ತಿರುವಾಣ್ಣಮಲೈ_ ಚಿದಂಬರಂ_ಕುಂಭಕೋಣಂ_ ನವಗ್ರಹ ದೇವಸ್ಥಾನಗಳು _ತಂಜಾವೂರು
ರಾಮೇಶ್ವರಂ - ಮಧುüರೈ - ಕನ್ಯಾಕುಮಾರಿ _ ಸುಚೀದ್ರಂ _ ತ್ರೀವೇಂಡ್ರಂ _ ಕಾಲಡಿ
ಗುರುವಾಯುರು _ ಕೋವಲಂ ಬೇಚ್ _ ಅಲಾಪಿ.
******
23-1-2015, ಶುಕ್ರವಾರ, ಬೆಳಿಗ್ಗೆ 4.30 ಕ್ಕೆ, ಒಲಾ ಕ್ಯಾಬ್ ಮಾಡಿಕೊಂಡು, ಹಂಸಾ ಟ್ರಾವೆಲ್
ಆಫೀಸ್ ತಲುಪಿದೆವು. ಬಸ್ಸಿಗೆ ಪೂಜೆ ಮಾಡಿ, ಅರತಿ ಎತ್ತಿ, 6.15 ಕ್ಕೆ ಬೆಂಗಳೂರು ಬಿಟ್ಟು ಪ್ರವಾಸ ಆರಂಭ.
8.15 ಕ್ಕೆ ಹೊಸೂರಿನಲ್ಲಿ, ತಿಂಡಿ ಉಪ್ಪಿಟ್ಟು, ಕೇಸರಿಬಾತ್ ತಿಂದು, ಪ್ರಯಾಣ ಮುಂದುವರಿಕೆ. 11.15ಕ್ಕೆ
ತಿರುವಾಣ್ಣಾಮಲೈ ತಲುಪಿದ್ದು.
ತಮಿಳು ನಾಡು ದಕ್ಷಿಣ ಭಾರತದ ತುದಿಯಲ್ಲಿರುವ ರಾಜ್ಯ. 30,000 ಕ್ಕಿಂತ ಹೆಚ್ಚು ದೇವಸ್ಥಾನಗಳು ಇವೆ.ದ್ರಾವಿಡ ಜನರ ವಾಸ. ಬೇರೇದೆ ಬಾಷೆ ತಮಿಳು. ಪಲ್ಲವರು, ಚೋಳರು, ಪಾಂಡ್ಯರು, ಸ್ವಲ್ಪ
ಕಾಕ ಮರಾಟು ಅಳೀದ ರಾಜ್ಯ. ಕಾಲ ನಂತರ, ಯುರೋಪಿಯನ್ನರು, ಪೋಚುಗೀಸರು, ಬ್ರಿಟಿರ್ಷ, ಡಚ್,ಫ್ರೇಂಚ್
ರು ಅಲಿದರು. ನಂತರ ಸ್ವತಂತ್ರವಾಯಿತು.
ತಮಿಳುನಾಡಿನಲ್ಲಿ, ವಿಷ್ಣು, ಹಾಗು ಶಿವನ ದೇವಾಲಯಗಳು ತುಂಬಿದೆ. ಕಾರ್ತಿಕೇಯ, ಗಣೇಶ
ಅರಾಧಕರು, ಶಿವನನ್ನು 5 ತತ್ವದಿಂದ ಪೂಜಿಸುತ್ತಾರೆ. ಚಿಂದಂಬರದಲ್ಲಿ ಅಕಾಶ, ನೀರಿನ ತತ್ವ ಶ್ರೀರಂಗ (ಜಂಬು
ಕೇಶ್ವರ), ಅಗ್ನಿ ತತ್ವ ತಿರುವಣ್ಣಾಮಲೈ, ಭೂಮಿ ತತ್ನ ಕಾಂಚಿಪುರ, ಹಾಗು ವಾಯು ತತ್ವ ಶ್ರೀ ಕಾಳಹಸ್ತಿ.(ಅಂದ್ರ)
ಬ್ರಹ್ಮ ಹಾಗು ವಿಷ್ಣು, ಶಿವನ ಆದಿ ಹಾಗು ಅಂತ್ಯವನ್ನು ಪರೀಕ್ಷಿಸಲು ನೋಡ ಬಯಸಿದಾಗ, ಶಿವನು
ಜ್ಯೋತಿ ರೂಪದಲ್ಲದ್ದ ಸ್ಥಳ. ಅಣ್ಣಾಲ್-ಶಿವ-ಮಲೈ ಹೆಸರು. ನಂತರ ಅಣ್ಣಾಮಲೈ,ತಿರುವಣ್ಣಾಮಲೈ ಅಯಿತು.
ಇದನ್ನು ಅರುಣಾಚಲಮಲೈ ಅನ್ನುತ್ತಾರೆ. ಅರುಣಾ ಬಣ್ಣ. ಸೂರ್ಯನು ಮೂಡಲು ಮೊದಲು ಬರುವ ಕೆಂಪು
ಬಣ್ಣ. ಬೆಂಕಿಯ ಬೆಟ್ಟ. ಶಿವನು ಬೆಂಕಿಯ ರೂಪ(ಜ್ಯೋತಿ)ದಲ್ಲಿ ಇದ್ದುದರಿಂದ ಅರುಣಗಿರಿ, ಸೋನಗಿರಿ, ಸೋನ
ಚಲಮ್ ಅಂತನು ಅನ್ನುತ್ತಾರೆ. ಇದು ಶಿವಲೋಕ ಹಾಗು ಮುಕ್ತಿಗೆ ದಾರಿ ಕೊಡುತ್ತೆ ಅಂತ ನಂಬಿಕೆ. ಈ ಬೆಟ್ಟ
ದಲ್ಲೆ, ವಿಷ್ಣು ಹಾಗು ಬ್ರಹನ ಕೋರಿಕೆಯ ಮೇಲೆ, ಶಿವ ತನ್ನ ಅನಂತ ಲಿಂಗ ತೋರಿ, ನಂತರ ಲಿಂಗದ ರೂಪ
ದಲ್ಲಿ ಇರುವ ಸ್ಥಳ.
ವಿಜಯ ನಗರದ ವಂಶಜರು ಕಟ್ಟಿಸಿದ 217 ಅಡಿ ರಾಜ ಗೋಪುರ ಧೀಮಂತವಾಗಿದೆ. 9 ಉದ್ದ
ವಾದ ವಿಮಾನ ಗೋಪುರವಿದೆ. ಅದರಲ್ಲಿ ಒಂದು 157 ಫೀಟ್, ಇನ್ನೊಂದು 171 ಫೀಟ್, ಮಗದೊಂದು
144 ಫೀಟ್, ಹಾಗು ಕಡಿಮೆ ಎತ್ತರದ 70 ಫೀಟ್ ಇದೆ. ಅರುಳಗಿರಿ ಎಂಬ ಶುವಭಕ್ತ ಗಿಳಿಯ ರೂಪದಲ್ಲಿ,
ದೇವಸ್ಥಾನದ ಗೋಪುರದಲ್ಲಿದ್ದಾರೆ.
ಅರುಣಾಚಲೇಶ್ವರ ಹಾಗು ಪಾರ್ವತಿ ದೇವಿಯ ದರ್ಶನದ ನಂತರ, 63 ನಯನಾರ್, ಶಿವನ ಆರಾಧ
ಕಲು, ಎಲ್ಲಾ ಶಿವನ ಮಂದಿರದಲ್ಲಿ ಕಾಣುವ ಸಾಮನ್ಯ ನೋಟ. ಇಲ್ಲಿ ಕಾರ್ತಿಕ ದೀಪೋತ್ವವ ನಡೆಯುತ್ತೆ. 365
ಮೀಟರ್ ಉದ್ದದ ಬಟ್ಟೆಯನ್ನು, 16,000 ತುಪ್ಪದಲ್ಲಿ ನೆನಸಿ ಅರುಣ ಜ್ಯೋತಿಯನ್ನು, ಅರುಣಾಚಲಗಿರಿಯ ಮೇಲೆ
ಉರಿಸುವುದಯ ವಿಶೇಷ. ತಿರುವಣ್ಣಾಮಲೈ ದೇವರ ದರ್ಶನದ ನಂತೆರ, ನಾವುಗಳು, "ರಮಾಣಾಶ್ರಮಕ್ಕೆ" ಬೇಟಿ.
ಅಲ್ಲಯ ಕ್ಯಾಂಪಸ್ಸ್‍ನಲ್ಲಿ, ಬಿಸಿಬೇಳೆಬಾತ್ ಹಾಗು ಮೊಸರನ್ನ ಊಟ. 2 ಗಂಟೆಗೆ "ಮಾತೃ ಭೂತೆಶ್ವರ" (ರಮಣ
ಮಹರ್ಷಿಯರ ತಾಯಿ ಸಮಾಧಿ), ಹಾಗು ರಮಣ ಮಹರ್ಣಿಯವರ ಸಮಾದಿ ದರ್ಶನ. ನವಿಲುಗಳ ದರ್ಶನ
ವಾಯಿತು. ಆಶ್ರಮದಲ್ಲಿ, ಸುಂದರವಾದ, ಪ್ರಶಾಂತ, ಹಸಿರು ವಾತಾವರಣ, ಮನಸ್ಸಿಗೆ ಆಹ್ಲಾದ ತಂದುಕೊಟ್ಟಿತ್ತು.
ಅಲ್ಲಂದ ನಾವು "ಚಿಮಂಬರಕ್ಕೆ" ಬಂದೆವು. ಅಲ್ಲಿಯ ಹೋಟೆಲ್ "ಆರುದ್ರ ರೆಸಿಡೆಸ್ಸಿ"ಯಲ್ಲಿ,
ಕಾಫಿ ಹಾಗು ಸ್ಯಾಂಕ್ ಸೇವನೆಯ ನಂತರ ಫ್ರೇಶ್‍ಅಪ್ ಅಗಿ ದೇವಸ್ಥಾನಕ್ಕೆ ಬೇಟಿ. ದೇವಸ್ಥಾನದ ಕಾಪ್ಲೆಸ್ಕ್
ಬಹಳ ವಿಶಾಲ ವಾಗಿದೆ. ತಮಿಳಿನ ಶೈವ ಗುರುಗಳ ಆರಾಧನ ಧೈವ. ಅವರುಗಳು ಚಿದಂಬರನನ್ನು ಹಾಡಿ ಹೊಗಳಿದ್ದಾರೆ. ನಾಲ್ಕು ದ್ವಾರದಲ್ಲಿ ಅವರ ಪ್ರತಿಮೆ ಇದೆ. ದಕ್ಷಿಣದಲ್ಲಿ "ಸಾಂಬನ್ ದರ್", ಪಚ್ಛಿಮದಲ್ಲಿ
""ಅಪ್ಪಾರ್", ಉತ್ತರದಲ್ಲಿ "ಸಂದಾರಾರ್", ಹಾಗು ಪೂರ್ವದಲ್ಲಿ"ಮಾಣಿಕ್ಕಾ ವಕ್ಕಾರ್". ತಿರು ಚಿತಾಕೂಟ ಅಂತ
ಕರೆಯುತ್ತಾರೆ. ಆದಿ ಶಂಕರಾರ್ಚಾರು ಸ್ಪಟಿಕ ಲಿಂಗವನ್ನು ಇಲ್ಲಿ ಕೊಟ್ಟಿರುತ್ತಾರೆ. ಈಗಲೂ ಅದರ ಪೂಜೆ ನಡೆ
ಯುತ್ತೆ. ಚೋಳರು, ಪಾಂಡ್ಯರು, ನಮತರ ವಿಜಯನಗರದ ಕೃಷ್ಣದೇವರಾಯ ದೇವಸ್ಥಾನ ಅಭಿವೃದ್ದಿಗೊಳಿಸಿರು
ತ್ತಾರೆ. 18ನೇ ಶತಮಾನದಲ್ಲಿ ಬ್ರಿಟಿಷ್ ಜನರಲ್ ಮೈಸೂರ್ ರಾಜರ ಈದೆತನ ಇದ್ದಾಗ, ಈ ಮೂರ್ತಿಯನ್ನು
ಅಪಹರಿಸಲು ಪ್ರಯತ್ನಿಸಿದ್ದರು. ಆಗ ಅ ಮೂರ್ತಿಯನ್ನು, ತಿರುವಣೂರ್ ತ್ಯಾಗರಾಜ ಮಂದಿರದಲ್ಲಿ ಸ್ವಲ್ಪಕಾಲ
ಇಟ್ಟಿದ್ದರು. ಚಿದಂಬರ ನಟರಾಜನು ಅಪ್ಪಟ ಬಂಗಾರ ಪ್ರತಿಮೆ. ಭಗವಂತದ ಅರತಿ ದರ್ಶನ ವಾಯಿತು.
ಚಿದಂಬರ ದರ್ಶನ "ಆಕಾಶ ತತ್ವ" ಅನಾವರಣ. ಬಂಗಾರದ ಬಿಲ್ವ ದಳದ ಮಾಲೆಯ ದರ್ಶನ. ಶಿವನ ಆಕಾಶ ತತ್ವ
ದ ಪರಿಚಯ. ಮುತ್ತುಸ್ವಾಮಿ ದಿಕ್ಷಿತರು, "ಆನಂದ ನಟನ ಪ್ರಕಾಶನಮ", ರಚಿಸಿ ಹಾಡಿ ಹೊಗಳಿದ್ದಾರೆ. ಚಿದಂಬರ
ನಟನದಲ್ಲಿ ಈಶ್ವರನು ತನ್ನ ಕಾಲನ್ನು ತಲೆಯ ಮಟ್ಟಕ್ಕೆ ಎತ್ತಿ, ಪುರಾಣ ಕಥೆಯ ಆಧಾರದ ಮೇಲೆ ಅಲ್ಲಿಯ ಹೆಣ್ಣು ರಾಕ್ಷಸಿಯನ್ನು ನೃತ್ಯ ಸ್ವರ್ದೆಯಲ್ಲಿ, ಸೋಲಿಸಿದ ಕಥೆಯನ್ನು ಬಿತ್ತಿಸಿದ್ದಾರೆ. ದರ್ಶನ ನಂತರ ಹೋಟೆಲ್
ವಾಪಸ್ಸು, ವಿಶ್ರಾಂತಿ.
