Friday, 16 September 2016


                                 
                                             ಕೈಲಾಸ ಮಾನಸ ಸರೋವರ ಯಾತ್ರಾ

          ತಾರೀಖು 28ನೇ ಜೂನ್ 2013ರ ಬೆಳಗಿನ ಜಾವ 3 ಗಂಟೆಗೆ, ಮನೆಯಿಂದ ಏರ್ ಪೋರ್ಟ್ಗೆ
ಪ್ರಯಾಣ.  ಬೆಳಿಗ್ಗೆ 6. 15ಕ್ಕೆ ದೆಹಲಿ ಫ್ಲೈಟ್.  ಸಹ ಪ್ರಯಾಣಿಕರ ಒಡನಾಟ.  ಬೆಳಿಗ್ಗೆ 8.50 ಕ್ಕೆ ದೆಹಲಿ
ತಲುಪಿದೆವು.  ಅಲ್ಲಿ ಏರ್ ಪೋರ್ಟ್ ಫಾರ್ಮಲೀಟೀಸ್ ಮುಗಿಸಿ. ಸುಮಾರು 12 ಗಂಟೆಯ ಹೊತ್ತಿಗೆ, ಖಟ್ಮಂಡ್
ಫ್ಲೈಟ್ ಗೆ ಸಜ್ಜಾದೆವು.  ಸಹ ಪ್ರಯಾಣಿಕರ ಜೊತೆ ಚಪಾತಿ ಪಲ್ಯ, ರವೆ ಇಡ್ಲಿ, ಸಹಕಾರ ನಗರ ಸಹ ಪ್ರಯಾಣಿ
ಕರ ಮನೆ ಅಡುಗೆಯ ಭೋಜನ ವಾಯಿತು.  ಮದ್ಯಾನ್ಹ 12.30ಕ್ಕೆ ಖಟ್ಮಂಡ್ ವಿಮಾನ ಏರಿದೆವು.  3.50ಕ್ಕೆ
ನೇಪಾಳದ "ತ್ರೀಭುವನ್" ವಿಮಾನ ನಿಲ್ದಾಣದಲ್ಲಿ ಇಳಿದೆವು.  ಔಪಚಾರಿಕತೆ ಮುಗಿದ ನಂತರ, ನಮಗಾಗಿ ಕಾದಿದ್ದ
ಲಕ್ಸುರೀ ಬಸ್ಸ್ ನಲ್ಲಿ ಕುಳಿತು, "ಹೋಟೆಲ್ ಗ್ರಾಂಡ್", ಫೋರ್ ಸ್ಟಾರ್ ಹೋಟೆಲ್ ಗೆ ಪ್ರಯಾಣ.  ತಿಂಡಿ ಕಾಫಿ

ನಂತರ ವಿಶ್ರಾಂತಿ.  ರಾತ್ರೆ 8.30ಕ್ಕೆ ಭೋಜನ.  ತರಹವಾರಿ ಅಡುಗೆಗಳು.  ಕ್ಯಾಂಡಲ್ ಲೈಟ್ ಡಿನ್ನರ್.  ಆ ದಿನ
ರೆಸ್ಟ್.  ತುಂತುರು ಮಳೆಯಾಗುತ್ತಿತ್ತು.

          ಮಾರನೆ ದಿನ ಅಂದರೆ 29 ರಂದು, ಮೌಂಟನ್ ಫೈಟ್ ಬುಕ್ ಮಾಡಿದ್ದೆವು.  ಯತಿ ಏರ್ ಲೈನ್
ನಲ್ಲಿ.  ಮುಂಜಾನೆ 4 ಗಂಟೆಗೆ ಎದ್ದು, ಮಡಿ ಉಟ್ಟು, 5.30ಕ್ಕೆ ಏರ್ ಪೋರ್ಟ್ಗೆ ಪ್ರಯಾಣ.  ಮಿನಿ ಮೌಂಟನ್
ಪ್ಲೈಟ್ ನಲ್ಲಿ, ಪ್ರತಿಯೊಬ್ಬರಿಗೂ ವಿಂಡೋ ಸೀಟ್.  7.30ಕ್ಕೆ ಫ್ಲೈಟ್ ಆರಂಭ.  ಮೋಡಗಳನ್ನು ಛೇದಿಸಿಕೊಂಡು
ಎತ್ತರಕ್ಕೆ ಪ್ರಯಾಣ.  ಅಲ್ಲಿ ಸ್ವಚ್ಛವಾದ ಬಿಸಿಲು, ಸೂರ್ಯಕಿರಣ.  ಹಿಮಾಚ್ಛಾಲಿತ ಹಿಮಾಲಯ ಪರ್ವತ ಶಿಖರಗಳ
ವಿಹಂಗಮ ನೋಟ.  ಮೌಂಟ್ ಎವರೆಸ್ಟ್, ಗೌರಿ ಶಂಕರ, ಅನ್ನಪೂರ್ಣ, ಕಾಂಚನ ಗಂಗಾ, ಮುಂತಾದ ಹತ್ತು
ಹಲನಾರು ಶಿಖರಗಳ, ಹತ್ತಿರದಿಂದ ಕೈಗೆ ಎಟಕುವಂತೆ ದರ್ಶನ.  ಕೆಳಗೆ ಹತ್ತಿ ಬಿಡಿಸಿದಂತೆ ಮೋಡಗಳು.
ಬೆಳ್ಳಿ ಪರ್ವತಗಳ ಸಾಲು ಸಾಲು.  ಸ್ವರ್ಗದಲ್ಲಿ ಇರುವ ಅನುಭವ.  ಕಣ್ಣುಗಳು ನೋಡುವಷ್ಟು ದೂರವು, ಹಿಮಾ
ಚ್ಛಾಲಿತ ಶಿಖರಗಳ, ಕಣಿವೆಗಳ ದರ್ಶನ.  ಸುಮಾರು ಒಂದು ಗಂಟೆ ವೀಕ್ಷಣೆ.  ಯತಿ ಎರ್ ಲೈನ್ ಸಿಬ್ಬಂದಿ
ಯಿಂದ ಉತ್ತಮ ವಿವರಣೆ.  ಏರ್ ಕ್ರಾಫ್ಟ್ ನ ಕಾಕ್ ಪಿಟ್ ನಿಂದ ವಿಹಂಗಮ ದೃಶ್ಯ ನೋಡಲು ಪ್ರತಿಯೊಬ್ಬರಿಗೂ
ದರ್ಶನ ಅವಕಾಶ.  ಕ್ಯಾಪ್ಟನ್ ಸಬೀನಾ ಶ್ರೇಷ್ಠಳ ನೆತೃತ್ವದಲ್ಲಿ ವಿಕ್ಷಣಾ ವಿವರಣೆ ಚೆನ್ನಾಗಿ ಅಯಿತು.  8.30ಕೆ ವಾಪಸ್ಸು.  ತರ ತರಹದ ತಿಂಡಿಗಳ ಭರ್ಜರಿ ಉಪಹಾರ
10.30ಕ್ಕೆ, ತುಂತುರು ಮಳೆಯಲ್ಲೆ, ಭಗವಾನ್ ಪಶುಪತಿನಾಥನ ದರ್ಶನಕ್ಕೆ ಪ್ರಯಾಣ.  ಸುಮಾರು
ಅರ್ಧಗಂಟೆ ಪ್ರಯಾಣದ ನಂತರ, 8ನೇ ಶತಮಾನದ ಪಶುಪತಿನಾಥನ ಪ್ರಾಚೀನ ದೇವಸ್ಥಾನಕ್ಕೆ ಭೇಟಿ.  6 ಅಡಿ
ಎತ್ತರದ, 5 ಮುಖವುಳ್ಳ, ಪಶುಪತಿನಾಥನ, ಭವ್ಯ ಲಿಂಗದ, ಪುಣ್ಯ ದರ್ಶನ.  ದೇವಸ್ಥಾನದ ನಾಲ್ಕು ದಿಕ್ಕೂ
ಗಳಿಂದಲೂ, ದರ್ಶನಕ್ಕೆ ಅವಕಾಶವಿದೆ.  ಮನಸಾರೆ, ಮನದಣಿಯ, ಪಶುಪತಿಯ ದರ್ಶನವಾಯಿತ್ತು.  ಅಲ್ಲಿಯ ಪ್ರಧಾನ ಅರ್ಚಕರು ಕನ್ನಡದವರು.





