ಮಧ್ಯ ಏಷಿಯದ ಪ್ಯಾರಿಸ್ ಎಂದು ಕರೆಯಲ್ಪಡುವ, ದುಬೈಗೆ ನಾನು ಮತ್ತು ನನ್ನಯಜಮಾನರು
ಮಾರ್ಚ್ 8ನೇ ತಾರೀಖು 2012 ಸಂಜೆ 6ವರೆಗೆ, ಬೆಂಗಳೂರಿನಿಂದ ಹೊರಡುವ ಎಮಿರೇಟ್ಸ್ ಏರ್ ಬಸ್ಸುನಿಂದ
ಟೀಕೆಟ್ ಕಾದಿರಿಸಿ, ಮನೆಯನ್ನು ಮದ್ಯಾನ್ಹ3ವರೆಗೆ ಬಿಟ್ಟು ಹೊರೆಟೆವು.
2 ದಿನ ದಿಂದ ಮನೆಯಲ್ಲಿ ಪ್ಯಾಕಿಂಗ್, ಮಗಳಿಗೆ ಎಲ್ಲಾ ತರಹದ ಪುಡಿಗಳು, ಹೂವು, ಸ್ವಲ್ಪ
ಸಿಹಿ, ನಮ್ಮ ಬಟ್ಟೆಗಳು 2 ಸೂಟ್ ಕೇಸ್ ಸೇರಿತು. ಹಪ್ಪಳ ಸಂಡಿಗೆಗಳು ಒಂದು ಕಿಟ್ ಬ್ಯಾಗ್. ನೋಡಲು
ಬಹಳ ದೊಡ್ಡದಾಗಿ ಕಾಣುತಿತ್ತು. ಎಳೆದು ತರುವ ಮಾರ್ಕೋಪೋಲೋ ಹಾಗು ಅಮೇರಿಕನ್ ಸೂಟ್ ಕೇಸ್.
ಅದರ ಗಾತ್ರ ನೋಡಿದ್ರೆ ಏನೋ ಒಂದು ಕ್ವಿಂಟಲ್ ಇದೆಯೆನೋ ಅನ್ನಿಸುತ್ತಿತ್ತು. ತೂಗಿದರೆ ಮೂರು ಸೇರಿ
30 ಕೆ.ಜಿ. ಕೈಯಲ್ಲಿ ಇಬ್ಬರಲ್ಲೂ ಹ್ಯಾಂಡ್ ಬ್ಯಾಗ್, ಅದರಲ್ಲಿ ಹೂವುಗಳು. ಒಬ್ಬೊಬ್ಬರು 30 ಕೆ.ಜಿ. + 7 ಕೆ.ಜಿ.
ತೂಕ ತೆಗೆದುಕೊಂಡು ಹೊಗಬಹುದಿತ್ತು. ಏರ್ ಪೋರ್ಟ್ ಹೊದ ತಕ್ಷಣ, ಅಲ್ಲಿ ಪಾಸ್ ಪೋರ್ಟ್ ಚೆಕ್ ಅಪ್
ಅಗಿ, ಬೋರ್ಡಿಂಗ್ ಪಾಸ್ ಸಿಕ್ಕಿ ವಿಮಾನ ಹತ್ತಲು ಹೊರೆಟೆವು. ನಮ್ಮ ಜೊತೆಗೆ ನಮ್ಮ ಸ್ನೇಹಿತರ ತಾಯಿ
86 ವರುಷದವರು ಬಂದ್ದಿದ್ದರು. ವಯಸ್ಸಾದವರಿಗೆ ಮೊದಲು ಪ್ರವೇಶ. ಆಕೆ ವೀಲ್ ಚೇರ್ ನಲ್ಲಿ ಕುಳಿತಿದ್ದು,
ನಾವು ಅವರನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದರಿಂದ ಬೇಗ ಪ್ರವೇಶವಾಯಿತು. ಗಗನ ಸಖಿಯರು
ಸ್ವಾಗತಿಸಿ ನಮ್ಮ ನಮ್ಮ ಜಾಗ ತೋರಿಸಿದರು. ಮೊದರ ವಿಮಾನ ಪ್ರಯಾಣ. ಕುತೂಹಲವಾಗಿ ಕಾಯುತ್ತಿದ್ದೆವು.
ನನ್ನ ಸೀಟ್ ಕಿಟಿಕಿಯ ಪಕ್ಕದ್ದು. ಇನ್ನು ಹಗಲಿತ್ತು. ಸೀಟ್ ಬೆಲ್ಟ್ ಹಾಕಿಕೊಳ್ಳಲು ಅನೌಸ್ಸ್ ಮಾಡಿದರು.
ವಿಮಾನದ ರೆಕ್ಕೆಗಳು ಮುಚ್ಚುತ್ತಿದ್ದಹಾಗೆ ರನ್ ವೇಯಲ್ಲಿ ಓಡಿ ಮೇಲೇರಿದಾಗ ಯಾವ ಜರ್ಕ್ ಸಹ ಅಗದೆ
ವಿಮಾನ ನಿಧಾನ ನಿಧಾನವಾಗಿ ಮೇಲೇರಿದುದು ಗೊತ್ತೇಅಗಲಿಲ್ಲ.
ಕುಳಿತ ಸೀಟ್ ಮುಂದೆ ಟಿವಿ ಡಿಸ್‍ಪ್ಲೆ ಸ್ಕ್ರಿನ್ನಲ್ಲಿ, ಪೈಲೇಟ್‍ನ ಸುಸ್ವಾಗತ, ಗ್ಲೋಬಲ್ ಮ್ಯಾಪ್,
ಪ್ಲೆನ್ ಎಷ್ಟು ಎತ್ತರದಲ್ಲಿ ಹಾರುತ್ತಿದೆ, ಯಾವ ಸ್ಪೀಡ್ನಲ್ಲಿ, ಯಾವ ಪಾಯಿಂಟ್ನಲ್ಲಿ ಇದೆ, ತಾಪಾಮಾನ ಏಷ್ಟು,
ಎಲ್ಲಾ ತೋರಿಸುತ್ತಿತ್ತು. ಸೇಫ್ಟಿ ರೂಲ್ಸ್, ಕಾಲುಗಳಿಗೆ ನೋವು ಬಂದರೆ, ಕುಳಿತಲ್ಲೆ ಮಾಡುವ ವ್ಯಾಯಾಮ,
ತೋರಿಸಲಾಗುತ್ತಿತ್ತು. ದುಬೈ 2965ಕಿ.ಮಿ. 3 ಗಂಟೆ ಪ್ರಯಾಣ. 650 ರಿಂದ 750 ಕಿ.ಮಿ. ಪ್ರತಿ ಗಂಟೆಗೂ
ವೇಗ. ಕಿಟಿಕಿಯಿಂದ ನೋಡಿದಾಗ, ಭಾರತೀಯ ಕಾಲಮಾನದ ಪ್ರಕಾರ 7ವರೆ ವರೆಗೂ ಬೆಳಕಿತ್ತು. ಸೂರ್ಯಸ್ತ
ಬಹಳ ಚನ್ನಾಗಿ ಕಾಣುತ್ತಿತ್ತು. ಕೆಳಗೆ ಗೋವ ಹತ್ತಿರ ಲೈಟ್ ಬ್ಲೂ ಅಗಿ ಸಮುದ್ರ ಕಾಣುತ್ತಿತ್ತು. ನಂತರ
ಡೀಪ್ ಸೀ ಡಾರ್ಕ ಬ್ಲೂ ಅಗಿ ಕಾಣುತ್ತಿತ್ತು. ವಿಮಾನ ಗೋವ ಪಕ್ಕದಿಂದ ಹಾರಿ ಅರಬ್ಬಿಸಮುದ್ರದಾಟಿ ಗಾಲ್ಪ್
ಅಫ್ ಅರೇಬಿಯ (ಅರೇಬಿಯನ್ ಸೀ) ಮೇಲೆ ಹಾರಿ ಮಸ್ಕೇಟ್ ಮೂಲಕ ದುಬೈ ತಲುಪಿತು. ಇಳಿಯುವ
ಮೊದಲು ರಾತ್ರೆ ನಗರದಲ್ಲಿ ಕಂಗೋಳಿಸಿತ್ತಿದ್ದ, ದೀಪಗಳ ಸಾಲು ಸಾಲುಗಳೇ ನಗರ ಹೇಗೆ ಪ್ಲಾನ್ ಅಗಿ ಇದೆ
ಎಂಬುದನ್ನು ತೋರಿಸುತಿತ್ತು. ಅಲ್ಲಿಂದಲೇ ಬ್ರುಜ್ ಖಲೀಫಾ ಟವರ್ ಕಾಣುತ್ತಿತ್ತು. ಟಿ,ವಿ.ಯಲ್ಲಿ, ಮಕ್ಕಳ
ಒಂದು ಹಾಸ್ಯಮಾಯವಾದ ಸಿನಿಮಾ ನೋಡುತ್ತಿದ್ದರಿಂದ 3 ಗಂಟೆ ಕಳೆದ್ದದ್ದು ಗೊತ್ತಗಲಿಲ್ಲ. ಇಳಿಯುವಾಗ
ನಾವು ಕೊನೆಯದಾಗಿ ಇಳಿದೆವು. ಕಾರಣ ನಮ್ಮ ಜೊತೆ ಬಂದ ಅಜ್ಜಿಯವರನ್ನು ನಿಧಾನವಾಗಿ ವೀಲ್ ಚೇರ್
ಮೂಲಕ ಹೊರಗೆ ಕರೆದುಕೊಂಡು ಬಂದೆವು. ಮತ್ತೆ ಚಕ್ ಅಪ್ ಸ್ಕಾನಿಂಗ್ ಎಲ್ಲಾ ಕ್ಲೀಯರ್ ಮಾಡಿಕೊಂಡು
ಲಗೇಜ್ ಸಮೇತ ಹೊರಗೆ ಬಂದ್ವಿ. ಅರುಣ, ಗುರು, ಫಣಿ, ಅಜ್ಜಿಯವರ ಮಗ ಸೊಸೆ ಕಾಯಿತ್ತಿದ್ದರು. ಅವರನ್ನು
ಸೇರಿ ಕೊಂಡ್ವಿ.
ದುಬೈ ಏರ್ ಪೋರ್ಟ್ ಬಗ್ಗೆ ಹೇಳುವುದಾದರೆ, ಇದು ಪ್ರಪಂಚದಲ್ಲಿರುವ ಬಹು ದೊಡ್ಡ ಏರ್
ಪೋರ್ಟ್ ಗಳಲ್ಲಿ ಒಂದು. ಒಂದು ಕಡೆ ಪೂರ್ತಿ ವಾಟರ್ ಫಲ್ಸ್, ಖರ್ಜೂರದ ಗಿಡಗಳು. ನೈಜ ಹಾಗು ಕೃತಕ
ಎರಡು ಇತ್ತು. ಹೊರಗೆ ಬರಲು ನೆಲದ ಕನ್ವೇಯರ್ ಬೇಲ್ಟ್ 1 ರಿಂದ 2 ಕಿ.ಮಿ, ಇತ್ತು, ಅಷ್ಟು ದೂರ ನಡೆಯ
ಬೇಕಿತ್ತು.
ಕಾರ್ ಪಾರ್ಕಿಂಗ್ ಹತ್ತಿರ ಕಾರುಗಳು ಹೂಗುತ್ತಿದ್ದಾಗ, ನಾನು ಕ್ರಾಸ್ ಮಾಡಲು ಯೋಚಿಸಯತ್ತಿದ್ದೆ,
ಎಲ್ಲೆಲ್ಲೂ ಕಾರುಗಳೆ, ನಂತರ ನನ್ನ ಮಗಳು ಹೇಳಿದಳು, ಇಲ್ಲಿ ಮೊದಲು ಪಾದಾಚಾರಿಗಳು ದಾಟಿದ ಮೇಲೆ ಕಾರ್
ಗಳು ದಾಟುವುದು. ಮೊದಲು ಪಾದಚಾರಿಗೆ ರಕ್ಷಣೆ. ಯಾವ ಕಾರು ಬಂದರು ಕೈ ತೋರಿಸಿ ನಿಲ್ಲಿಸುವುದು ಬೇಡ,
ಅರಾಮಾಗಿ ದಾಟಬಹುದು. ಸಿಟಿಯಲ್ಲಿ ಮಾತ್ರ ಎಲ್ಲಂದಲ್ಲಿಗೆ ದಾಟುವ ಹಾಗೆ ಇಲ್ಲ. ಪಾದಾಚಾರಿಗಳು ದಾಟುವ
ಕಡೆನೇ ದಾಟಬೇಕು. ರೋಡ್ ರೂಲ್ಸ್ ಚೆನ್ನಾಗಿದೆ. ಕಾನೂನು ಮುರಿದರೆ ಶಿಕ್ಷೆ ಅತಿಯಾಗಿದೆ. ಹೀಗಾಗಿ ಎಲ್ಲಾರು
ಕಾನೂನು ತಪ್ಪಿ ನಡೆಯುವುದೇ ಇಲ್ಲ. ಈ ಆದರ್ಶ ನಮ್ಮ ಭಾರತದಲ್ಲಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.
ಅಲ್ಲಿಂದ ಸುಮಾರು 5 ಕಿ.ಮಿ. ದೂರವಿರುವ ಮಗಳ ಮನೆಗೆ ಬಂದ್ವಿ. 4ನೇ ಅಂತಸ್ತಿನಲ್ಲಿ ಇದೆ.
ಬಂದು ಫ್ರೆಶ್ ಅಗಿದನಂತರ, "ವೀನಸ್" ಹೋಟೆಲ್‍ಗೆ ಊಟಕ್ಕೆ ಕರೆದುಕೊಂಡು ಹೋದರು. ದಕ್ಷಿಣ ಭಾರತೀಯ
ಹೋಟೆಲ್. ಎಲ್ಲಾರು ಅವರೆ. ಕನ್ನಡದಲ್ಲೆ ಅರ್ಡರ್. ಪೂರ ಅವರೆ ತುಂಬಿದ್ದರು. ದುಬೈ ನಲ್ಲಿ ಇದ್ದೇವೋ
ಅಥವ ಶರಾವತಿ ಹೋಟೆಲ್ ಯಲಹಂಕದಲ್ಲಿ ಇದ್ದೇವೋ ಅಂತ ಅನುಮಾನವಾಯಿತು. ಬಸ್ಸು, ರೈಲ್, ಟ್ಯಾಕ್ಸಿ
ಓಡಾಡಿದಾಗ ಮೈ ಕೈ ಅಲುಗಾಡಿದಾಗ ಸ್ವಲ್ಪ ಹಸಿವು ಅಗುತ್ತೆ. ತಿಂದ ಅನ್ನ ಅಲುಗಾಡದೆ ಬಂದೆದ್ದರಿಂದ ಹಸಿವೆ
ಇರಲಿಲ್ಲ. ಅವರ ಸಂತೃಪ್ತಿ ಗಾಗಿ ತಿಂಡಿ ತಿಂದ್ವಿ. ಊಟ ವಿಮಾನದಲ್ಲೆ ಅಗಿತ್ತು.
ಏರ್ಪೋಟ್ ಸಿಟಿ ಮಧ್ಯೆ ಇದೆ. ಬೆಗಂಳೂರಿನ ಮೆಜೆಸ್ಟಿಕ್ ತರಹ. ಬಸ್ಸುಗಳ ಬದಲು ವಿಮಾನ
ಗಳು. ಡಬಲ್ ಡಕರ್ ವಿಮಾನವಿತ್ತು. ಪ್ರತಿಯೊಂದು ನಿಮಿಷಕ್ಕೂ. ಪ್ರಪಂಚದ ಎಲ್ಲಾ ಕಡೆಗೂ ಸಂಪರ್ಕವಿದೆ.
