Saturday, 10 September 2016

srilanka pravasa khathana

ಶ್ರೀಲಂಕಾ ಪ್ರವಾಸ ಕಥನ

          ಮುಂಚನೆ ಯೋಚಿಸಿ ಶ್ರೀಲಂಕಾ ಯಾತ್ರೆಯನ್ನು, "ಹಂಸಾ ಟ್ರಾವೆಲ್ಸ್"ಗೆ ಹೇಳಿ, ಹಣ ಕೊಟ್ಟು ಬುಕ್
ಮಾಡಿದ್ದೆವು.  ಜನ ಬರದೆ ಇದ್ದರಿಂದ ಇರಬಹುದು "ಅಕ್ರಿಡ್ ಟ್ರಾವೆಲ್ಲ್" ಜೊತೆಗೆ ಕಳುಹಿಸಿದ್ದರು.  ಅವರವರ
ಜೊತೆ ಅಡ್ರರ್ ಸ್ಟಾಂಡ್ ಇರುತ್ತೆ.  ನಾವು ಕೊಟ್ಟ ಹಣ 45,500 ಪರ್ ಹೆಡ್.  ಇದರಲ್ಲಿ ಎಕನಾಮಿ ಕ್ಲಾಸ್
ಏರ್ ಟಿಕೇಟ್, ತ್ರೀ ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯ.  ಊಟ, ತಿಂಡಿ, ಅಲ್ಲಿ ಓಡಾಡಲು ಬಸ್ಸನ ಚಾರ್ಜ್, ಸೈಟ್
ಸೀಯಿಂಗ್, ವಾಪಸ್ಸು ಏರ್ಪೋಟ್ ಬರುವ ತನಕ ಎಲ್ಲಾ ಸೇರಿದೆ.  ಜೊತೆಗೆ ಇಂಗ್ಲೀಷ್ ಮಾತನಾಡುವ ಗೈಡ್.

          ಹೊರಟಿದ್ದು 26ರ ಸಂಜೆ 5.30ಕ್ಕೆ. ಓಲ ದಿಂದ ಏರ್ ಪೋರ್ಟ್ ಗೆ ಹೊದೆವು.  ಅಲ್ಲಿ ಮ್ಯಾನೇ
ಜರ್ ಶ್ರೀಮತಿ ಶೀಲಾ ಮೇಡಂಗೆ ರಿಪೋರ್ಟ್ ಮಾಡಿಕೊಂಡವು.  ಮನೆಯಿಂದ ಮಿಕ್ಸೇಡ್ ಹಣ್ಣುಗಳನ್ನು ಫ್ಲೈಟ್
ಹತ್ತವ ಮೊದಲು ತಿಂದೆವು.  ಚೆಕ್ ಇನ್ ಇಮೀಗ್ರೇಶನ್ ಅಗಿ. ಬೊರ್ಡಿಂಗ್ ಪಾಸ್ ತೆಗೆದು ಕೊಂಡು ವಿಮಾನ
ಹತ್ತಿದೆವು.  9 ಗಂಟೆಗೆ ಟೀಕ್ ಅಫ್ ಅಯಿತು.  10.20 ಕ್ಕೆ ಸರಿಯಾಗಿ "ಭಂಡಾರ ನಾಯಿಕೆ", ಇಂಟರ್ ನ್ಯಾಷ
ನಲ್ ಏರ್ ಪೊರ್ಟ್ ಗೆ ಬಂದೆವು.  ಅಲ್ಲಿ ಫಾರ್ಮಲಿಟೀಸ್ ಮುಗಿಸಿಕೊಂಡು ಹೊರಕ್ಕೆ ಬಂದು, 8 ಕಿ,ಮಿ. ದೂರ
ದಲ್ಲಿರುವ "ನೆಗ್ಯಾಂಬೋ'ನಲ್ಲಿ ರಾತ್ರೆ ತಂಗುದಾಣ.  ಮನೆಯಿಂದ ತಂದ ಮೆಂತ್ಯ ಪರೋಟ ತಿಂದು ವಿಶ್ರಾಂತಿ.
ರಾತ್ರೆಯ ಊಟದ ಏರ್ಪಾಡು ಮಾಡಿಕೊಳ್ಳಲು ಮೊದಲೆ ತಿಳಿಸಿದ್ದರು.  27 ರಿಂದ ಅವರ ವ್ಯೆವಸ್ಥೆ.

          ಬೆಳಿಗ್ಗೆ 6 ಗಂಟೆಗೆ ಅಲಾರಾಂ ಬೆಲ್ಲ್, 7 ಕ್ಕೆ ತಿಂಡಿ, 8 ಕ್ಕೆ ಹೊರಗೆ ಹೊಗುವುದು, ಇದು
ದಿನಚರಿ.  ಈ ದಿನ 27-3-2015.  ಮಾಮುಲು ಸ್ಟಾರ್ ಹೋಟೆಲ್ ಇರುವ ಹಾಗೆ ಸ್ಪೇಡ್ ಬ್ರೆಕ್ ಫಾಸ್ಟ್.
ಬೆಳಿಗ್ಗೆ ಎದ್ದ ತಕ್ಷಣ ಕಾಫೀ ಮೇಕರ್ ನಿಂದ ಮೊದಲ ಟ್ರೀಪ್ ಕಾಫಿ. ನಂತರ, ಊಟದ ಹಾಲ್ ನಲ್ಲಿ, ಮೊದಲು
2 ಬಗೆಯ ಹಣ್ಣಿನ ಜ್ಯೂಸ್, ದೋಸೆ, ಇಡ್ಲಿ, ಲೆಕ್ಕವಿಲ್ಲದಷ್ಟೂ ಬೇಕರಿ ತಿಂಡಿಗಳು, ಸಲಾಡ್, ಹಣ್ಣುಗಳು,
ಸಹಿ ಪದಾರ್ಥಗಳು.  ಏನು ಬೇಕಾದರು ತಿನ್ನ ಬಹುದು.  ನಮ್ಮ ದೇಹಕ್ಕೆ ಹೊಂದುವುದನ್ನು ತಿಂದು, ಹೊಟ್ಟೆ
ತುಂಬಿಸಿಕೊಂಡು ಪ್ರಯಾಣ.

          ನಮ್ಮ ಪ್ರಯಾಣ ನೊಗ್ಯಾಂಬೋ ದಿಂದ ಟ್ರಿಕೋಮಲಿ" ಕಡೆಗೆ ಪ್ರಯಾಣ.  300 ಕಿ.ಮಿ. ದೂರ.
ದಾರಿಯಲ್ಲಿ "ಸುಬ್ರಮಣ್ಯ" ದೇವಸ್ಥಾನಕ್ಕೆ ಬೇಟಿ.  ದೇನಸ್ಥಾನದ ಮುಂದುಗಡೆ ಹಾಗು ರಸ್ತೆಯ ಪಕ್ಕದ್ದಲ್ಲಿ
20 ಅಡಿ ಗಿಂತ ಜಾಸ್ತಿ ಇದ್ದ ಬಂಗಾರ ಲೇಪಿತ ಸುಬ್ರುಮಣ್ಯ ದೇವರ ವಿಗ್ರಹವಿದೆ.  ಈ ಮಂದಿರವನ್ನು ಸಿಂಹಳದ
ತಮಿಳಿನ ಭಾರಿ ಶ್ರೀಮಂತ ಕಟ್ಟಿದ್ದು.  ಸುತ್ತಾಲು ಇರುವ ಗೋಡೆಗಳ ಮೇಲೆಲ್ಲಾ ನವಿಲುಗಳ ಗೊಂಬೆಗಳು.
ಗುಡಿ ಬಣ್ಣ ಬಣ್ಣದಿಂದ ಇತ್ತು.  ಒಳಗಡೆ ಭಾರತದಲ್ಲಿ ಇದ್ದಂತೆ, ಗಣಪತಿ, ಕಾರ್ಇಕೇಯ,  ಶಿವ, ಪಾರ್ವತಿ,
ನವಗ್ರಹ, ವೆಂಕಟೇಶ ಇದ್ದವು.  ಬಹಳ ವಿಶಾಲವಾದ ದೇವಸ್ಥಾನ.  ದೊಡ್ಡದಾದ ಶೇಷಶಯನ ವಿಷ್ಣು ಒಂದು
ಕಡೆ, ಶೇಷಶಯನ ಗಣಪತಿ (ಮೊದಲ ಬಾರಿ ನೊಡಿದ್ದು ವಿಷ್ಣು ತರಹ), ವಿಗ್ರಹ ವಿಶೇಷ ವಾಗಿತ್ತು.  ಬಹಳ
ಅಚ್ಚುಕಟ್ಟಾಗಿತ್ತು.ಪ್ರಸಾದ ಪೊಂಗಲ್ ಹಾಗು ರಸಾಯನ ಸಿಕ್ಕಿತ್ತು.  ದೇವಸ್ಥಾನದ ಸುತ್ತಾಲು ಪ್ರದಕ್ಷಿಣೆ ಹಾಕಿ
ಬರುವಾಗ.  ಅಲ್ಲಿ ನವೆಲು ಗರಿ ಬಿಚ್ಚಿ ನರ್ತನ ಮಾಡುತ್ತಿತ್ತು. 

          ಅಲ್ಲಿಂದ ನಾವು "ಮುನೇಶ್ವರಂ" ಗುಡಿಗೆ ಹೋದೆವು  ಶ್ರೀರಾಮನ ಕಾಲಕ್ಕಿಂತಲೂ ಪ್ರಾಚೀನವಾದ
ದೇವಸ್ಥಾನ.  ರಾವಣನ ಕಾಲಕ್ಕಿಂತಲೂ ಮುಂಚೆ ಇರುವ ಶಿನಲಿಂಗ ಇದೆ.  ರಾಮು ರಾವಣನನ್ನು ಕೊಂದು,
ಪುಪ್ಪಾಕ ವಿಮಾನದಲ್ಲಿ ಏರಿ ಪ್ರಯಾಣ ಮಾಡುವ ಮೊದಲು, ಬ್ರಹ್ಮಹತೈ ದೋಷದ ನಿವಾರಣೆಯನ್ನು ಹೇಗೆ
ನಿವಾರಿಸಿಕೊಳ್ಳಬೇಕೆಂದು, ಶಿವನನ್ನು ಪ್ರಾಥಿಸಿದಾಗ, ಶಿವನು ರಾಮನಿಗೆ 5 ಲಿಂಗವನ್ನು ಪ್ರತಿಷ್ಟಾಪಿಸಿ ಪೂಜೆಮಾಡಲು
ತಿಳಿಸುತ್ತಾನೆ.  ರಾಮ ಸೀತೆ ಸಮೇತ ಪೂಜಿಸಿದ ದೇವಸ್ಥಾನ.  ವಿಶಾಲ ಪ್ರಕಾರ.  ಅಂದವಾಗಿ ಕೆತ್ತಲ್ಪಟ್ಟ ಕಲ್ಲಿನ
ಕಂಬಗಳು, ಕೆತ್ತನೆ ಕೆಲಸದಿಂದ ಕೂಡಿದೆ.  ಬಹಳ ಒಳಗೆ ಇರುವ ಗರ್ಭಗುಡಿಯಲ್ಲಿ ಅತಿ ಸುಂದರ ಮಹಾದೇವ
ಲಿಂಗವಿದೆ.  ಗುಡಿಯ ಮೇಲ್ಛಾವಡಿಯು ಸಹ, ಉತ್ತಮ ಶಿಲ್ಪ ಕಲೆಯಿಂದ ಕಂಗೋಳಿಸುತ್ತಿತ್ತು.  ಇಲ್ಲಿ ನಾಲ್ಕು
ಲಿಂಗಗಳು ಇವೆ.  

