ಡಿಸೆಂಬರ್ 6ನೆ ತಾರೀಖು ಭಾನುವಾರ 2015, ನಾನು ಮತ್ತು ನಮ್ಮ ಯಜಮಾನರು, ಪ್ರವಾಸಕ್ಕೆ
ಹೊರಡಲು ತಯಾರಾಗಿ, ವಿಮಾನ ನಿಲ್ದಾಣಕ್ಕೆ ಸಂಜೆ 5 ಗಂಟೆಗೆ ಮನೆ ಬಿಟ್ಟೆವು. ಅಲ್ಲಿಯೇ ನಮ್ಮ ಸ್ನೇಹಿತರಾದ
ಮೀರ ಹಾಗು ಗಂಗಾಧರಯ್ಯ, ನಾಗರತ್ನ ಹಾಗು ವನಪ್ಪ ಹಾಗು ಇತರೆ ಸಹ ಪ್ರಯಾಣಿಕರನ್ನು ಭೇಟಿ ಆದೇವು.
ವಿಮಾನ ಒಂದೂವರೇ ಗಂಟೆ ತಡವಾಯಿತು. ಶ್ರಿಲಂಕನ್ ಏರ್‍ಲೈನ್ ಪ್ರಯಾಣವು ರಾತ್ರೆ 10.55ಕ್ಕೆ ಪ್ರಾರಂಭನಾಗಿ
ಕೊಲೊಂಬೊದ ಭಂಡರಾನಾಯಕೆ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 12.10 ಕ್ಕೆ ತಲುಪಿತ್ತು. ವಿಮಾನ
ದಲ್ಲೆ ರಾತ್ರೆಯ ಭೋಜನವಾದ್ದರಿಂದ, ನಿಲ್ದಾಣದಿಂದ ಸೀದಾ ಮಲೇಷಿಯಾಕ್ಕೆ ಹೊಗುವ ಶ್ರಿಲಂಕಾನ್ ಏರ್ ಲೈನ್
ವಿಮಾನದ ಕಡೆಗೆ ಹೊದೆವು. ನಮ್ಮ ಸಾಮನು ಸರಾಂಜಮುಗಳು ಬೆಂಗಳೂರಿನಿಂದ ಹೊರಟ ವಿಮಾನದಿಂದ
ಕೌಲಾಲಂಪುರದ ಕಡೆಗೆ ಹೊಗುವ ವಿಮಾನಕ್ಕೆ ವರ್ಗಾವಣೆಯಾಯಿತು.
ಕೌಲಾಲಂಪರದ ಹೊರಟ ವಿಮಾನದಲ್ಲೂ ಭೋಜನ ವ್ಯೆವಸ್ಥೆ ಅಗಿತ್ತು. ಹೀಗಾಗಿ ಯಾರಿಗೂ
ಅಹಾರದ ಕೊರತೆ ಅಗಲಿಲ್ಲ. ಕೊಲೊಂಬೊದಿಂದ ಕೌಲಾಲಂಪುರಕ್ಕೆ 2 ಗಂಟೆ 10 ನಿಮಿಷ ಪ್ರಯಾಣವಾದರೂ,
ನಾವುಗಳು ಪೂರ್ವದಿಕ್ಕಿಗೆ ಪ್ರಯಾಣಿಸುತ್ತಿದ್ದರಿಂದ 2ವರೆ ಗಂಟೆ ಲಾಭವಾಯಿತು. ನಾವು ಕೌಲಾಲಂಪುರದ
ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಳಿಗ್ಗೆ 7 ಗಂಟೆ 10 ನಿಮಿಷಕ್ಕೆ ತಲುಪಿದೆವು. ನಿಲ್ದಾಣದನಮ್ಮ
ಬೇರೆಲ್ಲಾ ಪ್ರಯಾಣದ ಔಪಚಾರಿಕತೆಯನ್ನು ಮುಗಿಸಿಕೊಂಡು, ನಿಲ್ದಾಣದ ಫೆಸಿಲಿಟಿಯಲ್ಲಿ ಫ್ರೆಶ್ ಅಪ್ ಅದೆವು.
ಅಲ್ಲಿಗಾಗಲೆ ಮಲೇಶಿಯಾದ ಟೂರ್ ಗೈಡ್ "ರಾಜನ್" ತಯಾರಾಗಿ ಬಂದ್ದಿದ್ದರು. ನಮಗಾಗಿ ಏಸಿ ಬಸ್ಸು ಕಾದಿತ್ತು.
ಎಲ್ಲಾರು ಬಸ್ಸಿಗೆ ಏರಿ ಸುಖಾಸಿನರಾದೆವು. ಕೌಲಾಲಂಪುರದ ಕಡೆಗೆ ಪ್ರಯಾಣ ಬೆಳೆಸಿದೆವು. ದಾರಿಯಲ್ಲಿ
ಮಲೇಷಿಯಾದ ಅಡಳಿತ ನಗರವಾದ "ಪುತ್ರಜ"ಗೆ ಹೊದೆವು. ಅದೊಂದು ಬಹು ಸುಂದರವಾದ, ಅಚ್ಚುಕಟ್ಟಾದ
ಯೋಜನಬದ್ದ ನಗರ. ಅನೇಕ ಅನೇಕ ಪಾರ್ಕ ಗಳು, ಕಾರಂಗಿಗಳು, ಬಹು ವಿನ್ಯಾಸದ ಸರ್ಕಾರಿ ಕಟ್ಟಡಗಳು,
ಎಲ್ಲಾವು ಇದೆ. ಇಲ್ಲಿನ "ಪುತ್ರಜ ಪ್ಯಾಲೆಸ್"ಹೋಟೆಲ್ನಲ್ಲಿ ರುಚಿಕರವಾದ ದಕ್ಷಿಣ ಭಾರತದ ಉಪಹಾರ ಸೇವಿಸಿದೆವು. ಇಡ್ಲಿ,ದೊಸೆ, ಚಟ್ನಿ, ಸಾಂಬರ್, ವಡ, ನ್ಯೊಡಲ್, ಉಪ್ಪಿಟ್ಟು, ಹಣ್ಣುಗಳು, ಕಾಫಿ ಹಾಗು ಟೀ ಇದ್ದವು.
ಗಡ್ಡಾದ್ದಾಗಿ ತಿಂಡಿ ತಿಂದು ಸುತ್ತಾಲ ನೋಟ ನೊಡುತ್ತಾ, ಪುತ್ರಜ ದಲ್ಲಿನ "ಗ್ರೇಟ್ ಮಾಸ್ಕ", ಪ್ರಧಾನ ಮಂತ್ರಿಯ
ಕಾರ್ಯಲಯ, ಸಸ್ ಪೆನ್ನಷನ್ ಬ್ರಿಜ್, ಮ್ಯಾನ್ ಮೇಡ್ ಲೇಕ್, ಏಲ್ಲಾವನ್ನು ವೀಕ್ಷಿಸಿ, ದಾರಿಯಲ್ಲಿ ಜೈನ್ ಭವನ್" ನಲ್ಲಿ ಇಂಡಿಯನ್ ಲಂಚ್, ಒಳ್ಳೆ ಸಸ್ಯಹಾರಿ ಭೋಜನ ಮುಗಿಸಿಕೊಂಡು,"ಜೆನಟಿಂಗ್ ಹೈಲಾಂಡ್' ಕಡೆಗೆ
ಪ್ರಯಾಣ ಬೆಳೆಸಿದೆವು.
ಕೌಲಾಲಂಪುರ ಒಂದು ಉತ್ತಮ ನಗರ. ಬಹು ದೊಡ್ಡದ್ದಾಗಿದೆ. ಅಲ್ಲಲ್ಲಿ ಬೆಟ್ಟಗುಡ್ಡಗಳು ಇವೆ.
ವೃಕ್ಷ ಸಂಪತ್ತು ಹೇರಳಾವಾಗಿದೆ. ಅಲ್ಲಿ ವಿವಿಧ ನಮೂನೆ ಕಟ್ಟಡಗಳು, ಪಾರ್ಕಗಳನ್ನು ನೊಡುತ್ತಾ," ಇಂಟರ್
ನ್ಯಾಶನಲ್ ಕಾನ್ಫರೆಸ್ ಸೆಂಟರ್" ನಿಂದ ಕೌಲಾಲಂಪುರದ ವಿಹಂಗಮ ದೃಶ್ಯ ನೋಡಿಕೊಂಡು ಜೆನ್ ಟಿಂಗ್
ಹೈಲ್ಯಾಂಡ್ ಕಡೆಗೆ ಪ್ರಯಾಣ ಮುಂದುವರೆಸಿದೆವು.
ಜೆನ್ ಟಿಂಗ್ ಹೈಲ್ಯಾಂಡ್ ಎಂಬುದು ಒಂದು ಗಿರಿಧಾಮ. ಊಟಿ, ಸಿಮ್ಲಾ,ತರ. ಸುತ್ತು
ಬಳೆಸುವ ಉತ್ತಮ ರಸ್ತೆಂiÀiನ್ನು ದಾಟುತ್ತಾ, ಏರುತ್ತಾ, ಅತಿ ಎತ್ತರಕ್ಕೆ ತಲುಪಿದೆವು. ಅದು 25 ಅಂತಸ್ತಿನ
ಗಿರಿ ಶಿಖರ ದಲ್ಲಿನ 5 ಸ್ಟಾರ್ ಹೊಟೆಲ್. ನಾವು ಇದ್ದದು 11ನೇ ಅಂತಸ್ತು. ನಮ್ಮ ರೊಮ್ ನಂಬರ್ 822.
ಅಲ್ಲಿಗೆ ತಲುಪಿದಾಗ ಸುಮಾರು ಸಂಜೆ 6 ಗಂಟೆ. ನಮ್ಮ ನಮ್ಮ ರೊಮ್ ಗಳಗೆ ಹೊಗಿ, ಸ್ನಾನ ಮಾಡಿ,
ಕಾಫಿ ಮಾಡಿಕೊಂಡು ಕುಡಿದು,ಸ್ಯಾಕ್ಸ್ ತಿಂದು, ಹೊಟೆಲ್ ನಲ್ಲೆ ಇರುವ "ಇಂಡೋರ್ ಥೀಮ್ ಪಾಕ್"ಗೆ
ಹೊದೆವು. ಅದೊಂದೊ ವಿಚಿತ್ರ ಪ್ರಪಂಚ. ಮಾಲುಗಳು,ಮ್ಯೂಸಿಯಂ,ಗೇಂಮ್ಸಗಳು, ಅರ್ಕೆಸ್ಟ್ರಾ, ಎನೆಲ್ಲಾ ಇವೆ.
ನಾವು ಎಲ್ಲಾವನ್ನು ನೋಡಿ ಕೊಂಡು ಒಳಗಡೆ ಇರುವ ಮನೋ ಟ್ರೆನ್ನಲ್ಲಿ, 6 ಜನ ಕುಳಿತುಕೊಂಡು, ಕೆಳಗಡೆ
ದೀಪಾಲಾಂಕರದಿಂದ ಮಿಂಚುತ್ತಿದ್ದ,ಕಿನ್ನರ ಲೋಕವನ್ನು ನೋಡಿಕೊಂಡು,ಜನ ನಿಬಿಡನಾದ "ಕ್ಯಾಸಿನೋ"ದಲ್ಲಿ
ಇಣಕಿ ನೋಡಿದೆವು. ಇಲ್ಲಿ ಪ್ರಪಂಚ ದಿಂದ, ಹೆಚ್ಚಾಗಿ ಚೀನಿಯರು ಜೂಜಿಗಾಗಿ ಬರುತ್ತಾರೆ. ಜೂಜಿನ
ಹುಚ್ಚಿನವರು ಬಹಳ ಜನರು ಬಂದು,ಹಣಗಳಿಸಿಯೊ, ಕಳೆದುಕೊಂಡು ಹೊಗುತ್ತಾರೆ, ಅಲ್ಲಿಯೆ ಇದ್ದ ರೆಟ್ಟೊರೆಂಟ್
ನಲ್ಲಿ, ಪ್ರತ್ಯೇಕವಾಗಿ ಇದ್ದ ಭಾರತೀಯ ಖಾದ್ಯಗಳು ಇದ್ದವು. ಶುಚಿಯಾಗಿಯೂ ಇದ್ದವು. ಊಟ ಮಾಡಿಕೊಂಡು
ರೂಮಿಗೆ ಬಂದೆವು. ಇಲ್ಲಿ 7000 ರೂಮು ಗಳು ಇವೆ, 24 ಗಂಟೆಯು ತೆರೆದಿರುತ್ತೆ. ರಸ್ತೆಯ 2 ಮಗ್ಗಲ್ಲಲ್ಲೂ
ಕ್ರಿಸ್ ಮಸ್ ಪ್ರಯುಕ್ತ ದೀಪಾಲಾಂಕರದಿಂದ ಶೋಭಿಸುತ್ತಿದ್ದವು. ದೀಪಾಲಂಕರ ಕಣ್ಣಿಗೆ ಕೊರೈಸುತ್ತಿತ್ತು. ಅಂದು
ರಾತ್ರಿ ಅಲ್ಲೆ ತಂಗಿದೆವು.