      ನಂತರ, ದೇವಾಲಯದ ಪ್ರಾಂಗಣದಲ್ಲಿರುವ, ಅನೇಕ ಅನೇಕ, ದೇವ ಸನ್ನಿಧಿಗಳ ದರ್ಶನ.
ಪ್ರದಕ್ಷಿಣೆ ನಂತರ ಧನ್ಯತಾಭಾವ.  ರುದ್ರಾಕ್ಷಿ ಸರಗಳ ಖರೀದಿ.  ಪ್ರಸಾದ ಸ್ವೀಕಾರ.  ನೇಪಾಳಿ ಗೈಡ್ ಸುರೇಂದ್ರ
ಜೊತೆಯಲ್ಲಿದ್ದು, ಬುಡಾ ನೀಲಕಂಠ, ಜಲ ವಿಷ್ಣು ದರ್ಶನಕ್ಕೆ ಪ್ರಯಾಣ
     
ಹಿಂದೆ ನೆಲ ಉಳುವಾಗ, ನೀಲಕಂಠ ಎಂಬ ವೃದ್ಧನಿಗೆ, ನೇಗಿಲ ಗುಳವು ಒಂದು ಪ್ರತಿಮೆಗೆ
ತಾಕಿದ ಅನುಭವ, ಅಗೆದು ನೋಡಲು, ಒಂದು ಬೃಹತ್ ವಿಷ್ಣುವಿಸ (ಸರ್ಪಶಯನನಾದ), ಅನಂತನ ಮೂರ್ತಿ.
ಇದನ್ನು ಒಂದು ಕೊಳದ ಮಧ್ಯೆ, ಶಯನ ಸ್ಥಿತಿಯಲ್ಲಿ ಸ್ಥಾಪಿಸಲಾಗಿದೆ.  ಇದನ್ನು "ಜಲ ವಿಷ್ಣು" ಎಂದು ಕರೆಯ
ಲಾಗಿದೆ.  ಇಲ್ಲಿನ ತೀರ್ಥವೂ ಪವಿತ್ರವೆಂದೂ ಪರಿಗಣಿತ.  ಸುತ್ತಾಲು ರುದ್ರಾಕ್ಷಿ ಮರಗಳ ಸಮೂಹ.  ಬೆಟ್ಟಗಳ
ತಪ್ಪಲು.  ನಂತರ ಹೋಟೆಲ್ ಗೆ ಹೋಗಿ, ಊಟ ವಿಶ್ರಾಂತಿ.


          3 ಗಂಟೆಗೆ, ಭಗವಾನ್ ಬುದ್ಧನ, ಬೃಹತ್ ಸ್ಥೂಪ ನೋಡಲು ಪ್ರಯಾಣ.  ಈ ಸ್ಥೂಪ ಸ್ವಯಂಭೂ, ಬೆಟ್ಟದ ಮೇಲಿದೆ.  ದೊಡ್ಡ ಕಟ್ಟಡ,  ಬುದ್ಧನ ಚಾರಿತ್ರಿಕ, ಪೌರಾಣಿಕ, ಮೇರು ಸ್ಥಳ.  ಇಲ್ಲಿಂದ
ಖಟ್ಮಂಡ್ ಕಣಿವೆಯ ಅಸದೃಶ ನೋಟ.  ಬಹಳ ಸುಂದರವಾಗಿದೆ.  ಬಹುಮಹಡಿಯ ಕಟ್ಟಡಗಳೇ ತುಂಬಿದೆ.
ಅವುಗಳ ಸಮೂಹ.  ಮಧ್ಯೆ ಬೀಳುತ್ತಿದ್ದ ತುಂತುರು ಮಳೆಯಲ್ಲೆ ಹೋಟೆಲ್ ವಾಪಸ್ಸು.  ಬಿಸಿ ಬಿಸಿ ಪಕೋಡ
ಸೇವನೆ.
         ಸಂಜೆ ಹಂಸ ಟ್ರಾವೆಲ್ಸ್ ನವರ ಜೊತೆ ಕೋಲಬರೇಟ್ ಆಗಿರುವ ಫೀಶ್ ಟೈಲ್ ಕಂಪನಿಯನರಿಂದ
ಕೈಲಾಸ ಮಾನಸ ಸರೋನರದ ಬಗ್ಗೆ ವಿಸ್ರುತ ವಿವರಣೆ.  ತೆಗೆದುಕೊಳ್ಳಬೇಕಾದ, ಎಚ್ಚರಿಕೆ ಹಾಗು ಸಲಹೆಗಳು.
ಡೌನ್ ಜಾಕೇಟ್ ವಿತರಣೆ.  ಅಲ್ಲಿಯೇ ಎಲ್ಲಾ ಸಹ ಪ್ರಯಾಣಿಕರ ಕಿರು ಪರಿಚಯ, ನಂತರ ಎಲ್ಲಾರು ಒಂದೇ
ಪರಿನಾರದ ಸದಸ್ಯರು.  ಹಂಸ ಪರಿವಾರ.  ರಾತ್ರೆ 8 ಕ್ಕೆ ಊಟ, ಮತ್ತು ಮಾರನೇ ದಿನ ಪ್ರಯಾಣಕ್ಕೆ ಡಫರ್
ಬ್ಯಾಗ್ ಗಳ ತಯಾರಿ.ಬೆಚ್ಚನೆ ಬಟ್ಟೆಗಳು, ಶೂಸ್, ಸಾಕ್ಸ್, ಎನರ್ಜೀ ಪಾನೀಯ, ನೀರು, ಮೆಡಿಸನ್ ಗಳು. ಮೊದಲಾ