          ಅಲ್ಲಿಂದ ನಾವು "ಮನವಾರಿ" ದೇವಸ್ಥಾನಕ್ಕೆ ಹೋದ್ವಿ.  ಇಲ್ಲಿ ರಾಮು ಪ್ರತಿಷ್ಠಾಪಿಸಿದ ಮೊದಲ
ಲಿಂಗ ಇದೆ.  ಇದನ್ನು "ರಾಮು ಲಿಂಗ ಶಿವ" ದೇವಸ್ಥಾನ ಅನ್ನುತ್ತಾರೆ.  ಗುಡಿ ಚಿಕ್ಕದಾದರು, ಚೊಕ್ಕವಾಗಿತ್ತು.
ದೇವಾಲಯವು ಬಯಲಿನಲ್ಲಿ ಇದ್ದಂತೆ ತೋರುವ ಗ್ರಾಮೀಣ ಪ್ರದೇಶ ದಲ್ಲಿರುವ ದೇಗುಲ.  

          ದೇವಸ್ಥಾನ ನೋಡಿಕೊಂಡು, ಅಲ್ಲಿಂದ ನಾವು ಅನುರಾಧಪುರ ದಲ್ಲಿರುವ ಅಶೋಕ ಹೋಟೆಲ್
ನಲ್ಲಿ ಊಟ ಮಾಡಿದೆವು.  ವಿಶಾಲವಾದ ಹೋಟೆಲ್.  ಅನುರಾಧಪುರ ಶ್ರೀಲಾಂಕದ ಪುರಾತನ ರಾಜಧಾನಿ.  
ಹಚ್ಚ ಹಸಿರಿನಿಂದ ಕೂಡಿದೆ.  ರಮಣೀಯವಾದ ಪ್ರಕೃತಿಯ ಸುತ್ತಾ ವಿಶಾಲ ಕಟ್ಟಡ. ಇಲ್ಲಿ ಪ್ರತಿ ಊರಿನಲ್ಲೂ
ಬುದ್ಧನ ವಿಗ್ರಹಗಳು, ಬೌದ್ಧ ಮಂದಿರಗಳು ಇವೆ.  ಏಲ್ಲಾ ಹಳ್ಳಿಯಲ್ಲೂ ಬೌಧ ಮಂದಿರ, ಪಾಠಶಾಲೆ, ಅಸ್ವತ್ರೆ
ಕೆರೆ(ಮಾನವ ನಿರ್ಮಿತ) ಕೆರೆಯನ್ನು ಕಟ್ಟಲಾಗಿದೆ.  ತರಕಾರಿ ಹಣ್ಣುಗಳಿಗೆ ಕೊರತೆಯಲ್ಲ.  ಊಟ ತಿಂಡಿ ಜೊತೆ
ಯಲ್ಲಿ ಯಾನಗಲೂ ಹಣ್ಣು ಇರುತ್ತೆ. ಅನಾನಸ್, ಕಲ್ಲಂಗಡಿ, ಬಾಳೆ, ಸೀಬೆಬಣ್ಣು(ಸೀಬೆ ವಿಶೇಷ).

          ನಂತರ ನಾವು "ಮಾತಾಲಿ" ಎಂಬಲ್ಲಿ ಮುತ್ತು ಮಾರಿಯಮ್ಮನ ದೇವಸ್ಥಾನಕ್ಕೆ ಬೇಟಿಕೊಟ್ಟೆವು.
ಇಲ್ಲಿ ತಮಿಳರು ಹೆಚ್ಚಾಗಿದ್ದರೆ.  ಒಮ್ಮೆ ಈ ಪ್ರದೇಶದಲ್ಲಿ ಸಿಡುಬಿನ ಮಾರಿಯ ಕುತ್ತು ಹರಡಿದಾಗ, ಇಲ್ಲಿಯ
ಸ್ಥಳೀಯರು, ಮಾರಿಯಮ್ಮನ ಕೃಪೆಯಿಂದ, ಸಿಡುಬಿನ ಪಿಡುಗಿನಿಂದ ಪಾರಾಗಿದ್ದರಿಂದ, ಮುತ್ತು ಮಾರಿಯಮ್ಮನ
ಪ್ರತಿಷ್ಠೆಮಾಡಿ ಪೂಜಿಸುತ್ತಿದ್ದಾರೆ.  ಇದು ಒಂದು ಅಮೋಘವಾದ ದೇವಾಲಯ.  ವಿಶಾಲವಾದ ಪ್ರಾಂಗಣದಲ್ಲಿ
ಕಟ್ಟಿದ್ದಾರೆ.  ವರ್ಣರಂಜಿತವಾಗಿದೆ.  ಪ್ರಾಂಗಣದಲ್ಲಿ ಹನುಮನ ಗುಡಿಇದೆ.  ಗುಡಿಯ ಗೋಪುರದ ಪ್ರಾಭಾವಳಿ
ಯಲ್ಲಿ ಸೀತ, ರಾಮ, ಲಕ್ಷಣ ಕಂಗೋಳಿಸುತ್ತಿದ್ದಾರೆ.  ದೇವರ ದರ್ಶನಮಾಡಿ ಅಲ್ಲಿಂದ ನಾವು "ಟ್ರಿಕೋಮಲಿ"
ಯಲ್ಲಿ ಹೋಟೆಲ್ "ಅನಂತಮ್" ನಲ್ಲಿ ಹೋಗಿ ಲಗೇಜ್ ಇಳಿಸಿ, ಫ್ರೇಶ್ ಅಪ್ ಅಗಿ "ಶಾಂಕರಿ ದೇವಿ"
ಶಕ್ತಿಪೀಠ ನೋಡಲು ಹೋರೆಟೆವು.  ಆಗ ಸಂಜೆಯಾಗಿತ್ತು.  

          ದೇವಲಾಯವು ಬೆಟ್ಟದ ಮೇಲೆ ಇದ್ದು, 3ಕಡೆಯೂ ಹಿಂದೂಮಾಹಾಸಾಗರ ಅವೃತವಾಗಿದೆ.
ದೇವಸ್ಥಾನಕ್ಕೆ ಹೋಗಲು ಒಂದು ಕಡೆ ಮಾತ್ರ ಸಾಧ್ಯ.  ಬೆಟ್ಟದ ಮೇಲೆ ಬಸ್ಸು ಹೋಗುವುದಿಲ್ಲ.  ಹೀಗಾಗಿ
ಸಮುದ್ರ ತೀರದಿಂದ ಬೆಟ್ಟ ಹತ್ತಲು ಅಟೋದಿಂದ ಹೋಗಿ, ನಂತರ ಎತ್ತರವಾಗಿರುವ ಸ್ಥಳವನ್ನು ಹತ್ತಿ,ಗುಡಿಯ
ಒಳಗೆ ಹೊಕ್ಕಿದ ತಕ್ಷಣ ಬಾರಿ ಮಳೆ ಬಂದಿತು.  ಅಲ್ಲಿ ಕಲ್ಯಾಣೋತ್ವವ ನಡೆಯುತಿತ್ತು.  ಶಿವನ ಸುಂಂದರ
ಬೃಹತ್ ಪ್ರತಿಮೆ ಗುಡಿಯ ದ್ವಾರದ ಮುಂದೆ ಇದೆ.  ಪಕ್ಕದಲ್ಲಿ ನಂದಿಯ ದೊಡ್ಡ ವಿಗ್ರಹವಿದೆ.  ನಂತರ
ಶಕ್ತಿಪೀಠವಾದ "ಶಾಂಕರೀ ದೇವಿಯ" ದರ್ಶನ ಹಾಗು "ತ್ರೀಕೋನೇಶ್ವ" ಶಿವನ ದರ್ಶನವಾಯಿತು.  ಹಿಂದೂ
ಮಾಹಾಸಾಗರದ ತೀರದಿಂದ ದೇವಸ್ಥಾನಕ್ಕೆ ಹೋಗಬೇಕು.  ಇಲ್ಲೋಂದು ದಂತ ಕಥೆಯಿದೆ.  ರಾವಣನು ಶಿವನ
ಮಾಹಾಭಕ್ತ.  ತಾಯಿಯ ಅಸೆಯ ಮೇರೆಗೆ, ಶಿವನ ಅತ್ಮಲಿಂಗವನ್ನಯ ಪಡೆಯಲು, ಘೋರ ತಪಸ್ಸು ಮಾಡು
ತ್ತಾನೆ. ಶಿವನು ಅತ್ಮಲಿಂಗವನ್ನು ಕೊಡಲ್ಲಿಲ್ಲ ಅಂತ ಕೋಪದಿಂದ ಬಹಳ ದೊಡ್ಡ ಬಂಡೆಯನ್ನು ಎತ್ತಿ ಸಮುದ್ರ
ಕ್ಕೆ ಎಸೆದರಿಂದ, ಮೂರು ಕಡೆ ಮೂರು ಶಿಲೆ ಬಿದ್ದರಿಂದ "ತ್ರಿಕೋನಮಲೀ" ಅಂತ ಹೆಸರು.  ಇದಕ್ಕೆ ಸಂಬಂದಿ
ಸಿದ್ದಂತೆ ಗುಡಿಯ ಸುತ್ತಲೂ, ಕಥನದ ಕೆತ್ತನೆ ಇದೆ.  ಶಾಂಕರಿ ದೇವಿಯು ಶ್ರೀ ಶಂಕರಾಚಾರ್ಯರು ರಚಿಸಿದ
"ಅಷ್ಠಾದಶಾ ಶಕ್ತೀ ಪೀಠ' ಸೋತ್ರದಲ್ಲಿ ಮೊದಲ ಪೀಠ ಇದು.  "ಶ್ರೀಲಾಂಕ ಶಾಂಕರೀ ದೇವಿ".., ಅಂತ ಪ್ರಾರಂಭ
ವಾಗುತ್ತೆ. ಸೂರ್ಯಸ್ಥ ಚೆನ್ನಾಗಿ ಕಾಣುತ್ತಿತ್ತು.