8ನೇ ತಾರೀಖು ಗುರುವಾರ ರಾತ್ರೆ ಕಳೆದ ನಂತರ 9 ರಂದು ದುಬೈ ದರ್ಶನಕ್ಕೆ, ಬೆಳಿಗ್ಗೆನೆ ಬೇಗ ಎದ್ದು, ಅನ್ನಪೂರ್ಣ ಹೋಟೆಲ್ನಲ್ಲಿ ತಿಂಡಿ ತಿಂದು, ಅಲ್ಲಿಂದ ದುಬೈ ಮಧೈ ಇರುವ ದೇವಸ್ಥಾನಕ್ಕೆ ಹೋದ್ವಿ. ಆ ದಿನ
ಹೋಳಿ ಹಬ್ಬದ ಮಾರನೆ ದಿನ. ವರ್ಷದ ಹೆಚ್ಚು. ಉತ್ತರಭಾರತದವರಿಗೆ ದೇವರಿಗೆ ಹೋಳಿ, ಬಣ್ಣ ಹಾಕುವ
ದಿನ. ಕೃಷ್ಣಮಂದಿರ, ಈಶ್ವರ, ನಾರಾಯಣ, ಗುರುದ್ವಾರ,ಸಾಯಿಬಾಬಾ ಎಲ್ಲಾ ಒಂದು ಕಡೆ ಇದೆ. ರಜ ಹಾಗು
ಹಬ್ಬವಾದ್ದರಿಂದ ಬಹಳ ಜನ ಬಂದಿದ್ದರು. ಕ್ಯೂನಲ್ಲಿ ನಿಂತು ದರ್ಶನ ಮಾಡಿದೆವು. ಅಲ್ಲಿ ಇರುವ ಗಲ್ಲಿ ಕಾಶಿ
ಗಲ್ಲಿ ತರಹ ಇತ್ತು. ಗಲ್ಲಿಯ ಅಂಗಡಿಯಲ್ಲಿ ಎಲ್ಲಾ ದೇವರ ಸಾಮಗ್ರಿಗಳು, ತುಲಸಿಗಿಡ ಮಾರುತ್ತಿದ್ದರು. ನಂತರ
ನಾವು "ಪಾಮ್ ಐಲ್ಯಾಂಡ್" ನೋಡಲು ಹೊರೆಟೆವು.
ಸಮುದ್ರಕ್ಕೆ ಮರಳುಹಾಕಿ ಪಾಮ್ ಮರದ ಶೇಪ್ ನಲ್ಲಿ ದ್ವೀಪಕಟ್ಟಿದ್ದಾರೆ. ರಸ್ತೆಯ ಎರಡೂ
ಬದಿಯಲ್ಲೂ ಪ್ರಪಂಚದ ಶ್ರೀಮಂತರ ವಿಲ್ಲಾಗಳು, ಅರಮನೆಯಂತ ಮನೆಗಳು ಇವೆ. ಒಂದೊಂದು ಒಂದ್ದಕ್ಕಿಂತ
ಮಿಗಿಲು. ಅಲ್ಲಿಗೆ ಹೋಗಲು ಸಮುದ್ರದ ಒಳಗೆ 5 ಕಿ.ಮಿ. ಟನಲ್ ಇದೆ. ಜೊತೆಗೆ ತೇಲುವ ಸೇತುವೆ.
ಪಾಮ್ ಐಲ್ಯಾಂಡ್ ನ ಎಲ್ಲಾ ಬ್ರಾಂಚ್‍ಗೆ ಕಾರಿನಲ್ಲೆ ಸುತ್ತಿದ್ದೆವು. ಇಲ್ಲೊಂದು ಶಾರುಖಾನ್‍ದು ಮನೆ ಇದೆಯಂತೆ.
ಕಡಿಮೆ ಇತಿಹಾಸವಿರುವ ಈ ಜನಗಳ ತಲೆಗಳಿಗೆ ನಮಸ್ಕಾರ ಮಾಡಬೇಕು. ಕನಸೆನಲ್ಲಿ ಬಂದದ್ದನ್ನು ಹೇಳಿ
ಮಾಡಿಸಿಕೊಳ್ಳುವ ಜನ. ಮನುಷ್ಯನ ಕಲ್ಪನೆಗೂ ಮೀರಿದ್ದು. ಅಸಾಧ್ಯವನ್ನು ಸಾಧ್ಯಮಾಡುವರು. ಹಣವಿದ್ದರೆ
ಬಂತ ಭಾಗ್ಯ. ಅದನ್ನು ಪ್ರಪಂಚದಲ್ಲೆ ಅತಿ ದೊಡ್ಡದಾಗಿರುವ ಗಗನ ಚುಂಬಿ ಕಟ್ಟಡ ಕಟ್ಟಲು, ಬಿಸಿನೆಸ್ ಸೆಂಟರ್
ಮಾಲ್ ಗಳಿಗೆ, ರೊಡ್ಗಳಿಗೆ, ಬಹಳ ಪ್ಲಾನ್ ಮಾಡಿ ಕಟ್ಟಿದ್ದಾರೆ. ನೂತನ ತಾಂತ್ರಿಕತೆಯಿಂದ ಮಾಡಿದ್ದಾರೆ. ಆ
ದಿನ 7 ಸ್ಟಾರ್ ಹೋಟೆಲ್ "ಬ್ರುಜ್-ಅಲ್-ಅರಬ್"ನೋಡಿದ್ವಿ. ಪ್ರತಿಯೊಂದು ರೂಮಿಗೂ ಸಮುದ್ರದ ನೋಟ
ಕಾಣುತ್ತೆ. 1053 ಅಡಿ ಇದೆ. ಈ ಹೋಟೆಲ್ ಮೇಲೆ ಹೆಲಿಪ್ಯಾಡ್ ಇದೆ. ಇನ್ನೊಂದು ರೋಟೆಟಿಂಗ್ ಹೋಟೆಲ್, ವಾಟರ್ ಟ್ಯಾಂಕ್ ತರಹ. ಎಲ್ಲಾ ಮೇರಿನ್ ಬೀಚ್ ತರಹ, ಸಮುದ್ರದ ಪಕ್ಕ ಒಂದು ಇಂಚು ಬಿಡದೆ
ಇರುವ ಗಗನ ಚುಂಬಿ ಕಟ್ಟಡಗಳು.
ಅಲ್ಲಿಂದ ನಾವು ಅಲ್ಲೆ ಹತ್ತಿರ ಇರುವ "ಅಟ್ಲಾಂಟಿಸ್" ಹೋಟೆಲ್ ಹತ್ತಿರ ಬಂದೆವು. ಅಲ್ಲಿ
ಅಕ್ವೇರಿಯಂ,ಮಾಲ್, ಹೋಟೆಲ್ ನೋಡಿದ್ವಿ. ಬೀಚ್ ಎದುರಿಗೆ ಇದೆ. ಒಳಗಡೆ ಒಡಾಡಿ, ಪೋಟೋ ತೆಗೆ
ಸಿದ್ದು ಅಯಿತು. ಗಗನಕ್ಕೆ ಮುಟ್ಟುವ ಬೆಲೆಗಳು. ಅಷ್ಟು ಕೊಟ್ಟು ಕೊಳ್ಳುವವರು ಇದ್ದಾರೆ! ಲಕ್ಷಾಂತರ
ಧೀರಮ್ (ಅಲ್ಲಿಯ ನಾಣ್ಯ), ಗಳ ಬಿಕಿನಿಗಳು, ಇತರೆ ವಸ್ತ್ರಗಳೂ, ಎಲ್ಲಾ ಬ್ರಾಂಡ್ಡೆಡ್. ಅತಿ ಶ್ರೀಮಂತರು
ಕೊಳ್ಳುವ ಸ್ಥಳ. ಎಲ್ಲಾ ದೇಶದ ಜನರಿಂದ ತುಂಬಿ ತುಳುಕುತ್ತಿತ್ತು. ಸದ್ಯ ಎಲ್ಲೂ ಮಾಲ್ ಗಳಿಗೆ ಪ್ರವೇಶ
ದರ ಇಲ್ಲ.
ಎದುರಿನ ಬೀಚ್ ನಲ್ಲಿ ಸೀ ಸರ್ಫಿಂಗ್ ನಡೆಯುತ್ತಿತ್ತು. ವೆದರ್ ಬಹಳ ಚೆನ್ನಾಗಿತ್ತು. ಆಳವಾದ
ಸಮುದ್ರ. ಬಹಳ ಜನ ಮರಳಲ್ಲಿ ಮಲಗಿದ್ದರು. ಮಕ್ಕಳು ಮರಳಾಟನಾಡುತ್ತಿದ್ದರು. ಮರುಭೂಮಿಯಲ್ಲಿ
ಒಳ್ಳೆ ತಂಪಾದ ಗಾಳಿ ! ಬಹಳ ಸಂತೋಷಪಟ್ವಿ. ಬೇಸಿಗೆ ಅಗಿದ್ದರೆ ಸುಟ್ಟುಹೊಗುತ್ತಿದ್ವಿ. ಈಗ ಚೆನ್ನಾಗಿದೆ.
ಮೇ ನಿಂದ ಅಕ್ಟೋಬರ್ ಬಹಳ ಬಿಸಿಲಿರುತ್ತೆ. ಎಲ್ಲಾ ಕಡೆ ಕಾರ್ ನಲ್ಲಿ ಸುತ್ತಿ, ಊಟಕ್ಕೆ ಮಾದ್ಯಾಹ್ನ,ಗುಜರಾತಿ
ಹೋಟೆಲ್‍ಗೆ ಬಂದ್ವಿ. ಅವರಿಗೆ ಪರಿಚಯವಿದ್ದದು. ಹೋಳಿ ಹಬ್ಬದ ಮಾರನೆ ದಿನ ವರ್µದ ಹೆಚ್ಚು.
ವಿಶೇಷ ಗುಜರಾತಿಯ ಊಟ. ಧಲಿಯಾದಿಂದ ಮಾಡಿದ ಹಲ್ವ, ಬಜ್ಜಿ, ಪೂರಿ, 3 ತರಹ ಪಲ್ಯ, ಕಡಿ, ಫ್ರೈಡ್
ರೈಸ್, ನೀರಿನ ಕ್ಯಾನ್ ತರಹ, ಮಜ್ಜಿಗೆ ಕ್ಯಾನ್ ಪೂರ. ಬೀಗರಿಗೆ ಉಪಚಾರ ಮಾಡಿ ಊಟ ಹಾಕುವ ತರಹ ಊಟ
ವನ್ನು. ಅತ್ಮೀಯವಾಗಿ ಉಣಿಸಿ, ಹೊಟ್ಟೆ ಬಿರಿಯುವಷ್ಟು ಊಟಹಾಕಿ. ಕೊನೆಯಲ್ಲಿ. ಅರುಣ ಹಾಗು ಗುರುಗೆ ಹೋಳಿ
ಬಣ್ಣಹಾಕಿ ಕಳುಹಿಸಿದರು. ಮರೆಯುವಂತೆ ಇಲ್ಲ. ಬಹಳ ಸ್ವಚ್ಛವಾಗಿ ಇಟ್ಟು ಕೊಳ್ಳುತ್ತಾರೆ. ಸ್ವಚ್ಛತೆ, ರುಚಿ, ಹಾಗು
ಕಾನೂನಿಗೆ ಮಾನ್ಯತೆ. ಯವಾಗಲಾದರು ದುಬೈ ಮುನಿಸಿಪಾಲಿಟಿಯವರು ಸಡನ್ ಅಗಿ ಬಂದು ತನಿಖೆ ಮಾಡು
ತ್ತಾರೆ. ಸ್ಟ್ಯಾಂಡ್ರಡ್ ಮೇನ್ಟೇನ್ ಮಾಡದೆ ಇದ್ದರೆ, ತಕ್ಷಣವೇ ಲೈಸಸ್ಸ್ ವಾಪಸ್ಸು ತೆಗೆದುಕೊಳ್ಳುತ್ತಾರೆ. ಹೀಗಾಗಿ
ಚೆನ್ನಾಗಿ ಇಟ್ಟಿರುತ್ತಾರೆ.
ಭಾರತೀಯರಿಗೆ ಅವರವರ ರುಚಿಯ ಎಲ್ಲಾ ಅಡಿಗೆಗಳು ಇಲ್ಲಿ ಸಿಗುತ್ತದೆ. ಹೀಗಾಗಿ ನಮ್ಮ ರುಚಿಯ ಆಹಾರಕ್ಕೆ ಕೊರತೆ ಇಲ್ಲ. ಒಳ್ಳೂಳ್ಳೆ ದಕ್ಷಿಣ ಭಾರತೀಯ ಹೋಟೆಲ್ಗಳಾದ ಎಂ.ಟಿ.ರ್., ವೀನಸ್ಸ್,
ಕಾಮತ್, ಅನ್ನಪೂರ್ಣ, ಶರವಣ ಭವನ್, ವಸಂತ್, ಸಂಗೀತ ಹೀಗೆ ಬಹಳ ಇವೆ. ದಕ್ಷಿಣ ಭಾರತೀಯ ಅಡುಗೆ
ಗೆ ಬೇಕಾದ ಎಲ್ಲಾ ತರಕಾರಿಗಳು, ದಿನಸಿಗಳು, ಎಲ್ಲಾ ಕಡೆ ಸಿಗುತ್ತೆ. ಇಂಡಿಯನ್ ಅರಿಜನ್‍ನ ಕಾಕಾರವರು
ಪ್ರಾರಂಭಿಸಿದ "ಲೂಲೂ ಮಾರ್ಕೆಟ್"ನಲ್ಲಿ ಇವೆಲ್ಲಾ ಸಿಗುತ್ತೆ. ಬಾಳೆಕಾಯಿ, ದಿಂಡು, ಮಾವಿನಕಾಯಿ,ಒಳ್ಳೆಹಾಲು,
ಮೊಸರು. ಎಮ್.ಟಿ.ರ್., ಅಮುಲ್ ಉತ್ಪನ್ನ ಗಳು ಸಿಗುತ್ತೆ.
ಇವರ ಮನೆಯ ಬಾಲ್ಕನಿಯಿಂದ ನೋಡಿದರೆ ಶಾರ್ಜ ಕಾಣುತ್ತೆ. ಎಲ್ಲೆಲ್ಲೂ ಗಗನ ಚುಂಬಿಕಟ್ಟಡ
ಗಳು. ರಸ್ತೆಗಳು ಚೆನ್ನಾಗಿದೆ. ಅಫಘಾತಗಳು ಕಡಿಮೆ. ಎಲ್ಲಿಂದಲ್ಲಿ ಕಾರು ತಿರುಗಿಸುವಹಾಗೆ ಇಲ್ಲ. ತಪ್ಪಿ
ಬಂದರೆ ಮುಂದಿನ ಸರ್ಕಲ್ (ರೌಂಡ್ ಅಬೋಟ್ ಅನ್ನುತ್ತಾರೆ),ತನಕ ಹೋಗಿ ತಿರುಗಿಸಿಕೊಂಡು ಬರಬೇಕು.
ಸರ್ಕಲ್ ಹತ್ತಿರ ನಿಂತು ಹೊರಡು ಬೇಕು. ಮೊದಲು ಬಂದವರು ಮೊದಲು. ಎಲ್ಲಾ ಕಡೆ ಕ್ಯಾಮರವಿರುತ್ತೆ.
ತಪ್ಪಿಗೆ ಕಠೋರ ಶಿಕ್ಷೆ ಇರುತ್ತೆ.