ದುಗಳ ತಯಾರಿ ಪ್ರಾರಂಭವಾಯಿತು.

          30ನೇ ತಾರೀಖು ಬೆಳಗಿನ ಜಾವ 3 ಗಂಟೆಗೆ ಎದ್ದು, ಸ್ನಾನದಿ ನಿತ್ಯಕರ್ಮ ಮುಗಿಸಿ, 4 ಗಂಟೆಗೆ
ಕಾಫಿ ಕುಡಿದು, ನೇಪಾಳ, ಚೀನಾ ಗಡಿಯತ್ತ ಪ್ರಯಾಣ.  ಮಾರ್ಗ ಮಧ್ಯೆ ಬೆಳಗಿನ ಉಪಹಾರ.  ದುರ್ಗಮ,
ರುದ್ರವಾದ ಪ್ರಕೃತಿಯನ್ನು ಸವಿಯುತ್ತಾ, ಮಾರ್ಗವನ್ನು ಸವೆಸುತ್ತಾ, ಗಡಿಯ ಕೋಡಾರಿ ತಲುಪಿದೆವು.  ದಾರಿಯಲ್ಲಿ
ಅಸಂಖ್ಯಾತ ಜಲಪಾತಗಳು, ಭೂಕುಸಿತಗಳು ಕಾಣಸಿಕ್ಕವು.

          ಕೋಡಾರಿಯಲ್ಲಿ, ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಮುಗಿಸಿ ವಾಪಸ್ಸು ಬರುತ್ತಿದ್ದ
ಹಂಸ ಪರಿವಾರದ ಒಂದು ತಂಡವನ್ನು ಭೇಟಿಯಾದೆವು.  ಅಂದಿನ ಅಲ್ಲಿಯ ಭೋಜನ ಬಹಳ ಚೆನ್ನಾಗಿತ್ತು.
ಹೆಸರುಕಾಳು ಸಾರು, 2 ಪಲ್ಯ, ರೊಟ್ಟಿ, ಸಲಾಡ್, ಚೆಟ್ನಿ, ಅನ್ನ, ಮೊಸರು.  ನಮ್ಮ ಮುಖ್ಯ ಅಹಾರ ಮೊಸರು
ಇತ್ತು.  ಅಂದಿನ ನಂತರ ಮೊಸರು ಮಜ್ಜಿಗೆ ಹೇಳ ಹೆಸರಿಲ್ಲ.  ಕೋಡರಿಯಲ್ಲಿ ಹಣ ವಿನಿಮಯ ಮಾಡಿಕೊಂಡು
ನಂತರ ಸ್ನೇಹ ಸೇತುವೆ ಪಾರು ಮಾಡಿ ನಡೆದು, ಚೀನಾ ದೇಶವನ್ನು ತಲುಪಿದೆವು.  ಅಲ್ಲಿ ವೀಸಾ, ಔಪಚಾರಿಕತೆ
ಯನ್ನು ಮುಗಿಸಿಕೊಂಡು, ಚೀನಾದ "ನೈಲಾಮ್"ಕಡೆಗೆ, ಚೀನಾ ಬಸ್ ನಲ್ಲಿ ಪ್ರಯಾಣ ಮುಂದುವರೆಸಿದೆವು. ಕೋಡರಿ
ಯಿಂದ, ಗಡಿ ತನಿಖಾ ಕಛೇರಿಯ ತನಕ, ಟಿಬೇಟ್ ಹೆಂಗಸರು, ಗಂಡಸರೂ, ತಲೆಯ ಒಂದು ಪಟ್ಟಿಯ ಅಧಾರದ
ಮೇಲೆ, ನಮ್ಮೆಲ್ಲರ ಸಾಮಾನುಗಳನ್ನು, ಬೆನ್ನ ಮೇಲೆ ಹೊತ್ತು ಸಾಗಿಸುತ್ತಿದ್ದದ್ದನ್ನು ನೋಡಿ ಆಶ್ಚರ್ಯವಾಯಿತು.
100 ರಿಂದ 150 ಕೆ.ಜಿ. ವರೆಗೂ ಹೊರುತ್ತಿದ್ದರು.  ಅದು ಅಲ್ಲದೆ ರಸ್ತೆ ಎರಬೇಕಾಗಿತ್ತು.  ಅವರ ಬೆನ್ನ ಮೂಳೆ
ಎಷ್ಟು ಗಟ್ಟಿ ಇರಬೇಕು?  ತನಿಖೆಯ, ವೀಸಾದ ಕೆಲಸಗಳು, ಸುಸೂತ್ರವಾಗಿ ನಡೆದು, ಬಸ್ಸಿನಲ್ಲಿ ಪ್ರಯಾಣಿಸಿ,
ಸುಮಾರು 4 ಗಂಟೆಯ ಹೊತ್ತಿಗೆ, ನ್ಯಾಲಮ್ ನಲ್ಲಿ "ಶೀಶ್ ಭಾಮ", ಹೋಟೆಲ್ ತಲುಪಿದೆವು.  ಛಳಿಯೂ ಛಳಿ.
ನಡಗುತ್ತಿದ್ದೆವು.  ಮಳೆಯೂ ಇತ್ತು.  ಬೆಟ್ಟಗಳಲ್ಲಿ ಪ್ರಯಾಣ.  ಉದ್ದಕ್ಕೂ ಜಲಪಾತಗಳು, ಭೋರ್ಗೆರೆಯುವ
ನದಿಗಳು, ಹೋಟೆಲ್ ನಲ್ಲಿ ತಂಗಿದೆವು.  ಅಷ್ಟೊತ್ತಿಗೆ ಬಸಿ ಬಿಸಿಯ ಕಾಫಿ, ಸ್ನಾಕ್ ಗಳನ್ನು ಶೆರ್ಫಾಗಳು ನಮಗೆ
ಒದಗಿಸಿದರು.  ಅಲ್ಲೆ ಹ್ಯಾಂಡ್ ಗ್ಲೌಸ್ ಗಳನ್ನು ಖರೀದಿಸಿದೆವು.  ರಾತ್ರಿ 8.30 ಕ್ಕೆ ಬಿಸಿ ಬಿಸಿ ದಕ್ಷಿಣ ಭಾರತೀಯ
ಊಟ ಚೀನಾದಲ್ಲಿ.!.  ಶೇರ್ಫಾ {ನೇಪಾಳಿ ಚೀನಾ ಬೌದ್ಧರು}ಗಳಿಗೆ ನಮ್ಮ ಅಡಿಗೆಯ ತಯಾರಿಯ ತರಭೇತಿ
ಕೊಟ್ಟಿರುತ್ತಾರೆ.  ಸಾರು, ಹುಳಿ, ಪುಳಿಯೂಗ್ಗರೆ, ಇಡ್ಲಿ ಸಾಂಬರ್, ಉಪ್ಪಿಟ್ಟು, ಅವಲಕ್ಕಿ ಒಗ್ಗರಣೆ. ಇತ್ಯಾದಿ ಕಲೆಸಿ
ದ್ದಾರೆ.  ಇಷ್ಟು ಸಾಲದೆ?  ನಮ್ಮ ಊಟ ಸಿಗುತ್ತಿತ್ತು. ಜೊತೆಗೆ ಪುಲಕ, ಪಲ್ಯ, ರೊಟ್ಟಿ, ಹಣ್ಣುಗಳು.