ಈ ದಿನ 8ನೆ ಡಿಸೆಂಬರ್, ಬೆಳಿಗ್ಗೆ 6ಕ್ಕೆ ಎದ್ದು ಕಾಫಿ ಮಾಡಿಕೊಂಡು ಕುಡಿದು,ಸ್ನಾನ್ನಾದಿಗಳನ್ನು,
ಮುಗಿಸಿ, ಲಗೇಜ್ ಪ್ಯಾಕಿಂಗ್ ಮಾಡಿ,ಜೆಟ್ಟಿಂಗ್ ಫಸ್ಟ್ ಕೆಫೆನಲ್ಲಿ ಬೆಳಿಗ್ಗೆ 7 ಕ್ಕೆ ಕಾನ್ಟಿನೆಂಟಲ್ ಬೆಕ್ರ್ ಫಾಸ್ಟ್
ಮುಗಿಸಿಕೊಂಡು ತಯಾರದೆವು. ಉಪಹಾರದಲ್ಲಿ ಉಪ್ಪಿಟ್ಟು,ವಡೆ, ಪುಳಿಒಗ್ಗರೆ, ನ್ಯೂಡಲ್, ಹಣ್ಣುಗಳು,ಜ್ಯೂಸ್,
ಕಾಫಿ, ಟೀ ಗಳು ಇತ್ತು. ಉಪಹಾರದ ನಂತರ ಜೆನ್‍ಟಿಂಗ್ ಹೈಲ್ಯಾಂಡ್ ನಿಂದ ಕೇಬಲ್ ಕಾರ್ ಮೂಲಕ,
ಮಲೇಶೀಯದ ದಟ್ಟವಾದ ಕಾಡುಗಳ ಮೇಲೆ 4 ಕಿ.ಮೀ.ಪ್ರಯಾಣ ನಡೆಸಿದೆವು. ಈ ಕೇಬಲ್ ಕಾರ್ ಪ್ರಯಾಣವು
ಅತ್ಯಂತ ರೂಮಾಂಚಕವೂ, ಹರ್ಷದಾಯಕವೂ,ಅಹ್ಲಾದಕರವೂ, ನಯನ ಮನೋಹರವೂ ಅಗಿತ್ತು. ಕೇಬಲ್
ಕಾರ್ ಅಲ್ಲಲ್ಲಿ ನಿಧಾನವಾಗಿ ಚಲಿಸುತ್ತಾ, ಕೆಲವೂಮ್ಮೆ ನಿಲ್ಲುತ್ತಾ, ಆ ಕಾಡುಗಳ ದೃಶ್ಯವನ್ನು ಕಣ್ಣು ತುಂಬಿಕೊಳ್ಳಲು
ಸಹಯಾಕವಾಗಿತ್ತು. ಇಲ್ಲಿ ನಿತ್ಯಹರಿದ್ರ್ವಣಗಳ ಕಾಡುಗಳು, ಬೆಟ್ಟಗಳು, ಕಣಿವೆಗಳು, ಮಲೆನಾಡಿನ ಹಾಗು
ಹಿಮಾಲಯದ ನೆನಪನ್ನು ತರಿಸುತ್ತಿದ್ದವು. ಕೇಬಲ್ ಕಾರ್ ಪ್ರಯಾಣ ಮುಗಿದ ಮೇಲೆ ನಮಗಾಗಿ ಕಾಯುತ್ತಿದ್ದ
ಏಸಿ ಬಸ್ಸ್ ಮೂಲಕ ಮತ್ತೆ ಅಂಕುಡೂಂಕಾದ ರಸ್ತೆಯಲ್ಲಿ ಸುಧೀರ್ಘ ಪ್ರಯಾಣ ಮಾಡುತ್ತಾ, ಕೌಲಾಲಂಪುರದ
ಮೈದಾನ ಪ್ರದೇಶಕ್ಕೆ ಪ್ರವೇಶಿಸಿದೆವು. ಮೈದಾನ ಪ್ರವೇಶಿಸುತ್ತಿದ್ದಂತೆ ಸುಣ್ಣದ ಕಲ್ಲಿನ ಮಗ್ಗುಲಲ್ಲೆ ಇರುವ
ಸುಬ್ರಮಣ್ಯ ಕ್ಷೇತ್ರಕ್ಕೆ ತಲುಪಿದೆವು.ಅದೊಂದು ಸುಂದರ ತಾಣ.ಲಷ್ಷಾಂತರ ವರ್ಷಗಳ ಮಳೆ ಮತ್ತು ವಾತಾವರಣ
ದಿಂದಾಗಿ ಸುಣ್ಣದ ಕಲ್ಲಿನ ಪರ್ವತದಲ್ಲಿ,ಸುಣ್ಣದ ಕಲ್ಲಿನ ವಿಚಿತ್ರ ಶಿಲ್ಪಗಳು,ಗುಹೆಗಳು ಎರ್ಪಟ್ಟಿದೆ. ಈ ರೀತಿಯ
ಗುಹೆ ಒಂದರಲ್ಲಿ ಶ್ರೀಸುಬ್ರಮಣ್ಯ ಸ್ವಾಮಿಯ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಗುಹೆಯ ಮೇಲ್ಭಾಗದಲ್ಲಿ
ವಿಸ್ತಾರವಾದ ಕಿಂಡಿ ಇದ್ದು, ಅದರಿಂದ ಬೆಳಕು ಬರುತ್ತದೆ. ಗುಹೆಯ ಅಂತರ್ ಭಾಗದಲ್ಲಿ, ಅಲ್ಲಲ್ಲಿ ನೀರು
ತೋಟ್ಟಿಕ್ಕಿ ಪಸರಿಸುತ್ತಿತ್ತು. ಪರ್ವತದಲ್ಲಿನ ಗುಹೆಯನ್ನು ತಲುಪಲು, ಕೆಳಗಿನಿಂದ ಸುಮಾರು 368 ಕಡಿದಾದ
ಮೆಟ್ಟಿಲುಗಳನ್ನು ಹತ್ತಬೇಕು. ಈ ಮೆಟ್ಟಿಲುಗಳನ್ನು, ವಿಶಾಲವಾಗಿ ಭಕ್ತಾದಿಗಳ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಿ
ದ್ದಾರೆ. ಮೆಟ್ಟಿಲುಗಳನ್ನು ಹತ್ತುವಾಗ ಕೋತಿ ಕಾಟ ಹೆಚ್ಚು. ಭಕ್ತಾದಿಗಳು ಧರಿಸಿರುವ ಟೋಪಿಗಳನ್ನೆ ಹಾರಿಸಿ
ಬಿಡುತ್ತಿದ್ದವು. ಕೈಯಲ್ಲಿ ಏನಾದರು ತಿಂಡಿ ತಿನಿಸು,ಹಣ್ಣು ಹಂಪಲು ಇದ್ದರೆ ಅವೆಲ್ಲವೂ ಕೋತಿ ಪಾಲಾಗುತ್ತಿತ್ತು.
ಮೆಟ್ಟಿಲುಗಳನ್ನು ಹತ್ತುವುದು ತ್ರಾಸ ವೆನಿಸಿದರೂ, ಗುಹೆ ತಲುಪಿದಾಗ ಮತ್ತು ಒಳಗಡೆ ಇರುವ ಸುಬ್ರಮಣ್ಯ
ಸ್ವಾಮಿಯ ದರ್ಶನ ಮಾಡಿದಾಗ ಸಾರ್ಥಕವೆನಿಸುತ್ತಿತ್ತು. ಗುಹೆಯಲ್ಲಿ ಎರಡು ಸುದಂರವಾದ ದೇವಾಲಯಗಳು ಇವೆ. ದರ್ಶನ ಮಾಡಿಕೊಂಡು ಕೆಳಗೆ ಇಳಿದು ಬಂದೆವು. ಕೆಳಗಡೆ ಸುಬ್ರಮಣ್ಯ ಸ್ವಾಮಿಯ ನಿಂತಿರುವ ಬೃಹತ್
ಮೂರ್ತಿಯನ್ನು ನಿರ್ಮಿಸಿದ್ದಾರೆ. ಬಂಗಾರದ ಲೇಪನದ ಈ ಮೂರ್ತಿಯು 146 ಅಡಿ ಇರುವುದು. ಬಹಳ
ಸುಂದರವಾಗಿದೆ. ಭಕ್ತರೆಲ್ಲಾರನ್ನು ಅನುಗ್ರಹಿಸುವಂತಿದೆ. ಇದರ ಪಕ್ಕದಲ್ಲಿ ಸುಮಾರು 5-6 ದೇವಸ್ಥಾನಗಳು
ಬೇರೆ ಬೇರೆಯಾಗಿ ಇದೆ. ಗಣಪತಿ, ದುರ್ಗ, ಶನೈಶ್ವರ, ಶಿವ, ಹನುಮಾನ್ ಇತ್ತು. ಇಲ್ಲಿಯೂ ಸಿಹಿಯಾದ
ಎಳನೀರು ಸಿಗುತ್ತಿತ್ತು. ಇಲ್ಲಿ ಎಳನೀರು ಕೊಚ್ಚುವ ರೀತಿಯೇ ಬೇರೆ. ಇವೆಲ್ಲಾವನ್ನು ಸಂದರ್ಶಿಸಿ, ಸ್ವಲ್ಪ
ವಿಶ್ರಮಿಸಿ ಕೌಲಾಲಂಪುರದ ಕಡೆಗೆ ಹೊರಟೆವು.
ಸಿಟಿಯಲ್ಲಿ "ಜೈಪುರ್ ಮಹಲ್"ನಲ್ಲಿ ಶುದ್ಧ ಸಸ್ಯಹಾರಿ ಭೋಜನ ಮಾಡಿಕೊಂಡು, "ಪುದು ಪ್ಲಾಜಾ" ಸ್ಟಾರ್ ಹೋಟಲ್ಗೆ ಚೆಕ್ ಇನ್ ಅದೆವು. ಆಗ ಸುಮಾರು 4 ಗಂಟೆ. ವಿಶ್ರಾಂತಿ ಪಡೆದು ಸುಮಾರು
6 ಗಂಟೆಗೆ ಚೈನೀಸ್ ಮಂದಿರದ ಕಡೆಗೆ ಹೊದೆವು. ಅದೊಂದು ಬೆಟ್ಟದ ಮೇಲೆ ಇರುವ, ಅತಿ ಸುದಂರವಾಗಿ
ಕೆತ್ತನೆ ಕೆಲಸಗಳಿಂದ ಕೊಡಿದ ಪಗೋಡ ಮಾದರಿಯ, ಮೂರು ಹೆಣ್ನು ದೇವತೆಗಳ ದೇವಸ್ಥಾನ. ದಾರಿಯಲ್ಲಿ
ಮಾರಿಯಮ್ಮನ ದೇವಸ್ಥಾನ ನೋಡಿ, ಈ ದೇವಸ್ಥಾನ ಇರುವ ಬೆಟ್ಟ ತಲುಪಿದೆವು. ದೇವಸ್ಥಾನ ಪ್ರವೇಶಿಸುವುದ
ಕ್ಕಿಂತ ಮುಂಚೆ, ಇಲ್ಲಿ ಇರುವ ಅಮೆಗಳ ಕೊಳವನ್ನು ನೋಡಿದೆವು. ಅಮೆಗಳೆಂದರೆ ಚೀನಿಯರಿಗೆ ಬಹು ಪವಿತ್ರ
ವಾದ ಶುಭ ಸಂಕೇತ. ಭಕ್ತರು ಇಲ್ಲಿ ಅಮೆಗಳನ್ನು ತಂದು ಬಿಡುತ್ತಾರೆ, ಅಲ್ಲಿಯೇ ಒಂದು ಸಣ್ಣ ಜಲಪಾತ
ನಿರ್ಮಿಸಿದ್ದಾರೆ, ಆ ದೇವಸ್ಥಾನ, ಮೂರು ಹೆಣ್ಣು ದೇವತೆಗಳ ಸುಂದರವಾದ ತಾಣ, ಅವರ ನಂಬಿಕೆಯಂತೆ
ಅ ವಿಗ್ರಹಗಳು ಸಂಪತ್ತು, ವಿದ್ಯೆ, ಮತ್ತು ಕರುಣೆಯ ದೇವತೆಗಳು. ಅಲ್ಲಿ ಹೋದ ಭಕ್ತರು ಅಗರ್ ಭತ್ತಿಯನ್ನು
ಹತ್ತಿಸಿ ಪಾರ್ಥನೆ ಮಾಡುತ್ತಾರೆ, ನಾವು ಸಹ ದೇವಾಲಯದ ಮುಂದೆ ಇಟ್ಟಿದ್ದ ಅಗರ್ ಭತ್ತಿ ಹಾಗು ದೀಪ
ಗಳನ್ನು ಹತ್ತಿಸಿ, ಪ್ರಾರ್ಥಿಸಿದೆವು. ಇನ್ನೊಂದು ವಿಶೇಷವೆಂದರೆ. ದೇವರ ಮುಂದೆ ಕಡ್ಡಿಗಳ ಸಮೂಹವನ್ನು
ಒಂದು ಸಿಲಿಂಡರ್ ಆಕಾರದ ಪಾತ್ರೆಯಲ್ಲಿ ಇಟ್ಟಿರುತ್ತಾರೆ. ಭಕ್ತರು ಎಲ್ಲಾ ಕಡ್ಡಿಯನ್ನು ಒಟ್ಟಿಗೆ ಹಿಡಿದು ಮೇಲಕ್ಕೆ
ಎತ್ತಿ ಕೆಳಗೆ ಬಿಟ್ಟಾಗ, ಯಾವ ಕಡ್ಡಿ ತಸು ಮೇಲೆ ಬರುತ್ತೆಯೋ, ಅದನ್ನು ತೆಗೆದು, ಅದರಲ್ಲಿರುವ ಸಂಖ್ಯೆ
ಓದಿ, ಅ ಸಂಖ್ಯೆಗೆ ತಕ್ಕಂತೆ, ಇಟ್ಟಿರುವ ಭವಿಷ್ಯದ ಚೀಟಿಯನ್ನು ಓದಿ ಕೊಳ್ಳ ಬಹುದು, ಪ್ರಯಾಣಿಕರೆಲ್ಲಾರು
ತಮ್ಮ ತಮ್ಮ ಭವಿಷ್ಯದ ಚೀಟಿಯನ್ನು ಓದಿಕೊಂಡರು. ದೇವಸ್ಥಾನ ಪ್ರದಕ್ಷಿಣೆಹಾಕಿ, ಕೆಳಗಿಳಿದು ರಾಶಿಗಳ ಪಾರ್ಕ
ಕಡೆ ನಡೆದೆವು.
ಈ ಪಾರ್ಕನಲ್ಲಿ ನಮ್ಮಲ್ಲಿ ಮೀಷದಿಂದ ಮಿನಾದವರೆಗೆ ಇರುವ 12 ರಾಶಿಗಳಂತೆ ಬೇರೆ ಬೇರೆ
ಮೃಗಗಳ ಚಿಹ್ನೆಗಳಿವೆ. ಅವರದು 12 ರಾಶಿಗಳಿವೆ. ಅವರ ಹೊಸ ವರ್ಷ ಜನವರಿಯಲ್ಲಿ ಬರುವ ಪೊರ್ಣಿಮೆ
ಯಿಂದ ಆರಂಭವಾಗುತ್ತೆ. ಒಂದೊಂದು ವರ್ಷ ಒಂದೊಂದು ರಾಶಿಯ ಮೃಗಗಳ ವರ್ಷವೆಂದು ಅಚರಿಸುತ್ತಾರೆ.
ರಾಶಿಗಳ ಚಿನ್ನೆಗಳು ಹೀಗಿವೆ. (1) ಡ್ರಾಗನ್ (2) ಹೋರಿ (3) ಕೋಳಿ (4) ಟಗರು (5) ಇಲಿ (6) ಕುದುರೆ
(7) ಹುಲಿ (8) ಕೋತಿ (9) ಹಾವು (10) ಹಂದಿ (11) ಮೊಲ (12) ಅಮೆ. ಇತ್ಯಾದಿ.
ಅಲ್ಲಿಂದ ಬರುವಾಗ ದಾರಿಯಲ್ಲಿ ಮಲೇಶಿಯಾದ ಅತ್ಯಂತ ಎತ್ತರದ ಅವಳಿ ಗೋಪುರವನ್ನು
ನೋಡಿದೆವು. ಇವುಗಳು ದೀಪಾಲಂಕರದಿಂದ ಕಂಗೋಳಿಸಿ, ಥಳಥಳಿಸುತ್ತಿತ್ತು. ಇದು ಸಿಟಿ ಮದ್ಯೆಯಲ್ಲಿದೆ.
ಇದನ್ನು ಕೇವಲ 3 ವರ್ಷದಲ್ಲಿ 1994-97ರಲ್ಲಿ ಕಟ್ಟಿ ಮುಗಿಸಿದ್ದಾರೆ. ಈ ಎರಡು ಗೋಪುರದಲ್ಲಿ 142
ಅಂತಸ್ತುಗಳು ಇವೆ. ದುಬೈನಲ್ಲಿ ಇರುವ "ಬುರ್ಜು ಖಲೀಫಾ" ಕಟ್ಟುವ ಮುಂಚೆ,ಪ್ರಪಂಚದ ಅತ್ಯಂತ ಎತ್ತರದ
ಅವಳಿ ಗೋಪುರವಾಗಿತ್ತು. ಇದರ ಸುತ್ತಾ ಮುತ್ತಾಲು ಇರುವ ಬೇರೆ ಬೇರೆ ಗಗನ ಚುಂಬಿ ಕಟ್ಟಡಗಳನ್ನು
ನೋಡಿಕೊಂಡು ವಾಪಸ್ಸು ಬರುವಾಗ, ಭಾರತೀಯ ಭೋಜನ ಮಾಡಿಕೊಂಡು ಹೋಟಲಿಗೆ ಬಂದು ತಂಗಿದೆವು.
ಈ ದಿನ 9ನೇ ತಾರೀಖು, ಬೆಳಗ್ಗೆ ತಿಂಡಿ ತಿಂದು, ನಮ್ಮ ಹೋಟೆಲ್ "ಪುದು ಫ್ಲಾಸಃ"ದ ಮುಂದೆ ಇರುವ ಹೊಸದಾಗಿ ನಿರ್ಮಿಸಿದ ಗಣೇಷ ಗುಡಿಗೆ ಹೋಗಿ ಬಂದೆವು. ದಕ್ಷಿಣ ಭಾರತ ಗುಡಿಯಂತೆ ಕಟ್ಟಿರುತ್ತಾರೆ.
ಸುಂದರವಾಗಿತ್ತು. 9 ಗಂಟೆಗೆ ಕೌಲಾಲಂಪುರದ ಸಿಟಿ ಸಿಯಿಂಗ್ಗೆ ಹೊರೆಟೆವು.
ಮೊದಲು ನಾವು "ಇಸ್ತಾನ ನಗರ" ಕಡೆಗೆ ಬಂದೆವು. ಇದು ಇಲ್ಲಿನ ಆಳುವ ರಾಜನ ಅರಮನೆ.
