Tuesday, 20 December 2016

: -:ಓಂ ನಮಃ ಶಿವಾಯ-

  : -:ಓಂ ನಮಃ ಶಿವಾಯ-     

       ಅಷ್ಟಜ್ಯೋತಿರ್‍ಲಿಂಗ, ಪಂಚ ದ್ವಾರಕ ಹಾಗು ಇತರೆ ಪ್ರವಾಸ 15-2-2013 ರಿಂದ 10-3-2013



             ಮುಂಚೇನೆ 4 ಜ್ಯೋತಿರ್‍ಲಿಂಗ ಶ್ರೀ ಶೈಲಾ, ಶ್ರೀ ರಾಮೇಶ್ವರ, ಶ್ರೀ ಕೇದಾರ, ಹಾಗು, ಶ್ರೀ ಕಾಶಿ
ವಿಶ್ವನಾಥ, ಇವೆಲ್ಲಾ ದರ್ಶನ ಮಾಡಿದ್ದರಿಂದ, ಉಳಿದ ಎಂಟು ಜ್ಯೋತಿರ್ ಲಿಂಗ ಈ ಪ್ಯಾಕೇಜ್ ನಲ್ಲಿ ಇದ್ದುದರಿಂದ
ನಾವುಗಳು, ಇದನ್ನು ಆರಿಸಿ, ಮೊದಲೆ ಕಾದಿರಿಸಿದೆವು.  ಹಿಂದೆಯೂ ಹಂಸಾ ಟ್ರಾವೆಲ್ಸ್ ನಲ್ಲಿ ಹೊದದ್ದರಿಂದ
ಅದನ್ನೆ ಅರಿಸಿದೆವು.  ಅವರ ಊಟೋಪಚಾರ. ಸಮಯ ಪ್ರಜ್ಣೆ, ಅತ್ಮೀಯತೆ, ಹಾಗು ನಮ್ಮದೇ ಅಡಿಗೆ.  ಹಂಸಾ
ಬಳಗದವರು, ಅವರ ಮ್ಯಾನೇಜರ್, ಅವರ ಅಸಿಸ್ಟೆಂಟ್, ಡ್ರ್ಯವರು, ಅವರ ಸಹಾಯಕರು ಚೆನ್ನಾಗಿ ನೋಡಿಕೊಳ್ಳು
ತ್ತಿದ್ದರು.

          15-2-2013 ರಂದು, ರಾತ್ರೆ 7.20ಕ್ಕೆ ಹೊರಡುವ ಕರ್ನಾಟಕ ಎಕ್ಸಪ್ರೆಸ್‍ನಲ್ಲಿ ನಾವು ಪ್ರಯಾಣ
ಬೆಳಸಿ, 17-2-2013ರಂದು, ಬೆಳಿಗ್ಗೆ 8 ಗಂಟೆಗೆ ಅಗ್ರಾ ಕ್ಯಾಂಟ್ ತಲುಪಿದೆವು.  " ಹೋಟೆಲ್ ಅಗ್ರಾ ಡೀಲೆಕ್ಸ್
ಪ್ಲಾಝ"ದಲ್ಲಿ ವಾಸ್ತವ್ಯ.  11.15 ರಿಂದ 2ರ ವರಗೆ, ತಾಜ್ ಮಹಲ್ ಬೇಟಿ.  ಇದು ನಮ್ಮ ಎರಡನೇ ಬೇಟಿ.
ಈ ಸಲ ನಾವು ತಾಜ್ ಮದ್ಯೆ, ಗೋಳಾಕಾರದ ಗೋಪುರದ ಮೇಲೆ ಇರುವ ತ್ರಿಶೂಲ ಗಮನಿಸಿದೆವು.  ಮಮ್ತಾಜ್
ಗೋಸ್ಕರ ಶಹಜಹಾನ್ ಕಟ್ಟಿಸಿದ ಅಮೃತ ಶಿಲೆಯ ಗೋರಿ.  ಇದರ ಎಡ ಹಾಗು ಬಲ ಭಾಗದಲ್ಲಿ ಮಸೀದಿಗಳು
ಇದೆ.  ಬಹಳ ಸುಂದರವಾದ, ಯಮುನ ನದಿಯ ದಡದಲ್ಲಿ, ನಾಲ್ಕು ಅಂತಸ್ತಿನ ಅಮೃತ ಶಿಲೆಯ ಗೋರಿ.
ಮೇಲೆ ತನಕ ಹತ್ತಿ ಎಲ್ಲವನ್ನು ಚೆನ್ನಾಗಿ ನೋಡಿಕೊಂಡು ಬಂದೆವು.

          ಅಲ್ಲಿಂದ ಅಗ್ರಾ ಕೊಟೆಗೆ ಹೊದೆವು.  ಅಕ್ಬರ್ ಕಾಲದಲ್ಲಿ ಪ್ರಾರಂಭವಾಗಿ, 95 ವರ್ಷಗಳ ಕಾಲದಲ್ಲಿ
ಕೊಟೆ ಕಟ್ಟಲ್ಪಟ್ಟದೆ.  ಕೊಟೆಯ ಸುತ್ತಲು ನೀರಿನ ಕಂದರ.  ಅದರೊಳಗೆ ಮೊಸುಳೆಗಳು.  ಶತ್ರುಗಳ ರಕ್ಷಣೆಗೆ.
ಹಿಂದೂ ಮುಸ್ಲಿಮ್ ಶೈಲಿಯಲ್ಲಿ, ಕುಮಾರಿಯಾಗೆ ಉಳಿದ ತನ್ನ ಹಿಂದೂ, ಮುಸ್ಲಿಮ್, ಹಾಗು ಕ್ರಿಸ್ಚಿಯನ್ನು
ಮಗಳಿಗೊಸ್ಕರ ಕಟ್ಟಿದ ಡೋಲಿ ಸ್ಮಾರಕಗಳು, ಒರೆಗಲ್ಲಿನ ಮಂಚ, ಅಗಿನ ಕಾಲದಲ್ಲಿ ಇದ್ದ ಜನತಾ ದರ್ಬಾರ್
ಹಾಲ್, ಶಾಪಿಂಗ್ ಕಾಂಪ್ಲೆಕ್ಸ್. ಎ,ಸಿ. ರೂಮ್, ಜೋಧಬಾಯಿ ಅರಮನೆ (ಹಿಂದು ಶ್ಯೆಲಿಯಲ್ಲಿ), ಮಂದಿರ, ನೃತ್ಯ
ಮಂದಿರ, ಶೇಖ್ ಮಹಲ್, ಷಹಜಾನನ ಬಂದಿಖಾನೆ, ನವರತ್ನ ಮಂಟಪ,( ಈಗ ಒಳಗೆ ಬಿಡುವುದಿಲ್ಲ).ಟಾರ್ಚ್
ಹಾಕಿದರೆ ರಿಪ್ಲೇಕ್ಶನ್ ಬರುತ್ತೆ.  ನೆಲದಲ್ಲಿ ಮಾಡಿದ ಪಗಡೆ ಹಾಸು, ಇನ್ನು ಎನೇನೊ ನೋಡಿದೆವು.  ಷಹಜಾನ್
ತನ್ನ ಅನದಿಕೃತ ಹೆಂಡತಿಯರನ್ನು ಪಗಡೆಕಾಯಿ ಬದಲು ಉಪಯೋಗಿಸುತ್ತಿದ್ದದು ಶೋಚನೀಯ.  4 ಜನ ನಿಲ್ಲ
ಬಹುದು ಅಷ್ಟು ದೊಡ್ಡ ಪಗಡೆ ಮನೆಯ ಒಂದೊಂದು ಚೌಕ.

          ಕೊಟೆಯ ಹೆಬ್ಬಾಗಿಲಿನಲ್ಲಿ, ತಕ್ಷಣ ಒಳಗೆ ಬರಲು ಅಗದ ಹಾಗೆ, ಇಳಿಜಾರಿನಲ್ಲಿ, ಇಂಚಿಂಚಿಗೂ
ಸ್ಪೀಡ್ ಬ್ರೇಕರ್ಸ್.  ಕೊಟೆ ಸುತ್ತಳತೆ 2 ಕಿ.ಮಿ. ಇದೆ.  ಇಲ್ಲಿಂದಲೂ ತಾಜಮಹಲ್ ಹಾಗು ಯಮುನಾ ನದಿ
ನೋಡಬಹುದು.  ಈಗ ಈ ಜಾಗದಲ್ಲಿ 75% ಅರ್ಮಿ ಜನ, 25% ಮಾತ್ರ ನೋಡಲು ಬಿಟ್ಟಿರುತ್ತಾರೆ.  ರಾಜರುಗಳ
ದರ್ಬಾರು ಹೇಗಿತ್ತು ಅಂತ ತಿಳಿಯುತ್ತೆ.  ಎಲ್ಲಾ ಕೆಂಪು ಕಲ್ಲಿನದು.  (ಸ್ಯಾಂಡ್ ಸ್ಟೋನ್).  ಒಳಗಡೆ ಉದ್ಯಾನ
ವನ ಸಹ ಚೆನ್ನಾಗಿದೆ.  ಅರ್ಕೆಯೀಲೊಜಿಕಲ್ ವಿಭಾಗದವರು ನೋಡಿಕೊಳ್ಳುತ್ತಿದ್ದಾರೆ.  ಎಲ್ಲಾ ಕಡೆ ಫೋಟೋ  
ತೆಗೆಯಲು ಅವಕಾಶವಿದೆ.  ಅದೇ ರಾತ್ರೆ 10.30ಕ್ಕೆ ಪುಷ್ಕರಕ್ಕೆ ಪ್ರಯಾಣ.  ಈ ಪ್ಯಾಕೇಜ್‍ನಲ್ಲಿ 2 ದಿನ ರಾತ್ರೆ
ಪ್ರಯಾಣವಿದೆ.

          18-12-2013. 4 ನೇ ದಿನ ಪ್ರಯಾಣ.  ಬೆಳಿಗ್ಗೆ 7.30ಕ್ಕೆ ಪುಷ್ಕರಕ್ಕೆ ಬಂದೆವು.  ಬಹ್ಮ ಯಜÐ ಮಾಡಲು ಭೂಮಿಯಲ್ಲಿ ಜಾಗಕ್ಕಾಗಿ, ಮೇಲಿನಿಂದ ಒಂದು ಕಮಲವನ್ನು ಕೈಯಿಂದ ಎಸೆಯುತ್ತಾನೆ.  ಅದು ಬಿದ್ದ ಸ್ಥಳದಲ್ಲಿ ಒಂದು ಸರೋವರ ಅಗುತ್ತೆ.  ಪುಪ್ಪ+ಕರ=ಪುಷ್ಕರ ಅಂತ ಹೆಸರು ಬಂದಿದೆ.  ಬಹಳ ದೊಡ್ಡ ಸರೋ
ವರ.  ಆ ಜಾಗದಲ್ಲಿ ಬ್ರಹ್ಮನು ಯಜÐಮಾಡಲು ನಿಶ್ಚಯಿಸಿದಾಗ, ನಾರದರ ಕಿತಾಪತಿಯಿಂದ (ನಿಧಾನವಾಗಿ ಬರಲು
ಸರಸ್ವತಿಗೆ ತಿಳಿಸಿದ್ದು), ಸರಸ್ವತಿಗೆ ಯಜÐಕ್ಕೆ ಬರಲು ತಡವಾಯಿತು.  ಮಹೂರ್ತಕ್ಕೆ, ಸರಿಯಾದ ಕಾಲಕ್ಕೆ ಬರದೆ
ಇದ್ದುದರಿಂದ, ಬ್ರಹ್ಮ ಯಜ್ಞ ಕಾರ್ಯಕೊಸ್ಕರ ಒಂದು ಗೊಲ್ಲ ಹುಡುಗಿಯನ್ನು ಮದುವೆಯಾಗಿ, ಯಜ್ಞ ಪ್ರಾರಂಬಿ
ಸುತ್ತಾನೆ.  ನಂತರ ಸರಸ್ವತಿಯ ಕೋಪಕ್ಕೆ ಹೆದರಿ, ಅ ಬಾಲಕಿಯನ್ನು ಹುಲ್ಲು ಮಾಡಿ, ಹಸುವಿಗೆ ತಿನ್ನಿಸಿದಾಗ,
ಹೊರಗೆ ಬಂದ ಸಗಣಿಯಿಂದ, ಮತ್ತೆ ಬಾಲಕಿ ಹುಟ್ಟಿದಾಗ ಗಾಯ್-ತ್ರಿ ಎಂಬ ಹೆಸರು ಬರುತ್ತದೆ.  ಕೋಪಗೊಂಡ
ಸರಸ್ವತಿ ಬ್ರಹ್ಮನಿಗೆ ಶಾಪ ಕೊಡುತ್ತಾಳೆ.  ಅವನು ಎಲ್ಲೂ ಪೊಜೆಗೆ ಅರ್ಹನಲ್ಲ ಅಂತ.  ಅದರೆ ಈ ಜಾಗದಲ್ಲಿ
ಮಾತ್ರ ಪೂಜಿಸುತ್ತಾರೆ.  ಇನ್ನೇಲ್ಲೂ ಇಲ್ಲ.  ಇಲ್ಲಿ ಬಹ್ಮ ದೇವಸ್ಥಾನವಿದೆ.  ಅರತಿ, ಪೂಜೆ, ನೆವೇದ್ಯ ಎನು ಇಲ್ಲ.
ಪುಷ್ಕರದಿಂದ ನೀರಿನಿಂದ ಪೂಜಿಸುತ್ತಾರೆ ಅಷ್ಟೆ.  ಪುಷ್ಕರದಲ್ಲಿ ಸ್ನಾನ ಮಾಡಿ, ಪ್ರಿತೃತರ್ಪಣದ ನಂತರ ತಿಂಡಿ ತಿಂದು ನಂತರ "ಹೋಟೆಲ್ ರಾಜಶ್ರೀ"ಗೆ ಹೊದೆವು.

        ಊಟದ ನಂತರ ಅಲ್ಲಿಂದ ಅಜ್ಮೀರ್‍ಗೆ ಹೊದೆವು.  ಬಹಳ ಪ್ರಸಿದ್ಧಿಯಾದ "ಶರೀಪ್ ಕ್ವಾಜ ಮಯಿ
ಮುದ್ದೀನ್ ಚಿಸ್ತಿ" ದರ್ಗಾ ನೋಡಿದೆವು.  ಇಲ್ಲಿ ಪ್ರಪಂಚದ ಎಲ್ಲಾ ಧರ್ಮದವರು ಬರುತ್ತಾರೆ.  ದೇವ ಒಬ್ಬ
ನಾಮ ಹಲವು.  ಅವರವರ ನಂಬಿಕೆ ಅವರವರಿಗೆ.  ಧರ್ಮ ಬೇರೆಯಾದರೇನು, ನೋಡಿಕೊಂಡು ಅವರ ಒಳ್ಳೆತನ
ವನ್ನು ಸ್ವೀಕರಿಸ ಬೇಕು.  4 ನೇ ರಾತ್ರೆ ಪುಷ್ಕರದ ಹೋಟೆಲ್ ನಲ್ಲಿ ಕಳೆಯಿತು.

          19-2-2023. ಪ್ರಯಾಣದ 5 ನೇ ದಿನ.  ಬೆಳಿಗ್ಗೆ 5 ಗಂಟೆಗೆ, ಪುಷ್ಕರದಿಂದ ದ್ವಾರಕದೀಶ್
ದರ್ಶನಕ್ಕೆ ಪ್ರಯಾಣ.  ಕಂಕ್ರೋಲಿ ದ್ವಾರಕ ಮೊದಲನೇ ದ್ವಾರಕ.  11.45ಕ್ಕೆ ತಲುಪಿದೆವು.  ಒಳ್ಳೆಯ ದರ್ಶನ
ವಾಯಿತು.  ಹಳೇ ರಾಜಸ್ತಾನಿ ಹವೇಲಿ.  ಕೆಲವು ಮೆಟ್ಟಿಲ್ಲನ್ನು ಹತ್ತಿ ಹೊಗಬೇಕು.  ರಾಜಸ್ತಾನದಲ್ಲಿ ಇದು ಇದೆ.
ಮಟ್ಟ ಒಂದು ತರಹ ಸಿಹಿ ರೋಟ್ಟಿ ಪ್ರಸಾದ ತೆಗೆದು ಕೊಂಡ್ವಿ.

          ಬೃಂದಾವನದಲ್ಲಿ, ಔರಂಗಜೇಬ್ ದೇವಸ್ಥಾನ ವನ್ನು ನಾಶಮಾಡಿದಾಗ, ರಾತ್ರೋ ರಾತ್ರೆ ದೇವರ
ವಿಗ್ರಹವನ್ನು, ತಂದು ಬಾವಿಯಲ್ಲಿ ಹಾಕುತ್ತಾರೆ.  ಅಲ್ಲಿ ದೇವರು ಬೆಳೆಯುತ್ತಿದ್ದ ಅಂತ ನಂಬಿಕೆ.  ಆ ಬಾವಿಯಿಂದ
ತಂದ ಮೊದಲ ವಿಗ್ರಹ ಈ ದ್ವಾರಕದಲ್ಲಿ ಇದೆ.  ಇನ್ನು ಬೆಳೆಯದಿದ್ದರಿಂದ, ಸಣ್ಣ ಸುಂದರ ಅರ್ಧ ಅಡಿಯ
ವಿಗ್ರಹ.  56 ಬಗೆಯ ನೇವೇದ್ಯ ವಾಗುತ್ತೆ.  ಭಕ್ತರ ಬೀಡು ಬಹಳವಿತ್ತು.  ಮುಕುಂದ ಮಾಲದ ಪಠನ.

          ಕಂಕ್ರೋಲಿಯಿಂದ 2ನೇ ದ್ವಾರಕ "ನಾಥ ದ್ವಾರಕ" ನೊಡಲು ಹೊದೆವು.  ರಸ್ತೆ ಉದ್ದಕ್ಕೂ
ಅಮೃತ ಶಿಲೆಯ ಸ್ಲಾಬ್ ಅಂಗಡಿಗಳು.  ಹಲವು ಬಗೆಯ ಮಂದಾಸನಗಳು, ಇತರೆ ಕೈಕೆಲಸದ ಸಾಮನುರಸ್ತೆ
ಉದ್ದಕ್ಕೂ ಇತ್ತು.  ಅರ್ಧ ಗಂಟೆ ಪ್ರಯಾಣ.  " ನಾಥ ದ್ವಾರ" ಅಂತ. ಬಹಳಷ್ಟು ನೂಕು ನುಗ್ಗಲು.  ನಿಂತರೆ ಸಾಕು, ನೂಕಿನಿಂದ ಮುಂದೆ ಸಾಗಿ, ದೇವರ ದರ್ಶನದಿಂದ ಹೊರಗಡೆ ಬರುತ್ತೆವೆ.  ಕರಿಯ ಶಿಲೆಯ 2 ಅಡಿ
ಎತ್ತರದ ದ್ವಾರಕಜೀಯ ವಿಗ್ರಹ ಬಹಳ ಚೆನ್ನಾಗಿತ್ತು.  ಎರಡು ಕೈಯನ್ನು ಮೇಲಕ್ಕೆ ಎತ್ತಿದ ಭಂಗಿ ಅಲ್ಲಿಂದ
ಹೊರಟು ಬಂದು ಊಟಮಾಡಿ, "ಏಕಲಿಂಗಿ" ನೋಡಲು ಹೋದ್ವಿ.      

          ಸ್ವಲ್ಪ ಪ್ರಯಾಣದ ನಂತರ ಏಕಲಿಂಗಿ ದೇವಸ್ಥಾನ 4 ಗಂಟೆಗೆ ಪ್ರಾರಂಭ ಅಂತ ಅದರ ಸುತ್ತಾ
ಇರುವ ದೇವಸ್ಥಾನಗಳನ್ನು, ಸರೋವರವನ್ನು ನೋಡಿಕೊಂಡು, ಅಲ್ಲಿಯೇ ಮಂಟಪದ ಕೆಳಗೆ ಕೂತು. ಬಸ್ಸಿನಲ್ಲಿ
ನಡೆದ ಸಂಭಾಷಣೆಯು ಮುಂದುವರೆಯಿತು.  "ಎಲ್ಲಿದ್ದಾನೆ ದೇವರು" ವಿಷಯ.  ಮುಕ್ತಾಯ ನನ್ನ ಹಾಡಿನಿಂದ
ಅಯಿತು."ಏಲ್ಲೋ ಹುಡುಕಿದೆ ಇಲ್ಲದ ದೇವರ.....", ಶ್ರೀಮಾನ್ ಜಿ.ಎಸ್. ಶಿವರುದ್ರಪ್ಪರವರ  ಹಾಡಿನಿಂದ.
ಪ್ರತಿಕ್ರಿಯೆ ಚೆನ್ನಾಗಿ ಇತ್ತು.  ದೇವರ ಬಗ್ಗೆ ಪ್ರತಿಯೂಬ್ಬರ ಅನಿಸಿಕೆ, ವಿಚಾರ ಚೆನ್ನಾಗಿತ್ತು.

          4 ಘಂಟೆಗೆ ಪ್ರವೇಶ ಒಂದು ಸಣ್ಣ ಬಾಗಿಲಿನಿಂದ ಅಯಿತು.  ಹೊರಗಡೆ ಇದ್ದ ಗಣಪತಿ ಹಾಗು
ದೇವಿಯ ಫೋಟೋ ತೆಗೆದೆವು.  ಒಳಗಡೆ ತೆಗೆಯುವ ಹಾಗೆ ಇಲ್ಲ.  ಒಳ ಹೊಕ್ಕಾಗ ಅಚ್ಚರಿ ಅಯಿತು. ಕೆತ್ತನೆಯ ಕೆಲಸವ ನೋಡಿ.  ಅತಿ ಸುಂದರ ಸೂಕ್ಷ್ಮ ಕಲ್ಲಿನ ಕೆತ್ತನೆಗಳು.  ಅನಂದ ಪರವಶರಾಗಿ, ತನ್ಮಯರಾದೆವು.
ನಮ್ಮ ದೇಶಕ ಕಲೆಯ ಶ್ರೀಮಂತಿಕೆಗೆ ಹೋಲಿಕೆಯೆ ಇಲ್ಲ.  ದಕ್ಷಿಣದ ಹೊಯ್ಸಳ, ಪೂರಿ ಜಗನಾಥ ತರಹ ಶಿಲ್ಪ
ಶೈಲಿಗಳ ಮಿಶ್ರಣ.  ಒಂದೇ ಲಿಂಗದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಸೂಂiÀರ್i.  ದೇವಸ್ಥಾನದ ಸುತ್ತಲು
108 ಗುಡಿಗಳು ಇವೆ.  ಇಂದ್ರ ಸರೋವರ ಹಿಂದೆ ಇರುವುದು.  ಪ್ರಶಾಂತವಾಗಿ ಕಲ್ಲು ಬೆಟ್ಟಗಳಿಂದ, ಮರಗಿಡ
ಗಳಿಂದ ಸುತ್ತುವರೆದ ಜಾಗ.