          ತಾ.1ನೇ ಜುಲೈ 2013. ವಾತಾವರಣಕ್ಕೆ ಹೊಂದಿಕೆ ಯಾಗಲು ಬೇಕಾದ ತಯಾರಿ.  ಚಾರಣದ
ಅಭ್ಯಾಸಕ್ಕಾಗಿ, ಪಕ್ಕದ ಒಂದು ಬೆಟ್ಟಕ್ಕೆ ಚಾರಣ.  ಅವರವರ ಶಕ್ತಿ ಪರೀಕ್ಷಾಣ  ಕೇಂದ್ರ.  ಮುಂಬರುವ ಯಾತ್ರೆಗೆ
ತಯಾರಿ.  ಬೆಳಿಗ್ಗೆ 8.30ಕ್ಕೆ ಉಪಹಾರ, ವಿಶ್ರಾಂತಿ.  12.30ಕ್ಕೆ ಭೋಜನ.  ಭಾರತದ ಕಾಲಕ್ಕೂ, ಚೀನಾ ಕಾಲಕ್ಕೂ
2.30 ಗಂಟೆ ವ್ಯತ್ಯಾಸ.  ಭೋಜನ ವಿಶ್ರಾಂತಿಯ ನಂತರ, ರುದ್ರಾಭಿಷೇಕ, ಗಣಪತಿ ಪೊಜೆ, ಯಾತ್ರೆಯು ಸಫಲ
ವಾಗಲು ಯಾತ್ರಿಕರಿಂದ ಪೂಜೆ, ಪ್ರಾರ್ಥನೆ.  ನಾವಿಬ್ಬರು ದಂಪತಿಗಳು ಸಂಕಲ್ಪಕ್ಕೆ ಕುಳಿತಿದ್ದೆವು.  ದೀಪಕ್ ಶಾಸ್ತ್ರಿ
ಗಳು ನಡೆಸಿಕೊಟ್ಟರು.  ಜೊತೆಗೆ ಲಕ್ಷ್ಮಿನಾರಾಯಣ, ವೆಂಕಟೇಶ್, ಪ್ರಭಾಕರ್ ಮಂತ್ರಕ್ಕೆ ದನಿ ಗೂಡಿಸಿದರು.
ಎಲ್ಲಾರು ಭಾಗವಹಿಸಿ ಸಂತೋಷಪಟ್ಟರು.  ಹುಳಿ ಅವಲಕ್ಕಿ, ಒಣ ಹಣ್ಣುಗಳ ಪ್ರಸಾದ ವಿನಿಯೋಗ ವಾಯಿತ್ತು.
ಊರಿಂದ ತಂದಿದ್ದ ಗರಿಕೆ, ಬಿಲ್ವ, ಹೋಮದ ಪ್ರತಿಯೊಂದು ಸಾಮನು ಇತ್ತು.  ನಂತರ 4.30ಕ್ಕೆ ಕಾಫಿ, ಸ್ಯಾಕ್ಸ್
8 ಗಂಟೆಗೆ ಬಿಸಿ ಬಿಸಿ ಊಟ ಆಯ್ತು.  ಛಳಿ ಹೆಚ್ಚಾಗುತ್ತಿತ್ತು.  ನಮಗೆ 8.30 ಅದಾಗ ಅವರಿಗೆ 11 ಗಂಟೆ.
ರಾತ್ರೆ 9.30 ಅವರ ಕಾಲಕ್ಕೆ ಇನ್ನು ಬೆಳಕಾಗೆಇತ್ತು.

          ಮಾರನೇ ದಿನ ಅಂದರೆ 2ನೇ ತಾರೀಖು, ನ್ಯಾಲಮ್ ನಿಂದ ಬೆಳಿಗ್ಗೆ 5.30ಕ್ಕೆ ಹೊರಟು. 220
ಕಿ.ಮಿ. ದೂರವಿರುವ "ಸಾಗಾ'ಕ್ಕೆ ಪ್ರಯಾಣ.  ಸಂಜೆ ತಲುಪಿದೆವು.  ಮಾರ್ಗದಲ್ಲಿ ಟಿಬೆಟ್ ಫ್ರಸ್ಥಭೂಮಿಯಲ್ಲಿ,
ಬೆಳಗಿನ ಉಪಹಾರ ಉಪ್ಪಿಟ್ಟು. ಬೌದ್ದರ ಗುಂಫಾದ ದರ್ಶನ.  ಅಲ್ಲಿಂದಲೇ ಹಿಮಾಚ್ಛಾಲಿತ ಪರ್ವತ ಶಿಖರಗಳ
ದರ್ಶನ.  ನಂತರ ಬ್ರಹ್ಮಪುತ್ರನದಿಯ ತೀರ್ಥದ ಪ್ರೋಕ್ಷಣೆ.  ಮಾರ್ಗಮಧ್ಯಯಲ್ಲಿ ಬುತ್ತಿ ಊಟ.  ಸಂಜೆ ಸಾಗಾ
ತಲುಪಿ, ಹೋಟೆಲ್ ಸಾಗಾದಲ್ಲಿ ವಾಸ್ತವ್ಯ.  ಒಳ್ಳೆ ರೂಮು. ಜೊತೆಗೆ ರೂಮ್ ಹೀಟರ್, ಮತ್ತು ಅಟ್ಯಾಚ್
ಬಾತ್ ರೂಮ್.  ಸ್ನಾನ ಮಾಡಿದೆವು.  ಸ್ನಾನ ವಿಶೇಷವಾಗಿ ಹೇಳಬೇಕು. ಕಾರಣ ಕೆಲವು ಕಡೆ ಸ್ನಾನಕ್ಕೆ ಅನುಕೂಲ
ವಿರುವುದಿಲ್ಲ.  ವಿಶ್ರಾಂತಿ ನಂತರ, ರಸಕವಳ, ರಸಗುಲ್ಲ ಜೊತೆಗೆ. ರಾತ್ರೆ ಅಲ್ಲೆ ತಂಗು.

