂದ ಸುಮಾರು 5 ಕಿ.ಮಿ. ದೂರವಿರುವ ಮಗಳ ಮನೆಗೆ ಬಂದ್ವಿ.  4ನೇ ಅಂತಸ್ತಿನಲ್ಲಿ ಇದೆ.
ಬಂದು ಫ್ರೆಶ್ ಅಗಿದನಂತರ, "ವೀನಸ್" ಹೋಟೆಲ್‍ಗೆ ಊಟಕ್ಕೆ ಕರೆದುಕೊಂಡು ಹೋದರು.  ದಕ್ಷಿಣ ಭಾರತೀಯ
ಹೋಟೆಲ್. ಎಲ್ಲಾರು ಅವರೆ. ಕನ್ನಡದಲ್ಲೆ ಅರ್ಡರ್. ಪೂರ ಅವರೆ ತುಂಬಿದ್ದರು.  ದುಬೈ ನಲ್ಲಿ ಇದ್ದೇವೋ
ಅಥವ ಶರಾವತಿ ಹೋಟೆಲ್ ಯಲಹಂಕದಲ್ಲಿ ಇದ್ದೇವೋ ಅಂತ ಅನುಮಾನವಾಯಿತು.  ಬಸ್ಸು, ರೈಲ್, ಟ್ಯಾಕ್ಸಿ
ಓಡಾಡಿದಾಗ ಮೈ ಕೈ ಅಲುಗಾಡಿದಾಗ ಸ್ವಲ್ಪ ಹಸಿವು ಅಗುತ್ತೆ.  ತಿಂದ ಅನ್ನ ಅಲುಗಾಡದೆ ಬಂದೆದ್ದರಿಂದ ಹಸಿವೆ
ಇರಲಿಲ್ಲ.  ಅವರ ಸಂತೃಪ್ತಿ ಗಾಗಿ ತಿಂಡಿ ತಿಂದ್ವಿ.  ಊಟ ವಿಮಾನದಲ್ಲೆ ಅಗಿತ್ತು.

          ಏರ್ಪೋಟ್ ಸಿಟಿ ಮಧ್ಯೆ ಇದೆ.  ಬೆಗಂಳೂರಿನ ಮೆಜೆಸ್ಟಿಕ್ ತರಹ.  ಬಸ್ಸುಗಳ ಬದಲು ವಿಮಾನ
ಗಳು.  ಡಬಲ್ ಡಕರ್ ವಿಮಾನವಿತ್ತು.  ಪ್ರತಿಯೊಂದು ನಿಮಿಷಕ್ಕೂ. ಪ್ರಪಂಚದ ಎಲ್ಲಾ ಕಡೆಗೂ ಸಂಪರ್ಕವಿದೆ.
8ನೇ ತಾರೀಖು ಗುರುವಾರ ರಾತ್ರೆ ಕಳೆದ ನಂತರ 9 ರಂದು ದುಬೈ ದರ್ಶನಕ್ಕೆ, ಬೆಳಿಗ್ಗೆನೆ ಬೇಗ ಎದ್ದು, ಅನ್ನಪೂರ್ಣ  ಹೋಟೆಲ್ನಲ್ಲಿ ತಿಂಡಿ ತಿಂದು, ಅಲ್ಲಿಂದ ದುಬೈ ಮಧೈ ಇರುವ ದೇವಸ್ಥಾನಕ್ಕೆ ಹೋದ್ವಿ.  ಆ ದಿನ
ಹೋಳಿ ಹಬ್ಬದ ಮಾರನೆ ದಿನ.  ವರ್ಷದ ಹೆಚ್ಚು. ಉತ್ತರಭಾರತದವರಿಗೆ ದೇವರಿಗೆ ಹೋಳಿ, ಬಣ್ಣ ಹಾಕುವ
ದಿನ.  ಕೃಷ್ಣಮಂದಿರ, ಈಶ್ವರ, ನಾರಾಯಣ, ಗುರುದ್ವಾರ,ಸಾಯಿಬಾಬಾ ಎಲ್ಲಾ ಒಂದು ಕಡೆ ಇದೆ.  ರಜ ಹಾಗು
ಹಬ್ಬವಾದ್ದರಿಂದ ಬಹಳ ಜನ ಬಂದಿದ್ದರು.  ಕ್ಯೂನಲ್ಲಿ ನಿಂತು ದರ್ಶನ ಮಾಡಿದೆವು.  ಅಲ್ಲಿ ಇರುವ ಗಲ್ಲಿ ಕಾಶಿ
ಗಲ್ಲಿ ತರಹ ಇತ್ತು.  ಗಲ್ಲಿಯ ಅಂಗಡಿಯಲ್ಲಿ ಎಲ್ಲಾ ದೇವರ ಸಾಮಗ್ರಿಗಳು, ತುಲಸಿಗಿಡ ಮಾರುತ್ತಿದ್ದರು.  ನಂತರ
ನಾವು "ಪಾಮ್ ಐಲ್ಯಾಂಡ್" ನೋಡಲು ಹೊರೆಟೆವು.

          ಸಮುದ್ರಕ್ಕೆ ಮರಳುಹಾಕಿ ಪಾಮ್ ಮರದ ಶೇಪ್ ನಲ್ಲಿ ದ್ವೀಪಕಟ್ಟಿದ್ದಾರೆ.  ರಸ್ತೆಯ ಎರಡೂ
ಬದಿಯಲ್ಲೂ ಪ್ರಪಂಚದ ಶ್ರೀಮಂತರ ವಿಲ್ಲಾಗಳು, ಅರಮನೆಯಂತ ಮನೆಗಳು ಇವೆ.  ಒಂದೊಂದು ಒಂದ್ದಕ್ಕಿಂತ
ಮಿಗಿಲು.  ಅಲ್ಲಿಗೆ ಹೋಗಲು ಸಮುದ್ರದ ಒಳಗೆ 5 ಕಿ.ಮಿ. ಟನಲ್ ಇದೆ.  ಜೊತೆಗೆ ತೇಲುವ ಸೇತುವೆ.
ಪಾಮ್ ಐಲ್ಯಾಂಡ್ ನ ಎಲ್ಲಾ ಬ್ರಾಂಚ್‍ಗೆ ಕಾರಿನಲ್ಲೆ ಸುತ್ತಿದ್ದೆವು.  ಇಲ್ಲೊಂದು ಶಾರುಖಾನ್‍ದು ಮನೆ ಇದೆಯಂತೆ.
ಕಡಿಮೆ ಇತಿಹಾಸವಿರುವ ಈ ಜನಗಳ ತಲೆಗಳಿಗೆ ನಮಸ್ಕಾರ ಮಾಡಬೇಕು.  ಕನಸೆನಲ್ಲಿ ಬಂದದ್ದನ್ನು ಹೇಳಿ
ಮಾಡಿಸಿಕೊಳ್ಳುವ ಜನ.  ಮನುಷ್ಯನ ಕಲ್ಪನೆಗೂ ಮೀರಿದ್ದು.  ಅಸಾಧ್ಯವನ್ನು ಸಾಧ್ಯಮಾಡುವರು.  ಹಣವಿದ್ದರೆ
ಬಂತ ಭಾಗ್ಯ.  ಅದನ್ನು ಪ್ರಪಂಚದಲ್ಲೆ ಅತಿ ದೊಡ್ಡದಾಗಿರುವ ಗಗನ ಚುಂಬಿ ಕಟ್ಟಡ ಕಟ್ಟಲು, ಬಿಸಿನೆಸ್ ಸೆಂಟರ್
ಮಾಲ್ ಗಳಿಗೆ, ರೊಡ್ಗಳಿಗೆ, ಬಹಳ ಪ್ಲಾನ್ ಮಾಡಿ ಕಟ್ಟಿದ್ದಾರೆ.  ನೂತನ ತಾಂತ್ರಿಕತೆಯಿಂದ ಮಾಡಿದ್ದಾರೆ.  ಆ
ದಿನ 7 ಸ್ಟಾರ್ ಹೋಟೆಲ್ "ಬ್ರುಜ್-ಅಲ್-ಅರಬ್"ನೋಡಿದ್ವಿ.  ಪ್ರತಿಯೊಂದು ರೂಮಿಗೂ ಸಮುದ್ರದ ನೋಟ
ಕಾಣುತ್ತೆ.  1053 ಅಡಿ ಇದೆ.  ಈ ಹೋಟೆಲ್ ಮೇಲೆ ಹೆಲಿಪ್ಯಾಡ್ ಇದೆ.  ಇನ್ನೊಂದು ರೋಟೆಟಿಂಗ್ ಹೋಟೆಲ್, ವಾಟರ್ ಟ್ಯಾಂಕ್ ತರಹ.  ಎಲ್ಲಾ ಮೇರಿನ್ ಬೀಚ್ ತರಹ, ಸಮುದ್ರದ ಪಕ್ಕ ಒಂದು ಇಂಚು ಬಿಡದೆ
ಇರುವ ಗಗನ ಚುಂಬಿ ಕಟ್ಟಡಗಳು.

          ಅಲ್ಲಿಂದ ನಾವು ಅಲ್ಲೆ ಹತ್ತಿರ ಇರುವ "ಅಟ್ಲಾಂಟಿಸ್" ಹೋಟೆಲ್ ಹತ್ತಿರ ಬಂದೆವು.  ಅಲ್ಲಿ
ಅಕ್ವೇರಿಯಂ,ಮಾಲ್, ಹೋಟೆಲ್ ನೋಡಿದ್ವಿ.  ಬೀಚ್ ಎದುರಿಗೆ ಇದೆ.  ಒಳಗಡೆ ಒಡಾಡಿ, ಪೋಟೋ ತೆಗೆ
ಸಿದ್ದು ಅಯಿತು.  ಗಗನಕ್ಕೆ ಮುಟ್ಟುವ ಬೆಲೆಗಳು.  ಅಷ್ಟು ಕೊಟ್ಟು ಕೊಳ್ಳುವವರು ಇದ್ದಾರೆ!  ಲಕ್ಷಾಂತರ
ಧೀರಮ್ (ಅಲ್ಲಿಯ ನಾಣ್ಯ), ಗಳ ಬಿಕಿನಿಗಳು, ಇತರೆ ವಸ್ತ್ರಗಳೂ, ಎಲ್ಲಾ ಬ್ರಾಂಡ್ಡೆಡ್.  ಅತಿ ಶ್ರೀಮಂತರು
ಕೊಳ್ಳುವ ಸ್ಥಳ.  ಎಲ್ಲಾ ದೇಶದ ಜನರಿಂದ ತುಂಬಿ ತುಳುಕುತ್ತಿತ್ತು.  ಸದ್ಯ ಎಲ್ಲೂ ಮಾಲ್ ಗಳಿಗೆ ಪ್ರವೇಶ
ದರ ಇಲ್ಲ.

         ಎದುರಿನ ಬೀಚ್ ನಲ್ಲಿ ಸೀ ಸರ್ಫಿಂಗ್ ನಡೆಯುತ್ತಿತ್ತು.  ವೆದರ್ ಬಹಳ ಚೆನ್ನಾಗಿತ್ತು.  ಆಳವಾದ
ಸಮುದ್ರ.  ಬಹಳ ಜನ ಮರಳಲ್ಲಿ ಮಲಗಿದ್ದರು.  ಮಕ್ಕಳು ಮರಳಾಟನಾಡುತ್ತಿದ್ದರು.  ಮರುಭೂಮಿಯಲ್ಲಿ
ಒಳ್ಳೆ ತಂಪಾದ ಗಾಳಿ ! ಬಹಳ ಸಂತೋಷಪಟ್ವಿ.  ಬೇಸಿಗೆ ಅಗಿದ್ದರೆ ಸುಟ್ಟುಹೊಗುತ್ತಿದ್ವಿ.  ಈಗ ಚೆನ್ನಾಗಿದೆ.
ಮೇ ನಿಂದ ಅಕ್ಟೋಬರ್ ಬಹಳ ಬಿಸಿಲಿರುತ್ತೆ.  ಎಲ್ಲಾ ಕಡೆ ಕಾರ್ ನಲ್ಲಿ ಸುತ್ತಿ, ಊಟಕ್ಕೆ ಮಾದ್ಯಾಹ್ನ,ಗುಜರಾತಿ
ಹೋಟೆಲ್‍ಗೆ ಬಂದ್ವಿ.  ಅವರಿಗೆ ಪರಿಚಯವಿದ್ದದು.  ಹೋಳಿ ಹಬ್ಬದ ಮಾರನೆ ದಿನ ವರ್µದ ಹೆಚ್ಚು.
ವಿಶೇಷ ಗುಜರಾತಿಯ ಊಟ.  ಧಲಿಯಾದಿಂದ ಮಾಡಿದ ಹಲ್ವ, ಬಜ್ಜಿ, ಪೂರಿ, 3 ತರಹ ಪಲ್ಯ, ಕಡಿ, ಫ್ರೈಡ್
ರೈಸ್, ನೀರಿನ ಕ್ಯಾನ್ ತರಹ, ಮಜ್ಜಿಗೆ ಕ್ಯಾನ್ ಪೂರ.  ಬೀಗರಿಗೆ ಉಪಚಾರ ಮಾಡಿ ಊಟ ಹಾಕುವ ತರಹ ಊಟ
ವನ್ನು. ಅತ್ಮೀಯವಾಗಿ ಉಣಿಸಿ, ಹೊಟ್ಟೆ ಬಿರಿಯುವಷ್ಟು ಊಟಹಾಕಿ. ಕೊನೆಯಲ್ಲಿ. ಅರುಣ ಹಾಗು ಗುರುಗೆ ಹೋಳಿ
ಬಣ್ಣಹಾಕಿ ಕಳುಹಿಸಿದರು.  ಮರೆಯುವಂತೆ ಇಲ್ಲ. ಬಹಳ ಸ್ವಚ್ಛವಾಗಿ ಇಟ್ಟು ಕೊಳ್ಳುತ್ತಾರೆ.  ಸ್ವಚ್ಛತೆ, ರುಚಿ, ಹಾಗು
ಕಾನೂನಿಗೆ ಮಾನ್ಯತೆ.  ಯವಾಗಲಾದರು ದುಬೈ ಮುನಿಸಿಪಾಲಿಟಿಯವರು  ಸಡನ್ ಅಗಿ ಬಂದು ತನಿಖೆ ಮಾಡು
ತ್ತಾರೆ. ಸ್ಟ್ಯಾಂಡ್ರಡ್ ಮೇನ್ಟೇನ್ ಮಾಡದೆ ಇದ್ದರೆ, ತಕ್ಷಣವೇ ಲೈಸಸ್ಸ್ ವಾಪಸ್ಸು ತೆಗೆದುಕೊಳ್ಳುತ್ತಾರೆ.  ಹೀಗಾಗಿ
ಚೆನ್ನಾಗಿ ಇಟ್ಟಿರುತ್ತಾರೆ.

          ಭಾರತೀಯರಿಗೆ ಅವರವರ ರುಚಿಯ ಎಲ್ಲಾ ಅಡಿಗೆಗಳು ಇಲ್ಲಿ ಸಿಗುತ್ತದೆ.  ಹೀಗಾಗಿ ನಮ್ಮ ರುಚಿಯ ಆಹಾರಕ್ಕೆ ಕೊರತೆ ಇಲ್ಲ.  ಒಳ್ಳೂಳ್ಳೆ ದಕ್ಷಿಣ ಭಾರತೀಯ ಹೋಟೆಲ್ಗಳಾದ ಎಂ.ಟಿ.ರ್., ವೀನಸ್ಸ್,
ಕಾಮತ್, ಅನ್ನಪೂರ್ಣ, ಶರವಣ ಭವನ್, ವಸಂತ್, ಸಂಗೀತ ಹೀಗೆ ಬಹಳ ಇವೆ.  ದಕ್ಷಿಣ ಭಾರತೀಯ ಅಡುಗೆ
ಗೆ ಬೇಕಾದ ಎಲ್ಲಾ ತರಕಾರಿಗಳು, ದಿನಸಿಗಳು, ಎಲ್ಲಾ ಕಡೆ ಸಿಗುತ್ತೆ.  ಇಂಡಿಯನ್ ಅರಿಜನ್‍ನ ಕಾಕಾರವರು
ಪ್ರಾರಂಭಿಸಿದ "ಲೂಲೂ ಮಾರ್ಕೆಟ್"ನಲ್ಲಿ ಇವೆಲ್ಲಾ ಸಿಗುತ್ತೆ.  ಬಾಳೆಕಾಯಿ, ದಿಂಡು, ಮಾವಿನಕಾಯಿ,ಒಳ್ಳೆಹಾಲು,
ಮೊಸರು. ಎಮ್.ಟಿ.ರ್., ಅಮುಲ್ ಉತ್ಪನ್ನ ಗಳು ಸಿಗುತ್ತೆ.

          ಇವರ ಮನೆಯ ಬಾಲ್ಕನಿಯಿಂದ ನೋಡಿದರೆ ಶಾರ್ಜ ಕಾಣುತ್ತೆ.  ಎಲ್ಲೆಲ್ಲೂ ಗಗನ ಚುಂಬಿಕಟ್ಟಡ
ಗಳು.  ರಸ್ತೆಗಳು ಚೆನ್ನಾಗಿದೆ.  ಅಫಘಾತಗಳು ಕಡಿಮೆ.  ಎಲ್ಲಿಂದಲ್ಲಿ ಕಾರು ತಿರುಗಿಸುವಹಾಗೆ ಇಲ್ಲ.  ತಪ್ಪಿ
ಬಂದರೆ ಮುಂದಿನ ಸರ್ಕಲ್ (ರೌಂಡ್ ಅಬೋಟ್ ಅನ್ನುತ್ತಾರೆ),ತನಕ ಹೋಗಿ ತಿರುಗಿಸಿಕೊಂಡು ಬರಬೇಕು.
ಸರ್ಕಲ್ ಹತ್ತಿರ ನಿಂತು ಹೊರಡು ಬೇಕು.  ಮೊದಲು ಬಂದವರು ಮೊದಲು.  ಎಲ್ಲಾ ಕಡೆ ಕ್ಯಾಮರವಿರುತ್ತೆ.
ತಪ್ಪಿಗೆ ಕಠೋರ ಶಿಕ್ಷೆ ಇರುತ್ತೆ.

          ಹತ್ತಿರ ಪಾಂಡ್ ಪಾರ್ಕ ಇದೆ.  ಕೆರೆ ಕೃತಕವಾಗಿ ಮಾಡಿದ್ದಾರೆ.  ಮರಗಳು, ಹುಲ್ಲಿನ ಲಾನ್
ಹೂವಿನ ಗಿಡಗಳು ಎಲ್ಲಾ ಕೃತಕವಾಗಿ ಬೆಳಸಿದ್ದು. ಹಸಿರು ಹಸಿರಾಗಿ ಇದೆ.  ಬೇವಿನ ಮರ, ಖರ್ಜೂರದ ಮರಗಳು, ಹಾಗೆ  ನೆಟ್ಟಿದ್ದಾರೆ.  ಮರಳುಗಾಡು ಎಲ್ಲಾ ಕಡೆ ಮರಳು, ಮರಳು. ಗಿಡಗಳನ್ನು ನೆಡುವ
ಮೊದಲು, ನೀರಿನ ಪೈಪ್ ಗಳನ್ನು ಇಟ್ಟು ನಂತರ ಗಿಡ ಗಳನ್ನು ನೆಡುತ್ತಾರೆ.  ನೀರು ಡೈರ್ಕಟ್ ಅಗಿ ಸಲ್ಪ ಸಲ್ಪ
ಬೇರಿಗೆ ಹೋಗುವ ಹಂಗೆ ಮಾಡಿರುತ್ತಾರೆ.  ಹೊರಗಡೆ ನೀರು ಕಾಣುವುದೇ ಇಲ್ಲ.  ರಸ್ತೆಯ ಪಕ್ಕದಲ್ಲಿ
ಸಂಭೃದ್ದಿಯಾಗಿ, ಬಣ್ಣ ಬಣ್ಣದ ಹೂವು ಗಳನ್ನು ಬೆಳೆಸಿದ್ದಾರೆ.  ಸಮುದ್ರದ ನೀರಿಗೆ ಸಾಪ್ಟ್ ಟ್ರಿಟ್ ಮೆಂಟ್
ಕೊಟ್ಟು ಉಪಯೋಗಿಸುತ್ತಾರೆ.  ಪೆಟ್ರೋಲ್ ಚೀಪ್.ನೀರು ದುಭಾರಿ.

          ದುಬೈ ಬಹಳ ಚಿಕ್ಕದು.  ಅದರೆ ಪ್ರಪಂಚದಲ್ಲಿ ಇರದಂತ ಅಸಾಮನ್ಯವಾದುದು ಇಲ್ಲಿದೆ. ರಸ್ತೆಗಳ
ವ್ಯವಸ್ತೆ ಚೆನ್ನಾಗಿದೆ.  ಅವರ ಜನಸಂಖ್ಯೆ ಕಡಿಮೆ.  80% ಪರಕೀಯರು. 20% ಓರಿಜನಲ್ ಜನ.  ನಗರ ಕಟ್ಟಿದ
ಹಿರಿಯ ಶೇಕ್ "ಝಯದ್-ಬಿನ್-ಸುಲ್ತಾನ್-ಅಲ್-ನಾಹನ್ ಬಹಳ ಬುದ್ದಿವಂತ.  ಲೋಕಲ್ ಜನ ಮುಂಚೆ
ಬುಡಕಟ್ಟಿನವರು, ಅವಿದ್ಯಾವಂತರು ಅಗಿದ್ದರು.  ಪಟ್ರೋಲಿಂ ಶೋಧನೆಯ ನಂತರ ಬಹಳ ಶ್ರೀಮಂತರಾಗಿ, ಹಣದ
ಹೊಳೆ ಹರಿದು ಬಂದು, ನಂತರ ಬಹಳ ಬದಲಾವಣೆಯನ್ನು ತಂದು, ಅವರ ದೇಶವನ್ನು ಯಾರು ಆಳದಹಾಗೆ
ಕಾನೂನು ತಂದು ದೇಶವನ್ನು ಮುಂದೆ ತಂದ್ದಿದ್ದಾರೆ.  ಇಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಜನ ನಡೆಯು
ವುದು ಕಡಿಮೆ.  ಎಲೆಲ್ಲೂ ಕಾರುಗಳು.  ಐಷಾರಾಮಿ ಕಾರುಗಳು, ಬೆನ್ಸ್,ಜಿ,ಎಮ್.ಸಿ.,ಫೋರ್ಡ್, ಪೋರ್ಶೆ,ಫೆರಾಂ,
ಟಯೋಟ, ಮಿತ್ಸುಬುಷಿ, ಕೂಪರ್ ಹೋಡ್ಯಿ,,  ಹೋಂಡ ಲೆಕ್ಸಸ್,..., 4 ಲಕ್ಷದಿಂದ ಹಿಡಿದು ಕೋಟಿ ರೂ,, ಕಾರು
ಗಳನ್ನು ನೋಡಬಹುದು.  " ಕಾರ್, ಕಾರ್, ಕಾರ್ ಎಲ್ಲಿ ನೋಡಿದ್ರು ಕಾರ್" ಇಲ್ಲಿ ಅನ್ವಯಿಸುತ್ತೆ.

          14ನೇ ಮಾರ್ಚ 2011 ಸಂಜೆ ನಾವು ಫೆಸ್ಟಿವಲ್ ಸಿಟಿಗೆ ಹೋದೆವು.  ಅಲ್ಲಿ ಇಂಟರ್ ನ್ಯಾಷನಲ್
ಫೈವ್ ಸ್ಠಾರ್ ಹೋಟೆಲ್ ಹಾಗು ಐಕ್ಯ ಮಾಲ್ ನೋಡಿದೆವು.  ಅಲ್ಲಿಯ ನೀರಿನ ಜಲಪಾತ, ವಿದ್ಯುತ್ ಅಲಂಕಾರ
ಬ್ರಾಡೆಡ್ ಶಾಪ್ ಗಳು, ಮಾಲು ವೈಭವ ನೋಡಿ ದಂಗಾದೆವು.  ಮನೆಗೆ ಬೇಕಾದ ಎಲ್ಲಾ ಸಾಮನು ಎ. ಟು ಝಡ್ ಸಿಗುತ್ತೆ.  ಎಲ್ಲಾ ಡಿಸ್ ಪ್ಲೇ ಮಾಡಿರುತ್ತಾರೆ. ದೊಡ್ಡ ಸಾಮನುಗಳನ್ನು ಇಷ್ಟಪಟ್ಟರೆ ಅಲ್ಲಿಯೆ ಬರೆದ
ಕೋಡ್ ನಂಬರ್ ನೋಡಿ ಅರ್ಡರ್ ಕೊಟ್ಟರೆ ಅಯಿತು, ಪ್ಯಾಕ್ ಮಾಡಿಸಿಕೊಂಡು ಹೋಗಬಹುದು.  ಜಿಗಿ ಜಿಗಿ
ಅಂತ ಜನ ಓಡಾಡುತ್ತಿದ್ದರು.

          15ನೇ ತಾರೀಖು ಶುಕ್ರವಾರ ನಾವು ಅಬುಧಾಬಿಗೆ ಪ್ರಯಾಣ ಬೆಳೆಸಿದೆವು.  ಇದು ಪೂರ್ತಿ
ಗಗನ ಚುಂಬಿ ಕಟ್ಟಡಗಳಿಂದ, ಒತ್ತೂತ್ತಗಿದೆ.  2011ರ ನಂತರ ಬಂದ 200 ಮಿ. ಎತ್ತರದ 9 ಕಟ್ಟಡಗಳು
ಆಬುಧಾಬಿಯಲ್ಲೆ ಇದೆ.  6 ದುಬೈನಲ್ಲಿ ಇದೆ.  ಇದು ಯು.ಎ.ಇ.ಯ ರಾಜಧಾನಿ.  ಇದು ಉತ್ತರದಿಂದ ದಕ್ಷಿಣ
ಕ್ಕೆ 13.5 ಕಿ.ಮಿ., ಪೂರ್ವದಿಂದ ಪಶ್ಛಿಮಕ್ಕೆ 9.5 ಕಿ.ಮಿ. ಇದೆ.  148 ಮಿ. ಎತ್ತರದಲ್ಲಿದ್ದು, ಒಣ ಪರ್ವತದಿಂದ
ಸುತ್ತುವರಿದು, ಕರವಾಳಿಯ ತೀರಕ್ಕೆ ವಾಲಿದೆ.  ಸುತ್ತಲು ಮ್ಯಾನ್ ಗ್ರೋನ್ ಗಾರ್ಟನ್, ಸ್ಯಾಂಡ್ ಬ್ಯಾಂಕ್, ಅಧು
ನಿಕ ಹಾರ್‍ಬರ್ ಇದೆ.  ಮೊದಲು 1590ರಲ್ಲಿ ಇದರ ಪರಿಚಯ ಚರಿತ್ರೆಯಲ್ಲಿ ಇದೆ.  ವೆನಿಸ್ಸ್ ದೇಶದ
ಆಭರಣದ ವ್ಯಾಪಾರಿ, ಕಡಲ ಮುತ್ತನ್ನು ಹುಡುಕಿಕೊಂಡು ಬಂದು, ಅವನಿಂದ ಪರಿಚಯವಾಗಿ, ಅವನ ಹೆಸರೇ
ಇಡಲಾಗಿದೆ.  "ಸರ್ ಬನೀಯಾಸ್ ಐಲ್ಯಾಂಡ್"ಅಂತ.  19 ಶತಮಾನದಲ್ಲಿ ಈಸ್ಟ್ ಇಂಡಿಯ ಕಂಪನಿ ಸರ್ವೆ
ಮಾಡಿ ಮೊದಲ ಬಾರಿಗೆ ಅಕ್ಯೂರೇಟ್ ಮ್ಯಾಪ್ ಕಂಡು ಹಿಡಿದರು.  1992-96ರಲ್ಲಿ ಪ್ರಾಚೀನ ವಸ್ತು ಸಂಶೋಧನ
ಇಲಾಖೆಯವರು ಮುಖ್ಯವಾದ ದ್ವೀಪಗಳನ್ನು ಗುರುತಿಸಿರುವರು.  ಶಿಲಾಯುಗದ 7,000 ವರ್ಷಗಳ ಮೊದಲು
ಉಪಯೋಗಿಸಿತ್ತಿದ್ದ ವಸ್ತುವನ್ನು ಕಂಡು ಹಿಡಿದಿದ್ದಾರೆ.  ಕಂಚಿನ ಯುಗದು ಸಿಕ್ಕಿದೆ.  ನವ ಶಿಲಾಯುದಲ್ಲಿ ಹಾಗು
ನಂತರ ಇಲ್ಲಿ ಸಾಕಷ್ಟು ಮಳೆ ಇದ್ದು, ಮನುಷ್ಯರು ಹಾಗು ಕಾಡು ಪ್ರಾಣಿಗಳು ವಾಸವಾಗಿದ್ದರು.  ಅದರೆ ಮತ್ತೆ
ಶತ ಶತಮಾನಗಳ ನಂತರ ಮಳೆಯು ದಕ್ಷಿಣದ ಕಡೆಗೆ ಚಲಿಸಲು ಪ್ರಾರಂಭಿಸಿದವು.  ಹೀಗಾಗಿ ಆಳವಾದ ಕೆರೆಗಳು
ಒಣಗಿದವು.  ಹವಮಾನ ಬಿಸಿಯಾಯಿತು.  ಹಗಲೆಲ್ಲಾ ಶೆಖೆ, ರಾತ್ರೆಯಲ್ಲಾ ಫ್ರೀಜ್ ಅಗಲು ಪ್ರಾರಂಭನಾಯಿತು.
ಎಕೋ ಸಿಸ್ಟಮ್ ಬದಲಾವಣೆಯಾಗಿ ಹಕ್ಕಿ ಪಕ್ಷಿಗಳು ಹೊಸ ವಾಸ ಅರಸಿ ವಲಸೆ ಹೋದವು.

          ಅಬುಧಾಬಿಯಲ್ಲಿ ತರ ತರಹದ ಗಗನ ಚುಂಬಿ ಕಟ್ಟಡ ನೋಡಿ, ಅಲ್ಲಿಯ ಪ್ರಸಿದ್ಧ ಮಸೀದಿ
ನೋಡಿದೆವು.  ಪ್ರಪಂಚದಲ್ಲಿ ಪ್ರಸಿದ್ಧಿಯಾದ ಕಾರ್ ರೇಸ್ ಜಾಗ ಫಾರ್ಮೂಲ ಒನ್ ನೋಡಿದ್ವಿ.  ಅಲ್ಲಯೆ ನಮ್ಮ
ಅಳಿಯ ಕೆಲಸ ಮಾಡಿದ್ದರು.  ಮೊದಲು ಕಟ್ಟಲು ಪ್ರಾರಂಭದಿಂದ ಹಿಡಿದು ಅದು ಮುಗಿಯುವತನಕದ ಎಲ್ಲಾ
ಹಂತದ ಫೋಟೋ ತೋರಿಸಿದರು.  50,000 ಜನ ಕೆಲಸ ಮಾಡಿದ್ದಾರೆ.  ಪಾರ್ಕಿಂಗ್ ಜಾಗವೇ ಎಷ್ಟೋ
ದೊಡ್ಡದಾಗಿದೆ.  ಶೇಖ್-ಜೈದಾ-(ಝಹೀದ್)ಮಾಸ್ಕ್ ಮಸೀದಿಗೆ ಹೋದ್ವಿ.  ಬಹಳ ಚೆನ್ನಾಗಿದೆ.  ಮೆಕ್ಕಾಗಿಂತ
ಜಾಸ್ತಿ ಎತ್ತರಕ್ಕೆ ಯಾವ ಮಸೀದಿ ಇರಬಾರದೆಂದು, ಖುರಾನ್ ನಲ್ಲಿ ಬರೆದಿದ್ದರಿಂದ ಅದಕ್ಕಿಂತ ಸ್ವಲ್ಪ ಕಡಿಮೆ
ಎತ್ತರಕ್ಕೆ ಕಟ್ಟಿದ, ಸುಂದರ ಬಿಳಿಯ ಬಣ್ಣದ ಶ್ರೀಮಂತ ಮಸೀದಿ. ಇಲ್ಲಿ ನಾನಾ ದೇಶಗಳಿಂದ ಜನರು ಬಂದಿದ್ದರು.
ಬಂದ ಎಲ್ಲಾ ಹೆಂಗಸರು ಗುರುಖಾ ಹಾಕಿಕೊಂಡೇ ಹೋಗಬೇಕು.  ಹೀಗಾಗಿ ನಾನು, ಅರುಣಾ ಗುರುಖಾ ಹಾಕಿ
ಕೊಂಡು ಮಸೀದಿ ದರ್ಶನಕ್ಕೆ ಹೋದ್ವಿ.  ನವರತ್ನನದಿಂದ ಸುಂದರವಾಗಿ, ಸಿಂಗರಿಸ್ಪಟ್ಟಿತ್ತು.  ಬಹಳ ಕಲಾತ್ಮಕವಾಗಿ
ಅಗಲವಾದ, ಮಾನವ ನಿರ್ಮಿತವಾದ್ದದ್ದು ರತ್ನಗಂಬಳಿ ಅನುಪಮವಾಗಿತ್ತು.  ಆಬುಧಾಬಿಯಲ್ಲಿ ಶೇಖ್ ರವರ
ಅರಮನೆಯನ್ನು ಹೋಟೆಲ್ ಅಗಿ ಪರಿವರ್ತಿಸಿದ್ದಾರೆ.  ಅಲ್ಲಿ ಎಲ್ಲಾಕಡೆ ಬಂಗಾರದ, ಬಂಗಾರ ಲೇಪಿತ ಸಾಮನು
ಇವೆ.  ನಮ್ಮಲ್ಲಿ ಎಮ್.ಟಿ.ಅರ್.ನಲ್ಲಿ ಬೆಳ್ಳಿ ಲೋಟದಲ್ಲಿ ಕೊಡುವ ಹಂಗೆ ಹೊರಗಡೆಯಿಂದ ನೋಡಿಕೊಂಡು
ಬಂದ್ವಿ.