          ಅಲ್ಲಿಂದ ನಾವು ಸಮುದ್ರ ತೀರದಿಂದ ಊರಕಡೆ ಬಂದು "ಭದ್ರಕಾಳಿ" ದೇವಸ್ಥಾನ ಬೇಟಿ ಮಾಡಿ
ದೆವು.  ಅಲ್ಲಿ ಐದು ದಿನಗಳ ಕುಂಭಾಬಿಶೇಕ ನಡೆಯುತ್ತಿತ್ತು.  ಸಂಜೆ ಪಲ್ಲಕ್ಕಿ ಉತ್ಸವ ನಡೆಯುತ್ತಿದ್ದು, ಬಹಳ
ನುಗ್ಗಾಟವಿತ್ತು.  ಒಳಗೆ ನುಗ್ಗಿ ನುಸುಳಿ ಹೋಗಿ ದೇವಿಯನ್ನು ಚನ್ನಾಗಿ ದರ್ಶನ ಮಾಡಿಕೊಂಡು ಬಂದೆವು. ಜೊತೆ
ಯಲ್ಲಿ ಗುರುಗಳು ಇದ್ದದ್ದು, ನಮಗೆ ದರ್ಶನಕ್ಕೆ ಅನುಕೂಲವಾಗುತ್ತಿತ್ತು.  ಜನಗಳು ದಾರಿ ಬಿಡುತ್ತಿದ್ದರು. 
ದೀಪಾಲಂಕರ ಬಹಳ ಚೆನ್ನಾಗಿತ್ತು.  ಎಲ್ಲ ನೋಡಿಕೊಂಡು ಹೋಟೆಲ್ ಅನಂತಮ್ ಗೆ ವಾಪಸ್ಸು ಬಂದೆವು.
ರಾತ್ರೆ ಭೋಜನ ಮತ್ತು ವಿರಾಮ.ಹೋಡೆಲ್ ಬಹಳ ವಿಶಾಲವಾಗಿತ್ತು.  ದೊಡ್ಡದಾದ ಈಜುಕೊಳ. ಸುತ್ತಾಲು
ಹಚ್ಚ ಹಸಿರಿನ ಹೂಗಿಡಗಳು, ಸಣ್ಣ ಸಣ್ಣ ಪಾಂಡ್ ತರಹ ಮಾಡಿ ಅದರಲ್ಲಿ ತಾವರೆ, ನೈದಿಲೆಗಳು, ಓಡಾಡುವ
ನವಿಲುಗಳು, ಹಕ್ಕಿಗಳ ಕಲರವ, ಲತಾ ಮಂಟಪ ಹಳದಿ ಹೂ ಗಳಿಂದ ಕಂಗೋಳಿಸುತ್ತಿತ್ತು.  ಬೇವಿನ ಮರದ
ಕೆಳಗಡೆ ರೂಮು ಗಳು, ತೋಡದಲ್ಲೆ ಗ್ಲಾಸ್ ನಲ್ಲಿ ಮಾಡಿದ ಊಟದ ಹಾಲ್, ಸುತ್ತಾಲು ವಾಕಿಂಗ್ ಟ್ರಾಕ್.
ಬೆಳಿಗ್ಗೇ ಎದ್ದು ಎಲ್ಲರೂ ವಾಕ್ ಮಾಡಿದೆವು.  ಒಳ್ಳೆ ಗಾಳಿ, ಬೆಳಕು, ಹಸಿರು ವಾತಾವರಣ ಅಹ್ಲಾದವಾಗಿ,
ಮನಸ್ಸಿಗೆ ಮುದ ನೀಡಿತು. ಇಲ್ಲಿಯೇ ಹಿಂದುಗಡೆ ಸಮುದ್ರ ತೀರದಲ್ಲಿ ಸಮುದ್ರ ದರ್ಶನಮಾಡಿ ಮುಂದುವರೆದೆವು. 
          ಈ ದಿನ 23-3-2015. ಟ್ರಿಕೋಮಲಿಯಿಂದ ಕ್ಯಾಂಡಿ ಕಡೆಗೆ ಪ್ರಯಾಣ.  ಅಂದು ರಾಮನವಮಿ.
ಬಸ್ಸಿನಲ್ಲಿ ಪ್ರಯಾಣದ ವೇಳೆ ರಾಮ ನಾಮ ಸಂಕೀರ್ತನೆ, ನಾಮ ರಾಮಾಯಣ, ಸಪ್ತರ್ಷಿ ರಾಮಾಯಣ, ಹಾಡು
ಕೀರ್ತನೆ, ಭಜನೆ ಇತ್ಯಾದಿ.  ನಮ್ಮ ಜೊತೆ ಪಯಣಿಸುತ್ತಿದ್ದ, ಆದ್ವನಿ(ಆಂದ್ರ ಪ್ರದೇಶ), ಶಂಕರ ಮಠದ ಶಾಖೆ
ಯ ಗುರುಗಳಾದ ಶ್ರೀ ಸುಬ್ರಮಣ್ಯ ಭಾರತಿ ಯತಿ ಗಳಿಂದ ಅನುಗ್ರಹ ಭಾಷಣ.  ಕ್ಯಾಂಡಿ ಹಿಲ್ ಸ್ಟೇಶನ್ ದಾರಿ
ಯಲ್ಲಿ ಸಿನೆಮಮ್ (ಚೆಕ್ಕೆ) ಗಾರ್ಡನ್ ಹಾಗು ಆರ್ಯುನೇದ ಔಷದಿಗಳ ವನಗಳ ದರ್ಶನ.  ಏಲ್ಲ ಔಷದೀಯ
ಸಸ್ಯಗಳ ಪ್ರತ್ಯಕ್ಷ ದರ್ಶನ.  ಅದರಿಂದ ತಯಾರಗುವ ಔಷದಗಳ ಪರಿಚಯ.  ಸರ್ಕಾರಿ ಆರ್ಯುವೇದ ವಿಭಾಗಕ್ಕೆ
ಸೇರಿದ್ದು.  ಕೋಕೋ, ಎಲಕ್ಕಿ, ಲವಂಗ, ಚೆಕ್ಕೆ, ಅರಿಶಿನ,ಮೆಣಸು, ಜಾಯಿಕಾಯಿ, ಇತರ ಔಷದ ಗುಣಗಳುಳ್ಳ
ಸಸ್ಯಗಳ ದರ್ಶನ.  ಸಂಭಂದ ಪಟ್ಟ ವ್ಯೆಕ್ತಿಯಿಂದ ಪರಿಚಯ ಹಾಗು ವಿವರಣೆ.  ಪ್ರತಿಯೊಂದು ಗಿಡಕ್ಕೂ ತೆಂಗಿನ
ಸಿಪ್ಪೆಯಿಂದ ಪಾತಿಯನ್ನು ಮಾಡಲಾಗಿತ್ತು.  ಎಲ್ಲಾವು ಸಾವಯವ ಉತ್ವನ್ನಗಳು.  ಅಲ್ಲಿಯೇ ಔಷದ ಮಾರಟ
ಮಳಿಗೆ ಇತ್ತು.  ಅಲ್ಲೇ ಊಟದ ವ್ಯವಸ್ಥೆಗೆ ಹೋಟೆಲ್ ಇತ್ತು.  ನಮ್ಮ ಊಟ ಅಲ್ಲೆ.  ಐದು ತರಹದ ಪಲ್ಯ
ಗಳು, ಕಾಳು, ಬೇಳೆ, ಅನ್ನ, ಸಾರು, ಮೊಸರು, ಸಾಲಡ್, ಹಣ್ಣುಗಳು, ಹಾಗು ಜ್ಯೂಸ್ ಗಳಿದ್ದವು.  ಒಪನ್
ಡೈನಿಂಗ್ ಹಾಲ್ ಮರದಿಂದ ಕಟ್ಟಿದ್ದರು.  ತಂಪಾಗಿತ್ತು.  ಬಾಳೆ ಹೂವು, ಒಂದೆಲುಗದ ಪಲ್ಯ, ಹಲಸಿನಕಾಯಿ,
ಹುರಳಿಕಾಯಿದು ಸಹ ಇತ್ತು.  ಮಲೆನಾಡಿನ ತೊಟ್ಟಿಯ ಮನೆಯ ಊಟ ನೆನಪು ಬರುತಿತ್ತು.