ಹತ್ತಿರ ಪಾಂಡ್ ಪಾರ್ಕ ಇದೆ. ಕೆರೆ ಕೃತಕವಾಗಿ ಮಾಡಿದ್ದಾರೆ. ಮರಗಳು, ಹುಲ್ಲಿನ ಲಾನ್
ಹೂವಿನ ಗಿಡಗಳು ಎಲ್ಲಾ ಕೃತಕವಾಗಿ ಬೆಳಸಿದ್ದು. ಹಸಿರು ಹಸಿರಾಗಿ ಇದೆ. ಬೇವಿನ ಮರ, ಖರ್ಜೂರದ ಮರಗಳು, ಹಾಗೆ ನೆಟ್ಟಿದ್ದಾರೆ. ಮರಳುಗಾಡು ಎಲ್ಲಾ ಕಡೆ ಮರಳು, ಮರಳು. ಗಿಡಗಳನ್ನು ನೆಡುವ
ಮೊದಲು, ನೀರಿನ ಪೈಪ್ ಗಳನ್ನು ಇಟ್ಟು ನಂತರ ಗಿಡ ಗಳನ್ನು ನೆಡುತ್ತಾರೆ. ನೀರು ಡೈರ್ಕಟ್ ಅಗಿ ಸಲ್ಪ ಸಲ್ಪ
ಬೇರಿಗೆ ಹೋಗುವ ಹಂಗೆ ಮಾಡಿರುತ್ತಾರೆ. ಹೊರಗಡೆ ನೀರು ಕಾಣುವುದೇ ಇಲ್ಲ. ರಸ್ತೆಯ ಪಕ್ಕದಲ್ಲಿ
ಸಂಭೃದ್ದಿಯಾಗಿ, ಬಣ್ಣ ಬಣ್ಣದ ಹೂವು ಗಳನ್ನು ಬೆಳೆಸಿದ್ದಾರೆ. ಸಮುದ್ರದ ನೀರಿಗೆ ಸಾಪ್ಟ್ ಟ್ರಿಟ್ ಮೆಂಟ್
ಕೊಟ್ಟು ಉಪಯೋಗಿಸುತ್ತಾರೆ. ಪೆಟ್ರೋಲ್ ಚೀಪ್.ನೀರು ದುಭಾರಿ.
ದುಬೈ ಬಹಳ ಚಿಕ್ಕದು. ಅದರೆ ಪ್ರಪಂಚದಲ್ಲಿ ಇರದಂತ ಅಸಾಮನ್ಯವಾದುದು ಇಲ್ಲಿದೆ. ರಸ್ತೆಗಳ
ವ್ಯವಸ್ತೆ ಚೆನ್ನಾಗಿದೆ. ಅವರ ಜನಸಂಖ್ಯೆ ಕಡಿಮೆ. 80% ಪರಕೀಯರು. 20% ಓರಿಜನಲ್ ಜನ. ನಗರ ಕಟ್ಟಿದ
ಹಿರಿಯ ಶೇಕ್ "ಝಯದ್-ಬಿನ್-ಸುಲ್ತಾನ್-ಅಲ್-ನಾಹನ್ ಬಹಳ ಬುದ್ದಿವಂತ. ಲೋಕಲ್ ಜನ ಮುಂಚೆ
ಬುಡಕಟ್ಟಿನವರು, ಅವಿದ್ಯಾವಂತರು ಅಗಿದ್ದರು. ಪಟ್ರೋಲಿಂ ಶೋಧನೆಯ ನಂತರ ಬಹಳ ಶ್ರೀಮಂತರಾಗಿ, ಹಣದ
ಹೊಳೆ ಹರಿದು ಬಂದು, ನಂತರ ಬಹಳ ಬದಲಾವಣೆಯನ್ನು ತಂದು, ಅವರ ದೇಶವನ್ನು ಯಾರು ಆಳದಹಾಗೆ
ಕಾನೂನು ತಂದು ದೇಶವನ್ನು ಮುಂದೆ ತಂದ್ದಿದ್ದಾರೆ. ಇಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಜನ ನಡೆಯು
ವುದು ಕಡಿಮೆ. ಎಲೆಲ್ಲೂ ಕಾರುಗಳು. ಐಷಾರಾಮಿ ಕಾರುಗಳು, ಬೆನ್ಸ್,ಜಿ,ಎಮ್.ಸಿ.,ಫೋರ್ಡ್, ಪೋರ್ಶೆ,ಫೆರಾಂ,
ಟಯೋಟ, ಮಿತ್ಸುಬುಷಿ, ಕೂಪರ್ ಹೋಡ್ಯಿ,, ಹೋಂಡ ಲೆಕ್ಸಸ್,..., 4 ಲಕ್ಷದಿಂದ ಹಿಡಿದು ಕೋಟಿ ರೂ,, ಕಾರು
ಗಳನ್ನು ನೋಡಬಹುದು. " ಕಾರ್, ಕಾರ್, ಕಾರ್ ಎಲ್ಲಿ ನೋಡಿದ್ರು ಕಾರ್" ಇಲ್ಲಿ ಅನ್ವಯಿಸುತ್ತೆ.
14ನೇ ಮಾರ್ಚ 2011 ಸಂಜೆ ನಾವು ಫೆಸ್ಟಿವಲ್ ಸಿಟಿಗೆ ಹೋದೆವು. ಅಲ್ಲಿ ಇಂಟರ್ ನ್ಯಾಷನಲ್
ಫೈವ್ ಸ್ಠಾರ್ ಹೋಟೆಲ್ ಹಾಗು ಐಕ್ಯ ಮಾಲ್ ನೋಡಿದೆವು. ಅಲ್ಲಿಯ ನೀರಿನ ಜಲಪಾತ, ವಿದ್ಯುತ್ ಅಲಂಕಾರ
ಬ್ರಾಡೆಡ್ ಶಾಪ್ ಗಳು, ಮಾಲು ವೈಭವ ನೋಡಿ ದಂಗಾದೆವು. ಮನೆಗೆ ಬೇಕಾದ ಎಲ್ಲಾ ಸಾಮನು ಎ. ಟು ಝಡ್ ಸಿಗುತ್ತೆ. ಎಲ್ಲಾ ಡಿಸ್ ಪ್ಲೇ ಮಾಡಿರುತ್ತಾರೆ. ದೊಡ್ಡ ಸಾಮನುಗಳನ್ನು ಇಷ್ಟಪಟ್ಟರೆ ಅಲ್ಲಿಯೆ ಬರೆದ
ಕೋಡ್ ನಂಬರ್ ನೋಡಿ ಅರ್ಡರ್ ಕೊಟ್ಟರೆ ಅಯಿತು, ಪ್ಯಾಕ್ ಮಾಡಿಸಿಕೊಂಡು ಹೋಗಬಹುದು. ಜಿಗಿ ಜಿಗಿ
ಅಂತ ಜನ ಓಡಾಡುತ್ತಿದ್ದರು.
15ನೇ ತಾರೀಖು ಶುಕ್ರವಾರ ನಾವು ಅಬುಧಾಬಿಗೆ ಪ್ರಯಾಣ ಬೆಳೆಸಿದೆವು. ಇದು ಪೂರ್ತಿ
ಗಗನ ಚುಂಬಿ ಕಟ್ಟಡಗಳಿಂದ, ಒತ್ತೂತ್ತಗಿದೆ. 2011ರ ನಂತರ ಬಂದ 200 ಮಿ. ಎತ್ತರದ 9 ಕಟ್ಟಡಗಳು
ಆಬುಧಾಬಿಯಲ್ಲೆ ಇದೆ. 6 ದುಬೈನಲ್ಲಿ ಇದೆ. ಇದು ಯು.ಎ.ಇ.ಯ ರಾಜಧಾನಿ. ಇದು ಉತ್ತರದಿಂದ ದಕ್ಷಿಣ
ಕ್ಕೆ 13.5 ಕಿ.ಮಿ., ಪೂರ್ವದಿಂದ ಪಶ್ಛಿಮಕ್ಕೆ 9.5 ಕಿ.ಮಿ. ಇದೆ. 148 ಮಿ. ಎತ್ತರದಲ್ಲಿದ್ದು, ಒಣ ಪರ್ವತದಿಂದ
ಸುತ್ತುವರಿದು, ಕರವಾಳಿಯ ತೀರಕ್ಕೆ ವಾಲಿದೆ. ಸುತ್ತಲು ಮ್ಯಾನ್ ಗ್ರೋನ್ ಗಾರ್ಟನ್, ಸ್ಯಾಂಡ್ ಬ್ಯಾಂಕ್, ಅಧು
ನಿಕ ಹಾರ್‍ಬರ್ ಇದೆ. ಮೊದಲು 1590ರಲ್ಲಿ ಇದರ ಪರಿಚಯ ಚರಿತ್ರೆಯಲ್ಲಿ ಇದೆ. ವೆನಿಸ್ಸ್ ದೇಶದ
ಆಭರಣದ ವ್ಯಾಪಾರಿ, ಕಡಲ ಮುತ್ತನ್ನು ಹುಡುಕಿಕೊಂಡು ಬಂದು, ಅವನಿಂದ ಪರಿಚಯವಾಗಿ, ಅವನ ಹೆಸರೇ
ಇಡಲಾಗಿದೆ. "ಸರ್ ಬನೀಯಾಸ್ ಐಲ್ಯಾಂಡ್"ಅಂತ. 19 ಶತಮಾನದಲ್ಲಿ ಈಸ್ಟ್ ಇಂಡಿಯ ಕಂಪನಿ ಸರ್ವೆ
ಮಾಡಿ ಮೊದಲ ಬಾರಿಗೆ ಅಕ್ಯೂರೇಟ್ ಮ್ಯಾಪ್ ಕಂಡು ಹಿಡಿದರು. 1992-96ರಲ್ಲಿ ಪ್ರಾಚೀನ ವಸ್ತು ಸಂಶೋಧನ
ಇಲಾಖೆಯವರು ಮುಖ್ಯವಾದ ದ್ವೀಪಗಳನ್ನು ಗುರುತಿಸಿರುವರು. ಶಿಲಾಯುಗದ 7,000 ವರ್ಷಗಳ ಮೊದಲು
ಉಪಯೋಗಿಸಿತ್ತಿದ್ದ ವಸ್ತುವನ್ನು ಕಂಡು ಹಿಡಿದಿದ್ದಾರೆ. ಕಂಚಿನ ಯುಗದು ಸಿಕ್ಕಿದೆ. ನವ ಶಿಲಾಯುದಲ್ಲಿ ಹಾಗು
ನಂತರ ಇಲ್ಲಿ ಸಾಕಷ್ಟು ಮಳೆ ಇದ್ದು, ಮನುಷ್ಯರು ಹಾಗು ಕಾಡು ಪ್ರಾಣಿಗಳು ವಾಸವಾಗಿದ್ದರು. ಅದರೆ ಮತ್ತೆ
ಶತ ಶತಮಾನಗಳ ನಂತರ ಮಳೆಯು ದಕ್ಷಿಣದ ಕಡೆಗೆ ಚಲಿಸಲು ಪ್ರಾರಂಭಿಸಿದವು. ಹೀಗಾಗಿ ಆಳವಾದ ಕೆರೆಗಳು
ಒಣಗಿದವು. ಹವಮಾನ ಬಿಸಿಯಾಯಿತು. ಹಗಲೆಲ್ಲಾ ಶೆಖೆ, ರಾತ್ರೆಯಲ್ಲಾ ಫ್ರೀಜ್ ಅಗಲು ಪ್ರಾರಂಭನಾಯಿತು.
ಎಕೋ ಸಿಸ್ಟಮ್ ಬದಲಾವಣೆಯಾಗಿ ಹಕ್ಕಿ ಪಕ್ಷಿಗಳು ಹೊಸ ವಾಸ ಅರಸಿ ವಲಸೆ ಹೋದವು.
ಅಬುಧಾಬಿಯಲ್ಲಿ ತರ ತರಹದ ಗಗನ ಚುಂಬಿ ಕಟ್ಟಡ ನೋಡಿ, ಅಲ್ಲಿಯ ಪ್ರಸಿದ್ಧ ಮಸೀದಿ
ನೋಡಿದೆವು. ಪ್ರಪಂಚದಲ್ಲಿ ಪ್ರಸಿದ್ಧಿಯಾದ ಕಾರ್ ರೇಸ್ ಜಾಗ ಫಾರ್ಮೂಲ ಒನ್ ನೋಡಿದ್ವಿ. ಅಲ್ಲಯೆ ನಮ್ಮ
ಅಳಿಯ ಕೆಲಸ ಮಾಡಿದ್ದರು. ಮೊದಲು ಕಟ್ಟಲು ಪ್ರಾರಂಭದಿಂದ ಹಿಡಿದು ಅದು ಮುಗಿಯುವತನಕದ ಎಲ್ಲಾ
ಹಂತದ ಫೋಟೋ ತೋರಿಸಿದರು. 50,000 ಜನ ಕೆಲಸ ಮಾಡಿದ್ದಾರೆ. ಪಾರ್ಕಿಂಗ್ ಜಾಗವೇ ಎಷ್ಟೋ
ದೊಡ್ಡದಾಗಿದೆ. ಶೇಖ್-ಜೈದಾ-(ಝಹೀದ್)ಮಾಸ್ಕ್ ಮಸೀದಿಗೆ ಹೋದ್ವಿ. ಬಹಳ ಚೆನ್ನಾಗಿದೆ. ಮೆಕ್ಕಾಗಿಂತ
ಜಾಸ್ತಿ ಎತ್ತರಕ್ಕೆ ಯಾವ ಮಸೀದಿ ಇರಬಾರದೆಂದು, ಖುರಾನ್ ನಲ್ಲಿ ಬರೆದಿದ್ದರಿಂದ ಅದಕ್ಕಿಂತ ಸ್ವಲ್ಪ ಕಡಿಮೆ
ಎತ್ತರಕ್ಕೆ ಕಟ್ಟಿದ, ಸುಂದರ ಬಿಳಿಯ ಬಣ್ಣದ ಶ್ರೀಮಂತ ಮಸೀದಿ. ಇಲ್ಲಿ ನಾನಾ ದೇಶಗಳಿಂದ ಜನರು ಬಂದಿದ್ದರು.
ಬಂದ ಎಲ್ಲಾ ಹೆಂಗಸರು ಗುರುಖಾ ಹಾಕಿಕೊಂಡೇ ಹೋಗಬೇಕು. ಹೀಗಾಗಿ ನಾನು, ಅರುಣಾ ಗುರುಖಾ ಹಾಕಿ
ಕೊಂಡು ಮಸೀದಿ ದರ್ಶನಕ್ಕೆ ಹೋದ್ವಿ. ನವರತ್ನನದಿಂದ ಸುಂದರವಾಗಿ, ಸಿಂಗರಿಸ್ಪಟ್ಟಿತ್ತು. ಬಹಳ ಕಲಾತ್ಮಕವಾಗಿ
ಅಗಲವಾದ, ಮಾನವ ನಿರ್ಮಿತವಾದ್ದದ್ದು ರತ್ನಗಂಬಳಿ ಅನುಪಮವಾಗಿತ್ತು. ಆಬುಧಾಬಿಯಲ್ಲಿ ಶೇಖ್ ರವರ
ಅರಮನೆಯನ್ನು ಹೋಟೆಲ್ ಅಗಿ ಪರಿವರ್ತಿಸಿದ್ದಾರೆ. ಅಲ್ಲಿ ಎಲ್ಲಾಕಡೆ ಬಂಗಾರದ, ಬಂಗಾರ ಲೇಪಿತ ಸಾಮನು
ಇವೆ. ನಮ್ಮಲ್ಲಿ ಎಮ್.ಟಿ.ಅರ್.ನಲ್ಲಿ ಬೆಳ್ಳಿ ಲೋಟದಲ್ಲಿ ಕೊಡುವ ಹಂಗೆ ಹೊರಗಡೆಯಿಂದ ನೋಡಿಕೊಂಡು
ಬಂದ್ವಿ.