          ಅಲ್ಲಿಂದ ನಾವು "ಹೆರಿಟೇಜ್ ವೀಲೇಜ್"ಗೆ ಹೋದೆವು.  ನಮ್ಮಲ್ಲಿಯ ಜನಪದಲೋಕದ ತರಹ
ಒಂದು ಮಾದರಿ ಮಾಡಿ ಇಟ್ಟಿದ್ದಾರೆ.  ಹಿಂದೆ ಅವರುಗಳು ಉಪಯೋಗಿಸುತ್ತಿದ್ದ ಸಾಮಾನುಗಳು, ಪಾತ್ರೆ ಪರಟಿಗಳು,
ಕಬ್ಬಿಣದ ಅಯುಧಗಳು, ನೇಯಿಗೆ, ಅವರ ಜೀವನ ರೀತಿ, 1960 ರಲ್ಲಿ ತೆಗೆದ ಮೊದಲ ಫೋಟೋ(ಶಾಲೆದು),
ಎಲ್ಲಾ ನೋಡಿದ್ವಿ.ಅಲ್ಲಿಂದ ಬಹಳ ಎತ್ತರದ ಧ್ವಜ ಸ್ತಂಭ ನೊಡಿದೆವು.  ಅಬುಧಾಬಿಯಲ್ಲಿ ಗಲ್ಲಿಗಲ್ಲಿಯಲ್ಲೂ
ಗಗನ ಚುಂಬಿ ಕಟ್ಟಡಗಳು.  ಒಂದು ಇನೊಂದಕ್ಕಿಂತ ಬಿನ್ನ.  ಮೀನಿನ ಅಕಾರ, ತಟ್ಟೆಯ ಅಕಾರ, ರೌಂಡ್ ಮೇಲೆ
ರೌಂಟ್, ವಾಲಿದ ರೀತಿ ಕಟ್ಟಿದ ಕಟ್ಟಡ,ಬೆಳ್ಳಿ, ಬಂಗಾರ, ಬಣ್ಣ ಬಣ್ಣದ ಕಟ್ಟಡಗಳು.  ಯಾವುದು 50-60 ಅಂತಸ್ತು
ಗಳಿಗಿಂತ ಕಡಿಮೆ ಇಲ್ಲ.

          ಯು.ಎ.ಇ. ಅಂದರೆ ಯುನೈಟೆಡ್ ಅರಬ್ ಎಮೀರೇಟ್ಸ್. ಎಮರ್ ಅಂದರೆ ರಾಜ.  ಏಕಚಕ್ರದಿಪತ್ಯ.
ಒಟ್ಟು 7.  (1) ದುಬೈ (2) ಅಬುಧಾಬಿ(3)ಫುಜೈರ(4) ಅಲ್-ಶಾರ್ಜ (5) ಉಮರ್-ಅಲ್-ಖೋವೈನ್
(6) ರಾಸಲ್-ಕೈಮ (7) ಅಜ್ಮಾನ್. ಎಲ್ಲಾಕಡೆ ಬೇರೆ ಬೇರೆ ಆಡಳಿತ, ಕಾನೂನುಗಳು.  ಎಲ್ಲಾಕ್ಕೂ "ಅಲ್"
ಸೇರಿಸುತ್ತಾರೆ. ಅಲ್ ಅಂದ್ರೆ ನಮ್ಮ ಶ್ರೀ ತರಹ.  ಯು.ಎ.ಇ. ಅದರಲ್ಲೂ ಅಬುಧಾಬಿ ದೊಡ್ಡ ಮರುಭೂಮಿüಂದ
ಕೂಡಿದ ಅರೇಬಿಯನ್ ಪೆನಿಸುಲ. ಕಡಿಮೆ ಮಳೆ ಹಾಗು ವೀಪರೀತ ಹವಮಾನವನ್ನು ಅನುಭವಿಸಿದ
ಜನಪಂಗಡ ಇಲ್ಲಿದ್ದಾರೆ.  ಜನ ಮುಂಚೆ ಅಲೆಮಾರಿಗಳು.  ಏಷ್ಟೋಶತಮಾನಗಳ ನಂತರ, ಅರಬ್ ಸಂಪ್ರದಾಯದ
ಸಹಜ ಪ್ರಪಂಚಕ್ಕೆ ಹೊಂದಿಕೊಂಡು, ಖುರಾನ್ ಭೋಧನೆಯ ಮೇಲೆ ಜೀವನ ನಡೆಯುತ್ತಿತ್ತು.  ಈ ಅಲೆಮಾರಿಗಳು ಓಯಸಿಸ್ಸ್ ಸುತ್ತಾ ಸೇರಿಕೊಳ್ಳುತ್ತಿದ್ದರು.  ಅವರ ಜೀವನ, ಕುಟುಂಬ,  ಜಾನುವಾರು, ಬೇಸಾಯ,
ಎಲ್ಲಾ ಅಲ್ಲೆ ಪಾಲಿಸುತ್ತಿದ್ದರು.  ಸಿಗುವ ಕಡಿಮೆ ನೀರಿಗೆ ಒತ್ತಡ ತಂದು, ಓಯಸಿಸ್ ಹತ್ತಿರ, ನೂಕು ನುಗ್ಗಲು
ಹಾಗೂ ನೀರಿನ ದುರ್ಬಳಕೆ ಅಗದಂತೆ ಒಂದು ಕಡೆಯಿಂದ ಇನೊಂದು ಕಡೆಗೆ ಅಲೆಯುತ್ತಿದ್ದರು.  ಕಾಲಾ ನಂತರ
ವೀಪರೀತ ವಿಂಡ್ ಎರೋಷನ್ ನಿಂದ ಮೂಲ ಪುರುಷರ ವಿಷಯ ತಿಳಿಯುವ ಪುರಾವೆ ಇಲ್ಲಿ ಸಿಗಲಿಲ್ಲ.  2003
ರಲ್ಲಿ, ಪ್ರಾಚೀನ ಸಂಶೋಧನಾಲಯದವರು ಸೌಧಿ ಅರೇಭಿಯಾ ಹಾಗು ಒಮನ್ ನಲ್ಲಿ ಸಂಶೋಧನೆಮಾಡಿ
ಪುರಾತನ ಇತಿಹಾಸದಲ್ಲಿದ್ದ ಅನೇಕ ರೀತೀಯ ಆಯುಧ ಶೋಧಿಸಿದ್ದಾರೆ.  ವೈಪರೀತ ಪ್ರಕೃತಿಯ ಕಾರಣದಿಂದ
ಶಿಲಾಯುಗ ಹಾಗು ಇಸ್ಲಾಮಿಕ್ ಯುಗದ ಮದ್ಯೆ ವೀಪರೀತ ಅಂತರ ಕಂಡಿದ್ದಾರೆ.  ಇಲ್ಲಿ ಬೈ ಸಿಸನಲ್ ಕ್ಲೈಮೆಟ್.
ಮೇ ನಿಂದ ಅಕ್ಟೋಬರ್ ಹಗಲು ತಪಾಮಾನ 45-50 ಡಿಗ್ರಿ ಇರುತ್ತೆ, ಮಳೆ ಇರೊಲ್ಲ. ನವಂಬರ್-ಏಪ್ರಿಲ್
ಚಳಿಗಾಲ, ಕೆಲವು ಸಲ ರಾತ್ರೆ 4 ಡಿಗ್ರಿ ಕುಸಿಯುತ್ತೆ.  ಹೆಚ್ಚುತ್ತಿರುವ ಜನಸಂಖ್ಯೆ, ಬದಲಾಗುತ್ತಿರವ ಆರ್ಥಿಕ
ಪರಿಸ್ಶಿತಿ, ಆಧುನಿಕ ಜೀವನ ರೀತಿ, ಕ್ಷೇತ್ರದ, ಸೂಕ್ಷ್ಮತರ ಜೈವಿಕ ವ್ಯವಸ್ಶೆಗೆ ಒತ್ತಡ ತಂದಿದೆ.  ಅದರೆ ಒಳ್ಳೆಯ
ವಾತಾವರಣ ನಿರ್ಮಿಸಲು ಶೇಕ್ ಬಹಳ ಪರಿಶ್ರಮ ನಡೆಸುತ್ತಿದ್ದಾರೆ.

           ಮನೆಯಲ್ಲಿ ಮೂವರು ಕೆಲಸಕ್ಕೆ ಹೊರಟ ನಂತರ, ಬಾಲ್ಕನಿಯಿಂದ ಬೈ ಬೈ ಮಾಡುವಾಗ
ಬೆಂಗಳೂರಿನಲ್ಲಿ ಸಿಗದ ಗುಬ್ಬಚ್ಚಿಗಳನ್ನು ನಾವು ದರ್ಶನ ದಿನ ಮಾಡುತ್ತೆವೆ.  ಪಾರಿವಾಳ, ಕಾಡು ಪಾರಿವಾಳ,
ಬೆಳ್ಳಕ್ಕಿ, ಬೆಕ್ಕು ದರ್ಶನವಾಯಿತು.  ನಮ್ಮಲ್ಲಿ ಕಾಣುನಂತೆ ಕತ್ತೆ, ಹಸು, ಎಮ್ಮೆ, ನಾಯಿ ಇವುಗಳ ದರ್ಶನ
ರಸ್ತೆಯಲ್ಲಿ ಆಗುವುದೆಲ್ಲ. ಪಾಮ್ ಐಲ್ಯಾಂಡ್ನಲ್ಲಿ, ಎಲ್ಲಾ ಕಟ್ಟಡಗಳು, ಮರಳಿನ ಬಣ್ಣ.  ಟ್ಯಾಕ್ಸಿ, ಹಾಗು ಎಮೀ
ರೇಟ್ಸ್ ಗಗನ ಸಖಿಯರ ಬಟ್ಟೆಯ ಬಣ್ಣ ಅದೇ ಮತ್ತು ಕೆಂಪು ಅಂಚು.  ಗಂಡಸರು ಬಿಳಿಯ ನಿಲುವಂಗಿ,ತಲೆಗೆ
ಬಿಳಿ ಅಥವ ಚಕ್ಸ್ ಸ್ರ್ಕರಫ್.  ಮುಖಬಿಟ್ಟು ತಲೆ ಮುಚ್ಚಿಕೊಳ್ಳಲು.  ಸ್ರ್ಕರಫ್ ಸರಿಯಾಗಿ ನಿಲ್ಲಲೂ ಒಂದು
ರಿಂಗ್ ಕರಿದು.  ಸ್ಯಾಂಡ್ ಸ್ಟರಂ ಬಂದಾಗ, ಇಳಿಬಿಟ್ಟ ಸ್ರ್ಕಫ್ ನಿಂದ ಮೂಗು ಬಾಯಿ ಮುಚ್ಚಿಕೊಳ್ಳುತ್ತಾರೆ.
ಲೇಡೀಸ್ ಅತ್ಯಂತ ಬೆಲೆಯುಳ್ಳ ವಸ್ಶ್ರ, ಆಭರಣ, ಮೇಕ್ ಅಪ್ ಮಾಡಿಕೊಂಢು ಕರಿಯ ಘೋಷ ಹಾಕಿಕೊಳ್ಳು
ತ್ತಾರೆ.

          23ನೇ ತಾರೀಖು, ಮಗಳು ರಜ ಹಾಕಿದ್ದು, ನಮ್ಮ ಮೇಟ್ರೋ ಪ್ರಯಾಣದ ಅಸೆ ನೆರವೇರಿಸಲು.
ಎಲ್ಲಾ ಟ್ರನ್ಸ್‍ಪೊರ್ಟ್ ನಲ್ಲಿ ನಾವು ಹೊಗುವ ಅಸೆ ವ್ಯಕ್ತಪಡಿಸಿದೆವು.  ಬೆಳಿಗ್ಗೆ ತಿಂಡಿ ತಿಂದು ಪೀಕ್ ಅವರ್ಸ್
ಆದ ನಂತರ, ಮನೆಯಿಂದ ಸಿಟಿ ಬಸ್ಸು ಹತ್ತಿ, ಅಲ್-ನದಾ ಸ್ಟೇಶನ್ಗೆ ಹೊದ್ವಿ.  ಅವಳ ಮನೆಯ ಹತ್ತಿರವಿದ್ದ
ಪೆಟ್ರೊಲ್ ಬಂಕ್ ಶಾಪ್ ನಲ್ಲಿ ನಾವು ಒದೊಂದು ಗೀಚುವ ಕಾರ್ಡ್ ಅಂದರೆ ಮೊದಲೆ ಹಣ ತುಂಬಿದ ಸ್ಮಾಟ್
ಕಾರ್ಡ್,ಒಡಾಟ ಕೊಸ್ಕರ ಕೊಂಡ್ವಿ.  ಬಸ್ಸಿನಲ್ಲಿ, ಮೇಟ್ರೋನಲ್ಲಿ, ಟ್ಯಾಕ್ಸಿಯಲ್ಲಿ ಉಪಯೋಗೆಸಬಹುದು. ಸಿಟಿ ಬಸ್ಸು
ನಲ್ಲಿ ಮೊದಲು ಹೆಂಗಸರಿಗೆ, ಕುಟುಂಬಕ್ಕೆ ಅಧ್ಯತೆ.  ಎಲ್ಲೂ ನೀರು,ಆಹಾರ ತಿನ್ನುವಂತೆ, ಹಾಗು ನಿದ್ದೆ ಮಾಡುವ
ಹಂಗೆ ಇಲ್ಲ.  ಇದು ಕಾನೂನು.  ಮೇಟ್ರೋದಿಂದ ಊರಿನ ದೃಶ್ಯ, ಎದರು ಬರುವ ಇನ್ನೊಂದು ಮೇಟ್ರೋ,
ಕೆಳಗೆ ಓಡಾಡುವ ವಾಹನಗಳು, ಗಗನ ಚುಂಬಿ ಕಟ್ಟಡಗಳು, ಚೆನ್ನಾಗಿ ಕಾಣುತ್ತಿತ್ತು.

          ನಾವು "ಮಾಲ್ ಅಫ್ ಎಮೀರೇಟ್ಸ್"ಗೆ ಹೊದ್ವಿ.  ಅದು 65 ಲಕ್ಷ ಚದರ ಅಡಿ ಇದೆ.  ಬಹಳ
ದೊಡ್ಡ ಮಾಲ್.  ಅಲ್ಲೆ "ಐಸ್ ವಲ್ಡ್" ಮಾಡಿದ್ದಾರೆ.  ಅಲ್ಲಿ ಇಲ್ಲಿ ಐಸ್ ಪರ್ವತಗಳು, ಐಸ್ ಸ್ಕೈಯಿಂಗ್
ಇತ್ತು. ಅಲ್ಲೆ ದೊರೆಯುವ ಬೆಚ್ಚಗಿನ ಬಟ್ಟೆಹಾಕಿಕೊಂಡು ಹಿಮದ ಅನುಭವ ಪಡೆಯಬಹುದು. ಮೆಟ್ರೋನಿಂದಲೇ
ಮಾಲ್ ಎನ್ಟೇನ್ಸ್ ಗೆ ಬರಬಹುದು.  ಮತ್ತೆ ಮೆಟ್ರೋ ಹತ್ತಿ ಕರೋಮ ಸ್ಟೇಶರ್ನಗೆ ಬಂದ್ವಿ.  ಅಲ್ಲಗೆ ನಮ್ಮ
ಅಳಿಯ ಬಂದ್ದಿದ್ದರು. ಅಲ್ಲಿ " ಶರಣವ ಭವನ್"ನಲ್ಲಿ ಊಟಮಾಡಿ. ಮನೆಗೆ ಬಂದು ವಿರಾಮ. ಸಂಜೆ ಪರ್ಚೇಸ್ಗೆ
ಹೊರಟ್ವಿ.  ರೀಫ್ ಮಾಲ್ ಹಾಗು ಅಲ್-ಕ್ವಬೈಲ್ ಮಾಲ್ ನೋಡಿ ಮನೆಗೆ ಬಂದಾಗ ರಾತ್ರೆ 12.

          23ರಂದು ಉಗಾದಿ ಪೂಜೆ ಮುಗಿಸಿಕೊಂಡರ "ದುಬೈ ಮಾಲ್" ಹೊದ್ವಿ.  ಸಂಜೆ 5ವರೆಗೆ ಬುಜ ಖಲೀಫಾ ಮೇಲೆ ಹೊಗಲು ಬುಕ್ ಮಾಡಿದ್ರು.  ಇದು 6 ವರ್ಷದಲ್ಲಿ ಕಟ್ಟಿದ ಕಟ್ಟಡ.  35,000 ಜನ
ತಂಗನಹುದು.  57 ಎಸ್ಕಲೇಟರ್, 164 ಅಂತಸ್ತು ಇದೆ.  868 ಮಿ. ಎತ್ತರ.  124 ಅಂತಸ್ತಿನ ವರೆಗೆ
ಹೋಗಬಹುದು.  ಪ್ರಪಂಚದಲ್ಲೇ ಅತೀ ಶೀಘ್ರವಾಗಿ ಹೊಗುವ ಲಿಷ್ಟ್ ಇದೆ.  1ವರೆ ನಿಮಿಷದಲ್ಲಿ 124ನೇ
ಅಂತಸ್ತಿಗೆ ಬಂದ್ವಿ.  ಇಡೀ ದುಬೈ ಅಲ್ಲಿಂದ ನೋಡಬಹುದು.  ಅಕ್ಕಪಕ್ಕದ ರಸ್ತೆಗಳು, ಫ್ಲಯ್ ಒವರ್ ಬಹಳ
ಸುಂದರವಾಗಿ ಕಾಣುತ್ತಿದ್ದವು.  "ನೆಲದಿಂದ ಗಗನದವರೆಗೂ". ಬಾಲ್ಲನಿಯಿಂದ ಹೊರಗೆ ನೊಡಬಹುದು.  ಎಲ್ಲ
ಕಡೆ ಟೆಲಿಸ್ಕೋಪ್ ಇದೆ.  ಅದರೊಳಗೆ ಕಾರ್ಡ ಹಾಕಿ ಸುತ್ತಾ ಮುತ್ತಲೂ ನೊಡಿದ್ವಿ.  ವರ್ಣಿಸಲು ಪದಗಳು ಇಲ್ಲ.
ಕೆಳಗಿನ ದೃಶ್ಯ, ನೀಲಿ ಬಣ್ಣದ ನೀರು, ಕೆಂಪಾಗಿ ಮುಳುಗುತ್ತಿರುವ ಸೂರ್ಯ, ಬಹಳ ಚೆನ್ನಾಗಿ, ಸಣ್ಣದಾಗಿ ಕಾಣುತ್ತಿತ್ತು.  ಪ್ರಪಂಚದಲ್ಲೆ ಆತೀ ಎತ್ತರದ ಗೋಪುರ.  ಅದಕ್ಕೋಸ್ಕರ ಕೆಲಸ ಮಾಡಿದ ಕಂಪನಿ ಟೀಮ್ ರವರ
ಫೋಟೋ ಹಾಕಿದ್ದರು.  ಬಹಳ ಭಾರತೀಯರ ಫೋಟೋ ಸಹ ಇತ್ತು.  ಅಲ್ಲಿ ಉಪಯೋಗಿಸಿದ ತಾಂತ್ರಿಕತೆ
ಬಹಳ ಆಧ್ಧುತ.  ಕೆಳಗಿನಿಂದ ಸಿಮೆಂಟ್ ಅಷ್ಟು ಎತ್ತರಕ್ಕೆ ಪಂಪ್ ಮಾಡಿದ್ದಾರೆ.  ಕಟ್ಟಡದ ಎತ್ತರ ಬೆಳೆಯುತ್ತಿ
ದ್ದಂತೆ, ಕ್ರೇನ್ ಎತ್ತರ ಗೊಳಿಸುತ್ತಿದ್ದರು.  5 ದಿನಕ್ಕೆ ಒಂದು ಫೊರ್ಲ್ ಮುಗಿಸುತ್ತಿದ್ದರು.  ಅದರ ಬೆಳವಣಿಗೆ
ಯನ್ನು ನೋಡಿದ ನಮ್ಮ ಅಳಿಯ ಹಾಗು ಇತರರು ಹೆಮ್ಮೆಯಿಂದ ಹೇಳುತ್ತಿದ್ದರು. 2010ರಲ್ಲಿ ಒಪನ್ ಅಯಿತು.

          ನಾವು ಸಣ್ಣವರಿದ್ದಗಾ "ಸಾಯೋಕ್ಕೆ ಮುಂಚೆ ಒಮ್ಮೆ ನೋಡು ಜೋಗದ ಗುಂಡಿ" ಅನ್ನುತ್ತಿದ್ದರು.
ಅ ದಿನ ಅಷ್ಟೆ ಇತ್ತು.  ಪ್ರಪಂಚ ಅಷ್ಟು ಬೆಳೆದಿರಲಲಿಲ್ಲ. ನಂತರ ಸಿಂಗಪುರ್ ನೋಡಲು ಒಂದೊ ಹಾಡೇ ಇತ್ತು.
"ಜೀವನ್ ಮೆ ಎಕ್ ಬಾರ್ ಅನಾ ಸಿಂಗಪುರ್" ಅಂತ.  ಈಗ ಹೊಸದಾಗಿ ಹೇಳಬಹುದು "ಪ್ರಪಂಚದಲ್ಲಿ ಯಾವ
ದೇಶವನ್ನು ನೋಡದಿದ್ದರು ಪರವಾಗಿಲ್ಲ, ದಬೈ ಮಾತ್ರ ನೋಡಬೇಕು.  ಅಸದಳವಾದ್ದನ್ನು ನಿರ್ಮಿಸಿದ್ದಾರೆ.

          ಇಳಿದ ಮೇಲೆ ಕೆಳಗೆ ದೊಡ್ಡ ಕಾಲುವೆ (ಕ್ರೀಕ್ ) ಸುತ್ತಲು, ಫೇಮಸ್ ಹೋಟೆಲ್ ಗಳು.
ಅಲ್ಲಿ 7 ಗಂಟೆಗೆ "ಮ್ಯೂಸಿಕಲ್ ಫೌಂಟೈನ್" ಪ್ರಾರಂಭವಾಗುತ್ತೆ.  ಪ್ರತಿ ಅರ್ಧ ಗಂಟೆಗೆ ಇದೆ.  ಬಹಳ ಎತ್ತರಕ್ಕೆ
ನೀರು ಚಿಮ್ಮೂವಾಗ ಎಲ್ಲಾರು ಹರ್ಷದಿಂದ ಉದ್ಗಾರ ತೆಗೆಯುತ್ತಿದ್ದರು.  ಹಾಡಿಗೆ ತಕ್ಕಂತೆ ನೀರಿನ ನರ್ತನ.
200 ಮಿ.ಎತ್ತರಕ್ಕೆ ಹಾರುತ್ತೆ.  ನಿಜವಾಗಲು ಸ್ವರ್ಗ. ಕೆಳಗಿಂದ ಬುರ್ಜ ಖಲೀಫಾ ನೊಡಲು ತಲೆ ಎತ್ತಿದರೆ,
ಕುತ್ತಿಗೆ ಬಹಳ ಹಿಂದಕ್ಕೆ ಹಾಕಿದರೆ ಅದರ ತುದಿ ಕಾಣುತ್ತದೆ.  ಕುತ್ತಿಗೆ ನೋವು ಬರುತ್ತೆ ಅಷ್ಟು ಎತ್ತರ.  ಆ
ದಿನ ಕೆಳಗಡೆ ಒಂದು ಸಮಾರಂಭ ಅಗುತ್ತಿತ್ತು.  ದ್ಯಿವ್ಯಾಂಗ ರವರ ದಿನ.  ಅವರನ್ನು, ಸಂತೋಷ ಪಡಿಸಲು
ವಿವಿಧ ವಿನೋಧವಳಿಗಳು ಇತ್ತು.  ಅಲ್ಲಿ ಹೆರೀಟೇಜ್ ವೀಲೇಜ್ ನಲ್ಲಿ ಇದ್ದಹಾಗೆ ಹಳೆಯ ಕಾಲದ ಜನರ
ವೇಶ ಭೂಷಣ ಹಾಕಿಕೊಂಡು ಮಾಡೆಲ್ ಅಗಿ ಕುಳಿತ್ತಿದ್ದರು.  ಪಾಮ್ ಮರದ ಎಲೆಗಳ ಗುಡಿಸಲು, ನೇಯ್ಗೆ,
ಅಡಿಗೆ ಮನೆಗಳು ಎಲ್ಲಾ ನೋಡಬಹುದಿತ್ತು.

          ಅಲ್ಲಿಯ ಪಾಲ್ಕನ್ ಒಂದು ತರಹದ ಹದ್ದು.(ಬಹಳ ಕ್ರೂರ ಪಕ್ಷಿ) ಅದನ್ನು ಸಾಕುತ್ತಾರೆ.
ಅದನ್ನು ಪ್ರದರ್ಶಿಸುತ್ತಿದ್ದರು.  ಅವರ ಜೊತೆ ಹಕ್ಕಿ ಮುಟ್ಟಿ ಅದರ ಫೋಟೋ ತೆಗೆಸಿಕೊಂಡೆವು.  ಅದರ ಕಣ್ಣು, ಕಾಲು ಕಟ್ಟಿರುತ್ತಾರೆ.  ಅದನ್ನು ಸಾಕುವುದು ಅವರ ಹಾಬಿ.  ಹಾಗೆಯೇ ಕ್ರೂರ ಪ್ರಾಣಿಗಳನ್ನು ಸಾಕುತ್ತಾರೆ.
ಸಂಪ್ರದಾಯಕವಾದ ಕಲೆ, ನೃತ್ಯಗಳು, ಹಾಡುಗಳು ಅವರದೇ ರೀತಿಯಲ್ಲಿ ಇದೆ.  ಅದನ್ನು ರಕ್ಷಣೆ ಮಾಡಿದ್ದಾರೆ.
ಓಯಸಿಸ್, ಕೊಸ್ಟಲ್, ಹಾಗು ಡೆಸರ್ಟ್ ರವರದು, ಅವರವರದೇ ಭಿನ್ನ ಕಲೆ ಇದೆ.  ಅರೇಭಿಯನ್ ಸ್ಟಿಂಗ್ ವಾದ್ಯ
ದ ಹೆಸರು "ರಬಬಾ".

          30ನೇ ತಾರೀಖು ಸಂಜೆಯೇ ನಾವು ಅಲೈನ್ ಗೆ ಹೊದೆವು.  2 ಗಂಟೆ ಪ್ರಯಾಣ.  9 ತಿಂಗಳು
ಅರುಣ ಈ ಜಾಗದಲ್ಲಿದ್ದಳು.  ಗುರು ಮುಂಚೆ ಇದ್ದ ಜಾಗ.  ಅವರ ಸ್ನೇಹಿತರು, ರಮ ಹಾಗು ಶ್ರೀವತ್ಸರವರು
ನಮ್ಮ ಜೊತೆ ಹೊರಟರು.  ದುಬೈ ಮುಗಿದ ಮೇಲೆ ಎರಟು ಕಡೆ ಮರುಭೂಮಿಯ ದೃಶ್ಯಗಳು.  ದಾರಿಯ
ಇಕ್ಕೆಲ್ಲದಲ್ಲೂ ಬೇಲಿ.  ಕಾಡು ಒಂಟೆಗಳು ದಾರಿಗೆ ಅಡ್ಡ ಬರದಹಾಗೆ.  ಇಟ್ಟಿಗೆ ಬಣ್ಣದ ಮರಳು.  ಅರ್ಧ ದಾರಿ
ಯಲ್ಲಿ ಪೆಟ್ರೋಲ್ ಬಂಕ್ ಹತ್ತಿರ ಇಳಿದು ಮರುಭೂಮಿಯ ಚರಣ ಸ್ಪರ್ಷ.  ಅಲೆ ಅಲೆಯಾಗಿ ಮರಳರಾಶಿ.
ನಡೆದರೆ ಕಾಲು ಹೂತು ಹೊಗುತ್ತಿತ್ತು.ಇದರ ಸೌಮದರ್ಯವೇ ಬೇರೆ.  ಅಲ್ಲಿಂದ ಮತ್ತೆ ಪ್ರಯಾಣ.  ಅಲೈನ್
ಹತ್ತಿರ ಬರುತ್ತಿದ್ದಹಾಗೆ ಎಲ್ಲೋ ಚಾಮುಂಡಿಬೆಟ್ಟ ಇದೆಯೆನೋ ಅನ್ನಿಸುತ್ತಿತ್ತು.  ಅದೆ ತರಹ ಬೆಟ್ಟದ ತುದಿ
ತನಕ ದೀಪ ಕಾಣುತ್ತಿತ್ತು.  ಯಾವ ತರಹದ ಗಗನ ಚುಂಬಿ ಕಟ್ಟಡವಿಲ್ಲ.  ಶೇಖ್ ರವರು ಇದ್ದ ಜಾಗ.  ಬಹಳ
ಸುಂದರವಾಗಿ, ಹಸಿರಾಗಿ ಇದೆ.  ಎರಡು ಕಡೆ ಹಸಿರು ಹೊನ್ನು ಹೂವುಗಳು.  ರಸ್ತೆಯ ಎಲ್ಲ ಸರ್ಕಲ್ಗಳು
ಚೆನ್ನಾಗಿ ಅಲಂಕರಿಸಿದ್ದಾರೆ.