          ರಸ್ತೆಯಲ್ಲಿ ನಮ್ಮ ಗೈಡ್ ಡೆನ್ ಸಿóಲ್ ವಿಕ್ರಮ ಸಿಂಘ್ ರವರಿಂದ ಶ್ರೀಲಂಕಾದ ಇತಿಹಾಸ ಪರಿಚಯ.
ಭಾರತೀಯರು ಇಲ್ಲಿ ಬರುವ ಮುಂಚೆ ಮೂಲನಿವಾಸಿ(ಟ್ರೈಬಲ್ಸ್) ಇದ್ದರು.  ಅವರ ಮೂಲ ಕಥೆಗೆ ಸಂಭಂದಿ
ಸಿದ್ದಂತೆ ಒಂದು ಕಥೆ ಇದೆ.  ಟ್ರೈಬಲ್ ರಾಜನ ಮಗಳು, ಯಾವ ಗಂಡು ಬಂದರು ಮದುವೆಯಾಗಲು ಒಪ್ಪು
ತ್ತಿರಲಿಲ್ಲ.  ಅದಕ್ಕೆ ಕಾಡಿನ ರಾಜ ಅವಳನ್ನು ಕಾಡಿಗೆ ಅಟ್ಟುತ್ತಾನೆ.  ಅಲ್ಲೆ ಕಾಡಲ್ಲಿ ಇದ್ದ ರಾಜಕುಮಾರಿಯನ್ನು
ಒಂದು ಸಿಂಹ ಮದುವೆಯಾಗಿ, ಅವಳಿಗೆ ಇಬ್ಬರು ಮಕ್ಕಳು ಹುಟ್ಟುತ್ತಾರೆ.  ಬಹಳ ಕಾಲದ ನಂತರ ಅವಳು,
ತನ್ನ ತೌರಿಗೆ ವಾಪಸ್ಸು ಬರುತ್ತಾಳೆ.  ಸಿಂಹದ ರಕ್ತವಿದ್ದು, ವೀರಾದೆ ವೀರರಾದ ಮಕ್ಕಳು, ಮೂಲ ಪುರುಷರಾದ್ದ
ರಿಂದ "ಸಿಂಹಳ" ಅಂತ ಪ್ರತೀತಿ.  ನಂತರ ಭಾರತೀಯ ಮೂಲದ ಜನರು ಬಂದರು.  ನಂತರ ರಾಮಯಣ ಕಾಲ
ದಲ್ಲಿ ರಾವಣನ ಪ್ರದೇಶವಾಗಿತ್ತು.  ಒಂದು ದಂತ ಕಥೆಯ ಪ್ರಕಾರ, ಪರ್ವತಿ ಶಿವನ ಮದುವೆ ಮಾಡಿಕೊಂಡು.
ಕೈಲಾಸಕ್ಕೆ ಹೊದಾಗ, ಅಲ್ಲಿ ಇರಲು ಇಚ್ಚೆ ಪಡೆಯದೆ, ತನಗೊಸ್ಕರ ಹಸಿರು, ನದಿ, ಒಳ್ಳೆ ವಾತಾವರಣವಿರುವ
ನಗರವನ್ನು ಬೇಡುತ್ತಾಳೆ.ಶಿವನು ವಿಶ್ನಕರ್ಮನಿಂದ ಶ್ರೀಲಂಕಾ ನಿರ್ಮಿಸಿ, ಪಾರ್ವತಿಯ ಇಚ್ಚೆಯ ಮೇರೆಗೆ ಕಟ್ಟಿಸು-
ತ್ತಾನೆ.  ಅದು ಒಂದು ಸುಂದರತಾಣವಾಗೆರುತ್ತೆ.  ಈಶ್ವರನು ಬ್ರಾಹ್ಮಣನಾದ ರಾವಣನಿಂದ ಆ ಊರಿನ ಪ್ರವೇಶಕ್ಕೆ
ಪೂಜೆ ಮಾಡಿಸುತ್ತಾನೆ.  ರಾವಣನು ಪೂಜೆ ಮಾಡಿಸಿದ ನಂತರ, ಆ ನಗರವನ್ನೆ ತನಗೆ ಬೇಕೆಂದು ಬೇಡಿಕೊಳ್ಳು
ತ್ತಾನೆ.  ಶಿವನು ರಾವಣನಿಗೆ ಆ ನಗರವನ್ನು ಕೊಡುತ್ತಾನೆ.  ಅಂತ ಕಥೆ.  ನಂತರ ಎಲ್ಲಾರಿಗು ತಿಳಿದಂತೆ, 
ರಾಮಾಯಣ ಕಥೆ, ಸೀತಾ ಅಪಹರಣ, ಸೇತು ಬಂದನ, ರಾವಣ ಸಂಹಾರ ಎಲ್ಲಾರಿಗು ತಿಳಿದಿದ್ದೆ.  ಅಶೋಕನು
ಸಿಂಹಳದ ಮೇಲೆ ಸಂಪೂರ್ಣ ಪ್ರಭುತ್ವ ಸ್ಥಾಪಿಸಲು ಆಶಿಸಿದ್ದ. ಅದರೆ ಅಲ್ಲಿಯ ರಾಜ್ಯನಾಳುತ್ತಿದ್ದ ದೊರೆಯು,
ಅಶೋಕನ ಮಿತ್ರವಾದ್ದರಿಂದ, ರಾಜಕೀಯ ಪ್ರಭುತ್ವ ಪಡೆಯಲು ಅಗಲುಲ್ಲ.  ಅದರೆ ಅಶೋಕ ತನ್ನ ಮಗ
ಮಹೇಂದ್ರವರ್ಮನನ್ನು ಹಾಗು ಮಗಳು ಸಂಘಮಿತ್ರಳನ್ನು ಕಳುಹಿಸುತ್ತಾನೆ.  ಅವರು ಸಿಂಹಳ ರಾಜನನ್ನು, ದೇಶದ
ಜನರನ್ನು ಬೌಧ ಮತಾವಲಂಬಿಗಳಾಗಿ ಮಾಡಿ ಸಂಪೂರ್ಣ ಹತೋಟಿಯನ್ನು ಪಡೆಯುತ್ತಾರೆ.  ಅಲ್ಲಿಯ ದೊರೆಯು
ಬೌದ್ಧ ಬಿಕ್ಷುಗಳ ಅಪ್ಪಣೆಯನ್ನು ಮೀರುವಂತಯೇ ಇರಲಿಲ್ಲ.  ಹೀಗಾಗಿ ಸಿಂಹಳದ ಮೇಲೆ ಅಶೋಕನು ಸಂಪೂ-ರ್ಣ ಹತೋಟಿಯನ್ನು ಪಡೆಯುವಂತೆ ಅಯಿತು.  ನಂತರ ಪೋಚ್ ್ಗೀಸರು, ಡಚ್ಚರು, ಬ್ರಿಟಿಷರು ಬಂದರು.
ಬ್ರಿಟಿಷರು ವಸಾಹತು ಸರ್ಕಾರ ಪ್ರಾರಂಭ ಮಾಡಿದರು.  ಬೌದರು ಹಿನಾಯಾನದವರು, ಸಸ್ಯಹಾರಿಗಳಾಗಿದ್ದರು.
ಸಮುದ್ರದಲ್ಲಿ ಸಿಗುವ ಮೀನುಗಳನ್ನು ಉಪಯೋಗಿಸಿತ್ತಿರಲಿಲ್ಲ.  ಬ್ರಿಟಿಷರು ಬಂದ ಮೇಲೆ, ಬೌಧ ಧರ್ಮದವರನ್ನು
ಮಾಂಸಹಾರಿಗಳನ್ನಾಗಿ ಮಾಡಿ, ಕ್ರೈಸ್ತಧರ್ಮಕ್ಕೆ ಪರಿವರ್ತಸಿದರು.  ಗಿರಿಧಾಮಗಳಲ್ಲಿ ಟೀ ಬೆಳೆಯನ್ನು ಚೀನಾದಿಂದ
ತರಿಸಿ ಬೆಳಸಿದರು.  ಬಹಳಷ್ಟು ಕಾಡನ್ನು ಕಡಿಸಿದರು.  ಟೀ ಏಸ್ಟೇಟ್ ನಲ್ಲಿ ಕೆಲಸಮಾಡಲು ತಿರಸ್ಕರಿಸಿದರಿಂದ,
ತಮಿಳರನ್ನು ಭಾರತದಿಂದ ಕರೆದುಕೊಂಡು ತಮ್ಮ ಟೀ ಗಾರ್ಡನ್ ನಲ್ಲಿ ದುಡಿಯಲು ಹಾಕಿದರು.  ತಮಿಳರು
ತಮ್ಮ ಬುದ್ಧಿಮತ್ತೆಯಿಂದ ಮತ್ತು ಚುರುಕು ಬುದ್ಧಿಯಿಂದ ಇಂಗ್ಲೀಷ್ ಕಲೆತು, ಸರ್ಕಾರದ ಉನ್ನತ ಹುದ್ದೆಯನ್ನು
ಅಲಂಕರಿಸಿದರು.  ಸಿಂಹಳಿಯರು ಇಂಗ್ಲೀಷ್ ಕಲಿಯದೇ ಹಿಂದೆ ಉಳಿದರು.  ತಮಿಳರ ಕೈ ಎಲ್ಲ ಕಡೆ ಇತ್ತು.
1948ರಲ್ಲಿ ಸಿಂಹಳವು ಬ್ರಿಟಿಷರ ಮುಷ್ಠಿಯಿಂದ ಬಿಡುಗಡೆ ಹೊಂದಿ, 4ನೇ ಪೆಬ್ರುವರಿಯಂದು ಸ್ವತಂತ್ರವಾಯಿತು.
ಈಗ ಸದ್ಯಕ್ಕೆ ತಮಿಳರ ಹಾಗಯ ಸಿಂಹಳಿಯರ ತಿಕ್ಕಾಟ ಕಡಿಮೆಯಾಗಿ ಶಾಂತಿಯಾಗಿದೆ.  "ಶ್ರೀ ಲಂಕಾ" ಅಂತ
ನಾಮಕರಣ ವಾಯಿತು.  ಇತಿಹಾಸ ಕೇಳುತ್ತಾ ನಾವು "ಕ್ಯಾಂಡಿ"ಯನ್ನು ಸಂಜೆ ಬಂದು ತಲುಪಿದೆವು.  ಈಗ
ಶ್ರೀಲಂಕಾದಲ್ಲಿ 81% ಸಿಂಹಳಿಯರು, ಅದರಲ್ಲಿ 69% ಭೌದ್ಧರು, ಕ್ರಿಸ್ತರು 18% ಮತ್ತು 1% ಹಿಂದೂ ಧರ್ಮದವರೂ
ಇತರರು ಇದ್ದಾರೆ. ಕೇಳುತ್ತಾ ಕೇಳುತ್ತಾ ಕ್ಯಾಂಡಿಗೆ ಬಂದೆವು.