2 ಅಂತಸ್ತು. ಬಿಳಿಯ ಸುಂದರವಾದ ಅರಮನೆ. ಮಾರ್ಗಮದ್ಯದಲ್ಲಿ. ನಮ್ಮ ಟೂರ್ ಗೈಡ್ ರಾಜನ್‍ನವರು
ಮಲೇಷಿಯಾದ ಬಗ್ಗೆ, ಅಲ್ಲಿಯ ರಾಜಕೀಯದ ಬಗ್ಗೆ ವಿವರವಾಗಿ ಮಾಹಿತಿ ಕೊಟ್ಟರು. ಮಲೇಷಿಯಾದಲ್ಲಿ 13
ರಾಜ್ಯಗಳದ್ದು, 9 ರಾಜ್ಯದಲ್ಲಿ ಸುಲ್ತಾನರು ಅಳ್ಲಿಕೆ ನಡೆಸುತ್ತಾರೆ. ಈ 9 ಸುಲ್ತಾನರ ಪೈಕಿ ಒಬ್ಬರು 5 ವರ್ಷಕ್ಕೆ
ಒಮ್ಮೆ ಚುನಾಯಿತರಾಗಿ ಬಾರಿ ಬಾರಿಗೆ ಒಬ್ಬಬ್ಬರು ರಾಜರಾಗುತ್ತಾರೆ. ಈ ರೀತಿ ಆಯ್ಕೆಯಾದ ಸುಲ್ತಾನರು
"ಇಸ್ತಾನ ನಗರ" ಅರಮನೆಯಲ್ಲಿ 5 ವರ್ಷಕಾಲ ವಾಸಿಸುತ್ತಾರೆ. ಮಲೇಷಿಯಾದ ಜನಸಂಖೈ ಸುಮಾರು 7 ಕೊಟಿ.
ಇದರಲ್ಲಿ 56% ಮುಸ್ಲಿಮ್, 27% ಚೀನಿಯರು, 7% ಹಿಂದುಗಳು ಇದ್ದಾರೆ. ಹೀಗಾಗಿ ಇದು ಬಹು ಜಾತಿಯ
ದೇಶವಾಗಿದೆ. 1957 ಆಗಷ್ಟ್ 31 ರಂದು ಬ್ರಿಟಿಷರಿಂದ ಸ್ಸಾತಂತ್ರ ಪಡೆಯಿತು. ಇಲ್ಲಿರುವ ಜನರೆಲ್ಲಾರು
ಬಹುವಾಗಿ ಹೊರ ದೇಶದಿಂದ ಬಂದು ನೆಲೆಸಿದವರು. ಅಂದರೆ ಭಾರತ, ಇಂಡೋನೇಷಿಯ, ತೈಲಾಂಡ್,ಚೈನಾ,
ಮುಂತಾದ ಪಕ್ಕದ ದೇಶಗಳಿಂದ ಬಂದವರು. ಇಲ್ಲಯ ಬುಡಕಟ್ಟು ಜಾನಾಂಗದವರು ಇನ್ನೊಂದು ಕಾಡಿನಲ್ಲಿ
ವಾಸಿಸುತ್ತಿರುತ್ತಾರೆ. ಅವರಿಗೆ ನಗರ ಪ್ರದೇಶಗಳ ಸಂಪರ್ಕವೇ ಇಲ್ಲ. ಇಲ್ಲಿ ಅಡಳಿತ ವ್ಯವಸ್ಥೆ ಪ್ರಜಾಪ್ರಭುತ್ವ
ವಾಗಿದ್ದು, ಪ್ರಧಾನ ಮಂತ್ರಿಯನ್ನು ಜನರು ಮತದಾನದಿಂದ, 5 ವರ್ಷಕ್ಕೆ ಒಮ್ಮೆ ಆಯ್ದುಕೊಳ್ಳುತ್ತಾರೆ.
ಮಲೇಶಿಯಾದ ರಾಜನ ಅರಮನೆ "ಇಸ್ತಾನ ನಗರ" ಬಹಳ ಸುಂದರವಾಗಿದ್ದು, ಅತ್ಯಂತ ಹಸಿರಾಗಿ
ರುವ ಪರಿಸರದಲ್ಲಿದೆ. ಸುತ್ತಾಲು ತೋಟಗಳು, ಕಾರಂಜಿಗಳು ಇವೆ. ಒಳಕ್ಕೆ ಯಾರಿಗೂ ಪ್ರವೇಶವಿಲ್ಲ. ಮುಖ್ಯ
ದ್ವಾರದ ಬಳಿ ಅಶ್ವರೂಢ ಕಾವಲುಗಾರರು ಸದಾ ಇರುತ್ತಾರೆ. ಸುತ್ತಾಲಿನ ಉದ್ಯಾನವನ ಹಸಿರಾಗಿ, ಶುಚಿಯಾಗಿ ಇದೆ. ಅಲ್ಲಂದ ನಾವು ಕೌಲಾಲಂಪುರ ನಗರ ಪ್ರದಕ್ಷಿಣೆಗೆ ಹೊರಟು, ಹಿಂದಿನ ದಿನ ರಾತ್ರೆ, ದೀಪಾಲಂಕರದಿಂದ
ಸಜ್ಜುಗೊಂಡಿದ್ದ ಅವಳಿ ಗೋಪುರವನ್ನು ಹಗಲಿನಲ್ಲಿ ನೋಡಲು ಹೊದೆವು. ಅದರೆ ನೋಡಲು 6 ಅಂತಸ್ತುವರೆಗೆ
ಮಾತ್ರ ಪ್ರವೇಶ. ಅದರಿಂದಾಚೆಗೆ ಪ್ರವಾಸಿಗರೆಗೆ ಪ್ರವೇಶವಿಲ್ಲ. ಅಲ್ಲಿ ಸರ್ಕಾರದ ಹಾಗು ಮಲೇಶಿಯಾದ
ಪೆಟ್ರೋಲಿಯಂ ಖಾತೆಯ ಕಛೇರಿಗಳು ಇವೆ. 6 ಅಂತಸ್ತು ಬರಿ ಮಾಲುಗಳು. ಅಲ್ಲಿ ಒಂದು ಗಂಟೆಗಳ ಕಾಲ
ಮಾಲು ಸುತ್ತಿದೆವು.
ಅಲ್ಲಂದ ನಾವು ಮಡ್ರೆಕ ಸ್ಕ್ವೇರ್ ಹಾಗೂ ಇಂಡಿಪೆಂಡೆಂಟ್ ಸ್ಕ್ವೇರ್ ಬಳಿ ಬಂದೆವು. ಇಲ್ಲಿ ನಾವು
ಅತ್ಯಂತ ಎತ್ತರದ " ಧ್ವಜ ಸ್ಥಂಭ"ವನ್ನು ವೀಕ್ಷಿಸಿದೆವು. ಧ್ವಜಾರೋಹಣ ಸ್ಥಳ. ರೈಲ್ವೆ ಪ್ರಮುಖಾಲಯಗಳನ್ನು
ನೋಡಿದೆವು. ಅನಂತರ ಸಿಟಿ ಸೆಂಟರ್ನಲ್ಲಿ ಭೋಜನ ಮಾಡಿ ನಂತರ "ಚಾಕೋ ಬಾಟಿಕ್", ಚಾಕಲೇಟ್ ತಯಾರಿಕ
ಘಟಕಕ್ಕೆ ಬಂದೆವು. ವಿಧ ವಿಧ ರೀತಿಯ ಚಾಕಲೇಟ್ ತಯಾರಿಕೆಯ ಹಂತವನ್ನು ನೋಡಿಕೊಂಡು ಬರುವಾಗ
ರುಚಿ ನೋಡಲು ಕೊಡುತ್ತಿದ್ದರು. ವಿವಿಧ ರೀತಿಯ ಸ್ವಾದದ, ಎಲ್ಲಾ ತರಹದ ಹಣ್ಣಿನ, ವಿಶೇಷ ಬಾಳೆಹಣ್ಣಿನ
ಹಾಗೂ ತೆಂಗಿನದೂ ಇತ್ತು. ಬೇಕದವರು ವ್ಯಾಪಾರಮಾಡಿದರು.
ಅಲ್ಲಿಂದ ನಾವು "ಡ್ಯೂಟಿ ಫ್ರೀ" ಶಾಪ್ "ಜಿನೀವ ವಾಚ್ ಶೋ ರೂಮ್"ಗೆ ಬಂದೆವು. ಲಕ್ಷಾಂತರ
ರೂಪಾಯಿಯ ವಾಚ್ ಗಳು, ಆಭರಣಗಳು, ತಂಪು ಕನ್ನಡಕಗಳು, ಬ್ಯಾಗುಗಳು, ಉಡುಪುಗಳು, ಇತ್ಯಾದಿಗಳು
ಇದ್ದವು. ಕೆಲವರು ಕೊಂಡರು. ಅನಂತರ ನಾವುಗಳು "ಪುದು ಫ್ಲಾಸ" ಹೋಟೆಲ್ ಗೆ 4 ಗಂಟೆಗೆ ಬಂದೆವು.
ನಂತರ ಸಂಪೂರ್ಣ ವಿಶ್ರಾಂತಿ, ರಾತ್ರೆ ಭೋಜನಕ್ಕೆ "ಜೈಪುರ್ ಭವನ್"ಗೆ ಹೋಗಿ ಮಾಡಿ ಕೊಂಡು ಬಂದೆವು.
ಈ ದಿನ 10ನೇ ಡಿಸೆಂಬರ್ 2015, ನಮ್ಮ ಮಲೇಶಿಯದ ಪ್ರವಾಸದ ಕೊನೆಯ ದಿನ. ಇಲ್ಲಿಂದ
ಸಿಂಗಪೂರ್ಗೆ ಬಸ್ಸು ಮೂಲಕ ಪ್ರಯಾಣ ಮಾಡುವೆವು. ಪ್ರಾತಃ 6 ಗಂಟೆಗೆ, ಎಲ್ಲಾರು ಲಗೇಜ್ ಸಮೇತ ಸಜ್ಜಾಗಿ
7 ಗಂಟೆಗೆ ಪುದು ಪ್ಲಾಜದಲ್ಲಿ ತಿಂಡಿ ತಿಂದು, ಎಲ್ಲಾ ಲಗೇಜುಗಳನ್ನು, ಬಸ್ಸಿನಲ್ಲಿ ಇರಿಸಿ, ಸಿಂಗಪೂರ್ ಕಡೆಗೆ
ಪ್ರಯಾಣ ಬೆಳೆಸಿದೆವು. 400 ಕಿ.ಮಿ. ದೂರ. ದಾರಿಯಲ್ಲಿ 11 ಗಂಟೆಗೆ ಟೀ ಗಾಗಿ ಇಳಿದೆವು. ಟೀ ಬಹಳ
ರುಚಿಕರವಾಗಿತ್ತು. ಮಾರ್ಗ ಸವಿಯಲು ಎಲ್ಲಾರು ವಿವಿಧ ಚಟುವಟಿಕೆಯಲ್ಲಿ, ಅಂದರೆ ದೇವರ ನಾಮ ಸ್ಮರಣೆ,
ಭಾವಗೀತೆ, ಅಂತಕ್ಷರಿ, ಕಾವ್ಯವಾಚನ, ನಗೆಹನಿ, ಇತ್ಯಾದಿಗಳನ್ನು, ನಡೆಸುತ್ತಾ ಪ್ರಯಾಣ ಸಾಗಿತ್ತು. ಮಾರ್ಗಮಧ್ಯೆ
ದಲ್ಲಿ, ದಕ್ಷಿಣ ಭಾರತದ ಭೋಜನ ಪ್ಯಾಕೇಟ್ ಲಂಚ್ ನ್ನು, ತೆಗೆದುಕೊಂಡು, ಇನ್ನೊಂದು ರೆಸ್ಟೋರೆಂಟ್ ನಲ್ಲಿ
ಊಟಮಾಡಿ ಪ್ರಯಾಣ ಮುಂದುವರೆಸಿದೆವು. ಮಲೇಶಿಯಾ ಸಿಂಗಪೂರ್ ಸೀಮಾ ರೇಖೆಯನ್ನು, 2 ಗಂಟೆ 15
ನಿಮಿಷಕ್ಕೆ ತಲುಪಿದೆವು. ಇಲ್ಲಿ ವಾಹನಗಳ ದಟ್ಟಣೆಯೋ ದಟ್ಟಣೆ. ಅಲ್ಲಿ ನಮ್ಮ ಲಗೇಜ್ ತಪಾಸಣೆಯಾಗಿ
ತೆಗೆದುಕೊಂಡು, ಇಮಿಗ್ರೇಶನ್ ಕೌಂಟರ್ ಕಡೆಗೆ ನಡೆದೆವು, ಅಲ್ಲಿಯೂ ಬಹಳ ದೊಡ್ಡ "ಕ್ಯೂ"ನಲ್ಲಿ ಒಂದುವರೆ
ಗಂಟೆಗಳ ಕಾಲ ನಿಂತು ತಪಾಸಣೆ ಮಾಡಿಸಿಕೊಂಡು, ಸಿಂಗಪೂರ್ ಪಾಸ್ ಪೊರ್ಟ್ನಲ್ಲಿ ಪಡೆದುಕೊಂಡು ಸಾಗಿದೆವು.
ಸಿಂಗಪೂರ್ ಪ್ರವೇಸಿಸುತ್ತಿದ್ದಂತೆ ಕಪ್ಪನೆ ಕಾರ್ಮೋಡಗಳು, ನಂತರ ಕುಂಭವೃಷ್ಠಿ ಮಳೆಯಾಯಿತು. ಮಳೆ
ನಮ್ಮನ್ನು ಸ್ವಾಗತಿಸಿ, ಸ್ವಲ್ಪ ಸಮಯದಲ್ಲಿ ನಿಂತಿತು. ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಉದ್ಯಾನವನಗಳು ಬಹು
ಅಚ್ಚುಕಟ್ಟಾಗಿದ್ದವು. ಶುಚಿತ್ವವನ್ನು ಕಾಪಡಿಕೊಂಡಿದ್ದಾರೆ.ಸಿಂಗಾಪುರ್ ಸಿಟಿಯ ಮದ್ಯೆ ಗಗನ ಚುಂಬಿ ಹಾಗು ಬಹು
ವಿನ್ಯಾಸಗಳ ಕಟ್ಟಡಗಳನ್ನು ವೀಕ್ಷಿಸುತ್ತಾ ಸಿಟಿ ಮದ್ಯೆದಲ್ಲಿ ಇರುವ " ಗ್ರಾಂಡ್ ಇಂಪೀರಿಯಲ್" ಹೋಟೆಲ್ ನನ್ನು
ಸುಮಾರು 5ವರೆಗೆ ತಲುಪಿದೆವು.
ಅಲ್ಲಿ ನಮ್ಮ ನಮ್ಮ ಕೊಠಡಿಗಳಿಗೆ ತೆರಳಿ ಫ್ರೆಶ್ ಅಪ್ ಅಗಿ ಸುಮಾರು 6ವರೆಗೆ ಲೌಂಜ್ ಗೆ
ಬಂದೆವು. ಈ ಹೊಟಲಿನಲ್ಲಿ ಒಂದು ಕಟ್ಟಡ ದಿಂದ ಇನೊಂದು ಕಟ್ಟಡಕ್ಕೆ ಮಧ್ಯೆ ಮಾಡಿರುವ ಸೇತುವೆಯನ್ನು
ದಾಟಿ, ಲಿಫ್ಟ್ ಮೂಲಕ ಹೊಗಬೇಕಿತ್ತು. ಸುಂದರವಾದ, ಅಚ್ಚುಕಟ್ಟಾದ ಐಶರಾಮಿ ಹೊಟೇಲ್. ಹೊಟೇಲ್
ಮುಂಭಾಗದಲ್ಲಿ ಮಹಾಲಕ್ಷ್ಮಿ ದೇವಸ್ಥಾನ. ಸಂಜೆ 6ವರೆಗೆ ಹೊರಟು, ಸಿಂಗಪೂರ್ ಸಿಟಿ ನೋಡುತ್ತಾ, ಸಿಂಗಪೂರ್
ನದಿಯಲ್ಲಿ "ಕ್ರೂಯಿಸ್" ಗಾಗಿ ನದಿ ತಲುಪಿದೆವು. ಇದಕ್ಕೆ ಮೊದಲೆ ಟೀಕೆಟ್ ಕೊಂಡು ಕಾದಿರಿಸಲಾಗಿತು.