24-1-2015 ಶನಿವಾರ. ನವಗ್ರಹ ದೇವಸ್ಥಾನಗಳ ದರ್ಶನ ಆರಂಭ. ಪ್ರತಿಯೂಂದು ದೇವ
ಸ್ಥಾನದಲ್ಲಿ, ಮೂಲದಲ್ಲಿ ಈಶ್ವರ ಲಿಂಗವು ಇದ್ದು, ಅದಕ್ಕೊಂದು ವಿಧ ವಿಧ ಹೆಸರು ಕೊಟ್ಟಿರುತ್ತಾರೆ. ಬೆಳಿಗ್ಗೆ
4 ಕ್ಕೆ ತಯಾರು. 6 ಗಂಟೆಗೆ "ತಿರುಜೆಂದೂರು" ಮಂಗಳ ಗ್ರಹ ದೇವಸ್ಥಾನಕ್ಕೆ ಬೇಟಿ. ಇಲ್ಲಿ ಈಶ್ವರ "ವೈದೈ
ಶ್ವರ". ಶವ ಧ್ಯಾವದಲ್ಲಿ ಇದ್ದಾಗ, ಅವನ ಮೂರನೆ ಕಣ್ಣಿನ ಹನಿ ಬಿದ್ದು ಅದರಿಂದ ಆಂಗಾರಕ" ಹುಟ್ಟಿದ ಅಂತ
ಪುರಾಣ ಕಥೆ. ಆಂಗಾರಕ ದೋಷದ ನಿವಾರಣೆಯ ಪೊಜೆ ಇಲ್ಲಿ ನಡೆಯುತ್ತೆ. ಮೇಷ, ವೃಶ್ಚಿಕದ ಅದಿಪತಿ.
ಬಣ್ಣ ಕೆಂಪು, ವಾಹನ ಟಗರು, ಧಾನ್ಯ ತೊಗರಿ, ಕೆಂಪು ಕಣಿಗಲರ ಹೂವು (ಕರವೀರ ಪುಪ್ಪ),ಸ್ಪಟಿಕ ದೃವ್ಯ.
ಅಲ್ಲಿಂದ 10 ಕಿ.ಮೀ. ದೂರಿರುವ ವನಗಿರಿ ಎಂಬಲ್ಲಿ "ಕೇತು" ದೇವಸ್ಥಾನವಿದೆ. ನಾಗ ತಲೆ
ಅಸುರ ದೇವ ಇಲ್ಲಿರುವುದು. "ನಾಗನಾಥ ಸ್ವಾಮಿ" ಇಲ್ಲಯ ಲಿಂಗ. ವಾಯುವ್ಯ ದಿಕ್ಕು. ಆದಿದೇವ ಚಿತ್ರಗುಪ್ತ
ಹಾಗು ಬ್ರಹ್ಮ. ಬಣ್ಣ ಕೆಂಪು, ಮೀನಾ ರಾಶಿಯ ಅಧಿಪತಿ. ವಾಹನ ಆಡು. ಧಾನ್ಯ ಹುರಳಿ. ವೈಡೂರ್ಯ
ಹರಳು.
ಅಲ್ಲಿಂದ ನಾವು ಬುಧ ಗ್ರಹ ಇರುವ ಸ್ಥಳ "ತಿರುವೆಂಗಡೂರು", ದೇವಸ್ಥಾನಕ್ಕೆ ಹೊದೆವು.
ಮಿಥುನ ಹಾಗು ಕನ್ಯಾ ರಾಶಿಯ ಅಧಿಪತಿ. ಈಶಾನ್ಯಕ್ಕೆ ಮುಖ ಮಾಡಿದೆ. ಬಣ್ಣ ತಿಳಿ ಹಸಿರು. ಅಧಿದೇವತೆ
ವಿಷ್ಣು ಹಾಗು ಪಾರ್ವತಿ. ಕುದುರೆ ವಾಹನ. ಧಾನ್ಯ ಹೆಸರು ಕಾಳು.
ಮುಂದೆ ತಿರುನಲ್ಲೂರು ನಲ್ಲಿ "ಶನೈಶ್ವರ" ಸ್ವಾಮಿ ದೇವಸ್ಥಾನಕ್ಕೆ ಬಂದ್ವಿ. ಶನಿಯ ಸ್ಥಳ. ನಳನಿಗೆ
ಶುಭವಾದ ಸ್ಥಳ. 200 ವಿಶೇಷ ದರ್ಶನದ ಟಿಕೇಟ್ ತೆಗೆದುಕೊಂಡು, 4 ಗಂಟೆಗಳ ಕಾಲ ಕ್ಯೂ ನಲ್ಲಿ ನಿಂತು
ಕೊಂಡು, ದೇವರ ದರ್ಶನ. ಶನಿವಾರ ವಾದ್ದರಿಂದ ಬಹಳ ನೂಕು ನುಗ್ಗಲು. ಸುತ್ತಲು ಗೋಡೆಯಲ್ಲಿ, ನಳ
ಚರಿತ್ರೆಯ ಚಿತ್ರಣಗಳು. ಶನಿ ಪ್ರತಿ ರಾಶಿಯಲ್ಲಿ 2 ವರೆ ವರ್ಷ ಇರುತ್ತಾನೆ. ಹಿಂದಿನ ಹಾಗು ಮುಂದಿನ ರಾಶಿ
ಮನೆಯಲ್ಲಿ ಇದ್ದರೆ 7ವರೆ ವರ್ಷ ಶನಿ ದಸೆ ಅನ್ನುತ್ತಾರೆ. 8 ನೇ ಮನೆಯಲ್ಲಿ ಇದ್ದರೆ ಅಷ್ಟಮಿ ಶನಿ ಅನ್ನುತ್ತಾರೆ.
ಈ ಕಾಲ ದಲ್ಲಿ ಶನಿ ಕಾಟ ವಿರುತ್ತೆ. ಒಬ್ಬ ಮನುಷ್ಯನ ಕಾಲದಲ್ಲಿ 7 ವರೆ ಮೂರು ಸಲ ಬರುತ್ತೆ. ಮೊದನೆ
ಯದು "ಮಂಗು ಶನಿ", ಎರಡನೇಯದು "ಪೊಂಗು ಶನಿ", ಮೂರನೆಯದು "ಮರಣಶನಿ" ಅನ್ನುತ್ತಾರೆ. ಕೊಡು
ವವನು ಅವನೇ, ನಾಶ ಮಾಡುವವನು ಅವನೆ. ಮಕರ ಕುಂಭ ರಾಶಿಯ ಓಡೆಯ. ಪಶ್ಛಿಮ ದಿಕ್ಕು. ವಾಹನ ಕಾಗೆ. ಏಳ್ಳು ಧಾನ್ಯ. ಬಟ್ಟೆ ಕಪ್ಪು. ನೀಲ ಹರಳು. ಇಲಿ ಸ್ಥಳ ದರ್ಬೆಯ ಕಾಡಾಗಿದ್ದರಿಂದ "ದರ್ಬಾರಣೈಶ್ವರ"
ಲಿಂಗ ಅಂತ ಹೆಸರು. ದರ್ಶನದ ನಂತರ ಅಟೋ ಮಾಡಿಕೊಂಡು, ಬಸ್ಸಿನ ಹತ್ತಿರ ಬಂದು, ತೋಟದ ಮನೆಯಲ್ಲಿ
ಅನ್ನ, ಹುಳಿ, ಸಾರು, ಮೊಸರು ಊಟ.
ಊಟದ ನಂತರ ಹೊಗಿದ್ದು "ಸೂರ್ಯ ಕೋವಿಲ್". ಸೂರ್ಯನ ದರ್ಶನ. ಸೂರ್ಯನ ಮುಂದೆ ಗುರು
ವಿನ ವಿಗ್ರಹವಿತ್ತು. ಕುಂಭಕೊಣದಿಂದ 12 ಕಿ.ಮಿ.ದೂರದಲ್ಲಿತ್ತು. ಉಷ, ಪ್ರತ್ಯೂಷ ಹೆಂಡತಿಯರು. ಇಲ್ಲಿರುವ ಲಿಂಗ ದೇವ "ಪೂಣ್ವರತೇಶ್ವರಾರ್" ಹಾಗು "ಮಂಗಳ ನಾಯಕಿ". ಸೀಂಹ ರಾಶಿಯ ದೊರೆ. ನವಗ್ರಹದಲ್ಲಿ ಮದ್ಯೆ
ಭಾಗ. ಬಣ್ಣ ಕೆಂಪು. ವಾಹನ 7 ಕುದುರೆಯ ರಥ. ಧಾನ್ಯ ಗೋಧಿ. ತಾವರೆ ಹೂವು. ರೂಭಿ ಹರಳು.
ಅಲ್ಲಿಂದ ಶುಕ್ರಗ್ರಹ ದೇವಸ್ಥಾನಕ್ಕೆ ಭೇಟಿ. ದೇವಾಲಯದ ಲಿಂಗ "ಅಗ್ನೀಶ್ವರ" ಮತ್ತು "ಈಶ್ವರಿ".
ವೃಷಭ ಹಾಗು ತುಲಾ ರಾಶಿಗಳ ದೊರೆ. ಪೂರ್ವ ದಿಕ್ಕು. ಬಿಳಿ ಬಣ್ಣ. ಮೊಸುಳೆ ವಾಹನ. ಬಿಳಿ ತಾವರೆ.
ಹರಳು ವಜ್ರ. ಧಾನ್ಯ ಅವರೆ. ಅಲ್ಲಿಂದ ನಾವು ಪ್ರಯಾಣ ಕುಂಭ ಕೊಣಕ್ಕೆ. ರಾತ್ರಿ ಊಟ, ವಿಶ್ರಾಂತಿ"ರಾಯಲ್
ಎಕ್ಸಿಕುಟಿವ್ ಹೋಮ್"ನಲ್ಲಿ ವಸತಿ.
25-1-2015. ಭಾನುವಾರ. ಬೆಳಿಗ್ಗೆ ಗುರು ದರ್ಶನ. ಹಳದಿ ಬಟ್ಟೆ. ಧನಸ್ಸು ಮೀನಾ
ರಾಶಿಯ ಓಡೆಯ. ಧಾನ್ಯ ಕಡಲೆ.
ಬೆಳಿಗ್ಗೆ ಸ್ನಾನ, ಉಪಹಾರದ ನಂತರ ಕುಂಭಕೋಣದ "ಶ್ರೀ ಸಾರಂಗ ಪಾಣಿ, ವಿಷ್ಣು ಹಾಗು ಕುಂಭೆ
ಶ್ವರ" ದೇವಸ್ಥಾನಗಳ ದರ್ಶನ. ಕುಂಭೆಶ್ವರ ಸ್ಥಾಮಿ ಸಾಕ್ಷತ್ ಪರಮೇಶ್ವರನಿಂದ ನಿರ್ಮಿತ ಲಿಂಗ. ಉತ್ತಾರಯಣ
ಕಾಗು ದಕ್ಷಿರಯಣ ಬಾಗಿಲುಘಳು. ಇಲ್ಲಿಯ ಕಲ್ಯಾಣಿಗೆ ಅಮೃತದ ಬಿಂದುಗಳನ್ನು ಶಿವನು ಕೊಟ್ಟಿರುವುದಾಗಿ
ನಂಬಿಕೆ. ಈ ಕೊಳದಲ್ಲಿ 12 ವರ್ಷಕ್ಕೆ ಒಮ್ಮೆ ಮೇಳ, "ಮಹಾ ಮಹಮ್" ನಡೆಯುತ್ತೆ. ಕೊಳದ ಒಂದು
ಪಕ್ಕಕ್ಕೆ ಸಾರಂಗಪಾಣಿ, ಇನ್ನೊಂದು ಪಕ್ಕಕ್ಕೆ ಅಖಿಲಾಂಡೇಶ್ವರಿ ದೇವಸ್ಥಾನವಿದೆ. ಅಖಿಲಾಂಡೇಶ್ವರಿ ದೇವಸ್ಥಾನಕ್ಕೆ
ಶ್ರೀ ಶಂಕರಚಾರ್ಯರು ಭೇಟಿನೀಡಿ, ಶ್ರೀ ಚಕ್ರನಿರುವ ಕಿವಿಯ ಓಲೆಯಿಂದ ಅಲಂಕರಿಸಿದ್ದಾರೆ. ಮುತ್ತು ಸ್ವಾಮಿ
ದೀಕ್ಷಿತರು, ತಮ್ಮ ಹಾಡುಗಳ ರಚನೆಯಿಂದ ಹೊಗಳಿದ್ದಾರೆ. ಮಹಾಪ್ರಳಯದ ನಂತರ ಶಿವನಲ್ಲಿದ್ದ, ಅಮೃತದ
ಕುಂಭ ಮತ್ತು ಜೀವಿಗಳ ಬೀಜ ಇರುವ ಕುಂಭವು ಭೂಮಿಯನ್ನು ಈ ಸ್ಥಳದಲ್ಲಿ ಮುಟ್ಟಿತ್ತು.