          ಇಂದು ಅಂದರೆ ಜುಲೈ 3 ರಂದು ಮಹತ್ವದ ದಿನ.  ಬ್ರಹ್ಮನ ಮನಸ್ಸಿನಿಂದ ಹುಟ್ಟಿದ "ಮಾನಸ
ಸರೋವರ"ವನ್ನು ತಲುಪಿದ ಸುದಿನ.  ಪ್ರಪಂಚದ ಎತ್ತರದ ಸ್ಥಾನದಲ್ಲಿರುವ ತೀರ್ಥಸ್ಥಾನಕ್ಕೆ ಬೇಟಿನೀಡಿದ ದಿನ.
(17,000ಫೀಟ್).  ಮಾನಸ ಸರೋವರದ ದರ್ಶನ.  ತೀರ್ಥಸ್ಥಾನದ ಮಹತ್ವದ ದಿನ.  ಸಾಗಾ ದಿಂದ "ಹರ್ಚು",
ಅಂದರೆ ಮಾನಸ ಸರೋವರದ ಬೇಸ್ ಕ್ಯಾಂಪ್ ಗೆ ಪ್ರಯಾಣ.  ಮಾರ್ಗಮಧ್ಯದಲ್ಲಿ ಅನೇಕ ಚೀನಿ ಚೆಕ್ ಪೋಸ್ಟ್
ಗಳು.  ಸುಮಾರು 2.30 ಕ್ಕೆ ಮಾನಸ ಸರೋವರದ ತೀರಕ್ಕೆ ತಲುಪಿದೆವು.  ಪ್ರಖರವಾದ ಸೂರ್ಯನ ಬಿಸಿಲು.
ಶುಭ್ರವಾದ ಆಕಾಶ.  ಕೈಲಾಸ ಪರ್ವತದ ಪವಿತ್ರ ವಿಹಂಗಮ, ನಿಚ್ಛಳ ದೃಶ್ಯ.  ಮಾನಸ ಸರೋನರದ ಆಹ್ಲಾದತೆ.
ಈ ರೀತಿಯ ವಾತಾವರಣ ದೊರಕುವುದು ದುರ್ಲಭ. ನಮ್ಮ ಅದೃಷ್ಠ. ಸರೋವರದ ತೀರ್ಥಸ್ನಾನಕ್ಕೆ ಮುಂದಾದೆವು.
ಪ್ರತಿಯೂಬ್ಬ ಯಾತ್ರಿಕರು ತೀರ್ಥಸ್ನಾನ ಮಾಡಿದೆವು.  ನಾವು ಈ ಹಿಂದೆ ಕೇಳಿದಂತೆ, ಯಾವರೀತಿಯ ಅನಾನುಕೂಲ
ವಾಗಲಿ, ಹವಾಮಾನ ವೈಪರೀತ್ಯ ವಾಗಲಿ ಆಗಲಿಲ್ಲ.  ಯಾರಿಗೂ ಆರೋಗ್ಯ ಕೆಡಲಿಲ್ಲ.  ಕೈಲಾಸ ಶಿಖರದ, ದರ್ಶನ
ಮಾಡಿ, ಆಪರಮೇಶ್ವನಿಗೆ, ನಿರ್ಮಲ ಮನೋಭಾವದಿಂದ ನಮಿಸಿದೆವು.  ಸರೋವರದಲ್ಲಿ ಸೂರ್ಯನಿಗೆ ಅಘ್ಯ ಅರ್ಪಿ
ಸಿದೆವು.  ಮರಳ ದಡದಲ್ಲಿ ಕುಳಿತು ಎಲ್ಲಾರು ಪ್ರಾರ್ಥಿಸಿದೆವು.  ನಂತರ  ನಮ್ಮ ಬೆಸ್ ಕ್ಯಾಂಪ್ ಗೆ ಬಂದೆವು.
ಅಲ್ಲಿನ ಮಣ್ಣಿನ ಬ್ಯಾರೆಕ್ ಗಳು ಬಹಳ ಬೆಚ್ಚಗಿದ್ದವು.  ರಾತ್ರೆ ಮಾನಸ ಸರೋವರದಲ್ಲೆ ತಂಗುದಾಣ.  ಬಿಸಿಯಾದ
ಊಟ ಇತ್ಯಾದಿ.

   
      ಮಾರನೇ ದಿನ ಅಂದರೆ 4.7.2013, ಬೆಳಗಿನ ಜಾವ, 3 ಕ್ಕೆ ಎಲ್ಲಾರು ಎದ್ದು. ಸರೋವರದ ದಡ
ಕ್ಕೆ ಬಂದು, ಕಾದು ಕೂತು, ನಕ್ಷತ್ರಗಳು, ಅಂದರೆ ದೇವತೆಗಳು, ಬ್ರಾಹ್ಮಿ ಮಹೂರ್ತದಲ್ಲಿ, ಸ್ನಾನಕ್ಕಾಗಿ ಬರುವುದನ್ನು
ಕಂಡು ಪುಲಕಿತರಾದೆವು.  4 ನಕ್ಷತ್ರಗಳು(ಮೀಟಿಯೇರ್ಸ್), ಕೆಳಗೆ ಇಳಿಯುವುದನ್ನು ನೋಡಿ, ಕ್ಯಾಂಪ್ ಗೆ ಹಿಂದಿ
ರುಗಿ ವಿಶ್ರಾಂತಿ ಪಡೆದೆವು.