ಅಷ್ಟೋತ್ತಿಗೆ ಸುತ್ತಲೂ ನಗರವೆಲ್ಲಾ, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೋಳಿಸುತ್ತಿತ್ತು. ನದಿಯಲ್ಲಿ
ಸುಮಾರು 1ವರೆ ಗಂಟೆಗಳ ಕಾಲ ದೋಣಿ ವಿಹಾರಮಾಡುತ್ತಾ, ನಗರವನ್ನು ವೀಕ್ಷಿಸುತ್ತಾ, ಅನಂದಿಸುತ್ತಾ ವಿಹರಿಸಿದೆವು. ದೋಣಿಯಲ್ಲಿ 40 ನಿಮಿಷಗಳ ಕಾಲ ಇಂಗ್ಲೀಷ್ ನಲ್ಲಿ ಅಡೀಯೋ ಹಾಗು ದೃಶ್ಯದ ವೀಕ್ಷಣಾ
ವಿವರಗಳು ಇತ್ತು. ಎಲ್ಲೆಲ್ಲೂ ನೋಡಿದರೂ ಬಣ್ಣ ಬಣ್ಣದ ವಿದ್ಯುತ್ ದೀಪಗಳ ವಿನ್ಯಾಸ, ನಯನ ಮನೋಹರ
ವಾಗಿತ್ತು. ನದಿಯಲ್ಲಿ ಅದರ ಪ್ರತಿಬಿಂಬ ಕಾಣುತಿತ್ತು. ಸುತ್ತಮುತ್ತಲೂ ಇರುವ ಹೋಟೆಲ್ ನಲ್ಲಿ ಕ್ಯಾಂಡಲ್
ಲೈಟ್ ಪಾರ್ಟಿ ಅಗುತಿತ್ತು. ಅನಂತರ ಹೋಟೆಲ್ ಸಮೀಪದಲ್ಲಿ, "ಮುಸ್ತಾಫ ಸೆಂಟರ್" ನಲ್ಲಿ, (ಲಿಟಲ್ ಇಂಡಿಯ)
ಹಣವನ್ನು ಸಿಂಗಪೂರ್ ಡಾಲರ್ ಗೆ ವಿನಿಮಯ ಮಾಡಿಕೊಂಡು, ಅಲ್ಲಿಯೇ ಎದುರುಗಡೆ ಇದ್ದ "ಬಾಲಾಜಿ ಭವನ್"
ನಲ್ಲ ದಕ್ಷಿಣ ಭಾರತೀಯ ರುಚಿಕರ ಊಟ ಮುಗಿಸಿಕೊಂಡು, ಕಾಲ್ ನಡಿಗೆಯಲ್ಲೆ ಹೋಟೆಲ್ ಗೆ ಬಂದು, ದೋಣಿ
ವಿಹಾರದ ಗುಂಗಿನಲ್ಲಿ ಮಲಗಿದೆವು.
ಈ ದಿನ 11ನೇ ಡಿಸೆಂಬರ್ 2015, ಬೆಳಗ್ಗಿನ ಜಾವ 5ಕ್ಕೆ ಎದ್ದು, ಉತ್ತಮವಾದ ಕಾಫಿ
ತಯಾರಿಸಿಕೊಂಡು, ಕುಡಿದು, ಸ್ನಾನ್ನಾದಿಗಳನ್ನು ಮುಗಿಸಿಕೊಂಡು, 7 ಗಂಟೆ ಹೊತ್ತಿಗೆ ಹೋಟೆಲ್ ನಲ್ಲಿ
ದಕ್ಷಿಣಭಾರತೀಯ ಹಾಗು ಕಾನ್ಟಿನಂಟಲ್ ಬೇಕ್ರ್ ಫಾಸ್ಟ್ ಮುಗಿಸಿಕೊಂಡು, ಹೋಟೆಲ್ ಲೌಂಜ್ ಗೆ ಬಂದೆವು.
ಇವತ್ತಿನ ಹೆಕ್ಟಿಕ್ ಶೆಡ್ಯೂಲ್ ಪ್ರಕಾರ "ಝೋರನ್ ಬರ್ಡ್"ಪಾರ್ಕಗೆ ಹೊರೆಟೆವು. ಮೊದಲಿಗೆ ಅಲ್ಲಿನ ಅರ್ಕಷಣೀಯ
ಅಕ್ವೇರಿಯಂ ನಲ್ಲಿ ಅನೇಕ ತರಹದ ಜಲಚರವನ್ನು ನೋಡಿದೆವು. ಅಲ್ಲಿಯೇ ಅಂಡರ್ ಗ್ರೌಂಡ್ ನಲ್ಲಿ, ನಮ್ಮ
ಸುತ್ತಲು ನೀರು ಇರುವ ಗಾಜಿನ ಪಾರದರ್ಶಕ ದಾರಿಯಲ್ಲಿ ನಡೆಯುತ್ತಾ, ಸ್ವತಂತ್ರವಾಗಿ ವಿಹರಿಸುತ್ತಿರುವ ಶಾರ್ಕ
ಗಳು, ಮೀನುಗಳು, ಅಮೆಗಳು, ಸ್ಟಾರ್ ಮೀನುಗಳು, ಬಣ್ಣ ಬಣ್ನದ ವಿವಿಧ ರೀತಿಯ ಮೀನುಗಳು ನಮ್ಮ
ಸುತ್ತಮುತ್ತಲೂ, ತಲೆ ಎತ್ತಿದರೆ ಮೇಲೆ ಎಲ್ಲಾಕಡೆ ವಿಹರಿಸಿತ್ತಿರುವ ಜಲಚರಗಳನ್ನು ವೀಕ್ಷಿಸಿ ಮುದದಿಂದ
ಹೊರೆಗೆ ಬಂದೆವು.
ನಂತರ ಅಲ್ಲಿನ "ಝೋರರ್ನ ಪಾರ್ಕ"ಗೆ ಬಂದೆವು. ಈ ಪಕ್ಷಿಧಾಮು ಅತ್ಯಂತ ವಿಸ್ತಾರವಾಗಿರುವುದ
ರಿಂದ, ಅಲ್ಲಿನ ಒಳ ಓಡಾಟಕ್ಕೆ ವಿಕ್ಷಣಾ ಟ್ರಾಲಿಯನ್ನು ಎರ್ಪಾಡಿಸಿರುತ್ತಾರೆ. ಅದರಲ್ಲಿ ಕುಳಿತು ಸುಮಾರು 2 ಗಂಟೆ
ಗಳ ಕಾಲ ಸುತ್ತಾಲು ಸಂಚರಿಸಿ, ಮುಕ್ತವಾಗಿ ವಿಹರಿಸುತ್ತಿರುವ ಅನೇಕ ಜಾತಿಯ ಪಕ್ಷಿ ಸಂಕುಲಗಳನ್ನು, ನೋಡಿ
ಅನಂದಿಸಿದೆವು. ಈ ಪಕ್ಷಿಧಾಮವು ಒಂದು ದ್ವೀಪವಾಗಿದ್ದು. ಪರ್ಯಟನೆಗೆ ಬಹಳ ಯೋಗ್ಯ ತಾಣವಾಗಿದೆ.
ಇದರಂತೆ ಹತ್ತಿರ ಹತ್ತಿರ ಅನೇಕ ದ್ವೀಪಗಳು ಇವೆ. ಕೆಲವುದರಲ್ಲಿ ಮಾತ್ರ ಜನ ಜೀವನ ಇದೆ. ಉಳಿದ ದ್ವೀಪ
ಗಳು ದಟ್ಟ ಕಾಡುಗಳಿಂದ ತುಂಬಿದೆ. ಕರಿ, ಬಿಳಿ, ಹಾಗು ಪಿಂಕ್ ಹಂಸಗಳು, ಬಿಳಿ ಕ್ಕೊಕ್ಕರೆಗಳು. ತರ ತರಹದ
ಪಕ್ಷಿಗಳು, ಹಸಿರು, ಬಿಳಿ, ಕೆಂಪು, ರಂಗು ರಂಗಿನ ಗಿಳಿಗಳು, ಮಾತನಾಡು ಗಿಳಿಗಳು, ಇನ್ನು ಅನೇಕ ಪಕ್ಷಿಗಳನ್ನು
ವೀಕ್ಷಿಸಿದೆವು. ಟ್ರಾಲಿಯಲ್ಲಿ ಸಂಚರಿಸುತ್ತಾ, ಪಕ್ಷಿ ಸಂಕುಲ ಇರುವ ಕಡೆಗೆ ಬಂದು, ಬಹಳ ಹತ್ತಿರದಿಂದ ಎಲ್ಲಾವನ್ನು ನೋಡಿದೆವು. ಬಹಖ ದೊಡ್ಡ ವಿಶೇಷ ಹಕ್ಕಿಗಳು ಇದ್ದವು.
ಪಕ್ಷಿಧಾಮದ ನಂತರ ಅಲ್ಲೆ ಇರುವ "ಸಂತೋಷ"ನಲ್ಲಿ ಭಾರತೀಯ ಭೋಜನ ವಾಯಿತು.
ಊಟ ಬಹಳ ರಸವತ್ತಾಗಿತ್ತು. ಮೊದಲೆ ಕಾದಿರಿಸಲಾಗಿತ್ತು. ಕಿಕ್ಕಿರಿದ ಜನರಿದ್ದರು. ಬಹಳ ದೊಡ್ಡದಾದ
ಜಾಗದಲ್ಲಿ, ಕೃತಕ ಹೂವು, ಹಣ್ಣುಗಳಿಂದ ತುಂಬಿದ, ಮರಗಳ ಕೆಳಗೆ, ಟೇಬಲ್ಲ್ ಅರೆಂಜ್ ಮಾಡಿದ್ದರು. ಬಹಳ
ಚೆನ್ನಾಗಿತ್ತು. ಊಟ ನೋಟ ಎರಡ
ಊಟದ ನಂತರ "ಸಂತೋಷ" ದ್ವೀಪದ ಕಡೆಗೆ ಹೊರೆಟೆವು. ಸಿಂಗಾಪುರದ ವಿಶೇಷ ಲಾಂಛನದ
ಕಡೆಗೆ ಹೊರೆಟೆವು. ಅಲ್ಲಗೆ ಹೋಗುವಾಗ ದ್ವೀಪದ ದಟ್ಟ ಅರಣ್ಯದಲ್ಲಿ, ಪ್ರಕೃತಿಯನ್ನು ಸವಿಯುತ್ತಾ ಅನಂದಿ
ಸಿದೆವು. ಅಲ್ಲಿರುವ ಲಾಂಛನ "ಸಿಂಹ". ಸಿಂಗಾಪುರದ ನಿಜವಾದ ಹೆಸರು "ಸಿಂಹಪುರ". ಅತಿ ಎತ್ತರದ ಸ್ಥಳ
ದಲ್ಲಿ ಕಟ್ಟಿರುವ ಸಿಂಗಾಪುರ ಲಾಂಛನದ ಸಿಂಹವಿದೆ. ಈ ಲಾಂಛನದ ತುದಿಗೆ ಏರುವ ಮುನ್ನ ಸಿಂಗಾಪುರದ
ಕಥೆಯ ವಿಡಿಯೋ ಶೋ ಅಯಿತು. ಅಲ್ಲಿನ ರಾಜನಿಗೆ ಸಿಂಹವೂ ಅಶ್ರಯ ನೀಡಿದ್ದರಿಂದ, "ಸಿಂಹಾಪುರ" ವಾಯಿತು.
ವೀಡಿಯೂ ಶೋ ನಂತರ, ಲಾಂಛನದ ಮೇಲಕ್ಕೆ ಹೊಗುವ ಮುನ್ನ, ಪ್ರತಿಯೊಬ್ಬರು ಸಿಂಹದ ಬಾಯಿಯಿಂದ
ಒಂದೊಂದು ಬಂಗಾರ ಲೇಪಿತ ಅಗಲವಾದ ನಾಣ್ಯವನ್ನು ಸ್ಮಾರಕವಾಗಿ ಪಡೆದೆವು. ನಂತರ ಮೆಟ್ಟಿಲು ಏರಿ
ಲಾಂಛನದ ತ್ತುತ್ತತುದಿಗೆ ತಲುಪಿ,ಸಿಂಗಾಪುರ ಸಮುದ್ರ ದ್ವೀಪಗಳ ವಿಹಂಗಮ ನೋಟವನ್ನು ಕಂಡೆವು. ಅಲ್ಲಿ
ಫೋಟೋ ಸೆಸಷ್ ಅಯಿತು. ನಂತರ ಕೆಳಗಿಳಿದು ಡಾಲ್ಫಿನ್ ಹಾಗು ಸಮುದ್ರ ಸಿಂಹಗಳ ಶೋ ನೋಡಲು
ಹೊದೆವು. ಇಲ್ಲಿ ಭಾರತೀಯ ಪ್ರವಾಸಿಗಳೇ ಜಾಸ್ತಿಇದ್ದರು, ಶೋ ಬಳಿ ಉತ್ತಮ ಕಾಫಿ/ಟೀ,ಸಮೋಸಗಳು
ಕಾಂಪ್ಲಿಮೆಂಟರಿಯಾಗಿ ಸೇವಿಸಿದೆವು.
ಊಟಕ್ಕೆ ಮುಂಚೆ ನಮ್ಮ ಕೆಲವು ಸಹ ಪ್ರಯಾಣಿಕರು "ಸಿಂಗಾಪುರ ಫ್ಲಯ್ಯರ್"ಗಾಗಿ ಹೋಗಿದ್ದರು.
ನಾವುಗಳು ಅಲ್ಲೇ ಕುಳಿತು ಹರಟೆ ಹೊಡೆಯುತ್ತ ವೀಕ್ಷಿಸುತ್ತಿದ್ದೆವು. ಇದು ಪ್ರಪಂಚದಲ್ಲೆ ಅತ್ಯಂತ ದೊಡ್ಡದಾದ
ಫ್ಲಯರ್. 146 ಮಿ. ಎತ್ತರದ ಜೆನ್ಟ್ ವೀಲ್ ಇದರಲ್ಲಿ 28 ಕ್ಯಾಬಿನ್ ಇವೆ. ಪ್ರತಿಯೊಂದರಲ್ಲಿ 28 ಜನ
ಕೊರ ಬಹುದು. 28 ಇವರ ಶುಭ ಸಂಖ್ಯೆ. ಇದು ನಿಧಾನವಾಗಿ ಸುತ್ತುತ್ತಾ ಇಡೀ ಸಿಂಗಾಪುರ ಹಾಗು ಸುತ್ತ
ಮುತ್ತಾಲಿನ ದೃಶ್ಯಗಳನ್ನು ವೀಕ್ಷಣೆ ಮಾಡಲು ಅನುವು ಮಾಡಿಕೊಡುತ್ತೆ. ನಂತರ ಅತೀ ಎತ್ತರದ ಮನೋ
ರೈಲ್ ಪ್ರಯಾಣ ಮಾಡಿ, ಕೊನೆಗೆ ದಿನದ ಅತ್ಯಂತ ಅರ್ಕಷೀಯವಾದ "ಲೇಸರ್ ಶೋ"ಗೆ ಸಮುದ್ರದ ತಟದಲ್ಲಿ
ಏರ್ಪಾಡಿಸಿದ್ದ ಕಡೆಗೆ ಬಂದು ಕುಳಿತೆವು. ಅದೊಂದು ಅದ್ಧುತ ಪ್ರದರ್ಶನ. ಸಮುದ್ರದ ಹಿನ್ನೆಲೆಯಲ್ಲಿ,ಮಾನವನ
ಚರಿತ್ರೆಯ ಕಾಲಘಟ್ಟಗಳನ್ನು ಬಿಂಬಿಸುವ. ಅತಿರಂಜಿತವಾದ, ಹೊಲಿಕೆಯಿಲ್ಲದ ಪ್ರದರ್ಶನ. ಪ್ರಾರಂಭದಲ್ಲಿ, ಒಂದು
ಹುಡುಗ ಹುಡುಗಿಯರು ಸ್ವಾಭಾವಿಕವಾಗಿ, ಸಮುದ್ರ ದಡದಿಂದ ಅಟ್ಟಸಿಕೊಂಡು ಹೋಗುವಂತೆ ತೋರಿಸಿ, ನಂತರ
ಕಥೆಯಲ್ಲಿ ಸಮ್ಮಿಲನ ವಾಗುವುದು ಸುಂದರವಾಗಿದೆ. ಕೊನೆಯಲ್ಲೂ ಸಹ ಲೇಸರ್ ಶೋ ನಿಂದ ಇಳಿದು
ಬಂದ್ದಂತೆ ಅವರಿಬ್ಬರು ಬರುವುದು ಬಹಳ ಚೆನ್ನಾಗಿತ್ತು. ಇದು ಪ್ರತಿ ನಿತ್ಯವೂ ನಡೆಯುವ ಒಂದು ಪ್ರದರ್ಶನ.