ಅಲ್ಲಿಂದ ನಾವು "ಹೆರಿಟೇಜ್ ವೀಲೇಜ್"ಗೆ ಹೋದೆವು. ನಮ್ಮಲ್ಲಿಯ ಜನಪದಲೋಕದ ತರಹ
ಒಂದು ಮಾದರಿ ಮಾಡಿ ಇಟ್ಟಿದ್ದಾರೆ. ಹಿಂದೆ ಅವರುಗಳು ಉಪಯೋಗಿಸುತ್ತಿದ್ದ ಸಾಮಾನುಗಳು, ಪಾತ್ರೆ ಪರಟಿಗಳು,
ಕಬ್ಬಿಣದ ಅಯುಧಗಳು, ನೇಯಿಗೆ, ಅವರ ಜೀವನ ರೀತಿ, 1960 ರಲ್ಲಿ ತೆಗೆದ ಮೊದಲ ಫೋಟೋ(ಶಾಲೆದು),
ಎಲ್ಲಾ ನೋಡಿದ್ವಿ.ಅಲ್ಲಿಂದ ಬಹಳ ಎತ್ತರದ ಧ್ವಜ ಸ್ತಂಭ ನೊಡಿದೆವು. ಅಬುಧಾಬಿಯಲ್ಲಿ ಗಲ್ಲಿಗಲ್ಲಿಯಲ್ಲೂ
ಗಗನ ಚುಂಬಿ ಕಟ್ಟಡಗಳು. ಒಂದು ಇನೊಂದಕ್ಕಿಂತ ಬಿನ್ನ. ಮೀನಿನ ಅಕಾರ, ತಟ್ಟೆಯ ಅಕಾರ, ರೌಂಡ್ ಮೇಲೆ
ರೌಂಟ್, ವಾಲಿದ ರೀತಿ ಕಟ್ಟಿದ ಕಟ್ಟಡ,ಬೆಳ್ಳಿ, ಬಂಗಾರ, ಬಣ್ಣ ಬಣ್ಣದ ಕಟ್ಟಡಗಳು. ಯಾವುದು 50-60 ಅಂತಸ್ತು
ಗಳಿಗಿಂತ ಕಡಿಮೆ ಇಲ್ಲ.
ಯು.ಎ.ಇ. ಅಂದರೆ ಯುನೈಟೆಡ್ ಅರಬ್ ಎಮೀರೇಟ್ಸ್. ಎಮರ್ ಅಂದರೆ ರಾಜ. ಏಕಚಕ್ರದಿಪತ್ಯ.
ಒಟ್ಟು 7. (1) ದುಬೈ (2) ಅಬುಧಾಬಿ(3)ಫುಜೈರ(4) ಅಲ್-ಶಾರ್ಜ (5) ಉಮರ್-ಅಲ್-ಖೋವೈನ್
(6) ರಾಸಲ್-ಕೈಮ (7) ಅಜ್ಮಾನ್. ಎಲ್ಲಾಕಡೆ ಬೇರೆ ಬೇರೆ ಆಡಳಿತ, ಕಾನೂನುಗಳು. ಎಲ್ಲಾಕ್ಕೂ "ಅಲ್"
ಸೇರಿಸುತ್ತಾರೆ. ಅಲ್ ಅಂದ್ರೆ ನಮ್ಮ ಶ್ರೀ ತರಹ. ಯು.ಎ.ಇ. ಅದರಲ್ಲೂ ಅಬುಧಾಬಿ ದೊಡ್ಡ ಮರುಭೂಮಿüಂದ
ಕೂಡಿದ ಅರೇಬಿಯನ್ ಪೆನಿಸುಲ. ಕಡಿಮೆ ಮಳೆ ಹಾಗು ವೀಪರೀತ ಹವಮಾನವನ್ನು ಅನುಭವಿಸಿದ
ಜನಪಂಗಡ ಇಲ್ಲಿದ್ದಾರೆ. ಜನ ಮುಂಚೆ ಅಲೆಮಾರಿಗಳು. ಏಷ್ಟೋಶತಮಾನಗಳ ನಂತರ, ಅರಬ್ ಸಂಪ್ರದಾಯದ
ಸಹಜ ಪ್ರಪಂಚಕ್ಕೆ ಹೊಂದಿಕೊಂಡು, ಖುರಾನ್ ಭೋಧನೆಯ ಮೇಲೆ ಜೀವನ ನಡೆಯುತ್ತಿತ್ತು. ಈ ಅಲೆಮಾರಿಗಳು ಓಯಸಿಸ್ಸ್ ಸುತ್ತಾ ಸೇರಿಕೊಳ್ಳುತ್ತಿದ್ದರು. ಅವರ ಜೀವನ, ಕುಟುಂಬ, ಜಾನುವಾರು, ಬೇಸಾಯ,
ಎಲ್ಲಾ ಅಲ್ಲೆ ಪಾಲಿಸುತ್ತಿದ್ದರು. ಸಿಗುವ ಕಡಿಮೆ ನೀರಿಗೆ ಒತ್ತಡ ತಂದು, ಓಯಸಿಸ್ ಹತ್ತಿರ, ನೂಕು ನುಗ್ಗಲು
ಹಾಗೂ ನೀರಿನ ದುರ್ಬಳಕೆ ಅಗದಂತೆ ಒಂದು ಕಡೆಯಿಂದ ಇನೊಂದು ಕಡೆಗೆ ಅಲೆಯುತ್ತಿದ್ದರು. ಕಾಲಾ ನಂತರ
ವೀಪರೀತ ವಿಂಡ್ ಎರೋಷನ್ ನಿಂದ ಮೂಲ ಪುರುಷರ ವಿಷಯ ತಿಳಿಯುವ ಪುರಾವೆ ಇಲ್ಲಿ ಸಿಗಲಿಲ್ಲ. 2003
ರಲ್ಲಿ, ಪ್ರಾಚೀನ ಸಂಶೋಧನಾಲಯದವರು ಸೌಧಿ ಅರೇಭಿಯಾ ಹಾಗು ಒಮನ್ ನಲ್ಲಿ ಸಂಶೋಧನೆಮಾಡಿ
ಪುರಾತನ ಇತಿಹಾಸದಲ್ಲಿದ್ದ ಅನೇಕ ರೀತೀಯ ಆಯುಧ ಶೋಧಿಸಿದ್ದಾರೆ. ವೈಪರೀತ ಪ್ರಕೃತಿಯ ಕಾರಣದಿಂದ
ಶಿಲಾಯುಗ ಹಾಗು ಇಸ್ಲಾಮಿಕ್ ಯುಗದ ಮದ್ಯೆ ವೀಪರೀತ ಅಂತರ ಕಂಡಿದ್ದಾರೆ. ಇಲ್ಲಿ ಬೈ ಸಿಸನಲ್ ಕ್ಲೈಮೆಟ್.
ಮೇ ನಿಂದ ಅಕ್ಟೋಬರ್ ಹಗಲು ತಪಾಮಾನ 45-50 ಡಿಗ್ರಿ ಇರುತ್ತೆ, ಮಳೆ ಇರೊಲ್ಲ. ನವಂಬರ್-ಏಪ್ರಿಲ್
ಚಳಿಗಾಲ, ಕೆಲವು ಸಲ ರಾತ್ರೆ 4 ಡಿಗ್ರಿ ಕುಸಿಯುತ್ತೆ. ಹೆಚ್ಚುತ್ತಿರುವ ಜನಸಂಖ್ಯೆ, ಬದಲಾಗುತ್ತಿರವ ಆರ್ಥಿಕ
ಪರಿಸ್ಶಿತಿ, ಆಧುನಿಕ ಜೀವನ ರೀತಿ, ಕ್ಷೇತ್ರದ, ಸೂಕ್ಷ್ಮತರ ಜೈವಿಕ ವ್ಯವಸ್ಶೆಗೆ ಒತ್ತಡ ತಂದಿದೆ. ಅದರೆ ಒಳ್ಳೆಯ
ವಾತಾವರಣ ನಿರ್ಮಿಸಲು ಶೇಕ್ ಬಹಳ ಪರಿಶ್ರಮ ನಡೆಸುತ್ತಿದ್ದಾರೆ.
ಮನೆಯಲ್ಲಿ ಮೂವರು ಕೆಲಸಕ್ಕೆ ಹೊರಟ ನಂತರ, ಬಾಲ್ಕನಿಯಿಂದ ಬೈ ಬೈ ಮಾಡುವಾಗ
ಬೆಂಗಳೂರಿನಲ್ಲಿ ಸಿಗದ ಗುಬ್ಬಚ್ಚಿಗಳನ್ನು ನಾವು ದರ್ಶನ ದಿನ ಮಾಡುತ್ತೆವೆ. ಪಾರಿವಾಳ, ಕಾಡು ಪಾರಿವಾಳ,
ಬೆಳ್ಳಕ್ಕಿ, ಬೆಕ್ಕು ದರ್ಶನವಾಯಿತು. ನಮ್ಮಲ್ಲಿ ಕಾಣುನಂತೆ ಕತ್ತೆ, ಹಸು, ಎಮ್ಮೆ, ನಾಯಿ ಇವುಗಳ ದರ್ಶನ
ರಸ್ತೆಯಲ್ಲಿ ಆಗುವುದೆಲ್ಲ. ಪಾಮ್ ಐಲ್ಯಾಂಡ್ನಲ್ಲಿ, ಎಲ್ಲಾ ಕಟ್ಟಡಗಳು, ಮರಳಿನ ಬಣ್ಣ. ಟ್ಯಾಕ್ಸಿ, ಹಾಗು ಎಮೀ
ರೇಟ್ಸ್ ಗಗನ ಸಖಿಯರ ಬಟ್ಟೆಯ ಬಣ್ಣ ಅದೇ ಮತ್ತು ಕೆಂಪು ಅಂಚು. ಗಂಡಸರು ಬಿಳಿಯ ನಿಲುವಂಗಿ,ತಲೆಗೆ
ಬಿಳಿ ಅಥವ ಚಕ್ಸ್ ಸ್ರ್ಕರಫ್. ಮುಖಬಿಟ್ಟು ತಲೆ ಮುಚ್ಚಿಕೊಳ್ಳಲು. ಸ್ರ್ಕರಫ್ ಸರಿಯಾಗಿ ನಿಲ್ಲಲೂ ಒಂದು
ರಿಂಗ್ ಕರಿದು. ಸ್ಯಾಂಡ್ ಸ್ಟರಂ ಬಂದಾಗ, ಇಳಿಬಿಟ್ಟ ಸ್ರ್ಕಫ್ ನಿಂದ ಮೂಗು ಬಾಯಿ ಮುಚ್ಚಿಕೊಳ್ಳುತ್ತಾರೆ.
ಲೇಡೀಸ್ ಅತ್ಯಂತ ಬೆಲೆಯುಳ್ಳ ವಸ್ಶ್ರ, ಆಭರಣ, ಮೇಕ್ ಅಪ್ ಮಾಡಿಕೊಂಢು ಕರಿಯ ಘೋಷ ಹಾಕಿಕೊಳ್ಳು
ತ್ತಾರೆ.
23ನೇ ತಾರೀಖು, ಮಗಳು ರಜ ಹಾಕಿದ್ದು, ನಮ್ಮ ಮೇಟ್ರೋ ಪ್ರಯಾಣದ ಅಸೆ ನೆರವೇರಿಸಲು.
ಎಲ್ಲಾ ಟ್ರನ್ಸ್‍ಪೊರ್ಟ್ ನಲ್ಲಿ ನಾವು ಹೊಗುವ ಅಸೆ ವ್ಯಕ್ತಪಡಿಸಿದೆವು. ಬೆಳಿಗ್ಗೆ ತಿಂಡಿ ತಿಂದು ಪೀಕ್ ಅವರ್ಸ್
ಆದ ನಂತರ, ಮನೆಯಿಂದ ಸಿಟಿ ಬಸ್ಸು ಹತ್ತಿ, ಅಲ್-ನದಾ ಸ್ಟೇಶನ್ಗೆ ಹೊದ್ವಿ. ಅವಳ ಮನೆಯ ಹತ್ತಿರವಿದ್ದ
ಪೆಟ್ರೊಲ್ ಬಂಕ್ ಶಾಪ್ ನಲ್ಲಿ ನಾವು ಒದೊಂದು ಗೀಚುವ ಕಾರ್ಡ್ ಅಂದರೆ ಮೊದಲೆ ಹಣ ತುಂಬಿದ ಸ್ಮಾಟ್
ಕಾರ್ಡ್,ಒಡಾಟ ಕೊಸ್ಕರ ಕೊಂಡ್ವಿ. ಬಸ್ಸಿನಲ್ಲಿ, ಮೇಟ್ರೋನಲ್ಲಿ, ಟ್ಯಾಕ್ಸಿಯಲ್ಲಿ ಉಪಯೋಗೆಸಬಹುದು. ಸಿಟಿ ಬಸ್ಸು
ನಲ್ಲಿ ಮೊದಲು ಹೆಂಗಸರಿಗೆ, ಕುಟುಂಬಕ್ಕೆ ಅಧ್ಯತೆ. ಎಲ್ಲೂ ನೀರು,ಆಹಾರ ತಿನ್ನುವಂತೆ, ಹಾಗು ನಿದ್ದೆ ಮಾಡುವ
ಹಂಗೆ ಇಲ್ಲ. ಇದು ಕಾನೂನು. ಮೇಟ್ರೋದಿಂದ ಊರಿನ ದೃಶ್ಯ, ಎದರು ಬರುವ ಇನ್ನೊಂದು ಮೇಟ್ರೋ,
ಕೆಳಗೆ ಓಡಾಡುವ ವಾಹನಗಳು, ಗಗನ ಚುಂಬಿ ಕಟ್ಟಡಗಳು, ಚೆನ್ನಾಗಿ ಕಾಣುತ್ತಿತ್ತು.
ನಾವು "ಮಾಲ್ ಅಫ್ ಎಮೀರೇಟ್ಸ್"ಗೆ ಹೊದ್ವಿ. ಅದು 65 ಲಕ್ಷ ಚದರ ಅಡಿ ಇದೆ. ಬಹಳ
ದೊಡ್ಡ ಮಾಲ್. ಅಲ್ಲೆ "ಐಸ್ ವಲ್ಡ್" ಮಾಡಿದ್ದಾರೆ. ಅಲ್ಲಿ ಇಲ್ಲಿ ಐಸ್ ಪರ್ವತಗಳು, ಐಸ್ ಸ್ಕೈಯಿಂಗ್
ಇತ್ತು. ಅಲ್ಲೆ ದೊರೆಯುವ ಬೆಚ್ಚಗಿನ ಬಟ್ಟೆಹಾಕಿಕೊಂಡು ಹಿಮದ ಅನುಭವ ಪಡೆಯಬಹುದು. ಮೆಟ್ರೋನಿಂದಲೇ
ಮಾಲ್ ಎನ್ಟೇನ್ಸ್ ಗೆ ಬರಬಹುದು. ಮತ್ತೆ ಮೆಟ್ರೋ ಹತ್ತಿ ಕರೋಮ ಸ್ಟೇಶರ್ನಗೆ ಬಂದ್ವಿ. ಅಲ್ಲಗೆ ನಮ್ಮ
ಅಳಿಯ ಬಂದ್ದಿದ್ದರು. ಅಲ್ಲಿ " ಶರಣವ ಭವನ್"ನಲ್ಲಿ ಊಟಮಾಡಿ. ಮನೆಗೆ ಬಂದು ವಿರಾಮ. ಸಂಜೆ ಪರ್ಚೇಸ್ಗೆ
ಹೊರಟ್ವಿ. ರೀಫ್ ಮಾಲ್ ಹಾಗು ಅಲ್-ಕ್ವಬೈಲ್ ಮಾಲ್ ನೋಡಿ ಮನೆಗೆ ಬಂದಾಗ ರಾತ್ರೆ 12.