          ಅಲ್ಲಿಂದ ನಾವು ಉದಯಪುರಕ್ಕೆ, ನಮ್ಮ ಪ್ರಯಾಣ ಮುಂದುವರೆಸಿದೆವು.  ಟ್ರಾಫಿಕ್ ಜಾಮ್
ಬಹಳ ವಿತ್ತು.  ರಸ್ತೆಗಳ ಡೀವಿಯೇಶನ್ ಹಾಗು ರಿಪೇರಿ ಇತ್ತು.  ಹೋಟೆಲ್ ರವರಿಗೆ ಸಂರ್ಪಕಿಸಿ, ಅವರುಗಳೇ
ಬಂದು ಬದಲಿ ರಸ್ತೆಯಿಂದ ಸುತ್ತಿ ಹೋಟೆಲ್ಗೆ ರಾತ್ರೆ 8 ಗಂಟೆಗೆ ತಲುಪಿದೆವು.  ಒಳ್ಳೆಯ ಬಿಸಿ ಬಿಸಿ ಊಟಮಾಡಿ
ಗಡದ್ದಾಗಿ ನಿದ್ರೆ ಮಾಡಿದೆವು.  ತಂಗುದಾಣ "ಹೋಟೆಲ್ ರಾಜ್ ಕಮಲ್" ಉದಯಪುರ್. 5 ನೇ ರಾತ್ರೆ ಕಳೆಯಿತು.

          20-2-2013. ಪ್ರಯಾಣದ 6ನೇ ದಿನ.  ಬೆಳಿಗ್ಗೆ ತಿಂಡಿ ತಿಂದು ಉದಯಪುರ ನೋಡಲು ಹೊರೆ
ಟೆವು.  ಇದು ಸಿಟಿ ಅಫ್ ಟೆಂಪಲ್ಲ್, ಲೇಕ್ಕ್, ಹಾಗು ಹಿಲ್ಲ್.  ದೋಣಿ ಪ್ರಯಾಣದಿಂದಲೇ (ವಿಹಾರ ದಿಂದಲೇ)
ಸುತ್ತಲಿನ ಅರಮನೆ, ದೇವಸ್ಥಾನಗಳು, ಘಾಟ್ ಗಳು. ಹೋಟೆಲ್‍ಗಳು(ಓಬೆರಾಯ್ ತಾಜ್ ಗ್ರೂಪ್‍ಗಳು) ನೋಡಿ
ದೆವು.  ಐಲ್ಯಾಂಡ್ ಹೋಟೆಲ್, (ಹಿಂದೆ ರಾಜರುಗಳ ಹನಿಮೂನ್ ಜಾಗವಾಗಿತ್ತು), ಅಲ್ಲಿ ರೂಮಿನ ಬಾಡಿಗೆ ದಿನಕ್ಕೆ
35,000 ರೂ. ದಿಂದ 3 ಲಕ್ಷದವರೆಗೆ.  ಅತಿ ಶ್ರೀಮಂತ ಹಾಗು ಇತರೆ ಸೆಲೆಬ್ರೀಟೆಸ್ ಮದುವೆ ಹಾಗು ಇತರೆ
ಕಾರ್ಯಕ್ರಮ ಮಾಡಿಕೊಂಡು ಹೋಗುತ್ತಾರೆ.  ಲೆಕ್ಕವಿಲ್ಲದಷ್ಟು ನೀರಕ್ಕಿಗಳು ತೇಲುತ್ತಿದ್ದವು.  ಸಮ್ಮರ್ ಪ್ಯಾಲೇಸ್
ಬೆಟ್ಟದ ಮೇಲೆ ಇದೆ.  ಹಿಂದೆ ರಾಜರು ವೈಭವ ಜೀವನ ನಡೆಸುತ್ತಿದ್ದರು.  ಇಲ್ಲಿ ಇರುವುದೆಲ್ಲ ಮನುಷ್ಯರಿಂದ
ಕಟ್ಟಲ್ಪಟ್ಟ ಕೃತಕ ಸರೋವರಗಳು.  ಅವರ ಬುದ್ದಿ ಎಷ್ಟು ಚುರುಕಾಗಿತ್ತು.  ನಗರ ಎತ್ತರದ ಸ್ಥಳದಲ್ಲಿ, ಮೇಲೆ
ಇದೆ.  ಇಳಿಜಾರಿನಲ್ಲಿ ಕಣಿವೆಯಲ್ಲಿ ಕೆರೆ ಕಟ್ಟಿ ನೀರಿನ ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ.  ದಕ್ಷಿಣದ ಮೇವಾರು
ಪ್ರಾಂತ ಹಚ್ಚ ಹಸಿರು.  ಉತ್ತರದ ಮಾರ್‍ವಾಡ್ ಪ್ರಾಂತ ಮರುಭೂಮಿ.  ಮೇವಾರುಗಳು ಕ್ಷತ್ರಿಯರು.  ಮಾರ್‍ವಾಡ್ ನಲ್ಲಿ ಜನ ಮಾರ್‍ವಾಡಿಗಳು, ವ್ಯಾಪಾರಿಗಳು.

          ನಂತರ ನಾವು ಉದಯಪುರ ಅರಮನೆ ನೋಡಲು ಹೋದೆವು.  ಇದು ಎರಡನೇ ದೊಡ್ಡ ಅರ
ಮನೆ, ಮೈಸೂರು ನಂತರ.  2 ಎಕರೆ ಜಾಗದಲ್ಲಿದೆ.  ಗ್ಯಾಲರಿ ಚೆನ್ನಾಗಿದೆ.  5 ಅಂತಸ್ತಿನ ಬೆಟ್ಟದ ತುದಿಯ
ತನಕ ಇರುವ ಅರಮನೆ.  ಸೂರ್ಯ ಇವರ ಅರಾಧ್ಯ ದೇವತೆ.  ರಾಮನ ವಂಶಜರು.  ರಾಣಿ ಮಹಲ್ ಶೀಷ್
ಮಹಲ್ ಇದೆ.  ಮಹರಾಜನ ವಂಶಸ್ಥರ ವಾಸ.  ಪೀಕ್‍ಕಾಕ್ ಕಾರೀಡಾರ್ ಬಹಳ ಚೆನ್ನಾಗಿದೆ.  ಇಲ್ಲಿ ಗಾಜಿನಿಂದ
ಪರ್‍ಶೀಯ (ಈಗಿನ ಇರಾನ್)ನಿಂದ ಕಲಾವಿದರು ಬಂದು ನವಿಲು ಮಾಡಿದ್ದರೆ.  ಇಲ್ಲಿ ಸಭೆ, ನೃತ್ಯಗಳು ನಡೆಯು
ತ್ತಿತ್ತು.  ಎಲ್ಲಾ ಮಹಲುಗಳು, ಊಟದ ಮನೆಯು ಸಹ, ಗಾಜಿನಿಂದ ಹೊಳೆಯುತ್ತಾ ಶ್ರೀಮಂತವಾಗಿದೆ.

          ಇಲ್ಲಯ ಮ್ಯೂಸಿಯಂ ನಲ್ಲಿ, ಪೇಂಟಿಂಗ್ ನಲ್ಲಿ ರಾಣ ಪ್ರತಾಪ್ ಸಿಂಗ್ ಉಪಯೋಗಿಸುತ್ತಿದ್ದ
"ಚೇತಕ್" ಎಂಬ ಕುದುರೆ, ಅದರ ಸಾಹಸ, ಅದು ಅನೆ ಬಂದು ದಾಳಿ ಮಾಡಿದಾಗ, ಅನೆಯ ಎತ್ತರಕ್ಕೆ 2 ಕಾಲು
ಇಟ್ಟು ಸೆಣೆಸಾಡಿ, ರಾಜನನ್ನು ಮೊಸದಿಂದ ಅವರ ಕಡೆಯ ಜನರೆ ಕೊಲ್ಲಲು ಪ್ರಯತ್ನಿಸಿದಾಗ, ರಾಜನನ್ನು ಶರವೇಗ
ದಿಂದ ಕರೆದುಕೊಂಡು, ನದಿಯನ್ನು ದಾಟಿ, ಕಾಡಿನಲ್ಲಿ ರಕ್ಷಿಸಿದ ಚಿತ್ರಣ ಬಹಳ ಚೆನ್ನಾಗಿದೆ.  ನಂತರ ರಾಜನು
ದಾಳಿ ಬರುವ ಅನೆಗಳಿಗೆ. ಚೇತಕ್ ಕುದುರೆ ಅನೆಮರಿ ಅಂತ ಅನುಮಾನ ಬರುವ ರೀತಿ, ಅದರ ಮುಖದ ಕೆಳಗೆ
ಅನೆಯ ಸೊಂಡಿಲನ್ನು ಸೇರಿಸುತ್ತಿದ್ದ.ಅದರ ಚಿತ್ರಣ ಇದೆ.  ಇಲ್ಲಿಯ ರಾಜರು ಯಾವತ್ತು ಮೊಘಲರಿಗೆ ಬಗ್ಗಲಿಲ್ಲ.
ವೀರಾದಿ ವೀರರು ಹಾಗು ದೇಶಪ್ರೇಮಿಗಳು.  ಈಗಲೂ ಚೇತಕ್ ಹೆಸರು ಏರ್‍ಫೋಸ್ ನಲ್ಲಿ ಹೆಲಿಕ್ಯಾಪ್ಟರ್‍ಗೆ
ಇಟ್ಟಿದೆ.  ಹಿಂದೆ ಸ್ಕೂಟರ್ ಸಹ ಇತ್ತು.  ಬಹಳ ಎತ್ತರದ ಬಲಶಾಲಿಯಾದ ಕುದುರೆ.

          ತನ್ನನ್ನು ಮುಸ್ಲಿಮರಿಗೆ ಅರ್ಪಿಸಿಕೊಳ್ಳದೆ ಬಾವಿಗೆ ಹಾರಿದ ದೀರ ಮಹಿಳೆ ಪದ್ಮಿನಿ ಹಾಗು ಮಹಾ
ಭಕ್ತೆ ಮೀರಾ ಬಾಯಿಯ ಸ್ಥಳವಿದು.  ಮೀರಾಬಾಯಿಗೆ ಮದುವೆಯಾಗಿ, ಶರತ್ತುಗಳನ್ನು ಮುರಿದ ರಾಜನ್ನು ಶಪಿಸಿ
ತ್ಯಜಿಸಿ, ಕೃಷ್ಣನ ಅರಾಧನೆಗೊಸ್ಕರ ಇಲ್ಲಿಂದ ಬೃಂದಾವನಕ್ಕೆ ತೆರುಳುತ್ತಾಳೆ.  ಫತೆ ಸಾಗರ್, ರಾಣ ಪ್ರತಾಪ್
ಉದ್ಯಾನವನ, ರಾಣಿಯರಿಗೊಸ್ಕರ ಇದ್ದ "ಸಖಿಯೊಂಕಿ ಬೇಡ", ಪಾರ್ಕ್ ನೋಡಿಕೊಂಡು, ಶಾಪಿಂಗ್‍ಗೆ, ಸರ್ಕಾರಿ
ಕೋ-ಅಪರೇಟಿವ್ ಸೊಸ್ಯಟಿಗೆ ಹೊರೆಟೆವು.  ರಾಜಸ್ತಾನಿ ಸ್ಪೆóಷಲ್ ಮಹಾರಾಣಿ ಸೀರೆ, ನಮ್ಮ ಬೀಗಿತ್ತಿ ಸಂಧ್ಯಾ
ರವರಿಗೆ ತೆಗೆದುಕೊಂಡೆ.  ಇಲ್ಲಿ ಝಿಂಕ್ ಮೆಟಲ್‍ನ ವಿಗ್ರಹಗಳು, ಜೂಟ್, ಫೈಬರ್ ಕಾಟನ್,ಹಾಗು ವಿಶೇಷ
ವಾದುದು ಬಾಂದಿನಿ ಬಟ್ಟೆಗಳು. ನನಗೆ, ಮಗಳಿಗೆ, ಸೊಸೆಗೆ ಬಟ್ಟೆ ಖರೀದಿ.  ಅಲ್ಲಿಂದ ಅಮೃತ ಶಿಲೆಯ ಕಲಾ
ತ್ಮಕವಾದ "ಮಹಾಕಾಲೇಶ್ವರ" ದೇವಸ್ಥಾನ ನೋಡಿಕೊಂಡು ವಾಪಸ್ಸು ಹೋಟೆಲ್.

         21-2-2013 ಪ್ರಯಾಣದ 7ನೇ ದಿನ.  ಉದಯಪುರವನ್ನು 8.30ಕ್ಕೆ ಬಿಟ್ವಿ.  ದಾರಿಯಲ್ಲಿ ನಾಥ
ದ್ವಾರಕದ ಶ್ರೀನಾಥ ದೇವರನ್ನು ಸಾಗಿಸುವಾಗ, ಕೆಲವು ಘಳಿಗೆ ಇಳಿಸಿದ ಸ್ಥಾನವಾದ ಹಳೆಯ ಶ್ರೀನಾಥ ದೇವಸ್ಥಾನ
ನೋಡಿದೆವು.  ರಸ್ತೆಯಿಂದ ಮೆಟ್ಟಿಲು ಹತ್ತಿ ಮೇಲೆ ಏರಿ ನೋಡಬೇಕು.  ಅಲ್ಲಿಂದ ಮೌಂಟ್ ಅಬು ಹೋಗುವ
ದಾರಿಯಲ್ಲಿ. "ಅಬು ರೋಡ್" ಎಂಬಲ್ಲಿ ಟೀ ತೆಗೆದು ಕೊಂಡೆವು.  ಕಠಿಣವಾದ, ಸ್ಟೀಪ್ ಅದ 20 ಕಿ.ಮಿ.ದೂರ
ಪರ್ವತ ಎರುವ ದಾರಿ.  1 ಗಂಟೆಗೆ ತಲುಪಿ, ಹೋಟೆಲ್ "ರಂಜನ"ದಲ್ಲಿ ಸ್ಟೇ.  ಊಟ ಮಾಡಿ ಮತ್ತೆ ಸುತ್ತಲು
ನೋಡಲು ಹೊರಟ್ವಿ.  ಸಂಜೆ ರಘುನಾಥ ಮಂದಿರ ಹಾಗು "ನಕ್ಲಿ ಲೇಕ್" ನೋಡಿದ್ವಿ.  "ಬಾಲಮ್ ರಸೀಯಾ"
ಎಂಬ ಋಷಿ, ನೀರಿಗೊಸ್ಕರ ಕೆತ್ತಿದ ಜಾಗ.  ಆ ಸರೋವರಕ್ಕೆ ಅದೇ ಹೆಸರು.  ಸುತ್ತಲು ಅರಾವರಿ ಪರ್ವತ ಶ್ರೇಣಿ
ವಿವಿದ ಅಕಾರದ ಕಲ್ಲು ಬೆಟ್ಟಗಳು.  ಒಂದು ಕಪ್ಪೆ ಅಕಾರದಲ್ಲದೆ.  ಇಲ್ಲಿ ಜನರಿಗೆ ಈ ಸರೋನರದ ನೀರು
ಗಂಗೆಗೆ ಸಮ.  ಸುತ್ತ ಮುತ್ತಲು ಅನೇಕ ದೇವಸ್ಥಾನಗಳಿವೆ.  ರಘುನಾಥ ಮಂದಿರದಲ್ಲಿ "ವಲ್ಲಭಾಚಾರ್ಯರ"
ಪೋಟೋ ಇತ್ತು. (ಅಧರಂ ಮದುರಂ ಬರೆದವರು).

          22-2-2013. ಪ್ರವಾಸದ 8ನೇ ದಿನ.  ಅಬುವಿನಲ್ಲಿ ಬೆಳಿಗ್ಗೆ ತಿಂಡಿಯ ನಂತರ, "ಅರ್‍ಬುದ
ವಿಶ್ವನಾಥ" ದೇವಸ್ಥಾನಕ್ಕೆ ಹೋದ್ವಿ.  ಬಹಳ ದೊಡ್ಡ ಏಕಶಿಲೆಯ ಅಮೃತ ಶಿಲೆಯ ಲಿಂಗ.  ಸ್ವಾಭಾವಿಕವಾಗೇ
ಇರುವ 4 ರಂಗುಗಳು.  ಕೆಂಪು, ಹಸಿರು, ಬಿಳಿ, ಮತ್ತು ನೀಲಿ.  14 ಟನ್ ತೊಕದ್ದು.  ಲಿಂಗದ ಸುತ್ತಳತೆ
14 ಅಡಿ ಇನ್ ಟು 7 ಅಡಿ ಇನ್ ಟು 14 ಅಡಿ.

          ಅಲ್ಲಿಂದ ನಾವು "ಅರ್‍ಬುದ" ದೇವಿ" ಶಕ್ತಿ ಪೀಠಕ್ಕೆ ಹೊರೆಟೆವು.  "ಅಧರ್ ದೇವಿ" ಅಂತನು
ಕರಿತಾರೆ.  ಇಲ್ಲಿ ದೇವಿಯ ತುಟಿ ಬಿದ್ದ ಸ್ಥಳ.  ಇದು ನೆಲದಿಂದ 4220 ಅಡಿ ಎತ್ತರದಲ್ಲಿ ಇದೆ.  ದೊಡ್ಡ
ಕಲ್ಲು ಬಂಡೆಯ ಅಡಿಯಲ್ಲಿ.  ಇಲ್ಲಿಗೆ ಹೊಗಲು 350 ಮೆಟ್ಟಲು ಹತ್ತಿ, ನಂತರ ವಿಶಾಲವಾದ ಬಂಡೆಯ ಕೆಳಗೆ
ತೆವಳಿಕೊಂಡು, ಅಂಬೆಕಾಲು ಇಟ್ಟು ಹೋಗಬೇಕು.  ಇದು ಯಾವ ಅಧಾರ ವಿಲ್ಲದೆ ಬಾಯಿ ಬಿಟ್ಟ ಬಂಡೆ ಕೆಳಗಡೆ
ಇದೆ.  ಯಾವ ಅಧಾರ್ ಇಲ್ಲದುದರಿಂದ ಅಧಾರ್ ದೇವಿ ಅಂತ ಕರಿತಾರೆ.  ದೇವಿಯನ್ನು ದರ್ಶನ ಮಾಡಿದೆವು.
ಒಳಗಡೆ ಫೋಟೋ ಹಾಗು ಮೋಬೈಲ್ ಬಿಡುವುದಿಲ್ಲ.  ಅಂತ ಬಿಸಿಲಿನಲ್ಲಿ ಎ.ಸಿ. ತರಹ ಇತ್ತು.  ವ್ಯಾಸ ಮುನಿ
ಈ ದೇವಿಯನ್ನು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದ್ದಾರೆ.  ಗುಹೆಯ ಕೆಳಗಡೆ ಭವಾನಿ, ಅಂಜನೇಯ, ಗೌರಿ,
ಕೋಟೆಶ್ವರ ಲಿಂಗದ ಗುಡಿ ಇದೆ.  ನಮ್ಮ ಗೈಡ್ ಖಾನ್ ರವರು ಪ್ರತಿಯೊಂದು ಮೆಟ್ಟಿಲು ಹತ್ತುವಾಗ, "ಜೈಮಾತಾ
ಜೀ" ಅನ್ನಿ ಸುಸ್ತು ಅಗೋಲ್ಲ ಅಂದರು, ನಾವು ಹಾಗೆ ಮಾಡಿದ್ವಿ.  ಕೇವನ 150 ಮೆಟ್ಟಿಲು ಇದೆ ತಪ್ಪದೇ ನೋಡಿ
ಅಂತ ಅಂದು ನಮ್ಮನ್ನಯ ಉತ್ತೇಜಿಸಿ ಕಳುಹಿಸಿ, ಇಳಿದ ನಂತರ 350 ಮೆಟ್ಟಿಲು ಇದ್ದು, 4550 ಅಡಿ ಇರುವುದು
ತಿಳಿಸಿದರು.  ಯಾವುದಕ್ಕೂ ದೈರ್ಯ ಗೆಡುವುದು ಬೇಡ ಅಂತ ಹೇಳಿ, ಮಾನಸಿಕವಾಗಿ ತಯಾರು ಅಗಲು ಹಾಗೆ
ಸುಳ್ಳು ಹೇಳಿದರು.  ಇಳಿಯುವಾಗ ದಾರಿಯಲ್ಲಿ ರಾಜಸ್ಥಾನಿ ಹುಡುಗಿ ಮಾರಿತ್ತಿದ್ದ ಲಸ್ಸಿ ತೆಗೆದು ಕೊಂಡು ಕುಡಿದೆವು.

          ಅಲ್ಲಿಂದ ನಾವು ಅಬುನಲ್ಲಿರುವ ಮಹದ್ ಅದ್ಭುತ "ದಿಲ್‍ವಾರ' ಜೈನ್ ಮಂದಿರಕ್ಕೆ ಪ್ರಯಾಣ
ಬೆಳೆಸಿದೆವು.  ಇದರ ಮುಂದೆ ತಾಜ್‍ಮಹಲ್ ಏನೂ ಇಲ್ಲ.  ಅಮೃತ ಶಿಲೆಯ ಬಹಳ ದೊಡ್ಡ ಗುಡಿ.  ದೇವ
ಸ್ಥಾನದ ರಂಗಮಂಟಪದ ಮೇಲಿನ ಚಾವಡಿ ಕೆತ್ತನೆ, ಸೀಲಿಂಗ್‍ನಲ್ಲಿಯ ಕೆತ್ತನೆ, ಬಾಗಿಲುಗಳ ಕೆತ್ತನೆ, ಅಲಂಕಾರದ
ರಥಗಳು, ಅನೆಗಳಸಾಲು, ಸಿಂಹಗಳಸಾಲು, ಶಿಲಾಬಾಲಿಕೆಯರು, ಒಂದಕ್ಕೂ ಒಂದು ಭಿನ್ನ ಹಾಗು ಸೂಕ್ಷ ಕಲೆಯಿಂದ
ಸೌಂದರ್ಯದಿಂದ ಒಳಗೂಂಡಿತ್ತು.  ಒಂದು ಇಂಚು ಬಿಡದೆ, ಅತಿ ಸೂಕ್ಷವಾಗಿ, ಅನುಪಮವಾಗಿ ಕೆತ್ತಲ್ಪಟ್ಟಿದೆ.
"ನರಸಿಂಹ" ಅವತಾರದ ಕೆತ್ತನೆ ಬಹಳ ಚೆನ್ನಾಗಿತ್ತು.  ಇಲ್ಲಿ ಜೈನ್ ಧರ್ಮದ "ಲುಣ್ ವರ್ಷಿ" ದೇವಸ್ಥಾನ,
"ವಿಮಲ್ ವರ್ಷಿ"ದೇವಸ್ಥಾನ, "ಝಾತಾನಿ-ಕ-ಜೋಕ್ಲ", "ದೇವರಾನಿ-ಕ-ಜೋಕ್ಲ", ಹಾಥಿ ಶಾಲ, ಕಲ್ಪವೃಕ್ಷ ಕೆತ್ತನೆಗಳು ಇತ್ತು.  ಭಾರತೀಯ ಕಲೆಯು ವೈಭವಿಸುತ್ತಿತ್ತು.ಇವೆಲ್ಲ ಕತ್ತಲು ಮಾಡಿದ ಸಾಧನೆ, ಸಹನೆ ನೋಡಿ
ದವರಿಗೆ ಹಬ್ಬ ಉಂಟುಮಾಡಿತು.