ನಂರತ ಅಲ್ಲಿಂದ ಚಂದ್ರನ ದರ್ಶನಕ್ಕೆ ತಿಂಗಳೂರಿಗೆ ಬಂದೆವು. ಇಲ್ಲಿಯ ಲಿಂಗ "ಕೈಲಾಸಾಂತರ್" ಹಾಗು "ಪೆರಿಯ ನಾಯಕಿ" ದೇವತೆ. ಕಟಕ ರಾಶಿ. ಆಗ್ನೇಯ ದಿಕ್ಕು, ವಾಹನ ಬಿಳಿ ಕುದುರೆ. ಬಣ್ಣ ಬಿಳಿ
ಹರಳು ಮುತ್ತು. ತದ ನಂತರ ರಾಹು ದೇವಸ್ಥಾನಕ್ಕೆ ಹೊದೆವು. ಹಾವಿನ ತಲೆ. ಅಸುರ ದೇಹ. ಧಾನ್ಯ ಉದ್ದು
ಬಣ್ಣ ಕಪ್ಪು. ನೀಲಿ ಸಿಂಹ ವಾಹನ. ಊಟ ಮುಗಿಸಿ ನಂತರ ತಂಜಾವೂರು ಪ್ರಯಾಣ. ಇಲ್ಲಿ ನವಗ್ರಹಗಳನ್ನು
ಸೌರಮಾನ ಪದಗಧತಿಯಂತೆ ಸ್ಥಾಪಿಸಲಾಗಿದೆ.
ತಂಜಾವುರು:- ಪುರಾಣ ಕಥೆಯ ಪ್ರಕಾರ ಹಿಂದೆ ಮಹಾ ರಾಕ್ಷಸ ತಂಜಾನ್ ಅನ್ ಎಂಬ ರಾಕ್ಷಸ
ವಿಷ್ಣು ಹಾಗು ಅನಂದವಲ್ಲಿಯರಿಂದ ಕೊಲ್ಲಲ್‍ಪಟ್ಟು, ಅವನ ಕೊರಿಕೆಯ ಮೇಲೆ ಅವನ ಹೆಸರನ್ನು ಇಡಲಾಗಿದೆ
ಅಂತ ಪ್ರತೀತಿ. ಮಹಾಭಾರತ ಕಾಲದಿಂದ ಇಲ್ಲಿಯವರೆಗೆ ರಾಜ ಮಹರಾಜರಿಂದ ಅಡಳಿತಕ್ಕೆ ಒಳಪಟ್ಟಿದೆ. ಬೃಹತ್
ಬ್ರಹದೀಶ್ವರ ದೇವಸ್ಥಾನ, ರಾಜ ರಾಜೇಂದ್ರ ಚೋಳರಿಂದ ಕಟ್ಟಲ್ಪಟ್ಟಿದೆ. ಸುತ್ತಲು ನಂದಿಗಳು ಕುಳಿತಿರುವ ದೊಡ್ಡ
ಗೋಡೆಗಳು, ಒಳಗೆ ಸುಂದರ ಕೆತ್ತನೆಗಳಿಂದ ಕೊಡಿದ ಸುಂದರ ದೇವಸ್ಥಾನಗಳ ಸಮೂಹ. ಪ್ರವೇಶಿಸುತ್ತಿದ್ದ
ಹಾಗೆ, ಬೃಹತ್ ನೋದಿ ಅಲಂಕೃತವಾಗಿ, ದೊಡ್ಡದಾಗಿದೆ. ನಂತರ ಬೃಹದೀಶ್ವರನ ದೊಡ್ಡ ಲಿಂಗ. 6 ಅಡಿ
ಪೀಠ. 7 ಅಡಿ ಲಿಂಗ 16 ಅಡಿ ಸುತ್ತಾಳತೆ. ದೇವಿಯ ದೇವಸ್ಥಾನ ಬೇರೆಯಾಗೆ ಇದೆ. ಬೃಹನಾಯಕಿ.
ಸುಂದರವಾಗಿದೆ. ಶಿವನಿಗೆ ಸಂಬಂದಪಟ್ಟ ಕಥೆಗಳ ಕೆತ್ತನೆ ಇದೆ. ಕಾರ್ತಿಕೇಯ, ಗಣಪತಿ, ಪಾರ್ವತಿಯ ದರ್ಶನ
ಅಚ್ಚುಕಟ್ಟಾಗಿ ಅಯಿತು. ಈ ಬೃಹತ್ ದೇವಾಲಯ ಕಲ್ಲಿನಲ್ಲೆ ಇದೆ. ಬಹಳ ದೊಡ್ಡ ದೊಡ್ಡ ಕಂಬಗಳನ್ನು
ಹೇಗೆ ತಂದು ಕಟ್ಟಿದರೋ ಎನೋ! ಬಹಳ ಕಲಾತ್ಮಕವಾಗಿ ಇತ್ತು. ನಂತರ ಕಾಫಿ ಕುಡಿದು, ಶ್ರೀರಂಗಂನಲ್ಲಿ
ಹೋಟಲಿಗೆ ಬಂದು ಫ್ರೇಶ್ ಅಪ್ ಅಗಿ ರಂಗನಾಥ ದರ್ಶನಕ್ಕೆ ಹೊರೆಟೆವು.ಹೋಟೆಲ್ "ಪಿಲಿಗ್ರೀಮ್ ಪ್ಯಾಲೇಸ್".
ರಂಗನಾಥ ಮಂದಿರದಲ್ಲಿ, ರೂ.250\- ವಿಶೇಷ ಟಿಕೇಟ್ ತೆಗೆದುಕೊಂಡು ಪ್ರವೇಶ. ಭಾನುವಾರ
ವಾದ್ದರಿಂದ ಬಹಳ ಜನರಿದ್ದರು. ಅಲ್ಲಿ ಅಚಾನಕ್ ನಮ್ಮ ಸ್ನೇಹಿತರು, ಶ್ಯಾಮು ಹಾಗು ಜಯರಾಂ ಕುಟುಂಬದವರ ಬೇಟಿ. ದೇವಸ್ಥಾನದ ಗೋಪುರ ಬಂಗಾರ ಲೇಪಿತ ವಿಮಾನ. ತಿರುಪತಿ ನಂತರ ಇದು ಎರಡನೆ ಸ್ಥಾನ ಪಡೆದ
ಸ್ಥಳ. ದೇವರ ಬಳಿ ಬಹಳ ಆಭರಣಗಳು ಇವೆ. ಸುತ್ತಾಳತೆ 2ವರೆ ಕಿ.ಮಿ. ಬೆಳಗ್ಗಿನ ಜಾವ, ಹಸು ಹಾಗು
ಅನೆಯ ಮುಖ ದರ್ಶನ ಮೊದಲು ಮಾಡಿಸುತ್ತಾರೆ. ರಾಮನುಜ ಸಂಪ್ರಾದಯದಂತೆ ಪೂಜೆ. ರಾಮ, ನರಸಿಂಹ,
ಗರುಢ ಇದೆ. ವೈಕುಂಟ ಏಕಾದಶಿ ವಿಶೇಷ. 7 ಪ್ರಕಾರಗಳು. 21 ಗೋಪುರಗಳು. ಸಾವಿರ ಕಂಬಗಳ
ಹಜಾರವಿದೆ. ಶೇಷಶಯನ ನಾದ ಶ್ರೀ ರಂಗನಾಥನು 21 ಅಡಿ ಉದ್ದ ಪವಡಿಸಿರುತ್ತಾನೆ. ಕಾಲ ಬಳಿ ಶ್ರೀದೇವಿ,
ಭೂದೇವಿ. ದೇವರ ಮುಂದೆ ಉತ್ಸವ ಮೂರ್ತಿ ಇದೆ. ಬ್ರಹ್ಮ, ವಿಷ್ಣು, ಹಾಗು ವಿಭೀಷಣರಿಂದ ಪೂಜೆಗೆ
ಒಳಗಾಗಿದೆ. ಆರತಿಯ ಜ್ಯೋತಿಯ ಮೂಲಕ ದೇವರ ದರ್ಶನ. ಯಾವ ದೇವರ ಹತ್ತಿರ ವಿದ್ಯುತ್ ದೀಪ
ಇರೊಲ್ಲ. ದರ್ಶನ ನಂತರ ಹೋಟೆಲ್ ವಾಪಸ್ಸು, ವಿಶ್ರಾಂತಿ.
26-1-2015, ಸೋಮುವಾರ. ಜಂಬುಕೇಶ್ವರ ಜಲ ತತ್ವ ಲಿಂಗದ ದರ್ಶನ. ಅಮ್ಮ ಪಾರ್ವತಿ
ದರ್ಶನ ವಾಯಿತು. ಪಂಚಭೂತದಲ್ಲಿ ಜಲ ತತ್ವದ ಸ್ಥಳ. ಲಿಂಗದ ಪಾಣಿ ಪೀಠದಲ್ಲಿ ಕಾವೇರಿಯ ನೀರು ಪಸರಿಸುತ್ತಿರುತ್ತೆ. ಸ್ಥಳ ಪರಾಣದ ಪ್ರಕಾರ, ಒಂದು ಅನೆಯು ತನ್ನ ಸೊಂಡಿಲಿನಿಂದ, ಲಿಂಗಕ್ಕೆ ಅಭೀಷೇಕ ಮಾಡಿ
ಪೂಜೆ ಸಲ್ಲಿಸುತ್ತಿರುತ್ತೆ. ಹಾಗೆಯೇ ಒಂದು ಜೇಡ ಲೀಮಗದ ಮೇಲೆ ನೆರಳು ಬರಲು ಬಲೆ ನೇಯುತ್ತಿರುತ್ತೆ.
ಎರಡು ಲಿಂಗವನ್ನು ರಕ್ಷಿಸುತ್ತಿರುತ್ತೆ. ಎರಡುಕ್ಕೂ ಶಿವನ ವಿಷಯ ಜಗಳ ಉಂಟಾಗಿ ಮುಕ್ತಿ ಪಡೆದ ಸ್ಥಳ. ಬಹಳ
ವರ್ಷಗಳಕಾಲ ತಪಸ್ಸು ಮಾಡಿದ ಋಷಿಗೆ, ಮೇಲಿನಿಂದ, ಈಶ್ವರನಿಂದ ಒಮದು ನೇರಳೆ ಬೀಜ ಅವನ ಬಾಯಿಗೆ ಬಿದ್ದು, ಗಿಡನಾಗಿ, ಮರವಾಗಿ, ತಲೆ ಒಡೆದು ಹೊರಂದ ಮರ ಈಗಲೂ ಇದೆ. ಇಲ್ಲಿ ಎರಡು ಗರ್ಭಗುಡಿ ಇದೆ.
ನಂತರ ರಾಮೇಶ್ವರ ಪ್ರಯಾಣ. ಪಾಂಬರ್ ಸೇತುವೆ ರಾಮೇಶ್ವರಕ್ಕೆ ಸಂಪರ್ಕ ಕಲ್ಪಸಿದೆ. ರಾಮೇ
ಶ್ವರ ತಲುಪಿ ಅಲ್ಲಿಂದ ಅಟೋದಲ್ಲಿ, ಹೋಟೆಲ್‍ಗೆ ಪ್ರಯಾಣ. ಮುಖ ತೊಳೆದು ಫ್ರೇಶ್ ಅಗಿ ರಾಮೇಶ್ವರ
ದೇವಸ್ಥಾನ ದರ್ಶನ. ಹನಮ ಲಿಂಗ, ರಾಮನಾಥ ಲಿಂಗ, ಉಪ್ಪು ಲಿಂಗ, ಪಾರ್ವತಿ ದೇವಿ, ಚಿದಂಬರ, ಜೊತೆ
ಯಲ್ಲಿ ಪತಾಂಜಲಿ ಋಷಿಯ ವಿಗ್ರಹ. ಎಲ್ಲಾ ನೋಡಿದೆವು. ದೇವಸ್ಥಾನದಲ್ಲಿ ಕುಳಿತು ಲಲಿತ ಸಹಸ್ರನಾಮ,
ದೇವರ ಸಂಕೀರ್ತನೆ ಹೇಳಿಕೊಂಡು ಹೋಟೆಲ್‍ಗೆ ವಾಪಸ್ಸು.
27-1-2015 ಮಂಗಳವಾರ. ಬೆಳಿಗ್ಗೆ 4.30ಕ್ಕೆ, ರಾಮೇಶ್ವರ ದೇವಸ್ಥಾನ "ಕ್ಯೂ'ನಲ್ಲಿ ನಿಂತು
5.30ಕ್ಕೆ, ಸ್ಪಟಿಕ ಲಿಂಗ ದರ್ಶನ. ಕಾಂಚಿ ಕಾಮಕೋಟಿ ಪೀಠದ ಹಿಂದಿನ ಗುರುಗಳು ಶ್ರೀ ಚಂದ್ರಶೇಖರತೀರ್ಥ"
ರವರು ಕೊಟ್ಟ ಲಿಂಗ. ಸೂರ್ಯೋದಯದ ಮೊದಲುಮಾತ್ರ ದರ್ಶನ. ಸಮುದ್ರ ಸ್ನಾನದ ನಂತರ, 23 ತೀರ್ಥ
ಗಳ ಸ್ನಾನ. ಅದು ಈ ರೀತಿ ಇದೆ.ಮಹಾಲಕ್ಷ್ಮಿ, ಸಾವಿತ್ರಿ, ಗಾಯತ್ರಿ, ಸರಸ್ವತಿ, ಸೇತು ಮಾಧವ, ಗಂಧ ಮಾಧವ,
ಅವಚ, ಗವಯ, ನಳ, ನೀಲ, ಶಂಖ, ಬ್ರಹ್ಮಹತ್ಯ ಪಾತಕ ವಿಮೋಚನ ತೀರ್ಥ, ಸೂರ್ಯ, ಚಂದ್ರ, ಗಂಗಾ,ಯಮುನ, ಗಯಾ, ಶಿವ, ಸತ್ಯಾಮೃತ, ಸರ್ವತೀರ್ಥ, ಕೋಟಿ ತೀರ್ಥದಲ್ಲಿ ಕ್ರಮವಾಗಿ ಸ್ನಾನ ವಾಯಿತು. ಇದಲ್ಲದೆ,
ದೇವಾಲಯದ ಹೊರಗೆ ಸುತ್ತಾ ಮುತ್ತ. 37 ತೀರ್ಥಗಳು ಇವೆ. ಪ್ರಿತೃತರ್ಪಣ ಕಾರ್ಯಕ್ರಮವೂ ಇತ್ತು. ಸ್ನಾನದ
ನಂತರ ಹೋಟಲಿನಲ್ಲಿ ಫಲಹಾರ.