23ರಂದು ಉಗಾದಿ ಪೂಜೆ ಮುಗಿಸಿಕೊಂಡರ "ದುಬೈ ಮಾಲ್" ಹೊದ್ವಿ. ಸಂಜೆ 5ವರೆಗೆ ಬುಜ ಖಲೀಫಾ ಮೇಲೆ ಹೊಗಲು ಬುಕ್ ಮಾಡಿದ್ರು. ಇದು 6 ವರ್ಷದಲ್ಲಿ ಕಟ್ಟಿದ ಕಟ್ಟಡ. 35,000 ಜನ
ತಂಗನಹುದು. 57 ಎಸ್ಕಲೇಟರ್, 164 ಅಂತಸ್ತು ಇದೆ. 868 ಮಿ. ಎತ್ತರ. 124 ಅಂತಸ್ತಿನ ವರೆಗೆ
ಹೋಗಬಹುದು. ಪ್ರಪಂಚದಲ್ಲೇ ಅತೀ ಶೀಘ್ರವಾಗಿ ಹೊಗುವ ಲಿಷ್ಟ್ ಇದೆ. 1ವರೆ ನಿಮಿಷದಲ್ಲಿ 124ನೇ
ಅಂತಸ್ತಿಗೆ ಬಂದ್ವಿ. ಇಡೀ ದುಬೈ ಅಲ್ಲಿಂದ ನೋಡಬಹುದು. ಅಕ್ಕಪಕ್ಕದ ರಸ್ತೆಗಳು, ಫ್ಲಯ್ ಒವರ್ ಬಹಳ
ಸುಂದರವಾಗಿ ಕಾಣುತ್ತಿದ್ದವು. "ನೆಲದಿಂದ ಗಗನದವರೆಗೂ". ಬಾಲ್ಲನಿಯಿಂದ ಹೊರಗೆ ನೊಡಬಹುದು. ಎಲ್ಲ
ಕಡೆ ಟೆಲಿಸ್ಕೋಪ್ ಇದೆ. ಅದರೊಳಗೆ ಕಾರ್ಡ ಹಾಕಿ ಸುತ್ತಾ ಮುತ್ತಲೂ ನೊಡಿದ್ವಿ. ವರ್ಣಿಸಲು ಪದಗಳು ಇಲ್ಲ.
ಕೆಳಗಿನ ದೃಶ್ಯ, ನೀಲಿ ಬಣ್ಣದ ನೀರು, ಕೆಂಪಾಗಿ ಮುಳುಗುತ್ತಿರುವ ಸೂರ್ಯ, ಬಹಳ ಚೆನ್ನಾಗಿ, ಸಣ್ಣದಾಗಿ ಕಾಣುತ್ತಿತ್ತು. ಪ್ರಪಂಚದಲ್ಲೆ ಆತೀ ಎತ್ತರದ ಗೋಪುರ. ಅದಕ್ಕೋಸ್ಕರ ಕೆಲಸ ಮಾಡಿದ ಕಂಪನಿ ಟೀಮ್ ರವರ
ಫೋಟೋ ಹಾಕಿದ್ದರು. ಬಹಳ ಭಾರತೀಯರ ಫೋಟೋ ಸಹ ಇತ್ತು. ಅಲ್ಲಿ ಉಪಯೋಗಿಸಿದ ತಾಂತ್ರಿಕತೆ
ಬಹಳ ಆಧ್ಧುತ. ಕೆಳಗಿನಿಂದ ಸಿಮೆಂಟ್ ಅಷ್ಟು ಎತ್ತರಕ್ಕೆ ಪಂಪ್ ಮಾಡಿದ್ದಾರೆ. ಕಟ್ಟಡದ ಎತ್ತರ ಬೆಳೆಯುತ್ತಿ
ದ್ದಂತೆ, ಕ್ರೇನ್ ಎತ್ತರ ಗೊಳಿಸುತ್ತಿದ್ದರು. 5 ದಿನಕ್ಕೆ ಒಂದು ಫೊರ್ಲ್ ಮುಗಿಸುತ್ತಿದ್ದರು. ಅದರ ಬೆಳವಣಿಗೆ
ಯನ್ನು ನೋಡಿದ ನಮ್ಮ ಅಳಿಯ ಹಾಗು ಇತರರು ಹೆಮ್ಮೆಯಿಂದ ಹೇಳುತ್ತಿದ್ದರು. 2010ರಲ್ಲಿ ಒಪನ್ ಅಯಿತು.
ನಾವು ಸಣ್ಣವರಿದ್ದಗಾ "ಸಾಯೋಕ್ಕೆ ಮುಂಚೆ ಒಮ್ಮೆ ನೋಡು ಜೋಗದ ಗುಂಡಿ" ಅನ್ನುತ್ತಿದ್ದರು.
ಅ ದಿನ ಅಷ್ಟೆ ಇತ್ತು. ಪ್ರಪಂಚ ಅಷ್ಟು ಬೆಳೆದಿರಲಲಿಲ್ಲ. ನಂತರ ಸಿಂಗಪುರ್ ನೋಡಲು ಒಂದೊ ಹಾಡೇ ಇತ್ತು.
"ಜೀವನ್ ಮೆ ಎಕ್ ಬಾರ್ ಅನಾ ಸಿಂಗಪುರ್" ಅಂತ. ಈಗ ಹೊಸದಾಗಿ ಹೇಳಬಹುದು "ಪ್ರಪಂಚದಲ್ಲಿ ಯಾವ
ದೇಶವನ್ನು ನೋಡದಿದ್ದರು ಪರವಾಗಿಲ್ಲ, ದಬೈ ಮಾತ್ರ ನೋಡಬೇಕು. ಅಸದಳವಾದ್ದನ್ನು ನಿರ್ಮಿಸಿದ್ದಾರೆ.
ಇಳಿದ ಮೇಲೆ ಕೆಳಗೆ ದೊಡ್ಡ ಕಾಲುವೆ (ಕ್ರೀಕ್ ) ಸುತ್ತಲು, ಫೇಮಸ್ ಹೋಟೆಲ್ ಗಳು.
ಅಲ್ಲಿ 7 ಗಂಟೆಗೆ "ಮ್ಯೂಸಿಕಲ್ ಫೌಂಟೈನ್" ಪ್ರಾರಂಭವಾಗುತ್ತೆ. ಪ್ರತಿ ಅರ್ಧ ಗಂಟೆಗೆ ಇದೆ. ಬಹಳ ಎತ್ತರಕ್ಕೆ
ನೀರು ಚಿಮ್ಮೂವಾಗ ಎಲ್ಲಾರು ಹರ್ಷದಿಂದ ಉದ್ಗಾರ ತೆಗೆಯುತ್ತಿದ್ದರು. ಹಾಡಿಗೆ ತಕ್ಕಂತೆ ನೀರಿನ ನರ್ತನ.
200 ಮಿ.ಎತ್ತರಕ್ಕೆ ಹಾರುತ್ತೆ. ನಿಜವಾಗಲು ಸ್ವರ್ಗ. ಕೆಳಗಿಂದ ಬುರ್ಜ ಖಲೀಫಾ ನೊಡಲು ತಲೆ ಎತ್ತಿದರೆ,
ಕುತ್ತಿಗೆ ಬಹಳ ಹಿಂದಕ್ಕೆ ಹಾಕಿದರೆ ಅದರ ತುದಿ ಕಾಣುತ್ತದೆ. ಕುತ್ತಿಗೆ ನೋವು ಬರುತ್ತೆ ಅಷ್ಟು ಎತ್ತರ. ಆ
ದಿನ ಕೆಳಗಡೆ ಒಂದು ಸಮಾರಂಭ ಅಗುತ್ತಿತ್ತು. ದ್ಯಿವ್ಯಾಂಗ ರವರ ದಿನ. ಅವರನ್ನು, ಸಂತೋಷ ಪಡಿಸಲು
ವಿವಿಧ ವಿನೋಧವಳಿಗಳು ಇತ್ತು. ಅಲ್ಲಿ ಹೆರೀಟೇಜ್ ವೀಲೇಜ್ ನಲ್ಲಿ ಇದ್ದಹಾಗೆ ಹಳೆಯ ಕಾಲದ ಜನರ
ವೇಶ ಭೂಷಣ ಹಾಕಿಕೊಂಡು ಮಾಡೆಲ್ ಅಗಿ ಕುಳಿತ್ತಿದ್ದರು. ಪಾಮ್ ಮರದ ಎಲೆಗಳ ಗುಡಿಸಲು, ನೇಯ್ಗೆ,
ಅಡಿಗೆ ಮನೆಗಳು ಎಲ್ಲಾ ನೋಡಬಹುದಿತ್ತು.
ಅಲ್ಲಿಯ ಪಾಲ್ಕನ್ ಒಂದು ತರಹದ ಹದ್ದು.(ಬಹಳ ಕ್ರೂರ ಪಕ್ಷಿ) ಅದನ್ನು ಸಾಕುತ್ತಾರೆ.
ಅದನ್ನು ಪ್ರದರ್ಶಿಸುತ್ತಿದ್ದರು. ಅವರ ಜೊತೆ ಹಕ್ಕಿ ಮುಟ್ಟಿ ಅದರ ಫೋಟೋ ತೆಗೆಸಿಕೊಂಡೆವು. ಅದರ ಕಣ್ಣು, ಕಾಲು ಕಟ್ಟಿರುತ್ತಾರೆ. ಅದನ್ನು ಸಾಕುವುದು ಅವರ ಹಾಬಿ. ಹಾಗೆಯೇ ಕ್ರೂರ ಪ್ರಾಣಿಗಳನ್ನು ಸಾಕುತ್ತಾರೆ.
ಸಂಪ್ರದಾಯಕವಾದ ಕಲೆ, ನೃತ್ಯಗಳು, ಹಾಡುಗಳು ಅವರದೇ ರೀತಿಯಲ್ಲಿ ಇದೆ. ಅದನ್ನು ರಕ್ಷಣೆ ಮಾಡಿದ್ದಾರೆ.
ಓಯಸಿಸ್, ಕೊಸ್ಟಲ್, ಹಾಗು ಡೆಸರ್ಟ್ ರವರದು, ಅವರವರದೇ ಭಿನ್ನ ಕಲೆ ಇದೆ. ಅರೇಭಿಯನ್ ಸ್ಟಿಂಗ್ ವಾದ್ಯ
ದ ಹೆಸರು "ರಬಬಾ".
30ನೇ ತಾರೀಖು ಸಂಜೆಯೇ ನಾವು ಅಲೈನ್ ಗೆ ಹೊದೆವು. 2 ಗಂಟೆ ಪ್ರಯಾಣ. 9 ತಿಂಗಳು
ಅರುಣ ಈ ಜಾಗದಲ್ಲಿದ್ದಳು. ಗುರು ಮುಂಚೆ ಇದ್ದ ಜಾಗ. ಅವರ ಸ್ನೇಹಿತರು, ರಮ ಹಾಗು ಶ್ರೀವತ್ಸರವರು
ನಮ್ಮ ಜೊತೆ ಹೊರಟರು. ದುಬೈ ಮುಗಿದ ಮೇಲೆ ಎರಟು ಕಡೆ ಮರುಭೂಮಿಯ ದೃಶ್ಯಗಳು. ದಾರಿಯ
ಇಕ್ಕೆಲ್ಲದಲ್ಲೂ ಬೇಲಿ. ಕಾಡು ಒಂಟೆಗಳು ದಾರಿಗೆ ಅಡ್ಡ ಬರದಹಾಗೆ. ಇಟ್ಟಿಗೆ ಬಣ್ಣದ ಮರಳು. ಅರ್ಧ ದಾರಿ
ಯಲ್ಲಿ ಪೆಟ್ರೋಲ್ ಬಂಕ್ ಹತ್ತಿರ ಇಳಿದು ಮರುಭೂಮಿಯ ಚರಣ ಸ್ಪರ್ಷ. ಅಲೆ ಅಲೆಯಾಗಿ ಮರಳರಾಶಿ.
ನಡೆದರೆ ಕಾಲು ಹೂತು ಹೊಗುತ್ತಿತ್ತು.ಇದರ ಸೌಮದರ್ಯವೇ ಬೇರೆ. ಅಲ್ಲಿಂದ ಮತ್ತೆ ಪ್ರಯಾಣ. ಅಲೈನ್
ಹತ್ತಿರ ಬರುತ್ತಿದ್ದಹಾಗೆ ಎಲ್ಲೋ ಚಾಮುಂಡಿಬೆಟ್ಟ ಇದೆಯೆನೋ ಅನ್ನಿಸುತ್ತಿತ್ತು. ಅದೆ ತರಹ ಬೆಟ್ಟದ ತುದಿ
ತನಕ ದೀಪ ಕಾಣುತ್ತಿತ್ತು. ಯಾವ ತರಹದ ಗಗನ ಚುಂಬಿ ಕಟ್ಟಡವಿಲ್ಲ. ಶೇಖ್ ರವರು ಇದ್ದ ಜಾಗ. ಬಹಳ
ಸುಂದರವಾಗಿ, ಹಸಿರಾಗಿ ಇದೆ. ಎರಡು ಕಡೆ ಹಸಿರು ಹೊನ್ನು ಹೂವುಗಳು. ರಸ್ತೆಯ ಎಲ್ಲ ಸರ್ಕಲ್ಗಳು
ಚೆನ್ನಾಗಿ ಅಲಂಕರಿಸಿದ್ದಾರೆ.
ಇಲ್ಲಿ ಇದ್ದ "ಅಲ್ ಅಲೈನ್ ಪ್ಯಾರಡೈಸ್", ಒಂದು ಹೂವಿನ ತೋಟ, ಲಾಲ್ ಬಾಗ್ ಅಪ್ಪನಂತ
ಹದು. ಗಿನ್ನೀಸ್ ಬುಕ್ ವರ್ಡ ರೆಕಾರ್ಡ ಅಗಿದೆ. ಹೂವಿನಿಂದಲೆ ತುಂಬಿದೆ. ಹೂವಿನ ಗೊಡೆಗಳು, ಹೂವಿನ
ರಸ್ತೆ,ಹೂವಿನ ಕುಂಡಗಳ ಸಾಲು ಜೋಡನೆ, ಅರ್ದ ಚಂದ್ರಾಕಾರ, ಪೆರಮಿಡ್ ಅಕಾರ, ಪ್ಯಾರೀಸ್ ಟವರ್ ಬಹಳ
ವಿನ್ಯಾಸ ಮಾಡಿದ್ದಾರೆ. ಹೋಳಿ ಹಬ್ಬದಲ್ಲಿ ಚೆಲ್ಲಿದ ಬಣ್ಣದ ತರಹ ಬಣ್ಣ ಬಣ್ಣದ ಹೂವುಗಳು. ಹೂವಿನ
ಕುಂಡಗಳ ಮದ್ಯೆ ಮೂರು ಶೇಖ್ ರವರ ಫೋಟೂಗಳು ಇವೆ.ಅಲೈನ್ ಮ್ಯೂಸಿಯಂ ನೊಡಿದ್ವಿ. ಪೆಟ್ರೋಲ್
ಶೋಧನೆಗಿಂತ ಮುಂಚೆ ಇದ್ದ ಅರ್ಕಿಟೆಕ್ಚರ್ ಪ್ರತಿಬಿಂಬಿಸುವ ಕಟ್ಟದ ಮಾದರಿ. ಅಲ್ಲಂದ ಓಯಸಿಸ್ ಬಳಿ ಇರುವ
ಡೇಟ್ ಫಾರ್ಮಗೆ ಹೊಗೆದ್ವಿ, ತೆಂಗಿನ ಮರಕ್ಕಿಂತ ದೊಡ್ಡದಾಗಿರುವ ಮರಗಳು, ಹಕ್ಕಿಗಳ ಕಲರವ ಕೇಳಿದ್ವಿ.