          ಬೆಳಿಗ್ಗೆ ಎದ್ದು ಇಡ್ಲಿ ಸಾಂಬಾರ್ ತಿಂದು, ವಿಶ್ರಾಂತಿ ಪಡೆದು, ಸುಮಾರು 9ರ ವೇಳೆಗೆ, ಮಾನಸ
ಸರೋವರದ ತಟದಲ್ಲಿ, ಗಣಪತಿ ಪೂಜೆ, ರುದ್ರಾಭಿಷೇಕ, ರುದ್ರ ಹೋಮ, ನವಗ್ರಹ ಹೋಮ, ಮೃತ್ಯುಂಜಯ
ಹೋಮ, ಇತ್ಯಾದಿ ಪೂಜ ಕೈಕಂರ್ಯ ಮುಗಿಸಿ, ಪೂರ್ಣಹುತಿ ಕೊಟ್ಟು, ಕುಲದೇವತೆಗಳ, ಷೋಡಷೋಪಚಾರ
ಪೂಜೆ ಮಾಡಿ, ಮಂತ್ರ ಪುಷ್ಪಗಳಿಂದ ನಮಿಸಿ, ತೀರ್ಥಪ್ರಸಾದ ಗಳನ್ನು ಸ್ವೀಕರಿಸಿದೆವು.  ನಂತರ ಮಾನಸ
ಸರೋವರದ ಸುಮಾರು 85 ಕಿ,ಮಿ., ನ ಪರಿಕ್ರಮ ಕೈಗೊಂಡೆವು.  ನಮ್ಮ ಪ್ರಯಾಣದಲ್ಲಿ, ಮಾರ್ಗ ಮಧ್ಯೆದಲ್ಲಿ
ರಾಕ್ಷಸ ಸರೋವರವನ್ನು ನೋಡಿಕೊಂಡು, ಮಾನಸ ಸರೋವರದ ಆ ಬದಿಗಿನ, ಗುಂಫಾ ತಾಣವನ್ನು ಸೇರಿದೆವು.
ಮಾನಸ ಸರೋವರದಲ್ಲಿ ಕಾಣಸಿಗುತ್ತಿದ್ದ, ಬೆಳ್ಳಕ್ಕಿಗಳು, ಒಂದೂ ಸಹ ರಾಕ್ಷಸ ಸರೋವರದಲ್ಲಿ ಸುಳಿಯುತ್ತಿರಲಿಲ್ಲ.
ರಾತ್ರೆ "ಚೂ ಗುಂಫಾ" ಗೆಸ್ಟ್ ಹೌಸ್ ನಲ್ಲಿ ತಂಗಿದ್ದು, ಬಿಸಿ ಊಟ ಮಾಡಿ, ವಿಶ್ರಾಂತಿ ಪಡೆದೆವು.  ಮಾರನೇ ದಿನ
ಅಂದರೆ 5-7-2013, ಕೈಲಾಸ ಪರ್ವತದ ಬೇಸ್ ಕ್ಯಾಂಪ್ ಆದ "ದಾರ್ ಚನ್" ಕಡೆಗೆ ಪ್ರಯಾಣ.  ಮಾರ್ಗ
ದಲ್ಲಿ ತಿಂಡಿ ಊಟ.   5 ರಂದು ದಾರ್ ಚನ್ ನಲ್ಲಿ ಹಲ್ಟ್.