ಮನಮೋಹಕವಗಿ, ದಂಗುಪಡಿಸುವ, ಬೇರೇ ಲೋಕಕ್ಕೆ ಕರೆ ದೊಯ್ಯವ ಪ್ರದರ್ಶನ. ಕತ್ತಾಲಾಗುತ್ತಿದ್ದಂತೆ
ಸುತ್ತಾಲು ರಾತ್ರೆಯ ಬ್ಯಾಕ್ ಗ್ರೌಂಡ್ ನಲ್ಲಿ ಬೆಳಕಿನ ಚೆಲ್ಲಾಟ ಬಹಳ ಚೆನ್ನಾಗಿತ್ತು. "ವಿಂಗ್ಸ್ ಅಫ್ ದಿ ಟೈಂಮ್ಸ್"
ಅಂತ ಹೆಸರಿಸಿದ್ದರು. 8ವರೆ ಹೊತ್ತಿಗೆ ಕೇಬಲ್ ಕಾರ್ ರೈಡ್ ಗಾಗಿ ಸ್ಟೇಷನ್ ಗೆ ಬಂದೆವು. "ಕೇಬಲ್ ಕಾರ್
ನೆಟ್ ವರ್ಕ"ಬಹಳ ಎತ್ತರದಲ್ಲಿ ಇದೆ. ಸಂತೋಷ ದ್ವೀಪದಿಂದ ಸಿಂಗಾಪುರ ಸಿಟಿಗೆ ಕೇಬಲ್ ಕಾರ್ ನಿಂದ ಪ್ರಯಾಣ. ಎತ್ತರದ ಆಕಾಶದಲ್ಲಿ ಚಲಿಸುತ್ತಿರುವಾಗ, ಕೆಳಗಡೆ ಸಮುದ್ರವನ್ನು, ನದಿಯನ್ನು, ಗಾರ್ಡನ್ ನನ್ನು,
ಇತರೆ ಕಟ್ಟಡವನ್ನು, ಹಕ್ಕಿಯಂತೆ ಮೇಲೆ ಹಾರಿ ನೋಡಿದಂತೆ ವೀಕ್ಷಿಸಿದೆವು. ನಿಧಾನವಾಗಿ ಚಲಿಸುವ ಕೇಬಲ್
ಕಾರು ಮಾರ್ಗ ಮಧ್ಯೆಯಲ್ಲಿ ಮತ್ತೊಂದು ಸ್ಟೇಷನ್ ನಲ್ಲಿ ಕೆಲಕಾಲ ನಿಂತಿತ್ತು. ನಂತರ ಸಿಂಗಾಪುರದ ಕಡೆಗೆ
ನಿಧಾನವಾಗಿ ಚಲಿಸಿ, ಅಂತಿಮ ಗುರಿಯನ್ನು ಸೇರಿ ಸ್ಟೇಷನ್ ತಲುಪಿದೆವು. ನಂತರ ಅಲ್ಲಿಂದ ಬಸ್ಸು ನಲ್ಲಿ
ಬಾಲಜಿ ಭವನ್ ತೆರಳಿ ರಾತ್ರೆ ಭೋಜನ ಮುಗಿಸಿ, ಗ್ರಾಂಡ್ ಇಂಪೀರಿಯಲ್ ಹೋಟಲ್ ಗೆ ವಾಪಸ್ಸು ಬಂದೆವು.
ರಾತ್ರೆ ಕನಸಿನಲ್ಲಿ ಸಿಂಗಾಪುರ ದೃಶ್ಯಗಳೇ ಕಾಣುತ್ತಿತ್ತು.
ಈ ದಿನ 12ನೆ ಡೆಸೆಂಬರ್ 2015. ನಾವುಗಳು ಬೆಳಿಗ್ಗೆ ಉಪಹಾರ ಸೇವಿಸಿ, ಎದುರುಗಡೆ ಇದ್ದ
ದೇವಸ್ಥಾನಕ್ಕೆ ಹೊದೆವು. ಅಲ್ಲಿ ಭಗವಂತನ ಆನೇಕ ಗುಡಿಗಳಿವೆ. ಪಕ್ಕ ತೆಮಿಳುನಾಡಿನ ದೇವಸ್ಥಾನದಂತೆ.
ದೇವಸ್ಥಾನದ ವೈಭವವನ್ನು ಕಣ್ಣಾರೆ ಕಂಡು ಮುದಗೊಂಡೆವು. ಅಲ್ಲಿ ಲಕ್ಷ್ಮಿಅಮ್ಮನವರಿಗೆ ಅರ್ಚನೆ ಮಾಡಿಸಿ,
ಪ್ರಸಾಧ ಸ್ವೀಕರಿಸಿದೆವು. ದೇವಸ್ಥಾನದಲ್ಲಿ ಈಶ್ವರ, ಗಣಪತಿ, ಪಾರ್ವತಿ, ಲಕ್ಷ್ಮಿ, ನಾರಾಯಣ, ಚಿದಂಬರ, ಹಾಗು
ನವಗ್ರಹಗಳು ಇದ್ದವು.ಪ್ರಸಾದವು ಊಟದಷ್ಟಿತ್ತು. ತಿಂಡಿ ಅದ್ದರಿಂದ ಅದನ್ನು ಹೋಟಲ್ ರೂಮ್ ನಲ್ಲಿ ಇಟ್ಟು
ಕೊಂಡೆವು. ಪುಳಿಒಗ್ಗರೆ, ಉಸಲಿ, ಕೇಸರಿಬಾತ್. ನಮ್ಮ ಸಹ ಪ್ರಯಾಣಿಕರು "ಯುನಿವರ್ಸಲ್ ಸ್ಟೂಡಿಯೋ"
ನೋಡಲು ಹೋಗಿದ್ದರು. ಅದು ಹೈದರಾಬಾದ್ ರಮೋಜಿ ಸಿಟಿ ತರಹ. ನೂತನ ತಾಂತ್ರಿಕತೆಯನ್ನು ಒಳಗೊಂಡ
ಸಿನಿಮಾ ಚಿತ್ರಣದ ಒಂದು ಸ್ಟೂಡಿಯೋ. "ಗಾರ್ಡನ್ ಬೈ ದಿ ಬೇ",ಅಂತ ಗಾರ್ಡನ್, ಎಲ್ಲಿ ಎಲ್ಲಾ ತರಹದ ಹೂ
ಇದೆಯೋ ಅದು "ವೇರ್ ವಂಡರ್ ಬ್ಲೂಮ್ಸು". ಅವುಗಳನ್ನು ನೋಡಲು ಕೆಲವರು ಹೋದರು. ನಾವುಗಳು
ಹೋಟಲ್ ನಲ್ಲಿ ವಿಶ್ರಾಂತಿ ಪಡೆದು, ಭೋಜನಕ್ಕೆ ಬಾಲಾಜಿ ಭವನ್ ಗೆ ಹೋದೆವು. ನಂತರ ಅಲ್ಲೆ ಸಣ್ಣ ಪುಟ್ಟ
ಶಾಪಿಂಗ್ ಮಾಡಿಕೊಂಡುಬಂದೆವು.ಅಂದಿನ ರಾತ್ರೆವರೆಗೂ ವಿಶ್ರಾಂತಿ. ಸಿಂಗಪುರದ ಪೇಟೆ ಬೀದಿಗಳ ಸಂದರ್ಶನ.
ರಾತ್ರೆ ಭೋಜನ ನಂತರ ಪೂರ್ಣ ವಿಶ್ರಾಂತಿ.
ಸಿಂಗಪುರದಲ್ಲಿ 10 ದಿನ ಇದ್ದರೂ ನೋಡು ವಂತದ್ದು ಬಹಳವಿದೆ. ಇದು ಪ್ರವಾಸಿಗರ ತಾಣ.
ಅದರಿಂದಲೇ ಅವರ ದೇಶದ ಆದಾಯ. ಹೀಗಾಗಿ ಪ್ರವಾಸಿ ತಾಣಗಳು ಹೆಚ್ಚಿದೆ. ಯಾವ ತರಹದ ಕೃಷಿ
ಉತ್ಪಾದನೆ ಇಲ್ಲ. ಕೆಲವು ಹಣ್ಣು ತರಕಾರಿಗಳನಷ್ಟೆ ಬೆಳೆಯುವರು. ಒಳ್ಳೆ ಶಿಸ್ತಿನ, ಭ್ರಷ್ಟಾಚಾರವಿಲ್ಲದ ದೇಶ.
ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಸ್ಥಳ. ಸಣ್ಣ ಊರಿನಲ್ಲಿ ಏಷ್ಟೇಲ್ಲಾ ಮಾಡಿದ್ದಾರೆ. ಒಂದು ಉತ್ತಮ
ಅನುಸರಣೀಯ ದೇಶ. ನಾವು ನೋಡಿದ ಸ್ಥಳದ ಜೊತೆಗೆ ಇನ್ನು ಆನೇಕ ಸಣ್ಣ ಸಣ್ಣ ಪ್ರವಾಸಿ ತಾಣಗಳಿವೆ.
"ಇನ್ ಸೆಕ್ಟ್ ಕಿಂಗ್ ಡಮ್", "ರೀವರ್ ಸಫಾರಿ", ಇದರಲ್ಲಿ 6,000 ಜಲಚರ ಪ್ರಾಣಿಗಳು, 200 ಜೀವಿಗಳು ಇವೆ.
"ವೈಲ್ಡ್ ಲೈಫ್ ಪಾರ್ಕ" ನಲ್ಲಿ ಮೊಸುಳೆಳು, ಪಾಂಡಗಳು, ಕಾಡುಗಳು, ಮಂಕಿ ಫಾರೆಸ್ಟ್. ಮೆಕಾಂಗ್ ನದಿಯಲ್ಲಿ
ಫ್ರೆಶ್ ವಾಟರ್ ಫಿಶ್ ಗಳು, ಪ್ರಪಂಚದಲ್ಲೆ ಜಾಸ್ತಿ ಇರುವ ಜಾಗ. ಇದು ಸೌತ್ ಈಸ್ಟ್ ಏಷೀಯಾ ದಲ್ಲೇ
ಉದ್ದನೆ ನದಿ. "ಗಾರ್ಡನ್ ಬೈ ಬೇ" ನಲ್ಲಿ ಫ್ಲವರ್ ಡೂಮ್ ನಲ್ಲಿ, ತರತರದ ಹೂ ಪ್ರದರ್ಶನವಿದೆ. ಅಸ್ಟ್ರೀಲಿಯನ್, ಅಮೇರಿಕನ್. ಮೇಡಿಟರೇನಿಯನ್, ಕ್ಯಾಲಿಫೋನಿಯನ್ ಗಾರ್ಡನ್, ಅಲೀವ್ ಗಾರ್ಡನ್, ಇವೆ. ಯುನೆಸ್ಕೋ
ವಲ್ಡ ಹೆರಿಟೇಜ್ ಬಟಾನಿಕಲ್ ಗಾರ್ಡನ್ಸ್, ನ್ಯಾಷನಲ್ ಮುಸಿಯಮ್ ಇತರೆ ಇತರೆ,ಇವೆ. ಹೆಸರು ಸಿಂಹಾಪುರ
ವಾದರು ಒಂದು ಸಿಂಹ ಇಲ್ಲದ್ದು ಒಂದು ತರಹ ವಿಪರ್ಯಾಸ.
ಈ ದಿನ 13ನೆ ಡಿಸೆಂಬರ್ 2015. ಯಥಾಪ್ರಕಾರ ಬೆಳಿಗ್ಗೆ 6 ಗಂಟೆಗೆ ಎದ್ದು ಸ್ನಾನಾದಿಯನ್ನು
ಮುಗಿಸಿ, ಹೋಟೆಲ್ ನಲ್ಲಿ ಒಳ್ಳೆ ಉಪಹಾರ ಮುಗಿಸಿ ತೈಲ್ಯಾಂಡ್ ಕಡೆಗೆ ಪ್ರವಾಸಕ್ಕಾಗಿ ಸಜ್ಜು ಗೊಂಡೆವು.
ಸಿಂಗಪೂರ್ ಏರ್ ಪೊರ್ಟ್ನಲ್ಲಿ ಪ್ರವಾಸಿ ಔಪಚಾರಿಕತೆಯನ್ನು ಮುಗಿಸಿ,ಬ್ಯಾಂಗ್ ಕಾಂಕ್ ಕಡೆ ಹೊರಡುವ "ಟೈಗರ್"
ಏರ್ ಲೈನ್ ನಲ್ಲಿ ಕುಲಿತೆವು.ಇದಕ್ಕೆ ಮೊದಲು ಬಾಲಾಜಿ ಭವನ್ ನಲ್ಲಿ ಭೋಜನ ವಾಗಿತ್ತು. ಬ್ಯಾಂಗ್ ಕಾಂಕ್
ಗೆ ಸುಮಾರು 5ವರೆಗೆ ಬಂದಿಳಿದೆವು. ಬ್ಯಾಂಗ್ ಕಾಕ್ ವಿಮಾನ ನಿಲ್ದಾನ ಬಹು ವಿಸ್ತಾರವಾಗಿದ್ದು, ನಾವು ಟರ್
ಮೀನಲ್ 2 ರಲ್ಲಿ ಇಳಿದಿದ್ದೆವು. ದುಬಾಯಿ ಏರ್ ಪೋರ್ಟ್ ಗಿಂತ ದೊಡ್ಡದಾಗಿದೆ. ನಮಗೆ ತೈಲಾಂಡ್
ಪ್ರವೇಶಿಸಲು ವೀಸಾ ಇಲ್ಲದರಿಂದ, ವೀಸಾ ಅನ್ ಅರೈವಲ್ ಕಡೆಗೆ ಹೋಗಿ, ವೀಸಾ ಚಾರ್ಜ್ 1000 ಭಾಡ್ಸ್ ಕೊಟ್ಟು
(1 ಭಾಡ್ಸ್ = 2 ರೂ.) (ಸಿಂಗಾಪುರ್ ಡಾಲರ್=45 ರೂ.), ವೀಸಾ ಪಡೆದು, ನಮ್ಮ ಲಗೇಜ್ ಗಳನ್ನು ತೆಗೆದು
ಕೊಂಡು ಏಸಿ ಬಸ್ಸ್ ನಲ್ಲಿ ಬ್ಯಾಂಗ್ ಕಾಂಕ್ ಸಿಟಿಯ ಕಡೆಗೆ ಪ್ರಯಾಣ ಬೆಳೆಸಿದೆವು. ಬ್ಯಾಂಗ್ ಕಾಂಕ್ ಏರ್
ಪೊರ್ಟ್ ಹೆಸರು " ಸುವರ್ಣ ಭೂಮಿ ಏರ್ ಪೊರ್ಟ್". ಸುಮಾರು 1ವರೆ ಗಂಟೆ ಪ್ರಯಾಣದ ನಂತರ ನಮ್ಮ
ವಾಸ್ತವ್ಯ "ಬಯ್ಯೋಕೆ ಬಾಟಿಕ್" ಹೋಟೆಲ್ಗೆ ಬಂದು ಇಳಿದೆವು. ಅಗಲೇ ಸುಮಾರು ರಾತ್ರೆ 8ವರೆ. ಲಗೇಜ್
ತೆಗೆದುಕೊಂಡು, ನಮ್ಮ ನಮ್ಮ ರೊಮ್ ಗಳನ್ನು ಪಡೆದು,ಫ್ರೆಶ್ ಅಪ್ ಅಗಿ ಕೆಳಗಿನ ಅಂತಸ್ತಿನಲ್ಲಿ ಇರುವ
"ಕರಿ ಕಪ್" ಹೋಟೆಲ್ ನಲ್ಲಿ ರಾತ್ರೆ ಭೋಜನಕ್ಕೆ ಬಂದೆವು. ಊಟ ಬಹಳ ಚೆನ್ನಾಗಿತ್ತು. ಜೊತೆಗೆ ದೋಸೆ
ತೆಂಗಿನ ಚಟ್ನಿ ಇತ್ತು. ಭೋಜನ ನಂತರ ವಿಶ್ರಾಂತಿ.