ಎಲ್ಲಾರ ಫಾರಮ್ ಒಂದೆಕಡೆ. ಒಂದೊಂದು ದಿನ ಒಬೊಬ್ಬರಿಗೆ ನೀರು ಹಂಚುವ ಎರ್ಪಾಡುವಿದೆ. ಒಂದು ತರ
ಒಟ್ಟು ಬೇಸಾಯ. ಇಲ್ಲಿರುವ ಓಯಸಿಸ್ ಶತ ಶತಮಾನಗಳ ಹಳೆಯದು. ಈಗಿರುವ ಅಲೈನ್ ಹಾಗು ಅಬು
ಧಾಬಿ ಹಳೇಯ ಓಯಸಿಸ್ ಬೇಸ್ಗಳು. ಇಲ್ಲಿ 3,000 ಎಕರೆ ಜಾಗದಲ್ಲಿ 1,47,000 ಖರ್ಜೂರ ಗಿಡಗಳು, ಇತರೆ
ಪಾಮ್, ಕಿತ್ತಳೆ, ಬಾಳೆ, ಆಂಜೂರ, ಜುಜುಬಿಸ್ ಬೆಳೆಯುತ್ತಾರೆ. ಅಲ್ಲಿಂದ ನಾವು ಬಿಸಿನೀರಿನ ಬುಗ್ಗೆ ಇರುವ
ಕಡೆ ಹೋಗಿ, ಅಲ್ಲಿ ಕಾಲು ಸುಮಾರು ಹೊತ್ತು ಇಟ್ಟುಕೊಂಡು, ಕಾಲಿನ ಅರೈಕೆ ಮಾಡಿಕೊಂಡ್ವಿ, ಅಲ್ಲಿ ಜನರು
ಕುಳಿತುಕೊಳ್ಳಲು, ಛತ್ರಿ ಅಕಾರಮ ಚಪ್ಪರಗಳು, ಮಂಟಪಗಳು,ಅಡಿಗೆ ಮಾಡಿಕೊಳ್ಳಲು ಇದ್ದಿಲಿನ ಒಲೆಗಳು, ಲೆಕ್ಕ
ವಿಲ್ಲದಷ್ಟು ಮರಗಳು ಇದ್ದು ತಣ್ಣನೇ ಗಾಳಿ ಬೀಸುತ್ತಿತ್ತು. ಅದು ಒಣ ಬೆಟ್ಟದ ಮೇಲೆ ಇದೆ. ಈ ಜಾಗದ
ಹೆಸರು "ಜಬರ್ ಅಫೀದ್". ಅಲ್ಲಿಂದ ಮರಭೂಮಿಯ ಬೆಟ್ಟದಲ್ಲಿ ಕೊರೆದು ಮಾಡಿದ ರಸ್ತೆಯಿಂದ 1,300 ಮಿ.
ಎತ್ತರದಲ್ಲಿ ಇರುವ "ವ್ಯೂ" ಪಾಯಿಂಟ್ ಗೆ ಬಂದೆವು. ಬೆಟ್ಟ ಸೆಡಿಮೆಂಟರಿ ರಾಕ್ನಿಂದ ಕೂಡಿದೆ. ಹಿಮಾಲಯದ ತರಹ. ಅಲ್ಲಿ ಹಸಿರು. ಇಲ್ಲಿ ಬರೇ ಕಲ್ಲುಗಳು. ಬಹಳ ಗಾಳಿ ಧೂಳು ಇತ್ತು. ಎಲ್ಲಿ ನೋಡಿದರು ಸುತ್ತಾಲು
ಮರುಭೂಮಿ. ಬಹಳ ಸ್ವಚ್ಛವಾಗಿದೆ, ಜನರು ರಾತ್ರೆ ಇಲ್ಲಿಗೆ ಬಂದು ವಿಹರಿಸಿ, ಸಿನಿಮಾ ನೋಡಿ ರಾತ್ರೆಯಲ್ಲಾ
ಕಳೆದು, ಬೆಳಗಿನ ಸೂರ್ಯೋದಯ ನೋಡಿಕೊಂಡು ಹಿಂತಿರುಗುತ್ತಾರೆ. ಪಾರ್ಕ ನಲ್ಲೂ ಮಕ್ಕಳು ದೃಷ್ಟ ಚೇಷ್ಟೆ
ಮಾಡುವುದಿಲ್ಲ. ಚಿಕ್ಕಂದಲ್ಲೆ ಎಲ್ಲ ಅಭ್ಯಾಸ ಮಡಿರುತ್ತಾರೆ. ಯಾರೂ ಹೂವು ಕಿಳೋಲ್ಲ, ಮುಟ್ಟಲ್ಲ, ಹಾಳು
ಮಾಡೊಲ್ಲ. ಅಲ್ಲಿ ಶೀವತ್ಸ ರವರ ಅಣ್ಣನವರ ಮನೆಯಲ್ಲಿ, ಅವರ ಅತಿಥ್ಯ, ಅಭಿಮಾನ ಮರೆಯಲು ಅಗೊಲ್ಲ.
ಅಲೈನ್ಗೆ ಹೊಗುವಾಗ ಓಮನ್ ಗಡಿ ಪಕ್ಕದಲ್ಲೆ ಹಾದು ಹೋಗಬೇಕು. ಅಲ್ಲಿಂದ ನಾವು "ಲೈವ್ ಸ್ಟಾಕ್
ಮಾರ್ಕೇಟ್" ಗೆ ಹೋದ್ವಿ ಅಸಾಂಖ್ಯತ ಹಸುಗಳು, ಮೇಕೆಗಳು, ಕುರಿಗಳು, ಓಂಟೆಗಳು, ಅವುಗಳ ಅಹಾರ, ಸಾಕ
ಣಿಕೆಗೆ ಬೇಕಾಗುವ ಸಾಮಗ್ರಿಗಳ ಮಾರಟ ಮಳಿಗೆಗಳು ಇದ್ದವು.ಅಲೈನ್ ನಲ್ಲಿ ಹಾಲಿನ ಡೈರಿ ಇದೆ. ಇಲ್ಲಿ
ಹಾಲು, ಮೊಸರು, ಮಜ್ಜಿಗೆ, ತರತರಹದ ಸ್ವಾದ ಮಜ್ಜಿಗೆ ದೊರೆಯುತ್ತೆ. ನಾನಂತು ಯಾವತ್ತು ಮಜ್ಜಿಗೆ
ತಪ್ಪಿಸಲ್ಲಿಲ್ಲ.
ರಸ್ತೆಗಳು ಚೆನ್ನಾಗಿರುವುದರಿಂದ 120 ಕಿ.ಮಿ. ಒಂದು ಗಂಟೆಯ ವೇಗಕ್ಕೆ ಹೋಗುತ್ತಾರೆ. ಕಾರು
ಗಳು ಚೆನ್ನಾಗಿರುತ್ತೆ. ಬೇಲಿ ಇಕ್ಕೆಲಗಳಲ್ಲಿ ಇರುವುದರಿಂದ ಜನರು, ಪ್ರಾಣಿಗಳು ಅಡ್ಡ ಬರೊಲ್ಲ. ಊರಿಂದ
ಊರಿಗೆ ಹಾದು ಹೋಗಲು ಬೇರೇಯೇ ಅಂಡರ್ ಪಾಸ್ ಇರುತ್ತೆ. ಪ್ರಯಾಣದ ಸುಸ್ತು ಹೆಚ್ಚಾಗೊಲ್ಲ. ಒಂದು
ಶನಿವಾರ ನಮ್ಮವರ ಸ್ನೇಹಿತರ ಮಗನ ಮನೆಗೆ ಹೊಗಿದ್ವಿ, ಶಾರ್ಜ ಸ್ಟೇಡಿಯಂ ಒಂದು ದಿನ ನೋಡಿದ್ವಿ, ದುಬೈ
ನಲ್ಲಿ ಎಲ್ಟ್ರಾನಿಕ್ ಸಾಮುನು, ಲೇಟೆಸ್ಟ್ ಮಾಡೆಲ್ ಕಡಿಮೆ ದರಕ್ಕೆ, ಅಂದರೆ ಟ್ಯಾಕ್ಸ್ ಇಲ್ಲದೆ ದೊರಕುತ್ತೆ.
ಟಿ.ವಿ.ಯಲ್ಲಿ ಪ್ರಕಟನೆಯಾಗುವ ಮುಂಚೆ ಇಲ್ಲಿ ಬಿಡುಗಡೆ ಅಗುತ್ತೆ. ದುಬೈನಲ್ಲಿ ಮುಖ್ತಂ ಸೇಕುವೆ ಅತಿ ದೊಡ್ಡದು. ಕೆಳಗೆ ಕ್ರೀಕ್ ನಲ್ಲಿ ದೋಣಿ. ಸಣ್ಣ ಹಡಗು ಹೋಗಿ ಬಂದು ಮಾಡುತ್ತಿರುತ್ತೆ. ಯಾವಗಲಾದರು
ದೊಡ್ಡ ಹಡಗು ಬಂದಾಗ ಸೇತುವೆ ಎತ್ತಿ ಕೋಳ್ಳ್ಲುತ್ತೆ. ಇನ್ನೊಂದು ಕಡೆ ತೇಲುವ ಸೇತುವೆ ರಾತ್ರೆ 10 ರ
ನಂತರ ತೇಲಿ ಪಕ್ಕಕ್ಕೆ ಸರಿದು ಹಡಗುಗಳು ಹೊಗಲು ಅಣಿ ಮಾಡಿಕೊಡುತ್ತೆ. ಬಾಕಿ ಎರಡು ಸೇಲುವೆ ತುಂಬ
ಬಿಸಿ. ಹೊರಡುವ ದಿನ ಹತ್ತಿರ ಬಂತು, ಗುರುವಾರ 5ನೇ ತಾರೀಖು ರಾತ್ರೆ 9ವರೆಗೆ, ಎಮಿರೇಟ್ಸ್ ನಲ್ಲಿ ಅಗಿತ್ತು.
ಬರೆಯುತ್ತಾ ಹೊದರೆ ಮುಗಿಯುವುದಿಲ್ಲ. 25 ದಿನ ಕಳೆದ್ದದು ಗೊತ್ತೆ ಅಗಲಿಲ್ಲ. ಅವರ ಅಭಿಮಾನ, ಸತ್ಕಾರ
ಕ್ಕೆ ಕೃತಜ್ಞತೆ ಅರ್ಪಿಸಬೇಕು.
ಟ್ಯಾಕ್ಸಿ ವಿಷಯ ಹೇಳಬೇಕು. ಮನಿ ರಿಚಾರ್ಜ್ಡ್ ಮ್ಯಾಗ್ನಟಿಕ್ ಕಾರ್ಡ್ ಟ್ಯಾಕ್ಸಿಗೂ ಅನ್ವಯಿಸುತ್ತೆ.
ಹೆಂಗಸರಯ ಒಬ್ಬರೆ ಬಂದರೂ ಸಹ, ಯಾವ ಹೆದರಿಕೆ ಇಲ್ಲದೇ ಓಡಾಡಬಹುದು. ಗಾಂಧೀಜಿಯ ಮಾತು
ನೆನಪಿಗೆ ಬಂತು. "ರಾತ್ರೆ 12 ಕ್ಕೆ ಅದರೂ ಯಾವ ಹೆಣ್ಣು ಮಗಳು ಭಯವೆಲ್ಲದೇ ಓಡಾಡುತ್ತಾರೋ ಅಗ
ಅವರಿಗೆ ಸ್ವಾತಂತ್ರ ಬಂದಹಾಗೆ", ಅನ್ವಯಿಸುತ್ತೆ. ರಾತ್ರೆ ತಂಪಾಗಿರುವುದರಿಂದ 12 ತನಕ ನಿರ್ಭಯವಾಗಿ
ಓಡಾಡುತ್ತಿರುತ್ತಾರೆ. ಲೇಡೀಸ್ ಸಹ ಟ್ಯಾಕ್ಸಿ ಓಡಿಸುತ್ತಾರೆ. ವಿಶೇಷ ಪಿಂಕ್ ಬಣ್ಣದ ಗಾಡಿ ಕೇವಲ ಹೆಂಗಸರಿಗೆ.
ಟೋಲ್ ಗೇಟ್ ಬಂದಾಗ, ಕಾರಿನ ಹೊರಗಡೆ ಅಂಟಿಸಿದ ಪ್ರೀ ಪೇಡ್ ಫೀ ರಸೀದಿಯಿಂದ, ರೆಡಾರ್ ಮೂಲಕ
ಟೋಲ್ ಫೀ ಕಟ್ ಅಗುತ್ತೆ. ನಮ್ಮೆಲ್ಲರಿಗೂ ಅಗಲುವ ದುಃಖದಿಂದ ಮೌನವಾಗಿದ್ದೆವು. ಬೆಳಿಗ್ಗೆನೇ ಕುಂಕುಮ
ಕೊಟ್ಟದ್ದಳು. ರಾತ್ರೆ ಸೀದ ಕೆಲಸ ಮುಗಿಸಿಕೊಡು ಎರ್ ಪೋಟ್ಗೆ ಬಂದಳು. ಎಲ್ಲರು ಅಲ್ಲಿ ಸೇರಿದೆವು. ಮುಕ್ಕಾಲು
ಗಂಟೆ ವಿಮಾನ ತಡವಾಯಿತು. ಮತ್ತೆ ಅದೇ ಊಟ ವಿಮಾನದಲ್ಲಿ. ಸಹಿ ಮಾತ್ರ ಕ್ಯಾರೇಟ್ ಪುಡಿಂಗ್. 3ವರೆಗೆ
ಲ್ಯಾಂಡ್ ಅದೆವು. ಎಲ್ಲ ಕ್ಲಿಯರ್ ಮಾಡಿಕೊಂಡು, ಮನೆಗೆ ಬರುವುದರ ಒಳಗೆ 4 ವರೆ ಅಯಿತು. ವಾಪಸ್ಸು
ಪ್ರಯಾಣದಲ್ಲಿ ಫಣಿ ನಮ್ಮ ಜೊತೆ ಇದ್ದರು. ಬೆಳಕು ಹರಿಯುನ ತನಕ ಮಾತನಾಡಿದೆವು. ಮತ್ತೆ ಬೆಂಗಳೂರು
ಯಾತ್ರಿಕ ಜೀವನ ಪ್ರಾರಂಭವಾಯಿತು. ಭಗವಂತನ ಕೃಪೆಯಿಂದ ಎಲ್ಲಾ ಸಾಂಗವಾಗಿ ನೇರವೇರಿತು.
8ನೆ ಏಪ್ರೀಲ್ 2012.
ಎರಡನೇ ಬಾರಿ ದುಬೈಗೆ ಜೂನ್ 29 2015 ರಂದು ಹೊಗಿ ಜುಲೈ 12 ರಂದು ಬಂದ್ವಿ.