          ಕ್ಯಾಂಡಿ ನಗರವನ್ನು ತಲುಪುವ ಮೊದಲು "ಜೆಮ್ಸ್ ಏಂಪೋರಿಯಂ", ರತ್ನಗಳ ಮಳಿಗೆಗೆ ಭೇಟಿ
ಕೊಟ್ಟೆವು.  ಶ್ರೀಲಂಕೆಯು ರತ್ನಗಳಿಗೆ ಪ್ರಸಿದ್ಧಿಯಾಗಿದೆ.  ಅನೇಕ ರೀತಿಯ ನವರತ್ನಗಳು ಇಲ್ಲಿ ಲಭ್ಯ.  ಅದರ
ಗಣಿಕಾರಿಕೆ ಇಲ್ಲಿ ನಡೆಯುತ್ತೆ.  ರತ್ನಗಳು ಶುದ್ಧವಾಗಿಯೂ, ಪ್ರಸಿದ್ಧಿಯಾಗಿಯು ಇವೆ.  ಗಣಿಕಾರಿಕೆಯ ಶೋಧನೆ
ಅವುಗಳ ಹೊಳಪುಗೊಳಿಸುವಿಕೆ, ಆಭರಣ ಮಾಡುವಿಕೆ ಎಲ್ಲ ವಿóಯಗಳ ಒಂದು ಕಿರಿಚಿತ್ರ ಪದರ್ಶನ ಮಾಡಿದರು.
ಭೂಮಿ ಆಳಕ್ಕೆ ಇಳಿದು, ನೀರಿನಿಂದ ಬೇರ್ಪಡಿಸಿ, ಕಲ್ಲು ಮಣ್ಣುಗಳನ್ನು ಜಾಲಿಸಿ, ರತ್ನಗಳನ್ನು ತೆಗೆಯುವುದನ್ನು
ತೋರಿಸಿದರು.  ತರ ತರಹದ ರತ್ನಗಳು, ಪುಷ್ಯರಾಗದ ಹರಳುಗಳು ಇದ್ದವು. ನಮ್ಮಲ್ಲಿನ ಕೆಲವು ಪ್ತಯಾಣಿಕರು
ಖರೀದಿಸಿದರು.  ಎಲ್ಲವನ್ನು ಕಣ್ಣುತುಂಬ ನೋಡಿಕೊಂಡು ಬಂದೆವು, ಹೊರಗಡೆ ಅಗುತ್ತಿದ್ದ ಮಳೆ ಅಗುತಿತ್ತು.
ಕ್ಯಾಂಡಿಯ ಹೋಟೇಲ್ ತಲುಪುವ ವೇಳೆಗೆ ಮಳೆ ನಿಂತಿತು.
         ಕ್ಯಾಂಡಿಯಲ್ಲಿ "ಹೋಟೆಲ್ ಕ್ವೀನ್"ನಲ್ಲಿ ವಾಸ್ತವ್ಯ.  ಫ್ರೇಶ್ ಅಪ್ ಅಗೆ ಕಾಪಿ ಕುಡಿದು ಹೊರಗೆ
ಬಂದೆವು.  ಬಹಳ ದೊಡ್ಡದಾದ ಬಿಸಿ ರೋಡ್ ನಲ್ಲರುವ ಕಾರ್ ನರ್ ಹೋಟೆಲ್.  ಬ್ರಿಟೀಷ್ ಕಾಲದಲ್ಲಿ
ಅರಮನೆಯಾಜೆತ್ತು.  ಎಲ್ಲಾ ಹೋಟೆಲ್ ನಲ್ಲಿ ಮರದ ಪೀಠೋಪಕರಣಗಳು ಬಹಳ ಚೆನ್ನಾಗಿದೆ.  ಸ್ಟೇರ್ ಕೇಸ್
ಬಹಲ ಅಂದವಾಗಿತ್ತು.  ಇಲ್ಲಿ ಹೊವೆನ ಕುಚ್ಛದಲ್ಲಿ ಹಸಿರು ಬಣ್ಣದ ಶಾನಂತಿಗೆ ಇದ್ದದು ವಿಶೇಷ.  ಕ್ಯಾಂಡಿ
ಒಂದು ಗಿರಿಧಾಮ ವಾದ್ದರಿಂದ ಪ್ಯಾನ್ ಗಳು ಇರಲಿಲ್ಲ.  ಎಲ್ಲಾ ಮರದ ಫ್ಲೋರಿಂಗ್ ಕಾರ್ ಪೆಟ್ ಜೊತೆಗೆ,
ಚಳಿ ತಡೆಯಲು.  ಅಲ್ಲೇ ಹತ್ತಿರವಿದ್ದ, ಬುದ್ದನ ಹಲ್ಲಿನ ಅವಶೇಷವಿದ್ದ ಪಗೋಡಕ್ಕೆ ನಡೆದುಕೊಂಡು ಹೊದೆವು.
ಬಹಳ ಜನ ಜಪಾನಿಯರು, ಚೈನದವರು, ಸಿಂಹಳಿಯರು, ಇತರರು, ಕೈಯಲ್ಲಿ ಕಮಲದ ಬಿಳಿಯ ಹೊ ಹಿಡಿದು
ಕೊಂಡು, ತಮ್ಮ ಬೇಡಿಕೆಯನ್ನು ಬುದ್ಧನು ಈಡೇರಿಸುವನೆಂದು ಒಳ್ಳೆ ಮನಸ್ಸಿನಿಂದ ಬಿಳಿ ಬಟ್ಟೆಯನ್ನು ಧರಿಸಿಕೊಂಡು ದರ್ಶನ ಕೊಸ್ಕರ ಕಾಯುತ್ತಿದ್ದರು.  ಸ್ತೂಪ ಒಂದು ವಿಶಾಲವಾದ ಮೈದಾನದ ಒಂದು ಮೂಲೆ
ಯಲ್ಲಿದೆ.  ಬಿಳಿಯ ಕಟ್ಟಣ.  ಮೆಟ್ಟಿಲುಗಳನ್ನು ಹತ್ತಿಕೊಂಡು ಮೇಲೆ ಎರಿದೆವು.  4ನೇ ಶತಮಾನದಲ್ಲಿ ಬುದ್ಧನ
ಅವಸಾನದ ನಂತರ,  ಅವನ ಹಲ್ಲಿನ ಅವಶೇಷವನ್ನು, ಓರಿಸ್ಸಾ ದೇಶದ ರಾಣಿಯೂಬ್ಬಳು, ತನ್ನ ತಲೆಯ ತುರುಬಿ
ನಲ್ಲಿ ಮುಚ್ಚಿಟ್ಟುಕೊಂಡು ತಂದ ದಂತ ಕಥೆಯಿಲ್ಲಿದೆ.  ಈ ಹಲ್ಲಿನ ದರ್ಶನಕ್ಕಾಗಿ, ಪ್ರಪಂಚದ ನಾನಾ ಕಡೆಯಿಂದ
ಬೌದ್ಧರು ಇಲ್ಲಿಗೆ ಬರುತ್ತಾರೆ.  ಬೆಳ್ಳಿಯ ನವರತ್ನಕಚಿತ ಪಗೋಡದಲ್ಲಿ (ಒಂದು ತರಹ ಕೋನದ ಕೀರಿಟ)ದಲ್ಲಿ,
ದಂತ ಇಟ್ಟಿರುತ್ತಾರೆ.  ಥಳ ಥಳ ಹೊಳೆಯುತ್ತಿದ್ದ ಪಗೋಡದ ದರ್ಶನ ಕಾದು ಕುಳಿತ ನಮಗೆ, ಬಾಗಿಲು ತೆಗೆ-
ದೊಡನೆ ಒಮ್ಮೆಗೆ ಚೆನ್ನಾಗಿ ಅಯಿತು.  ಒಳಗಡೆ ಮರದ ಕೆತ್ತನೆ ಕೆಲಸಗಳು ಮೋಹಕವಾಗಿದ್ದವು.  ಬುದ್ಧನ
ವಿಹಾರ ವಿಗ್ರಹ, ಓರಿಸ್ಸಾ ರಾಣಿಯ ಕಥೆಯ ಕೆತ್ತನೆ ಎಲ್ಲಾ ನೋಡಿಕೊಂಡು, ಹೋಡೆಲ್ ಗೆ ವಾಪಸ್ಸು ಬಂದೆವು.
ರಾತ್ರೆ ಭೋಗನ ಹಾಗು ರೆಸ್ಟು.
          ಈ ದಿನ 29-3-2015.  ಬೆಳಿಗ್ಗೆ ಯಥಾಪ್ರಕಾರ ತಿಂಡಿ ಮುಗಿಸಿಕೊಂಡು, ಕ್ಯಾಂಡಿ 8 ಕ್ಕೆ ಬಿಟ್ಟೆವು.
ಮೊದಲು ಸಿಲ್ಕ್ ಎಂಪೋರಿಯಂ ಗೆ ಹೋದೆವು.  ಎಲ್ಲಾ ದೊಡ್ಡ ದೊಡ್ಡ ನಗರದಲ್ಲಿರುವಂತೆ ದೊಡದಾಗಿದೆ.
ಮಗ ಅಳಿಯನಿಗೆ ಟೀ ಶರ್ಟ್, ಮಗಳು ಸೊಸೆಗೆ ಪ್ಯಾಂಟಲೂಸ್ ವ್ಯಾಪಾರ ಮಾಡಿದೆವು.  