          ಸಂಜೆ ಶಾಪಿಂಗ್.  ಮೌಂಟ್ ಅಬುನಲ್ಲಿ, 2 ರಾಜಸ್ಥಾನಿ ಬ್ಯಾಂಬು ನೆಕ್‍ಲೇಸ್, 2 ಬಾಂಧಿನಿ ಸೀರೆ,
2 ಕುರ್ತಾ ತೆಗೆದು ಕೊಂಡ್ವಿ.ಇಲ್ಲಿ ನಾವು ಬೆಳಿಗ್ಗೆ " ಓಂ ಶಾಂತಿ ಭವನ್" ಹೆಡ್ ಕ್ವಾಟರ್ಸ್ ಅಫ್ ಬ್ರಹ್ಮ ಕುಮಾರಿಯ ಈಶ್ವರೀಯ ವಿಶ್ವ ವಿದ್ಯಾನಿಲಯ ನೋಡಿದೆವು.  ಅಶ್ರಮದಲ್ಲಿ "ರಾಧಕೃಷ್ಣ"ವಿಗ್ರಹ ಚೆನ್ನಾಗಿತ್ತು.
1983ರಲ್ಲಿ ಈ ಆದ್ಯಾತ್ಮಿಕ ವಿಶ್ವವಿದ್ಯಾನಿಲಯ ರೂಪುಗೊಂಡಿತ್ತು.  ಇಲ್ಲಿ ಅರ್ಟ್ ಗ್ಯಾಲರಿ, ಅಧ್ಯಾತ್ಮಿಕ ಮ್ಯೂಸಿಯಂ
ಓವನ್ ರೀತಿಯ ರಾಜ ಯೋಗ ಮೇಡಿಟೇಷನ್ ಹಾಲ್,(ರಾಜ್ಯದಲ್ಲೆ ದೊಡ್ಡದು, ದೇಶದಲ್ಲಿ ಮೂರನೆಯದು,
ಹಾಗು ಏಷೀಯದಲ್ಲಿ ಐದನೆಯದು) ಇದೆ.  ಹಾಲ್‍ನ ರೂಫ್ ಯಾವ ಪಿಲ್ಲರ್ ಅಧಾರ ವಿಲ್ಲದೆ ಕಟ್ಟಿರುತ್ತಾರೆ.
3 ರಿಂದ 4 ಸಾವಿರ ಜನರ ಕ್ಯಾಪ್ಯಸಿಟಿ.  ವೀಡಿಯೋ ಸಿಸ್ಟಮ್ ಇದೆ.  ಇಲ್ಲಿ ಪ್ರತಿ ಫೆಬ್ರುವರಿಯಲ್ಲಿ ಸಭೆಗಳು
ನಡೆಯುತ್ತವೆ.  ಆ ದಿನ ರಾತ್ರೆ ಆಬುನಲ್ಲೆ ಉಳಿದೆವು.

          23-2-2013.  ಪ್ರವಾಸದ 9ನೇ ದಿನ.  ಬೆಳಿಗ್ಗೆ 6 ಗಂಟೆಗೆ ಅಬುನಿಂದ "ಮಾತೃ ಗಯಾ"ಕ್ಕೆ
ಪ್ರಯಾಣ.  ಅಬು ರೋಡ್ ನಲ್ಲಿ ಟೀ ಕುಡಿದು, 9.30ಕ್ಕೆ "ಮಾತೃ ಗಯಾ" ತಲುಪಿದೆವು.  12 ರಿಂದ 2 ಗಂಟೆಯ
ವರೆಗೆ ಮಾತೃ ಕಾರ್ಯ ವಾಯಿತು.  ಹರ್ಷ ಬಿಂದು ಸರೋವರ ಪಕ್ಕ, ಮರಗಳ ನೆರಳಿನಲ್ಲಿರುನ ಕಟ್ಟೆಯಲ್ಲಿ
ಅಯಿತು.  ಮೊದಲ ಸಲ ಪರುಶುರಾಮ ಇಲ್ಲಿ ತನ್ನ ತಾಯಿಗೆ ಬಂಗಾರದ ಪಿಂಡ ಪ್ರಧಾನ ಇಲ್ಲಿ ಮಾಡಿರುತ್ತಾನೆ.
ತಾಯಿ ರೇಣುಕಗೆ.  ಇಲ್ಲಿ ಕರ್ ದಮ್ ಮಹರ್ಷಿ, ಹಾಗು ದೇವಹೂತಿಗೆ ಕಪಿಲ (ವಿಷ್ಣು) ಹುಟ್ಟಿದ್ದು.  ದೇವ
ಹೂತಿ ತನಗೆ ಹುಟ್ಟಿದ 9 ಜನ ಹೆಣ್ಣು ಮಕ್ಕಳನ್ನು ಮದುವೆ ಮಾಡಿ, ಬೇರೆ ಬೇರೆ ಖಂಡಗಳಿಗೆ ಕೊಟ್ಟು, ತನಗೆ
ವಿಷ್ಣು ಮಗನಾಗಿ ಹುಟ್ಟಲು ಪ್ರಾರ್ಥಿಸುತ್ತಾಳೆ.  ತದ ನಂತರ ವಿಷ್ಣು ಕಪಿಲನಾಗಿ ಅವಳ ಹೊಟ್ಟೆಯಲ್ಲಿ ಹುಟ್ಟು
ತ್ತಾನೆ. ಶ್ರೀ ಕರ್ದಮ ಮಹರ್ಷಿ ವಾನಪ್ರಸ್ಥಕ್ಕೆ ಕಾಡಿಗೆ ಹೋಗುತ್ತಾರೆ.ಕಪಿಲ ತಾಯಿಯ ಜೊತೆ ಬೆಳೆಯುತ್ತಾನೆ.
ತಾಯಿಗೆ "ಸಾಂಖ್ಯಾ ಶಾಸ್ತ್ರ"(ಫಿಲಾಸಾಫಿ), ಹೇಳಿ ಕೊಡುತ್ತಾನೆ.  ತಾಯಿಗೆ ಗುರುವಾಗಿ ಉಪದೇಶ ಮಾಡುತ್ತಾನೆ.
ಅವರ ಸಂಬಂಧ ಏಷ್ಟು ಗಾಢವಾಗಿ ಇರುತ್ತೆ ಅಂದರೆ ಮಗನ ಭೋದನೆಯಿಂದ ಸಂತೋಷವಾಗಿ ಕಪಿಲಾ ಹಾಗು
ದೇವಹೂತಿ ಇಬ್ಬರಿಗೂ ಅನಂದಬಾಷ್ಪವಾಗಿ, ಹರಿದು ಹರ್ಷಬಿಂದು ಒಂದು ಸರೋವರವಾಗುತ್ತೆ. ಆ ತಾಯಿಗೆ
ಮೋಕ್ಷಸಿಗುತ್ತೆ.  ಅವರ ಸೇವೆಗೆಂದು ಇದ್ದ "ಪೂರ್ಣ" ಎಂಬ ಸೇವಕಿ, ತನಗೂ ಮೋಕ್ಷ ಕರುಣಿಸಲು ಕಪಿಲಗೆ
ಕೇಳುತ್ತಾಳೆ.  ಅವಳ ಅನಂದ ಬಾಷ್ಪ "ಪೂರ್ಣ ಸರೋವರ"ವಾಗುತ್ತೆ.  ಇದು ಬಿಂದು ಸರೋವರಗಿಂತ ದೊಡ್ಡ
ದಾಗಿದೆ.  ಕಪಿಲ ಮಹರ್ಷಿ ಯಾರು ಈ ದೇವಹೂತಿ ಇದ್ದ ಕ್ಷೇತ್ರದಲ್ಲಿ, ಪಿಂಡ ಪ್ರಧಾನ ಮಾಡುತ್ತಾರೋ
ಅವರಿಗೆ ತಾಯಿ ಋಣದಿಂದ ಮುಕ್ತಿ ದೊರೆಯುತ್ತೆ ಅಂತ ವರ ಕೊಟ್ಟರು.

          ಇಲ್ಲಿ 21 ಪಿಂಡ ಮಾಡುತ್ತಾರೆ.  ಜ್ಞಾನವಂತ ಪುರೋಹಿತರ ವಿವರಣೆ ಕೇಳಿ ಅನಂದವಾಯಿತು.
ಪ್ರತಿಯೂಂದು ಸ್ಲೋಕಕ್ಕೂ ವಿವರಣೆ ಕೊಟ್ಟು, ಯಾವ ಕಾರಣಕ್ಕೆ ಯಾವ ಪಿಂಡ ಪುರಾಣದಲ್ಲಿ ಹೀಗಿದೆ ಅಂತ
ಹೇಳಿದರು.  ತಾಯಿಯ ಹೊಟ್ಟೆಯಲ್ಲಿ ಧಾರಣೆಯಾದ ಮೊದಲ ದಿನದಿಂದ ಹಂತ ಹಂತವಾಗಿ ಬೆಳೆಸಿದ ಪ್ರತಿ
ಯೊಂದು ಘಟ್ಟಕ್ಕೂ ಪಿಂಡ ಪ್ರಧಾನ ವಾಗುತ್ತೆ.  ಇಲ್ಲಿ ನಮ್ಮ ವೇದ ಪುರಾಣದಲ್ಲಿ ಸ್ತ್ರೀಯರಿಗೆ ಕೊಟ್ಟ ಮಹತ್ವ
ತಿಳಿಯುತ್ತೆ.  ಇಲ್ಲಿ ತಾಯಿಯರಿಗೆ, ತಾಯಿಸಮಾನ ರಾದವರಿಗೆ, ತಾಯಿ ತಂಗಿಯರಿಗೆ, ಅಜ್ಜಿ, ಮುತ್ತಜ್ಜಿಯವರಿಗೆ,
ತಾಯಿ ಹಾಗು ತಂದೆಕಡೆಯ ತಾಯಿ ಸಮಾನರಿಗೆ ಧರ್ಮ ಪಿಂಡ ಕೊಡಲಾಗುತ್ತೆ.

          ನಾರಾಯಣೀಯಮ್ನ 15ನೇ ದಶಕ "ಕಪಿಲೋಪದೇಶ", ಪ್ರತಿಯೊಂದು ಸ್ಲೋಕದ ಕೊನೆಯ
ಸಾಲು "ಕಪಿಲತನು ರಿತಿತ್ವಂ ದೇವಹೂತಿ ನೈಗಾದಿ", ಪದ್ಮ ಮೇಡಂ ಹೇಳಿ ಕೊಟ್ಟ ಸ್ಲೋಕ ಕಿವಿಯಲ್ಲಿ ಗುಣು
ಗುಟ್ಟಿದ ಹಾಗೆ ಕೇಳಿಸುತ್ತಿತ್ತು.  ನಂತರ ಒಳ್ಳೆಯ ಶ್ರಾದ್ಧ ಊಟ ವಾಯಿತು.  ಸ್ವಲ್ಪ ಸುದಾರಿಸಿಕೊಂಡು, 4 ಗಂಟೆಗೆ
ಬಿಟ್ಟು ಅಹಮಾದಬಾದ್ 5 ಗಂಟೆಗೆ ತಲುಪಿದೆವು.  ಹೋಟೆಲ್ "ಪೀಸ್"ನಲ್ಲಿ ತಂಗುದಾಣ.

          24-12-2013 ಪ್ರವಾಸದ 10ನೇ ದಿನ.  5 ಗಂಟೆಗೆ ಅಹಮದಬಾದ್ ಬಿಟ್ಟು, ವಿರಾವಲ್
(ಸೋಮನಾಥ ಹತ್ತಿರ 10 ಕಿ.ಮಿ.) ಜಾಗಕ್ಕೆ ಬಂದ್ವಿ.  ರಸ್ತೆಯಲ್ಲಿ ತಿಂಡಿ ತಿಂದು, 1.45ಕ್ಕೆ ಬಂದ್ವಿ.  ಊಟ ಮಾಡಿ
ಸ್ವಲ್ಪ ರೆಸ್ಟ್ ತೆಗೆದುಕೊಂಡು, ಲೋಕಲ್ ವಿಸೀಟ್ 3.30ಕ್ಕೆ ಹೊರೆಟೆವು.  ಭುಲಕ ತೀರ್ಥ ಜಾಗ ಬೇಟಿ ಮಾಡಿದೆವು.ಇಲ್ಲಿ ಜರಾ ಎಂಬ ಬೇಟೆಗಾರ ತನಗೆ ತಿಳಿಯದೆ ಕಾಲಿನಮೇಲೆ ಕಾಲನ್ನು ಹಾಕಿ ಕುಳಿತ ಕೃಷ್ಣಭಗವಂತರ
ಎಡಕಾಲು, ಮರೆಯಲ್ಲಿ ಹಕ್ಕಿಯಂತೆ ಕಾಣುತ್ತಿರಲು, ಬಾಣ ಬಿಡುವನು.  ಕೃಷ್ಣ ಅಂತ ತಿಳಿದ ನಂತರ ದುಃಖಪಟ್ಟ
ಅವನನ್ನು, ಕೃಷ್ಣನೇ ಸಮಧಾನ ಪಡಿಸಿ, ಅವನಿಗೊಸ್ಕರ ಕಾಯುತ್ತಿದ್ದುದ್ದು, ಹಿಂದೆ ರಾಮಾಯಾಣದ ವಾಲಿಯ ಹತ್ಯೆ
ಯ ಕಥೆಯನ್ನು ಜಾÐಪಿಸಿ ತನ್ನ ಅಂತಿಮ ಕಾಲಕ್ಕೆ ಕಾದ ವಿಷಯ ತಿಳಿಪಡಿಸುತ್ತಾನೆ.

          ಕೃಷ್ಣ ಇದ್ದು ಓಡಾಡಿದ ಸ್ಥಳ.  ಕೃಷ್ಣ ದೇಹ ತ್ಯಾಗ ಮಾಡಿದ ಜಾಗ.  "ಶೇಷನಾಗ್" ಗುಹೆಯಲ್ಲಿ
ಕೃಷ್ಣ ನಂತರ ಬಲರಾಮ ದೇಹ ತ್ಯಾಗ ಮಾಡಿ, ಹಾವಿನ ರೂಪ ಹೊಂದಿ ಹೊದದ್ದು, ಗೀತಾಮಂದಿರ, ಲಕ್ಮಿನಾರಾ
ಯಣ, ವಿಶ್ವನಾಥ, ದೇವಿ, ಒಟ್ಟು ಐದು ಮಂದಿರಗಳಿವೆ.  ಶಂಕರಮಠದಲ್ಲಿ, ಲಕ್ಮೀ ನರಸಿಂಹ, ಶಂಕರಾಚಾರ್ಯ,
ಶಾರದಾಂಬ, ಶಂಕರಚಾರ್ಯರ ಗುಹೆ, ಅವರ ಐದು ಮಂದಿ ಶಿಷ್ಯರು, 12ಜ್ಯೋತಿರ್‍ಲಿಂಗ ದೇವಸ್ಥಾನವಿತ್ತು.ಅಲ್ಲಿಂದ
ಹತ್ತಿರವಿದ್ದ ತ್ರಿವೇಣಿ ಸಂಗಮ, ಸರಸ್ವತಿ, ಹಿರಣ್ಯ, ಹಾಗು ಕಪಿಲಾನದಿಗಳ ಸಂಗಮ ನೋಡಿದೆವು.  ಸಂಗಮದ
ಸುತ್ತಾಲು, ಲೆಕ್ಕವಿಲ್ಲದಷ್ಟೂ, ಸುಂದರ ಘಾಟುಗಳು ಇವೆ.  4-5 ಅಡಿ ಎತ್ತರವಿರುವ ಪೆಲಿಕಾನ್, ಉದ್ದ ಕಾಲಿನ
ಕೊಕ್ಕರೆಗಳು ಬಹಳಷ್ಟು ಇದ್ದವು. ಅಲ್ಲಿಂದ ಸೋಮನಾಥ ದೇವಸ್ಥಾನದ ಹಿಂಬಾಗದಲ್ಲಿ ಸೂರ್ಯಸ್ತ ಬಹಳ ಚೆನ್ನಾ
ಗಿತ್ತು.  ವಿಶಾಲವಾದ ಸಮುದ್ರದ ದಡದಲ್ಲಿ ಜನಸ್ತೋಮ ಬಹಳವಿತ್ತು.  ಸಮುದ್ರದ ತಟದಲ್ಲಿ ಜನವೋ ಜನ.
ಹಿರಿಯರು, ಮಕ್ಕಳು, ಏಳ್ಳುನೀರು ಅಂಗಡಿ, ಒಂಟೆ ಸವಾರಿಗಳು, ಮಕ್ಕಳ ಪಾರ್ಕಸಹ ಇತ್ತು.  ದೇವಸ್ಥಾನ ಸಮುದ್ರದ ತಟದಲ್ಲಿ ಇದೆ.  ನಮ್ಮ ಮೊದಲ ಜ್ಯೋತಿರ್‍ಲಿಂಗ.  ಸರದಿಯಲ್ಲಿ ನಿಂತು ದೇವರ ದರ್ಶನ ಮಾಡಿ
ಕೊಂಡು ಧನ್ಯರಾದೆವು.  ದರ್ಶನದ ನಂತರ ಲೈಟ್ ಅಂಡ್ ಸೌಂಡ್ ಶೋ.  ಸಪರೇಟ್ ಟಿಕೇಟ್ ತೆಗೆದು ಕೊಳ್ಳ
ಬೇಕು.  ದೇವಸ್ಥಾನದ ಕಟ್ಟಡದ ಮೇಲೆ ಬೆಳಕಿನ ನ್ಯತ್ಯಗಳು ಪ್ರಾರಂಭವಾಯಿತು.  ಸಾವಿರಾರು ಜನರು ಅವರಣದಲ್ಲಿ ಕುಳಿತು ವೀಕ್ಷಿಸಿದರು.  ಸಮುದ್ರ ರಾಜನ ಬಾಯಿಯಿಂದ ದೇವಸ್ಥಾನದ ವರ್ಣನೆ.  ಬಣ್ಣ ಬಣ್ಣದ
ದೀಪಗಳಿಂದ ಸಂದರ್ಭಕ್ಕೆ ತಕ್ಕ ಶೋಗಳು, ವಿವರಣೆಗಳು, ಚಂದ್ರನ ಶಾಪ, ಮೊದಲು ಅವನಿಂದ ಶಿವಪೂಜೆ,
ಜ್ಯೋತಿರ್‍ಲಿಂಗ ಸ್ಥಾಪನೆ.

     ಪುರಾಣ ಕಥೆ ಹೀಗಿದೆ.  ಧಕ್ಷ ತನ್ನ27 ಜನ ಹೆಣ್ನು ಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡು
ತ್ತಾನೆ.  ಚಂದ್ರ ರೋಹಿಣಿಯನ್ನು ಅಧಿಕವಾಗಿ ಪ್ರೇಮಿಸುತ್ತಾನೆ.  ಉಳಿದ ಮಕ್ಕಳು ಹೋಗಿ, ಅವರ ಭಾದೆಯನ್ನು
ತಂದೆಯ ಬಳಿ ಹೇಳಿಕೊಳ್ಳುತ್ತಾರೆ.  ದಕ್ಷ ಪ್ರಜಾಪತಿ ಚಂದ್ರನನ್ನು ಕರೆಸಿ ಬುದ್ಧಿವಾದ ಹೇಳುತ್ತಾನೆ.  ಅದರೂ
ಚಂದ್ರ ಇನ್ನು ಹೆಚ್ಚಿನ ಅನುರಾಗ ರೋಹಿಣಿಗೆ ತೋರಿಸುತ್ತಾನೆ.  ಇದರಿಂದ ಕೋಪಗೊಂಡ ದಕ್ಷ ಚಂದ್ರನಿಗೆ
ಶಪಿಸುತ್ತಾನೆ.  ಕಳೆಗುಂದ ಚಂದ್ರನಿಂದ ಅಮೃತವೇ ಅಹಾರವಾದ ದೇವತೆಗಳು ಹಾಹಾಕರ ಮಾಡುತ್ತಾರೆ.  ಚಂದ್ರ
ನಿಲ್ಲದೇ ಚರಾಚರ ಜಗತ್ತು, ಸುಧಾಕರನ ಸುಧಾಕಿರಣ ನಿಸ್ತೇಜವಾಗುತ್ತೆ.  ಆಗ ದೇವತೆಗಳು, ಚಂದ್ರನನ್ನು ಬ್ರಹ್ಮ
ದೇವನ ಬಳಿ ಕರೆದುಕೊಂಡು ಹೊಗುತ್ತರೆ.  ಬ್ರಹ್ಮ ಚಂದ್ರನಿಗೆ ಪವಿತ್ರವಾದ ಈ ಪ್ರಭಾಸ ಕ್ಷೇತ್ರದಲ್ಲಿ, ಪರಶಿವನ
ಅರಾಧಿಸಿ, ಶುಭ ಹೊಂದಲು ಮೃತ್ಯುಂಜಯ ಮಂತ್ರ ಉಪದೇಶಿಸುತ್ತಾನೆ.  ಚಂದ್ರ ನಿಷ್ಠೆಯಿಂದ ಶಿವನನ್ನು ಅರಾಧಿಸಿ
ತನಗೆ ಬಂದ ಶಾಪ ವಿಮೋಚನೆಯ ಬಗ್ಗೆ ಕೇಳುತ್ತಾನೆ.  ಅದಕ್ಕೆ ಶಿವನು ಕೃಷ್ಣ ಪಕ್ಷದಲ್ಲಿ ಕಳೆ ಕ್ಷೀಣಿಸಿ, ಶುಕ್ಲ
ಪಕ್ಷದಲ್ಲಿ ಕಳೆಗಳು ವೃದ್ದಿ ಹೊಂದುವ ಹಾಗೆ ಮಾಡಿ, ಪೊರ್ಣಿಮೆ ದಿನ ಕಳಾ ಪರಿಪೂರ್ಣನಾಗಿ ಇರುವ ವರ
ಕೊಡುತ್ತಾನೆ.  ಈ ವಿಧವಾಗಿ ಚಂದ್ರ ಕಳಾಪೂರ್ಣವಾಗಿ, ಅಮೃತಧಾರೆ ಸುರಿಸಿತ್ತಾನೆ.  ಬ್ರಹ್ಮಾದಿ ದೇವತೆಗಳು
ಪ್ರಾರ್ಥಿಸಿದ ಹಾಗೆ ಪರಶಿವನು, ಪಾರ್ವತಿ ಸಮೇತನಾಗಿ ಈ ಕ್ಷೇತ್ರದಲ್ಲಿ ಸೋಮನಾಥನಾಗಿ ನೆಲೆಸಿದ್ದಾನೆ.