ಈ ದಿನ 14ನೇ ಡಿಸೆಂನರ್ 2015. ಪ್ರಾತಃಕಾಲ ಎದ್ದು, ಕಾಪಿ ಮಾಡಿಕೊಂಡು ಕುಡಿದು,ಸ್ನಾನದಿ
ಗಳನ್ನು ಮುಗಿಸಿ, ತಿಂಡಿ ಮಾಡಿಕೊಂಡು, ಬ್ಯಾಂಗ್ ಕಾಂಗ್ ಸಿಟಿ ಟೂರ್ ಗೆ ಹೊರೆಟೆವು. ಮೊದಲು "ವಾಟ್ ಪೂ"
ಗುಡಿಗೆ, ಮಲಗಿರುವ ಬಂಗಾರದ ಬುದ್ದನ ದೇವಸ್ಥಾನ. ಬಲಕೈ ಮಡಸಿ, ಅದನ್ನು ದಿಂಬಾಗಿ ಇರಿಸಿಕೊಂಡು
ದಿವ್ಯವಾಗಿ ಮಲಗಿದ್ದಾನೆ. ಬುದ್ಧನ ಸಂಪೂರ್ಣ ದರ್ಶನ ಮಾಡಿದ್ದೆವು. 146 ಅಡಿ ಉದ್ದ, 15 ಅಡಿ ಎತ್ತರವಾಗಿ
ಶಾಂತವಾಗಿ ಮಲಗಿರುವ ಬುದ್ಧ ನಸುನಗೆ ಬೀರುತ್ತಿದ್ದಾನೆ. ದೇನಸ್ಥಾನದ ಸಮುಚ್ಛಯದಲ್ಲಿ ಅನೇಕ ಸೂಪ್ತಗಳು
ಇವೆ. ಇವುಗಳು ದೇನಸ್ಥಾನಕ್ಕೆ ವಂತಿಕೆ(ದಾನ)ಕೊಟ್ಟವರ ನೆನಪಿಗಾಗಿ ನಿರ್ಮಿಸಿದ್ದಾರೆ. ಇದು ಭಾರತದ ಬೌದ್ಧ
ಗಯವನ್ನು ನೆನಪಿಗೆ ತರುತ್ತೆ. ದೇವಸ್ಥಾನದ ಪ್ರದಕ್ಷಿಣೆ ಹಾಕುವ ಸ್ಥಳದ ಸುತ್ತಾಲು ಕಂಚಿನ ಪಾತ್ರೆಯನ್ನು
ಇಟ್ಟಿರುತ್ತಾರೆ. ಅಲ್ಲೆ ಅವರು ಕೊಡುವ ನಾಣ್ಯವನ್ನು ಒಂದೊಂದಾಗಿ ಈ ಪಾತ್ರೆಯಲ್ಲಿ ಹಾಕುತ್ತಾ ಹೊದರೆ
ಒಳ್ಳೆ ಘಂಟೆ ನಾದ ಕೇಳುತ್ತಿತ್ತು. ಮಲಗಿರುವ ರಂಗನಾಥನ ಜ್ಞಾಪಕ ಬರುತ್ತಿತ್ತು. ಈ ದೇವಸ್ಥಾನದ ಪಕ್ಕದ್ದಲ್ಲೆ
ಮತ್ತೊಂದು ಬುದ್ಧನ ದೇವಸ್ಥಾನವಿದ್ದು,ಶ್ರದ್ಧಾಳುಗಳು ವಿಶೇಷದಿನಗಳಲ್ಲಿ ಪರಿಕ್ರಮ ಮಾಡುತ್ತಾರೆ. ದೇವಸ್ಥಾನದ
ಪ್ರಾಂಗಣದಲ್ಲಿ ನೀರು ಕುಡಿದು ಸುಧಾರಿಸಿಕೊಂಡೆವು.
ಅಲ್ಲಿಂದ ನಾವು "ವಾಟ್ ಟ್ರಿಮಿಟ್" ಅಂದರೆ ಕುಳಿತಿರುವ ಬುದ್ಧ ದೇವಸ್ಥಾನಕ್ಕೆ ಹೊರೆಟೆವು.
ಈ ಬುದ್ಧನ ಪ್ರತಿಮೆಯು ಸುಮಾರು 5,500 ಕೆ,ಜಿ. ಗಟ್ಟಿ ಚಿನ್ನದಿಂದ ಮಾಡಿದ ಪ್ರತಿಮೆ. ಇಲ್ಲೂ ಸಹ ಬೇರೆ
ಬೇರೆ ಇನ್ನೊಂದು ಬುದ್ಧನ ಮಂದಿರವಿತ್ತು. ಸುತ್ತಾ ಮುತ್ತಾ ಸಣ್ಣ ಸಣ್ಣ ಅಂಗಡಿಗಳು ಇತ್ತು. ಇಲ್ಲೇ
ಹಣ ವಿನಿಮಯ ಮಾಡಿಕೊಂಡಿವು. ಇಲ್ಲೊಂದು ಬಾಳೆಗಿಡದಲ್ಲಿ, ಮರದಿಂದ ನೆಲದತನಕ ಬಾಳೆಗೊನೆ
ಬಹಳ ಉದ್ದವಾಗಿತ್ತು.
ಅನಂತರ ನಾವು ಭೋಜನ ಮಾಡಿಕೊಂಡು, "ಇಂದಿರಾ ಮಾರ್ಕಟ್"ಗೆ ಶಾಂಪಿಂಗ್ ಗೆ ಹೊರೆಟೆವು.
ಇಲ್ಲಿ ಹತ್ತಿಯ ಉಡುಪುಗಳು ಬಹಳ ಚೆನ್ನಾಗಿ ದೊರೆಯುತ್ತೆ. ಬೆಳಗ್ಗಿನ ಝಾವ 3 ರಿಂದ 8ರ ತನಕ ಪಾರ್ಕಿಂಗ್
ಲಾಟ್ ನಲ್ಲಿ ಸಂತೆ ಇರುತ್ತೆ. (ಬಟ್ಟೆಗಳ), ಇಲ್ಲೂ ಶಾಪಿಂಗ್ ಅಯಿತು. ರಾತ್ರೆ ಭೋಜನ "ಕರಿ ಕಪ್"ನಲ್ಲಿ
ಮಾಡಿದೆವು. ರುಚಿಕರವಾದ ಭಾರತೀಯ ಭೋಜನ.
ಈ ದಿನ 15ನೆ ಡಿಸೆಂಬರ್ 2015. ಪ್ರಾಃತ ಕಾಲ ಎದ್ದು, ನಿತ್ಯಕರ್ಮ ಮುಗಿಸಿ, ಲಗೇಜನ್ನು ಸಿದ್ಧ
ಪಡಿಸಿ ಬಸ್ಸುಗೆ ಕೊಂಡೈದೆವು. ಉಪಹಾರ ಮುಗಿಸಿ, ಪಟ್ಟಾಯದ ಕಡೆಗೆ ಪ್ರಯಾಣ ಬೆಳೆಸಿದೆವು. ಮಾರ್ಗಮಧ್ಯೆ
ದಲ್ಲಿ ರಮಣೀಯವಾದ "ಸಫಾರಿ ವಲ್ಡ್"ಗೆ ಬೇಟಿ ಕೊಟ್ಟೆವು. ಇದು ಬಹಳ ದೊಡ್ಡ ಪ್ರದೇಶ. ಇಲ್ಲಿಯ
ಕಾಡಿನಲ್ಲಿ ವನ್ಯ ಮೃಗಗಳು ಸ್ವೇಚ್ಛೆಯಾಗಿ ವಿಹರಿಸುತ್ತಿರುತ್ತೆ. ಅವುಗಳಿಗೆ ಪ್ರತ್ಯೇಕವಾದ ಸ್ಥಳಗಳಿವೆ. ನಾವು
ಪ್ರೇಕ್ಷಕರು ಬೋನಿನಲ್ಲಿ ಇದ್ದಂತೆ ಬಸ್ಸಿನಲ್ಲಿ ಕುಳಿತು, ನಿಧಾನವಾಗಿ ಪ್ರಾಣಿ ಪಕ್ಷಿ ಸಂಕುಲನ್ನು ನೋಡುತ್ತಾ,ಅವುಗಳ
ಸ್ವೇಚ್ಛಾವಿಹಾರವನ್ನು ನೋಡಿ ಆನಂದಿಸುತ್ತಾ ಹೋಗುತ್ತಿದ್ದೆವು. ಬಸ್ಸ್ ನ್ನು ಅಲ್ಲಿ ಇಲ್ಲಿ ಶಬ್ದವಿಲ್ಲದೆ ಫೊಟೋ
ಗಾಗಿ ನಿಲ್ಲಿಸುತ್ತಿದ್ದರು. ಇಲ್ಲಿ ಜಿರಾಫೆಗಳು, ಜಿಂಕೆಗಳು, ಕೃಷ್ಣಮೃಗಗಳು, ಹಿಂಡು ಹಿಂಡಾಗಿ ವಿಹರಿಸುತ್ತಿದ್ದವು.
ಕರಡಿಗಳು, ಕಾಡೆಮ್ಮೆಗಳು, ಹುಲಿಗಳು, ಸಿಂಹಗಳು, ನೀರಾನೆಗಳು, ಘೇಂಡಾಮಗೃಗಳು ಸಹ ಇದ್ದವು. ಇಲ್ಲಿರುವ
ಪ್ರಾಣಿ ಪಕ್ಷಿಗಳು ಫೋಟೊಗಳಿಗೆ ಒಳ್ಳೆ ಪೋಸ್ ಕೊಡುತ್ತಿದ್ದವು. ಬಿಳಿದು,ಕರಿದು, ಪಿಂಕ್ ಬಣ್ಣದ ಹಿಂಡು
ಹಿಂಡು ಕೊಕ್ಕರೆಗಳು, ಹಂಸಗಳು, ಇನ್ನು ಅನೇಕ ಪಕ್ಷಿಗಳು ಇದ್ದವು. ಈ ಸಫಾರಿ ವಲ್ಡ್ ಇನ್ನೊಂದು ಭಾಗದಲ್ಲಿ
ಉದ್ಯಾನವನವಿತ್ತು. ಇಲ್ಲಿ ಅನೇಕ ಶೋ ಗಳು ಇದ್ದವು. ಪಕ್ಷಿಗಳ ಮಾರ್ಚ ಫಾಸ್ಟ್, ಅನೇಕ ಚಮತ್ಕಾರಿ
ಅಟಗಳು ಇದ್ದವು. ಹಕ್ಕಿಗಳು ಕುಳಿತ ಪ್ರೇಕ್ಷಕರ ಕೈಯಲ್ಲಿ ಇದ್ದ ರಿಂಗ್ ಒಳಗೆ ವಿರುದ್ದ ದಿಕ್ಕಿನಿಂದ ಕ್ರಾಸ್
ಅಗಿ ಹಾರಿ ಕೊಂಡು ಹೋಗುತ್ತಿತ್ತು. ಅಲ್ಲೆ ಮಧ್ಯೆಯಲ್ಲಿ ನಿರ್ಮಿಸಿದ್ದ ಸ್ಟೇಜ್ ನಲ್ಲಿ, ಹಕ್ಕಿಗಳು ಬಾಲುಗಳನ್ನು
ಹೆಕ್ಕುವ ಕಾಂಪೀಟೇಷನ್, ಪ್ರೇಕ್ಷಕರ ಕೈಯಲ್ಲಿ ಹಣವನ್ನು ತೆಗೆದುಕೊಂಡು ಹೊಗುವುದು, ಇತ್ತು. ಬಿಳಿ ಗಿಣಿ
ಅ ದಿನ ಯಾರ ಹುಟ್ಟಿದ ದಿನವಿರುತ್ತೊ ಅವರನ್ನು ಅಭಿನಂದಿಸಿ ಹ್ಯಾಪಿ ಬರ್ತ್ ಡೆ ಹಾಡು ಹೇಳುತ್ತಿತ್ತು.ದೊಡ್ಡ
ಮುಂಗಟ್ಟೆ ಹಕ್ಕಿ ನಿದೇರ್ಶನ ಪ್ರಕಾರ ಗೂಡಿನಲ್ಲಿ ಹೆಣ್ಣು ಹಕ್ಕಿಯನ್ನು ಕೂರಿಸಿ, ಅಲ್ಲಿ ಆಹಾರ ಸರಬರಾಜು ಮಾಡುವುದು, ಶತ್ರು ಬಂದರೆ ಹೇಗೆ ಒಳಗಡೆ ಅಡಗಿ ಕುಳಿತು ಕೊಳ್ಳಬೇಕು ಎಂಬುದನ್ನು ತೋರಿಸಿತು. ಫೆಲಿಕಾನ್
ಹಕ್ಕಿಗಳ ಪೆರೇಡ್ ಅಯಿತು. ಅದರ ಜೊತೆ ನಾನು ಫೊಟೋ ತೆಗೆಸಿಕೊಂಡೆ.
ನಂತರ ಅಲ್ಲಿಂದ ನಾವು ಸೀ ಲಯನ್ ಶೋ ಗೆ ಹೊದೆವು. ಅವುಗಳ ಚಮತ್ಕಾರಿ ಅಟಗಳ
ಪದರ್ಶನವಾಯಿತು. ಎತ್ತರದಲ್ಲಿ ಕಟ್ಟಿದ್ದ ಚೆಂಡನ್ನು ನೀರಿನಿಂದ ಎದ್ದು ಹಾರಿ ಮುಟ್ಟುವುದು, ಹುಡುಗಿಯರು
ಹಿಡಿದುಕೊಂಡ ರಿಂಗ್ ಒಳಗೆ ಹಾರಿ ಬರುವುದು, ಎಲ್ಲಾವು ಒಟ್ಟಾಟ್ಟಾಗಿ ಹಾರುವುದು, ಒಬ್ಬನು ಅದರ ಮೇಲೆ
ಸವಾರಿ ಮಡಿಕೊಂಡು ಬರುವುದು, ಸ್ಟೇಜ್ ಮೇಲೆ ಬಂದು ಚಪ್ಪಾಳೆ ತಟ್ಟುವುದು, ಪ್ರೇಕ್ಷಕರ ಮುಂದೆ ಹಾದು
ಹೊಗುವುದು ಬಹಳ ರಂಜನೀಯವಗಿತ್ತು. ಇದು ಸಿಂಗಪುರಕ್ಕಿಂತ ಹೆಚ್ಚಿನ ಪಟ್ಟು ಚೆನ್ನಾಗಿತ್ತು.
ಇದರ ನಂತರ "ಡಾಲ್ಪಿನ್ ಶೋ"ಗೆ ಬಂದೆವು. ಇವುಗಳು ಸಹ ಬಹಳ ಚಮತ್ಕಾರಿ ಅಟವನ್ನು
ತೋರಿಸಿದವು. ಇದು ಸಹ ಬಹಳ ಚನ್ನಾಗಿತ್ತು. ನಂತರ ಅಲ್ಲಯೇ ಇದ್ದ ರೆಸ್ಟೋರೆಂಟ್ ನಲ್ಲಿ ಭೋಜನ
ವಾಯಿತು. ಜನನಿಬಿಡವಾಗಿತ್ತು. ಶೋ ಪ್ರಾರಂಭವಾಗುವ ಮುಂಚೆ ಶಾಲ ಮಕ್ಕಳಿಂದ ಹಾಡುಗಳು ಅಯಿತು.
ಹಾಡುಗಾರ ಇಂಡಿಯನ್ ಹಾಡು ಸಹ ಹೇಳಿದ. ಬಹಳಷ್ಟು ಜನರು ಕುಣಿದಾಡಿದರು. ಊಟದ ನಂತರ
ಸಿನಿಮಗಳಲ್ಲಿ ಸ್ಟಂಟ್ ಮ್ಯಾನ್ ಮಾಡುವ ಸಾಹಸಗಳನ್ನು ತೋರಿಸಿದರು. ಅಲ್ಲಿ ಸಾಹಸಮಯ ಸ್ಟಂಟ್ ಹಾಗು
ಶೂಟಿಂಗ್ ಚಮತ್ಕಾರಿಯಾಗಿತ್ತು.
ತದನಂತರ ಬಹಳ ಸುಂದರವಾದ ಶೋ. ಮಂಕಿ ಶೋ.ಓರಾಂಗಟೋ ಶೋ ನೋಡಲು ತೆರಳಿದೆವು.
ಮಾನವನಿಗೆ ಅತಿ ಹತ್ತಿರವಾದ ಬುದ್ದಿವಂತ, ವಾನರ ಜಾತಿಯ ಓರಾಂಗಟೋ ಶೋ ಪ್ರಾರಂಭವಾಯಿತು. ಮೊದಲು
ಇವುಗಳು ಶೋ ಮಂಟಪದ ಮೇಲಿಂದ ಜಾರಿಕೊಂಡು ಪ್ರವೇಶ ಮಾಡಿದವು. ಅವುಗಳ ಅಟ-ಪಾಟಗಳು, ಫುಟ್
ಬಾಲ್ ಅಟ, ಅರ್ಕೇಸ್ಸಟ್ರಾ ಇತ್ತು. ಬಾಕ್ಸಿಂಗ್‍ನಲ್ಲಿ ಅಂಫ್ಯರ್ ಕೆಲಸ, ಅಟವಾಡುವರು, ಫಾಸ್ಟ್ ಏಡ್ ಡಾಕ್ಠರ್,
ಎಲ್ಲಾವನ್ನು ಈ ಕೋತಿಗಳಿಂದ ಮಾಡಿಸಿದರು. ಸೋಗಸಾಗಿತ್ತು. ಎಲ್ಲಾವು ಅವುಗಳ ಚೇಷ್ಟೆಯನ್ನು ತೋರಿಸಿ
ಹೊಟ್ಟೆ ಹುಣ್ಣಾಗುವಂತೆ ನಗಿಸಿದವು. ಇದನೆಲ್ಲಾ ಮುಗಿಸಿಕೊಂಡು, ಸಂಜೆ ಹೊತ್ತಿಗೆ ಪಟ್ಟಾಯ ಊರನ್ನು
ತಲುಪಿದೆವು.