          ನಂತರ ಅಲ್ಲಿಂದ ಮರದ ಕೈ ಕೆಲಸದ ಮಳಿಗೆಗೆ (ಅರ್ಟ್ ಗ್ಯಾಲರಿ)ಗೆ ಹೊದೆವು.  ಬೀಟೆ,
ಸಾಗುನಾನಿ, ತೇಗ, ತೆಂಗು ಮರಗಳಿಂದ ವಿಧ ವಿಧ ಕರ ಕುಶಲ ವಸ್ಸುವನ್ನು ಮಾಡಿದ್ದಾರೆ.  ಅದರ ಕಾರ್ಖನೆ
ಹಾಗು ಮಾರಟ ಮಳಿಗೆ.ಅಲ್ಲಿಯ ಒಂದು ವಿಶೇಷವೆಂದರೆ, ಒಂದು ಮರದ ಹೆಸರು "ರೈನ್ ಬೋ' ವುಡ್.
ಅದರ ಹೊಟ್ಟನ್ನು ನೀರಿನಲ್ಲಿ ಹಾಕಿ ಅದಕ್ಕೆ ನಿಂಬೆ ಹಣ್ಣಿನ ರಸ, ಕಬ್ಬಿಣ, ಸುಣ್ಣ, ವೆನಿಗರ್, ಬೆರಸಿ, ಕಾಮನ-
ಬೆಲ್ಲಿನ ಏಳು ಬಣ್ಣವನ್ನು ನಮ್ಮ ಎದುರಿಗೆ ಮಾಡಿ ತೋರಿಸಿ, ಈ ನೈಸರ್ಗಿಕ ಬಣ್ಣವನ್ನೆ ಬಳಸುತ್ತಾರೆ. ಅರಣ್ಯ
ಸಂಪತ್ತು ವೀಪರೀತ ಇರುವುದರಿಂದ ಮರದ ಕೊರತೆಯಿಲ್ಲ. ಕುಶಲ ಕರ್ಮಿಗಳು ಅಲ್ಲೆಯೇ ಕೆಲಸನಿರತರಾಗಿದ್ದರು.
ಮರದಿಂದ ಮಾಡಿದ ವಿಶೇಷ ರಿತಿಯ ಪೀಠೋಪಕರಣಗಳು, ಸಂಖ್ಯೆಯಿಲ್ಲದ ಅನೆಗಳು, ಕುದರರೆಗಳು, ಒಂಟೆಗಳು,
ರೆಪ್ಟಾಲ್ಸು ಗಳು, ಬುದ್ಧನ ಮುಖವಾಡಗಳು, ತರತರಹದ ಮಾಸ್ಕ್ ಗಳು, ಹಿಂದೂ ದೇವತೆಗಳು, ಬುದ್ಧನ ಪ್ರತಿಮೆ
ಗಳು, ಮೀನುಗಾರರ ಪ್ರತಿಮೆಗಳು, ಹಾವುಗಳು ಇನ್ನು ಏನೇನೋ ಇದ್ದವು. ಒಂದು ಮರದ ಮೋಟರ್ ಬೈಕ್
ಮಾಡಿ ಇಟ್ಟಿದ್ದರು. ಲೆಕ್ಕವೆಲ್ಲದಷ್ಟು ವಸ್ತುಗಳು ಇದ್ದವು.  ಬೆಲೆ ಗಗನಕ್ಕೆ. ಬಹಳ ಅಪರೂಪದ ವಿಶೇಷ ಕಲೆ
ಯಿಂದ ಕೂಡಿತ್ತು.
          ಅಲ್ಲಿಂದ ನಾವು "ನ್ಯುವರ ಎಲಿಯ" ಅನ್ನುವ ಜಾಗಕ್ಕೆ ಬಂದೆವು.  ಹನುಮಾನ್ ಮೊದಲ ಸಲ
ರಾವಣನ ಜಾಗದಲ್ಲಿ ಇಳಿದ ಸ್ಥಳ.  ಇಲ್ಲಿ ಗುಡ್ಡದ ಮೇಲೆ ಮೆಟ್ಟಿಲು ಹತ್ತಿ ಹೊದ ಮೇಲೆ ಹನುಮಾನ್
ಮಂದಿರವಿದೆ.  ರಥೋತ್ವಾವದ ಮೊದಲ ಡಿನ ವಾದ್ದರಿಂದ ಧ್ವಜಾರೋಹಣ ಪೊಜೆ ನಡೆಯುತ್ತಿತ್ತು.  ಪಂಚಾ-
ಮೃತ ಅಭಿಷೇಕ, ಪೂಜೆ, ಅಲಂಕಾರ, ಪೂರ್ಣಹುತಿ ಅಗುವತನಕ ಇದ್ದೇವು.  18 ಅಡಿ ಎತ್ತರದ, ಕರಿಯ
ಶಿಲೆಯ ಹನುಮಾನ್ ವಿಗ್ರಹ.  ಪ್ರಸಾದ ಸ್ವೀಕಾರ.ನಮ್ಮ ಸ್ವಾಮಿಯವರಿಂದ ಅನುಗ್ರಹ ಭಾಷಣ, ಅದರ ತಮಿಳು
ಅನುವಾದ.  ಇಲ್ಲಿ ಚಿನ್ಮಯಾ ಮಿಷನ್ ರವರಿಂದ ದೇವಸ್ಥಾನ, ಪಾಠಶಾಲೆ, ಪಾಕಶಾಲೆ ಎಲ್ಲಾ ಸ್ಥಾಪಿತವಾಗಿದೆ.
ಸ್ವಾಮಿ ತ್ಯಾಗಮಯನಂದಜಿ ಯವರಿಂದ ಪ್ರಾರಂಭನಾಗಿದೆ.  ಊಟ ದಕ್ಷಿಣ ಭಾರತದ ತರಹ ಇದ್ದು ಬಹಳ
ಚೆನ್ನಾಗಿತ್ತು.  ಸಾರು, ಹುಳಿ, ಬೆಂಡೆಕಾಯಿ ಗೊಜ್ಜು, ಪಲ್ಯ, ಕೇಸರಿಬಾತ್ , ಅನ್ನ, ಕಡೆದ ಮೊಸರು, ಹಪ್ಪಳ,
ಬಾಳೆಹಣ್ಣು ಒಳಗೊಂಡಿತ್ತು.  ಪ್ರತಿ ಪೂರ್ಣಿಮ ವಿಶೇಷ ಪೂಜೆ ಇದ್ದು, ಜನ ಸಮೂಹ ಜಾಸ್ತಿ ಇರುತ್ತೆ. ಸುತ್ತಾಲು ಕಣಿವೆ, ಬೆಟ್ಟ, ಗುಡ್ಡ, ನದಿ, ರಮ್ಯವಾದ ಪ್ರಕೃತಿ ಮೋಹಕವಾಗಿತ್ತು.  ಮಿಷನ್ ನಿನ ಮಕ್ಕಳಿಂದ
ಹಾಡು ಭಜನೆಗಳ ಪಠನ.  ಸಿಂಹಳದ "ಮಾಹಾನಾರಿ" ನದಿಯ ದರ್ಶನ.  ಇದು ಗಂಗೆಗೆ ಸಮಾನ. ಭೋಜನ
ಶಾಲೆಯ ಹೆಸರು "ಅನ್ನಪೂರ್ಣ". ಊಟಮಾಡಿ ನಿಧಾನವಾಗಿ ಕೆಳಗೆ ಇಳಿದು ಬಂದು ಬಸ್ಸು ಹತ್ತಿ ಮುಂದಿನ
ಪ್ರಯಾಣ.

          ಅಲ್ಲಿಂದ ನಾವು "ಬ್ಲೂ ಫೀಲ್ಡ್ ಟೀ ಗಾರ್ಡನ್"ಗೆ ಭೇಡಿ ನೀಡಿದೆವು.  ಟೀ ಮಾಡುವ ವಿಧಾನ
ವನ್ನು ನೋಡಿದೆವು.  ಮೊದಲು ಚಿಗುರು ಮುರುಟಿದ್ದು, ಇನ್ನು ಅರಳದೆ ಇರುವ ಎಲೆಯನ್ನು ಒಣಗಿಸಿ, ಸ್ವಾಭ
ವಿಕವಾಗಿ ಪರ್  ಮೆಂಟ್ ಮಾಡಿ, ಪುಡಿಮಾಡದೆ, ಮುರುಟಿದ ಏಲೆಯ ಟೀ "ಗೋಲ್ಡನ್", ಹಾಗು ಇನ್ನೊಂದು
ಪ್ರೋಸಸ್ ನಿಂದ ಮಾಡಿದ ಟೀ "ಸಿಲ್ ವರ್‍ಟೀ", ನಂತರ 2 ಗಂಟೆ ಫರ್ ಮೆಂಟ್ ಮಾಡಿ, ಪುಡಿಮಾಡಿದ ಏಲೆಯ ಟೀ "ಗ್ರೀನ್ ಟೀ", ನಂತರ 8 ಗಂಟೆ ಫರ್ ಮೆಂರ್ಟ ಮಾಡಿದ ಟೀ, ಇನ್ನೊಂದು ಟೀ ಪುಡಿ.  ತುಂಬ
ನುಣ್ಣಗೆ ಮಾಡಿದ ಟೀ, ಜರಡಿ ಹಿಡಿದು ಮಾಡಿದ್ದು ಟೀ ಡಸ್ಟ್ ಹಾಗು ಏಲ್ಲಾ ಪ್ರೋಸಸ್ ನಿಂದ ಉಳಿದದ್ದು,
ಗಿಡಕ್ಕೆ ಗೊಬ್ಬರ.  ಮೊದಲ ದರ್ಜೆ ಟೀ 250 ಗ್ರಾಮಂಗೆ 350 ರೂ.  ಇಲ್ಲಿಯ ಟೀ ಪುಡಿಯೂ, ಪ್ರಪಂಚದ
ಎಲ್ಲಾ ಕಡೆ ಹೋಗಿ, ದಲ್ಲಾಳಿ ಮೂಲಕ ವ್ಯಾಪರನಾಗಿ ವಿವಿಧ ಬ್ರಾನ್ಡ್ ಮೂಲಕ ಮಾರಟವಾಗುತ್ತೆ.  ಎಲ್ಲಾರಿಗು
ಎಲ್ಲ ಕಡೆ ಬ್ಲಾಕ್ ಟೀ ಉಚಿತವಾಗಿ ದೊರೆಯುತ್ತಿತ್ತು.  
          ಟೀ ಗಾರ್ಡನ್ ನಿಂದ ನಾವು ಸೀತಾ ಇದ್ದ ಅಶೋಕವನಕ್ಕೆ ಪ್ರಯಾಣ.  ಅಕಾಶದಿಂದ ನೋಡಿದರೆ
ಒಂದು ಕಿಂಡಿಯೂ ಕಾಣದ ಹಾಗೆ ಇರುವ ದಟ್ಟವಾದ ಕಾಡು.  ಎಲ್ಲೋ ಸಾಹಿತ್ಯದಲ್ಲಿ ಹನುಮಂತನು ಸೀತೆಯ
ಹುಡುಕಾಟದ ಬಗ್ಗೆ ಬರೆದದ್ದು ನಿಜ ಅನಿಸಿತು.  ಹುಡುಕಿದರೂ ಸಿಗದ ತರಹ ದಟ್ಟವಾದ ಕಾಡು.  ಒಂದು ಕಡೆ
ಹನುಮಂತನ ಚಿಕ್ಕ ಹಾಗು ದೊಡ್ಡ ಹೆಜ್ಜೆಯ ಗುರುತು ಇವೆ.  ಅಲ್ಲಿಯೇ ಝರಿಯ ಪಕ್ಕ ಕೆಂಪು ಬಟ್ಟೆ ಕಟ್ಟಿದ
ಅಶೋಕ ವೃಕ್ಷ.  ಸೀತೆಯು ಇದ್ದ ವೃಕ್ಷ.  ಝರಿಯ ಇನ್ನೊಂದು ಪಕ್ಕದ್ದಲ್ಲಿ 5,000 ವರ್ಷಹಳೆಯದಾದ ರಾಮ,
ಸೀತೆ, ಲಕ್ಷಣ, ಹನುಮಂತರ ದೇವಸ್ಥಾನ.  ಬೆಟ್ಟದಿಂದ ಇಳಿದು ಬಂದ ನೀರಿನ ಝರಿಯು, ಸೀತೆಯ ನೀರಿನ
ಅವಶ್ಯಕತೆಯನ್ನು ಪೊರೈಸುತ್ತಿತ್ತು.  ಝರಿಯ ಮೇಲೆ ದೇವಸ್ಥಾನ ವಿರುವುದು. ಅಲ್ಲಿಂದ ಬಗ್ಗಿ ನೋಡಿದರೆ,
ಅಶೋಕ ವೃಕ್ಷ, ಝರಿ ಕಾನುವುದು.  ದೇವಸ್ಥಾನಕ್ಕೂ ಹಾಗು ವೃಕ್ಷದ ಮದ್ಯೆ ನದಿ ಹಾಗು ಕಣಿವೆ ಇದೆ.
ಹತ್ತಿರ ಹೋಗುವುದು ಕಷ್ಟ.  ಗುಡಿಗೆ ರಸ್ತೆಯೀಮದ ಕೆಳಗೆ ಇಳಿದು ಹೋಗಬೇಕು.  ಅಲ್ಲಿಂದ ಕೆಳಗೆ ಕಣಿವೆ
ಅಶೋಕ ವೃಕ್ಷವೆದೆ.  ಅದನ್ನು ನೋಡಿಕೊಂಡು, "ನೋವರ ಎಲೀಯ" ಎಂಬ ಊರಿಗೆ ಬಂದ್ವಿ.  ಊರು ಬಹಳ
ಚೆನ್ನಾಗಿದೆ.  ಬ್ರಿಟಿಷ್ ಕಾಲದ ಕಟ್ಟಡಗಳು.  "ಸ್ವಿಜರ್ ಲ್ಯಾಂಡ್" ಆಫ್ ಶ್ರೀಲಂಕಾ ಅನ್ನುತ್ತಾರೆ.  ಬರುವಾಗ
ದೊಡ್ಡದಾದ ಕೆರೆಯಲ್ಲಿ, ಹಂಸದ, ಹೆಲಿಕ್ಯಾಪ್ಟರ್ ಮಾದರಿಯ ದೋಣಿಗಳು ತೇಲುತ್ತಿದ್ದವು.  ಪ್ರಕೃತಿ ಸೌದರ್ಯ
ಸವಿಯುತ್ತಾ ಹೋಟಿಲ್ "ಗಾಲ್ ವೇ ಫಾರೆಸ್ಟ್" ಲಾಡ್ಜ್ ಗೆ ಬಂದೆವು.  ಸುತ್ತಾಲು ಕಾಡಿನಲ್ಲಿ ಇದ್ದಂತೆ ಇತ್ತು.