          ನಂತರ ಕೃಷ್ಣನು ರತ್ನ ರಚಿತವಾದ ಮಂದಿರವನ್ನು ಕಟ್ಟಿಸಿದನು ಅಂತ.  2000 ವರ್ಷ (ಬಿ.ಸಿ.),
ಪೂಜೆಗಳು ನಡೆಯುತ್ತಿದ್ದವು.  ಕ್ರಿ.ಶ.ದಲ್ಲಿ ಒಬ್ಬರ ನಂತರ ಒಬ್ಬರು, ಘಜನಿ ಮೊಹ್ಮದ್,ಅಲ್ಲಾಉದ್ದೀನ್ ಖಿಲ್ಜಿ,
ಔರಂಗಜೇಬ್ ದಾಳಿಯಿಂದ ಎಲ್ಲಾ ಲೂಟಿ ಅಯಿತು.  17 ಸಲ ದಾಳಿ ಅಯಿತು.  ಕಾಶಿಯಲ್ಲೂ ಮುಸ್ಲಿಮರ ದಾಳಿ
ಗೆ ಜೋತಿರ್‍ಲಿಂಗ ಒಳಪಟ್ಟಿದೆ.  ಅಲ್ಲಿಯ ಹಾಗೆ ಇಲ್ಲಿಯೂ ಇಂದೂರಿನ ರಾಣಿ, ಅಹಲ್ಯಾಬಾಯಿ ಹೊಳ್ಕರ್ ಶಿವ
ಮಂದಿರ ಪುನಃ ಸ್ಥಾಪಿಸಿದರು.  1950 ರಲ್ಲಿ, ಸರ್ದಾರ್ ವಲ್ಲಾಭಾಯ್ ಪಟೇಲ್ ನಾಯಕತ್ವದಲ್ಲಿ ಕೊಟ್ಯಂತರ
ರೂಪಾಯಿಗಳ ವೆಚ್ಚದಲ್ಲಿ ಪುನಃ ನಿರ್ಮಾಣ ವಾಯಿತು.  ಅಲ್ಲಿ ಈಗಲೂ ಮೂಲ ಲಿಂಗದ ಪೀಠ, ಬೆಳ್ಳಿಯದು
ಬಹಳ ದೊಡ್ಡದು ಒಂದು ಗಾಜಿನ ಕೊಣೆಯಲ್ಲಿ ಇಟ್ಟಿದ್ದಾರೆ.  ಹಳೆಯ ದೇವಸ್ಥಾನದ ಅವಶೇಷಗಳು ದೇವಸ್ಥಾನದ ಪ್ರಾಂಗಣದಲ್ಲಿ ಇದೆ.

          25-2-2013.  ನಮ್ಮ ಯಾತ್ರೆಯ 11ನೇ ದಿನ.  ಬೆಳಿಗ್ಗೆ 3 ವರೆ ಎದ್ದು, 4 ಗಂಟೆಗೆ ಕಾಫಿ
ಕುಡಿದು, 5ವರೆಗೆ ಸೋಮನಾಥನ ದರ್ಶನಕ್ಕೆ ಹೊದೆವು.  ಅ ದಿನ ಮಾಘ ಶುದ್ದ ಪೂರ್ಣಿಮೆ ಒಳ್ಳೆ ದಿನ.
ಬೆಳಗಿನ ಅರತಿಯ ಒಳ್ಳೆ ದರ್ಶನವಾಯಿತು.  ಲಿಂಗ ಬಹೃತ್ ಅಗಿದೆ.  4 ರಿಂದ 5 ಅಡಿ ಇದೆ.  ಸುತ್ತೆಲ್ಲಾ
ಮಂದಿರ ಗೋಲ್ಡ ಪ್ಲೇಟೆಡ್ನಿಂದ ಥಳಥಳಿಸುತ್ತಿತ್ತು.  ವೈಭವವಾಗಿದೆ.

          ಭೂಮಿಯಲ್ಲಿ ಇರುವವರಗೆ ಹೇಗೆ ಅಕಾಶದಲ್ಲಿ, ಸೂರ್ಯ, ಚಂದ್ರ, ನಕ್ಷತ್ರಗಳಿಂದ ನಿರಂತರವಾಗಿ
ಚಿಮ್ಮುವ ವಿದ್ಯುತ್ ಕಾಂತಿಯಂತೆ, ಈ 12 ಜ್ಯೋತಿರ್‍ಲಿಂಗ ಗಳಿಂದ, ಯಂತ್ರ ಪ್ರತೀಷ್ಟೆ, ಪ್ರಾಣ ಪ್ರತೀಷ್ಟೆ ಇಲ್ಲದೆ
ಹೊದರು, ಸೃಷ್ಠಿ ಇದ್ದಷ್ಟೂ ಕಾಲ, ಈ ಲಿಂಗಗಳಿಂದ ಜ್ಯೋತಿರ್‍ಶಕ್ತಿ ಚಿಮ್ಮುತ್ತಲೇ ಇರುತ್ತದೆ.ಇವುಗಳಲ್ಲಿ, ರಾಮೇ
ಶ್ವರ ಹಾಗು ಸೋಮನಾಥೇಶ್ವರ ಜ್ಯೋರ್ತಿಲಿಂಗ ಬಿಟ್ಟು ಉಳಿದ ಹತ್ತು ಲಿಂಗಗಳಿಗೆ ಭಕ್ತರು ಅಭಿಶೇಕ ಪೂಜೆ
ಸ್ವಂತ ತಾವೆ ಮಾಡಬಹುದು.  ದರ್ಶನದ ನಂತರ ಹೊಟೇಲ್ ಕಾವೇರಿಗೆ ವಾಪಸ್ಸು ಬಂದೆವು.

          ದಾರಿಯಲ್ಲಿ ಸಿಗುವ ಪೋರ್ ಬಂದರಿನಲ್ಲಿ, ಕೀರ್ತಿಮಂದಿರ ಅಂದರೆ ಗಾಂಧೀಜಿ ಹುಟ್ಟಿದ ಸ್ಥಳ,
ಅವರ ಮನೆ, ಮ್ಯೂಸಿಯಂ, ಪೋಟೋ ಗ್ಯಾಲರಿ, ಎಲ್ಲಾ ನೋಡಿದೆವು.  ಶ್ರೀಮಂತರ ಮನೆಯಲ್ಲಿ ಹುಟ್ಟಿ,
ಲಾಯರ್ ಗಿರಿ ಓದಿ, ಪರದೇಶಕ್ಕೆ ತೆರಳಿ, ದೇಶ ಭಕ್ತನಾಗಿ, ದೇಶಕ್ಕಾಗಿ ತುಂಡು ಅಂಗಿಯನ್ನು ಧರಿಸಿ, ಅವರ
ಜೀವನವನ್ನೆ ಅದರ್ಶವಾಗಿ ಇಟ್ಟುಕೊಂಡು ಮಹಾತ್ಮರಾದರು.

          ಅಲ್ಲಿಂದ ಸುಧಾಮ ಧಾಮ. ಸುಧಾಮ ದೇವಸ್ಥಾನ ನೋಡಿದೆವು.  ಅಲ್ಲಿ ಇರುವ ಸುಧಾಮ
ಚಕ್ರವ್ಯೂಹದಲ್ಲಿ ಅಡೆ ತಡೆ ಇಲ್ಲದೆ ನಡೆದು ಹಾದು ಗುರಿ ಸೇರುವುದು ಒಳ್ಳೆಯದೆಂದು ಓಡಾಡುತ್ತಿದ್ದರು.
ಅಲ್ಲಂತು ಪಾರಿವಾಳವೇ ಪಾರಿವಾಳ.

          ದಾಯಿಯುದ್ದಕ್ಕೂ ಹಲವಾರು ಕಿ.ಮಿ. ಸಮುದ್ರ ತಟದಲ್ಲೇ ಪ್ರಯಾಣ.  ಮದ್ಯೆದಲ್ಲಿ ಎಳ್ಳುನೀರು
ಕುಡಿದು, ಅಲೆಗಲ್ಲಿ ಅಟವಾಡಿ, ಪ್ರಯಾಣ ಮುಂದುವರೆಸಿದೆವು.  ಒಂದು ಫಾರ್ಮ ಹೌಸ್ ನಲ್ಲಿ ತಂಪಾದ ಜಾಗದಲಿ
ಊಟವಾಯಿತು.ಮುಖ್ಯ ದ್ವಾರಕ ಹೊಗುವ ದಾರಿಯಲ್ಲಿ, ರಣ್ ಛೋಡ್ ಮಂದಿರ.  ಇದು ಮೂರನೆ ದ್ವಾರಕ.
ಟೆಂಪಲ್ ಕಾಂಪ್ಲೇಕ್ಸ್ ನಲ್ಲಿ 15 ದೇವಸ್ಥಾನವಿದೆ.  ಸಣ್ನ ಸಣ್ಣ ದೇವಸ್ಥಾನಗಳು ಹಸಿರು ಗಿಡಮರಗಳಿಂದ ತಂಪಾಗಿ
ಇದೆ.  ಎಲ್ ಶೇಪ್ ಬಾವಿ ಇದೆ.  ಎಲ್ ಶೇಪ್ ನಿಂದ ಮೆಟ್ಟಿಲು ಇಳಿದರೆ ಬಾವಿ ಇದೆ.  ಜರಾಸಂಧನ ಉಪ
ಟಳ ಸಹಿಸದೆ ಶ್ರೀಕೃಷ್ಣ ಇಲ್ಲಿ ಬಂದು ನೆಲೆಸಿದ ಸ್ಥಳ,

          ಹೀಗೆ ಮುಖ್ಯ ದ್ವಾರಕ್ಕೆ ಹೊಗುವ ಸಂದರ್ಭದಲ್ಲಿ, "ಜಾಬವಂತನ ಗುಹ", ಒಂದು ಸುಂದರವಾದ
ಗುಹೆ ಇರುವ ಜಾಗಕ್ಕೆ ಬಂದೆವು.  ಹೊರಗಡೆಯಿಂದ ಏನು ಕಾಣುವುದಿಲ್ಲ.  ಒಂದು ಮೂರು ಮೀಟರ್ ಅಗಲ
ವಾಗಿರುವ ಬಾವಿಯಲ್ಲಿ, ಹಗ್ಗ ಹಿಡಿದು ಇಳಿದು ಹೋದರೆ ಬೇರೇಯೇ ಲೋಕ ಅನಾವರಣ ವಾಯಿತು. ಗುಹೆಯಲ್ಲಿ
ಬಹಳ ನುಣುಪಿನ ಕೆಂಪು ಕಾರ್ಪೇಟ್ ಹಾಕಿದ ಹಾಗೆ ಕೆಂಪು ಮಣ್ಣಿನ ತಂಪಾದ ನೆಲ.  ಚಾವಡಿಯು ಬಂಡೆಗಳು.
ಅಲ್ಲಿ ಶಿವಲಿಂಗ, ಜಾಂಬವಂತ, ಜಾಂಬವತಿಯನ್ನು ಕೃಷ್ಣನಿಗೆ ಮದುವೆ ಮಾಡಿ ಕೊಟ್ಟ ಸ್ಥಳ.  ಅದರ ಚಿತ್ರ ಇತ್ತು.
ಗುಹೆ ವಿಶಾಲವಾಗಿ ಚೆನ್ನಾಗಿ ಇತ್ತು.  ಪ್ರಯಾಣ ಮುಂದುವರೆದು ಮುಖ್ಯ ದ್ವಾರಕಕ್ಕೆ ರಾತ್ರೆ 7 ಗಂಟೆಗೆ ತಲುಪಿದೆವು.
ಹೋಟೆಲ್ ಗೋಕುಲ ದಲ್ಲಿ ತಂಗಿದೆವು.  ಸ್ವಲ್ಪ ಫ್ರೇಶ್ ಅಪ್ ಅಗಿ ದ್ವಾರಕಧೀಶನ ದರ್ಶನ ಮಾಡಿಕೊಂಡು
ಬಂದೆವು.  ದೇವಸ್ಥಾನದಲ್ಲಿ ಅಚಾನಕ್ ಅಗಿ, ನಮ್ಮ ಫ್ಯಾಮಿಲಿ ಫ್ರೆಂಡ್ ಜಯರಾಮ ಹಾಗು ಜಯಲಕ್ಷ್ಮಿ ಅವರು,
ಅಫ್ರಮೇಯ ಸಂಘದಿಂದ 50 ಜನ ಬಂದಿರುವುದಾಗಿ ತಿಳಿಸಿದರು.  ರಾತ್ರೆ ನಮ್ಮ ಹೋಟಲ್‍ಗೆ ಬಂದು ಮಾತಾನಾಡಿ
ಸಿಕೊಂಡು ಹೋದರು.  ಸಹ ಪ್ರಯಾಣಿಕರಾದ ಶ್ರೀಮತಿ ರಾಜಕೂಮರಿ ಹಾಗು ಫಣಿರಾಜ್‍ರವರ ಹುಟ್ಟಿದ ಹಬ್ಬ
ಅಚರಿಸಿ ಊಟ ಮಾಡಿ ಅಲ್ಲೆ ತಂಗಿದೆವು.  ಮುಖ್ಯ ದ್ವಾರಕ ಇದು 4ನೇ ದ್ವಾರಕ.

          26-2-2013 ನಮ್ಮ ಪ್ರಯಾನದ 12ನೇ ದಿನ.  ಬೆಳಿಗ್ಗೆ ಗೈಡ್ 5 ಗಂಟೆಗೆ ಬಂದು, ನಮ್ಮನೆಲ್ಲ
ದ್ವಾರಕ ಧೀಶ್ ದೇವಸ್ಥಾನದ ಸಮೂಹಕ್ಕೆ ಕರೆದುಕೊಂಡು ಹೋದರು.  ದೇವಸ್ಥಾನ ಸ್ವಯಂಭೂ.  ಬಹಳ
ಚೆನ್ನಾಗಿದೆ.  5,300 ವರ್ಷ ಹಳೆಯದು.  ಕೃಷ್ಣನ ಮೊಮ್ಮಗ ಅನಿರುದ್ಧನ ಮಗ "ಬೃಜ್" ವಿಶ್ವ ಕರ್ಮನನ್ನು
ಕರೆಸಿ, ಬೇಡಿ, ಪ್ರಾರ್ಥಿಸಿ, ಕೃಷ್ಣನಿಗೊಸ್ಕರ ಒಂದು ಸ್ಮಾರಕವನ್ನು ರಚಿಸಲು ಹೇಳುತ್ತಾನೆ.  ಇಷ್ಟು ದೊಡ್ಡ ದೇವ
ಸ್ಥಾನವನ್ನು, ವಿಶ್ವಕರ್ಮನು 2 ದಿನ 12 ಗಂಟೆಯಲ್ಲಿ ಕಟ್ಟುತ್ತಾನೆ.  ಅದರೆ ಅಲ್ಲಿ ವಿಗ್ರಹ ವಿರಲಿಲ್ಲ.  ದೇವಸ್ಥಾನ
ಉದ್ಭವಿಸಿತ್ತು.  ಗೋಪುರ ಕೇವಲ ಒಂದೇ ಒಂದು ಬಂಡೆಯದು.  2000 ವರ್ಷ ವಿಗ್ರಹ ವಿಲ್ಲದೆ ಇತ್ತು.
ಇಲ್ಲೋಬ್ಬ ಸ್ಥಳೀಯ ಭಕ್ತನಿಗೆ ಬಹಳ ಬೇಜಾರಾಯಿತು. ಕೃಷ್ಣನನ್ನು ಆರಾಧಿಸುತ್ತಿದ್ದ ಅವನಿಗೆ,ರಾತ್ರೆ ಸ್ವಪ್ನದಲ್ಲಿ,
ಕೃಷ್ಣ ಬಂದು, ಹತ್ತಿರವಿರುವ ಬಾವಿಯಿಂದ ತನ್ನ ವಿಗ್ರಹವನ್ನು ತರಲು ಹೇಳುತ್ತಾನೆ.  ಹಾಗೆಯೇ ಆ ಭಕ್ತ
ಬಾವಿಯಿಂದ "ದ್ವಾರಕ ಧೀಶ"ನನ್ನು ತಂದು ಪ್ರತಿಷ್ಟಾಪಿಸುತ್ತಾನೆ.  ವಿಗ್ರಹ ಸುಂದರವಾದ ಕರಿಯ ಶಿಲೆಯದು.
ಬಹಳ ಚೆನ್ನಾಗಿದೆ.  ಆರತಿಯ ಸಮಯದಲ್ಲಿ ಪೂಜರಿ ಜೊತೆ ಪ್ರತಿಯೊಬ್ಬರ ಬಾಯಿಯಿಂದ ಒಂದೇ ಆರತಿಯ
ಹಾಡು ಕೇಳಲು ಬಹಳ ಇಂಪಾಗಿತ್ತು.  ಆರತಿಯ ಸಮಯಕ್ಕೆ ಎಲ್ಲಾರು ತಮ್ಮ ಕೆಲಸವನ್ನು ಬಿಟ್ಟು ಬರುತ್ತಾರೆ.
ದೇವಸ್ಥಾನದ 90% ದೇವರು ಸ್ವಯಂಭೂ.

          ಇದಕ್ಕೆ ಗೋಮತಿ ದ್ವಾರಕಧೀಶ್ ಅಂತ ಕರೆಯುತ್ತಾರೆ.  ಇಲ್ಲಿ ಗಂಗಾ, ಯಮುನ, ಸರಸ್ವತಿ ಯಾವ ನದಿಯೂ ಇಲ್ಲ.  ಅದಕ್ಕೆ ಋಷಿ ಮುನಿಗಳು, ಇಲ್ಲಿ ಸಮುದ್ರಕ್ಕೆ ಸೇರುತ್ತಿರುವ ಗೋಮತಿಯನ್ನು ಪ್ರಾಥಿಸಿ
ದಡಕ್ಕೆ ಕಿನಾರಕ್ಕೆ ಬರಲು ಕೋರುತ್ತಾರೆ.  ಅವಳಿಗೆ ವಿಗ್ರಹವಿದೆ.  ಪೂಜೆ ಮಾಡುತ್ತಾರೆ.  ಅವರ ಕೋರಿಕೆಯ
ಮೇರೆಗೆ ಗೋಮತಿ ದಡಕ್ಕೆ ದಿನಕ್ಕೆ ಎರಡು ಸಲ ಬಂದು ಹೋಗುತ್ತಳೆ.  ಅಶ್ವಯವಾಯಿತು.  ಬೆಳಿಗ್ಗೆ 56
ಮೆಟ್ಟಿಲ್ಲನ್ನು, (56 ಮೆಟ್ಟಿಲ್ಲನ್ನು ಇಳಿದು ಹೊದರೆ 56 ದೋಷ ನಿವಾರಣೆ ಅಗುತ್ತೆ ಅಂತ ಪ್ರತೀತಿ), ಇಳಿದು
ಸೊಂಟದ ವರೆಗೆ ಬಂದ ಗೋಮತಿ, ಸಂಜೆ ವೇಳೆಗೆ ಮಾಯ.  ಬಟ್ಟ ಬಯಲು.  ಸೃಷ್ಟಿಯ ನಿಯಮ ಅಶ್ವರ್ಯ
ವಾಯಿತು.

          ಇಲ್ಲಿ ದೇವತೆಗಳ ಸಮೂಹವೇ ಇದೆ.  ಲಕ್ಷ್ಮೀ, ಲಕ್ಷ್ಮೀ ನಾರಾಯಣ, ಗಣೇಷ, ಸತ್ಯಭಾಮ,
ಜಾಂಬವತಿ, ಪ್ರದ್ಯುಮ್ನ, ರಾಧ, ದೇವಕಿ, ಬಲರಾಮ, ಪುರುಷೋತ್ತಮ, ವಿಗ್ರಹವನ್ನು ಮುಟ್ಟ ಬಹುದು.  "ಮಾಧವ
ರಾಯ", ಕಷ್ಟ ನಿವಾರಕ ವಿಗ್ರಹ, ದೇವರು.  ಮುಕುಂದ ಮಾಲ ದಲ್ಲಿ ಬರುತ್ತೆ ಮಾಧವಾರಾಯ... ಅಂತ ಕೊನೆ
ಯಲ್ಲಿ.  ದ್ವಾರಕ ಶಂಕರಚಾರ್ಯರು ಕಟ್ಟಿಸಿದ ಮಠದಲ್ಲಿ ಒಂದು.  ಇಲ್ಲಿ ಸಾಮವೇದದ ಪಠನ ಹಾಗು ಅಭ್ಯಾಸ
ಎಲ್ಲಾ ನಡೆಯುತ್ತೆ.  ಪಶ್ಚಿಮನಾಯ ಶಂಕರಮಠ.  ಮಠದಲ್ಲಿ, ಶಾರದಾಂಬ, ಚಂದ್ರಮೌಳೇಶ್ವರ, ಆದಿಶಂಕರ ಗಳ
ವಿಗ್ರಹಗಳು ಇವೆ.  ಅಲ್ಲಿಂದ ಹೋಟೆಲ್‍ಗೆ ಬಂದು ತಿಂಡಿ ತಿಂದು, 2 ಕಿ.ಮಿ. ದೂರ ಇರುವ ರುಕ್ಮಿಣಿ ದೇವಸ್ಥಾನ
ನೋಡಲು ಹೊರೆಟೆವು.  ಚೆನ್ನಾಗಿದೆ.  ಇಲ್ಲಿಂದ ನಾವು 2 ಕಿ.ಮಿ. ದೂರ ಸಮುದ್ರದಲ್ಲಿ ಇರುವ, "ಬೇಟ್ ದ್ವಾರಕ
ಕ್ಕೆ"(5ನೇ ದ್ವಾರಕ), ಮೋಟರ್ ಬೋಟ್‍ನಲ್ಲಿ ಹೊರೆಟೆವು.  ಈ ದ್ವಾರಕ ಕೃಷ್ಣ ಸುಧಾಮನನ್ನು ಭೇಟಿಮಾಡುತ್ತಿದ್ದ
ಜಾಗ.  ಇಲ್ಲಿ ದ್ವಾರಕದೀಶ್, ಅಂಬಿಕ ದೇವಿ, ರಾಮ, ಸುಧಾಮ, ಬ್ರಹ್ಮ ಲಕ್ಷ್ಮಿ, ಸರಸ್ವತಿ ಇತ್ತು.  ಇಲ್ಲಿಗೆ ಐದು
ದ್ವಾರಕ ದರ್ಶನ ಮುಗಿಯಿತು.  ಅವುಗಳೆಂದರೆ ಕಂಕ್ರೋಲಿ ದ್ವಾರಕ, ನಾಧ ದ್ವಾರಕ, ಮೂಲ ದ್ವಾರಕ, ಮುಖ್ಯ
ದ್ವಾರಕ, ಮತ್ತು ಬೇಟ್ ದ್ವಾರಕ.