ಪಟ್ಟಾಯದಲ್ಲಿ "ಗೋಲ್ಡನ್ ಬೀಚ್ ಸ್ಟಾರ್"ಹೋಟೆಲ್ ನಲ್ಲಿ ನಮ್ಮ ವಾಸ್ತವ್ಯ. ರೂಮಲ್ಲಿ ನಮ್ಮ
ಲಗೇಜ್ ಇಟ್ಟು ತಯಾರಾಗಿ, ಕಾಪಿ ಮಾಡಿಕೊಂಡು ಕುಡಿದು, ಅಲ್ಕಾಝರ್ ಶೋ ನೋಡಲು ಹೊದೆವು. ಪಟ್ಟಾಯ
ಸಿಟಿ ಮೂಲಕ ಹೊದೆವು. ಮಾರ್ಗಮಧ್ಯೆಯಲ್ಲಿ ಸಿಟಿಯ ರಂಗನ್ನು, ಥಳಕನ್ನು, ನೋಡುತ್ತಾ ಮನ ಮುದಗೊಂಡಿತ್ತು. ಪಟ್ಟಾಯದಲ್ಲಿ ಜೀವನ ಪ್ರಾರಂಭವಾಗುವುದೆ ಸಂಜೆ 7 ಗಂಟೆ ನಂತರ, ಅದೂ ಬೆಳಗಿನ
ಝಾವದವರೆಗೆ ನಡೆಯುತ್ತೆ. ಇಲ್ಲಿಗೆ ಬರುವ ಪ್ರವಾಸಿಗರು ಕೇವಲ ಮನೋರಂಜನೆಗಾಗಿ, ಮಜಕ್ಕಾಗಿ ಬರುವರು.
ನಾವು ಹೊಗಿದ್ದ "ಅಲ್ಕಾಝರ್ ಶೋ" ಒಂದು ಥೀಯೇಟರ್ನಲ್ಲಿ ನಡೆಯಿತು. ಅದು ದಿನಕ್ಕೆ 4 ಶೋ ನಡೆಯುತ್ತೆ.
ಮುಂಚೆಯೆ ಕಾದಿರಿಸಿದ ಸ್ಥಳಗಳಲ್ಲಿ ನಾವು ಕೂತೆವು. ಸುಸರ್ಜಿತವಾದ ರಂಗಮಂಟಪ. ಕಂಪ್ಯೂಟರ್ ನಿಯಂತ್ರಿತ
ದೃಶ್ಯಾವಳಿಗಳು. ಇಲ್ಲಿಯ ಪ್ರದರ್ಶನ ಅತಿಶಯವಾಗಿತ್ತು. ಸುಮಾರು 1ವರೆ ಗಂಟೆಗಳ ಕಾಲ, ಎಡೆಬಿಡದೆ ಒಂದರ
ನಂತರ ಒಂದು ನಡೆಯಿತು. ಕಲಾವಿದರು ಬಹಳ ಸುಂದರವಾದ ಥರಥಳಿಸುವ ಅಕರ್ಷಣೀಯ ಉಡುಗೆ ತೊಡುಗೆ
ತೊಟ್ಟು, ತಲೆಯ ಮೇಲೆ ಕೀರಿಟಗಳು ಸಹ ಬಹಳ ಆದ್ಧುತವಾಗಿತ್ತು. ತೈಲಾಂಡ್ ಸಾಂಸ್ಕøತಿಕ ಕಾರ್ಯಕ್ರಮಗಳು
ನೃತ್ಯಗಳು ವೈಭನ ಪೂರಕವಾಗಿ ನಡೆಯಿತು. ಕಾಸ್ಟುಮ್ ಗಳು ಬಹಳ ಚೆನ್ನಾಗಿತ್ತು. ಅತಿಶಯನಾದ ಪ್ರದರ್ಶನ.
ಎಲ್ಲರು ಉತ್ತಮವಾದ ಪಾತ್ರ ವಹಿಸಿದರು. ನೃತ್ಯಗಳು ಸ್ವರ್ಗ ಲೋಕವನ್ನು ಜಾÐಪಿಸುತಿದ್ದವು. ಸ್ಟೇಜ್ ಮೇಲೆಯೆ
ಅನೆ ಅಂಬಾರಿಗಳು ಬಂದವು. "ನಚ್ ಬಲೀಯೆ" ಸಿನಿಮಾದ ಒಂದು ಹಾಡು ಇತ್ತು. ನೃತ್ಯದ ನಂತರ ಅವರು
ಗಳ ಜೊತೆ ನಿಂತು ಫೋಟೊ ತೆಗಿಸಿಕೊಳ್ಳಬಹುದಿತ್ತು. ನೃತ್ಯಮಾಡಿದ ಹೆಣ್ಣುಗಳೆಲ್ಲಾ "ಬಾಯ್ ಗಲ್ಸ್" ಗಳು.
ನಪುಂಸಕರು. ಇಲ್ಲಿಯ ಸರ್ಕಾರ ಇವರನ್ನು ಗೌರವಿಸುತ್ತದೆ. ಇದನ್ನು ನಡೆಸುವವರು ಪ್ರ್ಯೆವೇಟ್ ನವರು.
ಬಹಳ ಸುಂದರವಾದ ಇವರನ್ನು ಮನೋರಂಜನೆಗೆ ಉಪಯೋಗಿಸುತ್ತಾರೆ. ಅವರುಗಳು ಸಂತೋಷದಿಂದ ಮಾಡು
ತ್ತಾರೆ. ನಮ್ಮಲ್ಲಿ ಇಂತವರು ಬೀದಿಸುತ್ತಿ ಬಿಕ್ಷೆ ಬೇಡುವಂತಾಗಿದೆ, ಇವರ ತಪ್ಪಿಲ್ಲದೆ ಸೃಷ್ಟಿಯ ವಿಚಿತ್ರಕ್ಕೆ. ಇಲ್ಲಿ
ಅವರು ಬಹಳ ಚೆನ್ನಾಗಿ, ಸ್ವತಂತ್ರವಾಗಿ ಜೀವಿಸುತ್ತಾರೆ. ಇದರ ನಂತರ ನಾವುಗಳು ಭಾರತೀಯ ಭೋಜನ
ಮುಗಿಸಿಕೊಂಡು ಹೋಟೆಲ್‍ಗೆ ವಾಪಸ್ಸು ಬಂದೆವು.
16ನೇ ದಿಸೆಂಬರ್ 2015 ಈ ದಿನ ಪಟ್ಟಾಯದಲ್ಲಿ ಅತ್ಯಂತ ಬಿಸಿಯಾದ ದಿನ. ಬೆಳಿಗ್ಗೆ ಉಪಹಾರ
ದ ನಂತರ, "ಕೋರಲ್ ಐಲ್ಯಾಂಡ್"ಗೆ ಮೋಟರ್ ಬೋಟ್ನಲ್ಲಿ ಪ್ರಯಾಣ. 2 ಮೋಟರ್ ಬೋಟ್ ಗಳಲ್ಲಿ 2 ಗಂಟೆಗಳ ಪ್ರಯಾಣ. ಮಾರ್ಗ ಮದ್ಯೆಯಲ್ಲಿ ನಿಲ್ಲಿಸಲಾಗಿದ್ದ ಇನ್ನೊಂದು ಬೋಟ್ನಲ್ಲಿ ಪ್ಯಾರಸೇಲಿಂಗ್ ನೋಡುವ
ಮಾಡುವ ಅಟ್ಟಣಿಗೆಯು ಇತ್ತು. ಇಲ್ಲಿಗೆ ಒಂದರಿಂದ ಇನ್ನೊಂದಕ್ಕೆ ದಾಟಿದೆವು. ಇಲ್ಲಿ ಪ್ಯಾರಸೆಲೀಂಗ್‍ಗೊಸ್ಕರ
"ಕ್ಯೂ" ಇತ್ತು. ಅದರಲ್ಲಿ ಹಲವಾರು ಸಹ ಪ್ರಯಾಣಿಕರು ಭಾಗಹಿಸಿದರು. ನಾವುಗಳು ಸಮುದ್ರದ ಭೋರ್ಗೆರೆತ
ಹಾಗು ಪ್ಯಾರ ಸೇಲಿಂಗ್ ದೃಶ್ಯವನ್ನು ನೋಡಿ ಸಂತೋಷಪಟ್ಟೆವು. ಪ್ರತಿಯೊಬ್ಬರು ಒಬ್ಬೊಬ್ಬರಾಗಿ. ಅವರಿಗೆ
ಕಟ್ಟಿದ ಪ್ಯಾರಚೂಟ್ನಲ್ಲಿ ನಿಂತು, ಇನ್ನೊಂದು ಬೋಟ್ ಅದನ್ನು ಎಳೆದುಕೊಂಡು ಹಾರಿದಾಗ, ಸಮುದ್ರದ ಮೇಲೆ
ಕೆಲವು ನಿಮಿಷಗಳ ಕಾಲ, ಕಾಲು ಬಿಟ್ಟು ನಿಂತು ಹೆಗಲಿನಲ್ಲಿ ಕಟ್ಟಿದ ಪ್ಯಾರಚೂಟ್ನಿಂದ ಹಾರಾಡಿ, ಮತ್ತೆ ಇದೇ
ಅಟ್ಟಣಿಗೆಗೆ ವಾಪಸ್ಸು ಬರುವುದು. ಇದು ಸತತವಾಗಿ ನಡೆಯುತ್ತಿತ್ತು. ಸಮುದ್ರದ ಮೇಲೆಲ್ಲಾ ಇಂತಹದೆ
ಹಾರಟಗಳು ಏರ್ಪಾಡಗಿತ್ತು. ಅಟ್ಟಣಿಗೆ ಇರುವ ದೋಣಿ ಕೇವಲ ಪ್ಯಾರಸೇಲಿಂಗ್ ಟೇಕ್ ಅಫ್ ಮತ್ತು ಲ್ಯಾಂಡ್
ಅಗಲು ಮಾತ್ರ. ಮತ್ತೆ ಇನ್ನೊಂದು ದೋಣಿಗೆ ಬದಲಾಯಿಸಿ ಕೋರಲ್ ಐಲ್ಯಾಂಡ್ ಕಡೆಗೆ ಪ್ರಯಾಣಿಸಿದೆವು.

ಸಮುದ್ರ ರೋಚಕವಾಗಿತ್ತು. ಅಲೆಗಳ ಹ್ಯೊದಾಟದಿಂದ, ವೇಗವಾಗಿ, ರುದ್ರ ರಮಣೀಯವಾದ,
ಸಮುದ್ರದ ಮೇಲೆ ಸಾಗುತ್ತಿತ್ತು. ಸತ್ತಲು ನೀರೇ ನೀರು. ಯಾನ ಚೆನ್ನಾಗಿತ್ತು. ಇದೇ ರೀತಿಯ ನೂರಾರು
ದೋಣಿಗಳು ಚಿಕ್ಕವೂ, ದೊಡ್ಡವು, ವರ್ಣರಂಜಿತವಾದವು ಅಕ್ಕ ಪಕ್ಕದಲ್ಲಿ ಸಾಗುತ್ತಿತ್ತು. "ಕೋರಲ್ ಐಲ್ಯಾಂಡ್"
ಒಂದು ದ್ವೀಪ. ಇದು ಹವಳದ ದಿಬ್ಬ. ಅಂಡಮಾನ್ ನಿಕೋಬಾರ್ ಸಮುದ್ರ ಹಾಗು ತೈಲ್ಯಾಂಡ್ ಸಮುದ್ರದ
ಮಧ್ಯೆ ಇದೆ. ಕೋರಲ್ ಐಲ್ಯಾಂಡ್ ತಲುಪಿದಾಗ 11 ಗಂಟೆ. ಅಲ್ಲಿ ಸಮುದ್ರದ ಸ್ನಾನ ಮಾಡಿ ವಿಹರಿಸಿದೆವು.
ಸಮುದ್ರದ ನೀರು ಸ್ಪಟಿಕದಂತೆ ಶುಭ್ರವಾಗಿತ್ತು. ಬಿಳಿಯ ಮರಳುಗಳು. ಸ್ನಾನದ ನಂತರ ಅಘ್ಯ ಕೊಟ್ಟು,
ಅಲ್ಲಿಯೇ ವಿಶ್ರಾಂತಿಸಿದೆವು. ಕೆಲವರು ಸಮುದ್ರದ ಒಳಗೆ ಓಷನ್ ಡೈವ್‍ಗೆ ಅಕ್ಸಿಜನ್ ಮಾಸ್ಕ ಹಾಕಿಕೊಂಡು
ನೋಡಿ, ಇಲ್ಲಿಗೆ ಬಂದು ಸೇರಿದರು. ಎಲ್ಲಾರು ಸೇರಿ ಮೋಟರ್ ಬೋಟ್ ನಿಂದ ಪಟ್ಟಾಯಕ್ಕೆ ವಾಪಸ್ಸು ಪ್ರಯಾಣ
ಮಾಡಿದೆವು. ಭಾರತೀಯ ಭೋಜನ ಮುಗಿಸಿಕೊಂಡು, ಸುಮಾರು 30 ಕಿ.ಮೀ. ದೂರದಲ್ಲಿರುವ "ನೂಂಗ್ ನೂಚ್"
ಗ್ರಾಮಕ್ಕೆ ಪ್ರಯಾಣ. ಸುಮರು 500 ಎಕರೆ ಜಾಗದಲ್ಲಿ ವಿಕಸಿತವಾಗಿರುವ ತೋಟ. ತರ ತರದ ಗಿಡಗಳು,
ಮಾನವ ನಿರ್ಮಿತ, ಸಹಜವೋ ಎಂಬಂತೆ ಇರುವ ಎಲ್ಲಾ ತರಹ ಪ್ರಾಣಿಗಳ ಗುಂಪುಗಳು, ಟೆರಕೋಟ ಕಪ್
ಮತ್ತು ಸಾಸರ್ ಗಳಿಂದ ಮಾಡಲ್ಪಟ್ಟ ಆನೇಕ ಕಲಾತ್ಮಕ ಕೃತಿಗಳು ಎಲ್ಲ ಕಡೆ ಇದ್ದವು. ಪ್ರಾಣಿಗಳು ಸುಂದರ
ವಾಗಿತ್ತು. ಅವುಗಳದೇ ಪ್ರಪಂಚವೇನೋ ಅನ್ನುವಷ್ಟು ಪ್ರಾಣಿಗಳು ತುಂಬಿತ್ತು.
ಅಲ್ಲಿಂದ ಸೀದ ನಾವು "ತೈಲ್ಯಾಂಡ್ ಕಲ್ಚರಲ್ ಶೋ"ಗೆ ಬಂದೆವು. ಇಲ್ಲಿಯೂ ಸಹ ಅಲ್ಲಿಯ
ಸಾಂಸ್ಕ್ರತಿಕ ಕಾರ್ಯಕ್ರಮಗಳು ಅಯಿತು, ಇಲ್ಲಿಯೂ ಅನೆ ಅಂಬಾರಿ ಸ್ಟೇಜ್ ಮೇಲೆ ಅಯಿತು. ನಂತರ ನಾವು
ಅದರ ಹಿಂದೆಯೇ ಇದ್ದ "ಎಲಿಫೆಂಟ್ ಶೋ"ಗೆ ಹೋದೆವು. ಇಲ್ಲಿ ಅನೆಗಳಿಗೆ ಹಳದಿ ಬಟ್ಟೆಯಿಂದ ಅಲಂಕೃತ
ಗೊಳಿಸಿ, ಅವುಗಳಿಂದ ನಾನಾ ತರಹದ ಸರ್ಕಸ್‍ನಂತೆ ಅಟ-ಪಾಟಗಳನ್ನು ಮಾಡಿಸಿದರು. ಫುಟ್ ಬಾಲ್ ಅಟ
ಗಾಡಿ ಓಡಿಸುವುದು, ಒಂದರ ಬಾಲ ಒಂದು ಹಿಡಿದುಕೊಂಡು ಪೆರೇಡ್ ಮಾಡಿದವು. ಸುಮಾರು 50 ಅನೆಗಳು
ಇದರಲ್ಲಿ ಭಾಗನಹಿಸಿದವು. ಇದರ ನಂತರ ಉದ್ಯಾನವನದಲ್ಲಿ ವಿಹರಿಸಿ ನಮ್ಮ ಬಸ್ಸುಗೆ ವಾಪಸ್ಸು ಬಂದೆವು.