ನಮ್ಮ ಯಜಮಾನರಿಗೆ ಶಾರ್ಜ ಇಂಡಿಯನ್ ಸ್ಕೂಲ್ ನಲ್ಲಿ ವರ್ಕ ಶಾಪ್ ಇತ್ತು. ಅವರ ಟೀಮ್ ಅಲ್ಲಿಗೆ
ಬಂದಿತ್ತು. ಹತ್ತಿರವೇ ಇದ್ದ ದುಬೈಗೆ, ಇವರ ಆಪ್ತ ಸ್ನೇಹಿತರಾದ, ವಾಸುದೇವ್ ರವರ ಹೆಂಡತಿ ವೀಣಾ
ಹಾಗು ನಾನು ಮಗಳು, ಅಳಿಯರಿಂದ ವೀಸಾ ತೆಗೆಸಿಕೊಂಡು ಅವರ ಮನೆಗೆ ಬಂದು ಇಳಿದೆವು. ಬೆಂಗಳೂರಿ
ನಲ್ಲಿ ಬೆಳಿಗ್ಗೆ 3 ವರೆಗೆ ಎದ್ದು, ಸ್ನಾನಮಾಡಿ, ಉಪಹಾರ ತಯಾರು ಮಾಡಿಕೊಂಡು, 4 ವರೆ ಹೊತ್ತಿಗೆ
ಮನೆ ಬಿಟ್ಟು, 5 ಗಂಟೆಗೆ ಎರ್ ಪೋರ್ಟ್ ಬಂದ್ವಿ. 7 ಗಂಟೆಯ ಇಂಡಿಗೋ ವಿಮಾನ ಎರಿದೆವು. 3ವರೆ ಗಂಟೆ
ಪ್ರಯಾಣ, ಚಪಾತಿಯನ್ನು ಟೊಮೆಟೋ ಚಟ್ನಿಯಿಂದ ರೋಲ್ ಮಾಡಿಕೊಂಡು, ಜೊತೆಯಲ್ಲಿ ಹುರಿಟ್ಟಿನ ಲಾಡು
ಬೆಳಿಗ್ಗೆಯ ತಿಂಡಿಯಾಯಿತು. ಇಂಡಿಯಾ ಬಿಟ್ಟು ಎಲ್ಲಾ ದೇಶದಲ್ಲಿ, ಜೂನ್ ಜುಲೈನಲ್ಲಿ, ಮಕ್ಕಳಿಗೆ ರಜವಿರುವು
ದರಿಂದ ಫ್ಲೈಟ್ ಚಾರ್ಜ್ ಬಹಳ. ಇಲ್ಲಿಂದ ಹೋಗುವಾಗ ಖಾಲಿ ಖಾಲಿ. 3 ಸೀಟ್ ಇರುವ ಕಡೆ ಕೆಲವರು
ಮಲಗಿ ಪ್ರಯಾಣಿಸಿದರು. ವಾಪಸ್ಸು ಬರುವಾಗ ಬಹಳ ರಶ್ ಹಾಗು ದುಭಾರಿ. ದುಬೈಗೆ ಹೊಗುವ ರೇಟ್
ಗಿಂತ 4 ಪಟ್ಟು ಹೆಚ್ಚು. ವಿಮಾನ ದರಗಳು ಬೇಡಿಕೆಯ ಮೇಲೆ ವ್ಯೆತ್ಯಾಸವಾಗುತ್ತದೆ. ಜನವರಿಯಲ್ಲಿ ಪ್ರಯಾಣ
ದರ ಕಡಿಮೆ. ಆಗ ಪ್ರಪಂಚ್ಯಾದ್ಯಂತ, ದುಬೈ ಫೆಸ್ಟಿವಲ್ ನೊಡಲು ಬಹಳ ಜನರು ಬರುತ್ತಾರೆ. ಮಗಳು
ಎರ್ ಪೋರ್ಟ್ ಗೆ ಬಂದು, ಅಲ್ಲೇ ಹತ್ತಿರವಿದ್ದ ಮನೆಗೆ ಕರೆದುಕೊಂಡು ಹೋದಳು.
ಈ ಸಲ ನಾವು ಮೊದಲು ನೋಡಿದ್ದು, "ಫೂಜ್ಯರ". ಯು.ಎ.ಇ.ಯ ಒಂದು ರಾಜ್ಯ. ಅವಳ
ಮನೆಯಿಂದ ಶಾರ್ಜ ಮೂಲಕ, 150 ಕಿ,ಮಿ. ದೂರ. 2 ಕಾರ್ ನಲ್ಲಿ ಪ್ರಯಾಣ. ಅರುಣಾಳ ಕಾರ್ ನಲ್ಲಿ,
ಅವಳ ಡೈವಿಂಗ್ ನಲ್ಲಿ, ನಾನು, ಇವರು ಹಾಗು ಇವರ ಸ್ನೇಹಿತ ದಂಪತಿಯರು. ಅಳಿಯನವರ ಕಾರ್ ನಲ್ಲಿ
ಅವರ ಕಸೀನ್, ಅಮೇರಿಕದಿಂದ ಬಂದವರು ಅವರ ಫ್ಯಾಮಿಲಿ. ಹೊರಗಡೆ ವಿಪರೀತ ಬಿಸಿಲು.45ಡಿಗ್ರಿ ಯಿಂದ
50. ಕಾರಿನ ಮೇಲೆ ಹೀಟ್ ಎಷ್ಟಿದೆ ತೋರಿಸಲು, ಅಮ್ಲೇಟ್ ಮಾಡುತ್ತಾರೆ. ಅಷ್ಟು ಬಿಸಿ. ಎರ್ ಕಂಡೀಷನ್
ಒಳಗಡೆ ಇರುವುದರಿಂದ ಗೊತ್ತಗುವುದಿಲ್ಲ. ಪ್ರಯಾಣದ ಉದ್ದಕ್ಕೂ, ಮೊದಲು ಬಿಳಿ, ಕೆಂಪು, ನಂತರ ಕಪ್ಪು
ಬಣ್ಣದ ಮರಳ ರಾಶಿಗಳು. ಮರುಭೂಮಿಯಲ್ಲಿ ಅಲ್ಲಲಿ ಹಸಿರು ಮುಳ್ಳು ಗಿಡಗಳು. ಅಲೆ ಅಲೆ ಯಂತ್ತಿದ್ದ
ಮರಳ ರಾಶಿಗಳ ಮಧ್ಯೆ, ಕಾಡಿನ ದೈತ್ಯ ಒಂಟೆಗಳ ದರ್ಶನ. ನಮ್ಮಲಿಯ ಹಿಮವತ್ ಪರ್ವತಗಳಂತೆ,
ಇಲ್ಲಿ ಹಿಮ ಇಲ್ಲದ ಕರಿಯ ಪರ್ವತಗಳು, ಬಹಳ ಮೈಲಿಗಳ ದೂರ ಹರಡಿ ಕೊಂಡ್ಡಿದ್ದವು. ಒಂದು ಚೂರು
ಹಸಿರಿಲ್ಲದ ಕರಿಯ ಪರ್ವತಗಳು, ಮರಭೂಮಿಗೆ ಬೆರೇಯೇ ಸೌಂದರ್ಯವನ್ನು ಕೊಟ್ಟಿತ್ತು. ಅವುಗಳು ಕಬ್ಬಿಣದ
ಅದರಿನಿಂದ ಕೊಡಿದ ಹೇರಳವಾದ ಖನಿಜ ಸಂಪತ್ತಿನಿಂದ ಕೊಡಿದ ಪರ್ವತಗಳು. ಲೆಕ್ಕವಿಲ್ಲದಷ್ಟೂ ಸಂಪತ್ತು
ಇದ್ದರೂ, ಅತುರ ದಿಂದ ಎಲ್ಲ ಸಂಪತ್ತನ್ನು ಶೋಷಣೆ ಮಾಡದೆ, ಎಷ್ಟೂ ಬೇಕೊ ಅಷ್ಟು ಉಪಯೋಗಿಸಿ,
ಭವಿಷ್ಯತ್ತಿಗೆ ಇಟ್ಟಿರುತ್ತಾರೆ. ಇಲ್ಲಿ "ವಾಡಿ" ಯು ನೀರು ಸಂಗ್ರಯಿಸುವ ಜಾಗ. ಇಲ್ಲಿಯೇ ಡಿ ಸೇಲಿನ್ ಮಾಡುವ
ಜಾಗ. ಅಂದರೆ ಸಮುದ್ರದ ನೀರಿನಲ್ಲಿ ಉಪ್ಪಿನ ಅಂಶ ತೆಗೆದು ಉಪಯೋಗಿಲು ಅಣಿಮಾಡಿವುದು. ಇಲ್ಲೇ ಸುತ್ತಾಲು ಬೊಗನ್ ವಿಲಾ ಹೂವಿನ ಗಿಡಗಳಿಂದ ಅಲಂಕೃತವಾದ ಗೂಡೆ ಬೆಳಸಲಾಗಿತ್ತು. ರಸ್ತೆ ಉದ್ದಕ್ಕೂ
ಫಲಭರಿತ ಖರ್ಜೂರ ಗಿಡಗಳು ಅಷ್ಟು ದೂರಕ್ಕೂ ಇದ್ದವು. ದಾರಿಯಲ್ಲಿ ಕಾರು ನಿಲ್ಲಿಸಿ, ಮರದಿಂದ ಸೀದಾ
ಬಾಯಿಗೆ ಹಾಕಿಕೊಂಡು ಅದರ ಸ್ವಾದ ಅನುಭವಿಸಿದೆವು. ಹೊಟ್ಟೆ ಬಿರಿಯುನಷ್ಟು ತಿಂದು ಅನಂದಪಟ್ಟೆವು.ಹಳದಿ
ಬಣ್ಣದ ಯಲಚೀ ಹಣ್ಣಿನ ತರಹ ಇತ್ತು.
ರಂಜಾನ್ ನಲ್ಲಿ ಎಲ್ಲಾರಿಗೂ ಅರ್ಧ ದಿನ ಕೆಲಸ. ಬಿಸಿಲು ಸಹ ಬಹಳ ವಿರುತ್ತೆ. ಪಬ್ಲಿಕ್
ನಲ್ಲಿ ಆಹಾರ ಹಾಗು ನೀರು ಯಾರೂ ಕುಡಿಯುನಂತೆ ಇಲ್ಲ. ಇದು ಕಾನೂನು. ಪ್ರವಾಸಿಗರು, ಮುಸ್ಲಿಮ್
ಅಲ್ಲದವರು ಬೇರೇಯೇ ಅಗಿ,ಒಂದು ಕೊಣೆಯಲ್ಲಿ, ಅವರಿಗೆ ಟೆಮ್ಟ್ ಅಗದ ಹಾಗೆ ತಿನ್ನ ಬಹುದು. ಫುಜೈರ
ದಿಂದ ಬರುವಾಗ ಸಮುದ್ರತೀರದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿದೆವು.
ಈ ಸಲ ಇನ್ನೋಂದು ವಿಶೇಷ ನೋಡಿದ್ದು "ಡೆಸರ್ಟ ಸಫಾರಿ". ಬಹಳ ರೋಮಂಚಕ ಹಾಗು
ಸಹಾಸಮಯ ಅನುಭವ. ಬೇರೆ ಗಾಡಿ ಓಡಿಸುವುದು ಕಷ್ಟ ವಾದ್ದರಿಂದ "ಲ್ಯಾಂಡ್ ಕ್ರೂಸರ್"ನಿಂದ ಮರಭೂಮಿ
ಯ ಕಡೆಗೆ ಪ್ರಯಾಣ. ಪ್ರತಿಯೊಬ್ಬರು ಸೀಟ್ ಬೇಲ್ಟ್ ಹಾಕಿಕೊಳ್ಳಬೇಕು. ಮರಳುಗಾಡಿನ ಕಣ್ಣು ಉದ್ದಕ್ಕೂ
ಕಾಣುವ ಮರಳಿನ ಗುಡ್ಡ, ತಗ್ಗು ಕಣಿವೆಯಲ್ಲಿ ಒಂದೇ ಸಮನೆ ತುತ್ತ ತುದಿಗೆ ಪ್ರಯಾಣಿಸಿ, ತಕ್ಷಣವೇ ಬಿದ್ದು
ಬಿಡುವ ಹಾಗೆ ಚಾಲನೆ, ಅರ್ಧ ಗಂಟೆಗಳ ಕಾಲ ಸಫಾರಿ ಡ್ರೈವಿಂಗ್ ಸೋಗಸೆ ಸೊಗಸು. ಮರುಭೂಮಿ
ನೋಟ.ನಡೆಯುವಾಗ ಕಾಲು ಹೂತು ಹೋಗಿದ ಅನುಭವ, ಇನ್ನೋಂದು ಕಾಲನ್ನು ಎತ್ತಿ ಇಟ್ಟು ನಡೆಯುವ
ಸರ್ಕಸ್ ಮಾಡಿದೆವು. ನಮ್ಮ ಹೆಜ್ಜೆ ಗುರುತ್ತನ್ನು ನಾವೆ ನೋಡಿಕೊಂಡು ನಡಿಗೆ. ಎಲ್ಲೆಲ್ಲೂ ಮರಳೇ ಮರಳು.
ಅಲ್ಲಲ್ಲಿ ಮುಳ್ಳು ಹಾಗು ಎಕ್ಕದ ಗಿಡಗಳು. ಸೊರ್ಯಸ್ತ ನೋಡಿಕೊಂಡು, ಅಲ್ಲಿಂದ ಸ್ವಲ್ಪ ದೂರದಲ್ಲಿ ಎರ್ಪಡಾ
ಗಿದ್ದ ಸಾಂಸ್ಕತಿಕ ಕಾರ್ಯಕ್ರಮಗಳ ಸ್ಥಳಕ್ಕೆ ಬಂದೆವು.
ಡೇರೆ ಹಾಕಿ ಕಟ್ಟಿದ ಸ್ಶಳದಲ್ಲಿ ಕಾರ್ಯಕ್ರಮ. ಹೊರಗಡೆ ಸಿಂಗರಿಸಿದ ಒಂಟೆಗಳು, ಅವುಗಳ
ಮೇಲೆ ಸಫಾರಿ, ಮರಳಿನಲ್ಲಿ ಸಾಹಸ ಅನುಭವ ಪಡೆಯಲು ಮೊಟರ್ ಬೈಕ್ ನಲ್ಲಿ ಮರಳ ಗುಡ್ಡದಲ್ಲಿ, ಏರಿಸಿ
ಓಡಿಸಲು ಅವಕಾಶವೆತ್ತು. ಡೇರೆಯ ಒಳಗೆ ಅಲ್ಲಿನ ಪ್ರಾಚೀನ ಸಂಸ್ಕತಿಯನ್ನಯ ಪ್ರತಿಬಿಂಬಿಸುವ ವಸ್ತುಗಳು,
ಅಂದರೆ ಮನೆ, ಬಾವಿ, ಜನ, ಜೀವನ ವೈಖರಿಯ ರೂಪಕಗಳು. ಮೆಹೆಂದಿ ಹಾಕುವರು ಇದ್ದರು. ಬಂದ
ತಕ್ಷಣ ಎಲ್ಲಾರಿಗೂ ಚಹ ವಾಯಿತು. ಅಲ್ಲಿಯೇ ಊಟದ ಎರ್ಪಡು ಇರುತ್ತೆ. ಪ್ಯಾಕೇಜ್ ದಲ್ಲಿ ಅದು ಸೇರಿದೆ.
ಮಧ್ಯೆದಲ್ಲಿ ಒಂದು ರಂಗಸ್ಥಳ. ಕೆಳಗೆ ಕೂರಲು ಅಸನಗಳು. ಕೊನೆಯಲ್ಲಿ ಸೋಫಾ ಸೆಟ್ ಗಳು ಹಾಕಿದ್ದರು.
ಮರುಭೂಮಿಯ ನೃತ್ಯಗಳು, ಬೆಲ್ಲಿ, ತನೂರ, ಹಾಗು ಬೆಂಕಿ ನೃತ್ಯಗಳು. ನಾವು ಹೋದ ಸಮಯ ರಂಜಾನ್
ಅದ್ದರಿಂದ ಬೆಲ್ಲಿ ಇರಲಿಲ್ಲ. ಇಡೀ ದೇಹವನ್ನು ಕುಣಿಸುವ ನೃತ್ಯ ತನೂರ. ನೃತ್ಯದ ಪೋಷಕು ನೋಡಲು
ರಂಗು ರಂಗಾಗಿತ್ತು. ಬಣ್ಣ ಬಣ್ಣದ ಸ್ಕಟ್ ಧರಿಸಿ, ಛತ್ರಿಯಂತೆ ಹರಡುವ ಬಟ್ಟೆಯನ್ನು ಹಾಕಿಕೊಂಡಿದ್ದರು.