          ಈ ದಿನ 30-3-2015. ಬೆಳಿಗ್ಗೆ ಸ್ನಾನಮಾಡಿಕೊಂಡು, ರೂಮಿನಲ್ಲೆ ಕಾಫಿ ಮಾಡಿಕೊಂಡು ಕುಡಿದು
ತಿಂಡಿಗಿಂತ ಮುಂಚೆ, ಗಾಯತ್ರಿ ಪೀಠ ನೋಡಲು ನಿರ್ಗಮಿಸಿದೆವು.  ಈ ಸ್ಥಳದಲ್ಲಿ ರಾವಣನ ಮಗ ಮೇಘನಾಥ
ಇಂದ್ರಜಿತ್ ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿ ಮಾಯಾ ವಿದ್ಯೆಯನ್ನು ಪಡೆದ ಸ್ಥಳ.  ನಂತರ ಈ ಸ್ಥಳದಲ್ಲಿ
ಸ್ಥಳೀಯ ಗುರುಗಳು ಗಾಯತ್ರಿ ಪೀಠವನ್ನು ಸ್ಥಾಪಿಸಿದರು.  ಮೊದಲು ಕಾಣುವುದು ಈಶ್ವರ ಲಿಂಗ "ಮುತ್ಯುಂ-
ಜಯೇಶ್ವರ", ನಂತರ ಗಾಯತ್ರೀ ದೇವಿ, ಗುಡಿ ಇದೆ.  ಸುತ್ತಾಲು ವಿಶ್ವಾಮಿತ್ರ ಮಹರ್ಷಿ, ಅಗಸ್ತ್ಯ ಮಹರ್ಷಿ,
ಗೋಪಾಲ ಕೃಷ್ಣ, ಸೀತಾ, ರಾಮ, ಲಕ್ಷಣ ಹನುಮನ ಜೊತೆಗೆ ನಿಂತಿರುವುದು ಇದೆ.  ವಿಶೇಷವೆಂದರೆ ಹನುಮನು
ಸೀತೆ ಮಾತೆಯ ಜೊತೆ ನಿಂತಿರುವುದು.  ವಿಷ್ಣು ಗಾಯತ್ರಿ, ಕೃಷ್ಣ ಗಾಯತ್ರಿ, ರಾಮ ಗಾಯತ್ರಿ, ಗುಡಿಯ ಸುತ್ತಾಲು
ಪ್ರತಿಷ್ಠಾಪಿಸಿದ್ದಾರೆ.  ಅಲ್ಲಿ ಅದಿನ ಒಂದು ಪೂಜ ಕಾರ್ಯ ವಿತ್ತು.  ಹೊರಗಡೆ ಚೆನ್ನಾಗಿ ರಂಗವಲ್ಲಿ, ಹುಡುಗರು
ಹಾಕುತ್ತಿದ್ದರು.  ಹೂವಿನಿಂದ ತುಂಬುತ್ತಿದ್ದರು.  ಅಲ್ಲಿಂದ ಸೀದಾ ಹೋಟೆಲ್ಗೆ ಬಂದು ತಿಂಡಿ ಸೇವನೆ.
          ನಂತರ ಅಲ್ಲಿಂದ ನಾವು "ದಿವುರಂಪುರ" ಎಂಬಲ್ಲಿ "ಸೀತಾ ಅಗ್ನಿ ಪರೀಕ್ಷೆಯ ಸ್ಥಳ"ಕ್ಕೆ ತೆರಳಿದೆವು.
ಅಲ್ಲಿಯ ಗುಡಿಯಲ್ಲಿ ಇದಕ್ಕೆ ಸಂಬಂದಪಟ್ಟಹಾಗೆ ಚಿತ್ರಣಗಳು ಇವೆ. ಈಗ ಬೌದ್ಧರಿಂದ ಒಳಗಾಗಿದೆ.  ಬೌದ್ಧ
ಪುರೋಹಿತರಿಂದ ಆಶೀರ್ವಾದ ವಚನ.  ಅಗ್ನಿ ಪರೀಕ್ಷೆಯಾದ ಸ್ಥಳದಲ್ಲಿ ಅಶೋಕನ ಮಗಳು ಸಂಗಮಿತ್ರ ಬಿಹಾರ
ದಿಂದ ತಂದ ಭೋದಿ ವೃಕ್ಷ, (ಅಶ್ವತ, ಅರಳೀಮರ) ಸೊಂಪಾಗಿ ಇದೆ.  ಹೆಮ್ಮರವಾಗಿದೆ.  ಗಯಾ (ಭಾರತ)
ದಲ್ಲಿ ಇದ್ದ ವೃಕ್ಷವು ಮುದಿ ಅದಾಗ, ಇಲ್ಲಿಂದಲೇಸಸಿ ಮಾಡಿ, ಮತ್ತೆ ಗಯಾದಲ್ಲಿ, ವೃಕ್ಷವು ಚಿಗುರುವಂತೆ ಮಾಡಿದ್ದು, ಒಬ್ಬ ಬ್ರಿಟಿಷ್ ಅಧಿಕಾರಿ.  ಇಲ್ಲೆ ಪಕ್ಕದಲ್ಲಿ ಬೌದ್ಧ ಸ್ತೂಪ ನಿರ್ಮಾಣವಾಗಿದೆ.  ಬುದ್ಧನ ಸಾಲು ಸಾಲು
ಪ್ರತಿಮೆಗಳು ಇವೆ.  ಇದನ್ನು ನೋಡಿಕೊಂಡು ಕ್ಯಾಂಡಿ ಕಡೆಗೆ ಪ್ರಯಾಣ.  ಸಿಲ್ಕ್ ಎಂಪೋರಿಯಂ ಇದ್ದ ಕಡೆಗೆ,
ಮೇಲಿನ ಅಂತಸ್ತಿನ ಹೋಟಲಿನಲ್ಲಿ ಊಟ.  ಬಹಳ ಜನ ದಟ್ಟಣೆ ಇತ್ತು.  ನಮಗೊಸ್ಕರ ರಸಂ, ಬಿಳಿ ಅನ್ನ,
ಮೊಸರು, ಮೊದಲೆ ಹೇಳಿ ತಿಳಿಸಿದ್ದರು.  ಕ್ಯಾಂಡಿಯಲ್ಲಿ ಊಟ ಮುಗಿಸಿ, ಕೊಲಂಬೋಕಡೆ ಪ್ರಯಾಣ ಮುಂದು-
ವರೆಸಿದೆವು.  ದಾರಿ ಉದ್ದಕ್ಕೂ ಪರ್ವತ ಸಾಲುಗಳು, ಕಣಿವೆಗಳು, ನಂತರ ಮೈದಾನ ಪ್ರದೇಶ.  ಬಸ್ಸಿನಿಂದ ಅಕಡೆ ಈಕಡೆ ಪ್ರಕೃತಿಯ ಸೊಬಗನ್ನು ಸವಿಯುತ್ತಾ, ಪ್ರಯಾಣಿಕರೊಂದಿಗೆ ಅಂತಕ್ಷರಿ ಅಡುತ್ತಾ, ದಾರಿ ಸವೆದದ್ದು ತಿಳಿ-
ಯಲ್ಲಿಲ್ಲ.  ಸುಮಾರು ರಾತ್ರೆ 7 ವರೆಗೆ, ಕೊಲೊಂಬೊ ನಗರವನ್ನು ಪ್ರವೇಶಿಸಿ, ಅಲ್ಲಿನ ಉನ್ನತ ಕಟ್ಟಡಗಳನ್ನು
ನೋಡುತ್ತಾ, ನಗರ ಮಧ್ಯೆ ಪ್ರದೇಶದಲ್ಲಿರುವ "ಕರಿ ಇಂಡಿಯನ್" ರೆಸ್ಟೋರೆಂಟ್ ಗೆ ಊಟಕ್ಕೆ ಬಂದೆವು.  ಹೊರಗೆ
ಮಳೆ ಜಿನುಗುಟ್ಟುತ್ತಿತ್ತು.  ಊಟ ಮುಗಿಸಿಕೊಂಡು, ಕೊಲೊಂಬೋ 6ನೇ ಸ್ಟೆಟರ್ ನಲ್ಲಿರುನ ಹೋಟೆಲ್ ಸಫೈರ್
ನಲ್ಲಿ ತಂಗಿದೆವು.
          ಈ ದಿನ 31-3-2015. ಬೆಳಿಗ್ಗೆ ಸ್ಫೇಡ್ ಬ್ರೆಕ್ ಫಾಸ್ಟ್ ಮುಗಿಸಿಕೊಂಡು, ಲಗೇಜ್ ಬಸ್ಸಿನಲ್ಲಿ 
ಇರಿಸಿ, ಸೈಟ್ ಸೀಯಿಂಗ್ ಗೆ ಹೊರೆಟೆವು.  ಮೊದಲು ಪಂಚಮುಖಿ ಅಂಜನೇಯ ಮಂದಿರಕ್ಕೆ ಬಂದ್ವಿ.  ಇಲ್ಲಿ
ವಿಶೇಷವಾಗಿ  ಹನುಮಂತನಿಗೊಸ್ಕರ ಮಾಡಿದ ರಥವಿದೆ.  ಇಲ್ಲಿ ನವಗ್ರಹ, ಸೀತಾ, ರಾಮ, ಲಕ್ಷಣ, ಪಂಚಮುಖಿ
ಅಂಜನೇಯ, ಹಿಂದೆ ಗರುಡನ್ನು ಹೊಲುತ್ತಿತ್ತು.  ಅಲ್ಲಿ ದರ್ಶನ ಮಾಡಿ ಕೊಂಡು, ಸರಿಯಾಗೆ ಎದರುಗಡೇ
ಇದ್ದ, ಪತ್ನಿ ಸಮೇತ, ಶನಿ ದೇವರ ದೊಡ್ಡ ಮೂರ್ತಿಯನ್ನು ನೋಡಿಕೊಂಡು ಪ್ರಯಾಣ ಮುಂದುವರೆಸಿದೆವು.