ನಂತರ ಸೈಟ್ ಸಿಯಿಂಗ್ನಲ್ಲಿ, "ಗಂಧ ಮಾಧವ" ಪರ್ವತ. (ಬೆಟ್ಟದ ಮೇಲೆ)ರಾಮನ ಪಾದ, ಅದರ ದರ್ಶನ, ಹಾಗು ಸುತ್ತಾಲಿನ ಪ್ರಕೃತಿಯ ನೋಟ. ಕೊಂದಡ ರಾಮನ ದೇವಸ್ಥಾನ, ವಿಶೇಷ ವೆಂದರೆ, ಸೀತೆ ರಾಮ
ನ ಬಲಗಡೆ ಇರುವುದು. ಇಲ್ಲಿ ವಿಭೀಷಣನ ಶರಣಗತಿಯ ಸ್ಥಳ. ಪಂಚಮುಖಿ ಅಂಜನೇಯ, ಎತ್ತರವಾಗಿ, ಕರಿ
ಶಿಲೆಯ ಪ್ರತಿಮೆ. ಸುಂದರವಾಗಿದೆ. ರಾಮ ತೀರ್ಥ, ಲಕ್ಷಣ ತೀರ್ಥ ಇಲ್ಲಿ ತೇಲುವ ಕಲ್ಲು ನೋಡಿದೆವು. ಸಮುದ್ರದ ನೋರೆ ತರಹ ಇತ್ತು. ದೊಡ್ಡದಾಗಿ ನೀರಿನಲ್ಲಿ ತೇಲುತ್ತಿತ್ತು. ಅಬ್ದುಲ್ ಕಲಾಂ ಮನೆ ಮ್ಯೂಸಿಯಂ
ಮಾಡಿದ್ದಾರೆ. ಅವರ ಮನೆಯಲ್ಲಿ ಮಾತ್ರ ಓರಿಜನಲ್ ಸ್ವಟಿಕ ಲಿಂಗ ದೊರೆಯುತ್ತೆ. 1 ಗ್ರಾಂಗೆ 10 ರೂ. ಅಬ್ದುಲ್ ಕಲಾಮ ರವರಿಗೆ ಇಕ್ಕಿದ 38 ಪಿ.ಹೆಚ್.ಡಿ., ಅವರ ಜೀವನದ ಮುಖ್ಯ ಘಟನೆಗಳ ಫೋಟೋಗಳ
ಪ್ರರ್ದಶನವಿತ್ತು. ಒಮದು ವಿಶೇಷ ಚಿತ್ರ ವೆಂದರೆ ಅಬ್ದುಲ್ ಕಲಾಮ ರವರು ಸೈಕಲ್‍ನಿಂದ ರಾಕೇಟ್ ತೆಗೆದು
ಕೊಂಡು ಹೊಗುತ್ತಿರುವುದು. ದೇಶಕೊಸ್ಕರ ಅವರು ಸಲ್ಲಿಸಿದ ಸೇವೆ ಅಪಾರ, ಅನನ್ಯ. ಲೋಕಲ್ ಟ್ರೀಪ್ಸ್
ನಂತರ, ಭರ್ಜರಿ ಊಟ. ಒಬ್ಬಟ್ಟು, ಅಂಭೋಡೆ, ಚಿತ್ರನ್ನ, ಕೊಸಂಬರಿ, ಗೊಜ್ಜು, ಸಾರು, ಹುಳಿ, ಮೊಸರು.
ಊಟದ ನಂತರ ಮಧುರೈಗೆ ಪ್ರಯಾಣ. ಮಾರ್ಗದಲ್ಲಿ ಪಾಂಬೆನ್ ಸೇತುವೆ ದರ್ಶನ. ಅಲ್ಲಿರುವ ಕಾಮನ್
ಸೇತುವೆ ರೈಲಿಗೆ ಹಾಗು ಹಡಗಿಗೆ ಇರುವುದರ ದರ್ಶನ. ಬಹಳ ರಾಜರುಗಳ ಅಶ್ರಯದಿಂದ ರಾಮೇಶ್ವರ ಮಂದಿರ
ಬಹಳ ಅಭಿವೃದ್ದಿ ಹೊಂದಿದೆ. ದಕ್ಷಿಣ ದ್ವಾರ ನಿರ್ಮಾಣ ವಾಗುತ್ತಿದೆ. 1212 ಕಲ್ಲನ ಕಂಭಗಳು, ಅದರಲ್ಲಿರುವ
ಕೆತ್ತನೆ ಕಲೆ ಅದ್ಭುತ. ದಕ್ಷಿಣ ದ್ವಾರ ಮುಗಿದ ನಂತರ, ದೇವಸ್ಥಾನದಲ್ಲಿ, ಶ್ರೀಂಗೇರಿ ಗುರುಗಳಿಂದ ಕಂಭಾಬಿ
ಷೇಕಕ್ಕೆ ಸುಣ್ಣ ಬಣ್ಣ ನಡೆಯುತ್ತಿದೆ. ಪ್ರತಿಯೂಂದು ಕಂಬವೂ ಕಲ್ಲಿ ಮಾಡಿದ್ದು. ಅಖಿಲ ಭಾರತ ಬ್ರಾಹ್ಮಣ
ಸಂಘದವರ ಶಾಖೆಯಲ್ಲಿ, ಶ್ರೀ ಶೈಲ, ವಾರಾನಾಸಿ ತರಹ ಇಲ್ಲಿಯೂ, ಉಚಿತ ಭೋಜನ ವ್ಯವಸ್ಥೆ ಇದೆ. ರಾಮೇ
ಶ್ವರ ಒಂದು ಜ್ಯೋತಿರ್ ಲಿಂಗ. ರಾಮನಿಂದ ಸ್ಥಾಪಿಸಿದ ಲಿಂಗ. ರಾವಣನನ್ನು ಕೊಂದ ನಂತರ, ಬ್ರಾಹ್ಮಣ
ಹತ್ಯೆಯ ಪಾಪ ಪರಿಹಾರಕ್ಕೆ, ಕೈಲಾಸದಿಂದ ಲಿಂಗ ತರಿಸಿ, ಇಲ್ಲಿ ಪೂಜಿಸಲು ನಿರ್ಧರಿಸಿದ ಸ್ಥಳ. ಹನುಮಂತನು
ಕೈಲಾಸದಿಂದ ಅತ್ಮಲಿಂಗವನ್ನು ತರುವುದು ತಡವಾದಾಗ, ಮಹೂರ್ತ ಮುಗಿಯಲು ಬರುತ್ತಿರಲು, ಸೀತೆ ರಾಮರವರು
ಮರಳಿನಿಂದಲೇ ಲಿಂಗ ಮಾಡಿ ಪೂಜಿಸಿದ್ದು. ಅದೇ "ರಾಮಲಿಂಗೇಶ್ವರ". ಹನುಮಂತನಿಗೆ ಕೋಪಬಂದು, ತನ್ನ
ಬಾಲದಿಂದ ಸೀತೆ ಮಾಡಿದ ಲಿಂಗನ್ನು ಸುತ್ತಿ ಎಸೆಯಲು ಪ್ರಯತ್ನಿಸಿದಾಗ, ಅದು ಗಟ್ಟಿಯಾಗಿತ್ತು. ಬಾಲದ
ಗುರುತು ಇದೆ. ರಾಮನು ಹನುಮಂತನು ತಂದ ಲಿಂಗವನ್ನು ಅದರ ಪಕ್ಕದ್ದಲ್ಲೇ ಇಟ್ಟು ಅದಕ್ಕೆ ಮೊದಲು ಪೂಜೆ
ಮಾಡಿಸುವುದಾಗಿ ಹೇಳಿದ, ಹಾಗೆ ನಡೆದುಕೊಂಡ ಸ್ಥಳ. ಇದು ಪುರಾಣ ಕಥೆ. ಅಂತು ರಾಮೇಶ್ವರದ ಯಾತ್ರೆ
ನೆನಸಿಕೊಂಡು, ಮಧುರೈಗೆ ಪ್ರಯಾಣ ಬೆಳೆಸಿದೆವು.
ಸಂಜೆ ಮಧುರೈ ತಲುಪಿದೆವು. ದಂತ ಕಥೆಗಳ ಪ್ರಕಾರ, ದೇವರ ದೇವ ಇಂದ್ರನು, ಕದಂಬ
ಮರದ ಕೆಳಗೆ, ಸ್ವಯಂಭು ಲಿಂಗವನ್ನು ಪೂಜಿಸುತ್ತಿರುವುದ್ದನ್ನು, ಒಬ್ಬ ವ್ಯಾಪಾರಿ ರಾಜನಿಗೆ ತಿಳಿಸಿದನು.ರಾಜ ಕುಲ
ಶೇಕರ ಪಾಂಡ್ಯನ್ ಲಿಂಗದ ಸುತ್ತಲು ಕಾಡು ಕಡಿದು ದೇವಸ್ಥಾನ ನಿರ್ಮಿಸಿದ. ಅದನ್ನು ಕದಂಬ ವನ ಎನ್ನುತ್ತಿ
ದ್ದರು. ಶಿವನು ಅದನ್ನು ನೋಡಲು ಬಂದಾಗ, ಅವನ ತಲೆಯ ಕೂದಲಿಂದ, ಅಮೃತದ ಭಿಂದು ಬಿದ್ದ ಹೆಸರು
ಮಧುರೈ ಅಯಿತು. (ಮದುರ ವಾದಾದ್ದು). ಈ ಊರ ಪ್ರಸ್ಥಾಪ, ರಾಮಾಯಣದಲ್ಲಿ, ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ
ಮ್ಯಾಗಸೀನ್, ಪ್ಲೂಟೋ, ಹಾಗು ಮಾರ್ಕೋಪೋಲೋ, ವಿದೇಶಿಯರ ಪುಸ್ತಕದಲ್ಲೂ ಇದೆ. ಇದೊಂದು ಶಿವ
ಕ್ಷೇತ್ರ. ಸುಂದರೇಶ್ವರ, ಸೌಂದರ್ಯದ ರಾಜ, ಶಿವ ಮೂರ್ತಿ, ಹಾಗು ಮೀನಾಕ್ಷಿ ದೇವತೆಗಳು ಮುಖ್ಯವಾದದ್ದು.
ಮೀನಾಕ್ಷಿ ಕೈಯಲ್ಲಿ ಗಿಳಿ ಇದೆ. ಕಲ್ಲಿ ನಲ್ಲಿ ಕಟ್ಟಿದ ವಿಶಾಲವಾದ ದೇವಸ್ಥಾನ. 985 ಕಂಬಗಳು ಇವೆ. ಹಿಂದು
ಅಲ್ಲದವರಿಗೆ ಒಳಗೆ ಪ್ರವೇಶವಿಲ್ಲ. ಹೊರಗಡೆ ನೋಡಬಹುದು. ದೇವಸ್ಥಾನದಲ್ಲಿ 12 ದೊಡ್ಡ ಗೋಪುರವಿದೆ.
ಸುತ್ತಲು ಕಂಬಗಳು ಬಹಳ ಇದೆ. ಸ್ವರ್ಣ ಪುಪ್ಪದ ಕಲ್ಯಾಣಿಯಲ್ಲಿ, ಪಾದ ತೊಳೆದು ಪ್ರವೇಶ. ಒಂದೊಂದು
ಮಂಟಪಕ್ಕೆ ಒಂದೊಂದು ಹೆಸರು. ಪುರಾಣ ಕಥೆಯ ಪ್ರಕಾರ ಪಾಂಡ್ಯ ರಾಜನಿಗೆ, ಅಗ್ನಿಕುಂಡದಿಂಡ, ಮೂರು ಸ್ತನ್ಯ
ಗಳನ್ನು, ಒಳಗೊಂಡ ಮೀನಾಕ್ಷಿ ಹುಟ್ಟುತ್ತಾಳೆ. ರಾಜನು ಮಗನಿಗೊಸ್ಕರ ಯಜÐಮಾಡಿದ. ಇವಳು ವೀರಾದಿ ವೀರೆ.
ಅವಳನ್ನು ವರಿಸುವರು ನೋಡಿದ ತಕ್ಷಣ 3ನೇ ಸ್ತನ್ಯ ಮಾಯವಾಗುವುದಾಗಿ ಅಶರೀರವಾಣಿ ತಿಳಿಸುತ್ತೆ. ಅವಳು
ಕೈಲಾಸಕ್ಕೆ ಹೋಗಿ, ಶಿವನ ದಶ್ನ ಮಾಡಿದಾಗ, 3ನೇ ಸ್ತನ್ಯ ಮಾಯವಾಗುತ್ತೆ. ಶಿವ ಅವಳಿಗೆ ಮಧುರೈಗೆ ವಾಪಸ್ಸು ಹೊಗಲು ಹೇಳಿ, ಸುಂದರೇಶ್ವರನಾಗಿ ಬಂದು, ಮದುವೆ ಅಗುತ್ತಾನೆ. ಮೀನಾಕ್ಷಿ ಅಂದರೆ ಮೀನಿನ ಕಣ್ಣು,
ಅವಳ ಕೃಪಾ ದೃಷ್ಠಿ ಬಿದ್ದರೆ, ಭಕ್ತರನ್ನು ಕೃಪಾ ಕಟಾಕ್ಷದಿಂದ ನೋಡುತ್ತಾಳೆ. ಆಧ್ಯಾತ್ಮ ಓಲನ್ನಯ ಕೊಡುತ್ತಾಳೆ.