ಅಲ್ಲಿಂದ ಹೊರಟು ಪಟ್ಟಾಯಕ್ಕೆ ಬಂದು, "ಮಹಾಲಕ್ಷ್ಮಿ ಹೋಟಲ್" ನಲ್ಲಿ ಊಟಮುಗಿಸಿ, ಹೋಟೆಲ್ಗೆ ವಾಪಸ್ಸು
ಅದೆವು.
ತೈಲ್ಯಾಂಡ್ ಬಾಡಿ ಮಸಾಜ್ ಗೆ ಪ್ರಸಿದ್ಧಿ. ಕೆಲವರು ಮಾಡಿಸಿಕೊಂಡರು. ಹೋಟಲ್ ರೂಮಿನಲ್ಲಿ
ನಮ್ಮೆಲ್ಲಾ ಲಗೇಜ್ ಪ್ಯಾಕ್ ಮಾಡಿಕೊಂಡು, ಒಂದು ಜೊತೆ ಬಟ್ಟೆ ಹಾಗು, ಫ್ರಸಾಧನ ಸಾಮನು,ಅತ್ಯವಶ್ಯಕ
ಸಾಮಗ್ರಿಯನ್ನು ಪ್ರತ್ಯೇಕವಾಗಿ ಇಟ್ಟು ಕೊಂಡೆವು.
ಈ ದಿನ 17ನೇ ಡಸೆಂಬರ್ 2015. ಮುಂಜಾನೆ ಮಾಮುಲಿನಂತೆ ಎದ್ದು, ಉಪಹಾರ ಮಾಡಿ,
ಸುಮಾರು 9 ಗಂಟೆಯ ಹೊತ್ತಿಗೆ ನಮ್ಮೆಲ್ಲಾ ಭಾರಿ ಲಗೇಜ್ ಗಳನ್ನು ಬಸ್ಸ್ ಡಿಕ್ಕಿಯಲ್ಲಿ ಹಾಕಿ, ನಾವು ತೆಗೆದು
ಕೊಂಡಿದ್ದ ಸಣ್ಣ ಲಗೇಜ್‍ನನ್ನು ತೆಗೆದುಕೊಂಡು ಬಸ್ಸ್ ಏರಿದೆವು. ಅಲ್ಲಿಂದ ಸುಮಾರು 10ವರೆ ಹೊತ್ತಿಗೆ
"ಜೆಮ್ ಫ್ಯಾಕ್ಟರಿಗೆ" ಬೇಟಿ ನೀಡಿದೆವು. ಇಲ್ಲಿ ಗಣಿಗಳಿಂದ ನವರತ್ನವನ್ನು ತೆಗೆಯುವ, ಅವುಗಳನ್ನು ಶೋಧಿಸುವ,
ಶುದ್ಧಿ ಗೊಳಿಸುವ, ಆಭರಣ ಮಾಡುವ ಪ್ರಕ್ರಿಯೆಯನ್ನು ತೋರಿಸುವ ವ್ಯವಸ್ಥೆ ಇತ್ತು. ಟ್ರಾಲಿಯಲ್ಲಿ ಕುಳಿತು,
ಅದು ಚಲಿಸುತ್ತಿದ್ದಂತೆ, ಗಣಿಯೊಳಗೆ ನಡೆಯುವ ದೃಶ್ಯಾವಳಿಯನ್ನು ಸಹಜ ಸ್ಥಿತಿಯಲ್ಲಿ ನೋಡಿದೆವು. ಸಹಜ
ಸ್ಥಿತಿಯಂತೆ ಮಾಡಿ ನಿರ್ಮಿಸಲಾಗಿತ್ತು. ಮಾರ್ಗದ ಉದ್ದಕ್ಕೂ ಒಳಗಡೆ ನಡೆಯುವ ಕೆಲಸ ಕಾರ್ಯಗಳ ಮಾಹಿತಿ
ಯನ್ನು ಧ್ವನಿ ವರ್ದಕ ಮೂಲಕ ತಿಳಿಸಲಾಗುತ್ತಿತ್ತು. ಸುತ್ತಲು ಕತ್ತಲೆಯ ವಾತಾವರಣ. ನಂತರ ಟ್ರಾಲಿಯಿಂದ
ಇಳಿದು ಬಂದು, ಗಣಿಗಳಿಂದ ತೆಗೆದ ಮುತ್ತು, ರತ್ನ, ಹವಳವನ್ನು, ಹೇಗೆ ಪರಿಷ್ಖರಿಸಿ,ಶುದ್ದೀಕರೀಸಿ, ಆಭರಣವನ್ನು
ಮಾಡುವ ಹಾಗು ಅಮೂಲ್ಯವಾದ ಕಲ್ಲುಗಳನ್ನು ಹೊಳಪಿಸುವ ಕಾರ್ಖಾನೆಯತ್ತ ನಡೆದೆವು. ಅಲ್ಲಿ ಕಾರ್ಮಿಕರು
ಮಾಡುವ ಕೆಲಸವನ್ನು ಕಣ್ಣಾರೆ ನೋಡಿ ಆಶ್ಛರ್ಯ ಚಕಿತರಾದೆವು. ಅನಂತರ ಅಲ್ಲಿಂದ ಶಾಪಿಂಗ್ ಕಾಂಪ್ಲೆಕ್ಸ್ಗೆ
ಬಂದೆವು. ಎಲ್ಲಾರ ಶಾಪಿಂಗ್ ಪ್ರಾರಂಭವಾಯಿತು. ಅವರ ಹತ್ತಿರ ಸಿಗುವುದು ರೂಬಿ, ಮುತ್ತುಗಳು, ಹಾಗು
ಹವಳಗಳು. ನಾನು ಒಂದು ಸ್ಟಿಂಗ್ ಫ್ರೆಶ್ ವಾಟರ್ ಮುತ್ತುಗಳನ್ನು ತೆಗೆದುಕೊಂಡೆ. ಇಲ್ಲಿ ಬೆಳ್ಳಿಯಿಂದ
ಆಭರಣವನ್ನು ಮಾಡಿ ವೈಟ್ ಗೋಲ್ಡ್ ಅನ್ನುವರು. ಗೋಲ್ಡ್ 18 ಕ್ಯಾರೆಟ್ ಇರುತ್ತೆ. ಜೆಮ್ ಫ್ಯಾಕ್ಟರಿ
ನಂತರ ನಾವುಗಳು ಬ್ಯಾಂಗ್ ಕಾಂಕ್ ಕಡೆಗೆ ಹೊರೆಟೆವು. ಮಾರ್ಗಮಧ್ಯೆಯಲ್ಲಿ ಭೋಜನವಾಯಿತು. ಸುಮಾರು
5ವರೆ ಹೊತ್ತಿಗೆ ಸುವರ್ಣ ಭೂಮಿ ಏರ್ ಪೊರ್ಟ್ ತಲುಪಿದೆವು. ಲೌಂಜ್ ನಲ್ಲಿ ಎಲ್ಲಾರು ತಮ್ಮಲ್ಲಿ ಇದ್ದ
ಕುರುಕುಲು ತಿಂಡಿಯನ್ನು ಪರಸ್ಪರ ಹಂಚಿಕೊಂಡೆವು. ನಂತರ ನಿಲ್ಧಾಣದ ಔಪಚಾರಿಕತೆಯನ್ನು ಮುಗಿಸಿಕೊಂಡು,
ನಮ್ಮ ವಿಮಾನ ಹೊರಡುವ ಗೇಟ್ ಬಳಿ ಬಂದೆವು. ಸಾಕಷ್ಟು ಹೊತ್ತು ಕುಳಿತ ನಂತರ ನಮ್ಮ ವಿಮಾನ 1ವರೆ
ಗಂಟೆ ತಡವಾಗಿದೆ ಎಂದು ತಿಳಿದುಬಂತು. ಜೊತೆಗೆ ಗೇಟ್ ನಂಬರ್ ಸಹ ಬದಲಾಣೆಯಾಗಿತ್ತು. ಹೊಸ
ಗೇಟ್‍ಗೆ ಸಾಕಷ್ಟು ದೂರ ನಡೆದುಕೊಂಡು ಬಂದೆವು. ಮಿಮಾನವು 12ರ ಹೊತ್ತಿಗೆ ಹೊರಟಿತು. ವಿಮಾನದಲ್ಲಿ
ಆಹಾರ ಸರಬರಾಜು ಅಯಿತು. ಸುಮಾರು 3ವರೆ ಗಂಟೆಗಳ ಪ್ರಯಾಣ. ಮದ್ಯರಾತ್ರೆ 2 ಗಂಟಗೆ ಶೀಲಂಕಾ
"ಭಂಢಾರ ನಾಯಕ" ಎರ್ ಪೋರ್ಟ್‍ಗೆ ಬಂದು ತಲುಪಿದೆವು. ಅಲ್ಲಿ ನಮಗಾಗಿ ಕಾಯುತ್ತಿದ್ದ ಎರ್ ಲೈನ್ ಬಸ್ಸ್
ನಿಂದ "ನೆಗ್ಯಾಂಬೋ" ದಲ್ಲಿರುವ ಎರ್ ಲೈನ್ ಹೋಟೆಲ್ಗೆ ಬಂದು ವಿಶ್ರಾಂತಿ ಪಡೆದೆವು.
ಈ ದಿನ 18ನೇ ಡಿಸೆಂಬರ್ 2015, ನಮ್ಮ ಪ್ರವಾಸದ ಕೊನೆಯ ದಿನ. ನಾವುಗಳು ಶ್ರೀಲಂಕಾದ
ಏರ್ ಲೈನ್‍ನ ಆತಿಥಿಗಳು. ನಮ್ಮ ಎಲ್ಲಾ ಪ್ರಯಾಣವು ಶ್ರೀಲಂಕಾದ ಎರ್ ಲೈನ್ ಅದ್ದರಿಂದ ಎರ್ ಲೈನ್
ನವರು, ಎಲ್ಲಾ ಸೌಕರ್ಯವನ್ನು ಉಚಿತವಾಗಿ ಕೊಟ್ಟಿದ್ದಾರೆ. ನಾವುಗಳು ಬೆಳಿಗ್ಗೆ ಲೇಟಾಗಿ ಎದ್ದು, ಸ್ನಾನದಿಗಳನ್ನು
ಮುಗಿಸಿ, ಉಪಹಾರ ಮಾಡಿಕೊಂಡು, ಬೀಚಿಗೆ ಹೊದೆವು. ಹೋಟೆಲ್ ಹೆಸರು "ಬೀಚ್ ಹೋಟೆಲ್". ಅಂದು
ನಾವು ಕೊಲೊಂಬೊ ವಿಹಾರಕ್ಕೆ ಹೊಗಬೇಕಾಗಿತ್ತು. ಅದರೆ ಅಂದು ಬಂದ್ ಇದ್ದ ಪ್ರಯುಕ್ತ ನಾವುಗಳು
ಹೋಗಲಿಲ್ಲ. ಅದರೆ ಸುತ್ತಮುತ್ತ ಇದ್ದ ಉದ್ಯಾನವನದಲ್ಲಿ ಬೀಚ್‍ನಲ್ಲಿ ಸಂತೋಷವಾಗಿ ಕಾಲ ಕಳೆದೆವು.
ಸುಮರು 1 ಗಂಟೆಗೆ ಭೋಜನ ಮುಗಿಸಿ, 2 ಗಂಟೆ ಹೊತ್ತಿಗೆ ವಿಮಾನ ನಿಲ್ದಾಣವನ್ನು ಸೇರಲು ಹೊರೆಟೆವು.
ಅಲ್ಲಿ ಔಪಚಾರಿಕತೆಯನ್ನು ಮುಗಿಸಿ, ಬೆಂಗಳೂರಿಗೆ ಹೊರಡುವ ಮಿಮಾನವನ್ನು ಏರಿ ಸುಮಾರು 6 ಮುಕ್ಕಾಲುಗೆ
ಬೆಂಗಳೂರು ಕಡೆಗೆ ಪ್ರಯಾಣಿಸಿದೆವು. ವಿಮಾನದಲ್ಲಿ ಉಪಹಾರವಾಯಿತು. 7.55 ಕ್ಕೆ ಕೆಂಪೆಗೌಡ ವಿಮಾನ
ನಿಲ್ದಾಣಕ್ಕೆ ಬಂದೆವು. ಔಪಚಾರಿಕತೆಯನ್ನು ಮುಗಿಸಿಕೊಂಡು, ಲಗೇಜ್ ತೆಗೆದುಕೊಂಡು, ಹೊರಗೆ ಬರುವ
ಹೊತ್ತಿಗೆ 8.45 ಆಯಿತು. ಸಹ ಪ್ರಯಾಣಿಕರಿಗೆ ವಿದಾಯ ಹೇಳಿ, ನಾವು ಯಲಹಂಕಕ್ಕೆ ಟ್ಯಾಕ್ಸಿಮಾಡಿಕೊಂಡು
ರಾತ್ರೆ 9.20 ಕ್ಕೆ ಮನೆ ತಲುಪಿದೆವು. ಭಗವಂತನ ದಯೆಯಿಂದ ನಮ್ಮ ಪ್ರಯಾಣ ಉದ್ದಕ್ಕೂ ನಮ್ಮ ಆರೋಗ್ಯ
ಚೆನ್ನಾಗಿತ್ತು. ಯಾವುದೇ ತೊಂದರೆ ಅಗಲಿಲ್ಲ.
ಈಗ ವಿದೇಶ ಪ್ರವಾಸ ಮಾಡಲು ಬೇಕಾದಷ್ಟು ಟ್ರಾವಲ್ ಏಜೆಂಟ್‍ಗಳು, ಕಂಪೆನಿಗಳು, ಇವೆ.
ನಮ್ಮ ಶಕ್ತಿ ಹಾಗು ಬಜೆಟ್ ಅನುಸಾರ ಹೊಗಬಹುದು. ಎಲ್ಲವನ್ನು ಕಂಪೇರ್ ಮಾಡಿಕೊಂಡು ಯಾವುದರಲ್ಲಿ
ಅನುಕೂಲವೊ ಅದರಲ್ಲಿ ಹೊಗಬಹುದು. 60ತ್ತ ಕ್ಕಿಂತ ಹೆಚ್ಚು ವಯಸ್ಸಿನವರು ಕೆಲವು ಕಡೆ ಹೊಗಲು
ಅಗುವುದಿಲ್ಲ. ಅಂಡರ್ ವಾಟರ್, ಪ್ಯಾರ ಸೇಲಿಂಗ್ ಮೊದಲದವುಗಳು. ಕೆಲವುದನ್ನು ಬೇರೆ ದೇಶಗಳಲ್ಲಿ
ನೋಡಿರುತ್ತೆವೆ. ಅದಕೊಸ್ಕರ ಯಾವುದರಲ್ಲಿ ನಮಗೆ ಅಫ್‍ಶನ್ ಇರುತ್ತೊ ಅಲ್ಲಿ ಹೊದರೆ ಸರಿ. ಕೆಲವು
ಕಡೆ ನಮಗೆ ಅಗುತ್ತೊ ಇಲ್ಲವೊ ಎಲ್ಲವನ್ನು ಕಡ್ಡಾಯಮಾಡಿ ಹಣವನ್ನು ಮೊದಲೆ ತೆಗೆದುಕೊಳ್ಳುತ್ತಾರೆ.
ಎಲ್ಲಾವನ್ನು ವಿಚಾರಿಸಿ ಹೊಗಬೇಕು. ಈ ಸಲ ನಾವು "ಆನಂದ ವಿಹಾರಿ" ಟ್ರಾವೆಲ್ಸ್ ಮೂಲಕ ಹೊಗಿದ್ದು.
12 ದಿನ ಪ್ರಯಾಣ. ಖರ್ಚು 95,000 ರೂ, ಒಬ್ಬರಿಗೆ. ಎಲ್ಲದೂ ಸೇರಿ. ಪ್ರಯಾಣ ತೃಪ್ತಿ ಕೊಟ್ಟಿತ್ತು ನಮಗೆ.
************************
No comments:
Post a Comment