ಅಲ್ಲಿಂದಲೇ ಬಸ್ಸಿನಿಂದಲೇ ನಗರ ವೀಕ್ಷಣೆ, ನಗರ ವಿಶಾಲವಾಗಿ, ಅಚ್ಚುಕಟ್ಟಾಗಿ, ಶುಭ್ರವಾಗಿ ಇತ್ತು.  ಕಟ್ಟಡಗಳ
ಪರಿಚಯ.  ಅಲ್ಲಿಯೇ "ವಿಕ್ಟೋರಿಯ ಮೆಮೋರಿಯಲ್" ಬಳಿ ಇದ್ದ "ಶ್ರೀಲಂಕಾ ಹ್ಯಾಂಡಿ ಕ್ರಪ್ಟ್ ಎಂಪೋರಿ
ಯಮ್"ಬೇಟಿ ಮಾಡಿದ್ದೆವು.  ಇದು ಮಾರಾಟ ಮಳಿಗೆ.  ಕರ ಕುಶಲ ಕಲಾಕೃತಿಗಳು, ಬಹಳವಾಗಿ, ವಿವಿಧ 
ತರಹ ಇತ್ತು.  ಅಲ್ಲಿ ಮಗಳಿಗೊಸ್ಕರ ಕರಿಮರದ ಮೀನು ಗಾರನ ಮರದ ಪ್ರತಿಮೆ ಕೊಂಡೆನು.  ನಂತರ
ಶ್ರೀಲಂಕಾ ಕ್ರಿಕೆಟ್ ಗಾರರ ಹಾಗು ಶ್ರೀಮಂತರು ಇರುವ ಅಚ್ಚುಕಟ್ಟಾದ ಪ್ರದೇಶ ನೋಡಿದೆವು.  ಪ್ರತಿಯೂಬ್ಬ
ಕ್ರಿಕೆಟ್ ಗಾರನ ಅವನದೇ ಅದ ಸ್ಟೇಡಿಯಂ ಇದೆ.  ಗಗನ ಚುಂಬಿ ಕಟ್ಟಡಗಳು, ರಾಯಲ್ ಸ್ಪೋಟ್ಸ್ ಕಂಪ್ಲೆಕ್ಸ್
ಅನೇಕ ಎಂಬೇಸಿ ಅಫೀಸ್ಗಳು, ಸರ್ಕಾರಿ ಆಫೀಸ್ ಗಳು, ಎಲ್ಲ ನೋಡಿದೆವು.
          ನಂತರ ಕೋಲೊಂಬೋ ಫೋಟ್ ಹತ್ತಿರ ಒಂದು ದೇವಸ್ಥಾನಕ್ಕೆ ಬಂದೆವು.  ಬಿಸಿ ಜಾಗದಲ್ಲಿದ್ದು,
ಒಳ್ಳೆ ದ್ವಾರದಿಂದ ಕೂಡಿದ್ದು, ಒಳಗಡೆ ವಿಶಾಲವಾಗಿದೆ.  ಚಿದಂಬರ ನಟರಾಜನ ಮಂದಿರ.  ಪ್ರವೇಶಿಸುತ್ತಿದ್ದಹಾಗೆ
ಗೋಶಾಲೆ, ಬಂಗಾರ ಲೇಪಿತ ಮೂರು ರಥಗಳು, ಬಹಳ ವ್ಯವಸ್ಥಿತವಾಗಿ ಇತ್ತು.  ಒಳಗಡೆ ಅಮ್ಮನವರ ಗುಡಿ.
ಇಲ್ಲಿ ಶಿವನ ಹೆಸರು "ಪೊನ್ನಂಬಲೇಶ್ವರ".  ಪ್ರದಕ್ಷಣೆ ಹಾಕಿ ಇನ್ನೂಂದು ಬದಿ ಬಂದಾಗ, ಅಲ್ಲಿ ವೀವೆಕನಂದರ
ಪ್ರತಿಮೆ ಇತ್ತು.  ಈ ಗುಡಿ ಮುಖ್ಯ ರಸ್ತೆಗೆ ಹಡಗುತಾಣಕ್ಕೆ (ಫೋರ್ಟ್) ಅಭಿಮುಖವಾಗಿ ಇದೆ.  ಮತ್ತೆ ಬಸ್ಸಿಗೆ
ಹತ್ತಿ ಇನ್ನೊಂದು ಕಡೆ ಒಂದು ಮಾಲ್ಗೆ ಬಂದೆವು.  ಕೆಲವರು ಶಾಫಿಂಗ್ ಮಾಡಿದರು.  
          ಶ್ರೀಲಂಕಾವನ್ನು 50 ಸೆಕ್ಟರ್ ಅಗಿ ವಿಂಗಡಿಸಿದ್ದಾರೆ.  6 ಮತ್ತು 7 ಶ್ರೀಮಂತರ ನೆಲೆ.  ರಾತ್ರೆ
ಬಹಳ ಚೆನ್ನಾಗಿ ಕಾಣುತ್ತೆ.  ರಸ್ತೆಯಲ್ಲಿ ಓಡಾಡುವ ಆಟೋಗಲು ಬಹಳ ವಿಶೇಷವಾಗಿ ಇತ್ತು.  ತರ ತರಹದ
ಬಣ್ಣಗಳು.  ಕಾರಣ ಯಾವ ವರ್ಷದಲ್ಲಿ ಕೊಂಡಿರುತ್ತಾರೋ ಆ ವರ್ಷದ ಖರೀದಿಗೆ ಒಂದು ಬಣ್ಣ.  ವಿಶೇಷ
ವೆನಿಸಿತು.  ಇಷ್ಟೇಲ್ಲಾ ಸುತ್ತಿ ಬರುವ ವೇಳೆಗೆ ಊಟದ ಸಮಯವಾಯಿತು.  ಉತ್ತಮು ಹೋಡೆಲ್ ನಲ್ಲಿ
ಭರ್ಜರಿ ಊಟವಾಯಿತು.  ಈಗಾಗಲೇ 2ವರೆ ಗಂಟೆ ಅಯಿತು.  ನಾವು ಏರ್ ಫೋರ್ಟ್ಗೆ ಪ್ರಯಾಣ ಮಾಡುವ
ಸಮಯ.  ಕೊಲೊಂಬೋ ನಗರದಿಂದ 30 ಕಿ,ಮಿ, ದೂರದ್ದಲ್ಲಿರುವ ಭಂಡಾರ ನಾಯಿಕೆ ಅಂತರ ರಾಷ್ಟೀಯ
ವಿಮಾನ ನಿಲ್ದಾಣಕ್ಕೆ ಹೊರೆಡೆವು.  ಬಸ್ಸುನಲ್ಲಿ ಸಣ್ಣ ಸಮಾರಂಭ.  ಗುರುಗಳಿಗೆ ಶಾಲು ಹೊದೆಸಿ ಸನ್ಮಾನ.
ನಮ್ಮ ಗೈಡ್ ಡೆನ್ಝೀಲ್, ಹಾಗು ಬಸ್ಸು ಡೈವರ್, ಅವರ ಸಹಾಯಕರಿಎ ಸಣ್ಣ ಕಾಣಿಕೆ.  ಸುಮಾರು 3ನರೆಗೆ
ಏರ್ ಫೋರ್ಟ್ ಬಂದೆವು.  ಅವರೆಲ್ಲಾರು ನಮಗೆ ವಿಧಾಯ ಹೇಳಿದರು.  ಚೆಕ್ ಇನ್ ಪ್ರಕ್ರೀಯೆ ಸುಗಮವಾಗಿ
ನಡೆಯಿತು.  ನಂತರ ಗೇಟ್ ಬಿ5 ಬಳಿ 1ವರೆ ಗಂಟೆ ನೀರಿಕ್ಷೆ.  ಗೇಟ್ ಒಳಗಡೆ ಬಿಟ್ಟಮೇಲೆ ಚೆಕ್ ಇನ್ ಆಗಿ, ಎಲ್ಲಾ ಸಹ ಪ್ರಯಾಣಿಕರ ನಡುವೆ ವಿಧಾಯ ಮಾತುಕತೆ.  6ವರೆ ಹೊತ್ತಿಗೆ ವಿಮಾನ ಏರಿದೆವು.  6.50ಕ್ಕೆ ವಿಮಾನ ನೆಲ ಬಿಟ್ಟು ಗಗನಕ್ಕೆ ಹಾರಿತು.  ವಿಮಾನದಲ್ಲಿ, ಬಿಸಿ ಬಿಸಿಯಾದ ರೈಸ್ ನ್ಯೂಡಲ್ಲ್ ತರಕಾರಿಯ ಜೊತೆಗೆ.
ಮತ್ತು ಮೊಸರು.  ನಂತರ ಕಾಫಿ, ಟೀ ಸೇವನೆ, ಶ್ರೀಲಾಂಕ ಏರ್ ಲೈನ್ ರವರದು ಯಾವಗಾಲು ಸಸ್ಯಹಾರಿ
ಅಹಾರ.  ಪ್ರಯಾಣದ ಸಮಯ ಸುಮಾರು 1ವರೆ ಗಂಟೆ.  8.30 ರಾತ್ರೆಗೆ ಬೆಂಗಳೂರು ಕೆಂಪೆಗೌಡ ಅಂತರ್
ರಾಷ್ರೀಯ ವಿಮಾನ ನಿಲ್ದಾಣಕ್ಕೆ ಇಳಿದೆವು.  ಎಲ್ಲಾರಿಂದ ಪ್ರೇಮ ಪೂರಕ ಬಿಳ್ಳೊಟ್ಟು, 9ರೆಗೆ ಓಲಾ ಮಾಡಿಕೊಂಡು
ಮನೆ ತಕುಪಿದೆವು.  ಒಟ್ಟಿನಲ್ಲಿ ಪ್ರಯಾಣ ಚೆನ್ನಾಗಿ ಅಯಿತು.
                       *******************************
















No comments:

Post a Comment