          ಇಲ್ಲಿ ಇದ್ದ "ಅಲ್ ಅಲೈನ್ ಪ್ಯಾರಡೈಸ್", ಒಂದು ಹೂವಿನ ತೋಟ, ಲಾಲ್ ಬಾಗ್ ಅಪ್ಪನಂತ
ಹದು.  ಗಿನ್ನೀಸ್ ಬುಕ್ ವರ್ಡ ರೆಕಾರ್ಡ ಅಗಿದೆ.  ಹೂವಿನಿಂದಲೆ ತುಂಬಿದೆ. ಹೂವಿನ ಗೊಡೆಗಳು, ಹೂವಿನ
ರಸ್ತೆ,ಹೂವಿನ ಕುಂಡಗಳ ಸಾಲು ಜೋಡನೆ, ಅರ್ದ ಚಂದ್ರಾಕಾರ, ಪೆರಮಿಡ್ ಅಕಾರ, ಪ್ಯಾರೀಸ್ ಟವರ್ ಬಹಳ
ವಿನ್ಯಾಸ ಮಾಡಿದ್ದಾರೆ.  ಹೋಳಿ ಹಬ್ಬದಲ್ಲಿ ಚೆಲ್ಲಿದ ಬಣ್ಣದ ತರಹ ಬಣ್ಣ ಬಣ್ಣದ ಹೂವುಗಳು.  ಹೂವಿನ
ಕುಂಡಗಳ ಮದ್ಯೆ ಮೂರು ಶೇಖ್ ರವರ ಫೋಟೂಗಳು ಇವೆ.ಅಲೈನ್ ಮ್ಯೂಸಿಯಂ ನೊಡಿದ್ವಿ.  ಪೆಟ್ರೋಲ್
ಶೋಧನೆಗಿಂತ ಮುಂಚೆ ಇದ್ದ ಅರ್ಕಿಟೆಕ್ಚರ್ ಪ್ರತಿಬಿಂಬಿಸುವ ಕಟ್ಟದ ಮಾದರಿ.  ಅಲ್ಲಂದ ಓಯಸಿಸ್ ಬಳಿ ಇರುವ
ಡೇಟ್ ಫಾರ್ಮಗೆ ಹೊಗೆದ್ವಿ,  ತೆಂಗಿನ ಮರಕ್ಕಿಂತ ದೊಡ್ಡದಾಗಿರುವ ಮರಗಳು, ಹಕ್ಕಿಗಳ ಕಲರವ ಕೇಳಿದ್ವಿ.
ಎಲ್ಲಾರ ಫಾರಮ್ ಒಂದೆಕಡೆ.  ಒಂದೊಂದು ದಿನ ಒಬೊಬ್ಬರಿಗೆ ನೀರು ಹಂಚುವ ಎರ್ಪಾಡುವಿದೆ.  ಒಂದು ತರ
ಒಟ್ಟು ಬೇಸಾಯ.  ಇಲ್ಲಿರುವ ಓಯಸಿಸ್ ಶತ ಶತಮಾನಗಳ ಹಳೆಯದು.  ಈಗಿರುವ ಅಲೈನ್ ಹಾಗು ಅಬು
ಧಾಬಿ ಹಳೇಯ ಓಯಸಿಸ್ ಬೇಸ್ಗಳು.  ಇಲ್ಲಿ 3,000 ಎಕರೆ ಜಾಗದಲ್ಲಿ 1,47,000 ಖರ್ಜೂರ ಗಿಡಗಳು, ಇತರೆ
ಪಾಮ್, ಕಿತ್ತಳೆ, ಬಾಳೆ, ಆಂಜೂರ, ಜುಜುಬಿಸ್ ಬೆಳೆಯುತ್ತಾರೆ.  ಅಲ್ಲಿಂದ ನಾವು ಬಿಸಿನೀರಿನ ಬುಗ್ಗೆ ಇರುವ
ಕಡೆ ಹೋಗಿ, ಅಲ್ಲಿ ಕಾಲು ಸುಮಾರು ಹೊತ್ತು ಇಟ್ಟುಕೊಂಡು, ಕಾಲಿನ ಅರೈಕೆ ಮಾಡಿಕೊಂಡ್ವಿ,  ಅಲ್ಲಿ ಜನರು
ಕುಳಿತುಕೊಳ್ಳಲು, ಛತ್ರಿ ಅಕಾರಮ ಚಪ್ಪರಗಳು, ಮಂಟಪಗಳು,ಅಡಿಗೆ ಮಾಡಿಕೊಳ್ಳಲು ಇದ್ದಿಲಿನ ಒಲೆಗಳು, ಲೆಕ್ಕ
ವಿಲ್ಲದಷ್ಟು ಮರಗಳು ಇದ್ದು ತಣ್ಣನೇ ಗಾಳಿ ಬೀಸುತ್ತಿತ್ತು.  ಅದು ಒಣ ಬೆಟ್ಟದ ಮೇಲೆ ಇದೆ.  ಈ ಜಾಗದ
ಹೆಸರು "ಜಬರ್ ಅಫೀದ್".  ಅಲ್ಲಿಂದ ಮರಭೂಮಿಯ ಬೆಟ್ಟದಲ್ಲಿ ಕೊರೆದು ಮಾಡಿದ ರಸ್ತೆಯಿಂದ 1,300 ಮಿ.
ಎತ್ತರದಲ್ಲಿ ಇರುವ "ವ್ಯೂ" ಪಾಯಿಂಟ್ ಗೆ ಬಂದೆವು.  ಬೆಟ್ಟ ಸೆಡಿಮೆಂಟರಿ ರಾಕ್ನಿಂದ ಕೂಡಿದೆ.  ಹಿಮಾಲಯದ ತರಹ.  ಅಲ್ಲಿ ಹಸಿರು. ಇಲ್ಲಿ ಬರೇ ಕಲ್ಲುಗಳು.  ಬಹಳ ಗಾಳಿ ಧೂಳು ಇತ್ತು.  ಎಲ್ಲಿ ನೋಡಿದರು ಸುತ್ತಾಲು
ಮರುಭೂಮಿ.  ಬಹಳ ಸ್ವಚ್ಛವಾಗಿದೆ, ಜನರು ರಾತ್ರೆ ಇಲ್ಲಿಗೆ ಬಂದು ವಿಹರಿಸಿ, ಸಿನಿಮಾ ನೋಡಿ ರಾತ್ರೆಯಲ್ಲಾ
ಕಳೆದು, ಬೆಳಗಿನ ಸೂರ್ಯೋದಯ ನೋಡಿಕೊಂಡು ಹಿಂತಿರುಗುತ್ತಾರೆ.  ಪಾರ್ಕ ನಲ್ಲೂ ಮಕ್ಕಳು ದೃಷ್ಟ ಚೇಷ್ಟೆ
ಮಾಡುವುದಿಲ್ಲ.  ಚಿಕ್ಕಂದಲ್ಲೆ ಎಲ್ಲ ಅಭ್ಯಾಸ ಮಡಿರುತ್ತಾರೆ.  ಯಾರೂ ಹೂವು ಕಿಳೋಲ್ಲ, ಮುಟ್ಟಲ್ಲ, ಹಾಳು
ಮಾಡೊಲ್ಲ.  ಅಲ್ಲಿ ಶೀವತ್ಸ ರವರ ಅಣ್ಣನವರ ಮನೆಯಲ್ಲಿ, ಅವರ ಅತಿಥ್ಯ, ಅಭಿಮಾನ ಮರೆಯಲು ಅಗೊಲ್ಲ.
ಅಲೈನ್ಗೆ ಹೊಗುವಾಗ ಓಮನ್ ಗಡಿ ಪಕ್ಕದಲ್ಲೆ ಹಾದು ಹೋಗಬೇಕು.  ಅಲ್ಲಿಂದ ನಾವು "ಲೈವ್ ಸ್ಟಾಕ್
ಮಾರ್ಕೇಟ್" ಗೆ ಹೋದ್ವಿ ಅಸಾಂಖ್ಯತ ಹಸುಗಳು, ಮೇಕೆಗಳು, ಕುರಿಗಳು, ಓಂಟೆಗಳು, ಅವುಗಳ ಅಹಾರ, ಸಾಕ
ಣಿಕೆಗೆ ಬೇಕಾಗುವ ಸಾಮಗ್ರಿಗಳ ಮಾರಟ ಮಳಿಗೆಗಳು ಇದ್ದವು.ಅಲೈನ್ ನಲ್ಲಿ ಹಾಲಿನ ಡೈರಿ ಇದೆ.  ಇಲ್ಲಿ
ಹಾಲು, ಮೊಸರು, ಮಜ್ಜಿಗೆ, ತರತರಹದ ಸ್ವಾದ ಮಜ್ಜಿಗೆ ದೊರೆಯುತ್ತೆ.  ನಾನಂತು ಯಾವತ್ತು ಮಜ್ಜಿಗೆ
ತಪ್ಪಿಸಲ್ಲಿಲ್ಲ.

         ರಸ್ತೆಗಳು ಚೆನ್ನಾಗಿರುವುದರಿಂದ 120 ಕಿ.ಮಿ. ಒಂದು ಗಂಟೆಯ ವೇಗಕ್ಕೆ ಹೋಗುತ್ತಾರೆ.  ಕಾರು
ಗಳು ಚೆನ್ನಾಗಿರುತ್ತೆ.  ಬೇಲಿ ಇಕ್ಕೆಲಗಳಲ್ಲಿ ಇರುವುದರಿಂದ ಜನರು, ಪ್ರಾಣಿಗಳು ಅಡ್ಡ ಬರೊಲ್ಲ.  ಊರಿಂದ
ಊರಿಗೆ ಹಾದು ಹೋಗಲು ಬೇರೇಯೇ ಅಂಡರ್ ಪಾಸ್ ಇರುತ್ತೆ.  ಪ್ರಯಾಣದ ಸುಸ್ತು ಹೆಚ್ಚಾಗೊಲ್ಲ.  ಒಂದು
ಶನಿವಾರ ನಮ್ಮವರ ಸ್ನೇಹಿತರ ಮಗನ ಮನೆಗೆ ಹೊಗಿದ್ವಿ,  ಶಾರ್ಜ ಸ್ಟೇಡಿಯಂ ಒಂದು ದಿನ ನೋಡಿದ್ವಿ, ದುಬೈ
ನಲ್ಲಿ ಎಲ್ಟ್ರಾನಿಕ್ ಸಾಮುನು, ಲೇಟೆಸ್ಟ್ ಮಾಡೆಲ್ ಕಡಿಮೆ ದರಕ್ಕೆ, ಅಂದರೆ ಟ್ಯಾಕ್ಸ್ ಇಲ್ಲದೆ ದೊರಕುತ್ತೆ.
ಟಿ.ವಿ.ಯಲ್ಲಿ ಪ್ರಕಟನೆಯಾಗುವ ಮುಂಚೆ ಇಲ್ಲಿ ಬಿಡುಗಡೆ ಅಗುತ್ತೆ.  ದುಬೈನಲ್ಲಿ ಮುಖ್ತಂ ಸೇಕುವೆ ಅತಿ ದೊಡ್ಡದು.  ಕೆಳಗೆ ಕ್ರೀಕ್ ನಲ್ಲಿ ದೋಣಿ. ಸಣ್ಣ ಹಡಗು ಹೋಗಿ ಬಂದು ಮಾಡುತ್ತಿರುತ್ತೆ. ಯಾವಗಲಾದರು
ದೊಡ್ಡ ಹಡಗು ಬಂದಾಗ ಸೇತುವೆ ಎತ್ತಿ ಕೋಳ್ಳ್ಲುತ್ತೆ.  ಇನ್ನೊಂದು ಕಡೆ ತೇಲುವ ಸೇತುವೆ ರಾತ್ರೆ 10 ರ
ನಂತರ ತೇಲಿ ಪಕ್ಕಕ್ಕೆ ಸರಿದು ಹಡಗುಗಳು ಹೊಗಲು ಅಣಿ ಮಾಡಿಕೊಡುತ್ತೆ.  ಬಾಕಿ ಎರಡು ಸೇಲುವೆ ತುಂಬ
ಬಿಸಿ.  ಹೊರಡುವ ದಿನ ಹತ್ತಿರ ಬಂತು, ಗುರುವಾರ 5ನೇ ತಾರೀಖು ರಾತ್ರೆ 9ವರೆಗೆ, ಎಮಿರೇಟ್ಸ್ ನಲ್ಲಿ ಅಗಿತ್ತು.
ಬರೆಯುತ್ತಾ ಹೊದರೆ ಮುಗಿಯುವುದಿಲ್ಲ.  25 ದಿನ ಕಳೆದ್ದದು ಗೊತ್ತೆ ಅಗಲಿಲ್ಲ.  ಅವರ ಅಭಿಮಾನ, ಸತ್ಕಾರ
ಕ್ಕೆ ಕೃತಜ್ಞತೆ ಅರ್ಪಿಸಬೇಕು.

          ಟ್ಯಾಕ್ಸಿ ವಿಷಯ ಹೇಳಬೇಕು.  ಮನಿ  ರಿಚಾರ್ಜ್ಡ್ ಮ್ಯಾಗ್ನಟಿಕ್ ಕಾರ್ಡ್ ಟ್ಯಾಕ್ಸಿಗೂ ಅನ್ವಯಿಸುತ್ತೆ.
ಹೆಂಗಸರಯ ಒಬ್ಬರೆ ಬಂದರೂ ಸಹ, ಯಾವ ಹೆದರಿಕೆ ಇಲ್ಲದೇ ಓಡಾಡಬಹುದು.  ಗಾಂಧೀಜಿಯ ಮಾತು
ನೆನಪಿಗೆ ಬಂತು.  "ರಾತ್ರೆ 12 ಕ್ಕೆ ಅದರೂ ಯಾವ ಹೆಣ್ಣು ಮಗಳು ಭಯವೆಲ್ಲದೇ ಓಡಾಡುತ್ತಾರೋ ಅಗ
ಅವರಿಗೆ ಸ್ವಾತಂತ್ರ ಬಂದಹಾಗೆ", ಅನ್ವಯಿಸುತ್ತೆ.  ರಾತ್ರೆ ತಂಪಾಗಿರುವುದರಿಂದ 12 ತನಕ ನಿರ್ಭಯವಾಗಿ
ಓಡಾಡುತ್ತಿರುತ್ತಾರೆ.  ಲೇಡೀಸ್ ಸಹ ಟ್ಯಾಕ್ಸಿ ಓಡಿಸುತ್ತಾರೆ.  ವಿಶೇಷ ಪಿಂಕ್ ಬಣ್ಣದ ಗಾಡಿ ಕೇವಲ ಹೆಂಗಸರಿಗೆ.
ಟೋಲ್ ಗೇಟ್ ಬಂದಾಗ, ಕಾರಿನ ಹೊರಗಡೆ ಅಂಟಿಸಿದ ಪ್ರೀ ಪೇಡ್ ಫೀ ರಸೀದಿಯಿಂದ, ರೆಡಾರ್ ಮೂಲಕ
ಟೋಲ್ ಫೀ ಕಟ್ ಅಗುತ್ತೆ.  ನಮ್ಮೆಲ್ಲರಿಗೂ ಅಗಲುವ ದುಃಖದಿಂದ ಮೌನವಾಗಿದ್ದೆವು. ಬೆಳಿಗ್ಗೆನೇ ಕುಂಕುಮ
ಕೊಟ್ಟದ್ದಳು. ರಾತ್ರೆ ಸೀದ ಕೆಲಸ ಮುಗಿಸಿಕೊಡು ಎರ್ ಪೋಟ್ಗೆ ಬಂದಳು.  ಎಲ್ಲರು ಅಲ್ಲಿ ಸೇರಿದೆವು. ಮುಕ್ಕಾಲು
ಗಂಟೆ ವಿಮಾನ ತಡವಾಯಿತು.  ಮತ್ತೆ ಅದೇ ಊಟ ವಿಮಾನದಲ್ಲಿ. ಸಹಿ ಮಾತ್ರ ಕ್ಯಾರೇಟ್ ಪುಡಿಂಗ್. 3ವರೆಗೆ
ಲ್ಯಾಂಡ್ ಅದೆವು.  ಎಲ್ಲ ಕ್ಲಿಯರ್ ಮಾಡಿಕೊಂಡು, ಮನೆಗೆ ಬರುವುದರ ಒಳಗೆ 4 ವರೆ ಅಯಿತು.  ವಾಪಸ್ಸು
ಪ್ರಯಾಣದಲ್ಲಿ ಫಣಿ ನಮ್ಮ ಜೊತೆ ಇದ್ದರು. ಬೆಳಕು ಹರಿಯುನ ತನಕ ಮಾತನಾಡಿದೆವು.  ಮತ್ತೆ ಬೆಂಗಳೂರು
ಯಾತ್ರಿಕ ಜೀವನ ಪ್ರಾರಂಭವಾಯಿತು.  ಭಗವಂತನ ಕೃಪೆಯಿಂದ ಎಲ್ಲಾ ಸಾಂಗವಾಗಿ ನೇರವೇರಿತು.
                     8ನೆ ಏಪ್ರೀಲ್ 2012.

          ಎರಡನೇ ಬಾರಿ ದುಬೈಗೆ ಜೂನ್ 29 2015 ರಂದು ಹೊಗಿ ಜುಲೈ 12 ರಂದು ಬಂದ್ವಿ.
ನಮ್ಮ ಯಜಮಾನರಿಗೆ ಶಾರ್ಜ ಇಂಡಿಯನ್ ಸ್ಕೂಲ್ ನಲ್ಲಿ ವರ್ಕ ಶಾಪ್ ಇತ್ತು.  ಅವರ ಟೀಮ್ ಅಲ್ಲಿಗೆ
ಬಂದಿತ್ತು.  ಹತ್ತಿರವೇ ಇದ್ದ ದುಬೈಗೆ, ಇವರ ಆಪ್ತ ಸ್ನೇಹಿತರಾದ, ವಾಸುದೇವ್ ರವರ ಹೆಂಡತಿ ವೀಣಾ
ಹಾಗು ನಾನು ಮಗಳು, ಅಳಿಯರಿಂದ ವೀಸಾ ತೆಗೆಸಿಕೊಂಡು ಅವರ ಮನೆಗೆ ಬಂದು ಇಳಿದೆವು.  ಬೆಂಗಳೂರಿ
ನಲ್ಲಿ ಬೆಳಿಗ್ಗೆ 3 ವರೆಗೆ  ಎದ್ದು, ಸ್ನಾನಮಾಡಿ, ಉಪಹಾರ ತಯಾರು ಮಾಡಿಕೊಂಡು, 4 ವರೆ ಹೊತ್ತಿಗೆ
ಮನೆ ಬಿಟ್ಟು, 5 ಗಂಟೆಗೆ ಎರ್ ಪೋರ್ಟ್ ಬಂದ್ವಿ.  7 ಗಂಟೆಯ ಇಂಡಿಗೋ ವಿಮಾನ ಎರಿದೆವು.  3ವರೆ ಗಂಟೆ
ಪ್ರಯಾಣ,  ಚಪಾತಿಯನ್ನು ಟೊಮೆಟೋ ಚಟ್ನಿಯಿಂದ ರೋಲ್ ಮಾಡಿಕೊಂಡು, ಜೊತೆಯಲ್ಲಿ ಹುರಿಟ್ಟಿನ ಲಾಡು
ಬೆಳಿಗ್ಗೆಯ ತಿಂಡಿಯಾಯಿತು.  ಇಂಡಿಯಾ ಬಿಟ್ಟು ಎಲ್ಲಾ ದೇಶದಲ್ಲಿ, ಜೂನ್ ಜುಲೈನಲ್ಲಿ, ಮಕ್ಕಳಿಗೆ ರಜವಿರುವು
ದರಿಂದ ಫ್ಲೈಟ್ ಚಾರ್ಜ್ ಬಹಳ.  ಇಲ್ಲಿಂದ ಹೋಗುವಾಗ ಖಾಲಿ ಖಾಲಿ. 3 ಸೀಟ್ ಇರುವ ಕಡೆ ಕೆಲವರು
ಮಲಗಿ ಪ್ರಯಾಣಿಸಿದರು.  ವಾಪಸ್ಸು ಬರುವಾಗ ಬಹಳ ರಶ್ ಹಾಗು ದುಭಾರಿ.  ದುಬೈಗೆ ಹೊಗುವ ರೇಟ್
ಗಿಂತ 4 ಪಟ್ಟು ಹೆಚ್ಚು.  ವಿಮಾನ ದರಗಳು ಬೇಡಿಕೆಯ ಮೇಲೆ ವ್ಯೆತ್ಯಾಸವಾಗುತ್ತದೆ.  ಜನವರಿಯಲ್ಲಿ ಪ್ರಯಾಣ
ದರ ಕಡಿಮೆ.  ಆಗ ಪ್ರಪಂಚ್ಯಾದ್ಯಂತ, ದುಬೈ ಫೆಸ್ಟಿವಲ್ ನೊಡಲು ಬಹಳ ಜನರು ಬರುತ್ತಾರೆ.  ಮಗಳು
ಎರ್ ಪೋರ್ಟ್ ಗೆ ಬಂದು, ಅಲ್ಲೇ ಹತ್ತಿರವಿದ್ದ ಮನೆಗೆ ಕರೆದುಕೊಂಡು ಹೋದಳು.

          ಈ ಸಲ ನಾವು ಮೊದಲು ನೋಡಿದ್ದು, "ಫೂಜ್ಯರ". ಯು.ಎ.ಇ.ಯ ಒಂದು ರಾಜ್ಯ.  ಅವಳ
ಮನೆಯಿಂದ ಶಾರ್ಜ ಮೂಲಕ, 150 ಕಿ,ಮಿ. ದೂರ.  2 ಕಾರ್ ನಲ್ಲಿ ಪ್ರಯಾಣ.  ಅರುಣಾಳ ಕಾರ್ ನಲ್ಲಿ,
ಅವಳ ಡೈವಿಂಗ್ ನಲ್ಲಿ, ನಾನು, ಇವರು ಹಾಗು ಇವರ ಸ್ನೇಹಿತ ದಂಪತಿಯರು.  ಅಳಿಯನವರ ಕಾರ್ ನಲ್ಲಿ
ಅವರ ಕಸೀನ್, ಅಮೇರಿಕದಿಂದ ಬಂದವರು ಅವರ ಫ್ಯಾಮಿಲಿ.  ಹೊರಗಡೆ ವಿಪರೀತ ಬಿಸಿಲು.45ಡಿಗ್ರಿ ಯಿಂದ
50. ಕಾರಿನ ಮೇಲೆ ಹೀಟ್ ಎಷ್ಟಿದೆ ತೋರಿಸಲು, ಅಮ್ಲೇಟ್ ಮಾಡುತ್ತಾರೆ.  ಅಷ್ಟು ಬಿಸಿ.  ಎರ್ ಕಂಡೀಷನ್
ಒಳಗಡೆ ಇರುವುದರಿಂದ ಗೊತ್ತಗುವುದಿಲ್ಲ.  ಪ್ರಯಾಣದ ಉದ್ದಕ್ಕೂ, ಮೊದಲು ಬಿಳಿ, ಕೆಂಪು, ನಂತರ ಕಪ್ಪು
ಬಣ್ಣದ ಮರಳ ರಾಶಿಗಳು.  ಮರುಭೂಮಿಯಲ್ಲಿ ಅಲ್ಲಲಿ ಹಸಿರು ಮುಳ್ಳು ಗಿಡಗಳು. ಅಲೆ ಅಲೆ ಯಂತ್ತಿದ್ದ
ಮರಳ ರಾಶಿಗಳ ಮಧ್ಯೆ, ಕಾಡಿನ ದೈತ್ಯ ಒಂಟೆಗಳ ದರ್ಶನ.  ನಮ್ಮಲಿಯ ಹಿಮವತ್ ಪರ್ವತಗಳಂತೆ,
ಇಲ್ಲಿ ಹಿಮ ಇಲ್ಲದ ಕರಿಯ ಪರ್ವತಗಳು, ಬಹಳ ಮೈಲಿಗಳ ದೂರ ಹರಡಿ ಕೊಂಡ್ಡಿದ್ದವು.  ಒಂದು ಚೂರು
ಹಸಿರಿಲ್ಲದ ಕರಿಯ ಪರ್ವತಗಳು, ಮರಭೂಮಿಗೆ ಬೆರೇಯೇ ಸೌಂದರ್ಯವನ್ನು ಕೊಟ್ಟಿತ್ತು.  ಅವುಗಳು ಕಬ್ಬಿಣದ
ಅದರಿನಿಂದ ಕೊಡಿದ ಹೇರಳವಾದ ಖನಿಜ ಸಂಪತ್ತಿನಿಂದ ಕೊಡಿದ ಪರ್ವತಗಳು.  ಲೆಕ್ಕವಿಲ್ಲದಷ್ಟೂ ಸಂಪತ್ತು
ಇದ್ದರೂ, ಅತುರ ದಿಂದ ಎಲ್ಲ ಸಂಪತ್ತನ್ನು ಶೋಷಣೆ ಮಾಡದೆ, ಎಷ್ಟೂ ಬೇಕೊ ಅಷ್ಟು ಉಪಯೋಗಿಸಿ,
ಭವಿಷ್ಯತ್ತಿಗೆ ಇಟ್ಟಿರುತ್ತಾರೆ.  ಇಲ್ಲಿ "ವಾಡಿ" ಯು ನೀರು ಸಂಗ್ರಯಿಸುವ ಜಾಗ.  ಇಲ್ಲಿಯೇ ಡಿ ಸೇಲಿನ್ ಮಾಡುವ
ಜಾಗ. ಅಂದರೆ ಸಮುದ್ರದ ನೀರಿನಲ್ಲಿ ಉಪ್ಪಿನ ಅಂಶ ತೆಗೆದು ಉಪಯೋಗಿಲು ಅಣಿಮಾಡಿವುದು.  ಇಲ್ಲೇ ಸುತ್ತಾಲು  ಬೊಗನ್ ವಿಲಾ ಹೂವಿನ ಗಿಡಗಳಿಂದ ಅಲಂಕೃತವಾದ ಗೂಡೆ ಬೆಳಸಲಾಗಿತ್ತು.  ರಸ್ತೆ ಉದ್ದಕ್ಕೂ
ಫಲಭರಿತ ಖರ್ಜೂರ ಗಿಡಗಳು ಅಷ್ಟು ದೂರಕ್ಕೂ ಇದ್ದವು.  ದಾರಿಯಲ್ಲಿ ಕಾರು ನಿಲ್ಲಿಸಿ, ಮರದಿಂದ ಸೀದಾ
ಬಾಯಿಗೆ ಹಾಕಿಕೊಂಡು ಅದರ ಸ್ವಾದ ಅನುಭವಿಸಿದೆವು.  ಹೊಟ್ಟೆ ಬಿರಿಯುನಷ್ಟು ತಿಂದು ಅನಂದಪಟ್ಟೆವು.ಹಳದಿ
ಬಣ್ಣದ  ಯಲಚೀ ಹಣ್ಣಿನ ತರಹ ಇತ್ತು.

          ರಂಜಾನ್ ನಲ್ಲಿ ಎಲ್ಲಾರಿಗೂ ಅರ್ಧ ದಿನ ಕೆಲಸ.  ಬಿಸಿಲು ಸಹ ಬಹಳ ವಿರುತ್ತೆ.  ಪಬ್ಲಿಕ್
ನಲ್ಲಿ ಆಹಾರ ಹಾಗು ನೀರು ಯಾರೂ ಕುಡಿಯುನಂತೆ ಇಲ್ಲ.  ಇದು ಕಾನೂನು.  ಪ್ರವಾಸಿಗರು, ಮುಸ್ಲಿಮ್
ಅಲ್ಲದವರು ಬೇರೇಯೇ ಅಗಿ,ಒಂದು ಕೊಣೆಯಲ್ಲಿ, ಅವರಿಗೆ ಟೆಮ್ಟ್ ಅಗದ ಹಾಗೆ ತಿನ್ನ ಬಹುದು.  ಫುಜೈರ
ದಿಂದ ಬರುವಾಗ ಸಮುದ್ರತೀರದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿದೆವು.

          ಈ ಸಲ ಇನ್ನೋಂದು ವಿಶೇಷ ನೋಡಿದ್ದು "ಡೆಸರ್ಟ ಸಫಾರಿ".  ಬಹಳ ರೋಮಂಚಕ ಹಾಗು
ಸಹಾಸಮಯ ಅನುಭವ.  ಬೇರೆ ಗಾಡಿ ಓಡಿಸುವುದು ಕಷ್ಟ ವಾದ್ದರಿಂದ "ಲ್ಯಾಂಡ್ ಕ್ರೂಸರ್"ನಿಂದ ಮರಭೂಮಿ
ಯ ಕಡೆಗೆ ಪ್ರಯಾಣ.  ಪ್ರತಿಯೊಬ್ಬರು ಸೀಟ್ ಬೇಲ್ಟ್ ಹಾಕಿಕೊಳ್ಳಬೇಕು.  ಮರಳುಗಾಡಿನ ಕಣ್ಣು ಉದ್ದಕ್ಕೂ
ಕಾಣುವ ಮರಳಿನ ಗುಡ್ಡ, ತಗ್ಗು ಕಣಿವೆಯಲ್ಲಿ ಒಂದೇ ಸಮನೆ ತುತ್ತ ತುದಿಗೆ ಪ್ರಯಾಣಿಸಿ, ತಕ್ಷಣವೇ ಬಿದ್ದು
ಬಿಡುವ ಹಾಗೆ ಚಾಲನೆ, ಅರ್ಧ ಗಂಟೆಗಳ ಕಾಲ ಸಫಾರಿ ಡ್ರೈವಿಂಗ್ ಸೋಗಸೆ ಸೊಗಸು.  ಮರುಭೂಮಿ
ನೋಟ.ನಡೆಯುವಾಗ ಕಾಲು ಹೂತು ಹೋಗಿದ ಅನುಭವ, ಇನ್ನೋಂದು ಕಾಲನ್ನು ಎತ್ತಿ ಇಟ್ಟು ನಡೆಯುವ
ಸರ್ಕಸ್ ಮಾಡಿದೆವು.  ನಮ್ಮ ಹೆಜ್ಜೆ ಗುರುತ್ತನ್ನು ನಾವೆ ನೋಡಿಕೊಂಡು ನಡಿಗೆ.  ಎಲ್ಲೆಲ್ಲೂ ಮರಳೇ ಮರಳು.
ಅಲ್ಲಲ್ಲಿ ಮುಳ್ಳು ಹಾಗು ಎಕ್ಕದ ಗಿಡಗಳು.  ಸೊರ್ಯಸ್ತ ನೋಡಿಕೊಂಡು, ಅಲ್ಲಿಂದ ಸ್ವಲ್ಪ ದೂರದಲ್ಲಿ ಎರ್ಪಡಾ
ಗಿದ್ದ ಸಾಂಸ್ಕತಿಕ ಕಾರ್ಯಕ್ರಮಗಳ ಸ್ಥಳಕ್ಕೆ ಬಂದೆವು.