ಮೀನಾಕ್ಷಿ ಮಂದಿರದ ಸುತ್ತಲು ಕಂಬದಲ್ಲಿ, ಅವಳ ಜೀವನ ಲೀಲೆಯ ಚಿತ್ರಣಗಳು ಇವೆ.
ಅಷ್ಟಶಕ್ತಿ ಮಂಟಪ, 63 ನಾಯರ್ ರವರ ವಿಗ್ರಹ, ದ್ವಾರಪಾಲಕರು, ದುರ್ಗ, ಸರಸ್ವತಿ, ಲಕ್ಷ್ಮಿ,
ನಟರಾಜ, ಶಿವನು ಬಲಗಾಲನ್ನು ತಲೆಯ ತನಕ ಎತ್ತಿ ನೃತ್ಯ ಮಾಡಿದ ಭಂಗಿ, ಕಾರ್ತಿಕ, ಗಣೇಶ ಇದೆ.ಹಳೆಯ
ಕದಂಬ ಮರ ಇನ್ನು ದೇವಸ್ಥಾನದ ಮದ್ಯೆ ಇದೆ. ಇಲ್ಲಿ ಸಹಸ್ರ ಕಂಬ, ದೊಡ್ಡ ನಂದಿ ಇದೆ. ತಿರುಕಲ್ಯಾಣ
ಮಂಟಪದಲ್ಲಿ, ಪ್ರತಿವರ್ಷ ಮೀನಾಕ್ಷಿ ಕಲ್ಯಾಣೋತ್ಸವ ಅಗುತ್ತೆ. ಸುಂದರೇಶ್ವರ ಹಾಗು ಮೀನಾಕ್ಷಿಯ ದರ್ಶನ,
ವಿಶೇಷ ಟೀಕೆಟ್ ಜೊತೆ, ಸಂಕಲ್ಪ ಸಮೇತ ಅರ್ಚನೆ, ಪೂಜೆ, ಅರತಿಯೊಂದಿಗೆ ದರ್ಶನ. ನಂತರ ಹೋಟೆಲಿಗೆ
ವಾಪಸ್ಸು.
28-1-2015 ಬುಧವಾರ. ಮಧುರೈಯಿಂದ ಬೆಳಿಗ್ಗೆ, ಉಪಹಾರ ನಂತರ, ಕನ್ಯಾಕುಮಾರಿಯ
ನರೆಗೂ ಪ್ರಯಾಣ. ಪ್ರತಿದಿನ ಪ್ರಯಾಣದಲ್ಲಿ, ಗಣಪತಿಯನ್ನು ನೆನಸಿಕೊಂಡು, ಎಲ್ಲರು, ವಿಷ್ಣು ಸಹಸ್ರನಾಮ,
ಶಿವನಾಮ ಸಂರ್ಕಿತನೆಗಳನ್ನು ಹೇಳುತ್ತಿದ್ದೆವು. ಮಾರ್ಗ ಮದ್ಯೆ ಊಟ, ಸಂಜೆ 4 ಗಂಟೆಗೆ ಕನ್ಯಾಕುಮಾರಿಗೆ
ಬಂದೆವು. ಹೋಟೆಲ್ ಮಾಣಿಕ್ಯಂ ವಾಸ್ತವ್ಯ. 4 ಗಂಟಿಗೆ ವಿವೇಕಾನಂದ ರಾಕ್‍ಗೆ ಫೇರಿಯಲ್ಲಿ ಪ್ರಯಾಣ.ವಿವೇಕಾ
ನಂದರು ಜೀವಂತ ಇದ್ದಾಗ, ವಿದೇಶಿ ಪ್ರವಾಸಕ್ಕಿಂತ ಮುಂಚೆ, ಚಿಂತಿತರಾಗಿದ್ದಾಗ, ಈಜಿ ಬಂದು, ಈ ಬಂಡೆಯ ಮೇಲೆ ಧ್ಯಾನ ಮಾಡಿದ ಸ್ಥಳ. ಇಲ್ಲಿ ಇವರು ಜಾÐನವನ್ನು ಪಡೆದು, ವಿದೇಶದಲ್ಲಿ ಹಿಂದೂ ಧರ್ಮದ ಬಗ್ಗೆ
ಭಾಷಣ ಮಾಡಲು ಹೊಗಿದ್ದು. ಇಲ್ಲಿಯ ಸೆಲ್ಲರಿನಲ್ಲಿ ಶ್ಯಾನ ಮಂದಿರವಿದೆ. ಪ್ರಶಾಂತವಾದ,ನಿಶಬ್ಧವಾದ ಧ್ಯಾನ
ಮಂಡಿರದಲ್ಲಿ, ಪ್ರತಿಯೂಬ್ಬರು ಕೆಲ ಕಾಲ ಧ್ಯಾನ ಮಾಡಿದರು. ಬಂಡೆಯ ಸುತ್ತಲು, ಭೋರ್ಗೆರಿಯುವ ಕಡಲ
ಅಬ್ಬರ. ವಿವೇಕನಂದ ಮೆಮೋರಿಯಲ್ ಸಂಸ್ಥೆಯ ಅಫೀಸ್ ಇಲ್ಲೆ ಇದೆ. ಲತಾ ಹಾಗು ಗುರು ರವರ ಹೆಸರಿಗೆ
ಹುಟ್ಟಿದ ಹಬ್ಬದ ಶುಭಾಶಯಗಳು ಬರುವ ಹಾಗೆ ಮಾಡಿಸಿದೆವು. ಈಗಾಗಲೆ ಕಿರಣ್ ಹಾಗು ಅರುಣಾಳಿಗೆ ಮಾಡಿ
ಸಿದ್ದು ಪ್ರತಿ ವರ್ಷವೂ ಬರುತ್ತಿದೆ. ಇಲ್ಲಿ ಸಂಸ್ಥೆಗೆ ಬಂದ ದಾನ ದಿಂದ ಭಾರತದ್ಯಂತ ವಿವೇಕನಂದ ಸಂಸ್ಥೆಗಳು
ನಡೆಯುತ್ತದೆ.
ಈ ಬಂಡೆಯ ಮೇಲೆ "ಕನ್ಯಾಕುಮಾರಿ", ಒಂಟಿಕಾಲಿನಲ್ಲಿ ತಪಸ್ಸು ಮಾಡಿದ ಪಾದದ ಗುರುತು
ಇದೆ. ನಂತರ "ತಿರುವಲ್ಲಾವಾರ್" ಪ್ತತಿಮೆ ದರ್ಶನ. ಅಲ್ಲಿಂದ ದಂಡೆಗೆ ವಾಪಸ್ಸು ಬಂದೆವು. ಭಾರತದ ಭೂಶಿರ
ಮೂರು ಸಮುದ್ರ ಕೂಡುವ ಕಡೆ ಬಾವುಟ ಹಾಕಿದ್ದಾರೆ. ಅಲ್ಲಿ ಇಳಿದು ಕಾಲು ತೊಳೆದು ಕೊಂಡು, ಪ್ರೋಕ್ಷಣೆ
ಮಾಡಿಕೊಂಡ್ವಿ. ರಮಣೀಯವಾದ ಸೂರ್ಯಸ್ತ ವೀಕ್ಷಣೆ. ಒಳ್ಳೆ ಕನಕಾಂಬರ ಬಣ್ಣ. ಅಂಬರವೆಲ್ಲಾ ಕೆಂಪಾಗಿತ್ತು.
ನಂತರ ಗಾಂಧೀಜಿಯವರ ಚಿತಾ ಭಸ್ಮ ಇಟ್ಟ ಗಾಂಧಿ ಭವನ ದರ್ಶನ. ಹೊತ್ತು ಕಳೆದುದ್ದು ತಿಳಿಯಲಿಲ್ಲ. ಏಪ್ರಿಲ್
ನಲ್ಲಿ, ಪೂರ್ಣಿಮೆ ದಿನ ಸೂರ್ಯಸ್ತ ಹಾಗು ಚಂದ್ರೊದಯ ಸುಂದರವಾಗಿರುತ್ತೆ. ಕತ್ತಾಲಾಗುವ ವೇಳೆಗೆ ದೇವ
ಸ್ಥಾನದ ಕಡೆಗೆ ಹೆಜ್ಜೆ ಹಾಕಿದೆವು. ಬಹಳ ಸುಲಭವಾಗಿ, ಕನ್ಯಾಕುಮಾರಿಯ ದರ್ಶನ ವಾಯಿತು. ದೇವಿಯ
ಮೂಗುತಿ ಫಳ ಫಳ ಹೊಳೆಯುತ್ತಿತ್ತು. ಚಿಕ್ಕ ಚೊಕ್ಕ ಸುಂದರ ಮೂರ್ತಿ. ಇಲ್ಲೊಂದು ದಂತ ಕಥೆ ಇದೆ.
ಕುಮಾರಿ ಬಂಡೆಯ ಮೇಲೆ (ವಿವೇಕಾನಂದ ರಾಕ್), ತಪಸ್ಸು ಮಾಡುತ್ತಿದ್ದಳು. ಶಿವನನ್ನು ಮದುವೆ ಯಾಗಲು.
ಮದುವೆ ನಿಶ್ಚಯವಾಗಿ, ಕೈಲಾಸ ದಿಂದ ಶಿವ ಹಾಗು ಶಿವನ ಗಣಗಳು, ಸೌಭಾಗ್ಯ ದ್ರವ್ಯಗಳನ್ನು ಹೊತ್ತುಕೊಂಡು,
ಇಲ್ಲಿಗೆ ಬರುತ್ತಿದ್ದರು. ಸೂರ್ಯೊದಯದ ಮೊದಲ ಘಳಿಗೆ, ನಿಶ್ಚಯವಾಗಿತ್ತು. ಈ ಮದ್ಯೆ ನಾರದ ಶಕ್ತಿಯು ಬಂದ
ಕಾರ್ಯ ಜಾÐಪಿಸಿಕೊಂಡು, ಬಾಣಸುರನಿಗೆ ಅವನ ವಧೆ, ಕೂಮರಿಯಿಂದಲೇ ಅಗಬೇಕಾದ್ದರಿಂದ, ಅವನನ್ನ ಪುಲಾ
ಯಿಸಿ, ಇಲ್ಲಿಗೆ ಕರೆದು ಕೊಂಡು ಬಂದನು. ಮದುವೆಗೆ ಮೊದಲು, ಅವನು ಬಂದು, ಕುಮಾರಿಯನ್ನು ಕೆಣಕಿ
ಯುದ್ದಮಾಡಿ ಸಾಯುವ ವೇಳೆಗೆ, ಸೂರ್ಯೊದಯ ವಾಗಿ, ಘಳಿಗೆ ತಪ್ಪಿದ್ದರಿಂದ, ಮದುವೆ ನಿಂತು, ಶಕ್ತಿಯ ಕೆಲಸ
ಮುಗಿಯುತ್ತೆ. ಅನಳು ಕುಮಾರಿಯಾಗಿ ಇಲ್ಲೇ ನೆಲಸುತ್ತಾಳೆ. ಶಕ್ತಿ ಹಿಂತಿರುಗುತ್ತಾಳೆ. ಅವಳ ಮೂರ್ತಿ ಇಲ್ಲಿ
ನೆಲೆಸುತ್ತೆ. ಗಣಗಳಿಗೆ ಕೋಪ ಬಂದು, ತಂದಿದ್ದ ಸೌಭಾಗ್ಯ ದ್ರವ್ಯವನ್ನು ನೀರಿನಲ್ಲಿ ಚೆಲ್ಲಿದ್ದರಿಂದ, ಅರಬ್ಬಿ ಸಮುದ್ರ ಕೆಂಪಾಗಿ ಕಾಣುತ್ತೆ. ತುಂಬ ಸುಂದರವಾದ ಸಣ್ಣ ಪ್ರತಿಮೆ. ಹಿಂದೆ ಅವಳ ಮೂಗುತಿಯ ಮಿಂಚು,
ದೂರದ ಹಡಗಿನವರಿಗೆ ಕಾಣಿಸುತಿದ್ದರಿಂದ, ಈಗ ಗೋಡೆ ಏರಿಸಿ, ಕಾಣ ದಂಗೆ ಮಾಡಿರುತ್ತಾರೆ. ಸೂರ್ಯಾಸ್ತ ಹಾಗು
ಕನ್ಯಾಕುಮಾರಿಯ ದರ್ಶನ ಮಾಡಿಕೊಂಡು ಹೋಟೆಲ್ಲಿಗೆ ವಾಪಸ್ಸು.
ಗುರುವಾರ 29-1-2015. ಬೆಳಗ್ಗಿನ ಜಾವ ಬೇಗ ಎದ್ದು, ಹೋಟೆಲಿನ ಮೇಲಿನ ಅಂತಸ್ಸಿನಿಂದ
ಅರುಣೋದಯ ಹಾಗು ಸುರ್ಯೋದಯ ದರ್ಶನ. ಅಕಾಶ ಸ್ವಚ್ಛವಾಗಿದ್ದರಿಂದ ಬಹಳ ಚೆನ್ನಾಗಿ ಅಯಿತು. ನಂತರ
ಉಪಹಾರ ಮುಗಿಸಿಕೊಂಡು, ಸುಚಿಂದ್ರಕ್ಕೆ ಪ್ರಯಾಣ. ಇಂದ್ರ ಶುಚಿಯಾದ ಸ್ಥಳ. ಗೌತಮ ಮುನಿಯ ಶಾಪದಿಂದ
ಶುದ್ಧನಾಗಲು, ಇಂದ್ರನು ಇಲ್ಲಿಯ ದತ್ತಾತ್ರೇಯ ದೇವರನ್ನು ಪೂಜಿಸಿದನೆಂದು ಹೇಳಲಾಗಿದೆ. ಇಲ್ಲಿಯ ಲಿಂಗ
"ಸ್ಥಾನು ಮರಾಯ ಸ್ಥಾಮಿ". ಮೂರು ಅಂಶದಿಂದ ಕೂಡಿದೆ. ಶಿವ, ವಿಷ್ಣು, ಬ್ರಹ್ಮ ಸ್ವರೂಪ, ಒಂದೇ ಲಿಂಗದಲ್ಲಿ.