         ಮುಂದೆ ದ್ವಾರಕದಲ್ಲೆ ಇರುವ "2ನೇ ಜ್ಯೋತಿರ್‍ಲಿಂಗ ನಾಗೇಶ್ ಜ್ಯೋತಿರ್‍ಲಿಂಗ"ಕ್ಕೆ ಬಂದ್ವಿ.  ದೇವ
ಸ್ಥಾನದ ಹೊರಗಡೆ ಬಹಳ ದೊಡ್ಡ ಈಶ್ವರನನ್ನು ಇಟ್ಟಿರುತ್ತಾರೆ.  ಇದು ಗೋಮತಿ ಅರೇಬಿಯಾ ಸಮುದ್ರಕ್ಕೆ
ಸೇರುವ ಸ್ಥಳದಲ್ಲಿ ಇದೆ.  ಒಂದು ಕಾಲದಲ್ಲಿ ಶ್ರೀಕೃಷ್ಣನ ನಿವಾಸ ಸ್ಥಾನವಾದ ದ್ವಾರಕ ನಗರ ಈ ವನದಲ್ಲಿ ಇತ್ತು.

          ಪುರಾಣ ಕಥೆ:- ಹಿಂದೆ ದಾರುಕ ಎಂಬ ರಾಕ್ಷಸ, ಹಾಗು ಅವನ ಹೆಂಡತಿ ದಾರುಕೆಯರು, ಮಾನವ
ರನ್ನು,  ಮಹಾಋಷಿಯರನ್ನು, ಸಾಧುಗಳನ್ನು, ಯಜ್ಞ ಯಾಗಾದಿ ಪೂಜೆ ಮಾಡುವವರನ್ನು, ಭಾದಿಸಿರುತ್ತಾರೆ.
ಎಲ್ಲಾರು "ಜ್ವಾರ" ಎಂಬ ಮಹಾಋಷಿಯ ಹತ್ತಿರ ಕಷ್ಟ ಹೇಳಿಕೊಂಡಾಗ, ಅವರು ಭೂಮಿಯ ಮೇಲಿರುವ ಪ್ರಜೆ
ಗಳನ್ನು ಹಿಂಸಿಸಿದಕೊಸ್ಕರ, ಈ ರಾಕ್ಷಸನು ತಕ್ಷಣ ಮರಣ ಹೊಂದಲಿ ಎಂದು ಶಾಪ ಕೊಡುತ್ತಾನೆ.  ವಿಷಯ
ತಿಳಿದ ರಾಕ್ಷಸ ಅ ವನ ವನ್ನೇಲ್ಲ ಎತ್ತು ಸಮುದ್ರಕ್ಕೆ ಹಾಕಿ, ಭೂಮಿಯ ಮೇಲಿದ್ದ ಪ್ರಜೆಗಳ ತಂಟೆಗೆ ಹೊಗದೆ,
ಸಮುದ್ರದಲ್ಲಿ ಪಯಣಿಸುವವರನ್ನು ಹಿಂಸಿಸುತ್ತಿರುತ್ತಾನೆ.  ಒಂದು ಸಲ ಹೀಗೆ ಪ್ರಯಾಣಿಸುತ್ತಿದ್ದ ಜನರನ್ನು ದಾಳಿ
ಮಾಡಿ ಕಾರಗೃಹಕ್ಕೆ ಹಾಕುತ್ತಾನೆ.  ಅವರಲ್ಲಿ ಒಬ್ಬ "ಸುಪ್ರೀಯ" ಅನ್ನುವ ವೈದ್ಯ ಮಹಾಶಿವ ಭಕ್ತ.  ಕಾರಗೃಹ
ದಲ್ಲೆ ಇರುವ ಎಲ್ಲರನ್ನು ಶಿವಭಕ್ತರನ್ನಾಗಿ ಮಾಡುತ್ತಾನೆ.  ರಾಕ್ಷಸನು ಅವನ ಮೇಲೆ ಘರ್ಜಿಸಿ, ಪೂಜೆಗೆ ಅಡ್ಡಿ
ತಂದರೂ, ಅಂಜದೆ ನಿಚ್ಛಲವಾಗಿ, ಪೂಜೆ ಮುಂದುವರೆಸುತ್ತಾನೆ.  ಕೊನೆಗೆ ಅವನ ಉಪಟಳವನ್ನು ತಾಳದೆ, ಶಿವ
ನನ್ನು ಪ್ರಾರ್ಥಿಸಿದಾಗ, ಅಲ್ಲೋಂದು ಮಂದಿರ ಉದ್ಭವವಾಗಿ, ಶಿವ ಜ್ಯೂತಿರ್‍ಲಿಂಗ ರೂಪದಲ್ಲಿ ವಿರಾಜಿಸುತ್ತಾನೆ.
ಸುಪ್ರೀಯ ಲಿಂಗವನ್ನು ಅಲಿಂಗನ ಮಾಡುತ್ತಾನೆ.  ಶಿವನು ಪಾಶುಪಾತಸ್ತ್ರದಿಂದ ದಾರುಕನನ್ನು ಕೊಂದು ಅದೃಶ್ಯ
ನಾಗುತ್ತಾನೆ.  ಅಲ್ಲದೇ ಇಲ್ಲಿ ಶಿವ ಸರ್ಪ ಶಕ್ತಿಯನ್ನು ಅಭರಣವಾಗಿ ಕೊರಳಿಗೆ ಹಾಕಿಕೊಂಡು "ನಾಗಾಭರಣ"
ಅದನೆಂದು ಪ್ರತೀತಿ,  ಬಹಳ ಸಲ ಔರಂಗಜೇಬ್ ದಾಳಿ ಮಾಡಿ ಹಾಳುಗೆಡಹಿದ್ದ.  ಹಾಡುಗಾರ "ಗುಲ್‍ಶನ್
ಕುಮಾರ್ " ಮತ್ತೆ ಕಟ್ಟಿದ್ದಾರೆ.  ದರ್ಶನ 2-3 ಸಲ ಚೆನ್ನಾಗಿ ಅಯಿತು.  ಅಲ್ಲಿಯೇ ಮರದ ನೆರಳಲ್ಲಿ ಊಟ
ಮಾಡಿ ಪ್ರಯಾಣ ಮುಂದುವರೆಸಿದೆವು.

          ಅಲ್ಲಿಂದ ನಾವು ಗೋಪಿಕಾ ಸರೋವರಕ್ಕೆ ಹೋದೆವು.  ರಸ್ತೆಯಿಂದ ಸ್ವಲ್ಪ ದೂರ ನಡೆದುಕೊಂಡು
ಇಳಿಬೇಕು.  ಕಾಡಿನ ಮದ್ಯೆ ತಂಪಾದ ವಾತಾವರಣದಲ್ಲಿದೆ.  ಗೋಪಿಕಾ ಸ್ತ್ರಿಯರ ಸ್ನಾನಘಟ್ಟ.  ಇಲ್ಲಿ "ಗೋಪಿ
ಚಂದನ", ಹಾಗು "ಚಕ್ರಾಂಕಿತ ಕಲ್ಲುಗಳು", ಪೂಜೆಗೆ ಅರ್ಹವೆಂದು ಮಾರಾಟ ಮಾಡುತ್ತಾರೆ.  ಇಷ್ಟೆಲ್ಲ ನೋಡಿ
ಕೊಂಡು ಸಂಜೆ 6 ವರೆಗೆ ಹೋಟೆಲ್‍ಗೆ ವಾಪಸ್ಸು ಸೇರಿದೆವು.  ದೇವಸ್ಥಾನ ಹತ್ತಿರವೇ ಇದ್ದುದರಿಂದ ಇನ್ನೊಂದು
ಸಾರಿ ಮುಖ್ಯ ದ್ವಾರಕದೀಶನ ದರ್ಶನ ಮಾಡಿ ರಾತ್ತೆ ಗೋಕುಲ್ ಹೋಟೆಲ್‍ನಲ್ಲಿ ಹಾಲ್ಟ್.

          27-2-2013.13ನೇ ದಿನ.  ಬೆಳಿಗ್ಗೆತಿಂಡಿ ತಿಂದುಕೊಂಡು, ಅಹಮದಬಾದ್ ಕಡೆಗೆ ಪ್ರಯಾಣ.
400-500 ಕಿ.ಮಿ. ದೂರ.  ದಾರಿಯುದ್ದಕ್ಕೂ, ಹಾಡು ಹಸೆ, ಸಹಸ್ರನಾಮಗಳು, ಚರ್ಚೆಗಲು, ಹಾಸ್ಯಪ್ರಸಂಗಗಳು,
ಮುಂತಾದುವುಗಳು, ಸಮೂಹಿಕವಾಗಿ, ಹಾಗು, ವ್ಯಕ್ತಿಗತವಾಗಿ ಇತ್ತು.  ಸೌಂದರ್ಯಲಹರಿಗಳ ವಿವರಣೆ, ಅದ್ಯಾತ್ಮಿಕ
ಸಂಭಾಶಣೆ ಚರ್ಚೆ, ಭಜನೆಗಳು, ನಡೆದು ಪ್ರಯಾಣದ ಪ್ರಯಾಸ ಗೋತ್ತೆ ಅಗಲಿಲ್ಲ.  6 ವರೆ ಸಂಜೆಗೆ ಅಹಮದ
ಬಾದ್ ತಲುಪಿದೆವು.  ಉಳಿದದ್ದು ಅದೇ ಹೋಟೆಲ್ ಪೀಸ್‍ನಲ್ಲಿ.

          ಕೈ ಕಾಲು ತೊಳೆದುÀಕೊಂಡು, ಅಲ್ಲಿಯೇ ಹತ್ತಿರವಿದ್ದ "ಶ್ರೀ ಜಗನ್ನಾಥ ಮಂದಿರ"ಕ್ಕೆ ಹೊದೆವು.
ಪೂರಿಯಂತೆ ಇಲ್ಲಿಯೂ ರಥೋತ್ಸವ ಅಗುತ್ತೆ.  ಪೂರಿಯ ನಂತರ ಎರಡನೇದು.  ಶ್ರೀ ಜಗನ್ನಾಥ, ಬಲಭದ್ರ,
ಸುಭದ್ರ ಮೂರು ಪೂರಿ ತರಹ ಇದೆ.  ಇದಲ್ಲದೇ ವಿಶ್ವನಾಥ, ವೈದ್ಯನಾಥ, ರಣ್ ಛೋಡ್‍ದಾಸ್, ಹನುಮಂತ,
ಶಂಕರಚಾರ್ಯರ ವಿಹ್ರಹ ಹಾಗು ಫೋಟೋ ಇದೆ.  ಅರತಿಯನ್ನು ನೋಡಿ ವಾಪಸ್ಸು ಬಂದೆವು.  ನಂತರ ದಾರಿ
ಯಲ್ಲಿ ಕುಳಿತು ಕಾಯುತ್ತಿದ್ದವರಿಗೆ ಅನ್ನದಾನ ವಾಗುತ್ತಿತ್ತು.ಎಲ್ಲಾ ದೇವಸ್ಥಾನದಲ್ಲೂ, ಜ್ಯೋತಿರ್‍ಲಿಂಗದಲ್ಲಿ, ದ್ವಾರಕ
ದಲ್ಲಿ, ಸದಾ ಅನ್ನದಾನ ನಡೆಯುತ್ತೆ.  ಎಲ್ಲಾ ಕಡೆ ಧರ್ಮಛತ್ರಗಳು ಸಹ ಇವೆ.  ಶಂಕರಮಠ, ಉತ್ತರಾಧಿಮಠ,
ಕನ್ನಡದವರು ಇದ್ದಾರೆ.  ತಂಗಲು, ಕಾರ್ಯಗಳನ್ನು ಮಾಡಲು ವಸತಿ ವ್ಯವಸ್ಥೆ ಇದೆ.  ಯಾತ್ರಿಕರು ಶಕ್ತಿ ಅನುಸಾರ
ಕೊಟ್ಟ ಹಣದಿಂದ ದಾನದಿಂದ ನಡೆಸಿಕೊಂಡು ಬರುತ್ತಾರೆ.  ಹೀಗಾಗಿ ಅರ್ಥಿಕವಾಗಿ ಅವರವರ ಸಾಮಥ್ಯಕ್ಕೆ ತಕ್ಕಂತೆ ಅನುಕೂಲವಿದೆ.  ಸಂಪರ್ಕ ಸರಿಯಾದವರ ಹತ್ತಿರ ಮಾಡಬೇಕು ಅಷ್ಟೆ.

          28-2-2013 14ನೇ ದಿನ.  ಬೆಳಿಗ್ಗೆ 5 ವರೆ ಎಚ್ಚರ. 6 ಗಂಟೆಗೆ ಕಾಫಿ ಬಂತು.  ಅರುಣ-
ಗುರು ರವರ 2ನೇ ಮ್ಯಾರೇಜ್ ಅನಿವರ್ಸರಿ. ಅವರಿಗೆ ಶುಭಕೋರಿ, ಅಕ್ಕಿ ರೊಟ್ಟಿ ತಿಂದು, ಸಾಬರಮತಿ ಅಶ್ರಮದ
ಕಡೆಗೆ ಪ್ರಯಾಣ.  ಸಾಬರಮತಿ ನದಿಯ ದಡದ ಮೇಲೆ ಅಶ್ರಮ ಅನಿಸಿಕೊಳ್ಳಲು ಬೇಕಾದ ವಾತಾವರಣವಿದೆ.
ಮೊದಲು ಇದ್ದ ಸಣ್ಣ ಕಟ್ಟಡದಿಂದ, ಈಗ ಇರುವ ಆಧುನಿಕ ಅಶ್ರಮ ಬಂದ ಹಾದಿ ಎಲ್ಲಾ ವಿವರವಿದೆ.  ಪ್ರಕೃತಿ
ಸೌಂದರ್ಯ ಚೆನ್ನಾಗಿದೆ.  ಮಹಾತ್ಮ ಗಾಂಧಿ ಓಡಾಡಿದ, ಮೀಟಿಂಗ್ ಮಾಡಿದ ಸ್ಥಳ.  ಅವರು ಉಪಯೋಗಿಸುತ್ತಿದ್ದ
ಚರಕ, ದಿನನಿತ್ಯ ಬಳಕೆಯ ಸಾಮಾನು, ದಂಡಿಯಾತ್ರೆ ಚಿತ್ರ, ಕಸ್ತೂರಿಬಾ ಗಾಂಧಿಯ ಪ್ರತಿಮೆ, ಫೋಟೋಗಳು,
ಗ್ರಂಥಾಲಯ ಎಲ್ಲಾ ನೋಡಿಕೊಂಡು ಬಂದೆವು.  ಗಾಂಧಿಗೆ ಇಷ್ಟವಾದ ಹಾಡು "ವೈಷ್ಣವ ಜನತೋ" ಜಾÐಪಕಕ್ಕೆ
ಬಂತು. ಗಾಂಧಿಗೆ ನಮಿಸಿ ಮುಂದುವರೆದೆವು.

          ಇಲ್ಲಿಂದ 25 ಕಿ.ಮಿ. ದೂರ ಇರುವ ಗಾಂಧಿನಗರ ಗುಜರಾತ್ ರಾಜಧಾನಿಗೆ ಪ್ರಯಾಣ.  ದೆಲ್ಲಿ
ಯಲ್ಲಿರುವ "ಅಕ್ಷರ ಧಾಮ"ದ ಹೆಡ್ ಕ್ವಾರ್ಟರ್ಗೆ ಬಂದೆವು. 1 ರಿಂದ 5 ರೂಮಿನಲ್ಲಿ, ಸ್ವಾಮಿ ನಾರಾಯಣ ಟೆಂಪಲ್
ಎಕ್ಸಿಬಿಷನ್ ನೋಡಿದೆವು.  ಬಾಲಕ ನೀಲಕಂಠ, ಸ್ವಾಮಿ ನಾರಾಯಣ ನಾಗಿದ್ದು, ಶಂಕರಚಾರ್ಯರಂತೆ ಬರಿಕಾಲಿನಲ್ಲಿ
ದೇಶವನೆಲ್ಲಾ ಸುತ್ತಿದ್ದು, ಅವರ ಭೋದನೆ, ಜೀವನ ಚರಿತ್ರೆ,  ಮಾಡಿದ ಕಾರ್ಯಗಳ ಫೀಲಂ ತೋರಿಸಿದರು.
ಜೀವಂತ ಮುನುಷ್ಯರಂತೆ ಎಲ್ಲಾ ಮಾಡಿಟ್ಟಿದ್ದಾರೆ.  ಅದರಿಂದಲೇ ಹಾಡುಗಳು, ವಾದ್ಯಗಳ ನುಡಿಸುವಿಕೆ ಮಾತು
ಎಲ್ಲಾ ಇದೆ.  ಭಾರತದ ಉದ್ದಕ್ಕೂ ಪ್ರಯಾಣಮಾಡಿ, ಜನರಿಗೆ ಅಧ್ಯಾತ್ಮ ದಾರಿ ತೋರಿಸಿದುದು ಎಲ್ಲಾ ಇತ್ತು.
ಅಕ್ಷರ ಧಾಮ ಈಚೆಗೆ ಅಗಿದ್ದು. ಅವರು ಇದ್ದದ್ದು 1850ರಲ್ಲಿ.  ಅಕ್ಷರಧಾಮದಲ್ಲಿ ಇವರನ್ನು ಗುರುಗಳಾಗಿ
ಪೂಜಿಸುತ್ತಾರೆ. ಇದೆಲ್ಲಾ ನೋಡಲು ಬಹಳ ಕಾಲ ಹಿಡಿಯಿತು.  ಊಟ 4 ಗಂಟೆ ಅಯಿತು. ಊಟದ ನಂತರ ಒಂದು ಗಂಟೆ ವಿರಾಮ ತೆಗೆದುಕೊಂಡು ಶಾಪಿಂಗ್ ಹೊರೆಟೆವು.  "ತೀನ್ ದಾರ್ ವಾಜû" ಅಂತ ಪ್ರಸಿದ್ಧವಾದ
ಮಾರುಕಟ್ಟೆ.  ಚಾಂದಿನಿಯ ಎರಡು ಡ್ರಸ್ ಮೇಟೀರಿಯಲ್ ತೆಗೆದು ಕೊಂಡ್ವಿ.  ಇಲ್ಲಿ ಬಟ್ಟೆಗಳು ಚೀಪ್ ಹಾಗು
ಎಲ್ಲಾದಡೆ ಒಂದೇ ವ್ಯಾಪಾರ.  ನಂತರ ಹೋಟೆಲ್‍ಗೆ ವಾಪಸ್ಸು ಬಂದು, ಬೆಳಿಗ್ಗೆ ಉಜ್ಜಯಿನಿ ಪ್ರಯಾಣಕ್ಕೆ ರೆಡಿ
ಅದೆವು.

         1-3-2013. 15ನೇ ದಿನ. ಬೆಳಿಗ್ಗೆ 5 ಗಂಟೆಗೆ ಪ್ರಯಾಣ.  ಧಾಕೂರ್ ಅನ್ನವ ಕಡೆಗೆ.  "ರಣ್
ಛೋಡ್ ರಾಯ್ ಮಂದಿರ್ ಭೇಟಿ.  ಅರತಿಯ ಸಮಯ ಪ್ರತಿಯೂಬ್ಬರು ಹಾಡು ಹಾಡುತ್ತಿದ್ದರು.  ಅರ್ಧಗಂಟೆ
ಹಾಡು ಅಯಿತು.  ದೇವಸ್ಥಾನದ ಅವರಣದಲ್ಲಿ ಇರುವ ಗುಡಿಯನ್ನು ನೋಡಿದೆವು.  ಈ ಮೂರ್ತಿ ದೊಡ್ಡದಾಗಿದೆ.
ಕರಿಶಿಲೆ.  ಒಬ್ಬ ಭಕ್ತ ಮಥುರದಿಂದ ಕೃಷ್ಣನ ವಿಗ್ರಹ ತಂದು ಇಲ್ಲಿಯ ಬಾವಿಯಲ್ಲಿ ಹಾಕಿರುತ್ತಾನೆ.  ದೇವರ
ಅಪ್ಪಣೆಯಂತೆ 9 ತಿಂಗಳನಂತರ, ಅಲ್ಲಿಂದ ವಿಗ್ರಹವನ್ನು ತೆಗೆದು ಇಲ್ಲಿ ಪ್ರತಿಷ್ಠಾಪಿಸಿರುತ್ತಾನೆ.  ಹೀಗಾಗಿ ಮೂರ್ತಿ
ಬೆಳೆದು ದೊಡ್ಡದಾಗಿದೆ.  ವಿಷಯ ತಿಳಿದ ಬೇರೆಯವರು ಅತುರದಿಂದ, 9 ತಿಂಗಳಗಿಂತ ಮುಂಚೆ ತೆಗೆದ ವಿಗ್ರಹ
ಗಳು, ಸಣ್ಣದಾಗಿ ಇದೆ.  ಅದರಲ್ಲಿ ದ್ವಾರಕಗಳದ್ದೂ, ಉಡುಪಿಯದು, ಗುರುವಾಯುರ್‍ದು ಸಣ್ಣದಾಗಿದೆ.  ಕೆರೆಯ ಮದ್ಯೆ ಇರುವ ಈ ಬಾವಿಯಿಂದಲೇ ಎಲ್ಲಾ ವಿಗ್ರಹ ತೆಗೆದದ್ದು.  ಬಾವಿಯನ್ನು ನೋಡಿ ಪೂಜಿಸಿದೆವು.  ಅಲ್ಲಿಗೆ
ಹೋಗಲು ಸಣ್ನ ಸೇತುವೆ ಮಾಡಿದ್ದಾರೆ.  ನಂತರ ತಿಂಡಿ ತಿಂದು ಪ್ರಯಾಣ ಮುಂದುವರೆಸಿದೆವು.