          ಡೇರೆ ಹಾಕಿ ಕಟ್ಟಿದ ಸ್ಶಳದಲ್ಲಿ ಕಾರ್ಯಕ್ರಮ.  ಹೊರಗಡೆ ಸಿಂಗರಿಸಿದ ಒಂಟೆಗಳು, ಅವುಗಳ
ಮೇಲೆ ಸಫಾರಿ, ಮರಳಿನಲ್ಲಿ ಸಾಹಸ ಅನುಭವ ಪಡೆಯಲು ಮೊಟರ್ ಬೈಕ್ ನಲ್ಲಿ ಮರಳ ಗುಡ್ಡದಲ್ಲಿ, ಏರಿಸಿ
ಓಡಿಸಲು ಅವಕಾಶವೆತ್ತು.  ಡೇರೆಯ ಒಳಗೆ ಅಲ್ಲಿನ ಪ್ರಾಚೀನ ಸಂಸ್ಕತಿಯನ್ನಯ ಪ್ರತಿಬಿಂಬಿಸುವ ವಸ್ತುಗಳು,
ಅಂದರೆ ಮನೆ, ಬಾವಿ, ಜನ, ಜೀವನ ವೈಖರಿಯ ರೂಪಕಗಳು.  ಮೆಹೆಂದಿ ಹಾಕುವರು ಇದ್ದರು.  ಬಂದ
ತಕ್ಷಣ ಎಲ್ಲಾರಿಗೂ ಚಹ ವಾಯಿತು.  ಅಲ್ಲಿಯೇ ಊಟದ ಎರ್ಪಡು ಇರುತ್ತೆ.  ಪ್ಯಾಕೇಜ್ ದಲ್ಲಿ ಅದು ಸೇರಿದೆ.
ಮಧ್ಯೆದಲ್ಲಿ ಒಂದು ರಂಗಸ್ಥಳ. ಕೆಳಗೆ ಕೂರಲು ಅಸನಗಳು.  ಕೊನೆಯಲ್ಲಿ ಸೋಫಾ ಸೆಟ್ ಗಳು ಹಾಕಿದ್ದರು.
ಮರುಭೂಮಿಯ ನೃತ್ಯಗಳು, ಬೆಲ್ಲಿ, ತನೂರ, ಹಾಗು ಬೆಂಕಿ ನೃತ್ಯಗಳು.  ನಾವು ಹೋದ ಸಮಯ ರಂಜಾನ್
ಅದ್ದರಿಂದ ಬೆಲ್ಲಿ ಇರಲಿಲ್ಲ.  ಇಡೀ ದೇಹವನ್ನು ಕುಣಿಸುವ ನೃತ್ಯ ತನೂರ.  ನೃತ್ಯದ ಪೋಷಕು ನೋಡಲು
ರಂಗು ರಂಗಾಗಿತ್ತು.  ಬಣ್ಣ ಬಣ್ಣದ ಸ್ಕಟ್ ಧರಿಸಿ, ಛತ್ರಿಯಂತೆ ಹರಡುವ ಬಟ್ಟೆಯನ್ನು ಹಾಕಿಕೊಂಡಿದ್ದರು.
ನಿಂತಜಾಗದಲ್ಲೆ ವೃತ್ತಕಾರದಲ್ಲಿ ಸುತ್ತುತ್ತಿರುತ್ತಾರೆ.  ಬೆತ್ತದ ಡಿಸ್ಕ್ ತರಹ ಬುಟ್ಟಿಯನ್ನು ಕೈಯಲ್ಲಿ ಇಟ್ಟಿಕೊಂಡು
ಒಂದರ ಪಕ್ಕ ಒಂದನ್ನು ಸರಿಸುತ್ತಾ, ಎರಡರಿಂದ ನಾಲ್ಕ್, ನಾಲ್ಕ್ ರಿಂದ ಎಂಟು ಮಾಡಿ, ವಿಧ ವಿಧ ರೀತೀಯ
ವಿನ್ಯಾಸ ಮಾಡಿ, ತಿರುಗುತ್ತಾಲೇ ತೋರಿಸುತ್ತಾರೆ.  ಇದರ ಜೊತೆಗೆ ಸೊಂಟದಲ್ಲಿ ಕಟ್ಟಿದ್ದ ಸ್ಕಟ್ ಬಿಚ್ಚಿ, ಬಹಳ
ವಿಶಾಲವಾಗಿ ಹರಡಿಕೊಂಡು ತಿರುಗುತ್ತಾರೆ.  ನಂತರ ಇನ್ನೊಂದನ್ನು, ತಲೆಯ ಮೇಲುಗಡೆ, ಬರುವ ಹಾಗೆ
ಛತ್ರಿ ತರಹ ಹರಡಿಸಿ ಗರಗರನೇ ತಿರುಗುತ್ತಾ, ತಿರುಗಿಸುತ್ತಾರೆ.  ಬಟ್ಟೆಯಿಂದ ದೀಪಗಳು ಹತ್ತಿ ಮಿನಗುತ್ತವೆ.
ಕತ್ತಲ್ಲಲಿ ಚೆನ್ನಾಗಿ ಕಾಣುತ್ತೆ.  ಪ್ರೇಕ್ಷಕರ ಹತ್ತಿರ ಬಂದು, ಅವರೀಗೂ, ಅ ಸ್ಕಟ್ ಕೊಟ್ಟು ಕುಣಿಯುವ ಅವಕಾಶ
ಕೊಡುತ್ತಾರೆ.  ನಿಜಕ್ಕೂ ಕಣ್ಣಿಗೆ ಹಬ್ಬವಾಗಿತ್ತು.

          ಮತ್ತೊಂದು ಬೆಂಕಿ ನೃತ್ಯ.  ಎಲ್ಲಾ ಕಡೆ ದೀಪವನ್ನು ಅರಿಸಿ ಕತ್ತಲ್ಲಲ್ಲಿ ಅಟ ಹಾಗು ನೃತ್ಯ.
ಎರಡು ಕೈಯಲ್ಲಿ ಉದ್ದೂದ್ದ ಕಂಬಿಯಲ್ಲಿ ಬೆಂಕಿ ಅಡಿಸಿ, ಎಲ್ಲಾ ದಿಕ್ಕುಗಳಿಗೆ ತಿರುಗುತ್ತಾ ತಿರುಗಿಸಿತ್ತಾರೆ.ಒಂದ
ರಿಂದ ಎರಡು ಮೂರು ನಾಲ್ಕು ಹೀಗೆ ಹೆಚ್ಚಿಸುತ್ತಾ ತಿರುಗುತ್ತಾರೆ.  ಆಗ ಬೆಂಕಿಯ ಕುಣಿತ ಕಾಣುತ್ತೆ.  ಮೇಲೆ,
ಕೆಳಗೆ, ಹಿಂದೆ ಮುಂದೆ, ಹಕ್ಕ, ವರ್ಟಿಕಲ್ ಅಗಿ, ಹಾರ್ಝ್ನಿಟಲ್ ಅಗಿ, ಬೆನ್ನಿಗೆ ತಗಲಿಸುತ್ತಾ ತಿರುಗುತ್ತಾರೆ.  ಅಂಧ
ಕಾರದಲ್ಲಿ ಬೆಂಕಿಯ ನೃತ್ಯ ಚೆನ್ನಾಗಿ ಕಾಣುತ್ತೆ.  ಕೊನೆಯ ದಾಗಿ, ಮತ್ತೆ ಮತ್ತೆ ಸ್ವಲ್ಪದಿಂದ ಜಾಸ್ತಿಯಾಗಿ, ಸೀಮೆ
ಏಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು, ಬೆಂಕಿಯ ಬುಗ್ಗೆಯನ್ನು ಬರಿಸುತ್ತಾರೆ.  ಅದಕ್ಕೂ ಮುಂಚೆ ಬೆಂಕಿಯನ್ನು
ಬಾಯಿಯಲ್ಲೆ ನಂದಿಸುತ್ತಾರೆ.  ನೋಡಲು ಭಯವಾಗಿತ್ತು.  ಬಹಳ ಅಪಾಯಕಾರಿಯಾದ ಬೆಂಕಿಯ ಸರಸ ನೋಡಿ
ಬೆರಗಾದೆವು.  ನಂತರ ಎರ್ಪಡಿಸಿದ ಒಳ್ಳೆಯ ಊಟ. ತರತರದ ಸಲಾಡ್ ಗಳು, ಚೋಲೆ, ರೋಟಿ, ಚಟ್ನಿ,
(ಅರಬ್ ಸ್ಟೈಲ್ ಕಬೂಸ್ ಮೋಮೋಸ್, ಕಾಬುಲ್ ಛನ ದಿಂದ ಬೇಯಿಸಿ, ರುಬ್ಬಿ ಮಾಡಿದ ಚಟ್ನಿ), ಫ್ರೈಡ್
ರೈಸ್, ಹಣ್ಣುಗಳು ಸ್ವೀಟ್ ಇತ್ತು.  3 ಗಂಟೆಗಳ ಈ ಕಾರ್ಯಕ್ರಮ ಮರೆಯಲಾಗದ ಅನುಭವ.

         ನಾವು ನೋಡಿದ ಇನ್ನೊಂದು ಸ್ಥಳ "ದುಬೈ ಡಶ್".  ಗಗನ ಚುಂಬಿ ಕಟ್ಟಡಗಳ ಮುಂದೆ ಇರುವ
ಪಾರ್ಕ ತುದಿಯಲ್ಲಿ, ಕ್ರೀಕ್, ಅಲ್ಲರುವ ಬೋಟ್ ರೆಸಾರ್ಟ್ಗಳು.ಕ್ರೀಕ್ (ಸಮುದ್ರ ದಿಂದ ಹರಿದ ನೀರು), ಅದರ
ಇನ್ನೊಂದು ತುದಿಯಲ್ಲಿ (ದಂಡೆ) ಗಗನ ಚುಂಬಿ ಕಟ್ಟಡಗಳು, ಅಂದವಾಗಿತ್ತು.  ಮೊದಲೆ ಫ್ಲೋಟಿಂಗ್ ರೆಸಾರ್ಟ್
ಬುಕ್ ಮಾಡಿದ್ದೆವು.  2 ಗಂಟೆಗಳ ಕಾಲ ದೋಣಿ ವಿಹಾರ, ಸುತ್ತಲಿನ ದೃಶ್ಯಗಳ ದರ್ಶನ, ಸೂರ್ಯಸ್ತಾ, ಅದರ
ಪ್ರತಿಬಿಂಬ ನೀರಿನಲ್ಲಿ ನೋಡಿದೆವು.  ಸುತ್ತಲಿನ ಕಟ್ಟಡಗಳ ದೀಪಗಳ ಪ್ರತಿಬಿಂಬ ಸೊಗಸಾಗಿತ್ತು.  ದುಬೈ ಡಶ್
ನಲ್ಲಿ ಬಹಳಷ್ಟು ಸಿನಿಮಾ ಶೂಟ್ ಅಗಿದೆ.  ದೋಣಿಯಲ್ಲಿ, ಊಟದ ಟೇಬಲ್, ಕ್ಯಾಂಡಲ್ ಲೈಟ್, ಆಹಾರ
ವನ್ನು ಅಲಂಕೃತವಾಗಿ ಜೊಡಿಸಿದ್ದರು.  ಸಂಜೆ ಯಾದ ನಂತರ ಮೊದಲು ಖರ್ಜೂರ ಕೊಟ್ಟು, ಉಪವಾಸ ಮುರಿದು
ನಂತರ ವೆಲ್ ಕಂ ಪಾನೀಯ ದಿಂದ ಊಟ ಪ್ರಾರಂಭವಾಯಿತು.  ಒಬ್ಬರು ಅಲ್ಲೆ ಹುಟ್ಟಿದ ಹಬ್ಬ ಅಚರಿಸಿದರು.
ಅರಬ್ ಸ್ವೀಟ್ ನಮ್ಮ ಪಾಯಸಕ್ಕಿಂತ ರಿಚ್ ಅಗಿತ್ತು.  ಬಹಳ ರುಚಿ ಇತ್ತು.  ಡೆಸರ್ಟ್ ಸಫಾರಿತರ ಊಟ, ಜೊತೆ
ಯಲ್ಲಿ ರುಚಿಕರ ಪಕೊಡ ಇತ್ತು.  ಸುತ್ತಾಲು ನೀರಿನಲ್ಲಿ ಪ್ರತಿಬಿಂಬವನ್ನು ನೋಡುತ್ತಾ, ತಿನ್ನುತ್ತಾ,ತೇಲುತ್ತಾ
ಊಟ ಮುಗಿಸಿ 8 ವರೆಗೆ ಹೊರಗೆ ಬಂದ್ವಿ. ತೆಗೆದ ಫೋಟೋ ಲೆಕ್ಕವಿಲ್ಲ.  ಮತ್ತೆ ಎರಡನೆ ಸಾರಿ ನೋಡಿದ
ಪಾಮ್ ಜುಮೇರ, ಬ್ರುಜ್ ಖಲೀಫಾ, ಅಟ್ಲಾಂಟ, ಹೊಸದಾಗಿಅದ ಮಾಲ್ಗಳು, ಹಳೆಯ " ಬಾಟಾಡ' ಮಾಲ್
ಸೊಗಸಾಗಿತ್ತು.  ಅಲ್ಲಿಯ ರಾಜ 14ನೇ ಶತಮಾನದಲ್ಲಿ ತಾನು ಸಮುದ್ರ ಮೂಲಕ, ಬೇಟಿ ಕೊಟ್ಟ ದೇಶಗಳ
ಮಾದರಿಯಲ್ಲಿ ಈ ಮಾಲ್ ಕಟ್ಟಿರುತ್ತಾರೆ.  ಪರ್ಷಿಯನ್ ಇಂಡಿಯನ್ ಇತರೆ ದೇಶದ ಮಾದರಿಯ ಕಟ್ಟಡ,
ಜನರು, ವೇಶ ಭೂಷಣಗಳು, ಸಂಸ್ಕತಿಯನ್ನು ಪತಿಬಿಂಬುಸುತ್ತಿದ್ದವು.  ಬೇರೇಯೇ ಪ್ರಪಂಚಕ್ಕೆ ಹೊದ ತರಹ.
ಮೇಲೆ ಅಕಾಶ, ನಕ್ಷತ್ರಗಳು, ಸೂರ್ಯೋದಯ, ಸೂರ್ಯಸ್ಥ, ಬಹಳ ಚೆನ್ನಾಗಿತ್ತು. ಅ ದೇಶಕ್ಕೆನೆ ಹೊಗಿದೆವ ಅನ್ನಿಸು
ತ್ತಿತ್ತು.  ಅಲ್ಲಿಂದ ಮೇಟ್ರೋ ಟ್ರೈನ್ ಹತ್ತಿ, ಮನೋ ಟ್ರೈನ್‍ನಲ್ಲಿ ಎತ್ತರದಿಂದ, ಪಾಮ್ ಜೂಮೇರ ಸಮುದ್ರ
ದಲ್ಲಿ ಪಾಮ್ ಮರದ ಶೇಪ್ ನೋಡಿದೆವು.  ಅಲ್ಲಿ ಅರುಣ ಗುರು ಬಂದು ಪಿಕ್ ಅಪ್ ಮಾಡಿದರು. ಅಲ್ಲಿಯ
ಮಾಲ್ ನ ಕಾರ್ ಪಾರ್ಕ ನಲ್ಲಿ ಊಟ ಮುಗಿಸಿದೆವು.  10 ಜನಕ್ಕೂ ರೈಲ್ ನಲ್ಲಿ ಕೊಟ್ಟಹಾಗೆ ಅಲ್ಯುಮೀಯಮ್
ದೊನ್ನೆಯಲ್ಲಿ ಪ್ಯಾಕ್ ಮಾಡಿದ್ದಳು.  ರುಚಿಯಾದ ಪಲಾವ್, ಪುಳಿಯೊಗ್ಗರೆ. ಮೊಸರನ್ನ, ಸಲಾಡ್ ಗಳು. ಸುತ್ತಿ
ಹಸಿವಾದಾಗ ಆಹಾರ ತೃಪ್ತಿ ಕೊಟ್ಟಿತ್ತು.  ಎಲ್ಲಾರು ಸಂತೋಷದಿಂದ ಕಾಲ ಕಳೆದೆವು.

           ಕೊನೆಯದಾಗಿ ಬಹಳ ಮುಖ್ಯ ಜಾಗ "ಗೋಲ್ಡ ಸೂಕ್" ಅಲ್ಲಿಗೆ ಹೊದೆವು.  ಕುರುಡು ಕಾಂಚನ
ನೋಡಲು ಎರಡು ಕಣ್ಣು ಸಾಲದು.  ಕಣ್ಣಿಗೆ ಕುಕ್ಕಿ ತಲೆ ತಿರುಗಿಸುತ್ತದೆ.  ಎಷ್ಟು ತರಹ, ಎಷ್ಟು ನಮೂನೆ.
ಬಂಗಾರದ ಶುದ್ದತೆ (ಕ್ವಾಲಿಟಿ) ಚೆನ್ನಾಗಿರುತ್ತೆ.  ವಡವೆಯನ್ನು 23 ಕ್ಯಾರೇಟ್ ನಲ್ಲಿ ಮಾಡಿರುತ್ತಾರೆ.  ತೆರಿಗೆ
ಇಲ್ಲ.  ಮೇಕಿಂಗ್ ಚಾರ್ಜ್ ಕಡಿಮೆ.  ನಾವು ಯಾವ ಅಂಗಡಿಯಲ್ಲಿ ಕೊಂಡೆವೋ ಆ ಅಂಗಡಿಯಲ್ಲಿ ವಾಪಸ್ಸು
ಕೊಟ್ಟರೆ ಏನನ್ನು ಕಳಿಯದೆ ಎಕ್ಸ್ಚೇಜ್ ಮಾಡುತ್ತಾರೆ.  ದರ ಅದಿನ ಚಾಲ್ತಿಯಲ್ಲದ್ದ ದರ. ಕಡಿಮೆ ಅಲ್ಲ.
ಇಂಡಿಯನ್ನು ಬಂಗಾರವನ್ನು 20 ಕ್ಯಾರೆಟ್ ದರದಲ್ಲಿ ಬದಲಾಯಿಸುತ್ತಾರೆ.  300 ಕ್ಕೂ ಹೆಚ್ಚು ಅಂಗಡಿಯಿದೆ.
ಓಲೆಗಳು, ಜುಮುಕಿಗಳು, ಉಂಗುರಗಳು, ಬಳೆಗಳು, ನೆಕ್ಲೇಸ್‍ಗಳು, ಉಡುಗೆ, ತೊಡುಗೆ ವಿಗ್ರಹಗಳು, ಅಬ್ಬ. ಅವು
ಗಳನ್ನು ತೊಟ್ಟ ಗೊಂಬೆಗಳು ಇದ್ದವು. ಏಲ್ಲೆಲ್ಲೂ ಹಳದಿ ಲೋಹ. ಅದರಿಂದ ಅಕರ್ಷಿಕರಾಗದೇ ಇದ್ದವರು
ಯಾರು!

          ಈ ಸಲ ನೋಡಿದ ಇನ್ನೊಂದು ಜಾಗ "ಮೈದಾನ್".ರೇಸ್ ಕೋರ್ಸ್ ನಡೆಯುವ ವಿಶಾಲವಾದ
ಸ್ಥಳ.  ಇನ್ನು ನೋಡುವುದು ಎಷ್ಟೆಷ್ಟೋ ಇದೆ. ನಾವು ನೋಡಿದ್ದು ಇಷ್ಟು.

          ಅಧಾರ: ಕಂಡಿದ್ದು, ಕೇಳಿದು, ಓದಿದ್ದು ಹಾಗು ಪ್ರಾಚೀನ ಸಂಶೋಧನ ಇಲಾಖೆಯವರ
ಬ್ರೋಚರಸ್ಸ್.

Saturday, 25 June 2016

ದಕ್ಷಿಣ ಪೂರ್ವ ಏಷ್ಯಾ ಪ್ರವಾಸದ ನೆನಹುಗಳು ( ಸಿಂಗಾಪುರ, ಮಲೇಷಿಯಾ ಹಾಗು ಥೈಲಾಂಡ್)

         


        ಡಿಸೆಂಬರ್ 6ನೆ ತಾರೀಖು ಭಾನುವಾರ 2015, ನಾನು ಮತ್ತು ನಮ್ಮ ಯಜಮಾನರು, ಪ್ರವಾಸಕ್ಕೆ
ಹೊರಡಲು ತಯಾರಾಗಿ, ವಿಮಾನ ನಿಲ್ದಾಣಕ್ಕೆ ಸಂಜೆ 5 ಗಂಟೆಗೆ ಮನೆ ಬಿಟ್ಟೆವು.  ಅಲ್ಲಿಯೇ ನಮ್ಮ ಸ್ನೇಹಿತರಾದ
ಮೀರ ಹಾಗು ಗಂಗಾಧರಯ್ಯ, ನಾಗರತ್ನ ಹಾಗು ವನಪ್ಪ ಹಾಗು ಇತರೆ ಸಹ ಪ್ರಯಾಣಿಕರನ್ನು ಭೇಟಿ ಆದೇವು.
ವಿಮಾನ ಒಂದೂವರೇ ಗಂಟೆ ತಡವಾಯಿತು.  ಶ್ರಿಲಂಕನ್ ಏರ್‍ಲೈನ್  ಪ್ರಯಾಣವು ರಾತ್ರೆ 10.55ಕ್ಕೆ ಪ್ರಾರಂಭನಾಗಿ
ಕೊಲೊಂಬೊದ ಭಂಡರಾನಾಯಕೆ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 12.10 ಕ್ಕೆ ತಲುಪಿತ್ತು.  ವಿಮಾನ
ದಲ್ಲೆ ರಾತ್ರೆಯ ಭೋಜನವಾದ್ದರಿಂದ, ನಿಲ್ದಾಣದಿಂದ ಸೀದಾ ಮಲೇಷಿಯಾಕ್ಕೆ ಹೊಗುವ ಶ್ರಿಲಂಕಾನ್ ಏರ್ ಲೈನ್
ವಿಮಾನದ ಕಡೆಗೆ ಹೊದೆವು.  ನಮ್ಮ ಸಾಮನು ಸರಾಂಜಮುಗಳು ಬೆಂಗಳೂರಿನಿಂದ ಹೊರಟ ವಿಮಾನದಿಂದ
ಕೌಲಾಲಂಪುರದ ಕಡೆಗೆ ಹೊಗುವ ವಿಮಾನಕ್ಕೆ ವರ್ಗಾವಣೆಯಾಯಿತು.


          ಕೌಲಾಲಂಪರದ ಹೊರಟ ವಿಮಾನದಲ್ಲೂ ಭೋಜನ ವ್ಯೆವಸ್ಥೆ ಅಗಿತ್ತು.  ಹೀಗಾಗಿ ಯಾರಿಗೂ
ಅಹಾರದ ಕೊರತೆ ಅಗಲಿಲ್ಲ.  ಕೊಲೊಂಬೊದಿಂದ ಕೌಲಾಲಂಪುರಕ್ಕೆ 2 ಗಂಟೆ 10 ನಿಮಿಷ ಪ್ರಯಾಣವಾದರೂ,
ನಾವುಗಳು ಪೂರ್ವದಿಕ್ಕಿಗೆ ಪ್ರಯಾಣಿಸುತ್ತಿದ್ದರಿಂದ 2ವರೆ ಗಂಟೆ ಲಾಭವಾಯಿತು.  ನಾವು ಕೌಲಾಲಂಪುರದ
ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಳಿಗ್ಗೆ 7 ಗಂಟೆ 10 ನಿಮಿಷಕ್ಕೆ ತಲುಪಿದೆವು. ನಿಲ್ದಾಣದನಮ್ಮ
ಬೇರೆಲ್ಲಾ ಪ್ರಯಾಣದ ಔಪಚಾರಿಕತೆಯನ್ನು ಮುಗಿಸಿಕೊಂಡು, ನಿಲ್ದಾಣದ ಫೆಸಿಲಿಟಿಯಲ್ಲಿ ಫ್ರೆಶ್ ಅಪ್ ಅದೆವು.
ಅಲ್ಲಿಗಾಗಲೆ ಮಲೇಶಿಯಾದ ಟೂರ್ ಗೈಡ್ "ರಾಜನ್" ತಯಾರಾಗಿ ಬಂದ್ದಿದ್ದರು.  ನಮಗಾಗಿ ಏಸಿ ಬಸ್ಸು ಕಾದಿತ್ತು.
ಎಲ್ಲಾರು ಬಸ್ಸಿಗೆ ಏರಿ ಸುಖಾಸಿನರಾದೆವು.  ಕೌಲಾಲಂಪುರದ ಕಡೆಗೆ ಪ್ರಯಾಣ ಬೆಳೆಸಿದೆವು.  ದಾರಿಯಲ್ಲಿ
ಮಲೇಷಿಯಾದ ಅಡಳಿತ ನಗರವಾದ "ಪುತ್ರಜ"ಗೆ ಹೊದೆವು.  ಅದೊಂದು ಬಹು ಸುಂದರವಾದ, ಅಚ್ಚುಕಟ್ಟಾದ
ಯೋಜನಬದ್ದ ನಗರ.  ಅನೇಕ ಅನೇಕ ಪಾರ್ಕ ಗಳು, ಕಾರಂಗಿಗಳು, ಬಹು ವಿನ್ಯಾಸದ ಸರ್ಕಾರಿ ಕಟ್ಟಡಗಳು,
ಎಲ್ಲಾವು ಇದೆ.  ಇಲ್ಲಿನ "ಪುತ್ರಜ ಪ್ಯಾಲೆಸ್"ಹೋಟೆಲ್ನಲ್ಲಿ ರುಚಿಕರವಾದ ದಕ್ಷಿಣ ಭಾರತದ ಉಪಹಾರ ಸೇವಿಸಿದೆವು. ಇಡ್ಲಿ,ದೊಸೆ, ಚಟ್ನಿ, ಸಾಂಬರ್, ವಡ, ನ್ಯೊಡಲ್, ಉಪ್ಪಿಟ್ಟು, ಹಣ್ಣುಗಳು, ಕಾಫಿ ಹಾಗು ಟೀ ಇದ್ದವು.
ಗಡ್ಡಾದ್ದಾಗಿ ತಿಂಡಿ ತಿಂದು ಸುತ್ತಾಲ ನೋಟ ನೊಡುತ್ತಾ, ಪುತ್ರಜ ದಲ್ಲಿನ "ಗ್ರೇಟ್ ಮಾಸ್ಕ", ಪ್ರಧಾನ ಮಂತ್ರಿಯ
ಕಾರ್ಯಲಯ, ಸಸ್ ಪೆನ್ನಷನ್ ಬ್ರಿಜ್, ಮ್ಯಾನ್ ಮೇಡ್ ಲೇಕ್, ಏಲ್ಲಾವನ್ನು ವೀಕ್ಷಿಸಿ, ದಾರಿಯಲ್ಲಿ ಜೈನ್ ಭವನ್" ನಲ್ಲಿ ಇಂಡಿಯನ್ ಲಂಚ್, ಒಳ್ಳೆ ಸಸ್ಯಹಾರಿ ಭೋಜನ ಮುಗಿಸಿಕೊಂಡು,"ಜೆನಟಿಂಗ್ ಹೈಲಾಂಡ್' ಕಡೆಗೆ
ಪ್ರಯಾಣ ಬೆಳೆಸಿದೆವು.

          ಕೌಲಾಲಂಪುರ ಒಂದು ಉತ್ತಮ ನಗರ.  ಬಹು ದೊಡ್ಡದ್ದಾಗಿದೆ.  ಅಲ್ಲಲ್ಲಿ ಬೆಟ್ಟಗುಡ್ಡಗಳು ಇವೆ.
ವೃಕ್ಷ ಸಂಪತ್ತು ಹೇರಳಾವಾಗಿದೆ. ಅಲ್ಲಿ ವಿವಿಧ ನಮೂನೆ ಕಟ್ಟಡಗಳು, ಪಾರ್ಕಗಳನ್ನು ನೊಡುತ್ತಾ," ಇಂಟರ್
ನ್ಯಾಶನಲ್ ಕಾನ್ಫರೆಸ್ ಸೆಂಟರ್" ನಿಂದ ಕೌಲಾಲಂಪುರದ ವಿಹಂಗಮ ದೃಶ್ಯ ನೋಡಿಕೊಂಡು ಜೆನ್ ಟಿಂಗ್
ಹೈಲ್ಯಾಂಡ್ ಕಡೆಗೆ ಪ್ರಯಾಣ ಮುಂದುವರೆಸಿದೆವು.

          ಜೆನ್ ಟಿಂಗ್ ಹೈಲ್ಯಾಂಡ್ ಎಂಬುದು ಒಂದು ಗಿರಿಧಾಮ.  ಊಟಿ, ಸಿಮ್ಲಾ,ತರ.  ಸುತ್ತು
ಬಳೆಸುವ ಉತ್ತಮ ರಸ್ತೆಂiÀiನ್ನು ದಾಟುತ್ತಾ, ಏರುತ್ತಾ, ಅತಿ ಎತ್ತರಕ್ಕೆ ತಲುಪಿದೆವು.  ಅದು 25 ಅಂತಸ್ತಿನ
ಗಿರಿ ಶಿಖರ ದಲ್ಲಿನ 5 ಸ್ಟಾರ್ ಹೊಟೆಲ್.  ನಾವು ಇದ್ದದು 11ನೇ ಅಂತಸ್ತು.  ನಮ್ಮ ರೊಮ್ ನಂಬರ್ 822.
ಅಲ್ಲಿಗೆ ತಲುಪಿದಾಗ ಸುಮಾರು ಸಂಜೆ 6 ಗಂಟೆ.  ನಮ್ಮ ನಮ್ಮ ರೊಮ್ ಗಳಗೆ ಹೊಗಿ, ಸ್ನಾನ ಮಾಡಿ,
ಕಾಫಿ ಮಾಡಿಕೊಂಡು ಕುಡಿದು,ಸ್ಯಾಕ್ಸ್ ತಿಂದು, ಹೊಟೆಲ್ ನಲ್ಲೆ ಇರುವ "ಇಂಡೋರ್ ಥೀಮ್ ಪಾಕ್"ಗೆ
ಹೊದೆವು.  ಅದೊಂದೊ ವಿಚಿತ್ರ ಪ್ರಪಂಚ.  ಮಾಲುಗಳು,ಮ್ಯೂಸಿಯಂ,ಗೇಂಮ್ಸಗಳು, ಅರ್ಕೆಸ್ಟ್ರಾ, ಎನೆಲ್ಲಾ ಇವೆ.
ನಾವು ಎಲ್ಲಾವನ್ನು ನೋಡಿ ಕೊಂಡು ಒಳಗಡೆ ಇರುವ ಮನೋ ಟ್ರೆನ್ನಲ್ಲಿ, 6 ಜನ ಕುಳಿತುಕೊಂಡು, ಕೆಳಗಡೆ
ದೀಪಾಲಾಂಕರದಿಂದ ಮಿಂಚುತ್ತಿದ್ದ,ಕಿನ್ನರ ಲೋಕವನ್ನು ನೋಡಿಕೊಂಡು,ಜನ ನಿಬಿಡನಾದ "ಕ್ಯಾಸಿನೋ"ದಲ್ಲಿ
ಇಣಕಿ ನೋಡಿದೆವು.  ಇಲ್ಲಿ ಪ್ರಪಂಚ ದಿಂದ, ಹೆಚ್ಚಾಗಿ ಚೀನಿಯರು ಜೂಜಿಗಾಗಿ ಬರುತ್ತಾರೆ.  ಜೂಜಿನ
ಹುಚ್ಚಿನವರು ಬಹಳ ಜನರು ಬಂದು,ಹಣಗಳಿಸಿಯೊ, ಕಳೆದುಕೊಂಡು ಹೊಗುತ್ತಾರೆ,  ಅಲ್ಲಿಯೆ ಇದ್ದ ರೆಟ್ಟೊರೆಂಟ್
ನಲ್ಲಿ, ಪ್ರತ್ಯೇಕವಾಗಿ ಇದ್ದ ಭಾರತೀಯ ಖಾದ್ಯಗಳು ಇದ್ದವು.  ಶುಚಿಯಾಗಿಯೂ ಇದ್ದವು.  ಊಟ ಮಾಡಿಕೊಂಡು
ರೂಮಿಗೆ ಬಂದೆವು.  ಇಲ್ಲಿ 7000 ರೂಮು ಗಳು ಇವೆ,  24 ಗಂಟೆಯು ತೆರೆದಿರುತ್ತೆ.  ರಸ್ತೆಯ 2 ಮಗ್ಗಲ್ಲಲ್ಲೂ
ಕ್ರಿಸ್ ಮಸ್ ಪ್ರಯುಕ್ತ ದೀಪಾಲಾಂಕರದಿಂದ ಶೋಭಿಸುತ್ತಿದ್ದವು.  ದೀಪಾಲಂಕರ ಕಣ್ಣಿಗೆ ಕೊರೈಸುತ್ತಿತ್ತು.  ಅಂದು
ರಾತ್ರಿ ಅಲ್ಲೆ ತಂಗಿದೆವು.