ಬರಿ ಶಂಖದ ಪುಡಿಯಿಂದ ಮಾಡಿದ ಬೃಹತ್ ಬಿಳಿ ನಂದಿ ಇದೆ. ವಿಷ್ಣು, ಸೀತಾ, ರಾಮ, ಗಣೇಶ, ಹನುಮಂತ,
ಹಾಗು ನವಗ್ರಹಗಳು ಇವೆ. ಋಷಿ ಅತ್ರಿ ಹಾಗು ಅನುಸೂಯ, ಚಂದ್ರ, ದತ್ತಾತ್ತೇಯ, ಹಾಗು ದೂರ್ವಸ ಮುನಿಯ ರೂಪದಲ್ಲಿ ಇದ್ದು, ಜನರ ಪಾರ್ಥನೆಯನ್ನು ಸ್ವೀಕರಿಸುತ್ತಾರೆ, ಅಂತ ನಂಬಿಕೆ. ನಂತರ ಲಿಂಗ ರೂಪತಾಳಿ
ತ್ರೀಮೂರ್ತಿಯರನ್ನು ಪ್ರತಿಬಿಂಬಿಸುತ್ತಿದ್ದಾರೆ. ತಳದ ಲಿಂಗ ಬ್ರಹ್ಮ, ಮದ್ಯೆಯಲ್ಲಿ ವಿಷ್ಣು, ಹಾಗು ತುದಿಯಲ್ಲಿ
ಶಿನ. ಗಣಪತಿ ಹೆಣ್ಣಿನ ರೋಪದಲ್ಲಿ ಇದೆ. "ವಿಘೆÐೀಶ್ವರಿ". ಇಲ್ಲಿ ಗಣಪತಿ ದರ್ಶನ ಕೊನೆಗೆ. ಇಲ್ಲಿಯ ಅಲಿಂಗನ ಮಂಟಪದಲ್ಲಿ ಸಂಗೀತದ ಕಂಬಗಳು ಇವೆ. ಇದರಲ್ಲಿ, ಸಪ್ತಸ್ವರಗಳನ್ನು, ಚಂಡೆ, ಮದ್ದಲೆಯ ಧ್ವನಿಯನ್ನು,
ಗೈಡ್ ಹೊಡೆದು ತೋರಿಸಿದರು. ಇವು ಕಲ್ಲಿನ ಕಂಬಗಳು. ಇನ್ನೊಂದು ಕಡೆ ಬಳೆ ಹಾಗು ಗೆಜ್ಜೆಯ ಸ್ವರ
ಬರುತ್ತೆ. ಬಹಳ ಅದ್ಧುತವಾಗಿತ್ತು.
ಮುಂದೆ ನಾವು ಕೇರಳಕ್ಕೆ ಸೇರಿದ ಕೊವಲಂ ಬೀಚಿಗೆ ಬಂದೆವು. ಕೇರಳವನ್ನು, ಚೇಲರು, ಚೋಳರು,
236 ಬಿ.ಸಿ.ಯಲ್ಲಿ ಅಳಿದ್ದರು. 1ಒನೇ ಶತಮಾನದಲ್ಲಿ ಚೋಳರು ಅಳಿದ್ದರು. 11ನೇ ಶತಮಾನದಲ್ಲಿ ಅವರು
ಅಳಿದು, "ಸೆಮಾರಿರ್ನ" ಕಲ್ಲಿಕೋಟೆಯ ಮನೆತನ ಆಳಿತು. ವಾಸ್ಕೋಡಿಗಾಮ ಮೊದಲ ಯುರೋಪಿಯನ್,
ಇಲ್ಲಿಂದಲೇ ಭಾರತಕ್ಕೆ ಸಮುದ್ರ ಮೂಲಕ ದಾರಿ ಕಂಡು ಹಿಡಿದದ್ದು. ನಂತರ ಪೋಚುಗೀಸ್, ಬ್ರಿಟಿಷ್, ಡಚ್ಚರು, ಆಳಿದರು. ಹೈದಾರಾಲಿ ಟಿಪ್ಪು ಕೂಡ ಈ ಜಾಗವನ್ನು ಆಕ್ರಮಿಸಲು ಪ್ರಯತ್ನಿಸಿ, ಬ್ರಿಟಿಷರಿಂದ ಹಿಮ್ಮೆಟ್ಟಿದ್ದರು.
1956ರಲ್ಲಿ ಬಾಷ್ಯವಾರು ಪ್ರಾಂತ ವಾಯಿತು. ಅದಕ್ಕೂ ಮುಂಚೆ ತಮಿಳುನಾಡಿನ ಒಂದು ಭಾಗವಾಗಿತ್ತು. ಕೇರಳ 500 ಕಿ.ಮಿ. ಇದೆ.
ಕೊವಲಂ ಬೀಚ್ ಒಮದು ಪ್ರಸಿದ್ದವಾದ ಕರವಾಳಿ ತೀರ. ದೇಶಿ ಹಗು ವಿದೇಶಿ ಪ್ರವಾಸಿಗರಿಂದ
ಅಕಷಿಸಲ್ಪಟ್ಟಿದೆ. ಸುತ್ತಲು ತೆಂಗುಗಳ ಸಮೂಹ, ಅಬ್ಬರಿಸುವ ಸಮುದ್ರ, ಕಲ್ಲಿನ ಬಂಡೆಗಳು, ಇಲ್ಲಿ ಈಜುವುದು
ಅಪಾಯಕಾರಿ. ಅಲೆಗಳ ಜೊತೆಯಲ್ಲಿ ಸ್ವಲ್ಪ ಆಡಿ, ನಂತರ ಅಲ್ಲಿಯೇ ಊಟ ಮುಗಿಸಿ, ಪ್ರಕೃತಿಯ ಸೌಂದರ್ಯ,
ಅಲೆಗಳ ಅರ್ಭಟವನ್ನು ನೋಡಿ, ತಿರುವಂತಪುರಕ್ಕೆ ಸಂಜೆ ಸೇರಿದೆವು.
ತಿರುವಂತಪುರ ಹೋಟೆಲ್ "ಸಿಲ್ವರ್ ಸ್ಯಾಂಡ್"ನಲ್ಲಿ ತಂಗುದಾಣ. ತಿರುವಂತಪುರ ಕೇರಳದ
ರಾಜಧಾನಿ. ಇಲ್ಲಿಯ ಮುಖ್ಯ ದೇವಸ್ಥಾನ " ಅನಂತ ಪಬ್ಮನಾಭ". ಸಂಜೆ 4 ಗಂಟೆಗೆ, ಶುಭ್ರವಾಗಿ, ಕೇರಳ
ಸೀರೆ ಉಟ್ಟು, ಇವರು ಪಂಚೆ ಉಟ್ಟು ಗುಡಿಗೆ ಹೊದೆವು. ಇಲ್ಲಿ ಗಂಡಸರು ಬನಿಯನ್ ಬಿಚ್ಚಿ ದೇವಸ್ಥಾನಕ್ಕೆ
ಹೋಗಬೇಕು. ಕೇರಳದ ಎಲ್ಲಾ ದೇವಸ್ಥಾನಕ್ಕೂ ಕೂಡ. ಸೆಲ್ವಾರ್ ಕಮೀಜ್ ಹಾಕಿಕೊಂಡವರು, ಬಾಡಿಗೆಗೆ
ಸಿಗುವ ಪಂಚೆಯನ್ನು ಸುತ್ತಿಕೊಂಡು ಹೊಗಬೇಕು. 180\- ರೂ. ಅರ್ಚನೆ ಚೀಟಿಯೊಂದಿಗೆ, ಸಂಕಲ್ಪದಿಂದ
ಅರ್ಚನೆ, ದರ್ಶನ, ಪ್ರಸಾದ,(ಪ್ರಸಾದದ ಡಬ್ಬ, ಬಾಳೆ, ಕಿತ್ತಳೆ, ಗಂಧ ಹೂವು), ಕೊಡಲಾಯಿತು. ಸಹಸ್ರ
ಮುಖವಿರುವ ಸರ್ಪದಲ್ಲಿ, ಅನಂತ ಪದ್ಮನಾಭನ ಶಯನ ಭಂಗಿ. 3 ಧ್ವಾರಗಳಿಂದ ದರ್ಶನ. ಮೊದಲ ಭಾಗದಲ್ಲಿ, ಸರ್ಪದಲ್ಲಿ ಪವಡಿಸಿರುವ ವಿಷ್ಣು, ಕೈಯನ್ನು ಲಿಂಗದ ಮೇಲೆ ಇಟ್ಟಿರುವುದು, ಮದ್ಯ ದ್ವಾರದಲ್ಲಿ, ನಾಭಿಯಿಂದ
ಹೊರಟ ಕಮಲದಲ್ಲಿ ಬ್ರಹ್ಮ, ಕೊನೆಯಲ್ಲಿ ಪಾದ ದರ್ಶನ. ಮುಂದೆ ಇಟ್ಟಿರುವುದು ಉತ್ಸವ ಮೂರ್ತಿ ವಿಷ್ಣು
ಜೊತೆಯಲ್ಲಿ, ಶ್ರೀದೇವಿ, ಭೂದೇವಿ ಅಪ್ಪಟ ಬಂಗಾರದ್ದು. ಮೂಲ ವಿಗ್ರಹ ಮರದಲ್ಲಿ ಇತ್ತು. ನಂತರ ಅದನ್ನು
12,000 ಸಾಲಿಗ್ರಾಮ ಶಿಲೆಯನ್ನು ತರಸಿ, ನೇಪಾಳದ ಗಂಡಕಿ ನದಿಯಿಂದ, ಅನೆಗಳಿಂದ ತರೆಸಿ, 7 ತಿಂಗಳುಗಳ
ಕಾಲ, 4,000 ಶಿಲ್ಪಿಗಳು, 8,000 ಕೆಲಸದಾಳು ಗಳಿಮದ ಬದಲಾಯಿಸಲಾಯಿತು. ರಾಜ ರವಿವರ್ಮ ಅಳಿದ,
ಪೂಜಿಸಿದ ದೇವತೆ. ದೇವಸ್ಥಾನ ಕೇರಳ ಶೈಲಿ, ದಕ್ಷಿಣ ಭರತದ ದ್ರಾವಿಡ ಶೈಲಿಯಲ್ಲಿ ಇದೆ. ಇದೇ ಅನಂತ
ಶಯನನ ಬಂಗಾರದ ಪ್ರತೀಮೆ ಇದೆ ಅಂತ ಪ್ರತೀತಿ. ಇತ್ತೀಚೆಗೆ ಇಲ್ಲಿ ಇರುವ ಒಂದು ಕೊಣೆಯಲ್ಲಿ, ಲೆಕ್ಕವಿಲ್ಲ
ದಷ್ಟು ಬಂಗಾರವನ್ನು ನೋಡಿದ್ದಾರೆ. ಟಿವಿಯಲ್ಲೂ ಬಂದಿದೆ. ಬಹಳ ಶ್ರೀಮಂತ ದೇವಸ್ಥಾನ. ಇನ್ನು ಇರುವ
ಅನೇಕ ಕೊಣೆಯಲ್ಲಿ ಐಶ್ವರ್ಯ ತುಂಬಿದೆ ಅಂತು ಪ್ರತೀತಿ.
ದಂತ ಕಥೆಯ ಪ್ರಕಾರ, ಕಲಿಯುಗದ ಪ್ರಾರಂಭದಲ್ಲಿ, 950ನೇ ದಿನ "ದಿವಾಕರ ಮುನಿ",
ಎಂಬುವನು, ತುಳು ದೇಶದವರಿಂದ (ಮಂಗಳೂರು), ಈ ದೇವಸ್ಥಾನ ಕಟ್ಟಲ್ಪಟ್ಟಿತು ಅಂತ. ದಿವಾಕರ ಮುನಿ ಆ ದಿಗಳಲ್ಲಿ ತಪಸ್ಸು ಮಾಡುತ್ತಿದ್ದಾಗ, 2 ವರ್ಷದ ಏಲೆಯ ಬಾಲಕ ಅವನ ಮುಂದೆ ಪ್ರಕಟವಾಗಿ, ಮುನಿಯ ಜೊತೆ
ಬೆಳೆಯುತ್ತಾನೆ. ಮುನಿಯು ಅವನಿಂದ ಅಕರ್ಷಿಸಲ್ಪಡುತ್ತಾನೆ. ಅವನನ್ನು ಬಿಟ್ಟಿರಲು ಅಗುವುದಿಲ್ಲ. ಮುನಿಯು
ಅವನನ್ನು ಅವನನ್ನು ಬಿಟ್ಟು ಹೊಗದಂತೆ ಬೇಡುತ್ತಾನೆ. ಮಗುವು ಒಂದು ಶರತ್ತು ಮೇಲೆ ಇರುತ್ತೆ. ಮುನಿಯು
ಯಾವತ್ತು ಅವನ ನಡತೆಯ ಕೋಪಿಸಿಕೊಳ್ಳುತ್ತಾನೊ, ಆ ದಿನ ವಾಪಸ್ಸು ಹೊಗುವುದಾಗಿ, ಹೇಳುತ್ತಾನೆ. ಒಪ್ಪಿ
ಕೊಂಡ ಮುನಿ ಬಹಳ ಸಂತೋಷವಾಗಿ ಇರುತ್ತಾನೆ. ಒಂದು ದಿನ ಮುನಿಯು ಪೂಜಿಸುತ್ತಿದ್ದ ಸಾಲಿಗ್ರಾಮವನ್ನು,
ಮಗುವು ತಿನ್ನ ತೊಡಗಿದಾಗ, ಮುನಿಯು ಅದರ ಮೇಲೆ ಕೋಪಿಸಿಕೊಂಡಾಗ, ಮಗುವೂ ಮಾಯವಾಯಿತು. ಅದಕ್ಕೂ ಮುಂಚೆ, ಮಗುವೂ ನೀನು ನನ್ನು ನೋಡಬೇಕು ಅಂದರೆ, ಅನಂತನ ಕಾಡಿಗೆ ಬಾ ಅಂದಿತು. ಮಗುವಿನ
ಸನಿಹ ಇಲ್ಲದೆ ಮುನಿಯು, ಬಹಳ ದುಖಃ ಪಟ್ಟನು. ನಿದ್ದೆ ಅಹಾರ ಬಿಟ್ಟನು. ಒಂದು ದಿನ ಅವನ ಮಗುವು
ಸಮುದ್ರ ತೀರದ "ಎಲ್ಲಪ್ಪ" ಮರದ ಪೊಟರೆಯಲ್ಲಿ, ಮಾಯಾವಾಗಿದ್ದು ನೋಡಿದನು. ಅವನು ಅಲ್ಲಿಗೆ ಹೊದ
ತಕ್ಷಣ, ಮರವು ಬಿದ್ದು, ವಿಷ್ಣುವಿನ ಅವತಾರವಾಯಿತು. ಬಹಳ ದೊಡ್ಡದಾದ, ವಿಷ್ಣುವಿನ ಅನಂತ ರೂಪವನ್ನು,
ನೋಡಲು ಕಷ್ಟವಾಗಲು, ಆ ಮುನಿಯು ವಿಷ್ಣುವಿಗೆ, ತನ್ನ ಕಣ್ಣಿನ ದೃಷ್ಠಿಗೆ ಕಾಣುವಷ್ಟು, ಸಣ್ಣಗಾಗಲು ಹೇಳಿದನು.