ನಿಂತಜಾಗದಲ್ಲೆ ವೃತ್ತಕಾರದಲ್ಲಿ ಸುತ್ತುತ್ತಿರುತ್ತಾರೆ. ಬೆತ್ತದ ಡಿಸ್ಕ್ ತರಹ ಬುಟ್ಟಿಯನ್ನು ಕೈಯಲ್ಲಿ ಇಟ್ಟಿಕೊಂಡು
ಒಂದರ ಪಕ್ಕ ಒಂದನ್ನು ಸರಿಸುತ್ತಾ, ಎರಡರಿಂದ ನಾಲ್ಕ್, ನಾಲ್ಕ್ ರಿಂದ ಎಂಟು ಮಾಡಿ, ವಿಧ ವಿಧ ರೀತೀಯ
ವಿನ್ಯಾಸ ಮಾಡಿ, ತಿರುಗುತ್ತಾಲೇ ತೋರಿಸುತ್ತಾರೆ. ಇದರ ಜೊತೆಗೆ ಸೊಂಟದಲ್ಲಿ ಕಟ್ಟಿದ್ದ ಸ್ಕಟ್ ಬಿಚ್ಚಿ, ಬಹಳ
ವಿಶಾಲವಾಗಿ ಹರಡಿಕೊಂಡು ತಿರುಗುತ್ತಾರೆ. ನಂತರ ಇನ್ನೊಂದನ್ನು, ತಲೆಯ ಮೇಲುಗಡೆ, ಬರುವ ಹಾಗೆ
ಛತ್ರಿ ತರಹ ಹರಡಿಸಿ ಗರಗರನೇ ತಿರುಗುತ್ತಾ, ತಿರುಗಿಸುತ್ತಾರೆ. ಬಟ್ಟೆಯಿಂದ ದೀಪಗಳು ಹತ್ತಿ ಮಿನಗುತ್ತವೆ.
ಕತ್ತಲ್ಲಲಿ ಚೆನ್ನಾಗಿ ಕಾಣುತ್ತೆ. ಪ್ರೇಕ್ಷಕರ ಹತ್ತಿರ ಬಂದು, ಅವರೀಗೂ, ಅ ಸ್ಕಟ್ ಕೊಟ್ಟು ಕುಣಿಯುವ ಅವಕಾಶ
ಕೊಡುತ್ತಾರೆ. ನಿಜಕ್ಕೂ ಕಣ್ಣಿಗೆ ಹಬ್ಬವಾಗಿತ್ತು.
ಮತ್ತೊಂದು ಬೆಂಕಿ ನೃತ್ಯ. ಎಲ್ಲಾ ಕಡೆ ದೀಪವನ್ನು ಅರಿಸಿ ಕತ್ತಲ್ಲಲ್ಲಿ ಅಟ ಹಾಗು ನೃತ್ಯ.
ಎರಡು ಕೈಯಲ್ಲಿ ಉದ್ದೂದ್ದ ಕಂಬಿಯಲ್ಲಿ ಬೆಂಕಿ ಅಡಿಸಿ, ಎಲ್ಲಾ ದಿಕ್ಕುಗಳಿಗೆ ತಿರುಗುತ್ತಾ ತಿರುಗಿಸಿತ್ತಾರೆ.ಒಂದ
ರಿಂದ ಎರಡು ಮೂರು ನಾಲ್ಕು ಹೀಗೆ ಹೆಚ್ಚಿಸುತ್ತಾ ತಿರುಗುತ್ತಾರೆ. ಆಗ ಬೆಂಕಿಯ ಕುಣಿತ ಕಾಣುತ್ತೆ. ಮೇಲೆ,
ಕೆಳಗೆ, ಹಿಂದೆ ಮುಂದೆ, ಹಕ್ಕ, ವರ್ಟಿಕಲ್ ಅಗಿ, ಹಾರ್ಝ್ನಿಟಲ್ ಅಗಿ, ಬೆನ್ನಿಗೆ ತಗಲಿಸುತ್ತಾ ತಿರುಗುತ್ತಾರೆ. ಅಂಧ
ಕಾರದಲ್ಲಿ ಬೆಂಕಿಯ ನೃತ್ಯ ಚೆನ್ನಾಗಿ ಕಾಣುತ್ತೆ. ಕೊನೆಯ ದಾಗಿ, ಮತ್ತೆ ಮತ್ತೆ ಸ್ವಲ್ಪದಿಂದ ಜಾಸ್ತಿಯಾಗಿ, ಸೀಮೆ
ಏಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು, ಬೆಂಕಿಯ ಬುಗ್ಗೆಯನ್ನು ಬರಿಸುತ್ತಾರೆ. ಅದಕ್ಕೂ ಮುಂಚೆ ಬೆಂಕಿಯನ್ನು
ಬಾಯಿಯಲ್ಲೆ ನಂದಿಸುತ್ತಾರೆ. ನೋಡಲು ಭಯವಾಗಿತ್ತು. ಬಹಳ ಅಪಾಯಕಾರಿಯಾದ ಬೆಂಕಿಯ ಸರಸ ನೋಡಿ
ಬೆರಗಾದೆವು. ನಂತರ ಎರ್ಪಡಿಸಿದ ಒಳ್ಳೆಯ ಊಟ. ತರತರದ ಸಲಾಡ್ ಗಳು, ಚೋಲೆ, ರೋಟಿ, ಚಟ್ನಿ,
(ಅರಬ್ ಸ್ಟೈಲ್ ಕಬೂಸ್ ಮೋಮೋಸ್, ಕಾಬುಲ್ ಛನ ದಿಂದ ಬೇಯಿಸಿ, ರುಬ್ಬಿ ಮಾಡಿದ ಚಟ್ನಿ), ಫ್ರೈಡ್
ರೈಸ್, ಹಣ್ಣುಗಳು ಸ್ವೀಟ್ ಇತ್ತು. 3 ಗಂಟೆಗಳ ಈ ಕಾರ್ಯಕ್ರಮ ಮರೆಯಲಾಗದ ಅನುಭವ.
ನಾವು ನೋಡಿದ ಇನ್ನೊಂದು ಸ್ಥಳ "ದುಬೈ ಡಶ್". ಗಗನ ಚುಂಬಿ ಕಟ್ಟಡಗಳ ಮುಂದೆ ಇರುವ
ಪಾರ್ಕ ತುದಿಯಲ್ಲಿ, ಕ್ರೀಕ್, ಅಲ್ಲರುವ ಬೋಟ್ ರೆಸಾರ್ಟ್ಗಳು.ಕ್ರೀಕ್ (ಸಮುದ್ರ ದಿಂದ ಹರಿದ ನೀರು), ಅದರ
ಇನ್ನೊಂದು ತುದಿಯಲ್ಲಿ (ದಂಡೆ) ಗಗನ ಚುಂಬಿ ಕಟ್ಟಡಗಳು, ಅಂದವಾಗಿತ್ತು. ಮೊದಲೆ ಫ್ಲೋಟಿಂಗ್ ರೆಸಾರ್ಟ್
ಬುಕ್ ಮಾಡಿದ್ದೆವು. 2 ಗಂಟೆಗಳ ಕಾಲ ದೋಣಿ ವಿಹಾರ, ಸುತ್ತಲಿನ ದೃಶ್ಯಗಳ ದರ್ಶನ, ಸೂರ್ಯಸ್ತಾ, ಅದರ
ಪ್ರತಿಬಿಂಬ ನೀರಿನಲ್ಲಿ ನೋಡಿದೆವು. ಸುತ್ತಲಿನ ಕಟ್ಟಡಗಳ ದೀಪಗಳ ಪ್ರತಿಬಿಂಬ ಸೊಗಸಾಗಿತ್ತು. ದುಬೈ ಡಶ್
ನಲ್ಲಿ ಬಹಳಷ್ಟು ಸಿನಿಮಾ ಶೂಟ್ ಅಗಿದೆ. ದೋಣಿಯಲ್ಲಿ, ಊಟದ ಟೇಬಲ್, ಕ್ಯಾಂಡಲ್ ಲೈಟ್, ಆಹಾರ
ವನ್ನು ಅಲಂಕೃತವಾಗಿ ಜೊಡಿಸಿದ್ದರು. ಸಂಜೆ ಯಾದ ನಂತರ ಮೊದಲು ಖರ್ಜೂರ ಕೊಟ್ಟು, ಉಪವಾಸ ಮುರಿದು
ನಂತರ ವೆಲ್ ಕಂ ಪಾನೀಯ ದಿಂದ ಊಟ ಪ್ರಾರಂಭವಾಯಿತು. ಒಬ್ಬರು ಅಲ್ಲೆ ಹುಟ್ಟಿದ ಹಬ್ಬ ಅಚರಿಸಿದರು.
ಅರಬ್ ಸ್ವೀಟ್ ನಮ್ಮ ಪಾಯಸಕ್ಕಿಂತ ರಿಚ್ ಅಗಿತ್ತು. ಬಹಳ ರುಚಿ ಇತ್ತು. ಡೆಸರ್ಟ್ ಸಫಾರಿತರ ಊಟ, ಜೊತೆ
ಯಲ್ಲಿ ರುಚಿಕರ ಪಕೊಡ ಇತ್ತು. ಸುತ್ತಾಲು ನೀರಿನಲ್ಲಿ ಪ್ರತಿಬಿಂಬವನ್ನು ನೋಡುತ್ತಾ, ತಿನ್ನುತ್ತಾ,ತೇಲುತ್ತಾ
ಊಟ ಮುಗಿಸಿ 8 ವರೆಗೆ ಹೊರಗೆ ಬಂದ್ವಿ. ತೆಗೆದ ಫೋಟೋ ಲೆಕ್ಕವಿಲ್ಲ. ಮತ್ತೆ ಎರಡನೆ ಸಾರಿ ನೋಡಿದ
ಪಾಮ್ ಜುಮೇರ, ಬ್ರುಜ್ ಖಲೀಫಾ, ಅಟ್ಲಾಂಟ, ಹೊಸದಾಗಿಅದ ಮಾಲ್ಗಳು, ಹಳೆಯ " ಬಾಟಾಡ' ಮಾಲ್
ಸೊಗಸಾಗಿತ್ತು. ಅಲ್ಲಿಯ ರಾಜ 14ನೇ ಶತಮಾನದಲ್ಲಿ ತಾನು ಸಮುದ್ರ ಮೂಲಕ, ಬೇಟಿ ಕೊಟ್ಟ ದೇಶಗಳ
ಮಾದರಿಯಲ್ಲಿ ಈ ಮಾಲ್ ಕಟ್ಟಿರುತ್ತಾರೆ. ಪರ್ಷಿಯನ್ ಇಂಡಿಯನ್ ಇತರೆ ದೇಶದ ಮಾದರಿಯ ಕಟ್ಟಡ,
ಜನರು, ವೇಶ ಭೂಷಣಗಳು, ಸಂಸ್ಕತಿಯನ್ನು ಪತಿಬಿಂಬುಸುತ್ತಿದ್ದವು. ಬೇರೇಯೇ ಪ್ರಪಂಚಕ್ಕೆ ಹೊದ ತರಹ.
ಮೇಲೆ ಅಕಾಶ, ನಕ್ಷತ್ರಗಳು, ಸೂರ್ಯೋದಯ, ಸೂರ್ಯಸ್ಥ, ಬಹಳ ಚೆನ್ನಾಗಿತ್ತು. ಅ ದೇಶಕ್ಕೆನೆ ಹೊಗಿದೆವ ಅನ್ನಿಸು
ತ್ತಿತ್ತು. ಅಲ್ಲಿಂದ ಮೇಟ್ರೋ ಟ್ರೈನ್ ಹತ್ತಿ, ಮನೋ ಟ್ರೈನ್‍ನಲ್ಲಿ ಎತ್ತರದಿಂದ, ಪಾಮ್ ಜೂಮೇರ ಸಮುದ್ರ
ದಲ್ಲಿ ಪಾಮ್ ಮರದ ಶೇಪ್ ನೋಡಿದೆವು. ಅಲ್ಲಿ ಅರುಣ ಗುರು ಬಂದು ಪಿಕ್ ಅಪ್ ಮಾಡಿದರು. ಅಲ್ಲಿಯ
ಮಾಲ್ ನ ಕಾರ್ ಪಾರ್ಕ ನಲ್ಲಿ ಊಟ ಮುಗಿಸಿದೆವು. 10 ಜನಕ್ಕೂ ರೈಲ್ ನಲ್ಲಿ ಕೊಟ್ಟಹಾಗೆ ಅಲ್ಯುಮೀಯಮ್
ದೊನ್ನೆಯಲ್ಲಿ ಪ್ಯಾಕ್ ಮಾಡಿದ್ದಳು. ರುಚಿಯಾದ ಪಲಾವ್, ಪುಳಿಯೊಗ್ಗರೆ. ಮೊಸರನ್ನ, ಸಲಾಡ್ ಗಳು. ಸುತ್ತಿ
ಹಸಿವಾದಾಗ ಆಹಾರ ತೃಪ್ತಿ ಕೊಟ್ಟಿತ್ತು. ಎಲ್ಲಾರು ಸಂತೋಷದಿಂದ ಕಾಲ ಕಳೆದೆವು.
ಕೊನೆಯದಾಗಿ ಬಹಳ ಮುಖ್ಯ ಜಾಗ "ಗೋಲ್ಡ ಸೂಕ್" ಅಲ್ಲಿಗೆ ಹೊದೆವು. ಕುರುಡು ಕಾಂಚನ
ನೋಡಲು ಎರಡು ಕಣ್ಣು ಸಾಲದು. ಕಣ್ಣಿಗೆ ಕುಕ್ಕಿ ತಲೆ ತಿರುಗಿಸುತ್ತದೆ. ಎಷ್ಟು ತರಹ, ಎಷ್ಟು ನಮೂನೆ.
ಬಂಗಾರದ ಶುದ್ದತೆ (ಕ್ವಾಲಿಟಿ) ಚೆನ್ನಾಗಿರುತ್ತೆ. ವಡವೆಯನ್ನು 23 ಕ್ಯಾರೇಟ್ ನಲ್ಲಿ ಮಾಡಿರುತ್ತಾರೆ. ತೆರಿಗೆ
ಇಲ್ಲ. ಮೇಕಿಂಗ್ ಚಾರ್ಜ್ ಕಡಿಮೆ. ನಾವು ಯಾವ ಅಂಗಡಿಯಲ್ಲಿ ಕೊಂಡೆವೋ ಆ ಅಂಗಡಿಯಲ್ಲಿ ವಾಪಸ್ಸು
ಕೊಟ್ಟರೆ ಏನನ್ನು ಕಳಿಯದೆ ಎಕ್ಸ್ಚೇಜ್ ಮಾಡುತ್ತಾರೆ. ದರ ಅದಿನ ಚಾಲ್ತಿಯಲ್ಲದ್ದ ದರ. ಕಡಿಮೆ ಅಲ್ಲ.
ಇಂಡಿಯನ್ನು ಬಂಗಾರವನ್ನು 20 ಕ್ಯಾರೆಟ್ ದರದಲ್ಲಿ ಬದಲಾಯಿಸುತ್ತಾರೆ. 300 ಕ್ಕೂ ಹೆಚ್ಚು ಅಂಗಡಿಯಿದೆ.
ಓಲೆಗಳು, ಜುಮುಕಿಗಳು, ಉಂಗುರಗಳು, ಬಳೆಗಳು, ನೆಕ್ಲೇಸ್‍ಗಳು, ಉಡುಗೆ, ತೊಡುಗೆ ವಿಗ್ರಹಗಳು, ಅಬ್ಬ. ಅವು
ಗಳನ್ನು ತೊಟ್ಟ ಗೊಂಬೆಗಳು ಇದ್ದವು. ಏಲ್ಲೆಲ್ಲೂ ಹಳದಿ ಲೋಹ. ಅದರಿಂದ ಅಕರ್ಷಿಕರಾಗದೇ ಇದ್ದವರು
ಯಾರು!
ಈ ಸಲ ನೋಡಿದ ಇನ್ನೊಂದು ಜಾಗ "ಮೈದಾನ್".ರೇಸ್ ಕೋರ್ಸ್ ನಡೆಯುವ ವಿಶಾಲವಾದ
ಸ್ಥಳ. ಇನ್ನು ನೋಡುವುದು ಎಷ್ಟೆಷ್ಟೋ ಇದೆ. ನಾವು ನೋಡಿದ್ದು ಇಷ್ಟು.
ಅಧಾರ: ಕಂಡಿದ್ದು, ಕೇಳಿದು, ಓದಿದ್ದು ಹಾಗು ಪ್ರಾಚೀನ ಸಂಶೋಧನ ಇಲಾಖೆಯವರ
ಬ್ರೋಚರಸ್ಸ್.
No comments:
Post a Comment