          ಈ ದಿನ 8ನೆ ಡಿಸೆಂಬರ್, ಬೆಳಿಗ್ಗೆ 6ಕ್ಕೆ ಎದ್ದು ಕಾಫಿ ಮಾಡಿಕೊಂಡು ಕುಡಿದು,ಸ್ನಾನ್ನಾದಿಗಳನ್ನು,
ಮುಗಿಸಿ, ಲಗೇಜ್ ಪ್ಯಾಕಿಂಗ್ ಮಾಡಿ,ಜೆಟ್ಟಿಂಗ್ ಫಸ್ಟ್ ಕೆಫೆನಲ್ಲಿ ಬೆಳಿಗ್ಗೆ 7 ಕ್ಕೆ ಕಾನ್ಟಿನೆಂಟಲ್ ಬೆಕ್ರ್ ಫಾಸ್ಟ್
ಮುಗಿಸಿಕೊಂಡು ತಯಾರದೆವು.  ಉಪಹಾರದಲ್ಲಿ ಉಪ್ಪಿಟ್ಟು,ವಡೆ, ಪುಳಿಒಗ್ಗರೆ, ನ್ಯೂಡಲ್, ಹಣ್ಣುಗಳು,ಜ್ಯೂಸ್,
ಕಾಫಿ, ಟೀ ಗಳು ಇತ್ತು.  ಉಪಹಾರದ ನಂತರ ಜೆನ್‍ಟಿಂಗ್ ಹೈಲ್ಯಾಂಡ್ ನಿಂದ ಕೇಬಲ್ ಕಾರ್ ಮೂಲಕ,
ಮಲೇಶೀಯದ ದಟ್ಟವಾದ ಕಾಡುಗಳ ಮೇಲೆ 4 ಕಿ.ಮೀ.ಪ್ರಯಾಣ ನಡೆಸಿದೆವು.  ಈ ಕೇಬಲ್ ಕಾರ್ ಪ್ರಯಾಣವು
ಅತ್ಯಂತ ರೂಮಾಂಚಕವೂ, ಹರ್ಷದಾಯಕವೂ,ಅಹ್ಲಾದಕರವೂ, ನಯನ ಮನೋಹರವೂ ಅಗಿತ್ತು.  ಕೇಬಲ್
ಕಾರ್ ಅಲ್ಲಲ್ಲಿ ನಿಧಾನವಾಗಿ ಚಲಿಸುತ್ತಾ, ಕೆಲವೂಮ್ಮೆ ನಿಲ್ಲುತ್ತಾ, ಆ ಕಾಡುಗಳ ದೃಶ್ಯವನ್ನು ಕಣ್ಣು ತುಂಬಿಕೊಳ್ಳಲು
ಸಹಯಾಕವಾಗಿತ್ತು.  ಇಲ್ಲಿ ನಿತ್ಯಹರಿದ್ರ್ವಣಗಳ ಕಾಡುಗಳು, ಬೆಟ್ಟಗಳು, ಕಣಿವೆಗಳು, ಮಲೆನಾಡಿನ ಹಾಗು
ಹಿಮಾಲಯದ ನೆನಪನ್ನು ತರಿಸುತ್ತಿದ್ದವು.  ಕೇಬಲ್ ಕಾರ್ ಪ್ರಯಾಣ ಮುಗಿದ ಮೇಲೆ ನಮಗಾಗಿ ಕಾಯುತ್ತಿದ್ದ
ಏಸಿ ಬಸ್ಸ್ ಮೂಲಕ ಮತ್ತೆ ಅಂಕುಡೂಂಕಾದ ರಸ್ತೆಯಲ್ಲಿ ಸುಧೀರ್ಘ ಪ್ರಯಾಣ ಮಾಡುತ್ತಾ, ಕೌಲಾಲಂಪುರದ
ಮೈದಾನ ಪ್ರದೇಶಕ್ಕೆ ಪ್ರವೇಶಿಸಿದೆವು. ಮೈದಾನ ಪ್ರವೇಶಿಸುತ್ತಿದ್ದಂತೆ ಸುಣ್ಣದ ಕಲ್ಲಿನ ಮಗ್ಗುಲಲ್ಲೆ ಇರುವ
ಸುಬ್ರಮಣ್ಯ ಕ್ಷೇತ್ರಕ್ಕೆ ತಲುಪಿದೆವು.ಅದೊಂದು ಸುಂದರ ತಾಣ.ಲಷ್ಷಾಂತರ ವರ್ಷಗಳ ಮಳೆ ಮತ್ತು ವಾತಾವರಣ
ದಿಂದಾಗಿ ಸುಣ್ಣದ ಕಲ್ಲಿನ ಪರ್ವತದಲ್ಲಿ,ಸುಣ್ಣದ ಕಲ್ಲಿನ ವಿಚಿತ್ರ ಶಿಲ್ಪಗಳು,ಗುಹೆಗಳು ಎರ್ಪಟ್ಟಿದೆ.  ಈ ರೀತಿಯ
ಗುಹೆ ಒಂದರಲ್ಲಿ ಶ್ರೀಸುಬ್ರಮಣ್ಯ ಸ್ವಾಮಿಯ ಪ್ರತಿಷ್ಠಾಪನೆ ಮಾಡಲಾಗಿದೆ.  ಈ ಗುಹೆಯ ಮೇಲ್ಭಾಗದಲ್ಲಿ
ವಿಸ್ತಾರವಾದ ಕಿಂಡಿ ಇದ್ದು, ಅದರಿಂದ ಬೆಳಕು ಬರುತ್ತದೆ.  ಗುಹೆಯ ಅಂತರ್ ಭಾಗದಲ್ಲಿ, ಅಲ್ಲಲ್ಲಿ ನೀರು
ತೋಟ್ಟಿಕ್ಕಿ ಪಸರಿಸುತ್ತಿತ್ತು.  ಪರ್ವತದಲ್ಲಿನ ಗುಹೆಯನ್ನು ತಲುಪಲು, ಕೆಳಗಿನಿಂದ ಸುಮಾರು 368 ಕಡಿದಾದ
ಮೆಟ್ಟಿಲುಗಳನ್ನು ಹತ್ತಬೇಕು.  ಈ ಮೆಟ್ಟಿಲುಗಳನ್ನು, ವಿಶಾಲವಾಗಿ ಭಕ್ತಾದಿಗಳ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಿ
ದ್ದಾರೆ.  ಮೆಟ್ಟಿಲುಗಳನ್ನು ಹತ್ತುವಾಗ ಕೋತಿ ಕಾಟ ಹೆಚ್ಚು.  ಭಕ್ತಾದಿಗಳು ಧರಿಸಿರುವ ಟೋಪಿಗಳನ್ನೆ ಹಾರಿಸಿ
ಬಿಡುತ್ತಿದ್ದವು.  ಕೈಯಲ್ಲಿ ಏನಾದರು ತಿಂಡಿ ತಿನಿಸು,ಹಣ್ಣು ಹಂಪಲು ಇದ್ದರೆ ಅವೆಲ್ಲವೂ ಕೋತಿ ಪಾಲಾಗುತ್ತಿತ್ತು.
ಮೆಟ್ಟಿಲುಗಳನ್ನು ಹತ್ತುವುದು ತ್ರಾಸ ವೆನಿಸಿದರೂ, ಗುಹೆ ತಲುಪಿದಾಗ ಮತ್ತು ಒಳಗಡೆ ಇರುವ ಸುಬ್ರಮಣ್ಯ
ಸ್ವಾಮಿಯ ದರ್ಶನ ಮಾಡಿದಾಗ ಸಾರ್ಥಕವೆನಿಸುತ್ತಿತ್ತು.  ಗುಹೆಯಲ್ಲಿ ಎರಡು ಸುದಂರವಾದ ದೇವಾಲಯಗಳು ಇವೆ.  ದರ್ಶನ ಮಾಡಿಕೊಂಡು ಕೆಳಗೆ ಇಳಿದು ಬಂದೆವು.  ಕೆಳಗಡೆ ಸುಬ್ರಮಣ್ಯ ಸ್ವಾಮಿಯ ನಿಂತಿರುವ ಬೃಹತ್
ಮೂರ್ತಿಯನ್ನು ನಿರ್ಮಿಸಿದ್ದಾರೆ.  ಬಂಗಾರದ ಲೇಪನದ ಈ ಮೂರ್ತಿಯು 146 ಅಡಿ ಇರುವುದು.  ಬಹಳ
ಸುಂದರವಾಗಿದೆ.  ಭಕ್ತರೆಲ್ಲಾರನ್ನು ಅನುಗ್ರಹಿಸುವಂತಿದೆ.  ಇದರ ಪಕ್ಕದಲ್ಲಿ ಸುಮಾರು 5-6 ದೇವಸ್ಥಾನಗಳು
ಬೇರೆ ಬೇರೆಯಾಗಿ ಇದೆ.  ಗಣಪತಿ, ದುರ್ಗ, ಶನೈಶ್ವರ, ಶಿವ, ಹನುಮಾನ್ ಇತ್ತು.  ಇಲ್ಲಿಯೂ ಸಿಹಿಯಾದ
ಎಳನೀರು ಸಿಗುತ್ತಿತ್ತು.  ಇಲ್ಲಿ ಎಳನೀರು ಕೊಚ್ಚುವ ರೀತಿಯೇ ಬೇರೆ.  ಇವೆಲ್ಲಾವನ್ನು ಸಂದರ್ಶಿಸಿ, ಸ್ವಲ್ಪ
ವಿಶ್ರಮಿಸಿ ಕೌಲಾಲಂಪುರದ ಕಡೆಗೆ ಹೊರಟೆವು.


          ಸಿಟಿಯಲ್ಲಿ "ಜೈಪುರ್ ಮಹಲ್"ನಲ್ಲಿ ಶುದ್ಧ ಸಸ್ಯಹಾರಿ ಭೋಜನ ಮಾಡಿಕೊಂಡು, "ಪುದು ಪ್ಲಾಜಾ" ಸ್ಟಾರ್ ಹೋಟಲ್ಗೆ ಚೆಕ್ ಇನ್ ಅದೆವು.  ಆಗ ಸುಮಾರು 4 ಗಂಟೆ.  ವಿಶ್ರಾಂತಿ ಪಡೆದು ಸುಮಾರು
6 ಗಂಟೆಗೆ ಚೈನೀಸ್ ಮಂದಿರದ ಕಡೆಗೆ ಹೊದೆವು.  ಅದೊಂದು ಬೆಟ್ಟದ ಮೇಲೆ ಇರುವ, ಅತಿ ಸುದಂರವಾಗಿ
ಕೆತ್ತನೆ ಕೆಲಸಗಳಿಂದ ಕೊಡಿದ ಪಗೋಡ ಮಾದರಿಯ, ಮೂರು ಹೆಣ್ನು ದೇವತೆಗಳ ದೇವಸ್ಥಾನ.  ದಾರಿಯಲ್ಲಿ
ಮಾರಿಯಮ್ಮನ ದೇವಸ್ಥಾನ ನೋಡಿ, ಈ ದೇವಸ್ಥಾನ ಇರುವ ಬೆಟ್ಟ ತಲುಪಿದೆವು.  ದೇವಸ್ಥಾನ ಪ್ರವೇಶಿಸುವುದ
ಕ್ಕಿಂತ ಮುಂಚೆ, ಇಲ್ಲಿ ಇರುವ ಅಮೆಗಳ ಕೊಳವನ್ನು ನೋಡಿದೆವು.  ಅಮೆಗಳೆಂದರೆ ಚೀನಿಯರಿಗೆ ಬಹು ಪವಿತ್ರ
ವಾದ ಶುಭ ಸಂಕೇತ.  ಭಕ್ತರು ಇಲ್ಲಿ ಅಮೆಗಳನ್ನು ತಂದು ಬಿಡುತ್ತಾರೆ,  ಅಲ್ಲಿಯೇ ಒಂದು ಸಣ್ಣ ಜಲಪಾತ
ನಿರ್ಮಿಸಿದ್ದಾರೆ,  ಆ ದೇವಸ್ಥಾನ, ಮೂರು ಹೆಣ್ಣು ದೇವತೆಗಳ ಸುಂದರವಾದ ತಾಣ,  ಅವರ ನಂಬಿಕೆಯಂತೆ
ಅ ವಿಗ್ರಹಗಳು ಸಂಪತ್ತು, ವಿದ್ಯೆ, ಮತ್ತು ಕರುಣೆಯ ದೇವತೆಗಳು.  ಅಲ್ಲಿ ಹೋದ ಭಕ್ತರು ಅಗರ್ ಭತ್ತಿಯನ್ನು
ಹತ್ತಿಸಿ ಪಾರ್ಥನೆ ಮಾಡುತ್ತಾರೆ,  ನಾವು ಸಹ ದೇವಾಲಯದ ಮುಂದೆ ಇಟ್ಟಿದ್ದ ಅಗರ್ ಭತ್ತಿ ಹಾಗು ದೀಪ
ಗಳನ್ನು ಹತ್ತಿಸಿ, ಪ್ರಾರ್ಥಿಸಿದೆವು.  ಇನ್ನೊಂದು ವಿಶೇಷವೆಂದರೆ. ದೇವರ ಮುಂದೆ ಕಡ್ಡಿಗಳ ಸಮೂಹವನ್ನು
ಒಂದು ಸಿಲಿಂಡರ್ ಆಕಾರದ ಪಾತ್ರೆಯಲ್ಲಿ ಇಟ್ಟಿರುತ್ತಾರೆ.  ಭಕ್ತರು ಎಲ್ಲಾ  ಕಡ್ಡಿಯನ್ನು ಒಟ್ಟಿಗೆ ಹಿಡಿದು ಮೇಲಕ್ಕೆ
ಎತ್ತಿ ಕೆಳಗೆ ಬಿಟ್ಟಾಗ, ಯಾವ ಕಡ್ಡಿ ತಸು ಮೇಲೆ ಬರುತ್ತೆಯೋ, ಅದನ್ನು ತೆಗೆದು, ಅದರಲ್ಲಿರುವ ಸಂಖ್ಯೆ
ಓದಿ, ಅ ಸಂಖ್ಯೆಗೆ ತಕ್ಕಂತೆ, ಇಟ್ಟಿರುವ ಭವಿಷ್ಯದ ಚೀಟಿಯನ್ನು ಓದಿ ಕೊಳ್ಳ ಬಹುದು,  ಪ್ರಯಾಣಿಕರೆಲ್ಲಾರು
ತಮ್ಮ ತಮ್ಮ ಭವಿಷ್ಯದ ಚೀಟಿಯನ್ನು ಓದಿಕೊಂಡರು.  ದೇವಸ್ಥಾನ ಪ್ರದಕ್ಷಿಣೆಹಾಕಿ, ಕೆಳಗಿಳಿದು ರಾಶಿಗಳ ಪಾರ್ಕ
ಕಡೆ ನಡೆದೆವು.

         ಈ ಪಾರ್ಕನಲ್ಲಿ ನಮ್ಮಲ್ಲಿ ಮೀಷದಿಂದ ಮಿನಾದವರೆಗೆ ಇರುವ 12 ರಾಶಿಗಳಂತೆ ಬೇರೆ ಬೇರೆ
ಮೃಗಗಳ ಚಿಹ್ನೆಗಳಿವೆ.  ಅವರದು 12 ರಾಶಿಗಳಿವೆ.  ಅವರ ಹೊಸ ವರ್ಷ ಜನವರಿಯಲ್ಲಿ ಬರುವ ಪೊರ್ಣಿಮೆ
ಯಿಂದ ಆರಂಭವಾಗುತ್ತೆ.  ಒಂದೊಂದು ವರ್ಷ ಒಂದೊಂದು ರಾಶಿಯ ಮೃಗಗಳ ವರ್ಷವೆಂದು ಅಚರಿಸುತ್ತಾರೆ.
ರಾಶಿಗಳ ಚಿನ್ನೆಗಳು ಹೀಗಿವೆ. (1) ಡ್ರಾಗನ್ (2) ಹೋರಿ (3) ಕೋಳಿ (4) ಟಗರು (5) ಇಲಿ (6) ಕುದುರೆ
(7) ಹುಲಿ (8) ಕೋತಿ (9) ಹಾವು (10) ಹಂದಿ (11) ಮೊಲ (12) ಅಮೆ. ಇತ್ಯಾದಿ.

        ಅಲ್ಲಿಂದ ಬರುವಾಗ ದಾರಿಯಲ್ಲಿ ಮಲೇಶಿಯಾದ ಅತ್ಯಂತ ಎತ್ತರದ ಅವಳಿ ಗೋಪುರವನ್ನು
ನೋಡಿದೆವು.  ಇವುಗಳು ದೀಪಾಲಂಕರದಿಂದ ಕಂಗೋಳಿಸಿ, ಥಳಥಳಿಸುತ್ತಿತ್ತು.  ಇದು ಸಿಟಿ ಮದ್ಯೆಯಲ್ಲಿದೆ.
ಇದನ್ನು ಕೇವಲ 3 ವರ್ಷದಲ್ಲಿ 1994-97ರಲ್ಲಿ ಕಟ್ಟಿ ಮುಗಿಸಿದ್ದಾರೆ.  ಈ ಎರಡು ಗೋಪುರದಲ್ಲಿ 142
ಅಂತಸ್ತುಗಳು ಇವೆ.  ದುಬೈನಲ್ಲಿ ಇರುವ "ಬುರ್ಜು ಖಲೀಫಾ" ಕಟ್ಟುವ ಮುಂಚೆ,ಪ್ರಪಂಚದ ಅತ್ಯಂತ ಎತ್ತರದ
ಅವಳಿ ಗೋಪುರವಾಗಿತ್ತು.  ಇದರ ಸುತ್ತಾ ಮುತ್ತಾಲು ಇರುವ ಬೇರೆ ಬೇರೆ ಗಗನ ಚುಂಬಿ ಕಟ್ಟಡಗಳನ್ನು
ನೋಡಿಕೊಂಡು ವಾಪಸ್ಸು ಬರುವಾಗ, ಭಾರತೀಯ ಭೋಜನ ಮಾಡಿಕೊಂಡು ಹೋಟಲಿಗೆ ಬಂದು ತಂಗಿದೆವು.

         ಈ ದಿನ 9ನೇ ತಾರೀಖು, ಬೆಳಗ್ಗೆ ತಿಂಡಿ ತಿಂದು, ನಮ್ಮ ಹೋಟೆಲ್ "ಪುದು ಫ್ಲಾಸಃ"ದ ಮುಂದೆ ಇರುವ ಹೊಸದಾಗಿ ನಿರ್ಮಿಸಿದ ಗಣೇಷ ಗುಡಿಗೆ ಹೋಗಿ ಬಂದೆವು.  ದಕ್ಷಿಣ ಭಾರತ ಗುಡಿಯಂತೆ ಕಟ್ಟಿರುತ್ತಾರೆ.
ಸುಂದರವಾಗಿತ್ತು. 9 ಗಂಟೆಗೆ ಕೌಲಾಲಂಪುರದ ಸಿಟಿ ಸಿಯಿಂಗ್ಗೆ ಹೊರೆಟೆವು.

         ಮೊದಲು ನಾವು "ಇಸ್ತಾನ ನಗರ" ಕಡೆಗೆ ಬಂದೆವು.  ಇದು ಇಲ್ಲಿನ ಆಳುವ ರಾಜನ ಅರಮನೆ.
2 ಅಂತಸ್ತು.  ಬಿಳಿಯ ಸುಂದರವಾದ ಅರಮನೆ.  ಮಾರ್ಗಮದ್ಯದಲ್ಲಿ. ನಮ್ಮ ಟೂರ್ ಗೈಡ್ ರಾಜನ್‍ನವರು
ಮಲೇಷಿಯಾದ ಬಗ್ಗೆ, ಅಲ್ಲಿಯ ರಾಜಕೀಯದ ಬಗ್ಗೆ ವಿವರವಾಗಿ ಮಾಹಿತಿ ಕೊಟ್ಟರು.  ಮಲೇಷಿಯಾದಲ್ಲಿ 13
ರಾಜ್ಯಗಳದ್ದು, 9 ರಾಜ್ಯದಲ್ಲಿ ಸುಲ್ತಾನರು ಅಳ್ಲಿಕೆ ನಡೆಸುತ್ತಾರೆ.  ಈ 9 ಸುಲ್ತಾನರ ಪೈಕಿ ಒಬ್ಬರು 5 ವರ್ಷಕ್ಕೆ
ಒಮ್ಮೆ ಚುನಾಯಿತರಾಗಿ ಬಾರಿ ಬಾರಿಗೆ ಒಬ್ಬಬ್ಬರು ರಾಜರಾಗುತ್ತಾರೆ.  ಈ ರೀತಿ ಆಯ್ಕೆಯಾದ ಸುಲ್ತಾನರು
"ಇಸ್ತಾನ ನಗರ" ಅರಮನೆಯಲ್ಲಿ 5 ವರ್ಷಕಾಲ ವಾಸಿಸುತ್ತಾರೆ.  ಮಲೇಷಿಯಾದ ಜನಸಂಖೈ ಸುಮಾರು 7 ಕೊಟಿ.
ಇದರಲ್ಲಿ 56% ಮುಸ್ಲಿಮ್, 27% ಚೀನಿಯರು, 7% ಹಿಂದುಗಳು ಇದ್ದಾರೆ.  ಹೀಗಾಗಿ ಇದು ಬಹು ಜಾತಿಯ
ದೇಶವಾಗಿದೆ.  1957 ಆಗಷ್ಟ್ 31 ರಂದು ಬ್ರಿಟಿಷರಿಂದ ಸ್ಸಾತಂತ್ರ ಪಡೆಯಿತು.  ಇಲ್ಲಿರುವ ಜನರೆಲ್ಲಾರು
ಬಹುವಾಗಿ ಹೊರ ದೇಶದಿಂದ ಬಂದು ನೆಲೆಸಿದವರು.  ಅಂದರೆ ಭಾರತ, ಇಂಡೋನೇಷಿಯ, ತೈಲಾಂಡ್,ಚೈನಾ,
ಮುಂತಾದ ಪಕ್ಕದ ದೇಶಗಳಿಂದ ಬಂದವರು.  ಇಲ್ಲಯ ಬುಡಕಟ್ಟು ಜಾನಾಂಗದವರು ಇನ್ನೊಂದು ಕಾಡಿನಲ್ಲಿ
ವಾಸಿಸುತ್ತಿರುತ್ತಾರೆ.  ಅವರಿಗೆ ನಗರ ಪ್ರದೇಶಗಳ ಸಂಪರ್ಕವೇ ಇಲ್ಲ.  ಇಲ್ಲಿ ಅಡಳಿತ ವ್ಯವಸ್ಥೆ ಪ್ರಜಾಪ್ರಭುತ್ವ
ವಾಗಿದ್ದು, ಪ್ರಧಾನ ಮಂತ್ರಿಯನ್ನು ಜನರು ಮತದಾನದಿಂದ, 5 ವರ್ಷಕ್ಕೆ ಒಮ್ಮೆ ಆಯ್ದುಕೊಳ್ಳುತ್ತಾರೆ.

         ಮಲೇಶಿಯಾದ ರಾಜನ ಅರಮನೆ "ಇಸ್ತಾನ ನಗರ" ಬಹಳ ಸುಂದರವಾಗಿದ್ದು, ಅತ್ಯಂತ ಹಸಿರಾಗಿ
ರುವ ಪರಿಸರದಲ್ಲಿದೆ.  ಸುತ್ತಾಲು ತೋಟಗಳು, ಕಾರಂಜಿಗಳು ಇವೆ.  ಒಳಕ್ಕೆ ಯಾರಿಗೂ ಪ್ರವೇಶವಿಲ್ಲ.  ಮುಖ್ಯ
ದ್ವಾರದ ಬಳಿ ಅಶ್ವರೂಢ ಕಾವಲುಗಾರರು ಸದಾ ಇರುತ್ತಾರೆ.  ಸುತ್ತಾಲಿನ ಉದ್ಯಾನವನ ಹಸಿರಾಗಿ, ಶುಚಿಯಾಗಿ ಇದೆ.  ಅಲ್ಲಂದ ನಾವು ಕೌಲಾಲಂಪುರ ನಗರ ಪ್ರದಕ್ಷಿಣೆಗೆ ಹೊರಟು, ಹಿಂದಿನ ದಿನ ರಾತ್ರೆ, ದೀಪಾಲಂಕರದಿಂದ
ಸಜ್ಜುಗೊಂಡಿದ್ದ ಅವಳಿ ಗೋಪುರವನ್ನು ಹಗಲಿನಲ್ಲಿ ನೋಡಲು ಹೊದೆವು.  ಅದರೆ ನೋಡಲು 6 ಅಂತಸ್ತುವರೆಗೆ
ಮಾತ್ರ ಪ್ರವೇಶ.  ಅದರಿಂದಾಚೆಗೆ ಪ್ರವಾಸಿಗರೆಗೆ ಪ್ರವೇಶವಿಲ್ಲ.  ಅಲ್ಲಿ ಸರ್ಕಾರದ ಹಾಗು ಮಲೇಶಿಯಾದ
ಪೆಟ್ರೋಲಿಯಂ ಖಾತೆಯ ಕಛೇರಿಗಳು ಇವೆ.  6 ಅಂತಸ್ತು ಬರಿ ಮಾಲುಗಳು.  ಅಲ್ಲಿ ಒಂದು ಗಂಟೆಗಳ ಕಾಲ
ಮಾಲು ಸುತ್ತಿದೆವು.

          ಅಲ್ಲಂದ ನಾವು ಮಡ್ರೆಕ ಸ್ಕ್ವೇರ್ ಹಾಗೂ ಇಂಡಿಪೆಂಡೆಂಟ್ ಸ್ಕ್ವೇರ್ ಬಳಿ ಬಂದೆವು.  ಇಲ್ಲಿ ನಾವು
ಅತ್ಯಂತ ಎತ್ತರದ " ಧ್ವಜ ಸ್ಥಂಭ"ವನ್ನು ವೀಕ್ಷಿಸಿದೆವು.  ಧ್ವಜಾರೋಹಣ ಸ್ಥಳ.  ರೈಲ್ವೆ ಪ್ರಮುಖಾಲಯಗಳನ್ನು
ನೋಡಿದೆವು.  ಅನಂತರ ಸಿಟಿ ಸೆಂಟರ್ನಲ್ಲಿ ಭೋಜನ ಮಾಡಿ ನಂತರ "ಚಾಕೋ ಬಾಟಿಕ್", ಚಾಕಲೇಟ್ ತಯಾರಿಕ
ಘಟಕಕ್ಕೆ ಬಂದೆವು.  ವಿಧ ವಿಧ ರೀತಿಯ ಚಾಕಲೇಟ್ ತಯಾರಿಕೆಯ ಹಂತವನ್ನು ನೋಡಿಕೊಂಡು ಬರುವಾಗ
ರುಚಿ ನೋಡಲು ಕೊಡುತ್ತಿದ್ದರು.  ವಿವಿಧ ರೀತಿಯ ಸ್ವಾದದ, ಎಲ್ಲಾ ತರಹದ ಹಣ್ಣಿನ, ವಿಶೇಷ ಬಾಳೆಹಣ್ಣಿನ
ಹಾಗೂ ತೆಂಗಿನದೂ ಇತ್ತು.  ಬೇಕದವರು ವ್ಯಾಪಾರಮಾಡಿದರು.

          ಅಲ್ಲಿಂದ ನಾವು "ಡ್ಯೂಟಿ ಫ್ರೀ" ಶಾಪ್ "ಜಿನೀವ ವಾಚ್ ಶೋ ರೂಮ್"ಗೆ ಬಂದೆವು.  ಲಕ್ಷಾಂತರ
ರೂಪಾಯಿಯ ವಾಚ್ ಗಳು, ಆಭರಣಗಳು, ತಂಪು ಕನ್ನಡಕಗಳು, ಬ್ಯಾಗುಗಳು, ಉಡುಪುಗಳು, ಇತ್ಯಾದಿಗಳು
ಇದ್ದವು.  ಕೆಲವರು ಕೊಂಡರು.  ಅನಂತರ ನಾವುಗಳು "ಪುದು ಫ್ಲಾಸ" ಹೋಟೆಲ್ ಗೆ 4 ಗಂಟೆಗೆ ಬಂದೆವು.
ನಂತರ ಸಂಪೂರ್ಣ ವಿಶ್ರಾಂತಿ,  ರಾತ್ರೆ ಭೋಜನಕ್ಕೆ "ಜೈಪುರ್ ಭವನ್"ಗೆ ಹೋಗಿ ಮಾಡಿ ಕೊಂಡು ಬಂದೆವು.

          ಈ ದಿನ 10ನೇ ಡಿಸೆಂಬರ್ 2015, ನಮ್ಮ ಮಲೇಶಿಯದ ಪ್ರವಾಸದ ಕೊನೆಯ ದಿನ.  ಇಲ್ಲಿಂದ
ಸಿಂಗಪೂರ್ಗೆ ಬಸ್ಸು ಮೂಲಕ ಪ್ರಯಾಣ ಮಾಡುವೆವು.  ಪ್ರಾತಃ 6 ಗಂಟೆಗೆ, ಎಲ್ಲಾರು ಲಗೇಜ್ ಸಮೇತ ಸಜ್ಜಾಗಿ
7 ಗಂಟೆಗೆ ಪುದು ಪ್ಲಾಜದಲ್ಲಿ ತಿಂಡಿ ತಿಂದು, ಎಲ್ಲಾ ಲಗೇಜುಗಳನ್ನು, ಬಸ್ಸಿನಲ್ಲಿ ಇರಿಸಿ, ಸಿಂಗಪೂರ್ ಕಡೆಗೆ
ಪ್ರಯಾಣ ಬೆಳೆಸಿದೆವು.  400 ಕಿ.ಮಿ. ದೂರ.  ದಾರಿಯಲ್ಲಿ 11 ಗಂಟೆಗೆ ಟೀ ಗಾಗಿ ಇಳಿದೆವು.  ಟೀ ಬಹಳ
ರುಚಿಕರವಾಗಿತ್ತು.  ಮಾರ್ಗ ಸವಿಯಲು ಎಲ್ಲಾರು ವಿವಿಧ ಚಟುವಟಿಕೆಯಲ್ಲಿ, ಅಂದರೆ ದೇವರ ನಾಮ ಸ್ಮರಣೆ,
ಭಾವಗೀತೆ, ಅಂತಕ್ಷರಿ, ಕಾವ್ಯವಾಚನ, ನಗೆಹನಿ, ಇತ್ಯಾದಿಗಳನ್ನು, ನಡೆಸುತ್ತಾ ಪ್ರಯಾಣ ಸಾಗಿತ್ತು.  ಮಾರ್ಗಮಧ್ಯೆ
ದಲ್ಲಿ, ದಕ್ಷಿಣ ಭಾರತದ ಭೋಜನ ಪ್ಯಾಕೇಟ್ ಲಂಚ್ ನ್ನು, ತೆಗೆದುಕೊಂಡು, ಇನ್ನೊಂದು ರೆಸ್ಟೋರೆಂಟ್ ನಲ್ಲಿ
ಊಟಮಾಡಿ ಪ್ರಯಾಣ ಮುಂದುವರೆಸಿದೆವು.  ಮಲೇಶಿಯಾ ಸಿಂಗಪೂರ್ ಸೀಮಾ ರೇಖೆಯನ್ನು, 2 ಗಂಟೆ 15
ನಿಮಿಷಕ್ಕೆ ತಲುಪಿದೆವು.  ಇಲ್ಲಿ ವಾಹನಗಳ ದಟ್ಟಣೆಯೋ ದಟ್ಟಣೆ. ಅಲ್ಲಿ ನಮ್ಮ ಲಗೇಜ್ ತಪಾಸಣೆಯಾಗಿ
ತೆಗೆದುಕೊಂಡು, ಇಮಿಗ್ರೇಶನ್ ಕೌಂಟರ್ ಕಡೆಗೆ ನಡೆದೆವು,  ಅಲ್ಲಿಯೂ ಬಹಳ ದೊಡ್ಡ "ಕ್ಯೂ"ನಲ್ಲಿ ಒಂದುವರೆ
ಗಂಟೆಗಳ ಕಾಲ ನಿಂತು ತಪಾಸಣೆ ಮಾಡಿಸಿಕೊಂಡು, ಸಿಂಗಪೂರ್ ಪಾಸ್ ಪೊರ್ಟ್ನಲ್ಲಿ ಪಡೆದುಕೊಂಡು ಸಾಗಿದೆವು.
ಸಿಂಗಪೂರ್ ಪ್ರವೇಸಿಸುತ್ತಿದ್ದಂತೆ ಕಪ್ಪನೆ ಕಾರ್ಮೋಡಗಳು, ನಂತರ ಕುಂಭವೃಷ್ಠಿ ಮಳೆಯಾಯಿತು.  ಮಳೆ
ನಮ್ಮನ್ನು ಸ್ವಾಗತಿಸಿ, ಸ್ವಲ್ಪ ಸಮಯದಲ್ಲಿ ನಿಂತಿತು.  ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಉದ್ಯಾನವನಗಳು ಬಹು
ಅಚ್ಚುಕಟ್ಟಾಗಿದ್ದವು.  ಶುಚಿತ್ವವನ್ನು ಕಾಪಡಿಕೊಂಡಿದ್ದಾರೆ.ಸಿಂಗಾಪುರ್ ಸಿಟಿಯ ಮದ್ಯೆ ಗಗನ ಚುಂಬಿ ಹಾಗು ಬಹು
ವಿನ್ಯಾಸಗಳ ಕಟ್ಟಡಗಳನ್ನು ವೀಕ್ಷಿಸುತ್ತಾ ಸಿಟಿ ಮದ್ಯೆದಲ್ಲಿ ಇರುವ " ಗ್ರಾಂಡ್ ಇಂಪೀರಿಯಲ್" ಹೋಟೆಲ್ ನನ್ನು
ಸುಮಾರು 5ವರೆಗೆ ತಲುಪಿದೆವು.