          ಉಜ್ಜಯಿನಿ ಹೋಗುವ ದಾರಿಯಲ್ಲಿ ಮೈನ್ ರೋಡ್ ನಿಂದ ಕೆಳಗೆ ಇಳಿದು, ಅಲ್ಲಿ ಇರುವ
ತಂಪಾದ ಜಾಗದಲ್ಲಿ, ಹನುಮಂತ ಹಾಗು ಈಶ್ವರನ ಗುಡಿಯ ಅವರಣದಲ್ಲಿ ಬಿಸಿಬೇಳೆಬಾತ್, ಮೊಸರನ್ನ, ಖಾರ,
ಹಾಗು ಸ್ವೀಟ್ ವಿತರಣೆ ಅಯಿತು.  ದೇವಸ್ಥಾನದಲ್ಲಿ ಹನುಮಾನ್ ಛಾಲೀಸ್ ಕೆತ್ತಿದ್ದಾರೆ.  ಪಕ್ಕದಲ್ಲಿ ಶಿಪ್ರ ನದಿ
ಹರಿಯುತ್ತಿತ್ತು.  ಬಿಸಿಲು ಬಹಳ ಇತ್ತು.  ತಂಪಾದ ಈ ಜಾಗ ಮನಸಿಗೆ, ದೇಹಕ್ಕೆ ಮುದ ನೀಡಿತು.  ಊಟದ
ನಂತರ ಪ್ರಯಾಣಸಾಗಿ, ಉಜ್ಜಯಿನಿಯನ್ನು ರಾತ್ರೆ 7.30ಕ್ಕೆ ತಲುಪಿ ಹೋಟೆಲ್ "ರಾಧೆ"ಯಲ್ಲಿ ತಂಗುದಾಣ. ಫ್ರೇಶ್
ಅಪ್ ಆಗಿ, ತಕ್ಷಣವೇ "ಮಹಾ ಕಾಲೇಶ್ವರ" ಜ್ಯೋತಿರ್‍ಲಿಂಗ ದರ್ಶನ ಮಾಡಿ ಬಂದೆವು.  ರಾತ್ರೆ ಅರತಿ ನೋಡಿ
10.30 ಮೇಲೆ ವಾಪಸ್ಸು ಬಂದೆವು.  ಇದು 3ನೇ ಜ್ಯೋತಿರ್‍ಲಿಂಗ.

          2-3-2013. 16ನೇ ದಿನ.  ಬೆಳಿಗ್ಗೆ ಅಮೃತ ಗಳಿಗೆಯಲ್ಲಿ ದೇವರ ದರ್ಶನಕ್ಕೆ ಹೋದೆವು.
ಮೊದಲು ಭಸ್ಮಭೀಷೇಕ, ನಂತರ ಪಂಚಾಮೃತ ಅಭೀಷೇಕ.  ಬೆಳಿಗ್ಗೆನೇ ಸಶ್ಮಾನದಿಂದ (ಅಲ್ಲಿಯೇ), ತಂದ
ಬೂದಿಯಲ್ಲಿ, ನಾನಾ ಕಾರ ಅಂದರೆ ಕೈಲಾಸ ಪರ್ವತ, ಮೋಡಗಳು, ದೇವಲೋಕದಂತಹ. ನಮ್ಮ ಮನಸ್ಸಿನ
ಕಲ್ಪನೆಗೆ ಹೊಂದುವ, ಕೈ ಚಳಕದಿಂದ ಭಸ್ಮಾಭಿಷೇಕ.  ನಂತರ ಪಂಚಾಮೃತ ಅಭೀಷೇಕ.  500 ಜನ ಕುಳಿತು
ನೇರವಾಗಿ ನೋಡುವ ಏರ್ಪಾಡು ಚೆನ್ನಾಗಿದೆ.  ವಯಕ್ತಿಕವಾಗಿ ಅಭೀಷೇಕ ನೋಡಿ, ಲಿಂಗವನ್ನು ಸ್ವರ್ಷಿಸಿ, ನಮ
ಸ್ಳಾರಿಸಿ ಅನಂದದಿಂದ ಹೋರ ಬಂದೆವು.  ಪೂರಿ ಸಾಗು ತಿಂದು ಸ್ಥಳೀಯ ದರ್ಶನಕ್ಕೆ ಹೊರೆಟೆವು.

          ಪುರಾಣ ಕಥೆ:- ಉಜ್ಜಯನಿಯನ್ನು ಅವಂತಿಕ  ನಗರವೆಂದು ಕರೆಯುತ್ತಾರೆ.  ಮೋಕ್ಷದಾಯಿಕ
7 ನಗರದಲ್ಲಿ ಇದು ಒಂದು.  "ಅಯೋಧ್ಯ. ಮಥುರ, ಮಾಯಾ, ಕಾಶಿ, ಕಂಚಿ, ಪುರಿ, ದ್ವಾರಾವತಿ ಚೈವ ಸಪ್ತ್ಯೆತೆ
ಮೋಕ್ಷದಾಯಕೇ" ಸ್ಕಂದ ಹಾಗು ಶಿವ ಪುರಾಣದಲ್ಲಿ ಇದರ ಮಹತ್ವವಿದೆ.  ಇಲ್ಲೇ ಶಿಪ್ರನದಿ, ಶ್ರೀಕೃಷ್ಣ ವಿದ್ಯಾಭ್ಯಾಸ ಮಾಡಿದ ಸಾಂದೀಪ ಮುನಿ ಅಶ್ರಮ, ವಿಕ್ರಮಾದಿತ್ಯನ ರಾಜಧಾನಿ, ಕಾಳಿದಾಸನ ನೆಲೆಯ ಸ್ಥಳ. ಒಂದು
ಕಾಲದಲ್ಲಿ "ವೇದಪ್ರೀಯ" ಎಂಬ ಬ್ರಾಕ್ಮಣನು ತನ್ನ 4 ಜನ ಮಕ್ಕಳೊಂದಿಗೆ, ರತ್ನಗಿರಿಮಾಲ ಪರ್ವತದಲ್ಲಿ ವಾಸವಾಗಿ
ಶಿವಭಕ್ತನಾಗಿದ್ದನು.  ಅವನ ಕೀರ್ತಿಪ್ರತಿಷ್ಠೆಯನ್ನು ಸಹಿಸದ "ದುಷಣ"ವೆಂಬ ರಾಕ್ಷಸ ಅವಂತಿಕ ಪಟ್ಟಣಕ್ಕೆ ದಾಳಿ
ಮಾಡಿದಾಗ, ಜನರೆಲ್ಲಾ ಕಂಗೆಟ್ಟು, ದಿಕ್ಕಾಪಾಲಾದಾಗ, ಈ ಶಿವಭಕ್ತ ವಿಚಲಿತನಾಗದೇ ಶಿವನನ್ನು ಧ್ಯಾನಿಸುತ್ತಿದ್ದ.
ರಾಕ್ಷಸನು ಕ್ರೋಧನಾಗಿ ಅವನನ್ನು ಕೊಲ್ಲಲು ಪ್ರಯತ್ನಿಸಿದಾಗ ಶಿವನು "ಮಹಾಕಾಳ"ರೂಪದಲ್ಲಿ ಬಂದು ರಾಕ್ಷಸನನ್ನು
ಸಂಹರಿಸಿದ ಸ್ಥಳ.  ಶಿವನು ಭಕ್ತನಿಗೆ ವರ ಕೇಳು ಎಂದು ಕೇಳಿದಾಗ, ಆ ಶಿವಭಕ್ತನು ಶಿವನನ್ನು ಇಲ್ಲಿಯೇ
ನೆಲೆಸಲು ಕೋರಿದ್ದರಿಂದ ಶಿವನು ಅನುಗ್ರಹಿಸಿ ಮಾಹಾಕಾಳ ರೂಪದಲ್ಲಿ ಜ್ಯೋತಿರ್‍ಲಿಂಗನಾಗಿ, ನೆಲೆಸಿ, ಮುಕ್ತಿ
ಪ್ರಸಾದಿಸುತ್ತಾನೆ.

          ಇನ್ನೊಂದು ಕಥೆಯ ಪ್ರಕಾರ, ಉಜ್ಜಯಿನಿಯ ರಾಜ ಚಂದ್ರಸೇನಾ ದೊಡ್ಡ ಶಿವ ಭಕ್ತ.  ಒಂದು
ದಿನ ಅವನು ಶಿವಪೂಜೆಯಲ್ಲಿ ಮಗ್ನನಾದದ್ದು ನೋಡಿ, 5 ವರ್ಷದ ಗೋಲ್ಲ ಬಾಲಕ "ಶ್ರೀಕರ" ಎನ್ನುವನು, ರಾಜ
ನನ್ನು ನೋಡಿ ತಾನು ಸಹ ಒಂದು ಶಿಲಾ ಖಂಡವನ್ನು ತಂದು ಪೂಜಿಸುತ್ತಾನೆ.  ತಾಯಿ ಊಟಕ್ಕೆ ಕರೆದರೂ ಬರದೆ
ಇದ್ದ ಬಾಲಕನನ್ನು ನೋಡಿ, ಅವನು ಪೂಜಿಸುತ್ತಿದ್ದ ಶಿಲೆಯನ್ನು ಎಸೆಯುತ್ತಾಳೆ.  ಮಗುವು ಅತ್ತು ಅತ್ತು, ಮೂರ್ಛೆ ಹೋದಾಗ, ಶಿವನು ಪ್ರತ್ಯಕ್ಷನಾಗಿ, ಅವನು ಕಣ್ಣು ತೆರೆದಾಗ, ಮಹಾಕಾಳ ಮಂದಿರದ ಒಳಗೆ ದೇದಿಪ್ಯ
ಮಾನವಾಗಿ ಬೆಳಗುವ ಜ್ಯೋತಿರ್‍ಲಿಂಗ ಕಣ್ನಿಗೆ ಕಾಣುತ್ತೆ.  ಅಲ್ಲಿ ಲೀನ ವಾಗುತ್ತಾನೆ. ಇದನ್ನು ನೋಡಿದ ತಾಯಿಗೆ ಅಶ್ಚರ್ಯವಾಗುತ್ತೆ.   ನಂತರ ಚಂದ್ರಸೇನ ರಾಜನಿಗೂ ಈ ವಿಷಯ ತಿಳಿಯುತ್ತೆ.  ಹನುಮಂತ ದರ್ಶನ ಕೊಟ್ಟು,
ಸ್ಥಳ ಮಹಿಮೆ ತಿಳಿಸಿ ಈ ಬಾಲಕನ 8ನೇ ತಲರಮಾರಿನಲ್ಲಿ ನಂದ ಎಂಬುವನು ಜನಿಸುತ್ತಾನೆ.  ಮಹಾವಿಷ್ಣುವು
ಆ ನಂದನ ಮಗನಾಗಿ ಜನಸಿ, ಲೋಕೋದ್ದರ ಮಾಡುತ್ತಾನೆ ಎಂದು ಹೇಳಿ ಅದೃಶ್ಯನಾಗುತ್ತಾನೆ.  ಮಹಾಕಾಳ
ಲಿಂಗವು ದೊಡ್ಡದಾಗಿದೆ. ದೂರದ ವರೆಗೂ ಕಾಣಿಸುತ್ತದೆ.  ದೇವರು ಕಾಣಲು ಮಾಡಿದ ಏರ್ಪಾಡು ಚೆನ್ನಾಗಿದೆ.

          ಲೋಕಲ್ ಸೈಡ್ ಸೀಯಿಂಗ್:- (1) ಸಾಂದಿಪಿನಿ ಅಶ್ರಮ:- ಶ್ರೀ ಕೃಷ್ಣ, ಸುಧಾಮ, ಬಲರಾಮರ
ವಿದ್ಯಾಧಾಮ.  ಶ್ರೀ ಕೃಷ್ಣ ಸಾಮನ್ಯ ವಿದ್ಯಾರ್ಥಿಯಾಗಿ, ಋಷಿ ಪತ್ನಿಯರಿಗೊಸ್ಕರ ಕಟ್ಟಿಗೆ ಹೊತ್ತು, (ಅದರ ಪ್ರತಿಮೆ)
ಇದೆ.  ಕೆಲಸ ಮಾಡಿ ಕೊಟ್ಟು, ಋಷಿಸೇವೆ ಮಾಡಿ, ವಿದ್ಯಾಬ್ಯಾಸ ಮಾಡಿದ ಸ್ಥಳ.  ಅಶ್ರಮದಲ್ಲಿ ಸರ್ವೆಶ್ವರ ಲಿಂಗ
ಬಿಲ್ವ ಪತ್ರ ಮರ, ನಿಂತಿರುವ ನಂದಿ, ಶಿಪ್ರಾನದಿ, ಗೋಮತೆಶ್ವರ ಇದೆ.

          ಮಂಗಳನಾಥ ದೇವಸ್ಥಾನ:- ನವಗ್ರಹದಲ್ಲಿ ಒಂದಾದ ಮಂಗಳ ಗ್ರಹನ ಗುಡಿ.  ಇಲ್ಲಿ ಪ್ರಿತೃದೊಷ
ಹಾಗು ಗ್ರಹ ದೋಷ ವಿದ್ದವರು, ದೋಷ ಪರಿಹಾರಕ್ಕೆ ಪೂಜೆ ಮಾಡುತ್ತಾರೆ.  ಅನ್ನದಿಂದ ಮೂಲಲಿಂಗಕ್ಕೆ
ಮಂಗಳ ದೇವರನ್ನು ರಚಿಸಿ, ಕಣ್ಣು, ಮೂಗು, ಕಿವಿ, ಬಾಯಿ ಮಾಡಿ ಪೂಜಿಸುತ್ತಾರೆ.

          ವಟವೃಕ್ಷ ಇರುವ ಜಾಗ:-ಈ ವಟ ವೃಕ್ಷದಲ್ಲಿ ದಾರ ಕಟ್ಟಿ ಪ್ರಾರ್ಥನೆ ಮಾಡಿದರೆ, ನಮ್ಮ ಬಯಕೆ ಈಡೇರುವುದೆಂದು ಪ್ರತೀತಿ.  ವಿಕ್ರಮ ಬೇತಾಳ್‍ನಲ್ಲಿ ಬರುವ ವಟ ವೃಕ್ಷ.  ವಿಕ್ರಮಾದಿತ್ಯ, ಪಾರ್ವತಿ,  ಗಣಪತಿ,
ಕಾರ್ತಿಕೇಯ ಗುಡಿ ಇದೆ.

          ಕಾಲ ಬೈರವ ದೇವಸ್ಥಾನ:- ದೇವಸ್ಥಾನ ಬೇರೆಯಾಗಿ ದೊಡ್ಡದಾಗಿ ಇದೆ.ಹೊರಗಡೆ ದ್ವಾರ ದೊಡ್ಡ
ದಾಗಿ ಇದೆ.  ಒಳಗಡೆ ಕಾಲ ಭೈರವ ವಿಗ್ರಹವಿದೆ.  ಅದು ದೊಡ್ಡದಾಗಿದೆ.  ಇಲ್ಲಿ ವಿಶೇಷವೆಂದರೆ, ಮದ್ಯವನ್ನು
ನೈವೇದ್ಯ ಮಾಡುತ್ತಾರೆ.  ಒಳಗೆ ಹೊದ ತಕ್ಷಣ ಹುಳಿ ಹೆಂಡದ ವಾಸನೆ ಇರುತ್ತೆ.

          ಉಜ್ಜಯಿನಿ ಕಾಳಿಕ ಮಾತೆ:- ಕಾಳಿದಾಸನಿಗೆ ಒಲಿದ ಕಾಳಿಕ ಮಾತೆ.  ನಾಲಿಗೆಯನ್ನು ಚಾಚಿಕೊಂಡಿ
ರುತ್ತಾರೆ.  ಇದು ಒಂದು ಶಕ್ತಿಪೀಠ.  ದೇವರು ದೂರತನಕ ಕಾಣುತ್ತಾದೆ.

          ನೀತಿ ಶಾಸ್ತ್ರ ಬರೆದ ಭೃತಹರಿಯ ಗುಹೆ:- ಭೃತಹರಿಯ ವಿಗ್ರಹ, ನೀಲಕಂಠ ದೇವಲಾಯ,
ನವನಾಥ ದೇವಲಾಯವಿದೆ.

          ರಾಮ್ ಘಾಟ್:- ಶಿಪ್ರಾನದಿಯ ದಡದಲ್ಲಿ ಇದೆ.

          ಹರಸಿದ್ದಿ ದೇವಿ ಮಂದಿರ:- ದೇವಸ್ಥಾನ ಬಹಳ ಚೆನ್ನಾಗಿದೆ.  ಶಕ್ತಿಪೀಠ.  ದೇವಿಯ ಮೊಣಕೈ
ಬಿದ್ದಿದ್ದು.  ದೇವಸ್ಥಾನದ ಮೇಲ್ ಚಾವಡಿಯಲ್ಲಿ 52 ಶಕ್ತಿಪೀಠಗಳ ಪೇಟೀಂಗ್ ಇದೆ.ಅ ಯಿಂದ ಕ್ಷ,ತ್ರ,ಜÐ ತನಕ
ಅಕ್ಷರಕ್ಕೆ ಒಂದೊಂದು ದೇವಿ ಚಿತ್ರಣ ಇತ್ತು.  ಅಕ್ಷರ ಅ ಕ್ಕೆ ಕಾಮಕ್ಯ ದೇವಿ ಇತ್ತು.

          3-3-2013. 17ನೇ ದಿನ.  ಬೆಳಿಗ್ಗೆ 5.30ಕ್ಕೆ ಹೊರಟು, ಕಾಳಿ ದೇವಸ್ಥಾನದ ಹತ್ತಿರ ಇರುವ ನವಗ್ರಹ ದೇವಸ್ಥಾನವನ್ನು ನೋಡಿ ಕೊಂಡು, ಉಜ್ಜಯಿನಿ ಬಿಟ್ಟೆವು.  7 ಗಂಟೆಗೆ ಓಂಕಾರೆಶ್ವರಕ್ಕೆ ಬಂದೆವು.
ನರ್ಮದ ನದಿಯಲ್ಲಿ ಸ್ನಾನ ಮಾಡಿ, ಸರದಿಯಲ್ಲಿ ನಿಂತು ಓಂಕಾರೇಶ್ವರ ದರ್ಶನ ಮಾಡಿದೆವು.  ಬೆಟ್ಟದ ಮೇಲೆ
ಇದೆ.  ನದಿ ದಾಟಿ ಕೆಳಗೆ ಇಳಿದು ಸ್ವಲ್ಪ ಹತ್ತಿದ ಮೇಲೆ ಅಮಲೇಶ್ವರ ಇದೆ.  2 ಕಡೆ ದರ್ಶನ ವಾಯಿತು.
ಎರಡು ಎದರು ಬದರು ಇರುವ ಬೆಟ್ಟದಲ್ಲಿದೆ.  ದೋಣಿಯಿಂದಲೂ, ಸೇತುವೆಯಿಂದಲೂ ಹೋಗಬಹುದು.
ಇಲ್ಲಿ ನರ್ಮದ ನದಿ, ನರ್ಮದ ಹಾಗು ಕಾವೇರಿಕಾ ಎಂದು ಎರಡು ಭಾಗವಾಗಿ ಹರಿಯುತ್ತೆ.  ಇಲ್ಲಿ ಕಪಿಲಧಾರ
ಎಂಬ ನದಿ ನರ್ಮದಾ ನದಿಯನ್ನು ಸೇರುತ್ತೆ.  ಇಲ್ಲಿ ಬಹಳ ದೇವಲಾಯಗಳು ಇವೆ.  ನದಿಯು "ಓಂ' ಅಕಾರ.
ಅ ಪ್ರಣವದ ಬಾಲ ಚಂದ್ರದ ಮೇಲೆ ಓಂಕಾರೇಶ್ವರ ವಿರಾಜಿಸಿದ್ದಾರೆ.  ಅಮರೇಶ್ವರ ಇನ್ನೂಂದು ಬೆಟ್ಟದಲ್ಲಿದೆ.
ಎರಡು ಸುಂದರವಾದ ಸಣ್ಣ ಸಣ್ಣ ಲಿಂಗಗಳು.  2 ಬೆಟ್ಟದ ಹೆಸರು ಬ್ರಹ್ಮಪುರಿ, ಶಿವಪುರಿ.

         ಪುರಾಣ ಕಥೆಯಲ್ಲಿ, ಶ್ರೀರಾಮಚಂದ್ರನ ವಂಶಜನಾದ "ಮಾಂದಾತ" ಇಲ್ಲಿ ಪರ್ವತ ಶಿಖರದ ಮೇಲೆ
ತಪಸ್ಸು ಮಾಡಿ, ಪರಮೇಶ್ವರನನ್ನು ಪ್ರಸನ್ನಮಾಡಿ ಕೊಂಡು ದೇವಲಾಯವನ್ನು ನಿರ್ಮಿಸಿದ್ದಾನೆ.  "ಗಜಾನನ ಮಹಾ
ರಾಜ್" ಭಕ್ತ ನಿವಾಸ್ ನಲ್ಲಿ ತಂದ ಊಟ ಮಾಡಿದೆವು.  ಊಟ ವಿಶ್ರಾಂತಿಯ ನಂತರ ನಮ್ಮ ಪ್ರಯಾಣ ಮುಂದೆ
ತ್ರಯಂಬಕೇಶ್ವರಕ್ಕೆ ಪ್ರಯಾಣ.  ಓಂಕಾರ ಅಮಲೇಶ್ವರ 4ನೇ ಜ್ಯೂರ್ತಿಲಿಂಗ, 2 ಸೇರಿ.