ಆ ದೇವ ಸಣ್ಣಗಾದನು. 18 ಅಡಿ ಇರುವ ಅನಂತ ಶಯ ಮೊದಲು ಇದ್ದದು, ಮರದಲ್ಲಿ. ಭಗವಂತನ ಕೊರಿಕೆ
ಮೇರೆಗೆ, ಅಲ್ಲಿ ಇಂದಿಗೂ ತುಳು ಬ್ರಾಹ್ಮಣರಿಂದ ಪೂಜೆ ನಡೆಯುತ್ತೆ.
ಇನ್ನೊಂದು ದಂತ ಕಥೆಯ ಪ್ರಕಾರ ಕೇರಳದ ನಂಬೂದ್ರಿ "ವಿಲ್ವಮಂಗಲತು ಸ್ವಾಮಿಯಾರ್" ಎಂಬ
ಭಕ್ತನ ಮುಂದೆ ದೇವರು ಪ್ರತ್ಯಕ್ಷನಾಗುತ್ತಾನೆ. ಅನಂದ ಭರಿತನಾದ ಭಕ್ತನು ದೇವರಿಗೆ ನೈವೇದ್ಯ ಮಾಡಲು,
ಇನ್ನು ಹನ್ನಾಗದ ಮಾವಿನ ಹಣ್ಣನ್ನು,'ಕನ್ನಿ ಮಂಗ" ಮರದಿಂದ ಕಿತ್ತು, ತಟ್ಟೆ ಸಿಗದೇ, ಒಡೆದ ತೆಂಗಿನ ಚಿಪ್ಪಿನಲ್ಲಿ
ಇಟ್ಟು, ದೇವರಿಗೆ ಅರ್ಪಿಸಿ ಧನ್ಯ ನಾಗುತ್ತಾನೆ. ಇದನ್ನು ಲೆಕ್ಕಕ್ಕೆ ತೆಗೆದುಕೊಂಡು, ಈಗಲೂ ಸಹ "ಕನ್ನಿ ಮಂಗ"
ಮಾವಿನ ಕಾಯಿ ಅರ್ಪಿಸುತ್ತಾರೆ. ಒಂದು ವ್ಯೆತ್ಯಾಸ ವೆಂದರೆ, ಒಣ ಚಿಪ್ಪಿನ ಬದಲು, ಬಂಗಾರ ತೆಂಗಿನ ಚಿಪ್ಪು
ಉಪಯೋಗಿಸುತ್ತಾರೆ. ದರ್ಶನದ ನಂತರ ಸ್ವಲ್ಪ ಹೊತ್ತು ಅಲ್ಲೆ ಕುಳಿತು, ನಂತರ ಹೊಟೇಲ್ಗೆ ವಾಪಸ್ಸು ಬಂದೆವು.
30-1-2015, ಶುಕ್ರವಾರ. ಬೆಳಿಗ್ಗೆ ನಿತ್ಯಕರ್ಮ ಮುಗಿಸಿ, ಮಸಾಲೆ ದೊಸೆ ತಿಂದು ಕೊಂಡು, ತಿರು
ವಂತಪುರದಿಂದ "ಅಳಾಪುರ"(ಅಲಾಪಿ) ಪ್ರಯಾಣ. ಅಳಾಪುರ ಬ್ಲಾಕ್ ವಾಟರ್ನಲ್ಲಿ, 2 ಟಂತೆ ದೋಣಿ ವಿಹಾರ.
ದಡದಲ್ಲಿ ಒಂದು ಮಂದಿರ ಹಾಗು ಸ್ಟಾರ್ ಹೊಟೇಲ್ ಇದೆ. ಬೋಟ್ ಹೌಸ್ಸ್ ಬಾಡಿಗೆಗೆ ದೊರೆಯುತ್ತೆ.
ಕಾಶ್ಮೀರ ತರಹ. ಒಂದೊಂದು ನಮೂನೆ, ಒಂದೊಂದು ತರಹ, ಸುಂದರವಾಗಿತ್ತು. 5,000/- ರೂ. ಮೇಲ್ಪಟ್ಟು
ಒಂದು ರಾತ್ರೆಯ ಸ್ಟೇ. ಸುತ್ತಲು ತೆಂಗಿನ ಮರಗಳು. ಚಿಲಿಪಿಲಿ ಗುಟ್ಟುವ ಹಕ್ಕಿಗಳು, ಸೂರ್ಯಸ್ತ ರಮಣೀಯ
ವಾಗಿತ್ತು. ದೋಣಿ ವಿಹಾರದಲ್ಲಿ, ಅಂತಕ್ಷರಿ, ಆಶುಭಾಶಣ ಸ್ವರ್ಧೆ, ಮೋಜು, ಮಸ್ತಿ. ಅಲ್ಲಿಂದ ಹೊರಗೆ
ಬರುವ ದಾರಿಯಲ್ಲಿ, ಫ್ರೇಶ್ ಪ್ಯಾನ್ ಟು ಪ್ಲೇಟ್, ಕೇರಳದ ಬಾಳೆಕಾಯಿ ಚಿಪ್ಸ್, ಉಪ್ಪೇರಿ, ಹಲ್ವ, ಇತ್ಯಾದಿಗಳ
ರುಚಿ ಹಾಗು ವ್ಯಾಪಾರ.
ಹೊಟೇಲ್‍ಗೆ ಬಂದ ಮೇಲೆ, ಅಲ್ಲಿಯೇ ಹತ್ತಿರವಿದ್ದ ಪಾರ್ವತಿ ಮಮದಿರಕ್ಕೆ ಬೇಟಿ. ದುರ್ಗೆ,
ಕಾರ್ತಿಕೇಯ, ಗಣೇಷ. ನವಗ್ರಹ, ಹಾಗು ಲಿಂಗ ವಿಶೇಷವಾಗಿತ್ತು. ಬೋಳು ಲಿಂಗದ ಬದಲು, ಚೌಕಟ್ಟು ಲಿಂಗ
ಗಳು. ದೇವಸ್ಥಾನ ಬಹಳ ಶುಭ್ರವಾಗಿತ್ತು. ಅಲ್ಲಿಂದ ವಪಸ್ಸು ವಿಶ್ರಾಂತಿ. "ಹೊಟೇಲ್ ಪಡಿಪಾರ ರೆಸಿಡೆಸ್ಸಿ".
31-1-2015 ಶನಿವಾರ. ಬೆಳಿಗ್ಗೆ ಸೆಟ್ ದೋಸೆ ತಿಂದು ಕೊಂಡು, ಗುರುವಾಯುರ್‍ಗೆ ಪ್ರಯಾಣ.
ಮಾರ್ಗಮದ್ಯೆ "ಕಾಲಡಿ", ಶ್ರೀ ಶಂಕರಚಾರ್ಯರು ಹುಟ್ಟಿದ ಊರಿಗೆ ಬಂದೆವು. ಕಾಂಚಿ ಪೀಠದವರು ಕಟ್ಟಿಸಿದ,
ಕಾಂಚಿ ಸ್ತೂಪಕ್ಕೆ ಮೊದಲ ಬೇಟಿ. ಸ್ತೂಪಗಳನ್ನು ಹತ್ತುತ್ತಾ, ಶ್ರೀ ಶಂಕರಾಚಾರ್ಯರ ಜೀವನ ಚಿತ್ರಣ, ಅವರು ಹೇಳಿದ ಷಟ್ ಮತಗಳು, ಶಿಷ್ಯಾಪರಂಪರೆ, ಸ್ಥಾಪಿತ ಮಠಗಳು, ಮಂಡಲ್ ಮಿಶ್ರರವರ ವಾದ, ಭಾರತಿ ದೇವಿಯ ಚಿತ್ರಗಳನ್ನು ಒಳಗೊಂಡಿತ್ತು. ಷಣ್ಮತಗಳು, ಗಣಪತ್ಯ, (ಗಣಪತಿಯ ಆರಾಧನೆ), ಕುಮಾರ, (ಕಾರ್ತಿಕೇಯನ ಆರಾ
ಧನೆ), ಶಾಕ್ತ, (ಶಕ್ತಿ), ಸೂರ್ಯ, ವೈಷ್ಣವ, ಶೈವ. ಈ ಆರು ಮತಗಳನ್ನು ಸ್ಥಾಪಿಸಿ, ಈ ಅರು ಮತಗಳು, ಅವರವರ ಪೂಜ ವಿಧಾನಗಳನ್ನು, ಅವರವರು ಪಾಲಿಸುವಂತೆ ನಿಯಮಿಸಿದರು. ಅಮ್ನಯಾ ಪೀಠಗಳು, ಶ್ರೀಂಗೇರಿ
ಯಲ್ಲಿ ದಕ್ಷಿನ್ಮಾಯ ಶಾರದ ಪೀಠ, ಉತ್ತರದಲ್ಲಿ, ಜ್ಯೋತಿರ್ ಮಠ ಬದಾರಿಕಾಶ್ರಮ, ಪಶ್ಚಿಮದಲ್ಲಿ, ಧ್ವಾರಕ ಪೀಠ
ಗೋವರ್ಧನ, ಪೂರ್ವದಲ್ಲಿ, ಪೂರಿಯಲ್ಲಿ ಪೂರ್ವಮ್ನಾಯ ಜಗನ್ನಾಥ.
ಅಲ್ಲಿಂದ ಶ್ರಿಂಗೇರಿ ಮಠದವರ ದೇವಸ್ಥಾನಕ್ಕೆ ಹೋದೆವು. ಆ ದಿನ ಮಠದ ಸಂಸ್ಥಾಪನ ದಿನ.
ಅದ್ದರಿಂದ ಚಂಡಿಕಾಹೋಮ ನಡೆಯುತ್ತಿತ್ತು. ಪೂರ್ಣಹುತಿ ಅದ ತಕ್ಷಣ ಎಲ್ಲಾ ಗುಡಿಯಲ್ಲಿ ಅರತಿ ಯಾಯಿತು.
ಶ್ರೀ ಶಾರದೆಯ ಆರು ಮೂರ್ತಿಗಳು, ಮಾಹೇಶ್ವರಿ, ವಾರಹಿ, ಬ್ರಾಹ್ಮಿ, ವೈಷ್ಣವಿ, ಚಾಮುಂಡ, ಇಂದ್ರಾಣಿಯವರ
ದರ್ಶನ ವಾಯಿತು. ಶಾರದೆಯ ಆರತಿ ನಂತರ, ಗಣಪತಿ ಹಾಗು, ಶ್ರೀ ಶಂಕರಚಾರ್ಯರ ಗುಡಿ ನೋಡಿದೆವು.
ಯಾಯಿ ಆರ್ಯಾಂಬೆಯ ಸಮಾಧಿ ಇದೆ. ಎಲ್ಲವನ್ನಯ ದರ್ಶನ ಮಾಡಿದೆವು. ದೇವಲಾಯದ ಒಳಗಡೆ ನೈದಿಲೆ
ನೀಲಿ ಕಮಲಗಳು, ಕೊಳದಲ್ಲಿ ನೋಡಿದೆವು. ಅರಳಿದ್ದು ಬಹಳ ಸುಂದರವಾಗಿತ್ತು. ಹೀಮದೆ ನೋಡಿದಕ್ಕಿಂತ
ಸುಧಾರಣೆ ಅಗಿದೆ.