          ಅಲ್ಲಿ ನಮ್ಮ ನಮ್ಮ ಕೊಠಡಿಗಳಿಗೆ ತೆರಳಿ ಫ್ರೆಶ್ ಅಪ್ ಅಗಿ ಸುಮಾರು 6ವರೆಗೆ ಲೌಂಜ್ ಗೆ
ಬಂದೆವು.  ಈ ಹೊಟಲಿನಲ್ಲಿ ಒಂದು ಕಟ್ಟಡ ದಿಂದ ಇನೊಂದು ಕಟ್ಟಡಕ್ಕೆ ಮಧ್ಯೆ ಮಾಡಿರುವ ಸೇತುವೆಯನ್ನು
ದಾಟಿ, ಲಿಫ್ಟ್ ಮೂಲಕ ಹೊಗಬೇಕಿತ್ತು.  ಸುಂದರವಾದ, ಅಚ್ಚುಕಟ್ಟಾದ ಐಶರಾಮಿ ಹೊಟೇಲ್.  ಹೊಟೇಲ್
ಮುಂಭಾಗದಲ್ಲಿ ಮಹಾಲಕ್ಷ್ಮಿ ದೇವಸ್ಥಾನ.  ಸಂಜೆ 6ವರೆಗೆ ಹೊರಟು, ಸಿಂಗಪೂರ್ ಸಿಟಿ ನೋಡುತ್ತಾ, ಸಿಂಗಪೂರ್
ನದಿಯಲ್ಲಿ "ಕ್ರೂಯಿಸ್" ಗಾಗಿ ನದಿ ತಲುಪಿದೆವು.  ಇದಕ್ಕೆ ಮೊದಲೆ ಟೀಕೆಟ್ ಕೊಂಡು ಕಾದಿರಿಸಲಾಗಿತು.
ಅಷ್ಟೋತ್ತಿಗೆ ಸುತ್ತಲೂ ನಗರವೆಲ್ಲಾ, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೋಳಿಸುತ್ತಿತ್ತು.  ನದಿಯಲ್ಲಿ
ಸುಮಾರು 1ವರೆ ಗಂಟೆಗಳ ಕಾಲ ದೋಣಿ ವಿಹಾರಮಾಡುತ್ತಾ, ನಗರವನ್ನು ವೀಕ್ಷಿಸುತ್ತಾ, ಅನಂದಿಸುತ್ತಾ ವಿಹರಿಸಿದೆವು.  ದೋಣಿಯಲ್ಲಿ 40 ನಿಮಿಷಗಳ ಕಾಲ ಇಂಗ್ಲೀಷ್ ನಲ್ಲಿ ಅಡೀಯೋ ಹಾಗು ದೃಶ್ಯದ ವೀಕ್ಷಣಾ
ವಿವರಗಳು ಇತ್ತು.  ಎಲ್ಲೆಲ್ಲೂ ನೋಡಿದರೂ ಬಣ್ಣ ಬಣ್ಣದ ವಿದ್ಯುತ್ ದೀಪಗಳ ವಿನ್ಯಾಸ, ನಯನ ಮನೋಹರ
ವಾಗಿತ್ತು.  ನದಿಯಲ್ಲಿ ಅದರ ಪ್ರತಿಬಿಂಬ ಕಾಣುತಿತ್ತು.  ಸುತ್ತಮುತ್ತಲೂ ಇರುವ ಹೋಟೆಲ್ ನಲ್ಲಿ ಕ್ಯಾಂಡಲ್
ಲೈಟ್ ಪಾರ್ಟಿ ಅಗುತಿತ್ತು.  ಅನಂತರ ಹೋಟೆಲ್ ಸಮೀಪದಲ್ಲಿ, "ಮುಸ್ತಾಫ ಸೆಂಟರ್" ನಲ್ಲಿ, (ಲಿಟಲ್ ಇಂಡಿಯ)
ಹಣವನ್ನು ಸಿಂಗಪೂರ್ ಡಾಲರ್ ಗೆ ವಿನಿಮಯ ಮಾಡಿಕೊಂಡು, ಅಲ್ಲಿಯೇ ಎದುರುಗಡೆ ಇದ್ದ "ಬಾಲಾಜಿ ಭವನ್"
ನಲ್ಲ ದಕ್ಷಿಣ ಭಾರತೀಯ ರುಚಿಕರ ಊಟ ಮುಗಿಸಿಕೊಂಡು, ಕಾಲ್ ನಡಿಗೆಯಲ್ಲೆ ಹೋಟೆಲ್ ಗೆ ಬಂದು, ದೋಣಿ
ವಿಹಾರದ ಗುಂಗಿನಲ್ಲಿ ಮಲಗಿದೆವು.

          ಈ ದಿನ 11ನೇ ಡಿಸೆಂಬರ್ 2015, ಬೆಳಗ್ಗಿನ ಜಾವ 5ಕ್ಕೆ ಎದ್ದು, ಉತ್ತಮವಾದ ಕಾಫಿ
ತಯಾರಿಸಿಕೊಂಡು, ಕುಡಿದು, ಸ್ನಾನ್ನಾದಿಗಳನ್ನು ಮುಗಿಸಿಕೊಂಡು, 7 ಗಂಟೆ ಹೊತ್ತಿಗೆ ಹೋಟೆಲ್ ನಲ್ಲಿ
ದಕ್ಷಿಣಭಾರತೀಯ ಹಾಗು ಕಾನ್ಟಿನಂಟಲ್ ಬೇಕ್ರ್ ಫಾಸ್ಟ್ ಮುಗಿಸಿಕೊಂಡು, ಹೋಟೆಲ್ ಲೌಂಜ್ ಗೆ ಬಂದೆವು.
ಇವತ್ತಿನ ಹೆಕ್ಟಿಕ್ ಶೆಡ್ಯೂಲ್ ಪ್ರಕಾರ "ಝೋರನ್ ಬರ್ಡ್"ಪಾರ್ಕಗೆ ಹೊರೆಟೆವು.  ಮೊದಲಿಗೆ ಅಲ್ಲಿನ ಅರ್ಕಷಣೀಯ
ಅಕ್ವೇರಿಯಂ ನಲ್ಲಿ ಅನೇಕ ತರಹದ ಜಲಚರವನ್ನು ನೋಡಿದೆವು.  ಅಲ್ಲಿಯೇ ಅಂಡರ್ ಗ್ರೌಂಡ್ ನಲ್ಲಿ, ನಮ್ಮ
ಸುತ್ತಲು ನೀರು ಇರುವ ಗಾಜಿನ ಪಾರದರ್ಶಕ ದಾರಿಯಲ್ಲಿ ನಡೆಯುತ್ತಾ, ಸ್ವತಂತ್ರವಾಗಿ ವಿಹರಿಸುತ್ತಿರುವ ಶಾರ್ಕ
ಗಳು, ಮೀನುಗಳು, ಅಮೆಗಳು, ಸ್ಟಾರ್ ಮೀನುಗಳು, ಬಣ್ಣ ಬಣ್ನದ ವಿವಿಧ ರೀತಿಯ ಮೀನುಗಳು ನಮ್ಮ
ಸುತ್ತಮುತ್ತಲೂ, ತಲೆ ಎತ್ತಿದರೆ ಮೇಲೆ ಎಲ್ಲಾಕಡೆ ವಿಹರಿಸಿತ್ತಿರುವ ಜಲಚರಗಳನ್ನು ವೀಕ್ಷಿಸಿ ಮುದದಿಂದ
ಹೊರೆಗೆ ಬಂದೆವು.

         ನಂತರ ಅಲ್ಲಿನ "ಝೋರರ್ನ ಪಾರ್ಕ"ಗೆ ಬಂದೆವು.  ಈ ಪಕ್ಷಿಧಾಮು ಅತ್ಯಂತ ವಿಸ್ತಾರವಾಗಿರುವುದ
ರಿಂದ, ಅಲ್ಲಿನ ಒಳ ಓಡಾಟಕ್ಕೆ ವಿಕ್ಷಣಾ ಟ್ರಾಲಿಯನ್ನು ಎರ್ಪಾಡಿಸಿರುತ್ತಾರೆ.  ಅದರಲ್ಲಿ ಕುಳಿತು ಸುಮಾರು 2 ಗಂಟೆ
ಗಳ ಕಾಲ ಸುತ್ತಾಲು ಸಂಚರಿಸಿ, ಮುಕ್ತವಾಗಿ ವಿಹರಿಸುತ್ತಿರುವ ಅನೇಕ ಜಾತಿಯ ಪಕ್ಷಿ ಸಂಕುಲಗಳನ್ನು, ನೋಡಿ
ಅನಂದಿಸಿದೆವು.  ಈ ಪಕ್ಷಿಧಾಮವು ಒಂದು ದ್ವೀಪವಾಗಿದ್ದು. ಪರ್ಯಟನೆಗೆ ಬಹಳ ಯೋಗ್ಯ ತಾಣವಾಗಿದೆ.
ಇದರಂತೆ ಹತ್ತಿರ ಹತ್ತಿರ ಅನೇಕ ದ್ವೀಪಗಳು ಇವೆ. ಕೆಲವುದರಲ್ಲಿ ಮಾತ್ರ ಜನ ಜೀವನ ಇದೆ.  ಉಳಿದ ದ್ವೀಪ
ಗಳು ದಟ್ಟ ಕಾಡುಗಳಿಂದ ತುಂಬಿದೆ.  ಕರಿ, ಬಿಳಿ, ಹಾಗು ಪಿಂಕ್ ಹಂಸಗಳು, ಬಿಳಿ ಕ್ಕೊಕ್ಕರೆಗಳು. ತರ ತರಹದ
ಪಕ್ಷಿಗಳು, ಹಸಿರು, ಬಿಳಿ, ಕೆಂಪು, ರಂಗು ರಂಗಿನ ಗಿಳಿಗಳು, ಮಾತನಾಡು ಗಿಳಿಗಳು, ಇನ್ನು ಅನೇಕ ಪಕ್ಷಿಗಳನ್ನು
ವೀಕ್ಷಿಸಿದೆವು.  ಟ್ರಾಲಿಯಲ್ಲಿ ಸಂಚರಿಸುತ್ತಾ, ಪಕ್ಷಿ ಸಂಕುಲ ಇರುವ ಕಡೆಗೆ ಬಂದು, ಬಹಳ ಹತ್ತಿರದಿಂದ ಎಲ್ಲಾವನ್ನು ನೋಡಿದೆವು.  ಬಹಖ ದೊಡ್ಡ ವಿಶೇಷ ಹಕ್ಕಿಗಳು ಇದ್ದವು.

          ಪಕ್ಷಿಧಾಮದ ನಂತರ ಅಲ್ಲೆ ಇರುವ "ಸಂತೋಷ"ನಲ್ಲಿ ಭಾರತೀಯ ಭೋಜನ ವಾಯಿತು.
ಊಟ ಬಹಳ ರಸವತ್ತಾಗಿತ್ತು.  ಮೊದಲೆ ಕಾದಿರಿಸಲಾಗಿತ್ತು.  ಕಿಕ್ಕಿರಿದ ಜನರಿದ್ದರು.  ಬಹಳ ದೊಡ್ಡದಾದ
ಜಾಗದಲ್ಲಿ, ಕೃತಕ ಹೂವು, ಹಣ್ಣುಗಳಿಂದ ತುಂಬಿದ, ಮರಗಳ ಕೆಳಗೆ, ಟೇಬಲ್ಲ್ ಅರೆಂಜ್ ಮಾಡಿದ್ದರು.  ಬಹಳ
ಚೆನ್ನಾಗಿತ್ತು.  ಊಟ ನೋಟ ಎರಡ

          ಊಟದ ನಂತರ "ಸಂತೋಷ" ದ್ವೀಪದ ಕಡೆಗೆ ಹೊರೆಟೆವು.  ಸಿಂಗಾಪುರದ ವಿಶೇಷ ಲಾಂಛನದ
ಕಡೆಗೆ ಹೊರೆಟೆವು.  ಅಲ್ಲಗೆ ಹೋಗುವಾಗ ದ್ವೀಪದ ದಟ್ಟ ಅರಣ್ಯದಲ್ಲಿ, ಪ್ರಕೃತಿಯನ್ನು ಸವಿಯುತ್ತಾ ಅನಂದಿ
ಸಿದೆವು.  ಅಲ್ಲಿರುವ ಲಾಂಛನ "ಸಿಂಹ".  ಸಿಂಗಾಪುರದ ನಿಜವಾದ ಹೆಸರು "ಸಿಂಹಪುರ". ಅತಿ ಎತ್ತರದ ಸ್ಥಳ
ದಲ್ಲಿ ಕಟ್ಟಿರುವ ಸಿಂಗಾಪುರ ಲಾಂಛನದ ಸಿಂಹವಿದೆ.  ಈ ಲಾಂಛನದ ತುದಿಗೆ ಏರುವ ಮುನ್ನ ಸಿಂಗಾಪುರದ
ಕಥೆಯ ವಿಡಿಯೋ ಶೋ ಅಯಿತು.  ಅಲ್ಲಿನ ರಾಜನಿಗೆ ಸಿಂಹವೂ ಅಶ್ರಯ ನೀಡಿದ್ದರಿಂದ, "ಸಿಂಹಾಪುರ" ವಾಯಿತು.
ವೀಡಿಯೂ ಶೋ ನಂತರ, ಲಾಂಛನದ ಮೇಲಕ್ಕೆ ಹೊಗುವ ಮುನ್ನ, ಪ್ರತಿಯೊಬ್ಬರು ಸಿಂಹದ ಬಾಯಿಯಿಂದ
ಒಂದೊಂದು ಬಂಗಾರ ಲೇಪಿತ ಅಗಲವಾದ ನಾಣ್ಯವನ್ನು ಸ್ಮಾರಕವಾಗಿ ಪಡೆದೆವು.  ನಂತರ ಮೆಟ್ಟಿಲು ಏರಿ
ಲಾಂಛನದ ತ್ತುತ್ತತುದಿಗೆ ತಲುಪಿ,ಸಿಂಗಾಪುರ ಸಮುದ್ರ ದ್ವೀಪಗಳ ವಿಹಂಗಮ ನೋಟವನ್ನು ಕಂಡೆವು. ಅಲ್ಲಿ
ಫೋಟೋ ಸೆಸಷ್ ಅಯಿತು.  ನಂತರ ಕೆಳಗಿಳಿದು ಡಾಲ್ಫಿನ್ ಹಾಗು ಸಮುದ್ರ ಸಿಂಹಗಳ ಶೋ ನೋಡಲು
ಹೊದೆವು.  ಇಲ್ಲಿ ಭಾರತೀಯ ಪ್ರವಾಸಿಗಳೇ ಜಾಸ್ತಿಇದ್ದರು,  ಶೋ ಬಳಿ ಉತ್ತಮ ಕಾಫಿ/ಟೀ,ಸಮೋಸಗಳು
ಕಾಂಪ್ಲಿಮೆಂಟರಿಯಾಗಿ  ಸೇವಿಸಿದೆವು.

          ಊಟಕ್ಕೆ ಮುಂಚೆ ನಮ್ಮ ಕೆಲವು ಸಹ ಪ್ರಯಾಣಿಕರು "ಸಿಂಗಾಪುರ ಫ್ಲಯ್ಯರ್"ಗಾಗಿ ಹೋಗಿದ್ದರು.
ನಾವುಗಳು ಅಲ್ಲೇ ಕುಳಿತು ಹರಟೆ ಹೊಡೆಯುತ್ತ ವೀಕ್ಷಿಸುತ್ತಿದ್ದೆವು.  ಇದು ಪ್ರಪಂಚದಲ್ಲೆ ಅತ್ಯಂತ ದೊಡ್ಡದಾದ
ಫ್ಲಯರ್.  146 ಮಿ. ಎತ್ತರದ ಜೆನ್ಟ್ ವೀಲ್ ಇದರಲ್ಲಿ 28 ಕ್ಯಾಬಿನ್ ಇವೆ.  ಪ್ರತಿಯೊಂದರಲ್ಲಿ 28 ಜನ
ಕೊರ ಬಹುದು.  28 ಇವರ ಶುಭ ಸಂಖ್ಯೆ.  ಇದು ನಿಧಾನವಾಗಿ ಸುತ್ತುತ್ತಾ ಇಡೀ ಸಿಂಗಾಪುರ ಹಾಗು ಸುತ್ತ
ಮುತ್ತಾಲಿನ ದೃಶ್ಯಗಳನ್ನು ವೀಕ್ಷಣೆ ಮಾಡಲು ಅನುವು ಮಾಡಿಕೊಡುತ್ತೆ.  ನಂತರ ಅತೀ ಎತ್ತರದ ಮನೋ
ರೈಲ್ ಪ್ರಯಾಣ ಮಾಡಿ, ಕೊನೆಗೆ ದಿನದ ಅತ್ಯಂತ ಅರ್ಕಷೀಯವಾದ "ಲೇಸರ್ ಶೋ"ಗೆ ಸಮುದ್ರದ ತಟದಲ್ಲಿ
ಏರ್ಪಾಡಿಸಿದ್ದ ಕಡೆಗೆ ಬಂದು ಕುಳಿತೆವು.  ಅದೊಂದು ಅದ್ಧುತ ಪ್ರದರ್ಶನ.  ಸಮುದ್ರದ ಹಿನ್ನೆಲೆಯಲ್ಲಿ,ಮಾನವನ
ಚರಿತ್ರೆಯ ಕಾಲಘಟ್ಟಗಳನ್ನು ಬಿಂಬಿಸುವ. ಅತಿರಂಜಿತವಾದ, ಹೊಲಿಕೆಯಿಲ್ಲದ ಪ್ರದರ್ಶನ.  ಪ್ರಾರಂಭದಲ್ಲಿ, ಒಂದು
ಹುಡುಗ ಹುಡುಗಿಯರು ಸ್ವಾಭಾವಿಕವಾಗಿ, ಸಮುದ್ರ ದಡದಿಂದ ಅಟ್ಟಸಿಕೊಂಡು ಹೋಗುವಂತೆ ತೋರಿಸಿ, ನಂತರ
ಕಥೆಯಲ್ಲಿ ಸಮ್ಮಿಲನ ವಾಗುವುದು ಸುಂದರವಾಗಿದೆ.  ಕೊನೆಯಲ್ಲೂ ಸಹ ಲೇಸರ್ ಶೋ ನಿಂದ ಇಳಿದು
ಬಂದ್ದಂತೆ ಅವರಿಬ್ಬರು ಬರುವುದು ಬಹಳ ಚೆನ್ನಾಗಿತ್ತು.  ಇದು ಪ್ರತಿ ನಿತ್ಯವೂ ನಡೆಯುವ ಒಂದು ಪ್ರದರ್ಶನ.
ಮನಮೋಹಕವಗಿ, ದಂಗುಪಡಿಸುವ, ಬೇರೇ ಲೋಕಕ್ಕೆ ಕರೆ ದೊಯ್ಯವ ಪ್ರದರ್ಶನ.  ಕತ್ತಾಲಾಗುತ್ತಿದ್ದಂತೆ
ಸುತ್ತಾಲು ರಾತ್ರೆಯ ಬ್ಯಾಕ್ ಗ್ರೌಂಡ್ ನಲ್ಲಿ ಬೆಳಕಿನ ಚೆಲ್ಲಾಟ ಬಹಳ ಚೆನ್ನಾಗಿತ್ತು.  "ವಿಂಗ್ಸ್ ಅಫ್ ದಿ ಟೈಂಮ್ಸ್"
ಅಂತ ಹೆಸರಿಸಿದ್ದರು. 8ವರೆ ಹೊತ್ತಿಗೆ ಕೇಬಲ್ ಕಾರ್ ರೈಡ್ ಗಾಗಿ ಸ್ಟೇಷನ್ ಗೆ ಬಂದೆವು.  "ಕೇಬಲ್ ಕಾರ್
ನೆಟ್ ವರ್ಕ"ಬಹಳ ಎತ್ತರದಲ್ಲಿ ಇದೆ.  ಸಂತೋಷ ದ್ವೀಪದಿಂದ ಸಿಂಗಾಪುರ ಸಿಟಿಗೆ ಕೇಬಲ್ ಕಾರ್ ನಿಂದ ಪ್ರಯಾಣ.  ಎತ್ತರದ ಆಕಾಶದಲ್ಲಿ ಚಲಿಸುತ್ತಿರುವಾಗ, ಕೆಳಗಡೆ ಸಮುದ್ರವನ್ನು, ನದಿಯನ್ನು, ಗಾರ್ಡನ್ ನನ್ನು,
ಇತರೆ ಕಟ್ಟಡವನ್ನು, ಹಕ್ಕಿಯಂತೆ ಮೇಲೆ ಹಾರಿ ನೋಡಿದಂತೆ ವೀಕ್ಷಿಸಿದೆವು.  ನಿಧಾನವಾಗಿ ಚಲಿಸುವ ಕೇಬಲ್
ಕಾರು ಮಾರ್ಗ ಮಧ್ಯೆಯಲ್ಲಿ ಮತ್ತೊಂದು ಸ್ಟೇಷನ್ ನಲ್ಲಿ ಕೆಲಕಾಲ ನಿಂತಿತ್ತು.  ನಂತರ ಸಿಂಗಾಪುರದ ಕಡೆಗೆ
ನಿಧಾನವಾಗಿ ಚಲಿಸಿ, ಅಂತಿಮ ಗುರಿಯನ್ನು ಸೇರಿ ಸ್ಟೇಷನ್  ತಲುಪಿದೆವು.  ನಂತರ ಅಲ್ಲಿಂದ ಬಸ್ಸು ನಲ್ಲಿ
ಬಾಲಜಿ ಭವನ್ ತೆರಳಿ ರಾತ್ರೆ ಭೋಜನ ಮುಗಿಸಿ, ಗ್ರಾಂಡ್ ಇಂಪೀರಿಯಲ್ ಹೋಟಲ್ ಗೆ ವಾಪಸ್ಸು ಬಂದೆವು.
ರಾತ್ರೆ ಕನಸಿನಲ್ಲಿ ಸಿಂಗಾಪುರ ದೃಶ್ಯಗಳೇ ಕಾಣುತ್ತಿತ್ತು.

          ಈ ದಿನ 12ನೆ ಡೆಸೆಂಬರ್ 2015.  ನಾವುಗಳು ಬೆಳಿಗ್ಗೆ ಉಪಹಾರ ಸೇವಿಸಿ, ಎದುರುಗಡೆ ಇದ್ದ
ದೇವಸ್ಥಾನಕ್ಕೆ ಹೊದೆವು.  ಅಲ್ಲಿ ಭಗವಂತನ ಆನೇಕ ಗುಡಿಗಳಿವೆ.  ಪಕ್ಕ ತೆಮಿಳುನಾಡಿನ ದೇವಸ್ಥಾನದಂತೆ.
ದೇವಸ್ಥಾನದ ವೈಭವವನ್ನು ಕಣ್ಣಾರೆ ಕಂಡು ಮುದಗೊಂಡೆವು.  ಅಲ್ಲಿ ಲಕ್ಷ್ಮಿಅಮ್ಮನವರಿಗೆ ಅರ್ಚನೆ ಮಾಡಿಸಿ,
ಪ್ರಸಾಧ ಸ್ವೀಕರಿಸಿದೆವು.  ದೇವಸ್ಥಾನದಲ್ಲಿ ಈಶ್ವರ, ಗಣಪತಿ, ಪಾರ್ವತಿ, ಲಕ್ಷ್ಮಿ, ನಾರಾಯಣ, ಚಿದಂಬರ, ಹಾಗು
ನವಗ್ರಹಗಳು ಇದ್ದವು.ಪ್ರಸಾದವು ಊಟದಷ್ಟಿತ್ತು.  ತಿಂಡಿ ಅದ್ದರಿಂದ ಅದನ್ನು ಹೋಟಲ್ ರೂಮ್ ನಲ್ಲಿ ಇಟ್ಟು
ಕೊಂಡೆವು.  ಪುಳಿಒಗ್ಗರೆ, ಉಸಲಿ, ಕೇಸರಿಬಾತ್.  ನಮ್ಮ ಸಹ ಪ್ರಯಾಣಿಕರು "ಯುನಿವರ್ಸಲ್ ಸ್ಟೂಡಿಯೋ"
ನೋಡಲು ಹೋಗಿದ್ದರು.  ಅದು ಹೈದರಾಬಾದ್ ರಮೋಜಿ ಸಿಟಿ ತರಹ.  ನೂತನ ತಾಂತ್ರಿಕತೆಯನ್ನು ಒಳಗೊಂಡ
ಸಿನಿಮಾ ಚಿತ್ರಣದ ಒಂದು ಸ್ಟೂಡಿಯೋ.  "ಗಾರ್ಡನ್ ಬೈ ದಿ ಬೇ",ಅಂತ ಗಾರ್ಡನ್, ಎಲ್ಲಿ ಎಲ್ಲಾ ತರಹದ ಹೂ
ಇದೆಯೋ ಅದು "ವೇರ್ ವಂಡರ್ ಬ್ಲೂಮ್ಸು".  ಅವುಗಳನ್ನು ನೋಡಲು ಕೆಲವರು ಹೋದರು.  ನಾವುಗಳು
ಹೋಟಲ್ ನಲ್ಲಿ ವಿಶ್ರಾಂತಿ ಪಡೆದು, ಭೋಜನಕ್ಕೆ ಬಾಲಾಜಿ ಭವನ್ ಗೆ ಹೋದೆವು.  ನಂತರ ಅಲ್ಲೆ ಸಣ್ಣ ಪುಟ್ಟ
ಶಾಪಿಂಗ್ ಮಾಡಿಕೊಂಡುಬಂದೆವು.ಅಂದಿನ ರಾತ್ರೆವರೆಗೂ ವಿಶ್ರಾಂತಿ.  ಸಿಂಗಪುರದ ಪೇಟೆ ಬೀದಿಗಳ ಸಂದರ್ಶನ.
ರಾತ್ರೆ ಭೋಜನ ನಂತರ ಪೂರ್ಣ ವಿಶ್ರಾಂತಿ.

          ಸಿಂಗಪುರದಲ್ಲಿ 10 ದಿನ ಇದ್ದರೂ ನೋಡು ವಂತದ್ದು ಬಹಳವಿದೆ.  ಇದು ಪ್ರವಾಸಿಗರ ತಾಣ.
ಅದರಿಂದಲೇ ಅವರ ದೇಶದ ಆದಾಯ.  ಹೀಗಾಗಿ ಪ್ರವಾಸಿ ತಾಣಗಳು ಹೆಚ್ಚಿದೆ.  ಯಾವ ತರಹದ ಕೃಷಿ
ಉತ್ಪಾದನೆ ಇಲ್ಲ.  ಕೆಲವು ಹಣ್ಣು ತರಕಾರಿಗಳನಷ್ಟೆ ಬೆಳೆಯುವರು.  ಒಳ್ಳೆ ಶಿಸ್ತಿನ, ಭ್ರಷ್ಟಾಚಾರವಿಲ್ಲದ ದೇಶ.
ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಸ್ಥಳ.  ಸಣ್ಣ ಊರಿನಲ್ಲಿ ಏಷ್ಟೇಲ್ಲಾ ಮಾಡಿದ್ದಾರೆ.  ಒಂದು ಉತ್ತಮ
ಅನುಸರಣೀಯ ದೇಶ.  ನಾವು ನೋಡಿದ ಸ್ಥಳದ ಜೊತೆಗೆ ಇನ್ನು ಆನೇಕ ಸಣ್ಣ ಸಣ್ಣ ಪ್ರವಾಸಿ ತಾಣಗಳಿವೆ.
"ಇನ್ ಸೆಕ್ಟ್ ಕಿಂಗ್ ಡಮ್", "ರೀವರ್ ಸಫಾರಿ", ಇದರಲ್ಲಿ 6,000 ಜಲಚರ ಪ್ರಾಣಿಗಳು, 200 ಜೀವಿಗಳು ಇವೆ.
"ವೈಲ್ಡ್ ಲೈಫ್ ಪಾರ್ಕ" ನಲ್ಲಿ ಮೊಸುಳೆಳು, ಪಾಂಡಗಳು, ಕಾಡುಗಳು, ಮಂಕಿ ಫಾರೆಸ್ಟ್. ಮೆಕಾಂಗ್ ನದಿಯಲ್ಲಿ
ಫ್ರೆಶ್ ವಾಟರ್ ಫಿಶ್ ಗಳು, ಪ್ರಪಂಚದಲ್ಲೆ ಜಾಸ್ತಿ ಇರುವ ಜಾಗ.  ಇದು ಸೌತ್ ಈಸ್ಟ್ ಏಷೀಯಾ ದಲ್ಲೇ
ಉದ್ದನೆ ನದಿ.  "ಗಾರ್ಡನ್ ಬೈ ಬೇ" ನಲ್ಲಿ ಫ್ಲವರ್ ಡೂಮ್ ನಲ್ಲಿ, ತರತರದ ಹೂ ಪ್ರದರ್ಶನವಿದೆ. ಅಸ್ಟ್ರೀಲಿಯನ್, ಅಮೇರಿಕನ್. ಮೇಡಿಟರೇನಿಯನ್, ಕ್ಯಾಲಿಫೋನಿಯನ್ ಗಾರ್ಡನ್, ಅಲೀವ್ ಗಾರ್ಡನ್, ಇವೆ.  ಯುನೆಸ್ಕೋ
ವಲ್ಡ ಹೆರಿಟೇಜ್ ಬಟಾನಿಕಲ್ ಗಾರ್ಡನ್ಸ್, ನ್ಯಾಷನಲ್ ಮುಸಿಯಮ್ ಇತರೆ ಇತರೆ,ಇವೆ.  ಹೆಸರು ಸಿಂಹಾಪುರ
ವಾದರು ಒಂದು ಸಿಂಹ ಇಲ್ಲದ್ದು ಒಂದು ತರಹ ವಿಪರ್ಯಾಸ.