         ಮಾರನೆ ದಿನ ಅಂದರೆ 6-7-2013 ರಂದು, ಯಾತ್ರೆಯ ಚರಮ ಉದ್ದೇಶವಾದ, ಕೈಲಾಸ ಪರಿಕ್ರಮದ ದಿನ.  ಅಂದು ಬೆಳಿಗ್ಗೆ, ಉಪಹಾರ ಮುಗಿಸಿ, ಬುತ್ತಿ ಊಟ ತೆಗೆದುಕೊಂಡು, ಬಸ್ಸಿನಲ್ಲಿ, "ಯಮದ್ವಾರ"
ದ ಮೂಲಕ, (16,400 ಫೀಟ್), "ಶೇರ್ ಶಾಂಗ್" ಸ್ಥಳ ತಲುಪಿದೆವು.  ಅಲ್ಲಿ ನಮಗಾಗಿ, ಕುದುರೆಗಳು, ಶೇರ್ಫಾ ಗಳು ಕಾದಿದ್ದರು.  ಅಲ್ಲಿಂದ, ಪಾದ ಯಾತ್ರೆ, ಕುದರೆಯಾತ್ರೆ. ಸುಮಾರು 12 ಕಿಮಿ. ಪ್ರಾರಂಭ.  ಬಹಳ ದುರ್ಗಮ
ವಾದ, ಕಲ್ಲು ಮಣ್ಣುಗಳಿಂದ ಕೂಡಿದ, ನದಿ ಪಾತ್ರದಲ್ಲೆ, ನಡೆಯ ಬೇಕಾದ, ಬೆಟ್ಟಗಳನ್ನು ಹತ್ತಿ, ಕಣಿವೆಯಲ್ಲಿ
ಇಳಿಯ ಬೇಕಾದ, ಕಷ್ಟಕರವಾದ, ಆದರೂ ಮನಸ್ಸಿಗೆ, ಛಲವನ್ನು ತೃಪ್ತಿಯನ್ನು ಕೊಡುವ ಪರಿಶ್ರಮದ ಪರಿಕ್ರಮ
ಪ್ರಾರಂಭ ವಾಯಿತು.  ಮಾರ್ಗ ಮಧ್ಯದಲ್ಲಿ ಉಪಹಾರ ಸೇವನೆ. ದೇವರ ದಯಯಿಂದ ಮಳೆ ಇರಲಿಲ್ಲ. ಆದರೂ
ಹೆಚ್ಚಿನ ಎತ್ತರಕ್ಕೆ ಹೋದಂತೆಲ್ಲಾ, ಉಸಿರಾಟ ಕಷ್ಟವಾಗಿ, ಮೇಲುಸಿರು ಬಂದು, ದೇಹದ ದುರ್ಬಲತೆ ಹೆಚ್ಚಾಯಿತು.
ಆದರೂ ಉತ್ಸಾಹಕ್ಕೆ (ಉಸಿರು ಕಷ್ಟವಾದರೂ), ಕಡಿಮೆ ಇಲ್ಲ.  ಮಾರ್ಗದಲ್ಲಿ ಕೈಲಾಸ ಪರ್ವತದ ಪಶ್ಛಿಮ ಭಾಗವನ್ನು ನೋಡಿದೆವು.  ಈಗಾಗಲೇ ಕೈಲಾಸದ ದಕ್ಷಿಣ ಮುಖವನ್ನು ದರ್ಶನ ಮಾಡಿದ್ದೆವು.  ಹೀಗೆ ಸಾಗುತ್ತಾ ಮದ್ಯಾಹ್ನದ ಹೂತ್ತಿಗೆ "ದಿರಾಪುಕ್" ತಲುಪಿದೆವು.  ಇಲ್ಲಿಯೇ ಕೈಲಾಸ ಪರ್ವತದ ಉತ್ತರ ಮುಖದ ಪೂರ್ಣ
ದರ್ಶನ.  ಅತ್ಯಂತ ನಿಚ್ಛಳವಾಗಿ ಆಯಿತು. ಕೈಲಾಸ ಪರ್ವತದ ಎತ್ತರ 22,028 ಅಡಿಗಳು. ನೋಡಲೇ ಬೇಕೆಂಬ
ನಮ್ಮ ಪ್ರಯತ್ನ, ಭಗವಂತನ ಆಹ್ವಾನ, ನಮ್ಮ ಕೋರಿಕೆಯಂತೆ ಕೈಲಾಸದ ಸಂಪೂರ್ಣ ದರ್ಶನವಾಗಿ ಮನಸ್ಸಿಗೆ
ಆನಂದವಾಯಿತು.  ಮನವೇ ಸಾಕಾರವಾಗಿ ಒಬ್ಬೊಬ್ಬರಿಗೆ, ಒಂದೊಂದು ತರಹ ಹೇಳಲಾರದ ದೈವೀ ಅನುಭವ
ವಾಯಿತು.  ಅದನ್ನು ಬಿಟ್ಟು ಪ್ರಪಂಚದಲ್ಲಿ ಇನ್ನೇನು ಇಲ್ಲ. ಕೈಲಾಸ ಶಿಖರದ ಶೇಷನಾಗ, ಶಿಖರಾಗ್ರದ ಹಿಮ
ಲಿಂಗದ ಮೇಲೆ ಹಾಲು ಮೊಸರಿನ ಅಭೀಷೆಕವಾದಾಗ ಕಾಣುವಂತೆ, ಅವರವರ ಭಾವನೆಯಂತೆ ಕಂಡು, ಕಾಣಿಸು
ವಂತೆ ಗೋಚರವಾಯಿತು.  ಕೊನೆಯ ಗುರಿ ತಲುಪಿದೆವು.  ಮನಸ್ಸು ಸಂತೋಷವಾಯಿತು.  ಜೀವನ ಸಾರ್ಥಕ
ವೆನಿಸಿತು.  ಅಗಾದ ಪ್ರಕೃತಿಯ ಸೃಷ್ಠಿಯಲ್ಲಿ ನಾವು ಕೇವಲ ಅಣು ಮಾತ್ರ.  ಫೋಟೊ ಗಳನ್ನು ಕ್ಲಿಕ್ಕಿಸಿದೆವು.
ಉಸಿರಾಡಿದೆವು ನಿರಾಳನಾಗಿ, ನಿಧಾನವಾಗಿ.  ಕೇವಲ ಅರ್ಧಗಂಟೆಯಲ್ಲೆ, ಮೋಡಗಳು ಅವರಿಸಿಕೊಂಡವು.  ಆ
ದಿನ ರಾತ್ರಿ "ದಿರಾಪುಕ್" ನಲ್ಲೆ ತಂಗಿ, ರಾತ್ರೆಯಲ್ಲಾ ಶಿವನ ಧ್ಯಾನದಲ್ಲಿ ಮಲಗಿ, ಯಾತ್ರೆಯ ಅಂತಿಮ ಗುರಿ
ತಲುಪಿದ ತೃಪ್ತಿ ಇತ್ತು.


          ಮಾರನೆ ದಿನ ಅಂದರೆ 7-7-2013 ರಂದು ಅಲ್ಲಿಂದ ಹೂರಟು, ಮತ್ತೆ "ದಾರ್ ಚನ್" ಬೇಸ್
ಕ್ಯಾಂಪ್ ತಲುಪಿದೆವು.  ಅಲ್ಲಿ ನಮಗಾಗಿ ಬಿಸಿ ಊಟ ಕಾದಿತ್ತು. ಅಂದು ಪೂರ್ಣ ವಿಶ್ರಾಂತಿ ಪಡೆದೆವು.  ಹೂರ
ಡುವಾಗ ಇದ್ದ ಅತಂಕ ಮನಸ್ಸಿಗೆ ಈಗ ಇರಲಿಲ್ಲ.  ಎಲ್ಲ ಸುಗಮವಾಗಿ ನೆರವೇರಿತು.

          8-7-2013 ರಂದು ಬೆಳಿಗ್ಗೆ ಉಪಹಾರ ಮುಗಿಸಿ. ಸಾಗಾ ಕಡೆಗೆ ಪ್ರಯಾಣ.  ಹೊಗುವಾಗ ಇದ್ದ ಆಯಾಸ, ಬರುವಾಗ ಇರಲಿಲ್ಲ.  ರಾತ್ರೆ ಆತಿಥ್ಯ ಹೊಂದಿ ವಿಶ್ರಾಂತಿ ಪಡೆದೆವು.

          9-7-2013 ರಂದು ಬೆಳಿಗ್ಗೆ ಉಪಹಾರದ ನಂತರ, ನೈಲಾಮ್ ಕಡೆಗೆ ಪ್ರಯಾಣ.  ಅಂದು
ಅಲ್ಲಿ ಶೆರ್ಫಾ ಗಳಿಗೆ. ಕೃತಜ್ಣತಾ ಸೂಚಕ ಸರಳ ಸಮಾರಂಭ.  ಮಹಿಳೆಯರ ಪರವಾಗಿ ನಾನು ಮಾತನಾಡಿ
ನನಗೆ ಸ್ವೇಷಲ್ ಆಗಿ, (ಬಾಯಿ ಹುಣ್ಣುಆಗಿದ್ದರಿಂದ), ಉಪ್ಪು ಸಹ ಹಾಕದೆ ಕಿಚಡಿ ಮಾಡಿ ಕೊಟ್ಟ ಅಡಿಗೆ
ಸಿಬ್ಬಂದಿಗೆ, ಮಕ್ಕಳಂತೆ ನಮ್ಮನ್ನು ನೋಡಿಕೊಂಡವರಿಗೆ ವಂದನೆ ಹೇಳಿದೆವು.

          ಮಾರನೇ ದಿನ 10-7-2013 ರಂದು ಕೋಡಾರಿಗೆ ಪ್ರಯಾಣ.  ಚೀನಾ ನೇಪಾಳ್ ಗಡಿಯಲ್ಲಿ
ಔಪಚಾರಿಕತೆ ಮುಗಿಸಿ, ಸ್ನೇಹ ಸೇತುವೆ ದಾಟಿ, ಕೋಡಾರಿಯ ಹಿಮಾಲಯನ್ ರೆರ್ಸಾಟ್ ನಲ್ಲಿ, ಮತ್ತೆ ಮೊಸರಿ
ನ ಜೊತೆ ರುಚಿಕರವಾದ ಭರ್ಜರಿ ಊಟ ಮುಗಿಸಿ ಖಟ್ ಮಂಡ್ ಕಡೆಗೆ ಪ್ರಯಾಣ ಬೆಳೆಸಿದೆವು.

          ಖಟ್ ಮಂಡ್ ತಲುಪಿ ಮದ್ಯಾಹ್ನ ವಿಶ್ರಾಂತಿಯ ನಂತರ ಪೇಟೆಯಲ್ಲಿ ಸುತ್ತಾಡಿ, ಹೋಟೆಲ್ ಗ್ರಾಂಡ್ ಗೆ ಬಂದು, ನಮ್ಮ ಸಾಮಾನು ಸರಂಜಾಮುಗಳನ್ನು ಪ್ಯಾಕ್ ಮಾಡಿ, ವಾಪಸ್ಸು ಯಾತ್ರೆಗೆ ತಯಾರಾದೆವು.
ಅಂದಿನ ರಾತ್ರೆ ಡೌನ್ ಜಾಕೇಟ್ ವಾಪಸ್ಸು ಮಾಡಿ, ಫಿಶ್ ಟೈಲ್ ಕಂಪನಿಯಿಂದ, ಪ್ರಪಂಚದಲ್ಲೆ, ಅತಿ ಎತ್ತರ
ಸ್ಥಳದಲ್ಲಿರುವ, ಪುಣ್ಯ ಕ್ಷೇತ್ರ ಮಾನಸ ಸರೋವರ, ಕೈಲಾಸ ಪರಿಕ್ರಮ ಯಾತ್ರೆಯ ಸಫಲತೆಯ ಸರ್ಟೀಫಿಕೇಟ್
ದೊರೆಯಿತು.  ನಮ್ಮಂತೆಯೆ ಯಾತ್ರೆಗೆ ಹೊರಟ ಯಾತ್ರಿಗಳ ಜೊತೆ ಮಾತುಕತೆ ಯಾಡಿದೆವು.  ಉತ್ತಮ ಊಟದ
ನಂತರ ವಿಶ್ರಾಂತಿ ಪಡೆದೆವು.

          ಮಾರನೇ ದಿನ ಅಂದರೆ 11-7-2013, 11 ಗಂಟೆಗೆ ಎಲ್ಲಾ ಯಾತ್ರಿಕರು, ಒಬ್ಬರನೊಬ್ಬರು
ಅಭಿನಂದಿಸುತ್ತಾ, ವಿಳಾಸ, ಇ.ಮೇಲ್, ಕಾನ್‍ಟ್ಯಾಕ್ಟ್ ಹಂಚಿಕೊಳ್ಳುತ್ತಾ, ಸಂತೋಷನಾ ಕಾಲ ಕಳೆದೆವು. 12 ಗಂಟೆ
ಹೊತ್ತಿಗೆ, ಊಟದ ನಂತರ ನಮ್ಮ ನಮ್ಮ ಲಗೇಜ್ ಗಳೊಂದಿಗೆ, "ತ್ರಿಭುವನ ಅಂತರಾಷ್ರೀಯ ವಿಮಾನ ನಿಲ್ದಾಣ"
ತಲುಪಿದೆವು.  ಅಲ್ಲಿ ಔಪಚಾರಿಕತೆ ಮುಗಿಸಿ ದೆಲ್ಲಿಯ ಕಡೆ ಪ್ರಯಾಣ.  ಸಂಜೆ 6 ರ ವೇಳೆಗೆ ದೆಹಲಿ ತಲುಪಿದೆವು.
ದೆಲ್ಲಿಯ ನಿಲ್ದಾಣದ ಔಪಚಾರಿಕತೆ ಮುಗಿದ ನಂತರ, ಸುಮಾರು 8.10ಕ್ಕೆ ಬೆಂಗಳೂರಿನ ವಿಮಾನ ಹತ್ತಿದೆವು.
ಸುಮಾರು 10.45ಕ್ಕೆ ಬೆಂಗಳೂರು ತಲುಪಿದೆವು.  ಇತರ ಸಹ ಪ್ರಯಾಣಿಕರನ್ನು ಬಿಳ್ಕೊಟ್ಟು 11.30ಕ್ಕೆ ಮನೆ
ತಲುಪಿದೆವು.

          ಈ ಯಾತ್ರೆಯಲ್ಲಿ ಆದಿಯಿಂದ ಅಂತ್ಯದವರೆಗೂ, ನಮ್ಮ ಜೊತೆಯಲ್ಲೆ ಇದ್ದು, ನಮ್ಮ ಟೂರ್
ಮ್ಯಾನೇಜರ್ ಶ್ರೀ ವೆಂಕಟೇಶ್ ರವರ ಮುಂದಾಳುತನದಲ್ಲಿ ಯಾತ್ರೆ ಚೆನ್ನಾಗಿ ನಡೆಯಿತು.  ಯಾತ್ರೆ ಸುಗಮನಾಗಿ
ಸುಸುತ್ರಾನಾಗಿ, ಸುಖಕರವಾಗಿ ನಡೆಸಲೂ, ಎಲ್ಲಾ ರೀತಿಯ ಸಹಕಾರ, ಸಹಯೋಗ, ಉತ್ತೇಜನ ಕೊಟ್ಟ ಅವರಿಗೂ,
ಹಂಸಾ ಟ್ರಾವೆಲ್ಸ್ ಸಿಬ್ಬಂದಿ ವರ್ಗಕ್ಕೂ ವ್ಯನಸ್ಥಾಪಕರಿಗೂ ಅನಂತ ಧನ್ಯವಾದಗಳು.

          ********* ಓಂ ನಮಃ ಶಿವಾಯ  ******** ಜಯಲಕ್ಷ್ಮಿ, ಯಲಹಂಕ, 19-7-2013.

                   ***********************************************

No comments:

Post a Comment