ಬಾಲ ಶಂಕರರು ತಾಯಿಯನ್ನು, 3 ಕಿ.ಮಿ. ದೂರದಲ್ಲಿರುವ ನದಿಗೆ ಸ್ನಾನಕೊಸ್ಕರ ಕರೆದು ಕೊಂಡು
ಹೊಗುತ್ತಿದ್ದರು. ಒಂದು ದಿನ ತಾಯಿ ಕುಸಿದು ಬಿದ್ದಾಗ, ಅಸಹಾಯಕರಾದ ಶಂಕರರು, ಕಣ್ಣೀರು ಮಿಡಿಯುತ್ತಾ
ಕೃಷ್ಣನ ಮೊರೆ ಹೊದರು, ಕಣ್ಣೀರಿಗೆ ಮಡಿದ ಕೃಷ್ಣನು, ಬಾಲ ಶಂಕರನಿಗೆ, ನೀನು ಕಾಲು ಊರಿದ ಗುರುತಿನಲ್ಲಿ
ನದಿ ಹರಿಯುತ್ತೆ ಅಂತ ಹರಿಸಿದರು. ಬಾಲ ಶಂಕರು, ಕಾಲು ಊರಿ, ಪೂರ್ಣ ನದಿಯನ್ನು, ಮನೆಯ ಹತ್ತಿರ ಹರಿಯುವಂತೆ ಮಾಡಿ, ತಾಯಿಗೆ ಅನುಕೂಲ ಮಾಡಿಕೊಟ್ಟರು. ಆಗಲೇ ಅವರು " ಅಚುತ ಅಷ್ಟಕ", ಬರೆದು
ಸುತ್ತಿಸಿದರು. ಶ್ರೀಂಗೇರಿ ಮಠದ " ನರಸಿಂಹ ಭಾರತಿ" ಯವರು, ಕಾಲಡಿಗೆ ಬಂದು, ಬಹಳ ಸಂಶೋಧನೆ
ನಡೆಸಿ, ಕಷ್ಟಪಟ್ಟು, ಇಲ್ಲಿಯ ಸ್ಥಳವನ್ನು ಹುಡುಕಿ, ಮಠ ಕಟ್ಟಿದರು. ತಾಯಿಯ ಸಮಾಧಿಯನ್ನು ಗುರುತಿಸಿದರು.
ಈ ಮಠವೂ ಕನ್ನಡ ಸ್ಮಾರ್ಥ ಬ್ರಾಹಣರಿಮದ ಪೂಜಿಸಲ್ಪಡುತ್ತದೆ. ಮಠದ ಅವರಣದಲ್ಲೆ ಊಟ ಮುಗಿಸಿ,
"ಗುರುವಾಯುರ್"ಗೆ ಪ್ರಯಾಣ ಬೆಳೆಸಿದೆವು.
5 ಗಂಟೆಗೆ ಗುರುವಾಯುರ್ ತಲುಪಿದೆವು. ಹೋಟೆಲ್ ಅರ್.ವಿ. ಟವರ್ ವಾಸ್ತವ್ಯ. ಹೋಟೆಲ್
ನಿಂದ 500 ಮಿ. ದೂರ ದೇವಸ್ಥಾನ. ಶುಭ್ರವಾಗಿ ಗುರುವಾಯುರ್ ದರ್ಶನಕ್ಕೆ ನಿಂತೆವು. ಹಿಂದೆ ನೋಡಿದಾಗ
ಹಸಿರು ಕಾಡು ಮರಗಳ ನಡುವೆ ಇತ್ತು. ಸುತ್ತಲು ಮರಗಳಿಗೆ ಅನೆಗಳನ್ನು ಕಟ್ಟಿದ್ದರು. ಈಗ ದೇವಸ್ಥಾನದ
ಮುಂದೆ ಕಬ್ಬಿಣದ ಚಪ್ಪರಗಳನ್ನು ಹಾಕಿದ್ದಾರೆ. ಪ್ರವೇಶ ದ್ವಾರದ ತನಕ ಅಂಗಡಿ ಕಾಂಪ್ಲೆಕ್ಸ್‍ಗಳು ಬಂದಿದೆ.
ವ್ಯೆವಸ್ಥೆ ಚೆನ್ನಾಗಿದೆ. ಸ್ಪೆಷಲ್ ದರ್ಶನವಿಲ್ಲ. ದೇವರ ಮುಂದೆ ಎಲ್ಲರಿಗೂ ಒಂದೇ ದರ್ಶನ. ಒಂದೇ ಲೈನು.
ದ್ವಾರಕದಿಂದ ತಂದ ಸುಂದರ ಸಣ್ಣ ಮೂರ್ತಿ. ದ್ವಾರಕದ ಶ್ರೀನಾಥ ಮೂರ್ತಿ ತರನೇ ಕಾಣುತ್ತೆ. ಇಲ್ಲಿ ಕೃಷ್ಣನು
ಭಕ್ತರ ಪಾಪವನ್ನು ಪರಿಹರಿಸುನೆಂದು ಪ್ರತೀತಿ. ವಿಶೇಷ ಶಿಲೆ "ಪಲಾಲ ಅಂಜನಮ" ನಿಂದ ಮಾಡಿದ ವಿಗ್ರಹ.
ಚಾರು ಹಸ್ತದ ವಿಗ್ರಹ. ಶಂಖ, ಚಕ್ರ, ಕಮಲ, ಗಧೆ. ತುಳಸಿ ಹಾಗು ಮುತ್ತಿನ ಹಾರ ಹಾಕಿ ಕೊಂಡಿರುವುದು.
ದಶ್ನ ಬಹಳ ಚೆನ್ನಾಗಿ ಅಯಿತು. ಮುದ್ದಾಗಿ ಇತ್ತು ವಿಗ್ರಹ. ಅನಂದವಾಯಿತು.
ಇಲ್ಲಿ ಭಕ್ರಿಂದ ತುಲಾಭಾರ, ಬೆಳ್ಳಿ, ಬಾಳೆಹಣ್ಣು, ಸಕ್ಕರೆ, ಬೆಲ್ಲ, ಕಾಯಿಯಿಂದಲೂ ನಡೆಸುತ್ತಾರೆ.ಪೂಜೆ, ಪುರಸ್ಕಾರಗಖು, ಕೇರಳದ ನಂಬೂದ್ರಿ ಬ್ರಾಹ್ಮಣರಿಂದ ನಡೆಯುತ್ತೆ. 6 ತಿಂಗಲ ಅವಧಿಯಲ್ಲಿ, ಅರ್ಚಕರು
ಅಲ್ಲೆ ಇರಬೇಕು. ದೇವಸ್ಥಾನದ ಕಲ್ಯಾನಿಯಲ್ಲೆ ಸ್ನಾನ ಮಾಡಿ, ದೇವಸ್ಥಾನದ ಒಳಗಡೆ ಇರಬೇಕು. ದೇವಸ್ಥಾನಕ್ಕೆ
ಬಂದ ಹಣ 45 ಕೋಟಿ ಎಫ್.ಡಿ., 3 ಟನ್ ಬೆಳ್ಳಿ, 600 ಕೆ.ಜಿ. ಬಂಗಾರ. ಬೆಲೆ ಬಾಳುವ ವಜ್ರ ರತ್ನಗಳು ಇವೆ.
ಬೇರೆ ದೇವಸ್ಥಾನಕ್ಕೆ ಹೊಲಿಸಿದರೆ ಇದು ಸಣ್ಣದು. ಅದರೆ ಅಕರ್ಷಕವಾಗಿದೆ. ಸಣ್ನ, ಸುಂದರ ಕೃಷ್ಣ ಪೂರ್ವಕ್ಕೆ
ಮುಖಮಾಡಿದೆ. ಅದೇ ಪೂರ್ವ ದ್ವಾರಕ್ಕೆ ಭೂಲೋಕ ವೈಕುಂಟ ದ್ವಾರ ಎನ್ನುತ್ತಾರೆ. ಬಂಗಾರ ಲೇಪಿತ ಧ್ವಜ
ಸ್ತಂಭ. ಧ್ವಜ ಸ್ತಂಭದ ಎರಡು ಪಕ್ಕಕ್ಕೆ 13 ಸುತ್ತು ಇರುವ ದೀಪಸ ಕಂಬಗಳು. ದೀಪ ಬೆಳಗಿದಾಗ ಚೆನ್ನಾ
ಗಿರುತ್ತೆ. ದೇವಸ್ಥಾನದ ಸುತ್ತಲು ಸಣ್ಣ ಸಣ್ನ ದೀಪಗಳು. ಅದರ ಸಾಲುಗಳು ಬಹಳ ಇವೆ. ಒಟ್ಟು 11 ಸಾಲು
ಗಳು ಇವೆ. ದೇವಸ್ಥಾನದ ಒಂದು ಕೊಣೆ ಮುಚ್ಚಿದೆ. ಅದನ್ನು ರಹಸ್ಯ ಕೊಣೆ ಅನ್ನುತ್ತಾರೆ. ಇದೂವರೆಗೂ
ತೆಗೆದಿಲ್ಲ. ಪಂಚನಾಗದಿಂದ ರಕ್ಷಣೆ ಇದೆ ಅನ್ನುತ್ತಾರೆ. ಯಾರು ತೆಗೆಯಲು ಧೈರ್ಯಮಾಡಿಲ್ಲ. ಆಭರಣ,
ನವರತ್ನಗಳು ಇರುವುದೆಂದು ಪ್ರತೀತಿ. ಇನ್ನೊಂದು ಕೊಣೆಯಲ್ಲಿ, ಸರಸ್ವತಿಯ ಪೂಜೆ, ನವರಾತ್ರೆಯಲ್ಲಿ ನಡೆಯುತ್ತೆ. ಪುಸ್ತಕಗಳ ಪೂಜೆ ನಡೆಯುತ್ತೆ. ಭಗವತಿಯ ಗುಡಿಯು ಇದೆ. ಗುರು ಹಾಗು ವಾಯು ಇಬ್ಬರು,
ಕೃಷ್ಣನನ್ನು ಇಲ್ಲಿಗೆ ತರುವುದನ್ನು, ಕಾಯುತ್ತಿದ್ದ ಭಗನತಿ ಸ್ಥಳ. ಕೃಷ್ಣ ಬಂದ ನಂತದ ಅವನನ್ನು ಸ್ವಾಗತಿಸಿ,
ಪ್ರತಿಷ್ಟಾಪಿಸಿ, ಭಗವತಿ ಬಲ ಪಕ್ಕದಲ್ಲಿ ಇದ್ದಾರೆ. ಇಲ್ಲಿಯ ಒಂದು ಮಂಟಪದಲ್ಲಿ, ಕೃಷ್ಣನಾಟ್ಯಂ ನಡೆಯುತ್ತದೆ.
ನಾರದ ಪುರಾಣ ಪ್ರಕಾರೀ ಮೂರ್ತಿಯು ಬ್ರಹ್ಮನಿಂದ ಪೂಜಿಸಲ್ಪಟ್ಟು, ನಂತರ ಕೃಷ್ಣನ ತಂದೆ
ವಸುದೇವನಿಂದ ಪೂಜಿಸಲ್ಪಡುತ್ತದೆ. ಸ್ವಂತ ಕೃಷ್ಣನೂ ಪೂಜಿಸಿದ್ದಾನೆ. ಕೃಷ್ಣನಿಂದ ಉಧ್ವವನಿಗೆ ಸೇರಿತು.
ದ್ವಾರಕೆ ಸಮುದ್ರದಲ್ಲಿ ಮುಳುಗುವಾಗ, ಗುರು ಹಾಗು ವಾಯು ಅದನ್ನು ರಕ್ಷಣೆ ಮಾಡಿ ರುದ್ರತೀರ್ಥ ಎಂಬ ಈ
ಸ್ಥಳದಲ್ಲಿ, ಶಿವನು ಧ್ಯಾನ ಮಾಡಿದ, ಪರಶುರಾಮ ಕ್ಷೇತ್ರ ಕೇರಳದಲ್ಲಿ ಪ್ರತಿಷ್ಠಾಪಿಸಲಾಯಿತು. ಇನ್ನೂಂದು
ಕಥೆಯ ಪ್ರಕಾರ ಜನಮೇಜಯ ರಾಜ, ಸರ್ಪಯಾಗದ ನಂತರ ತೊನ್ನು ಬಂದು, ಅದರ ನಿವಾರಣೆಗೆ, ಅವನು
ದತ್ತಾತ್ರೇಯ ಗುರುವಿನ ಆದೇಶದ ಮೇಲೆ, ಗುರುವಾಯುರ್ ನಲ್ಲಿ 4 ತಿಂಗಳು ಇದ್ದು, ಪೂಜೆ ಮಾಡಿ. ತೊನ್ನು
ನಿವಾರಣೆ ಮಾಡಿಕೊಂಡ ಅಂತ ಕಥೆ ಇದೆ. ದರುಶನ್ ನಂತರ ರಾತ್ರೆ ಗುರುವಾಯುರ್ ನಲ್ಲೆ ಕಳೆದೆವು.
1-2-2015 ರಂದು ಬೆಳೆಗ್ಗೆ 4 ಗಂಟೆಗೆ ಪ್ರಯಾಣ. ಸಿಹಿ ಖಾರ ಅವಲಕ್ಕಿ ಉಪಹಾರ, ದಾರಿಯ ವೈನಾಡ್ ಮಾರ್ಗದಲ್ಲಿ. ಶ್ರೀ ರಂಗ ಪಟ್ಟಣದಲ್ಲಿ, ಪಶ್ಛಿಮವಾಹಿನಿಯ, ಸಾಯಿ ಸದನದಲ್ಲಿ, ಊಟ, ಬಿಡದಿಯಲ್ಲಿ
ಕಾಫಿ, ಬೆಂಗಳೂರು ಸಂಜೆ 6.30ಕ್ಕೆ ತಲುಪಿದೆವು. 7 ಕ್ಕೆ ಓಲಾದಿಂದ ಮನೆಗೆ ವಾಪಸ್ಸು. ಪ್ರಯಾಣದ ಗುಂಗಿ
ನಲ್ಲೆ ವಿರಾಮ. ದೇವರ ದಯೆಯಿಂದ ಯಾವ ಅಹಿತಕರ ಘಟನೆ ನಡೆಯದೆ ಪ್ರವಾಸ ಮುಕ್ತಾಯವಾಯುತು.
********************************
Wow! Super pics along with very good narration. Hats off to your memory. The way you have rendered is really informative. Love to read more.
ReplyDelete