          4-3-2013. 18ನೇ ದಿನ.  2ನೇ ರಾತ್ರೆ ಪ್ರಯಾಣ.  ಓಂಕಾರೇಶ್ವರದಿಂದ ಸಂಜೆ 5 ವರೆಗೆ
ಹೋರಟು, ರಸ್ತೆಯ  ಡಾಬದಲ್ಲಿ ಊಟ ಮುಗಿಸಿ, ತ್ರಯಂಬಕಕ್ಕೆ 7 ಗಂಟೆಗೆ ಬೆಳಿಗ್ಗೆ ಬಂದೆವು.  ಅಲ್ಲಿಯ
ಗಜಾನನ್ ಮಹರಾಜ್ ಭಕ್ತ ನಿವಾಸ್ ನಲ್ಲಿ ವಾಸ್ತವ್ಯ.  ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿದ ನಂತರ, ತಿಂಡಿ
ತಿಂದು ತ್ರೈಯಂಬಕೇಶ್ವರ ದರ್ಶನಕ್ಕೆ 9 ಗಂಟೆಗೆ ಹೊರೆಟೆವು.

          ಪುರಾಣ ಕಥೆಯ ಪ್ರಕಾರ ಗೌತಮ ಮುನಿಯ ತಪಸ್ಸಿನ ಫಲದಿಂದ ಶಿವನ ಅನುಗ್ರಹದಲ್ಲಿ ಬಂದ
ಗಂಗೆ ಗೋದಾವರಿ ಅಗಿದೆ.  ಅದಕ್ಕೆ ಗೌತಮಿ ಅಂತನು ಹೇಳುತ್ತಾರೆ.  ಗೌತಮ ಮುನಿ ಪತ್ನಿ ಅಹಲ್ಯ ದೇವಿಯ
ಜೊತೆ, ಸಾವಿರಾರು ವರ್ಷ ತಪಸ್ಸು ಮಾಡಿ, ಅನಾವೃಷ್ಟಿಯ ಕಾರಣ ಕ್ಷಾಮ ಪರಿಸ್ಥಿತಿ ಇದ್ದಾಗ, ಶಿವನ ಅನುಗ್ರಹ
ದಿಂದ ಗೋಮತಿ ಕುಂಡದಲ್ಲಿ ಉದಯಿಸಿದೆ.  ಶಿವನು ಇಲ್ಲಿ ಮುನಿಯ ಪ್ರಾರ್ಥನೆಯಿಂದ, ತ್ರೈಯಂಬಕೇಶ್ವರನಾಗಿ
ನೆಲೆಸಿದ್ದಾನೆ.  ಇಲ್ಲಿ ಮೂರು ಚಿಕ್ಕ ಚಿಕ್ಕ ಲಿಂಗ ಅಕೃತಿ ಇದೆ.  ಅವುಗಳನ್ನು ಭಕ್ತರು ಬ್ರಹ್ಮ, ವಿಷ್ಣು, ಶಿವಾತ್ಮ
ರೆಂದು ಭಾವಿಸುತ್ತಾರೆ.  ಇದು 5ನೇ ಜೋತ್ರ್ಯಿಲಿಂಗ. ಅಲ್ಲಿಂದ ನಾವುಗಳು 11 ಗಂಟೆಗೆ ನಾಸಿಕ್ ತಲುಪಿದೆವು.
ಅಟೋದಿಂದ ನಾಸಿಕ್ ಲೋಕಲ್ ಟ್ರಿಪ್ ಮಾಡಿದೆವು.ನೋಡಿಸ ಸ್ಥಳಗಳು ಹೀಗೆ ಇವೆ.

          (1); ಸೀತಾಗುಹ:- ಪಂಚವಟಿ:-ಪಂಚ ವೃಕ್ಷಗಳ ಮದ್ಯೆ, ಖರದೂಷಣನ ಹತ್ತಿರ ರಾಮ ಯುದ್ಧಕ್ಕೆ
ಹೋದಾಗ, ಸೀತೆಯನ್ನು ಗುಹೆಯಲ್ಲಿ ಇಟ್ಟ ಜಾಗ.

          (2) ಸೀತಾ ಎಕ್ಸೀಬಿಷನ್;- ಇಲ್ಲಿ ರಾವಣನಿಂದ ಸೀತಾಪಹರಣ, ಚಿನ್ನದ ಜಿಂಕೆಯ ಬೇಡಿಕೆ, ರಾಮ
ಲಕ್ಷಣರ ವನವಾಸ, ಶೂರ್ಪನಖಿಯ ಮೂಗನ್ನು ಕೊಯ್ದದ್ದು, ಲಕ್ಷಣ ರೇಖೆ ಕೆಲವು ಪ್ರಸಂಗಗಳ ಚಿತ್ರ ಇದೆ.
          (3) ಬಿಳಿ ರಾಮನ ದೇವಸ್ಥಾನ. ಬಿಳಿ ಶಿಲೆಯದು.
          (4)ಕರಿ ರಾಮನ ದೇವಸ್ಥಾನ (ಸ್ವಯಾಂಬು), ಹಾಗು ಹನುಮಾನ್ ದೇವಸ್ಥಾನ.
          (5) ಬಡಾ ಹನುಮಾನ್ (ಸ್ವಯಾಂಬು).
          (6) ಸೀತಾ ಕುಠೀರ, ಲಕ್ಷಣರೇಖ, ರಾವಣ ಸನ್ಯಾಸ ವೇಷ.
          (7) ಲಕ್ಷಣ ತಪಸ್ಸು ಮಾಡಿದ ಸ್ಥಳ. ಶೇಷಾವತಾರ. ತಪೋವನ.
          (8) ಲಕ್ಷಣ ಶೂರ್ಪನಖಿಯ ಮೂಗು ಕತ್ತರಿಸಿದ್ದು.
          (9) ಕಪಿಲಾ ಹಾಗು ಗೋದಾವರಿ ಸಂಗಮ. ಊಟದ ನಂತರ ನಾಸಿಕ್ನಿಂದ ಶಿರಡಿಗೆ ಪ್ರಯಾಣ.
5 ವರೆಗೆ ಶಿರಡಿಗೆ ತಲುಪಿದೆವು.  "ಧನ್‍ತಾರ" ಹೋಟೆಲ್ ವಾಸ. ತಕ್ಷಣವೆ ಹೊರಟು. ಅರತಿಯ ವೇಳೆಯಲ್ಲಿ
ಬಾಬಾ ದರ್ಶನ ವಾಯಿತು.

          5-3-2013. 19ನೇ ದಿನ. ಬೆಳಿಗ್ಗೆ ಅಷ್ಟೋತ್ತಿಗೆ 150 ಕಿಮಿ. ದೂರವಿರುವ ಭೀಮಾಶಂಕರಕ್ಕೆ
ಪ್ರಯಾಣ.  ಒಂದು ಜಂಗಲ್ ಡಾಬದಲ್ಲಿ ತಿಂಡಿ ಪೊರೈಸಿ, 11.30ಕ್ಕೆ ಬಂದ್ವಿ.  ಅಲಯದ ಸುತ್ತಲು ದಟ್ಟ ಅರಣ್ಯ.
ಸುತ್ತಲು ಸಹ್ಯಾದ್ರಿ ಪರ್ವತ ಶ್ರೇಣಿ.  ಅದರಲ್ಲಿ ಒಂದು ಶಿಖರದ ಹೆಸರು ಢಾಕಿನಿ.  ಗುಡಿಗೆ ಹೋಗುವಾಗ
165 ಮೆಟ್ಟಿಲ್ಲನ್ನು ಇಳಿದು, ಕಣಿವೆಗೆ ಹೋಗಬೇಕು.  ಮೊದಲ ಮೆಟ್ಟಿಲಿನಲ್ಲಿ ಘಂಟೆ ಕಟ್ಟಿದ್ದಾರೆ.  ಅದನ್ನು
ಹೊಡೆದು ಇಳಿಯಲಾರಂಬಿಸಿದೆವು.  ಭೀಮ ನದಿಯು ಲಿಂಗದ ಸುತ್ತಲೇ ಹುಟ್ಟಿ, ಪಕ್ಕದ ಕುಂಡದಲ್ಲಿ ಹರಿಯುತ್ತೆ.
ಇದು 6ನೇ ಜ್ಯೋತಿರ್‍ಲಿಂಗ.  ಇದು ಅರ್ಧನಾರಿಶ್ವರ ಲಿಂಗ.  ಲಿಂಗದ ಮೇಲೆ ಮದ್ಯೆದಲ್ಲಿ ಗೆರೆ ಇದೆ.  ಬೆಳ್ಳಿಯ
ಮಕುಟದ ಜೊತೆ, ಹಾಗು ಮಕುಟ ಇಲ್ಲದೇಯು ದರ್ಶನವಾಯಿತು.  ಜನ ಸಂದಣಿ ಕಡಿಮೆ ಇದ್ದುದರಿಂದ
"ಕ್ಯೂ"ನಲ್ಲಿ ನಿಂತು ಮೂರು ಸಲ ದರ್ಶನ ಮಾಡಿದೆವು.

          ಪುರಾಣ ಕಥೆ:- ಇತಿಹಾಸದ ಪ್ರಕಾರ ಅಸುರ ಜಾತಿಗೆ ಸೇರಿದ ಭೀಮಾಸುರನ (ಕುಂಭಕರ್ಣನ ಮಗ) ಸಾಧನ ಕ್ಷೇತ್ರವಾಗಿ, ಬ್ರಹ್ಮನನ್ನು ಒಲಿಸಿಕೊಂಡು ದೇವ ಲೋಕವನ್ನು ಅಕ್ರಮಿಸಿದನು.  ಭೂ ಲೋಕದಲ್ಲಿ
ಸಾಧು ಸಂತರಿಗೆ ಭಾದೆ ಕೊಡುತ್ತಿದ್ದನು. ಹೀಗಿರಲು. ಅಲ್ಲಿ ಅಳುತ್ತಿದ್ದ ಸುದಕ್ಷಣ ಎಂಬ ರಾಜ, ಮಹಾ ಶಿವ ಭಕ್ತ, ಅಖಂಡ ತಪಸ್ಸ್ವಿ. ಅವನನ್ನು  ಅಸುರ ಬಂದಿಸಿ,  ಕಾರಾಗ್ರಹದಲ್ಲಿ ಇಟ್ಟನು.  ರಾಜನು ಕಾರಾಗ್ರಹದಲ್ಲೆ
ಮಣ್ಣಿನಿಂದ ಲಿಂಗಮಾಡಿ, ಪಂಚಾಕ್ಷರಿ ರ್ಮತ್ರ ಜಪಿಸಿ ಪೂಜಿಸುತ್ತಿದ್ದನು.  ರಾಕ್ಷಸನ ಅಜೆÐಯನ್ನು ಮೀರಿ ರಾಜ ವಿಘ್ನ
ಗಳನ್ನು ತಡೆದುಕೊಂಡು ಪೂಜೆ ಮಾಡುತ್ತಿದ್ದನು.  ಕೋಪಗೊಂಡ ರಾಕ್ಷಸ ಶಿವಲಿಂಗವನ್ನು ಕಡಿಯಲು ಹೋದಾಗ,
ಶಿವ ಪ್ರತ್ಯಕ್ಷನಾಗಿ, ಆ ರಾಕ್ಷಸನನ್ನು ಉರಿಕಣ್ಣಿನಿಂದ ಭಸ್ಮ ಮಾಡಿದನು.  ಅಗ ಅವನ ಒಪಟಳ ನಿಂತಿತು.  ಅಂದಿ
ನಿಂದ ಧ್ಯಾನ, ತಪಸ್ಸು, ಪೂಜೆ ನಡೆಯ ತೋಡಗಿತು.  ನಾರದ ಮೊದಲಾದವರ ಕೋರಿಕೆ ಮೇರೆಗೆ, ಶಿವನು ಜ್ಯೋತಿರ್‍ಲಿಂಗ ರೂಪವಾಗಿ, ಭೀಮ ಶಂಕರನಾಗಿ ಪೂಜೆ ಸ್ವೀಕರಿಸುತ್ತಿದ್ದಾನೆ.  ಕಣ್ಣು ತುಂಬ ದರ್ಶನ ಮಾಡಿ
ಕೊಂಡು, ನಿಧಾನವಾಗಿ ಮೆಟ್ಟಿಲು ಹತ್ತಿ, ಊಟ ವಿಶ್ರಾಂತಿ ನಂತರ ಶಿರಡಿ ಧನ್ ತಾರ ಹೋಟೆಲ್‍ಗೆ ಹೋಗಿ ರೆಸ್ಟ್.
ಮತ್ತೆ ಸಂಜೆ ಶಿರಡಿ ಬಾಬ ದರ್ಶನ. ನಾನು, ರಾಜಕುಮಾರಿ ಪೇಟಿ ಬೀದಿ ಸುತ್ತಿದೆವು. ರಾತ್ರೆ ಅಲ್ಲೆ ಹಾಲ್ಟ್.

          6-3-2013.  20ನೇ ದಿನ.  ಬೆಳಿಗ್ಗೆ ಎದ್ದ ತಕ್ಷಣ ಮತ್ತೊಮ್ಮೆ ಶಿರಡಿ ಬಾಬ ದರ್ಶನ ಮಾಡಿ
ಕೊಂಡು, ಹೋಟೆಲ್ ನಲ್ಲಿ ಮಸಾಲೆ ದೋಸೆ ತಿಂದು, "ಶನಿಸಿಂಗಾಪುರ್"ಗೆ ಪ್ರಯಾಣ.  ಶನಿದೇವರ ದರ್ಶನ
ಚೆನ್ನಾಗಿ ಅಯಿತು.  ಓಪನ್ ಏರ್ ಟೆಂಪಲ್ ಸುತ್ತಲು ಗೋಡೆ ಇಲ್ಲ.  ಮದ್ಯೆದಲ್ಲಿ ಹಲಗೆ ಹಂಗೆ ಇರುವ ಶನಿಯ
ವಿಗ್ರಹ ಮಾತ್ರ.

          ಅಲ್ಲಿಂದ ಔರಂಗಾಬಾದ್‍ಗೆ ನಮ್ಮ ಪ್ರಯಾಣ.  ದಾರಿಯಲ್ಲಿ ಊಟ ಮಾಡಿಕೊಂಡು, ಸಂಜೆ ಔರಂಗಾ
ಬಾದ್‍ಗೆ ಬಂದ್ವಿ.  ಟೂರಿಸ್ಟ್ ಹೋಮ್‍ನಲ್ಲಿ ನಮ್ಮ ವಸತಿ.  ಉಡುಪಿ ಕಡೆಯ ರಿಟ್ಯರ್ಡ್ ಮಿಲಿಟರಿ ಅಫೀಸರ್
ರವರ ಬೋರ್ಡೀಂಗ್ ಮತ್ತು ಲಾಡ್ಜೀಂಗ್ ವಸತಿ ಗೃಹ.  ಕೆಳಗಿನ ದರ್ಜೆಯಿಂದ ಹೈ ಫಂಡಾ ವರೆಗೂ ಇದೆ.
ಬೆಳಿಗ್ಗೆ 6 ರಿಂದ ರಾತ್ರೆ 11ರ ವರೆಗೆ ಸೇವೆ.  ಆಡಿಗೆ ಮಾಡಲು ಬಿಡುವಾದ ಸ್ಥಳ.  ಪಾತ್ರೆ ತೋಳೆಯಲು ವಿಶಾಲ
ವಾದ ಸ್ಥಳ.  ಡೈನೀಂಗ್ ಹಾಲ್, ವಾಶಿಂಗ್ ಬೇಸನ್‍ಗಳು, ತಂಗಲು ಮೂರು ಅಂತಸ್ತಿನ ಕಟ್ಟಡ, ಶಾಲಾ ಕಾಲೇಜ್
ಮಕ್ಕಳಿಗೆ ಸಪರೇಟ್ ವ್ಯವಸ್ಥೆ, ಪರದೇಶದಿಂದ ಬಂದವರಿಗೂ ಸಪರೇಟ್ ಚೆನ್ನಾಗಿ ಇತ್ತು.  ಉತ್ತರ ಕನ್ನಡದಿಂದ
ಬಿ.ಎಡ್.ಮಕ್ಕಳು ಅದೇ ಸಮಯಕ್ಕೆ ಬಂದಿದ್ದರು. ಬಹಳ ಅನುಕೂಲವಾಗಿ, ವಿಶಾಲವಾಗಿ, ಗಿಡಮರಗಳಿಂದ ಕೂಡಿ
ಕೊಂಡು ಇತ್ತು.

          7-3-2013.  21ನೇ ದಿನ. ಬೆಳಿಗ್ಗೆ ಸೆಟ್ ದೋಸೆ ತಿಂದುಕೊಂಡು, ಘೃಷ್ನೇಶ್ವರ ಜ್ಯೋತಿರ್‍ಲಿಂಗ
(7ನೇ ದು), ದರ್ಶನಕ್ಕೆ ಪ್ರಯಾಣ.ಔರಂಗಾಬಾದ್ ನಿಂದ 30 ಕಿ,ಮಿ. ದೂರದಲ್ಲಿದೆ.  ಹಾಲಿನಿಂದ ಮಂತ್ರಗಳ ಜೊತೆ
ದೇವರಿಗೆ ಅಭೀಷೇಕವಾಗಿ, ದರ್ಶನ ಅರಾಮಾಗಿ ಅಯಿತು.  ಕರಿಶಿಲೆಯ ದೇವಸ್ಥಾನ.  ದೇವಸ್ಥಾನಕ್ಕೆ ಬಗ್ಗಿ ಹೋಗಿ
ಪಕ್ಕದಲ್ಲಿ ಗುಹೆ ತರಹ ಮೆಟ್ಟಲು ಹತ್ತಿ ಇಳಿದು ಹೋರಬರಬೇಕು.  ಚೆನ್ನಾಗಿತ್ತು.  ಜನಸಂದಣಿ ಜಾಸ್ತಿ ಇರಲಿಲ್ಲ
ವಾದರಿಂದ ಇಲ್ಲಿಯು ಸರದಿಯಲ್ಲಿ ನಿಂತು 3 ಸಲ ದರ್ಶನ ಮಾಡಿದೆವು.  ಕಾರಣ ದೇವರ ಹತ್ತಿರ ಕೆಲವು ಸೆಕೆಂಡ್ಗಳು ನಿಲ್ಲಲು ಬಿಡುವುದು.  ಶಿವ ಮಾನಸ ಸ್ತೋತ್ರ ಬರೆದು ಹಾಕಿದ್ದರು.  ಅದರ ಪಠನ ಅಯಿತು. ಅಚ್ಚು
ಕಟ್ಟಾಗಿ ಅರಾಮಾಗಿ ದರ್ಶನ ವಾಯಿತು.

          ಪುರಾಣ ಕಥೆ:- ಈ ಸ್ಥಳದಲ್ಲಿ ಸುಧರ್ಮ, ಸುಧೇಹರೆಂಬ ಬ್ರಾಹ್ಮಣ ಶಿವಭಕ್ತ ದಂಪತಿಯರಿದ್ದರು.
ಎಷ್ಟೂ ಪೂಜೆ ಯಾತ್ರೆ ಮಾಡಿದರು, ಸಂತಾನ ಭಾಗ್ಯವಿರಲಿಲ್ಲ.  ಒಂದು ದಿನ ಸುದೇಹ ಸಂತಾನಕೊಸ್ಕರ ತನ್ನ
ತಂಗಿ ಘೃಷ್ಠಳೆಯನ್ನು, ತನ್ನ ಗಂಡನಿಗೆ ವಿವಾಹವಾಗಲು ಒತ್ತಾಯಿಸಿದಳು.  ಅದರಂತೆ ಅವನು ಅವಳನ್ನು ಮದುವೆ
ಅಗುತ್ತಾನೆ.  ನಂತರ ಒಂದು ಗಂಡು ಮಗು ಹುಟ್ಟುತ್ತೆ.  ಮಮಕಾರÀದಿಂದ ಬೆಳಸಿ ವಿದ್ಯಾ ಬುದ್ದಿ ಕಲಿಸಿ ಕೊಡು
ತ್ತಾರೆ.  ಶಿವಭಕ್ತೆಯಾದ ಘೃಷ್ಣಳೆ ಪ್ರತಿದಿನ 1001 ಪಾರ್ಥಿವ ಲಿಂಗ ಮಾಡಿ, ಅದನ್ನು ಮನೆಯ ಹತ್ತಿರ ಇರುವ
ಕೆರೆಗೆ ಹಾಕಿ ಬಂದ ನಂತರವೇ ಊಟ ಮಾಡುತ್ತಿದ್ದಳು.  ಅದರಿಂದಲೇ ಕುಟುಂಬದಲ್ಲಿ, ಸುಖ, ಸಂತೋಷ,ಸಂತಾನ
ಅಂತ ಅವಳ ನಂಬಿಕೆ.  ಮಗನು ದೊಡ್ಡವನಾದ ಮೇಲೆ ಮದುವೆಯೂ ಅಯಿತು.  ಹಿರಿ ಹೆಂಡತಿ ಸುದೇಹಳಿಗೆ
ಸಮಾಜ ಘೃಷ್ಮಳಿಗೆ ಕೊಡುತ್ತಿದ್ದ ಗೌರವದಿಂದ ಅಸೂಯೆ ಬರುತ್ತೆ.  ಒಂದು ದಿನ ಘೃಷ್ಮಳೆ ಪೂಜೆಗೆ ಕುಳಿತಾಗ,
ಮಗನ ತಲೆಯನ್ನು ಕಡಿದು ಕೆರೆಯಲ್ಲಿ ಹಾಕಿ, ಏನು ತಿಳಿಯದವಳಂತೆ ಇರುತ್ತಾಳೆ.  ತಲೆ ಇಲ್ಲದ ಗಂಡನ ದೇಹ
ವನ್ನು ನೋಡಿ ಅಳುತ್ತಾ ಸೊಸೆ ಮಾವನ ಹತ್ತಿರ ಹೇಳುತ್ತಾಳೆ.  ಅತ್ತೆ ಶಿವಾರ್ಚನೆಯಲ್ಲಿ ಲೀನವಾಗಿರುತ್ತಾಳೆ.
ಅ ದಿನ ಕೋಟಿ ಲಿಂಗಾರ್ಚನೆಯ ಕೊನೆಯ ದಿನ.  ಸೊಸೆಯ ಅಳುವ ಧ್ವನಿ ಕೇಳಿರುತ್ತದೆ. ಪೂಜೆ ಮುಗಿಸಿ,
ಕೆರೆಯಲ್ಲಿ ಲಿಂಗವನ್ನು ಹಾಕುವಾಗ, ಶಿವನನ್ನು, ಪತಿ ವಿನಿಯೋಗವಾಗಲಿ, ಪುತ್ರ ವಿನಿಯೋಗವಾಗಲಿ, ಬಾರದಂತೆ
ಕೇಳುತ್ತಾಳೆ.  ಮತ್ತೆ ಪೂಜೆಗೆ ಕುಳಿಯುತ್ತಾಳೆ.  ಅವಳ ಎಕಾಗ್ರತೆಗೆ ಮೆಚ್ಚಿ ಶಿವ ವರವನ್ನು ಕೇಳಿದಾಗ, ಸೊಸೆಗೆ
ಪತಿ ಭಿಕ್ಷೆ ಬೇಡಿ, ಶಿವನು ಜ್ಯೋತಿರ್‍ಲಿಂಗ ರೂಪದಲ್ಲಿ ಇದ್ದು, ಭಕ್ತರಿಗೆ, ಸಂತಾನ ಭಾಗ್ಯ, ಅಕಾಲ ಮರಣ ಬಾರ
ದಂತೆ ವರ ಕೇಳುತ್ತಾಳೆ.  ಶಿವ ಅಸ್ತು ಅನ್ನುತ್ತಾನೆ.  ಇತಿಹಾಸದ ಪ್ರಕಾರ ಇದು ಶಿವಾಜಿ ಮಹಾರಾಜರ ಪೂರ್ವಿ
ಕರ ಸ್ವಗ್ರಾಮ ವಾಗಿತ್ತು.