          ಈ ದಿನ 13ನೆ ಡಿಸೆಂಬರ್ 2015.  ಯಥಾಪ್ರಕಾರ ಬೆಳಿಗ್ಗೆ 6 ಗಂಟೆಗೆ ಎದ್ದು ಸ್ನಾನಾದಿಯನ್ನು
ಮುಗಿಸಿ, ಹೋಟೆಲ್ ನಲ್ಲಿ ಒಳ್ಳೆ ಉಪಹಾರ ಮುಗಿಸಿ ತೈಲ್ಯಾಂಡ್ ಕಡೆಗೆ ಪ್ರವಾಸಕ್ಕಾಗಿ ಸಜ್ಜು ಗೊಂಡೆವು.
ಸಿಂಗಪೂರ್ ಏರ್ ಪೊರ್ಟ್ನಲ್ಲಿ ಪ್ರವಾಸಿ ಔಪಚಾರಿಕತೆಯನ್ನು ಮುಗಿಸಿ,ಬ್ಯಾಂಗ್ ಕಾಂಕ್ ಕಡೆ ಹೊರಡುವ "ಟೈಗರ್"
ಏರ್ ಲೈನ್ ನಲ್ಲಿ ಕುಲಿತೆವು.ಇದಕ್ಕೆ ಮೊದಲು ಬಾಲಾಜಿ ಭವನ್ ನಲ್ಲಿ ಭೋಜನ ವಾಗಿತ್ತು. ಬ್ಯಾಂಗ್ ಕಾಂಕ್
ಗೆ ಸುಮಾರು 5ವರೆಗೆ ಬಂದಿಳಿದೆವು.  ಬ್ಯಾಂಗ್ ಕಾಕ್ ವಿಮಾನ ನಿಲ್ದಾನ ಬಹು ವಿಸ್ತಾರವಾಗಿದ್ದು, ನಾವು ಟರ್
ಮೀನಲ್ 2 ರಲ್ಲಿ ಇಳಿದಿದ್ದೆವು.  ದುಬಾಯಿ ಏರ್ ಪೋರ್ಟ್ ಗಿಂತ ದೊಡ್ಡದಾಗಿದೆ.  ನಮಗೆ ತೈಲಾಂಡ್
ಪ್ರವೇಶಿಸಲು ವೀಸಾ ಇಲ್ಲದರಿಂದ, ವೀಸಾ ಅನ್ ಅರೈವಲ್ ಕಡೆಗೆ ಹೋಗಿ, ವೀಸಾ ಚಾರ್ಜ್ 1000 ಭಾಡ್ಸ್ ಕೊಟ್ಟು
(1 ಭಾಡ್ಸ್ = 2 ರೂ.) (ಸಿಂಗಾಪುರ್ ಡಾಲರ್=45 ರೂ.), ವೀಸಾ ಪಡೆದು, ನಮ್ಮ ಲಗೇಜ್ ಗಳನ್ನು ತೆಗೆದು
ಕೊಂಡು ಏಸಿ ಬಸ್ಸ್ ನಲ್ಲಿ ಬ್ಯಾಂಗ್ ಕಾಂಕ್ ಸಿಟಿಯ ಕಡೆಗೆ ಪ್ರಯಾಣ ಬೆಳೆಸಿದೆವು.  ಬ್ಯಾಂಗ್ ಕಾಂಕ್ ಏರ್
ಪೊರ್ಟ್ ಹೆಸರು " ಸುವರ್ಣ ಭೂಮಿ ಏರ್ ಪೊರ್ಟ್".  ಸುಮಾರು 1ವರೆ ಗಂಟೆ ಪ್ರಯಾಣದ ನಂತರ ನಮ್ಮ
ವಾಸ್ತವ್ಯ "ಬಯ್ಯೋಕೆ ಬಾಟಿಕ್" ಹೋಟೆಲ್ಗೆ ಬಂದು ಇಳಿದೆವು.  ಅಗಲೇ ಸುಮಾರು ರಾತ್ರೆ 8ವರೆ.  ಲಗೇಜ್
ತೆಗೆದುಕೊಂಡು, ನಮ್ಮ ನಮ್ಮ ರೊಮ್ ಗಳನ್ನು ಪಡೆದು,ಫ್ರೆಶ್ ಅಪ್ ಅಗಿ ಕೆಳಗಿನ ಅಂತಸ್ತಿನಲ್ಲಿ ಇರುವ
"ಕರಿ ಕಪ್" ಹೋಟೆಲ್ ನಲ್ಲಿ ರಾತ್ರೆ ಭೋಜನಕ್ಕೆ ಬಂದೆವು.  ಊಟ ಬಹಳ ಚೆನ್ನಾಗಿತ್ತು.  ಜೊತೆಗೆ ದೋಸೆ
ತೆಂಗಿನ ಚಟ್ನಿ ಇತ್ತು.  ಭೋಜನ ನಂತರ ವಿಶ್ರಾಂತಿ.

          ಈ ದಿನ 14ನೇ ಡಿಸೆಂನರ್ 2015.  ಪ್ರಾತಃಕಾಲ ಎದ್ದು, ಕಾಪಿ ಮಾಡಿಕೊಂಡು ಕುಡಿದು,ಸ್ನಾನದಿ
ಗಳನ್ನು ಮುಗಿಸಿ, ತಿಂಡಿ ಮಾಡಿಕೊಂಡು, ಬ್ಯಾಂಗ್ ಕಾಂಗ್ ಸಿಟಿ ಟೂರ್ ಗೆ ಹೊರೆಟೆವು.  ಮೊದಲು "ವಾಟ್ ಪೂ"
ಗುಡಿಗೆ, ಮಲಗಿರುವ ಬಂಗಾರದ ಬುದ್ದನ ದೇವಸ್ಥಾನ.  ಬಲಕೈ ಮಡಸಿ, ಅದನ್ನು ದಿಂಬಾಗಿ ಇರಿಸಿಕೊಂಡು
ದಿವ್ಯವಾಗಿ ಮಲಗಿದ್ದಾನೆ.  ಬುದ್ಧನ ಸಂಪೂರ್ಣ ದರ್ಶನ ಮಾಡಿದ್ದೆವು.  146 ಅಡಿ ಉದ್ದ, 15 ಅಡಿ ಎತ್ತರವಾಗಿ
ಶಾಂತವಾಗಿ ಮಲಗಿರುವ ಬುದ್ಧ ನಸುನಗೆ ಬೀರುತ್ತಿದ್ದಾನೆ.  ದೇನಸ್ಥಾನದ ಸಮುಚ್ಛಯದಲ್ಲಿ ಅನೇಕ ಸೂಪ್ತಗಳು
ಇವೆ.  ಇವುಗಳು ದೇನಸ್ಥಾನಕ್ಕೆ ವಂತಿಕೆ(ದಾನ)ಕೊಟ್ಟವರ ನೆನಪಿಗಾಗಿ ನಿರ್ಮಿಸಿದ್ದಾರೆ.  ಇದು ಭಾರತದ ಬೌದ್ಧ
ಗಯವನ್ನು ನೆನಪಿಗೆ ತರುತ್ತೆ.  ದೇವಸ್ಥಾನದ ಪ್ರದಕ್ಷಿಣೆ ಹಾಕುವ ಸ್ಥಳದ ಸುತ್ತಾಲು ಕಂಚಿನ ಪಾತ್ರೆಯನ್ನು
ಇಟ್ಟಿರುತ್ತಾರೆ.  ಅಲ್ಲೆ ಅವರು ಕೊಡುವ ನಾಣ್ಯವನ್ನು ಒಂದೊಂದಾಗಿ ಈ ಪಾತ್ರೆಯಲ್ಲಿ ಹಾಕುತ್ತಾ ಹೊದರೆ
ಒಳ್ಳೆ ಘಂಟೆ ನಾದ ಕೇಳುತ್ತಿತ್ತು.  ಮಲಗಿರುವ ರಂಗನಾಥನ ಜ್ಞಾಪಕ ಬರುತ್ತಿತ್ತು.  ಈ ದೇವಸ್ಥಾನದ ಪಕ್ಕದ್ದಲ್ಲೆ
ಮತ್ತೊಂದು ಬುದ್ಧನ ದೇವಸ್ಥಾನವಿದ್ದು,ಶ್ರದ್ಧಾಳುಗಳು ವಿಶೇಷದಿನಗಳಲ್ಲಿ ಪರಿಕ್ರಮ ಮಾಡುತ್ತಾರೆ.  ದೇವಸ್ಥಾನದ
ಪ್ರಾಂಗಣದಲ್ಲಿ ನೀರು ಕುಡಿದು ಸುಧಾರಿಸಿಕೊಂಡೆವು.

          ಅಲ್ಲಿಂದ ನಾವು "ವಾಟ್ ಟ್ರಿಮಿಟ್" ಅಂದರೆ ಕುಳಿತಿರುವ ಬುದ್ಧ ದೇವಸ್ಥಾನಕ್ಕೆ ಹೊರೆಟೆವು.
ಈ ಬುದ್ಧನ ಪ್ರತಿಮೆಯು ಸುಮಾರು 5,500 ಕೆ,ಜಿ. ಗಟ್ಟಿ ಚಿನ್ನದಿಂದ ಮಾಡಿದ ಪ್ರತಿಮೆ.  ಇಲ್ಲೂ ಸಹ ಬೇರೆ
ಬೇರೆ ಇನ್ನೊಂದು ಬುದ್ಧನ ಮಂದಿರವಿತ್ತು.  ಸುತ್ತಾ ಮುತ್ತಾ ಸಣ್ಣ ಸಣ್ಣ ಅಂಗಡಿಗಳು ಇತ್ತು.  ಇಲ್ಲೇ
ಹಣ ವಿನಿಮಯ ಮಾಡಿಕೊಂಡಿವು.  ಇಲ್ಲೊಂದು ಬಾಳೆಗಿಡದಲ್ಲಿ, ಮರದಿಂದ ನೆಲದತನಕ ಬಾಳೆಗೊನೆ
ಬಹಳ ಉದ್ದವಾಗಿತ್ತು.

          ಅನಂತರ ನಾವು ಭೋಜನ ಮಾಡಿಕೊಂಡು, "ಇಂದಿರಾ ಮಾರ್ಕಟ್"ಗೆ ಶಾಂಪಿಂಗ್ ಗೆ ಹೊರೆಟೆವು.
ಇಲ್ಲಿ ಹತ್ತಿಯ ಉಡುಪುಗಳು ಬಹಳ ಚೆನ್ನಾಗಿ ದೊರೆಯುತ್ತೆ.  ಬೆಳಗ್ಗಿನ ಝಾವ 3 ರಿಂದ 8ರ ತನಕ ಪಾರ್ಕಿಂಗ್
ಲಾಟ್ ನಲ್ಲಿ ಸಂತೆ ಇರುತ್ತೆ.  (ಬಟ್ಟೆಗಳ),  ಇಲ್ಲೂ ಶಾಪಿಂಗ್ ಅಯಿತು. ರಾತ್ರೆ ಭೋಜನ "ಕರಿ ಕಪ್"ನಲ್ಲಿ
ಮಾಡಿದೆವು. ರುಚಿಕರವಾದ ಭಾರತೀಯ ಭೋಜನ.

         ಈ ದಿನ 15ನೆ ಡಿಸೆಂಬರ್ 2015.  ಪ್ರಾಃತ ಕಾಲ ಎದ್ದು, ನಿತ್ಯಕರ್ಮ ಮುಗಿಸಿ, ಲಗೇಜನ್ನು ಸಿದ್ಧ
ಪಡಿಸಿ ಬಸ್ಸುಗೆ ಕೊಂಡೈದೆವು.  ಉಪಹಾರ ಮುಗಿಸಿ, ಪಟ್ಟಾಯದ ಕಡೆಗೆ ಪ್ರಯಾಣ ಬೆಳೆಸಿದೆವು.  ಮಾರ್ಗಮಧ್ಯೆ
ದಲ್ಲಿ ರಮಣೀಯವಾದ "ಸಫಾರಿ ವಲ್ಡ್"ಗೆ ಬೇಟಿ ಕೊಟ್ಟೆವು.  ಇದು ಬಹಳ ದೊಡ್ಡ ಪ್ರದೇಶ.  ಇಲ್ಲಿಯ
ಕಾಡಿನಲ್ಲಿ ವನ್ಯ ಮೃಗಗಳು ಸ್ವೇಚ್ಛೆಯಾಗಿ ವಿಹರಿಸುತ್ತಿರುತ್ತೆ.  ಅವುಗಳಿಗೆ ಪ್ರತ್ಯೇಕವಾದ ಸ್ಥಳಗಳಿವೆ.  ನಾವು
ಪ್ರೇಕ್ಷಕರು ಬೋನಿನಲ್ಲಿ ಇದ್ದಂತೆ ಬಸ್ಸಿನಲ್ಲಿ ಕುಳಿತು, ನಿಧಾನವಾಗಿ ಪ್ರಾಣಿ ಪಕ್ಷಿ ಸಂಕುಲನ್ನು ನೋಡುತ್ತಾ,ಅವುಗಳ
ಸ್ವೇಚ್ಛಾವಿಹಾರವನ್ನು ನೋಡಿ ಆನಂದಿಸುತ್ತಾ ಹೋಗುತ್ತಿದ್ದೆವು.  ಬಸ್ಸ್ ನ್ನು ಅಲ್ಲಿ ಇಲ್ಲಿ ಶಬ್ದವಿಲ್ಲದೆ ಫೊಟೋ
ಗಾಗಿ ನಿಲ್ಲಿಸುತ್ತಿದ್ದರು.  ಇಲ್ಲಿ ಜಿರಾಫೆಗಳು, ಜಿಂಕೆಗಳು, ಕೃಷ್ಣಮೃಗಗಳು, ಹಿಂಡು ಹಿಂಡಾಗಿ ವಿಹರಿಸುತ್ತಿದ್ದವು.
ಕರಡಿಗಳು, ಕಾಡೆಮ್ಮೆಗಳು, ಹುಲಿಗಳು, ಸಿಂಹಗಳು, ನೀರಾನೆಗಳು, ಘೇಂಡಾಮಗೃಗಳು ಸಹ ಇದ್ದವು.  ಇಲ್ಲಿರುವ
ಪ್ರಾಣಿ ಪಕ್ಷಿಗಳು ಫೋಟೊಗಳಿಗೆ ಒಳ್ಳೆ ಪೋಸ್ ಕೊಡುತ್ತಿದ್ದವು.  ಬಿಳಿದು,ಕರಿದು, ಪಿಂಕ್ ಬಣ್ಣದ ಹಿಂಡು
ಹಿಂಡು ಕೊಕ್ಕರೆಗಳು, ಹಂಸಗಳು, ಇನ್ನು ಅನೇಕ ಪಕ್ಷಿಗಳು ಇದ್ದವು.  ಈ ಸಫಾರಿ ವಲ್ಡ್ ಇನ್ನೊಂದು ಭಾಗದಲ್ಲಿ
ಉದ್ಯಾನವನವಿತ್ತು.  ಇಲ್ಲಿ ಅನೇಕ ಶೋ ಗಳು ಇದ್ದವು.  ಪಕ್ಷಿಗಳ ಮಾರ್ಚ ಫಾಸ್ಟ್, ಅನೇಕ ಚಮತ್ಕಾರಿ
 ಅಟಗಳು ಇದ್ದವು.  ಹಕ್ಕಿಗಳು ಕುಳಿತ ಪ್ರೇಕ್ಷಕರ ಕೈಯಲ್ಲಿ ಇದ್ದ ರಿಂಗ್ ಒಳಗೆ ವಿರುದ್ದ ದಿಕ್ಕಿನಿಂದ ಕ್ರಾಸ್
ಅಗಿ ಹಾರಿ ಕೊಂಡು ಹೋಗುತ್ತಿತ್ತು.  ಅಲ್ಲೆ ಮಧ್ಯೆಯಲ್ಲಿ ನಿರ್ಮಿಸಿದ್ದ ಸ್ಟೇಜ್ ನಲ್ಲಿ, ಹಕ್ಕಿಗಳು ಬಾಲುಗಳನ್ನು
ಹೆಕ್ಕುವ ಕಾಂಪೀಟೇಷನ್, ಪ್ರೇಕ್ಷಕರ ಕೈಯಲ್ಲಿ ಹಣವನ್ನು ತೆಗೆದುಕೊಂಡು ಹೊಗುವುದು, ಇತ್ತು.  ಬಿಳಿ ಗಿಣಿ
ಅ ದಿನ ಯಾರ ಹುಟ್ಟಿದ ದಿನವಿರುತ್ತೊ ಅವರನ್ನು ಅಭಿನಂದಿಸಿ ಹ್ಯಾಪಿ ಬರ್ತ್ ಡೆ ಹಾಡು ಹೇಳುತ್ತಿತ್ತು.ದೊಡ್ಡ
ಮುಂಗಟ್ಟೆ ಹಕ್ಕಿ ನಿದೇರ್ಶನ ಪ್ರಕಾರ ಗೂಡಿನಲ್ಲಿ ಹೆಣ್ಣು ಹಕ್ಕಿಯನ್ನು ಕೂರಿಸಿ, ಅಲ್ಲಿ ಆಹಾರ ಸರಬರಾಜು ಮಾಡುವುದು, ಶತ್ರು ಬಂದರೆ ಹೇಗೆ ಒಳಗಡೆ ಅಡಗಿ ಕುಳಿತು ಕೊಳ್ಳಬೇಕು ಎಂಬುದನ್ನು ತೋರಿಸಿತು.  ಫೆಲಿಕಾನ್
ಹಕ್ಕಿಗಳ ಪೆರೇಡ್ ಅಯಿತು.  ಅದರ ಜೊತೆ ನಾನು ಫೊಟೋ ತೆಗೆಸಿಕೊಂಡೆ.

          ನಂತರ ಅಲ್ಲಿಂದ ನಾವು ಸೀ ಲಯನ್ ಶೋ ಗೆ ಹೊದೆವು.  ಅವುಗಳ ಚಮತ್ಕಾರಿ ಅಟಗಳ
ಪದರ್ಶನವಾಯಿತು.  ಎತ್ತರದಲ್ಲಿ ಕಟ್ಟಿದ್ದ ಚೆಂಡನ್ನು ನೀರಿನಿಂದ ಎದ್ದು ಹಾರಿ ಮುಟ್ಟುವುದು, ಹುಡುಗಿಯರು
ಹಿಡಿದುಕೊಂಡ ರಿಂಗ್ ಒಳಗೆ ಹಾರಿ ಬರುವುದು, ಎಲ್ಲಾವು ಒಟ್ಟಾಟ್ಟಾಗಿ ಹಾರುವುದು, ಒಬ್ಬನು ಅದರ ಮೇಲೆ
ಸವಾರಿ ಮಡಿಕೊಂಡು ಬರುವುದು, ಸ್ಟೇಜ್ ಮೇಲೆ ಬಂದು ಚಪ್ಪಾಳೆ ತಟ್ಟುವುದು, ಪ್ರೇಕ್ಷಕರ ಮುಂದೆ ಹಾದು
ಹೊಗುವುದು ಬಹಳ ರಂಜನೀಯವಗಿತ್ತು.  ಇದು ಸಿಂಗಪುರಕ್ಕಿಂತ ಹೆಚ್ಚಿನ ಪಟ್ಟು ಚೆನ್ನಾಗಿತ್ತು.

          ಇದರ ನಂತರ "ಡಾಲ್ಪಿನ್ ಶೋ"ಗೆ ಬಂದೆವು.  ಇವುಗಳು ಸಹ ಬಹಳ ಚಮತ್ಕಾರಿ ಅಟವನ್ನು
ತೋರಿಸಿದವು.  ಇದು ಸಹ ಬಹಳ ಚನ್ನಾಗಿತ್ತು.  ನಂತರ ಅಲ್ಲಯೇ ಇದ್ದ ರೆಸ್ಟೋರೆಂಟ್ ನಲ್ಲಿ ಭೋಜನ
ವಾಯಿತು.  ಜನನಿಬಿಡವಾಗಿತ್ತು.  ಶೋ ಪ್ರಾರಂಭವಾಗುವ ಮುಂಚೆ ಶಾಲ ಮಕ್ಕಳಿಂದ ಹಾಡುಗಳು ಅಯಿತು.
ಹಾಡುಗಾರ ಇಂಡಿಯನ್ ಹಾಡು ಸಹ ಹೇಳಿದ.  ಬಹಳಷ್ಟು ಜನರು ಕುಣಿದಾಡಿದರು.  ಊಟದ ನಂತರ
ಸಿನಿಮಗಳಲ್ಲಿ ಸ್ಟಂಟ್ ಮ್ಯಾನ್ ಮಾಡುವ ಸಾಹಸಗಳನ್ನು ತೋರಿಸಿದರು.  ಅಲ್ಲಿ ಸಾಹಸಮಯ ಸ್ಟಂಟ್ ಹಾಗು
ಶೂಟಿಂಗ್ ಚಮತ್ಕಾರಿಯಾಗಿತ್ತು.

          ತದನಂತರ ಬಹಳ ಸುಂದರವಾದ ಶೋ. ಮಂಕಿ ಶೋ.ಓರಾಂಗಟೋ ಶೋ ನೋಡಲು ತೆರಳಿದೆವು.
ಮಾನವನಿಗೆ ಅತಿ ಹತ್ತಿರವಾದ ಬುದ್ದಿವಂತ, ವಾನರ ಜಾತಿಯ ಓರಾಂಗಟೋ ಶೋ ಪ್ರಾರಂಭವಾಯಿತು.  ಮೊದಲು
ಇವುಗಳು ಶೋ ಮಂಟಪದ ಮೇಲಿಂದ ಜಾರಿಕೊಂಡು ಪ್ರವೇಶ ಮಾಡಿದವು.  ಅವುಗಳ ಅಟ-ಪಾಟಗಳು, ಫುಟ್
ಬಾಲ್ ಅಟ, ಅರ್ಕೇಸ್ಸಟ್ರಾ ಇತ್ತು. ಬಾಕ್ಸಿಂಗ್‍ನಲ್ಲಿ ಅಂಫ್ಯರ್ ಕೆಲಸ, ಅಟವಾಡುವರು, ಫಾಸ್ಟ್ ಏಡ್ ಡಾಕ್ಠರ್,
ಎಲ್ಲಾವನ್ನು ಈ ಕೋತಿಗಳಿಂದ ಮಾಡಿಸಿದರು.  ಸೋಗಸಾಗಿತ್ತು.  ಎಲ್ಲಾವು ಅವುಗಳ ಚೇಷ್ಟೆಯನ್ನು ತೋರಿಸಿ
ಹೊಟ್ಟೆ ಹುಣ್ಣಾಗುವಂತೆ ನಗಿಸಿದವು.  ಇದನೆಲ್ಲಾ ಮುಗಿಸಿಕೊಂಡು, ಸಂಜೆ ಹೊತ್ತಿಗೆ ಪಟ್ಟಾಯ ಊರನ್ನು
ತಲುಪಿದೆವು.

          ಪಟ್ಟಾಯದಲ್ಲಿ "ಗೋಲ್ಡನ್ ಬೀಚ್ ಸ್ಟಾರ್"ಹೋಟೆಲ್ ನಲ್ಲಿ ನಮ್ಮ ವಾಸ್ತವ್ಯ.  ರೂಮಲ್ಲಿ ನಮ್ಮ
ಲಗೇಜ್ ಇಟ್ಟು ತಯಾರಾಗಿ, ಕಾಪಿ ಮಾಡಿಕೊಂಡು ಕುಡಿದು, ಅಲ್ಕಾಝರ್ ಶೋ ನೋಡಲು ಹೊದೆವು.  ಪಟ್ಟಾಯ
ಸಿಟಿ ಮೂಲಕ ಹೊದೆವು.  ಮಾರ್ಗಮಧ್ಯೆಯಲ್ಲಿ ಸಿಟಿಯ ರಂಗನ್ನು, ಥಳಕನ್ನು, ನೋಡುತ್ತಾ ಮನ ಮುದಗೊಂಡಿತ್ತು.  ಪಟ್ಟಾಯದಲ್ಲಿ ಜೀವನ ಪ್ರಾರಂಭವಾಗುವುದೆ ಸಂಜೆ 7 ಗಂಟೆ ನಂತರ,  ಅದೂ ಬೆಳಗಿನ
ಝಾವದವರೆಗೆ ನಡೆಯುತ್ತೆ.  ಇಲ್ಲಿಗೆ ಬರುವ ಪ್ರವಾಸಿಗರು ಕೇವಲ ಮನೋರಂಜನೆಗಾಗಿ, ಮಜಕ್ಕಾಗಿ ಬರುವರು.
ನಾವು ಹೊಗಿದ್ದ "ಅಲ್ಕಾಝರ್ ಶೋ" ಒಂದು ಥೀಯೇಟರ್ನಲ್ಲಿ ನಡೆಯಿತು.  ಅದು ದಿನಕ್ಕೆ 4 ಶೋ ನಡೆಯುತ್ತೆ.
ಮುಂಚೆಯೆ ಕಾದಿರಿಸಿದ ಸ್ಥಳಗಳಲ್ಲಿ ನಾವು ಕೂತೆವು.  ಸುಸರ್ಜಿತವಾದ ರಂಗಮಂಟಪ.  ಕಂಪ್ಯೂಟರ್ ನಿಯಂತ್ರಿತ
ದೃಶ್ಯಾವಳಿಗಳು. ಇಲ್ಲಿಯ ಪ್ರದರ್ಶನ ಅತಿಶಯವಾಗಿತ್ತು.  ಸುಮಾರು 1ವರೆ ಗಂಟೆಗಳ ಕಾಲ, ಎಡೆಬಿಡದೆ ಒಂದರ
ನಂತರ ಒಂದು ನಡೆಯಿತು.  ಕಲಾವಿದರು ಬಹಳ ಸುಂದರವಾದ ಥರಥಳಿಸುವ ಅಕರ್ಷಣೀಯ ಉಡುಗೆ ತೊಡುಗೆ
ತೊಟ್ಟು, ತಲೆಯ ಮೇಲೆ ಕೀರಿಟಗಳು ಸಹ ಬಹಳ ಆದ್ಧುತವಾಗಿತ್ತು.  ತೈಲಾಂಡ್ ಸಾಂಸ್ಕøತಿಕ ಕಾರ್ಯಕ್ರಮಗಳು
ನೃತ್ಯಗಳು ವೈಭನ ಪೂರಕವಾಗಿ ನಡೆಯಿತು.  ಕಾಸ್ಟುಮ್ ಗಳು ಬಹಳ ಚೆನ್ನಾಗಿತ್ತು.  ಅತಿಶಯನಾದ ಪ್ರದರ್ಶನ.
ಎಲ್ಲರು ಉತ್ತಮವಾದ ಪಾತ್ರ ವಹಿಸಿದರು.  ನೃತ್ಯಗಳು ಸ್ವರ್ಗ ಲೋಕವನ್ನು ಜಾÐಪಿಸುತಿದ್ದವು.  ಸ್ಟೇಜ್ ಮೇಲೆಯೆ
ಅನೆ  ಅಂಬಾರಿಗಳು ಬಂದವು.  "ನಚ್ ಬಲೀಯೆ" ಸಿನಿಮಾದ ಒಂದು ಹಾಡು ಇತ್ತು.  ನೃತ್ಯದ ನಂತರ ಅವರು
ಗಳ ಜೊತೆ ನಿಂತು ಫೋಟೊ ತೆಗಿಸಿಕೊಳ್ಳಬಹುದಿತ್ತು.  ನೃತ್ಯಮಾಡಿದ ಹೆಣ್ಣುಗಳೆಲ್ಲಾ "ಬಾಯ್ ಗಲ್ಸ್" ಗಳು.
ನಪುಂಸಕರು.  ಇಲ್ಲಿಯ ಸರ್ಕಾರ ಇವರನ್ನು ಗೌರವಿಸುತ್ತದೆ.  ಇದನ್ನು ನಡೆಸುವವರು ಪ್ರ್ಯೆವೇಟ್ ನವರು.
ಬಹಳ ಸುಂದರವಾದ ಇವರನ್ನು ಮನೋರಂಜನೆಗೆ ಉಪಯೋಗಿಸುತ್ತಾರೆ.  ಅವರುಗಳು ಸಂತೋಷದಿಂದ ಮಾಡು
ತ್ತಾರೆ.  ನಮ್ಮಲ್ಲಿ ಇಂತವರು ಬೀದಿಸುತ್ತಿ ಬಿಕ್ಷೆ ಬೇಡುವಂತಾಗಿದೆ, ಇವರ ತಪ್ಪಿಲ್ಲದೆ ಸೃಷ್ಟಿಯ ವಿಚಿತ್ರಕ್ಕೆ.  ಇಲ್ಲಿ
ಅವರು ಬಹಳ ಚೆನ್ನಾಗಿ, ಸ್ವತಂತ್ರವಾಗಿ ಜೀವಿಸುತ್ತಾರೆ.  ಇದರ ನಂತರ ನಾವುಗಳು ಭಾರತೀಯ ಭೋಜನ
ಮುಗಿಸಿಕೊಂಡು ಹೋಟೆಲ್‍ಗೆ ವಾಪಸ್ಸು ಬಂದೆವು.

          16ನೇ ದಿಸೆಂಬರ್ 2015 ಈ ದಿನ ಪಟ್ಟಾಯದಲ್ಲಿ ಅತ್ಯಂತ ಬಿಸಿಯಾದ ದಿನ.  ಬೆಳಿಗ್ಗೆ ಉಪಹಾರ
ದ ನಂತರ, "ಕೋರಲ್ ಐಲ್ಯಾಂಡ್"ಗೆ ಮೋಟರ್ ಬೋಟ್ನಲ್ಲಿ ಪ್ರಯಾಣ.  2 ಮೋಟರ್ ಬೋಟ್ ಗಳಲ್ಲಿ 2 ಗಂಟೆಗಳ ಪ್ರಯಾಣ.  ಮಾರ್ಗ ಮದ್ಯೆಯಲ್ಲಿ ನಿಲ್ಲಿಸಲಾಗಿದ್ದ ಇನ್ನೊಂದು ಬೋಟ್ನಲ್ಲಿ ಪ್ಯಾರಸೇಲಿಂಗ್ ನೋಡುವ
ಮಾಡುವ ಅಟ್ಟಣಿಗೆಯು ಇತ್ತು.  ಇಲ್ಲಿಗೆ ಒಂದರಿಂದ ಇನ್ನೊಂದಕ್ಕೆ ದಾಟಿದೆವು.  ಇಲ್ಲಿ ಪ್ಯಾರಸೆಲೀಂಗ್‍ಗೊಸ್ಕರ
"ಕ್ಯೂ" ಇತ್ತು.  ಅದರಲ್ಲಿ ಹಲವಾರು ಸಹ ಪ್ರಯಾಣಿಕರು ಭಾಗಹಿಸಿದರು.  ನಾವುಗಳು ಸಮುದ್ರದ ಭೋರ್ಗೆರೆತ
ಹಾಗು ಪ್ಯಾರ ಸೇಲಿಂಗ್ ದೃಶ್ಯವನ್ನು ನೋಡಿ ಸಂತೋಷಪಟ್ಟೆವು.  ಪ್ರತಿಯೊಬ್ಬರು ಒಬ್ಬೊಬ್ಬರಾಗಿ. ಅವರಿಗೆ
ಕಟ್ಟಿದ ಪ್ಯಾರಚೂಟ್ನಲ್ಲಿ ನಿಂತು, ಇನ್ನೊಂದು ಬೋಟ್ ಅದನ್ನು ಎಳೆದುಕೊಂಡು ಹಾರಿದಾಗ, ಸಮುದ್ರದ ಮೇಲೆ
ಕೆಲವು ನಿಮಿಷಗಳ ಕಾಲ, ಕಾಲು ಬಿಟ್ಟು ನಿಂತು ಹೆಗಲಿನಲ್ಲಿ ಕಟ್ಟಿದ ಪ್ಯಾರಚೂಟ್ನಿಂದ ಹಾರಾಡಿ, ಮತ್ತೆ ಇದೇ
ಅಟ್ಟಣಿಗೆಗೆ ವಾಪಸ್ಸು ಬರುವುದು.  ಇದು ಸತತವಾಗಿ ನಡೆಯುತ್ತಿತ್ತು.  ಸಮುದ್ರದ ಮೇಲೆಲ್ಲಾ ಇಂತಹದೆ
ಹಾರಟಗಳು ಏರ್ಪಾಡಗಿತ್ತು.  ಅಟ್ಟಣಿಗೆ ಇರುವ ದೋಣಿ ಕೇವಲ ಪ್ಯಾರಸೇಲಿಂಗ್ ಟೇಕ್ ಅಫ್ ಮತ್ತು ಲ್ಯಾಂಡ್
ಅಗಲು ಮಾತ್ರ.  ಮತ್ತೆ ಇನ್ನೊಂದು ದೋಣಿಗೆ ಬದಲಾಯಿಸಿ ಕೋರಲ್ ಐಲ್ಯಾಂಡ್ ಕಡೆಗೆ ಪ್ರಯಾಣಿಸಿದೆವು.
                                                 
          ಸಮುದ್ರ ರೋಚಕವಾಗಿತ್ತು.  ಅಲೆಗಳ ಹ್ಯೊದಾಟದಿಂದ, ವೇಗವಾಗಿ, ರುದ್ರ ರಮಣೀಯವಾದ,
ಸಮುದ್ರದ ಮೇಲೆ ಸಾಗುತ್ತಿತ್ತು.  ಸತ್ತಲು ನೀರೇ ನೀರು.  ಯಾನ ಚೆನ್ನಾಗಿತ್ತು.  ಇದೇ ರೀತಿಯ ನೂರಾರು
ದೋಣಿಗಳು ಚಿಕ್ಕವೂ, ದೊಡ್ಡವು, ವರ್ಣರಂಜಿತವಾದವು ಅಕ್ಕ ಪಕ್ಕದಲ್ಲಿ ಸಾಗುತ್ತಿತ್ತು.  "ಕೋರಲ್ ಐಲ್ಯಾಂಡ್"
ಒಂದು ದ್ವೀಪ.  ಇದು ಹವಳದ ದಿಬ್ಬ.  ಅಂಡಮಾನ್ ನಿಕೋಬಾರ್ ಸಮುದ್ರ ಹಾಗು ತೈಲ್ಯಾಂಡ್ ಸಮುದ್ರದ
ಮಧ್ಯೆ ಇದೆ.  ಕೋರಲ್ ಐಲ್ಯಾಂಡ್ ತಲುಪಿದಾಗ 11 ಗಂಟೆ.  ಅಲ್ಲಿ ಸಮುದ್ರದ ಸ್ನಾನ ಮಾಡಿ ವಿಹರಿಸಿದೆವು.
ಸಮುದ್ರದ ನೀರು ಸ್ಪಟಿಕದಂತೆ ಶುಭ್ರವಾಗಿತ್ತು.  ಬಿಳಿಯ ಮರಳುಗಳು.  ಸ್ನಾನದ ನಂತರ ಅಘ್ಯ ಕೊಟ್ಟು,
ಅಲ್ಲಿಯೇ ವಿಶ್ರಾಂತಿಸಿದೆವು.  ಕೆಲವರು ಸಮುದ್ರದ ಒಳಗೆ ಓಷನ್ ಡೈವ್‍ಗೆ ಅಕ್ಸಿಜನ್ ಮಾಸ್ಕ ಹಾಕಿಕೊಂಡು
ನೋಡಿ, ಇಲ್ಲಿಗೆ ಬಂದು ಸೇರಿದರು.  ಎಲ್ಲಾರು ಸೇರಿ ಮೋಟರ್ ಬೋಟ್ ನಿಂದ ಪಟ್ಟಾಯಕ್ಕೆ ವಾಪಸ್ಸು ಪ್ರಯಾಣ
ಮಾಡಿದೆವು.  ಭಾರತೀಯ ಭೋಜನ ಮುಗಿಸಿಕೊಂಡು, ಸುಮಾರು 30 ಕಿ.ಮೀ. ದೂರದಲ್ಲಿರುವ "ನೂಂಗ್ ನೂಚ್"
ಗ್ರಾಮಕ್ಕೆ ಪ್ರಯಾಣ.  ಸುಮರು 500 ಎಕರೆ ಜಾಗದಲ್ಲಿ ವಿಕಸಿತವಾಗಿರುವ ತೋಟ.  ತರ ತರದ ಗಿಡಗಳು,
ಮಾನವ ನಿರ್ಮಿತ, ಸಹಜವೋ ಎಂಬಂತೆ ಇರುವ ಎಲ್ಲಾ ತರಹ ಪ್ರಾಣಿಗಳ ಗುಂಪುಗಳು, ಟೆರಕೋಟ ಕಪ್
ಮತ್ತು ಸಾಸರ್ ಗಳಿಂದ ಮಾಡಲ್ಪಟ್ಟ ಆನೇಕ ಕಲಾತ್ಮಕ ಕೃತಿಗಳು ಎಲ್ಲ ಕಡೆ ಇದ್ದವು.  ಪ್ರಾಣಿಗಳು ಸುಂದರ
ವಾಗಿತ್ತು.  ಅವುಗಳದೇ ಪ್ರಪಂಚವೇನೋ ಅನ್ನುವಷ್ಟು ಪ್ರಾಣಿಗಳು ತುಂಬಿತ್ತು.

          ಅಲ್ಲಿಂದ ಸೀದ ನಾವು "ತೈಲ್ಯಾಂಡ್ ಕಲ್ಚರಲ್ ಶೋ"ಗೆ ಬಂದೆವು.  ಇಲ್ಲಿಯೂ ಸಹ ಅಲ್ಲಿಯ
ಸಾಂಸ್ಕ್ರತಿಕ ಕಾರ್ಯಕ್ರಮಗಳು ಅಯಿತು,  ಇಲ್ಲಿಯೂ ಅನೆ ಅಂಬಾರಿ ಸ್ಟೇಜ್ ಮೇಲೆ ಅಯಿತು.  ನಂತರ ನಾವು
ಅದರ ಹಿಂದೆಯೇ ಇದ್ದ "ಎಲಿಫೆಂಟ್ ಶೋ"ಗೆ ಹೋದೆವು.  ಇಲ್ಲಿ ಅನೆಗಳಿಗೆ ಹಳದಿ ಬಟ್ಟೆಯಿಂದ ಅಲಂಕೃತ
ಗೊಳಿಸಿ, ಅವುಗಳಿಂದ ನಾನಾ ತರಹದ ಸರ್ಕಸ್‍ನಂತೆ ಅಟ-ಪಾಟಗಳನ್ನು ಮಾಡಿಸಿದರು.  ಫುಟ್ ಬಾಲ್ ಅಟ
ಗಾಡಿ ಓಡಿಸುವುದು, ಒಂದರ ಬಾಲ ಒಂದು ಹಿಡಿದುಕೊಂಡು ಪೆರೇಡ್ ಮಾಡಿದವು.  ಸುಮಾರು 50 ಅನೆಗಳು
ಇದರಲ್ಲಿ ಭಾಗನಹಿಸಿದವು.  ಇದರ ನಂತರ ಉದ್ಯಾನವನದಲ್ಲಿ ವಿಹರಿಸಿ ನಮ್ಮ ಬಸ್ಸುಗೆ ವಾಪಸ್ಸು ಬಂದೆವು.
ಅಲ್ಲಿಂದ ಹೊರಟು ಪಟ್ಟಾಯಕ್ಕೆ ಬಂದು, "ಮಹಾಲಕ್ಷ್ಮಿ ಹೋಟಲ್" ನಲ್ಲಿ ಊಟಮುಗಿಸಿ, ಹೋಟೆಲ್ಗೆ ವಾಪಸ್ಸು
ಅದೆವು.

          ತೈಲ್ಯಾಂಡ್ ಬಾಡಿ ಮಸಾಜ್ ಗೆ ಪ್ರಸಿದ್ಧಿ.  ಕೆಲವರು ಮಾಡಿಸಿಕೊಂಡರು.  ಹೋಟಲ್ ರೂಮಿನಲ್ಲಿ
ನಮ್ಮೆಲ್ಲಾ ಲಗೇಜ್ ಪ್ಯಾಕ್ ಮಾಡಿಕೊಂಡು, ಒಂದು ಜೊತೆ ಬಟ್ಟೆ ಹಾಗು, ಫ್ರಸಾಧನ ಸಾಮನು,ಅತ್ಯವಶ್ಯಕ
ಸಾಮಗ್ರಿಯನ್ನು ಪ್ರತ್ಯೇಕವಾಗಿ ಇಟ್ಟು ಕೊಂಡೆವು.

          ಈ ದಿನ 17ನೇ ಡಸೆಂಬರ್ 2015.  ಮುಂಜಾನೆ ಮಾಮುಲಿನಂತೆ ಎದ್ದು, ಉಪಹಾರ ಮಾಡಿ,
ಸುಮಾರು 9 ಗಂಟೆಯ ಹೊತ್ತಿಗೆ ನಮ್ಮೆಲ್ಲಾ ಭಾರಿ ಲಗೇಜ್ ಗಳನ್ನು ಬಸ್ಸ್ ಡಿಕ್ಕಿಯಲ್ಲಿ ಹಾಕಿ, ನಾವು ತೆಗೆದು
ಕೊಂಡಿದ್ದ ಸಣ್ಣ ಲಗೇಜ್‍ನನ್ನು ತೆಗೆದುಕೊಂಡು ಬಸ್ಸ್ ಏರಿದೆವು.  ಅಲ್ಲಿಂದ ಸುಮಾರು 10ವರೆ ಹೊತ್ತಿಗೆ
"ಜೆಮ್ ಫ್ಯಾಕ್ಟರಿಗೆ" ಬೇಟಿ ನೀಡಿದೆವು.  ಇಲ್ಲಿ ಗಣಿಗಳಿಂದ ನವರತ್ನವನ್ನು ತೆಗೆಯುವ, ಅವುಗಳನ್ನು ಶೋಧಿಸುವ,
ಶುದ್ಧಿ ಗೊಳಿಸುವ, ಆಭರಣ ಮಾಡುವ ಪ್ರಕ್ರಿಯೆಯನ್ನು ತೋರಿಸುವ ವ್ಯವಸ್ಥೆ ಇತ್ತು.  ಟ್ರಾಲಿಯಲ್ಲಿ ಕುಳಿತು,
ಅದು ಚಲಿಸುತ್ತಿದ್ದಂತೆ, ಗಣಿಯೊಳಗೆ ನಡೆಯುವ ದೃಶ್ಯಾವಳಿಯನ್ನು ಸಹಜ ಸ್ಥಿತಿಯಲ್ಲಿ ನೋಡಿದೆವು.  ಸಹಜ
ಸ್ಥಿತಿಯಂತೆ ಮಾಡಿ ನಿರ್ಮಿಸಲಾಗಿತ್ತು.  ಮಾರ್ಗದ ಉದ್ದಕ್ಕೂ ಒಳಗಡೆ ನಡೆಯುವ ಕೆಲಸ ಕಾರ್ಯಗಳ ಮಾಹಿತಿ
ಯನ್ನು ಧ್ವನಿ ವರ್ದಕ ಮೂಲಕ ತಿಳಿಸಲಾಗುತ್ತಿತ್ತು.  ಸುತ್ತಲು ಕತ್ತಲೆಯ ವಾತಾವರಣ.  ನಂತರ ಟ್ರಾಲಿಯಿಂದ
ಇಳಿದು ಬಂದು, ಗಣಿಗಳಿಂದ ತೆಗೆದ ಮುತ್ತು, ರತ್ನ, ಹವಳವನ್ನು, ಹೇಗೆ ಪರಿಷ್ಖರಿಸಿ,ಶುದ್ದೀಕರೀಸಿ, ಆಭರಣವನ್ನು
ಮಾಡುವ ಹಾಗು ಅಮೂಲ್ಯವಾದ ಕಲ್ಲುಗಳನ್ನು ಹೊಳಪಿಸುವ ಕಾರ್ಖಾನೆಯತ್ತ ನಡೆದೆವು.  ಅಲ್ಲಿ ಕಾರ್ಮಿಕರು
ಮಾಡುವ ಕೆಲಸವನ್ನು ಕಣ್ಣಾರೆ ನೋಡಿ ಆಶ್ಛರ್ಯ ಚಕಿತರಾದೆವು.  ಅನಂತರ ಅಲ್ಲಿಂದ ಶಾಪಿಂಗ್ ಕಾಂಪ್ಲೆಕ್ಸ್ಗೆ
ಬಂದೆವು.  ಎಲ್ಲಾರ ಶಾಪಿಂಗ್ ಪ್ರಾರಂಭವಾಯಿತು.  ಅವರ ಹತ್ತಿರ ಸಿಗುವುದು ರೂಬಿ, ಮುತ್ತುಗಳು, ಹಾಗು
ಹವಳಗಳು.  ನಾನು ಒಂದು ಸ್ಟಿಂಗ್ ಫ್ರೆಶ್ ವಾಟರ್ ಮುತ್ತುಗಳನ್ನು ತೆಗೆದುಕೊಂಡೆ.  ಇಲ್ಲಿ ಬೆಳ್ಳಿಯಿಂದ
ಆಭರಣವನ್ನು ಮಾಡಿ ವೈಟ್ ಗೋಲ್ಡ್ ಅನ್ನುವರು.  ಗೋಲ್ಡ್ 18 ಕ್ಯಾರೆಟ್ ಇರುತ್ತೆ.  ಜೆಮ್ ಫ್ಯಾಕ್ಟರಿ
ನಂತರ ನಾವುಗಳು ಬ್ಯಾಂಗ್ ಕಾಂಕ್ ಕಡೆಗೆ ಹೊರೆಟೆವು.  ಮಾರ್ಗಮಧ್ಯೆಯಲ್ಲಿ ಭೋಜನವಾಯಿತು.  ಸುಮಾರು
5ವರೆ ಹೊತ್ತಿಗೆ ಸುವರ್ಣ ಭೂಮಿ ಏರ್ ಪೊರ್ಟ್ ತಲುಪಿದೆವು.  ಲೌಂಜ್ ನಲ್ಲಿ ಎಲ್ಲಾರು ತಮ್ಮಲ್ಲಿ ಇದ್ದ
ಕುರುಕುಲು ತಿಂಡಿಯನ್ನು ಪರಸ್ಪರ ಹಂಚಿಕೊಂಡೆವು.  ನಂತರ ನಿಲ್ಧಾಣದ ಔಪಚಾರಿಕತೆಯನ್ನು ಮುಗಿಸಿಕೊಂಡು,
ನಮ್ಮ ವಿಮಾನ ಹೊರಡುವ ಗೇಟ್ ಬಳಿ ಬಂದೆವು.  ಸಾಕಷ್ಟು ಹೊತ್ತು ಕುಳಿತ ನಂತರ ನಮ್ಮ ವಿಮಾನ 1ವರೆ
ಗಂಟೆ ತಡವಾಗಿದೆ ಎಂದು ತಿಳಿದುಬಂತು.  ಜೊತೆಗೆ ಗೇಟ್ ನಂಬರ್ ಸಹ ಬದಲಾಣೆಯಾಗಿತ್ತು.  ಹೊಸ
ಗೇಟ್‍ಗೆ ಸಾಕಷ್ಟು ದೂರ ನಡೆದುಕೊಂಡು ಬಂದೆವು.  ಮಿಮಾನವು 12ರ ಹೊತ್ತಿಗೆ ಹೊರಟಿತು.  ವಿಮಾನದಲ್ಲಿ
ಆಹಾರ ಸರಬರಾಜು ಅಯಿತು.  ಸುಮಾರು 3ವರೆ ಗಂಟೆಗಳ ಪ್ರಯಾಣ.  ಮದ್ಯರಾತ್ರೆ 2 ಗಂಟಗೆ ಶೀಲಂಕಾ
"ಭಂಢಾರ ನಾಯಕ" ಎರ್ ಪೋರ್ಟ್‍ಗೆ ಬಂದು ತಲುಪಿದೆವು.  ಅಲ್ಲಿ ನಮಗಾಗಿ ಕಾಯುತ್ತಿದ್ದ ಎರ್ ಲೈನ್ ಬಸ್ಸ್
ನಿಂದ "ನೆಗ್ಯಾಂಬೋ" ದಲ್ಲಿರುವ ಎರ್ ಲೈನ್ ಹೋಟೆಲ್ಗೆ ಬಂದು ವಿಶ್ರಾಂತಿ ಪಡೆದೆವು.

          ಈ ದಿನ 18ನೇ ಡಿಸೆಂಬರ್ 2015, ನಮ್ಮ ಪ್ರವಾಸದ ಕೊನೆಯ ದಿನ.  ನಾವುಗಳು ಶ್ರೀಲಂಕಾದ
ಏರ್ ಲೈನ್‍ನ ಆತಿಥಿಗಳು.  ನಮ್ಮ ಎಲ್ಲಾ ಪ್ರಯಾಣವು  ಶ್ರೀಲಂಕಾದ ಎರ್ ಲೈನ್ ಅದ್ದರಿಂದ ಎರ್ ಲೈನ್
ನವರು, ಎಲ್ಲಾ ಸೌಕರ್ಯವನ್ನು ಉಚಿತವಾಗಿ ಕೊಟ್ಟಿದ್ದಾರೆ.  ನಾವುಗಳು ಬೆಳಿಗ್ಗೆ ಲೇಟಾಗಿ ಎದ್ದು, ಸ್ನಾನದಿಗಳನ್ನು
ಮುಗಿಸಿ, ಉಪಹಾರ ಮಾಡಿಕೊಂಡು, ಬೀಚಿಗೆ ಹೊದೆವು.  ಹೋಟೆಲ್ ಹೆಸರು "ಬೀಚ್ ಹೋಟೆಲ್".  ಅಂದು
ನಾವು ಕೊಲೊಂಬೊ ವಿಹಾರಕ್ಕೆ ಹೊಗಬೇಕಾಗಿತ್ತು.  ಅದರೆ ಅಂದು ಬಂದ್ ಇದ್ದ ಪ್ರಯುಕ್ತ ನಾವುಗಳು
ಹೋಗಲಿಲ್ಲ.  ಅದರೆ ಸುತ್ತಮುತ್ತ ಇದ್ದ ಉದ್ಯಾನವನದಲ್ಲಿ ಬೀಚ್‍ನಲ್ಲಿ ಸಂತೋಷವಾಗಿ ಕಾಲ ಕಳೆದೆವು.
ಸುಮರು 1 ಗಂಟೆಗೆ ಭೋಜನ ಮುಗಿಸಿ, 2 ಗಂಟೆ ಹೊತ್ತಿಗೆ ವಿಮಾನ ನಿಲ್ದಾಣವನ್ನು ಸೇರಲು ಹೊರೆಟೆವು.
ಅಲ್ಲಿ ಔಪಚಾರಿಕತೆಯನ್ನು ಮುಗಿಸಿ, ಬೆಂಗಳೂರಿಗೆ ಹೊರಡುವ ಮಿಮಾನವನ್ನು ಏರಿ ಸುಮಾರು 6 ಮುಕ್ಕಾಲುಗೆ
ಬೆಂಗಳೂರು ಕಡೆಗೆ ಪ್ರಯಾಣಿಸಿದೆವು.  ವಿಮಾನದಲ್ಲಿ ಉಪಹಾರವಾಯಿತು.  7.55 ಕ್ಕೆ ಕೆಂಪೆಗೌಡ ವಿಮಾನ
ನಿಲ್ದಾಣಕ್ಕೆ ಬಂದೆವು.  ಔಪಚಾರಿಕತೆಯನ್ನು ಮುಗಿಸಿಕೊಂಡು, ಲಗೇಜ್ ತೆಗೆದುಕೊಂಡು, ಹೊರಗೆ ಬರುವ
ಹೊತ್ತಿಗೆ 8.45 ಆಯಿತು.  ಸಹ ಪ್ರಯಾಣಿಕರಿಗೆ ವಿದಾಯ ಹೇಳಿ, ನಾವು ಯಲಹಂಕಕ್ಕೆ ಟ್ಯಾಕ್ಸಿಮಾಡಿಕೊಂಡು
ರಾತ್ರೆ 9.20 ಕ್ಕೆ ಮನೆ ತಲುಪಿದೆವು.  ಭಗವಂತನ ದಯೆಯಿಂದ ನಮ್ಮ ಪ್ರಯಾಣ ಉದ್ದಕ್ಕೂ ನಮ್ಮ ಆರೋಗ್ಯ
ಚೆನ್ನಾಗಿತ್ತು.  ಯಾವುದೇ ತೊಂದರೆ ಅಗಲಿಲ್ಲ.

          ಈಗ ವಿದೇಶ ಪ್ರವಾಸ ಮಾಡಲು ಬೇಕಾದಷ್ಟು ಟ್ರಾವಲ್ ಏಜೆಂಟ್‍ಗಳು, ಕಂಪೆನಿಗಳು, ಇವೆ.
ನಮ್ಮ ಶಕ್ತಿ ಹಾಗು ಬಜೆಟ್ ಅನುಸಾರ ಹೊಗಬಹುದು.  ಎಲ್ಲವನ್ನು ಕಂಪೇರ್ ಮಾಡಿಕೊಂಡು ಯಾವುದರಲ್ಲಿ
ಅನುಕೂಲವೊ ಅದರಲ್ಲಿ ಹೊಗಬಹುದು.  60ತ್ತ ಕ್ಕಿಂತ ಹೆಚ್ಚು ವಯಸ್ಸಿನವರು ಕೆಲವು ಕಡೆ ಹೊಗಲು
ಅಗುವುದಿಲ್ಲ.  ಅಂಡರ್ ವಾಟರ್, ಪ್ಯಾರ ಸೇಲಿಂಗ್ ಮೊದಲದವುಗಳು.  ಕೆಲವುದನ್ನು ಬೇರೆ ದೇಶಗಳಲ್ಲಿ
ನೋಡಿರುತ್ತೆವೆ.  ಅದಕೊಸ್ಕರ ಯಾವುದರಲ್ಲಿ ನಮಗೆ ಅಫ್‍ಶನ್ ಇರುತ್ತೊ ಅಲ್ಲಿ ಹೊದರೆ ಸರಿ.  ಕೆಲವು
ಕಡೆ ನಮಗೆ ಅಗುತ್ತೊ ಇಲ್ಲವೊ ಎಲ್ಲವನ್ನು ಕಡ್ಡಾಯಮಾಡಿ ಹಣವನ್ನು ಮೊದಲೆ ತೆಗೆದುಕೊಳ್ಳುತ್ತಾರೆ.
ಎಲ್ಲಾವನ್ನು ವಿಚಾರಿಸಿ ಹೊಗಬೇಕು.  ಈ ಸಲ ನಾವು "ಆನಂದ ವಿಹಾರಿ" ಟ್ರಾವೆಲ್ಸ್ ಮೂಲಕ ಹೊಗಿದ್ದು.
12 ದಿನ ಪ್ರಯಾಣ.  ಖರ್ಚು 95,000 ರೂ, ಒಬ್ಬರಿಗೆ.  ಎಲ್ಲದೂ ಸೇರಿ. ಪ್ರಯಾಣ ತೃಪ್ತಿ ಕೊಟ್ಟಿತ್ತು ನಮಗೆ.

                           ************************

Sunday, 22 May 2016

ಭಗವಂತನ ಭಯ/ಪಾಪ ಭೀತಿ

      




          ¨sÀUÀªÀAvÀ£À ©üÃw E®èzÀªÀgÀÄ, ¥Á¥À©üÃw E®èzÀªÀgÀÄ
          ªÀiÁqÀĪÀgÀÄ ¥Á¥À PÁAiÀÄðªÀ£ÀÄß,UÀÄ¥ÀÛ£ÁV CzÉà ¸ÀjAiÀÄAzÀÄ
          ªÉÄgÉAiÀÄĪÀgÀÄ ClÖºÁ¸À¢AzÀ AiÀiÁjUÀÆ EzÀÄ w½AiÀÄzÉAzÀÄ
         
          ¨sÀUÀªÀAvÀ£À £ÀA©zÀªÀgÀÄ,¥Á¥À ©üÃw EgÀĪÀgÀÄ
          C£ÀĨsÀ«¸ÀĪÀgÀÄ EAvÀªÀgÀ PÁlªÀ£ÀÄß
          zÀÄBR £ÀÄAUÀÆvÁÛ UÀÄ¥ÁÛªÁV AiÀiÁjUÀÆ ºÉüÀzÉ
  
          ¸ÀªÀiÁzsÁ£À ªÀiÁqÀĪÀgÀÄ E£ÉƧâgÀÄ,vÀqÀPÉÆÃ ¸À»¹PÉÆÃ
          §gÀĪÀÅzÉÆAzÀÄ PÁ®ªÉÇAzÀÄ ¨sÀUÀªÀAvÀ£ÀÄ PÉʨÉqÉÆ®èªÉAzÀÄ

          EzÀÄÝzÀݣɮè PÀ¼ÉzÀÄPÉÆAqÀÄ PÉÊ JwÛ CPÁ±À £ÉÆÃqÀĪÀ
          ªÉÆzÀ®Ä JZÀÑgÀ¢AzÀgÀ ¨ÉÃPÀÄ JAzÀÆ.


         
               

ಮದುವೆಗೆ ಮೊದಲು/ನಂತರ

                                                     

ಮದುವೆ ಗೊತ್ತಗುವರೆಗೆ ಅನ್ನುವರು,ಹುಡುಗಿ ಬಹಳ ಒಳ್ಳೆಯವಳುನೋಡಮ್ಮ ದೇವರಂತವರು, ಸೇವೆಯನ್ನು ಮಾಡು ಅನವರತ. ಮಾಡು ಎಲ್ಲಾ ಕೆಲಸವನ್ನು,ಒತ್ತು ಹಿರಿಯರ ಪಾದವನ್ನು,
ಅಳಿಯನಾಗುವವನಿಗೆ ಹೇಳುವರು,ಮಗಳು ಮಾಡದೆದ್ದರೆ,ಯೋಚಿಸಬೇಡ ಹೊಡೆಯುವುದನ್ನು.





            ಮದುವೆಯಾದ ಮೇಲೆ, ಮಾವನ ಮನೆಗೆ ಮಗಳು ಹೊಕ್ಕನಂತರ, ಅನ್ನುವರು ಬಿತ್ತು
ಬಲೆಗೆ ಬಕರಗಳುನೋಡಮ್ಮ ನಾನು ಇರುವೆ ಯವಾಗಲು,ಇರು ಅಲ್ಲೆ ಸಂತೋಷವಾಗಿಮನೆಯಲ್ಲೆ ಇದ್ದು
ಕೊಡು ಕೊಡಬಾರದ ಕಾಟವನ್ನುಬೀಡ ಬೇಡ ಮಾತ್ರ ಮನೆಯನ್ನು, ಒಳ್ಳೆ "ವಿಲ್ಲಾ" ವನ್ನುಬಿಟ್ಟುಬಿಡು
ಕೆಲಸವನ್ನು, ಒತ್ತು ಕುತ್ತಿಗೆಯನ್ನುಹೊರ ಪ್ರಪಂಚಕ್ಕೆ ತಿಳಿಯದಂತೆ ಕೊಡು ಕಾಟವನ್ನು,ಅಡು ನಾಟಕವನ್ನು.
ಈಗ ಕಾಲ ನಮ್ಮದುಮನೆ ನಮ್ಮದಾಗಿಸಲು ಹಾಕು ಯಾವ ಅಪರಾಧವನ್ನಾದರುಹೊರಕ್ಕೆ ಹಾಕು ಒಳಕ್ಕೆ
ನಮ್ಮನೆಲ್ಲಾ ಸೇರಿಸುಬಲೆ ಬೀಸಿ ಗಂಡನನ್ನು ನಿನ್ನವಾಳಾಗಿಸುಎಲ್ಲಿರುವನು ದೇವರು ? ಎಲ್ಲಿರುವುದು
ಪಾಪ ಪುಣ್ಯಯಾರದೋ ದುಡ್ಡು ಏಲ್ಲಾಮ್ಮನ ಜಾತ್ರೆ ಯಲ್ಲವೆಋಷಿ ಮುನಿಗಳೇ ಎನೇನೋ ಮಾಡಿದರು.
ಸಾವೆರ ಸುಳ್ಳು ಹೇಳಿ ಮದುವೆ ಮಾಡಿದು ಅಯಿತುಎಲ್ಲಿರುವನು ದೇವರು, ಕೂತಿರುವನು ಕಲ್ಲಾಗಿ.
ಎಲ್ಲಿರುವುದು ಪಾಪ ಪುಣ್ಯನೀನು ಅಮ್ಮ ಅಪ್ಪನ ಮಗಳಾದರೆ ನಮ್ಮ ಯೋಜನೆ ಕೈಗೂಡಲು ಹಾಕು ಕೈಯನ್ನು
ದೋಚು ಅವರ ಅಸ್ತಿಯನ್ನು.ಮೊದಲು/ನಂತರ


ಇಂಟರ್ ನಟ್ ವ್ಯಾಪಾರ



           J£ÀÄ ºÉüÀ° DzsÀĤPÀ ¯ÉÆÃPÀzÀ CzsÀÄÞvÀ ªÁå¥ÁgÀ
           ªÀÄ£ÉAiÀįÉè PÀĽvÀÄPÉÆAqÀÄ ªÀiÁqÀ§ºÀÄzÀÄ £Élß°è ªÁå¥ÁgÀ
           ºÉtÄÚ, ºÉÆ£ÀÄß, ªÀÄtÄÚ, VtÄÚ,ºÀtÄß,
           ¦Ã¸Áì, ¦Ã¸ÁÛ, ¸ÁåPïì, ¸ÀªÉƸÀ, ªÀĹÛ, ªÉÆÃdÄ,
           £Á¬Ä, PÀÄzÀÄgÉ, ºÀ¸ÀÄ, ¨ÉPÀÄÌ,
           CQÌ,  ºÀQÌ, §mÉÖ, ¥ÀĸÀÛPÀ,NºÉÆÃºÉÆÃ,ºÉÆÃ ºÉÆÃ
           ¸ÀÄAzÀgÀ, Cw ¸ÀÄAzÀgÀ ªÀÄ£ÉAiÀÄ ªÁå¥ÁgÀ
           ªÀÄ£É ªÀÄ£ÉUÉ ºÉÆV «ZÁj¸ÀĪÀÅ¢¯Áè
           £ÀªÀÄäzÉ £ÀªÀÄä ¸ÀìAvÀ ªÁå¥ÁgÀ

           ªÀÄ£ÉUÉ ¨ÉÃPÉAzÀÄ PÉÆAqɣɯAzÀÄ ¨ÉPÀÌ£ÀÄß
           CzÀgÀ ¦½ ¦½ PÀtÂÚUÉ ªÀÄÆVUÉ, zsÀé¤UÉ
           ªÀÄgÀļÀzɪÀÅ £ÁªÀÅ ªÀÄÆªÀgÀÄ
           CºÁ! EAvÀºÀ ¨ÉPÀÄÌ ¨ÉÃgÉÆÃA¢¯Áè
           JµÀÆÖ ZÀÄgÀÄPÀÄ,ªÀÄ£ÉAiÀĪÀgÀ£É¯Áè
           CPÀæ«Ä¹vÀÄ vÀ£Àß CPÀµÀðuÉAiÀİè
           ¸ÉÆÃvÀÄ ±ÀgÀuÁV vÀ¯ÉAiÀÄ ªÉÄÃ¯É PÀÄj¹zɪÀÅ
           ¢£À PÀ¼ÉzÀAvÉ PÉÆ©âvÀÄÛ ¨ÉPÀÄÌ
           E£ÀÄß AiÀiÁgÀÄ F ªÀÄ£ÉUÉ NqÀw
           £Á£É vÁ£É CAzÀÄPÉÆAqÀÄ,ªÀiË£ÀªÁVzÀÄÝ
           ªÉÄ®è£É C£ÀÄßwÛvÀÄÛ «ÄAiÀiÁªï «ÄAiÀiÁªï
           CAvÀ ¹» zsÀé¤AiÀİè
           ZÉ£ÁßUÉ J¯ÁègÀ ¸ÀÄvÀÄÛ ¸ÀÄvÁÛ ¸ÀÄwÛ
           J¯ÁègÀ ªÀÄ£ÀªÀ UÉzÀÄÝPÉÆAqÀÄ UÀªÀðªÉ¸ÀÄwÛvÀÄÛ

           §gÀÄvÁ §gÀÄvÁ CzÀgÀ Cl Cw C¬ÄvÀÄ
           PÀzÀÄÝ ªÀÄÄaÑ w£ÀÄߪÀÅzÀÄ,AiÀiÁjUÀÆ w½AiÉÆ¯ÁèAvÀ
           HlPÉÌ PÀÆgÀĪÀ ºÀAUÉ E¯Áè
           £ÉÆÃlPÉÌ ºÉzÀj ¸ÁAiÀÄÄwÛzÉÝ
           AiÀiÁvÀPÉÌ C¬ÄvÀÄ EvÀgÀ
           PËvÀÄPÀ J¤¹vÀÄ vÀgÀ vÀgÀ