          ಜೋತಿರ್‍ಲಿಂಗ ನಂತರ ಪಕ್ಕದಲ್ಲೆ ಇದ್ದ  ಎಲ್ಲೋರ ಗುಹಾಂತರ ದೇವಾಲಯವನ್ನು ನೋಡಲು
ಹೊದೆವು.  3 ಕಿ.ಮಿ. ದೂರ ಅಷ್ಟೆ.  ಈ ದೇವಾಲಯವು, ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ, ಕಲ್ಲಿನ ಬೆಟ್ಟದಲ್ಲಿ
ಜನ ಸಂದಣಿಯಿಂದ ದೂರವಾಗಿ ಇದೆ.  ಅಲ್ಲಿಯ ಗುಹೆಗಳಲ್ಲಿ, ಗಣಪತಿ, ಹಿಂದೂ ದೇವತೆಗಳು, ರಾಮೇಶ್ವರ,
ಕೈಲಾಸನಾಥನಂತ ದೊಡ್ಡ ಲಿಂಗ, ಬೃಹತ್ ಏಕಶೀಲಾ ಕಂಭಗಳು, ಮಹಿಷಾಸುರ ಮರ್ದಿನಿ, ಜೈನ ತೀರ್ಥಂಕರರು,
ಶಿಲಾ ಬಾಲಿಕೆಯರು, ಶಿವಗಣಗಳು, ಶಿವ ಪಾರ್ವತಿ ಕಲ್ಯಾಣ, ಹತ್ತು ತಲೆಯ ರಾವಣ ಕೈಲಾಸ ಪರ್ವತವನ್ನು ಎತ್ತು
ತ್ತಿರುವುದು, ಶಿವನು ಹೆಬ್ಬೆಟ್ಟಿನಿಂದ ಮೆಟ್ಟಿದ್ದು, ಗೀತೋಪದೇಶ, ಇನ್ನು ಅನೇಕ ಅನೇಕ ಕಲ್ಲಿನ ಕೆತ್ತನೆಗಳು,
ಇತರೆ ಕಲಾತ್ಮಕ ಚಿತ್ರಗಳು ಇದ್ದವು.  ಅನೆಯ ವಿಗ್ರಹ ಒಂದು ಚೆನ್ನಾಗಿದೆ. ಇನ್ನೊಂದು ಮುರಿದಿದೆ.  ಕೆಲವಂತು
ಹಾಳುಮಾಡಿದ್ದಾರೆ.  ಗುಹೆ ಮೂರು ಅಂತಸ್ಸು ಇದೆ.

          ಅಲ್ಲಿಂದ ಔರಂಗಜೇಬ್ ಕಟ್ಟಿಸಿದ "ಮಿನಿ ತಾಜ್ ಮಹಲ್", ಅಗ್ರಾದ ರಿಪ್ಲಿಕಾ "ಬೀಬಿ-ಕಾ-ಮಗ್
ಬರ" ಅಂತ ಹೆಸರು ನೋಡಿಕೊಂಡು, ಟೂರಿಸ್ಟ್ ಹೊಮ್‍ಗೆ ಬಂದ್ವಿ.  ತಂದೆಯ ಪೈಪೋಟಿಗೆ ಕಟ್ಟಿಸಿದ್ದು.

          8-3-2013. 22ನೇ ದಿನ. ಔರಂಗಾಬಾದ್ ಟೂರಿಸ್ಟ್ ಹೊಮ್ ಬಿಟ್ಟು, ಪರ್ಲಿ (ಪರ್ ಲಿ),
ಗೆ ನಮ್ಮ ಪ್ರಯಾಣ.  ಬೆಳಿಗ್ಗೆ 6 ಗಂಟೆಗೆ ಹೊರೆಟು, ದಾರಿಯಲ್ಲಿ ತಿಂಡಿ ತಿಂದು, 12.30ಕ್ಕೆ ತಲುಪಿದೆವು.  ಇದು
ನಮ್ಮ 8 ನೇ ಜ್ಯೋರ್ತಿಲಿಂಗ.  ಕಲ್ಲಿನ ಬೆಟ್ಟದ ಮೇಲೆ ದೇವಸ್ಥಾನವಿದೆ. ಶಿವರಾತ್ರೆಯ ಮುಂಚೆ ನಡೆವ ಶಿವ ನವ
ರಾತ್ರೆಯಾದ್ದರಿಂದ ಜನಸಂದಣಿ ಬಹಳ ಇತ್ತು.  ವ್ಯೆವಸ್ಥೆ ಚೆನ್ನಾಗಿ ಇತ್ತು.  ಮೆಟ್ಟಲು ಕಾದ ತೆವವಾಗಿತ್ತು.  ದೇವ
ಸ್ಥಾನದ ಒಳಗಡೆ ಕರಿ ಮರದ ಕೆತ್ತನೆ ಸೊಗಸಾಗಿದೆ.  ಇಲ್ಲಿ ಎಲ್ಲಾ ಜ್ಯೋತಿರ್‍ಲಿಂಗ ದೇವಸ್ಥಾನವಿದೆ. ಲಿಂಗವನ್ನು
ಸ್ವರ್ಷಿಸಿ ನಮಸ್ಥರಿಸಿದೆವು.  ದೊಡ್ಡ ಲಿಂಗ ಎರಡು ಅಡಿ ಉದ್ದ 2 ಅಡಿ ಅಗಲ.  ಬೆಳ್ಳಿಯ ಕವಚವಿತ್ತು. ಗಣೇಷ
ದರ್ಶನವೂ ಅಯಿತು.  ದರ್ಶನದ ನಂತರ ಮಟ ಮಟ ಮದ್ಯಾನ ಕೆಂಡದಂತೆ ಕಾದ ಕಾವಲಿಯಂತೆ ಇದ್ದ ಕಲ್ಲಿನ
ಇಳಿಜಾರ ಮೆಟ್ಟಿಲ್ಲನ್ನು, ಬರಿಯ ಕಾಲಿನಿಂದ ಇಳಿದು, ಶಿವನಾಮ ಉಚ್ಛಾರಣೆಯಿಂದ ಸಹಿಸಿಕೊಂಡೆವು.  ವೈದ್ಯನಾಥ
ನಲ್ಲವೇ? ಸ್ವಲ್ಪ ಸಮಯ ಸುಧಾರಿಸಿಕೊಂಡು ಊಟ ಮಾಡಿದೆವು.  ಇಲ್ಲಿ ಕನ್ನಡದವರ ಹಲವಾರು ಛತ್ರ ಇದೆ.
ಅಶ್ಛರ್ಯವೆಂದರೆ ಕಾದ ಮೆಟ್ಟಲು ತುಳಿದು ಬಂದ ನಮಗೆ ಕೀಲುನೋವು, ಸೊಂಟನೋವು, ಎಲ್ಲಾ ನೋವು
ಮಾಯವಾಯಿತು.  ಒಂದು ತರಹ ಹಾಟ್ ಪೆಡಿಕ್ಯೂರ್.

          ಪುರಾಣ ಕಥೆ:- ಉತ್ತರ ಭಾರತದವರು ಬಿಹಾರ ರಾಜ್ಯದ ಚಿತಾ ಭೂಮಿಯಲ್ಲಿ ಈ ಜ್ಯೋತಿರ್‍ಲಿಂಗ
ಇದೆ ಎಂದು ಭಾವಿಸುತ್ತಾರೆ.  ಅವರ ಪ್ರಕಾರ ಪರ್ಲಿ ಜ್ಯೋತಿರ್‍ಲಿಂಗ ಅಲ್ಲ.  ಅದರೆ ದಕ್ಷಿಣಾದಿಯವರು, ಇದೇ
ಪರ್ಲಿ ವೈದ್ಯನಾಥಲಿಂಗ ಜ್ಯೋತಿರ್‍ಲಿಂಗ ಕ್ಷೇತ್ರ ಅಂತ ಹೇಳುತ್ತಾರೆ.  ಜ್ಯೋತಿರ್‍ಲಿಂಗ ಯಾವುದು ಎಲ್ಲಿದೆ ಅಂತ
ಹೇಳಲಾದರು ಪುರಾಣ ಕಥೆ ಒಂದೆ.

          ಶಿವಭಕ್ತನಾದ ರಾವಣನು ಶಿವನ ಪ್ರೀತಿ ಸಲುವಾಗಿ, ತನ್ನ 9 ತಲೆಯನ್ನು ಕತ್ತರಿಸಿ ಹೋಮಕ್ಕೆ ಹಾಕಿ
10ನೇ ತಲೆಯನ್ನು ಕಡಿಯಲು ಹೋದಾಗ, ಶಿವ ಪ್ರತ್ಯಕ್ಷನಾಗುತ್ತಾನೆ.  ಶಿವನಿಂದ, ಕತ್ತರಿಸಿ ತಲೆಗಳು ಮತ್ತೆ ಮತ್ತೆ
ಬರುವ ಹಾಗೆ ವರ ಕೇಳಿ. ರಾವಣ ಶಿವನು ತನ್ನ ಲಂಕಾ ಕ್ಷೇತ್ರದಲ್ಲಿ ನೆಲೆಸಲು ಕೊರುತ್ತಾನೆ.  ಶಿವನು ಅವನ
ಬದಲು ಆತ್ಮಲಿಂಗವನ್ನು ಕೊಟ್ಟು, ಅದು ಇರುವಷ್ಟು ದಿನ , ರಾವಣನಿಗೆ ಅಪಜಯವಿಲ್ಲವೆಂದು ಹೇಳುತ್ತಾನೆ.
ಅದರೆ ಲಂಕೆಗೆ ಹೋಗುವ ತನಕ ನೆಲದಲ್ಲಿ ಇಡಬಾರದೆಂದು ಹೇಳುತ್ತಾನೆ.  ಸಂಧ್ಯಾವಂದನೆಯ ಸಮಯ ಬಂದಾಗ, ರಾವಣನು ಬಾಲಕ ರೂಪದಲ್ಲಿ ಬಂದ ಗಣಪತಿಗೆ ಆತ್ಮಲಿಂಗ ಒಪ್ಪಿಸಿ ಕೆಳಗಡೆ ಇಡದಿರಲು ಹೇಳುತ್ತಾನೆ.
ನಾರದನ ಸಲಹೆಯಂತೆ ಸ್ವಲ್ಪ ಸಮಯದಲ್ಲಿ ಹೊರಲಾರೆಯೆಂದು ನೆಲದಲ್ಲಿ ಇಡುತ್ತಾನೆ.  ತನ್ನ ಬಲವನೆಲ್ಲಾ
ಉಪಯೋಗಿಸಿ, ರಾವಣ ಪ್ರಯತ್ನ ಪಟ್ಟರು, ಫಲಿಸಲಿಲ್ಲ.  ಆಗ  ಶಿವನು ಪ್ರತ್ಯಕ್ಷನಾಗಿ, ರಾವಣನ ಶರೀರಕ್ಕೆ ಆದ
ಗಾಯಗಳನ್ನು ಗುಣಪಡಿಸಿ, ಲಿಂಗವಿದ್ದಲ್ಲಿಗೆ ರಾವಣ ಬಂದು ಪೂಜಿಸಲು ಹೇಳುತ್ತಾನೆ.  (ಕನಾರ್ಟಕದ ಗೋಕರ್ಣ
ದಲ್ಲೂ ಇಂತದೊಂದು ಪುರಾಣ ಕಥೆಯನ್ನು ಹೇಳುವರು - ತಾಯಿಗೊಸ್ಕರ ಅತ್ಮಲಿಂಗ ತರಲು). ಗಾಯವನ್ನು
ಗುಣಪಡಿಸಿದಕ್ಕೆ ವೈದ್ಯನಾಥ ಎಂಬ ಹೆಸರು.  ಈ ಸಂದರ್ಭದಲ್ಲಿ ರಾವಣ ಶಿವ ತಾಂಡವ ಸ್ತೋತ್ರ ರಚಿಸಿ,ಸ್ತುತಿಸಿ
ದನು ಎಂದು ಪ್ರತೀತಿ.  ಇಲ್ಲಿ  ಇತಿಹಾಸಕ್ಕೆ ಸಂಬಂದಪಟ್ಟ ಯಾವ ಅಧಾರವಿಲ್ಲ.

          ಅಲ್ಲಿಂದ ಪ್ರಯಾಣ ಬೆಳಸಿ, ನಾಂದೇಡ್‍ಗೆ ಸಂಜೆ 6 ಗಂಟೆಗೆ ತಲುಪಿದೆವು.  ಅಲ್ಲಿ ಹೋಟೆಲ್
ನಾಗಾರ್ಜುನ ಹಾಗು ಜಿ.ಏನ್.ಎನ್‍ಕ್ಲೇವ್ ನಲ್ಲಿ ತಂಗುದಾಣ.  ಸಂಜೆ ನಾಂಧೇಡ್‍ನಲ್ಲಿ ಇದ್ದ ಪ್ರಸಿದ್ಧ 5 ರಲ್ಲಿ
ಒಂದಾದ ಗುರುದ್ವಾರ ನೋಡಿದೆವು.  ಬಹಳ ಚೆನ್ನಾಗಿದೆ.  ಅಮೃತಸರದ ಗುರುದ್ವಾರ ತರಹ ಇತ್ತು.  ಬಂಗಾರದ
ಲೇಪನದಿಂದ ವೈಭವವಾಗಿ ಇದೆ.  ನೋಡಿಕೊಂಡು ಬಂದೆವು.

          ರಾತ್ರೆ ಕೊನೆಯ ಊಟ.  ಸಣ್ಣ ಫಂಕ್ಷನ್ ಅಯಿತು.  ಎಲ್ಲರು ಒಬ್ಬರನೊಬ್ಬರು ಅಭಿನಂದಿಸಿ
ತೆರಳುವ ಸಮಯ.  ಇಷ್ಟು ದಿನ ಒಂದು ಕುಟುಂಬತರ ಇದ್ವಿ.  ದಿನಗಳು ಓಡಿ ಹೋಗುತ್ತಿದ್ದವು.  ಇಷ್ಟುದಿನ
ಮರೆತ ಮನೆಯ ನೆನಪು ಬರ ತೋಡಗಿತು.  ಪರ್ಲಿ ಹತ್ತರ ಇರುವ ಔಡ ನಾಗನಾಥನು ಒಂದು ಜ್ಯೋತಿರ್‍ಲಿಂಗ
ವೆಂದು ಮಹಾರಾಷ್ರ ಜನ ನಂಬಿರುತ್ತಾರೆ.  ಪರ್ಲಿಯಲ್ಲಿ ರೈಲ್‍ವೇ ಸ್ಟೇಷನ್ ಇದೆ.  ರೈಲ್ ನಿಲ್ಲುವುದು 5 ನಿಮಿಷ
ಮಾತ್ರ.  ಯಾತ್ರಿಕರಿಗೆ ಅನುಕೂಲವಾಗಲು ನಂದ್ಯಾಡ್‍ನಲ್ಲಿ ರೈಲು ಹತ್ತಿದ್ದು. ಅದು ಸ್ಟರ್ಟೀಂಗ್ ಪಾಯಿಂಟ್. ಬೆಳಿಗ್ಗೆ
3 ವರೆಗೆ ಎದ್ದು. 4 ಗಂಟೆಗೆ ಕಾಫಿ ಕುಡಿದು, 5 ಕ್ಕೆ ಬಸ್ಸಿನಲ್ಲಿ ಇದ್ದು 6ಕ್ಕೆ ಹೊರಡುವ ರೈಲಿಗೊಸ್ಕರ ಸ್ಟೇಶನ್‍ಗೆ
ಬಂದೆವು.  ಬೆಳಿಗ್ಗೆ ನಮ್ಮ ನಮ್ಮ ಸೀಟಿನಲ್ಲಿ ಉಪ್ಪಿಟ್ಟು, ಚಿತ್ರನ್ನ, ಮೊಸರನ್ನದ ಪ್ಯಾಕೇಟ್ ಇತ್ತು.  ಹಿಂದಿನ ದಿನ
3 ಜನ ಅಡಿಗೆಯವರು (ಬೀಗರಿಗೆ ಉಪಚಾರ ಮಾಡುವ ಹಾಗೆ ಪ್ರೀತಿಯಿಂದ ಊಟ ಹಾಕಿದವರು, ನಮ್ಮನ್ನು
ಸುರಕ್ಷಿತವಾಗಿ, ಸ್ಥಳದಿಂದ ಸ್ಥಳಕ್ಕೆ ಕರೆದು ಕೊಂಡು ಹೋದ ಸಾರಥಿ,ಡೈವರ್ ವಿಜಯ, ಅವರ ಸಹಾಯಕ ರವಿ,
ನಗು ನಗುತಾ ಸಹನೆಯಂದ ಕಾದು ಎಲ್ಲರನ್ನು ಒಟ್ಟಯಗೂಡಿಸಿ, ಕರೆದು ಕೊಂಡು ಹೊಗುತ್ತಿದ್ದ "ಗುರು", ಸಣ್ಣ
ವರಾದರು, ನಮಗೆ ಗುರು, ಜೊತೆಗೆ 72 ವರ್ಷದ ಟೀಮ್ ಮ್ಯಾನೇಜರ್ ರಂಗನಾಥ ಅಜ್ಜಂಪುರ 27ರ ಯುವಕನ
ಚುರುಕು, ನಮ್ಮನ್ನಯ ಹುರಿದುಂಬಿಸಿ  ಕಳಿಸುತ್ತಿದ್ದರು.  ಅವರು ಮೊದಲ ಕೈಲಾಸ ಪರ್ವತ ಯಾತ್ರೆಯಲ್ಲಿ
ಹೊದವರು, 1983 ಯಲ್ಲಿ, ಮತ್ತೆ ಮತ್ತೆ ಅನೇಕ ಸಾರಿ ಹೋಗಿ ಬಂದು ಎಲ್ಲರನ್ನು ಹೋಗಲು ಹುರಿದುಂಬಿಸು
ತ್ತಿದ್ದರು.  ಯಲಹಂಕದಲ್ಲಿ ಇಳಿಯುವಾಗಲು ಮತ್ತೆ ಯಾತ್ರೆಗೆ ಬರಲು ಅಹ್ವಾನಿಸಿದವರೆಲ್ಲರನ್ನು ಮರೆಯಲು ಸಾದ್ಯವಿಲ್ಲ.

          ಈ ಹಿಂದೆ ನಾವು ಶ್ರೀ ಕಾಶಿವಿಶ್ವನಾಥ, ಶ್ರೀ ರಾಮೇಶ್ವರ, ಶ್ರೀ ಶೈಲಾ, ಹಾಗು ಶ್ರೀ ಕೇದಾರ
ನಾಥ ನೋಡಿದ್ದರಿಂದ ನಮ್ಮ 12 ಜೋತಿರ್‍ಲಿಂಗ ದರ್ಶನ ಮುಗಿದು, ಶಿವರಾತ್ರೆಯ ಬೆಳಿಗ್ಗೆ ಸುಖವಾಗಿ ಬಂದು
ತಲುಪಿದೆವು.  ಪ್ರಯಾಣ ಪ್ರಯಾಸ ವಾಗಲಿಲ್ಲ.  ಭಗನಂತ ಎಷ್ಟು ಶಕ್ತಿ ಕೊಟ್ಟಿದ್ದ! ಬೆಟ್ಟ ಹತ್ತಿ ಇಳಿದು,
ಅಂಬೆಕಾಲಿಟ್ಟು, ನೂರಾರು ಕಿ.ಮಿ. ಪ್ರತಿ ದಿನ ಪ್ರಯಾಣ, ನಡುಗೆ ನಮಗೆ ಅಶ್ಛರ್ಯವಾಯಿತು.  ಗುಂಪಿನಲ್ಲಿ
ಇದ್ದರೆ ಗೊತ್ತೆ ಅಗೊಲ್ಲ.

         ಯಾತ್ರೆಯ ಕಥೆಯ ಅಧಾರ:- ಸೊಗಸಾಗಿ ವರ್ಣಿಸುತ್ತಿದ್ದ ರಿಜಿಸ್ಟರ್ಡ್ ಗೈಡ್‍ಗಳು, ಟೂರ್ ಸಿಬ್ಬಂದಿ,
ಅಯಾಯಾ ದೇವಸ್ಥಾನದ ಅರ್ಚಕರು, ಎಲ್ಲಕ್ಕಿಂತ ಹೆಚ್ಚಾಗಿ, ಸ್ಥಳದಲ್ಲೆ ಇಟ್ಟ ಬರೆದ ಅರ್ಕೇಲಾಜಿಕಲ್ ಢಿಪಾರ್ಟ್
ಮೆಂಟ್ ರವರ ವಿವರ, ಇಷ್ಟು ಅಧಾರ. ಕಲ್ಪನೆಯಿಂದ ಬರೆದ್ದದು ಅಲ್ಲ. ಕೇಳಿದ್ದು, ಓದಿದ್ದು.

                       -: ಓಮ ನಮ ಶಿವಾಯ:-
              ಜಯಲಕ್ಷ್ಮಿ ಫ್ರಭಾಕರನ್. ದಿನಾಂಕ 13-12-2013.

1 comment: