ಶಕ್ತಿ ಪೀಠ ಹಾಗು ಸಿಮ್ಲಾ ಯಾತ್ರೆ
ಮೊದಲೆ ಕಾದಿರಿದಿದ ಯಾತ್ರೆಗೆ 17-3-2014 ರಂದು ಸಂಜೆ 4.45 ಕ್ಕೆ ಮನೆಯಿಂದಹೊರಟು, ದಾರಿಯಲ್ಲಿ ನಮ್ಮ ಬೀಗಿತ್ತಿ ಪದ್ಮರವರನ್ನು ಪಿಕ್ ಅಪ್ ಮಾಡಿಕೊಂಡು, ಬೆಂಗಳೂರು ಸಿಟಿ ರೈಲ್ ವೇ ಸ್ಟೇಶನ್ ಗೆ 6 ಗಂಟೆಗೆ ರಿಪೋರ್ಟ್ ಮಾಡಿಕೊಂಡ್ವಿ. ಅಲ್ಲಿ ಸಹ ಯಾತ್ರಿಕರು, ಟೂರ್ ಸಿಬ್ಬಂದಿಯನ್ನು
ಸೇರಿ ಕೊಂಡ್ವಿ. 7.30ಕ್ಕೆ ಕರ್ನಾಟಕ ಎಕ್ಸಪ್ರೆಸ್ ನಿಂದ ಡಿಲ್ಲಿಗೆ ಪ್ರಯಾಣ ಬೆಳೆಸಿದೆವು. ದಾರಿಯಲ್ಲಿ ಊಟಕೊಸ್ಕರ
ಚಪಾತಿ, ಪುಲ್ಕಾ, ರಾಗಿ ನ್ಯೂಡಲ್ , ನೀರುಳ್ಳಿ ಚೆಟ್ನಿ, ಹಾಗು ಹಾಗಲಕಾಯಿ ಗೊಜ್ಜು ಮಾಡಿಕೊಂಡದ್ದರಿಂದ, ರೈಲಿನ
ಅಹಾರ ತೆಗೆದು ಕೊಳ್ಳಲಿಲ್ಲ. ಜೊತೆಯಲ್ಲಿ ಹಣ್ಣು ಬಿಸ್ಕತ್ ಗಳಿದ್ದವು. ಪ್ರಯಾಣಿಸುವಾಗ ಮನ್ಮಾಡ್ ಹತ್ತಿರ
ಹೆಬ್ಬೆಟ್ಟು ಬೆಟ್ಟವನ್ನು ನೋಡಿದೆವು. 2 ರಾತ್ರೆ ಕಳೆದು 3ನೇ ದಿನ ಬೆಳಿಗ್ಗೆ 19-3-2014ರಂದು ನ್ಯೂದೆಲ್ಲಿ
ತಲುಪಿದೆವು, 11 ಗಂಟೆಯ ಸಮಯ. ಟೂರ್ ಸಿಬ್ಬಂದಿ ಶ್ರೀ ಗುರು ಹಾಗು ಶ್ರೀ ವೆಂಕಟೇಶ್ ನಮ್ಮೆಲ್ಲರನ್ನು
ಸ್ವಾಗತಿಸಿ, ಏ,ಸಿ. ಬಸ್ಸಿನಲ್ಲಿ ಹೊರೆಟು "ಹೋಟೆಲ್ ಖಾಷೀಶ್", ಖರೋಲ್ ಬಾಗ್ನಲ್ಲಿ ವಿರಾಮ. ಆ ದಿನ ಸಂಜೆ
ಅಕ್ಷರಧಾಮಕ್ಕೆ ಭೇಟಿ. ನಾವು ಮುಂಚೆ ನೋಡಿದ್ದರಿಂದ ಹೊಗಲಿಲ್ಲ. ದಿನವೆಲ್ಲಾ ರೆಸ್ಟ್.
20-3-2014 ರಂದು ಬೆಳಿಗ್ಗೆ 5 ಗಂಟೆಗೆ ಸಿಮ್ಲಾ ಕಡೆಗೆ ಪ್ರಯಾಣ. ವಯಾ ಚಂಡಿಗಡ್ ದೇವಿ
ಚಂಡಿಮಾತ ದಿಂದ ಈ ಸ್ಥಳಕ್ಕೆ ಚಂಡಿಗರ್ ಹೆಸರು ಬಂದಿದೆ. ಚಂಡಿಗರ್ ವೆಲ್ ಪ್ಲಾನ್ಡ್ ಸಿಟಿ. ಹೊಗುವ ದಾರಿಯಲ್ಲಿ, ಒಂದು ಡಾಬ ದಲ್ಲಿ, ನಿಜವಾದ ಮಕ್ಕಳು ಕುಳಿತು ಆಡುತ್ತಿರುವಂತೆ ಗೊಂಬೆಯನ್ನು ಮಾಡಿ, ಪಂಜಾಬಿ
ಮನುಷ್ಯನ ಅಕೃತಿಯನ್ನು ಮಾಡಿ ನಿಲ್ಲಿಸಿದ್ದರು. ಅಲ್ಲಿ ತಿಂಡಿ ತಿಂದೆವು. ಉಪ್ಪಿಟ್ಟು ಕೇಸರಿಬಾತ್. ನಂತರ
ಚೆಂಡಿಗರ್ ಗೆ ಬಂದೆವು. ಇದು ಯುನಿಯನ್ ಟೆರಿಟರಿ. ಪಂಜಾಬ್ ಮತ್ತು ಹರಿಯಾಣದ ರಾಜಧಾನಿ, ಫ್ರೆಂಚ್
ಅರ್ಕೀಟೆಕ್ಟ್ ಲೀ-ಕಾರ್ ಬುಸೀಯರ್ ನಿಂದ ನಿರ್ಮಾಣವಾದ, ಮಾದರಿಯ ನವೀನ ನಗರ. 50 ಸೆಕ್ಟರ್ ಗಳಿವೆ.
13 ರನ್ನು ಅನ್ ಲಕ್ಕಿ ನಂಬರ್ ಅಂತ ಭಾವಿಸಿ,13 ರನ್ನು ಬಿಟ್ಟು ಎಲ್ಲಾ ಸೆಕ್ಟರ್ ಇದೆ. ರಸ್ತೆಗಳು ಚೆನ್ನಾಗಿದೆ.
ಇಲ್ಲಿರುವ ರಾಕ್ ಗಾರ್ಡನ್ ಗೆ ಬಂದೆವು. ಕಲ್ಲುಗಳು, ಉಪಯೋಗವಿಲ್ಲದ ಮುರಿದ ಕಪ್ ಸಾಸರ್ಗಳು, ಮುರಿದ
ಸ್ಲಾಬ್ , ವೇಸ್ಟ್ ಮೇಟಿರಿಯಲ್ಸ್ ಕಬ್ಬಿಣ, ಲೋಹ, ಮುರಿದ ಮಡಿಕೆಗಳು, ಬಳೆ ಚೂರುಗಳು, ಇತರೆ ಎನೇನೋ ಗಳಿಂದ ಗಾರ್ಡನ್ ಅದ್ಭುತವಾಗಿದೆ. ನವಿಲುಗಳನ್ನು ಇತರೆ ಹಕ್ಕಿಗಳನ್ನು, ಬಳೆ ಚೂರುಗಳಿಂದ ಮಾಡಿದ್ದಾರೆ.ಗುಂಪು
ಗುಂಪಾಗಿ ಇರುವ ಸ್ಕೂಲ್ ಮಕ್ಕಳು, ದೊಡ್ಡವರು, ಚಿಕ್ಕವರು, ಯುವಕರು, ಪ್ರಾಣಿಗಳು, ಕೋತಿ, ಕರಡಿ, ಜಿರಾಫೆ,
ಆನೆ, ನೀರು ಹೊರುತ್ತಿರುನ ಭಾರತೀಯ ಮಹಿಳೆಯರು, ಜಪಾನಿ ಹೆಂಗಸರು, ನಿಜ ರೂಪದ ರೀತಿಯಲ್ಲಿ ಮಾಡಿ
ಇಟ್ಟಿದ್ದಾರೆ. ಅಲ್ಲಲ್ಲಿ ನೀರಿನ ಧಾರೆಗಳು, ಕಲ್ಲಿನ ಸೇತುವೆ, ಮರಗಳು, ಯೋಗ ಮಾಡುವ ಮಕ್ಕಳು, ಮಡಿಕೆಗಳು,
ಖಾಲಿq್ರಮ್ ಗಳ ಗೋಡೆಗಳು, ಇನ್ನು ಅನೇಕ ಕಲ್ಪನೆಗೆ ಮೀರಿದ್ದು ಮಾಡಿ ಇಟ್ಟಿದ್ದರು. ರಾಕ್ ಗಾರ್ಟನ್ನಲ್ಲೆ
ಬಿಸಿ ಬೇಳೆ ಬಾತ್ ಹಾಗು ಮೊಸರನ್ನ ತಿಂದು, ಪ್ರಯಾಣ ಮುಂದುವರೆಸಿ, ಸಿಮ್ಲಾಗೆ 8 ಗಂಟೆಗೆ ತಲುಪದೆವು.
ದೆಲ್ಲಿಯಿಂದ ಚೆಂಡಿಗರ್ ವರೆಗೆ ಪ್ಲೇನ್ ಏರಿಯಾ, ಚಂಡಿಗರ್ ನಿಂದ ಸಿಮ್ಲಾ ಘಾಟ್ ಸೆಕ್ಷನ್. ಎತ್ತರ ಎತ್ತರಕ್ಕೆ
ಹೊಗುತ್ತಿದ್ದೆವು. ದಾರಿ ಉದ್ದಕ್ಕೂ ತಿರುವುಗಳು. ಕೆಳಗೆ ಸರ್ಪ ಕಾರದ ರಸ್ತೆಗಳು. ಗಗನಚುಂಬಿ ದೇವದಾರು
ವೃಕ್ಷಗಳು. ಚೈತ್ರ ಮಾಸ ವಾದ್ದರಿಂದ, ಹೊಸ ಹೊಸ ಚಿಗುರಿನ ಗಿಣಿ ಹಸಿರು, ಕೆಂಪು ಚಿಗುರಿನ ಮರಗಳು.
ಜೊತೆಯಲ್ಲಿ, ಹಳದಿ, ಬಿಳಿ, ಕೆಂಪು ಹೂವು ಗಳನ್ನು ಒಳಗೊಂಡ ಮರಗಳು, ಸೇಬಿನ ತೋಟಗಳು ಮನಸ್ಸಿಗೆ
ಅಹ್ಲಾದ ಉಂಟುಮಾಡಿದವು.
ಸಿಮ್ಲಾದಲ್ಲಿ "ಹೋಟೆಲ್ ಆಭಿಮಾನ್ ರೆಜೆಸ್ಸಿ", ಹೋಟೆಲ್. ಕೆಳಗೆ ನೋಡದಾಗ, ಎಲ್ಲೆಲ್ಲೂ
ಆಕಾಶದಲ್ಲಿ ನಕ್ಷತ್ರಗಳು ಮಿನುಗುವ ತರಹ ನಗರ ಕಾಣುತ್ತಿತ್ತು. ಇದೇ ರೀತಿ ಶಿಲ್ಲಾಂಗ್ ನಲ್ಲೂ ಸಹ ನಾವು
ಎತ್ತರದ ಸ್ಥಳ "ಲೈಟ್ ಕೋರ್ ಪೀಕ್"ನಲ್ಲೂ ಹೀಗೆ ಕಾಣುತ್ತಿತ್ತು. ರಾತ್ರೆ ಅಲ್ಲೆ ವಿರಾಮ ಹಾಗು ತಂಗುದಾಣ.
ಹಿಮಾಚಲ ಪ್ರದೇಶ ಹೆಸರೇ ಸೂಚಿಸುವಂತೆ ಹಿಮದಿಂದ ಅವರಿಸಿದ ಪರ್ವತಗಳ ಪ್ರದೇಶ. ಸುಂದರ
ಪ್ರಕೃತಿ, ಪರ್ವತಗಳೂ, ಗಿಡಮರಗಳು, ಸುಂದರ ಜನರಿಂದ ತುಂಬಿದೆ. ಬಹಳ ಚಳಿ ಪ್ರದೇಶ. ಸಮುದ್ರ ಮಟ್ಟ
ದಿಂದ 6600 ಮಿ. ಎತ್ತರದಲ್ಲಿ ಇದೆ. ಇಲ್ಲಿ ಪರ್ವತ ಶ್ರೇಣಿ "ಶಿವಾಲಿಕ್ ಶ್ರೇಣಿ". ಇಲ್ಲಿ ಚಿನಾಬ್, ರಾವಿ,ಸಟ್ಲೇಜ್, ಯಮುನ ಹರಿದು ಹಚ್ಚ ಹಸಿರಾಗಿದೆ. ಪುರುಷ ಮಹಿಳೆ ಇಬ್ಬರು ತಲೆಗೆ ಮುಂಡಾಸು ಹಾಕಿ ಕೊಳ್ಳು
ತ್ತಾರೆ. ಸ್ಲೋ ಸ್ಕೈಯಿಂಗ್, ಮೌಂಟನೇರಿಂಗ್ ಪ್ರಸಿದ್ದ ಅಟ. ದೇವಿ ಶ್ಯಾಮಲ ಮಂದಿರವಿದೆ. ದೇವಿಯ ಅನುಗ್ರಹ
ದಿಂದ ಯಾವಾಗಲು ಶ್ಯಾಮಲನಾಗಿರುತ್ತೆ.
21-3-2014. ಈ ದಿನ ತಿಂಡಿಯನ್ನು ತಿಂದು, 7.30ಕ್ಕೆ ಸಿಮ್ಲಾದ ಕುಫ್ರಿ ವ್ಯೂ ಪಾಯಿಂಟ್ ಗೆ
ಪ್ರಯಾಣ. 1819 ರಲ್ಲಿ ಈ ಜಾಗವನ್ನು, ಬ್ರಿಟಿಷರು ಕಂಡುಹಿಡಿದರು. ಇದನ್ನು ಸಮ್ಮರ್ ಕ್ಯಾಂಪ್ ಮಾಡಿ
ಕೊಂಡಿದ್ದರು. ಒಂದು ಗಂಟೆ ಅವಧಿ ಪ್ರಯಾಣಿಸಿ, ಅಲ್ಲಿಂದ ಜೀಪ್ ನಲ್ಲಿ 2 ಕಿ.ಮಿ. ಹೋಗಿ. ಇಳಿದು,ಅಲ್ಲಿಂದ
ಕುದುರೆ ಸವಾರಿ ಕುಫ್ರಿಗೆ. ದಾರಿಯುದ್ದಕ್ಕೂ ಹಿಮವನ್ನು ನೋಡಿದೆವು. 2 ಕಡೆ ಕಾರ್ಪೇಟ್ ತರ ಇತ್ತು. ಕುದುರೆ
ಪ್ರಯಾಣ ಕಷ್ಟಕರ. ಕೇವಲ 1 ವರೆ ಕಿ,ಮಿ. ಅದರೂ, ಹಿಮ ಕರಗಿ, ನೀರಾಗಿ. ಕೆಸರಾಗಿ. ರಸ್ತೆ ಇಲ್ಲದ ಕಲ್ಲುಗಳ
ದಾರಿಯಲ್ಲಿ ಪ್ರಯಾಣ. ಒಂದೊಂದು ಹೆಜ್ಜೆಯನ್ನು ಬಹಳ ಕಷ್ಟದಿಂದ ಹಾಕುತ್ತಿತ್ತು. ಜೀವ ಕೈಯಲ್ಲಿ ಇಟ್ಟು
ಕೊಂಡು ಸವಾರಿ. ತಲುಪಿದ ಮೇಲೆ, ಒಂದು ಗುಡ್ಡದಿಂದ ಇನ್ನೊಂದು ಗುಡ್ಡಕ್ಕೆ. ನಡೆದು ಅಥವ ಕೇಬಲ್ ನಿಂದ
ಕಾಲು ಕೆಳಗೆ ಬಿಟ್ಟು, ಆಕಾಶದಲ್ಲಿ ತೇಲಿಕೊಂಡು ಹೋಗಬಹುದು. 2 ನಿಮಿಷದಲ್ಲಿ, ನಾವು ಕೇಬಲ್ ನಿಂದ
ನಮ್ಮನು ಕಟ್ಟಿಹಾಕಿ. ಸಿಕ್ಕಿಸಿ, ಗ್ರಾವಿಟಿಯಿಂದ ಇನ್ನೊಂದು ಬೆಟ್ಟಕ್ಕೆ ನೂಕಿ ಬಿಡುತ್ತಾರೆ. ಹೀಗೆ ಇನ್ನೊಂದು ಬೆಟ್ಟಕ್ಕೆ ತಲುಪಿದೆವು. ಅಲ್ಲಿ ಗುಡ್ಡದ ಮೇಲೆ ದೇವಸ್ಥಾನ, ಸಾಹಸಮಯ ಅಟದ ಸ್ಥಳ. ಟೆಲಿಸ್ಕೋಪ್ ನಿಂದ ವೀಕ್ಷಣೀಯ
ಸ್ಥಳ, ಸ್ನೋ ಸ್ಕಿಯಿಂಗ್ ನೋಡಬಹುದು. ಬಹಳಷ್ಟು ಜನರಿದ್ದರು, ಅಲ್ಲಿಯೇ ಬಿಸಿ ಬಿಸಿ ಚಹ ಕುಡಿದು,
ಅಲಂಕೃತವಾದ, ಸುಂದರವಾದ ಯಾಕ್ ಗಳನ್ನು ನೋಡಿ, ವಾಪಸ್ಸು ಕುದರೆ ಸವಾರಿಗೆ ಕಾದು ಕುಳಿತೆವು. ಹೋದ
ಮೇಲೆ ಅನ್ನಿಸಿತ್ತು, ಯಾವ ರೀತಿಯ ಸೌಕರ್ಯವನ್ನು ಈ 1ವರೆ ಕಿ.ಮಿ.ನಲ್ಲಿ ಮಾಡಿಲ್ಲ. ನಡೆದುಕೊಂಡು ಹೋಗು
ವರು ಸಹ ಕಷ್ಟಕಟ್ಟರು, ಕೆಸರಿನಲ್ಲಿ, ವಿಶೇಷವಾದ ಶ್ಯೂಸ್ ಹಾಕಿಕೊಂಡು. ಉಬ್ಬು ತಗ್ಗುಗಳಿರುವ ರಸ್ತೆಯಲ್ಲಿ,
ಕುದುರೆ ಸಾವರಿಯ ಅಕ್ಕಪಕ್ಕ ಹೋಗಬೇಕಾಗುತ್ತಿತ್ತು. ಹೋದ ರೀತಿನೇ ಮತ್ತೆ, ಕುದುರೆ, ಜೀಪ್, ಹಾಗು ಬಸ್ಸಿ
ನಿಂದ ವಾಪಸ್ಸು ಹೋಟೆಲ್ಲಿಗೆ ಬಂದೆವು.ಊಟ ಮಾಡಿ ಸಿಮ್ಲಾ ಮಾಲ್ ಗೆ ಬೇಟಿ. ಸಮತಟ್ಟವಲ್ಲದ ಪ್ರದೇಶ
ವಾದ್ದರಿಂದ ಮಾಲ್ ಬೆಟ್ಟದ ಮೇಲೆ ಇದೆ. ಲಿಫ್ಟ್ ಮೂಲಕ ಪ್ರವೇಶ. ಲಿಫ್ಟ್ ಫೀ ಇದೆ. 2 ಕೆ ಲಿಫ್ಟ್
ಬದಲಾಯಿಸಬೇಕು. ಅಲ್ಲಿಂದಲೇ ಪೇಟೆ ಬೀದಿಗೆ ಪ್ರವೇಶ. ಸಣ್ಣ ಸಣ್ಣ ಗಲ್ಲಿಗಳು. ಕೊನೆಯಲೊಂದು
ಮಂದಿರ. ಅಲ್ಲಯ ಪಂಜಾಬಿ ಶಾಪ್ ನಲ್ಲಿ 6 ಪಾಟಿಯಾಲ ಡ್ರೆಸ್ ಮೇಟಿರಿಯಲ್ ಖರೀದಿ. 8 ಕ್ಕೆ ಹೋಟೆಲ್
ವಾಪಸ್ಸು.
22-3-2014. ಬೆಳಿಗ್ಗೆ 5.30ಕ್ಕೆ ಹೋಟೆಲಿನಿಂದ ಮನಾಲಿಗೆ ಪ್ರಯಾಣ. 274 ಕಿ.ಮಿ. ದೂರ.
ಪ್ರಕೃತಿಯಲ್ಲಿ ವಸಂತಮಾಸದಲ್ಲಿ ಚಿಗುರಿದ ಗಿಡ ಮರಗಳ ಸೊಬಗನ್ನು ನೋಡಿ ದಾರಿ ಕ್ರಮಿಸಿತ್ತಿತ್ತು. ಮನಾಲಿಗೆ
ಹೋಗುವ ದಾರಿ ಮಧ್ಯೆ, ಭಿಲಾಸ್‍ಪುರ ದಲ್ಲಿರುವ "ನಯನ ದೇವಿ"ದರ್ಶನಕ್ಕೆ ಪ್ರಯಾಣ. ಕೇಬಲ್ ಕಾರ್ ನಿಂದ
ಹೋಗಿ, ಮತ್ತೆ 70-80 ಮೆಟ್ಟಿಲ್ಲನ್ನು ಹತ್ತಿಕೊಂಡು, ದೇವಸ್ಥಾನಕ್ಕೆ ಪ್ರವೇಶ. ಜನಗಳ ಜಾತ್ರೆ. ದೇವಿಯ ಜೈ
ಜೈಕಾರದೊಂದಿಗೆ ತೆರಳಿ ದರ್ಶನ. ಲಿಂಗ ರೂಪದ ಕಲ್ಲಿನಲ್ಲಿ, ದೇವಿಯ 2 ಕಣ್ಣುಗಳನ್ನು, ಪಕ್ಕದಲ್ಲಿ ಗಣಪತಿ
ಯನ್ನು ನೋಡಿದೆವು. ಗಣಪತಿ, ಹನುಮಾನ್ ದರ್ಶನದ ನಂತರ ದೇವಿಯ ದರ್ಶನ. ಈ ಶಕ್ತಿಪೀಠವನ್ನು
ನೋಡಿ, ನಮಿಸಿ, ಊಟ ಮಾಡಿ, ಹಿಮಾಚಲ್ ಪ್ರದೇಶ್ ಟೂರಿಸಂ ಹೋಟೆಲ್ "ರಿವರ್ ವ್ಯೂ"ನಲ್ಲಿ ತಂಗುದಾಣ.
ಹೋಟೆಲ್ ಕಿಟಕಿಯಿಂದಲೇ ನದಿ ಪಾತ್ರ ಚೆನ್ನಾಗಿ ಕಾಣುತ್ತಿತ್ತು. ಸಂಜೆ ಯಾಗಿತ್ತು. ಹಕ್ಕಿಯ ಚಿಲಿಪಿಲಿ ನಾದ,
ನದಿ, ಪರ್ವತ, ಸೂರ್ಯಸ್ತದ ನೋಟ ಸುಂದರವಾಗಿ ಕಾಣುತ್ತಿತ್ತು. ಅನುಕೂಲವಾದ ಹೋಟೆಲ್. ಚಳಿ ಕಡಿಮೆ
ಇತ್ತು. ರಾತ್ರೆ ಅಲ್ಲೆ ಕಳೆದೆವು.
23-3-2014. ಬೆಳಿಗ್ಗೆ 5.30ಕ್ಕೆ ಮನಾಲಿಗೆ ಪ್ರಯಾಣ ಬೆಳೆಸಿದೆವು. ದಾರಿಯಲ್ಲಿ ಕುಲೂವ್ಯಾಲಿ
ಯನ್ನು 1 ಗಂಟೆಗೆ ತಲುಪಿದೆವು. ಕುಲೂ ಶಾಲ್ ಫ್ಯಾಕ್ಟರಿ ಬಳಿಯ ಪಾರ್ಕನಲ್ಲಿ ಚೆನ್ನಾಗಿದ್ದ ಊಟ. ಅನ್ನ,
ಪಲ್ಯ, ಸಾರು, ಸೊಪ್ಪಿನ ಹುಳಿ, ಮೊಸರು ಊಟ. ದಾರಿಯಲ್ಲಿ ತಿಂಡಿ ಅಗಿತ್ತು. ಕುಲುಕಣಿವೆಯಲ್ಲಿ, ದಾರಿಯುದ್ದಕ್ಕೂ, ಸೂಕ್ಷ, ಹಾಗು ರೌದ್ರವಾದ ಗಿಡಗಂಟೆಗಳು, ದಾರಿಯುದ್ದಕ್ಕೂ ನದಿ ಪಾತ್ರ, ಸೇಬಿನ ತೋಟಗಳು,
ಅಂದವಾಗಿದ್ದವು. ದಾರಿ ಸವೆಯಲು, ಅಂತ್ಯಾಕ್ಷರಿ ಹಾಡುಗಳು, ಜೀವನ ಅನುಭವಗಳು, ಕೆಲವು ವಿಷಯಗಳ ಬಗ್ಗೆ
ವಾದ, ವಿವಾದ ತರ್ಕಗಳು ಇದ್ದು, ಪ್ರಯಾಣದ ಪ್ರಯಾಸ ಗೊತ್ತಗಲಿಲ್ಲ. ಪ್ರತಿದಿನ ಮೊದಲು ಗಣಪತಿವಂದನೆ,
ವಿಷ್ಣುಸಹಸ್ರನಾಮ, ಲಲಿತಾ ಸಹಸ್ರನಾಮ, ಸೌಂದರ್ಯಲಹರಿ, ಭಕ್ತಿಗೀತೆಗಳಿಂದ ಪ್ರಾರಂಭವಾಗುತ್ತಿತ್ತು. ಅದಕ್ಕೂ
ಮೊದಲು ನೋಡಿದ ದೇವರಿಗೆ, ನೋಡ ಬೇಕಾದ ದೇವನಿಗೆ, ದೇವಿ, ದೇವತೆಗಳಿಗೆ, ಎಲ್ಲಾರ ಮನೆ ದೇವರಿಗೆ
ಜಯಕಾರ ವಾಗುತ್ತಿತ್ತು. ನಂತರ ಅಟಗಳು, ವಿನೋದಗಳು. ಎಲ್ಲಾರು ಅವರವರ ಬಾಲ್ಯಕ್ಕೆ, ಯವ್ವನಕ್ಕೆ ವಾಪಸ್ಸು
ಬಂದು, ಹುಮಸ್ಸಿನಿಂದ ಭಾಗವಹಿಸಿದರು. ದಾರಿ ಸವೆದು ಸಂಜೆ 5.30ಕ್ಕೆ ಮನಾಲಿಗೆ ಬಂದ್ವಿ. "ಹೋಟೆಲ್
ಕಿಮೀಲ್ ವರ್ರ್ತ ಇಂಟರ್ ನ್ಯಾಶನಲ್". "ವನ್ ವಿಹಾರ್" ಎದುರಿಗೆ. ಬಹಳ ಚಳಿ ಇತ್ತು. ಮಂಗಳೂರು ಬಜ್ಜಿಯ ಬಿಸಿ ಬಿಸಿ ಸೇವನೆ, ಜೊತೆಗೆ ಕಾಫಿ. ರಾತ್ರೆ ಅಲ್ಲೆ ವಾಸ್ತವ್ಯ.
24-3-2014 ರಂದು, ಬೆಳಿಗ್ಗೆ ಸೆಟ್ ದೋಸೆ, ಸಾಂಬರ್ ಚೆಟ್ನಿ ತಿಂದು ರೋಂತಗ್ ಪಾಸ್ ಕಡೆ
ಪ್ರಯಾಣ. ಚಳಿ ಬಹಳ ಇತ್ತು. 4-5 ಅಡಿ ಗಳಷ್ಟು ಹಿಮಪಾತ ವಾಗಿತ್ತು. 10.30 ಕ್ಕೆ ಜೀಪಿನಿಂದ ಒಂದು ಗಂಟೆ
ಪ್ರಯಾಣ. ಎಲ್ಲೆಲ್ಲೂ ಹಿಮವೃತಚಾಲಿತ ಪರ್ವತಗಳು. ಛತ್ರಿಯ ತರಹದ ಗಿಡಗಳ ಮೇಲೆ ಹಿಮಗಳು. ಹಿಮಾ ಮುಟ್ಟಿ, ನೋಡಿ, ಅದರಲ್ಲಿ ಸ್ನೋ ಮ್ಯಾನ್ ಮಾಡಿ, ಶಿವಲಿಂಗ ಮಾಡಿ, ಸಿಂಹಾಸನ ಮಾಡಿ ಅದರಲ್ಲಿ ಕುಳಿತು,
ಫೋಟೋ ಕ್ಲಿಕ್ಕಿಸಿ, ಅಲ್ಲಿಯೇ ಮಾಡಿ ಕೊಟ್ಟ ರುಚಿಯಾದ ಟೀ ಕುಡಿದು, ಕೆಳಗೆ ಬಂದೆವು. ಅಲ್ಲೆ ಸ್ನೋ ನಲ್ಲಿ
ಪ್ಯಾರ ಗೈಂಡಿಂಗ್, ಸ್ಕೀಯಿಂಗ್, ಸಹಾಸಮಯ ಕ್ರೀಡೆ ನಡೆಯುವ ಸ್ಥಳ. ಎಲ್ಲೆಲ್ಲೋ ಹಿಮಾಚಲಗಳು,ಹಿಮಗಳನ್ನು
ನೋಡಿ, ಸಂತೋಷಿಸಿ, ಅಟವಾಡಿ ಕೆಳಗೆ ಬಂದೆವು.
ಹಿಮದಲ್ಲಿ, ಅಟವಾಡಿದ ನಂತರ ನಾವುಗಳು, ಸ್ವಲ್ಪದೂರ ಪ್ರಯಾಣಿಸಿ "ವಾಸಿಷ್ಟ ಹಾಗು ರಾಮ"ನ
ದೇವಸ್ಥಾನಕ್ಕೆ ಬೇಟಿ ಮಾಡಿದೆವು. ಮಳೆ ಸಣ್ಣಗೆ ಬೀಳುತ್ತಿತ್ತು. 2 ದೇವಸ್ಥಾನ ಒಂದಕ್ಕೊಂದು ಎದರು ಬದರಾಗಿದೆ. ಮರದ ಕೆತ್ತನೆ ಕೆಲಸ ಸೊಗಸಾಗಿದೆ. 2 ದೇವಸ್ಥಾನದ ಮಧ್ಯೆ ಬಿಸಿ ನೀರಿನ ಬುಗ್ಗೆ ಇದೆ. ಹಾಟ್
ಸಲ್ಫರ್ ಸ್ಪ್ರಿಂಗ್. ಬಹಳ ಸುಡುತ್ತಿತ್ತು. ಅದನ್ನು ನೋಡಿ ಕೊಂಡು ಇನ್ನೊಂದು ಗುಡಿಗೆ ಬಂದೆವು. ಇದು ಗಗನ
ಚುಂಬಿ ಮರಗಳ ಬೆಟ್ಟದ ಮೇಲೆ ಇರುವ ಹಿಡಂಬೆ ದೇವಸ್ಥಾನ. ಮಳೆಯ ತುಂತುರಿನಲ್ಲೆ ನಡೆದು ಬಂದೆವು.
ಪಾಂಡವರ ಭೀಮನನ್ನು ಮದುವೆಯಾದ ಹಿಡಿಂಬ, ಮಗನನ್ನು ಬೆಳಸಿ, ಅವನು ದೊಡ್ಡವನು ಅದ ನಂತರ,
ಏಕಾಂಗಿಯಾಗಿ, ಧ್ಯಾನ ಮಾಡಿದ ಸ್ಥಳ. 4 ಅಂತಸ್ತಿನ ಪಗೋಡ ಮಾದರಿಯ ಗುಡಿ. ಇಲ್ಲಿ ದೇನರಿಲ್ಲ. ಅದರೆ
ಕಲ್ಲಿನಲ್ಲಿ ಪಾದುಕೆ ಇದೆ. ರಾಜ "ಬಹುದ್ದೂರ್ ಸಿಂಗ್", ಈ ದೇವಸ್ಥಾನವನ್ನು ಕಟ್ಟಿಸಿರುತ್ತಾರೆ. ಹಿಡಿಂಬ ದೇವ
ಸ್ಥಾನದ ಕೆಳಗೆ ಘಟೋತ್ಕಚನ ಹಾಗು ಶ್ಯಾಮಲಿ ಮಹಾದೇವರ ದೇವಸ್ಥಾನ ನೋಡಿದೆವು.
ಮನಾಲಿಯಲ್ಲಿ "ಮನು" ಋಷಿಯ ದೇವಸ್ಥಾನವಿದೆ. ಅವರು ಅಲ್ಲೆ ಧ್ಯಾನ ಮಾಡಿದ್ದು, ಹಾಗು
ಭೂಮಿಯಲ್ಲಿ ಮಾನವ ಜನಾಂಗದ ಸೃಷ್ಟಿಕರ್ತ ಅಂತ ಪ್ರತೀತಿ. ಅದಕ್ಕೆ "ಮನುಕುಲ" ಅನ್ನುವುದು. ಹೋಟೆಲ್
ತಲುಪಿದ ತಕ್ಷಣ ಬಹಳ ಮಳೆ ಯಾಯಿತು. ಮಜ್ಜಿಗೆಹುಳಿ. ಸಾರು, ಸಂಡಿಗೆ, ಬಾಳಕದ ಬಿಸಿ ಬಿಸಿ ಊಟ,ನಂತರ
ವಿರಾಮ. ಸಂಜೆ ಕಾಲು ಇಡಲು ಅಗದಷ್ಟು ಕುಂಭವೃಷ್ಥಿ. ಪ್ರತಿ ರಾತ್ರೆ ಅಡುಗೆಯಲ್ಲಿ ಚಪಾತಿ ಪಲ್ಯ ಖಡ್ಡಾಯ
ವಾಗಿ ಇರುತ್ತಿತ್ತು, ಬೇರೆ ಖಾದ್ಯದ ಜೊತೆಗೆ. ರಾತ್ರೆ ಅಲ್ಲೆ ವಿರಾಮ.
25-2014 ಬೆಳಿಗ್ಗೆ 6 ಗಂಟೆಗೆ, ಮೊನಲಿಯಿಂದ, ವಯಾ ಕುಲೂ. ಚಾಮುಂಡಕ್ಕೆ ಪ್ರಯಾಣ.
ದಾರಿಯುದ್ದಕ್ಕೂ ಬಿಯಾಸ್ ನದಿ ಹರಿಯುತ್ತಿತ್ತು. ದಾರಿಯಲ್ಲಿ ಬೆಟ್ಟದ ಅಂಚಿಗೆ ಹತ್ತಿ ಕೊಂಡಿದ್ದ, 5 ಅಂತಸ್ತಿನ
ಮೇಲೆ ಇದ್ದ, ವೈಷ್ಣವಿದೇವಿ, ಹಾಗು 6ನೇ ಅಂತಸ್ತಿನಲ್ಲಿ ಇದ್ದ ಸ್ಪಟಿಕ ಲಿಂಗ ಇದ್ದ ದೇವಸ್ಥಾನವನ್ನು ದರ್ಶನ
ಮಾಡಿದೆವು. ಒದೊಂದು ಅಂತಸ್ತಿನಲ್ಲಿ ಒಂದೊಂದು ದೇವರುಗಳು. ಗುರು ರಾಮಕೃಷ್ಣ ಪರಮಹಂಸ, ಮಹಾ
ದೇವ, ಗಣಪತಿ, ರಾಮ, ಕೃಷ್ಣ, ದುರ್ಗ, ಕಾಳೀ, ನವದುರ್ಗೆಯರು, ಸೋಮೆಶ್ವರ, ದ್ವಾದಶ ಜ್ಯೋತಿರ್ ಲಿಂಗಗಳ
ಪ್ರತಿಗಳು, ಇನ್ನು ಅನೇಕ ದೇವತೆಗಳು ಇದ್ದವು. ಎತ್ತರವಾಗಿ ಕುಳಿತ ಶನಿದೇವರಿಗೆ ತೈಲಾಭಿಶೇಕ ಮಾಡಿದೆವು.
ಗೋಡೆಗಳು, ಮೇಲ್ಚಾವಡಿ ಶುಭ್ರವಾಗಿ, ನವಿರಾಗಿ, ನಜೂಕಾಗಿ, ಫೈಬರ್ ಕೆತ್ತನೆ (ಮರದ ತರಹ ಕಾಣುತ್ತಿತ್ತು)
ಯಿಂದ ತುಂಬಿತ್ತು. ದೇವಸ್ಥಾನ ನೋಡಿಕೊಂಡು ಇಳಿದು, ರಸ್ತೆಯ ಇನ್ನೊಂದು ಪಕ್ಕದಲ್ಲಿ ಹರಿಯುತ್ತಿರುವ,
ಬಿಯಾಸ್ ನದಿಯ ತಟದಲ್ಲಿ, ಮರಗಳ ನಡುವೆ ಒಂದು ಘಟ್ಟದಲ್ಲಿ, ಸಿಹಿ ಅವಲಕ್ಕಿ, ಗೊಜ್ಜು ಅವಲಕ್ಕಿ, ಹಾಗು
ಕಾಫಿ ಸೇವನೆಮಾಡಿ, ಪ್ರಯಾಣ ಮುಂದುವರೆಸಿದೆವು. ಉದ್ದಕ್ಕೂ ಪ್ರಯಾಣ. ದಾರಿಯಲ್ಲಿ ಊಟ ಮುಗಿಸಿ ಸಂಜೆ
ವೇಳೆಗೆ "ಚಾಮುಂಡ" ತಲುಪಿದೆವು. ಸ್ಥಳ ಚಾಮುಂಡ, ಖಾಂಗ್ರ ಡಿಸ್ಟ್ರಿಕ್, ಹೋಟೆಲ್ ವಾಟಿಕ. ಅಲ್ಲಿ ಹತ್ತಿರ ಇರುವ ದೇವಸ್ಥಾನಕ್ಕೆ ನಡೆದುಕೊಂಡೆ ಹೊದೆವು. ಅರತಿ ನೋಡಲು, ಮೊದಲೆ ಹೋಗಿ, ಜಾಗ ಕಾದಿರಿಸಿ, ಕೂತು
ಒಂದು ಗಂಟೆಕಾಲ ಭಜನೆ, ಹಾಡುಗಳು, ಸ್ತೋತ್ರ, ಮಂತ್ರಪುಷ್ಪ ಅರತಿ ಹಾಡು ಚೆನ್ನಾಗಿತ್ತು. 4-5 ಅಡಿ ಎತ್ತರದ ಕೇಸರಿ ಬಣ್ಣ ಬಳೆದ ಚಾಮುಂಡ. ಕಪ್ಪು ಕಣ್ಣುಗಳು ಎದ್ದು ಕಾಣುವ ಹಾಗೆ, ಕೆಳಮುಖ ನೋಡುತ್ತಿರು
ವಂತೆ. ಕಣ್ಣುಗಳು, ಚೆಲಿಸುತ್ತಿರುವುದೋ ಏನೋ ಎಂಬಂತೆ ಗೋಚರವಾಗುತ್ತಿತ್ತು. ಅಲ್ಲಿಯೇ ಅಂಜನೇಯ, ಶಿವನ
ಗುಡಿಯಲ್ಲಿ ಶಿವನ ದರ್ಶನ ವಾಯಿತು. "ಚಾಮುಂಡ ಮಹಾಮಾಯಾ" ಚೆನ್ನಾಗಿತ್ತು.
26-3-2014, ಬೆಳಿಗ್ಗೆ ಇಡ್ಲಿ, ವಡ, ಸಾಂಬರ್ ತಿಂದು, ಚಾಮುಂಡದಿಂದ "ಚಿಂತಪೋರ್ಣಿಮ"
ದರ್ಶನಕ್ಕೆ ಬಂದೆವು. ದಾರಿಯಲ್ಲಿ ಇನ್ನೋಂದು ಶಕ್ತಿ ಪೀಠ "ಬಾಗಲ ದೇವಿ", ದರ್ಶನ ವಾಯಿತು. ಹಿಮದಿಂದ
ಮುಚ್ಚಿದ ಪರ್ವತಗಳಿಂದ ಕೂಡಿದ ಸುತ್ತುವರೆದ ಬೆಟ್ಟಗಳ ಮಧ್ಯೆ, ದೇವಿಯ ದೇವಸ್ಥಾನ ಸ್ವಚ್ಚವಾಗಿ, ವಿಶಾಲವಾಗಿ
ಇತ್ತು. ಯಜÐ ಯಗಾದಿ ನಡೆಯುತ್ತಿತ್ತು. ಸುತ್ತಾಲು ಹಸಿರಾದ ಪಾರ್ಕ ಇತ್ತು. ಮೈಸೂರ್ ಪಾಕ್ ತರಹ, ಬೆಸನ್ ನಿಂದ ಮಾಡಿದ ಸಿಹಿ ಎಲ್ಲಾರಿಗೂ ಕೊಟ್ಟರು.
ಅಲ್ಲಿಂದ ನಾವು ಸಣ್ಣ ಗಾಡಿಯಲ್ಲಿ "ಚಿಂತಪೂರ್ಣಿ"ದರ್ಶನಕ್ಕೆ ಹೋದ್ವಿ. ನೂರು ಮೆಟ್ಟಿಲು ಇವೆ.
ಸತಿಯ ಪಾದ ಇದೆ. ಶುದ್ಧ ಮನಸ್ಸಿನಿಂದ ನಾವು ಕೇಳಿದ ಬೇಡಿಕೆಯನ್ನು, ದೇವಿ ನೇರೆವೆರಿಸುವರು ಅಂತ ಪ್ರತೀತಿ.
ಶ್ರಾವಣ ಅಷ್ಟಮಿ ದಿನ ಜಾತ್ರೆ. ದುಂಡನೆ ಪಿಂಡಿಯ ರೂಪದಲ್ಲಿ ಸ್ಥಾಪಿಸ ಲಾಗಿದೆ. ಅಲ್ಲಿಂದ ಒಂದು ಧರ್ಮಶಾಲ
ಕ್ಕೆ ಬಂದು, ಊಟ ಮಾಡಿಕೊಂಡು "ಜ್ವಾಲಮುಖಿ" ನೋಡಲು ತೆರಳಿದೆವು.
"ಜ್ವಾಲಮುಖಿ"ಯಲ್ಲಿ 3 ಸ್ಕ್ವಯರ್ ಫೀಟ್ ಗುಂಡಿಯಲ್ಲಿ, ಸತಿ ದೇವಿಯ ಬೆಂಕಿ ಉಗಳುತ್ತಿರುವ
ಬಾಯಿ ಬಿದ್ದ ಸ್ಥಳ. ಗುಂಡಿಯಲ್ಲಿ 3 ಹಾಗು ಸುತ್ತಾಮುತ್ತಲು 6, ಒಟ್ಟು 9 ಜ್ವಾಲಮುಖಿ, ಯಾವ ತರಹದ
ಎಣ್ಣೆಯೂ, ಬತ್ತಿಯೂ ಇಲ್ಲದೆ ಕಲ್ಲಿನಿಂದ, ಶತ ಶತಮಾನದಿಂದಲೂ. ಉರಿಯುತ್ತಿರುವ ಜ್ವಾಲೆ. ಇದರ ವಿಷೇಶಕ್ಕೆ
ಆಶ್ಚರ್ಯ ಪಟ್ಟ ಅಕ್ಬರ್, ಇದರ ಮಹತ್ವಕ್ಕೆ. ತಲೆದೂಗಿ, ಶರಣಾಗಿ, ಚಿನ್ನದ ಗೋಪುರ ಕಟ್ಟಿಸಿಕೊಟ್ಟಿದ್ದಾರೆ.
ಒಂಬತ್ತು ಜ್ಯೋತಿ, 9 ದೇವತೆಯನ್ನು ಪ್ರತಿನಿಧಿಸುತ್ತೆ. ಅವುಗಳು, ಸರಸ್ವತಿ, ಅನ್ನಪೊರ್ಣ, ಚಂಡಿ, ಹಿಂಗ್ ಲಜ್,
ವಿಂದ್ಯಾವಾಹಿನಿ, ಮಾಹಾಲಕ್ಷ್ಮಿ, ಮಹಾಕಾಳಿ, ಅಂಬಿಕಾ, ಅಂಜನ. ಸೃಷ್ಠಿಯ ವಿಚಿತ್ರ, ವಿಸ್ಮಯ ನೋಡಿ, ದಂಗಾಗಿ,
ದೇವಿಗೆ ನಮಿಸಿ, ಕೆಳಗೆ ಇಳಿದು ಮುಂದಿನ ದರ್ಶನಕ್ಕೆ ತಯಾರಾದೆವು. ದೇವಸ್ಥಾನದ ಎದುರಿಗೆ ನವದುರ್ಗೆ,
ಹಾಗು ದೇವಿ ಶಯನ ಕಕ್ಷೆ ಇತ್ತು.
ಅಲ್ಲಿಂದ ಬಸ್ಸಿನಲ್ಲಿ ಸ್ವಲ್ಪದೂರ ಹೋಗಿ, ಇಳಿದು ಅಟೋದಿಂದ ದೇವಸ್ಥಾನದ ಹತ್ತಿರ ಬಂದು, ಮೆಟ್ಟಿಲುಗಳನ್ನು ಹತ್ತಿ, "ವಜ್ರೇಶ್ವರಿ" ದೇವಿಯ ದರ್ಶನಕ್ಕೆ ಬಂದೆವು. ಇದು ಶಕ್ತಿ ಪೀಠ. ಸತಿ ದೇವಿಯ ಎಡ
ಸ್ತನ್ಯ ಬಿದ್ದಿರುವ ಸ್ಥಳ. ದೇವಸ್ಥಾನದ ಸಕಲ ಸಂಪತ್ತು ಅಫ್ಘಾನಿಸ್ತಾನದ ಗಾಸ್ನಿ ಅಪಹರಿಸಿದ್ದಾನೆ. ನಂತರ ರಾಜ
ರಾಣ ಪ್ರತಾಪ್ ಸಿಂಗ್ ಪುನರ್ ಉದ್ದರಿಸಿದ್ದಾರೆ. ರಾಕ್ಷರನ್ನು ಗೆದ್ದು ಗಾಯಗೊಂಡ ದೇವಿಗೆ, ಇಲ್ಲಿ ತುಪ್ಪದಿಂದ
ತೊಳೆದು, ಅಲಂಕರಿಸಿ, ಪೂಜಿಸಲಾಗುತ್ತೆ. ಇಲ್ಲಿಂದ ಮುಂದೆ, ಬಂದ ದಾರಿಯಲ್ಲಿ ವಾಪಸ್ಸು ಬಂದ್ವಿ. ಚಾಮುಂಡ
ದಲ್ಲಿ, ವಾಟಿಕ ಹೋಟೆಲ್ ನಲ್ಲಿ ರಾತ್ರೆ ಸ್ಟೇ.
27-3-2014 ರಂದು ಬೆಳಿಗ್ಗೆ ಫಲಹಾರದ ನಂತರ ಖಟ್ರಾ ಕಡೆಗೆ ಪ್ರಯಾಣ.ವಯಾ "ಬೈಜನಾಥ್".
ಇದು 13ನೇ ಶತಮಾನದ ಶಿವನ ದೇವಸ್ಥಾನ. ಬೈದನಾತ್ ಅಥನ ವೈದ್ಯನಾಥ್ ನೆಂಬ ಹೆಸರಿನಲ್ಲಿ. ಶಿನಲಿಂಗ
ಸ್ವಯಂಭೂ. ದೇವಸ್ಥಾನದ ನಾಲ್ಕು ಕಂಬಗಳ ಮುಖ ಮಂಟಪದ ಮುಂದೆ, ನಿಂತಿರುವ ಹಾಗು ಕುಳಿತಿರುವ ನಂದಿ
ಇದೆ. ಸುತ್ತಾಲು ದೊಡ್ಡ ಗೋಡೆಗಳ ರಕ್ಷಣೆ. ದೇವದಿ ದೇವತೆಗಳ ಕೆತ್ತನೆ ಇದೆ. ಉತ್ತರ ಭಾರತದ ವಿಶಿಷ್ಟ
ಶೈಲಿಯ, ನಾಗ ಶೈಲಿಯ ಕೆತ್ತನೆ. ಇದನ್ನು ಇಲ್ಲಿಯ ಜನ, ಪ್ರರ್ಲಿ ವೈದ್ಯನಾಥನ ಜ್ಯೋತಿರ್ ಲಿಂಗದ ಬದಲು,
ಇದನ್ನೆ ಜ್ಯೋತಿರ್ ಲಿಂಗ ಅನ್ನುತ್ತಾರೆ. ರಾವಣ ಕಥೆಗೆ ಸಂಬಂದಿಸಿದ್ದಂತೆ ಇದ್ದು, ಗೋಕರ್ಣ ಕಥೆಗೆ ಹತ್ತಿರವಾಗಿ
ಇದೆ. ರಾವಣ ತನ್ನ ಹತ್ತು ತಲೆಗಳನ್ನು ಕೊಟ್ಟು, ಶಿವನನ್ನು ಓಲಿಸಿ, ಅತ್ಮಲಿಂಗ ತೆಗೆದುಕೊಂಡು, ಲಂಕೆಗೆ
ಹೊಗುವ ದಾರಿಯಲ್ಲಿ ಕೆಳಗಿಟ್ಟ ಸ್ಥಳ. ಅರ್ಧನಾರಿಶ್ವರ ಸ್ವರೂಪದಲ್ಲಿ ಇದೆ. ಇಲ್ಲಿಯ ವಿಶೇಷತೆವೇನೆಂದರೆ
ಇಲ್ಲಿ ಯಾವ ಅಕ್ಕಸಾಲಿಗ ಇಲ್ಲ. ಅವರ ಅಂಗಡಿಯು ಇಲ್ಲ. ದೇವಸ್ಥಾನದ ಸುತ್ತಲು, ಹಿಮ ಅವೃತ ವಾದ
ಪರ್ವತಗಳಿಂದಅವರಿಸಿದೆ. ಸುತ್ತಲು ನೋಡಿದರೆ ಬಹಳ ಸುಂದರವಾಗಿದೆ. ಬೈದನಾಥ ನೋಡಿಕೊಂಡು, ಕಟ್ರಾ
ಕಡೆಗೆ ಹೋಗುವಾಗ, "ತ್ರಿಕೂಟಾಚಲ"ದ ದರ್ಶನ ವಾಯಿತು. ವೈಷ್ಣವಿ ದೇವಿ ಮಂದಿರಕ್ಕೆ ಹೋಗುವ ರಸ್ತೆಗಳಲ್ಲಿ
ದೀಪಗಳು ಕಂಡವು. ರಾತ್ರೆ ಜಮ್ಮೂನಲ್ಲಿ ಕಟ್ರಾದಲ್ಲಿ "ಹೋಟೆಲ್ ವಿಪುಲ್"ನಲ್ಲಿ ಬಂದು ತಂಗಿದೆವು.
28-3-2014. 4 ಗಂಟೆಗೆ ಎದ್ದು, ಕಾಫಿ ಕುಡಿದು, ತಯಾರಾಗಿ, ವೈಷ್ಣವಿ ಮಾತ ದರ್ಶನದ ಯಾತ್ರೆಗೆ ಹೊರಗೆ ಬಂದ್ವಿ. ಯಾತ್ರ ಸ್ಲಿಪ್ ತೆಗೆದುಕೊಂಡು, "ಬಾನಾ ಗಂಗಾ", ವೈಷ್ಣವಿ ದೇವಸ್ಥಾನದ ಸ್ಟಾರ್ಟಿಂಗ್
ಪಾಯಿಂಟ್ನಿಂದ ಹೊರಟ್ವಿ. ಬ್ಯಾಕ್ ರೆಸ್ಟ್ ಇರುವ ಕುರ್ಚಿಯಲ್ಲಿ, ಕಾಲು ಕೆಳಗೆ ಬಿಟ್ಟು, ಕುಳಿತು ಕೊಳ್ಳುವ ಹಾಗೆ
ಮಾಡಿರುವ, 4 ಜನ ಹೊರುವ ಡೋಲಿ. ಒಳ್ಳೆಯ ಜನ. ಬಹಳ ಎಚ್ಚರಿಕೆ ತೆಗೆದುಕೊಂಡು, ಕರೆದುಕೊಂಡು
ಹೋಗುತ್ತಿದ್ದರು. ಬೆಟ್ಟ ಹತ್ತಲು, "ಹಾಥಿ ಸೂಂಡ್ ಮಾರ್ಗ್", ಇಂದ್ರಪ್ರಸ್ಥ ಮಾರ್ಗ್ , ಮೆಟ್ಟೆಲುಗಳ ದಾರಿ ಇದೆ.
ನಾವು ಇಂದ್ರಪ್ರಸ್ಥ ಮಾರ್ಗ್‍ದಲ್ಲಿ ಹೋಗುತ್ತಿದ್ದೆವು. ಹಿಂದಿನ ದಿನ ರಾತ್ರೆ ಕಟ್ರಾಗೆ ಬರುವಾಗ, ಹಾಥಿ ಸೂಂಡ್
ಮಾರ್ಗ್‍ದಲ್ಲಿ ಹಾಕಿದ ದೀಪದಿಂದ, ಅನೆಯ ಸೊಂಡಿಲು ಬಹಳ ಚೆನ್ನಾಗಿ ಕಾಣುತ್ತಿತ್ತು. ದಾರಿಯಲ್ಲಿ ಒಂದು ಪಕ್ಕ
ಕಲ್ಲಿನ ಕಟ್ಟಡ. ಅದರ ಬಡ್ಡೆಗೆ ತಾಗಿಕೊಂಡು ಮಾಡಿದ ಶೆಲ್ಟರುಗಳು. ದಾರಿ ಉದ್ದಕ್ಕೂ ಸಿಮೆಂಟ್ನ ಪ್ಲಾಸ್ಟರ್,
ಸ್ಲಾಬ್ ಹಾಕಾಲಾಗಿತ್ತು. ಅಲ್ಲಲ್ಲಿ ಹತ್ತಲು ಮೆಟ್ಟಿಲುಗಳು, ತಿರುವುಗಳು, ದಡಿದವರಿಗೆ ಕುಳಿತುಕೊಳ್ಳಲು, ಬೆಂಚು
ಗಳನ್ನು ಹಾಕಲಾಗಿತ್ತು. ಇನ್ನೊಂದು ಪಕ್ಕ ಪಾತಾಳ. ರಸ್ತೆಯ ಎರಡು ಬದಿ ಸುರಕ್ಷಾ ವ್ಯವಸ್ಥೆ ಬಹಳ ಚೆನ್ನಾಗಿದೆ.
ದಾರಿ ಉದ್ದಕ್ಕೂ ಚಹದ ಅಂಗಡಿಗಳು, ಊಟದ ವ್ಯವಸ್ಥೆ, ಟಾಯ್‍ಲೇಟ್‍ಗಳು ಇದ್ದವು. ಪೂರ್ತಿ ಬೆಟ್ಟದವರೆಗೂ
ರಸ್ತೆಗಳೂ, ಮೆಟ್ಟಿಲುಗಳು ಇವೆ. ಡೋಲಿಯಲ್ಲಿ ಕುಳಿತು, ಸುತ್ತಾಲಿನ ಪ್ರಕೃತಿಯನ್ನು ನೋಡಿಕೊಂಡು ಹೋಗು
ತ್ತಿದ್ದೆವು. ಡೂಲಿ ಹೊರುವ ಬಹಳಷ್ಟು ಮಂದಿ ಮುಸ್ಲಿಮರು. ಕುಲಮತದ ಬೇದ ಇಲ್ಲ. ನಮ್ಮ ಜೊತೆ
"ಆಶಾ" ಅನ್ನುವ ಹೆಂಗಸು ರೋಮನ್ ಕ್ಯಾತೊಲಿಕ್ ಬಂದಿದ್ದಳು. ಧರ್ಮ ಬೇರೆಯಾದರೇನು, ಅವಳ ವಿಶ್ವಾಸ
ಮೆಚ್ಚತಕ್ಕದ್ದು. ಹೋಗುವಾಗ 12 ಕಿ,ಮಿ,, ಬರುವಾಗ 12 ಕಿ,ಮಿ, ಮೇಲೆ ಪ್ಲಾಟ್‍ಫಾಮ್‍ನಲ್ಲೂ ಸುಮಾರಷ್ಟೂ
ಮೆಟ್ಟಿಲು ಇವೆ. ಬೆಳಿಗ್ಗೆ ಇದ್ದ ಹವಾಗುಣ, ಮೇಲೆ ತಲುಪಿದಾಗ ಬದಲಾಗಿತ್ತು. ಎರುತ್ತಾ, ಎರುತ್ತಾ, ಗಾಳಿ,
ಮಳೆ, ಛಳಿ. ದೇವಸ್ಥಾನದ ಪ್ಲಾಟ್‍ಫಾರಂ ತಲುಪಿದಾಗ ನಡುಕ.
"ವೈಷ್ಣವಿ ದೇವಿ ಗುಹೆಯಲ್ಲಿ ಇದೆ. ಗುಹೆಯಲ್ಲಿ ಒಳಗೆ ಹೊಗಲು, ಬಹಳ ಚೆನ್ನಾಗಿ ವ್ಯವಸ್ಥೆ
ಇದೆ. ನೀರು ಜಿನಗುತ್ತಿತ್ತು. ಭಕ್ತಾದಿಗಳಿಗೆ ಒಬ್ಬರಾದ ಮೇಲೆ ಒಬ್ಬರಿಗೆ ದರ್ಶನಕ್ಕೆ ಅನುಕೂಲವಿದೆ. ಮೂರು
ಪಿಂಡಿಯ (ಗುಂಡು ಕಲ್ಲು) ರೂಪದಲ್ಲಿ ದೇವಿಯ ಸ್ಥಾನ. ಸ್ವಲ್ಪ ಬೆಳ್ಳಗಿರುವ ಪಿಂಡಿ ಸರಸ್ವತಿ, ಸ್ವಲ್ಪ ಕೆಂಪಗೆ
ಇರುವುದು ಮಾಹಾಲಕ್ಷ್ಮಿ, ಹಾಗು ಕರಿಯ ಶಿಲೆ ಮಾಹಾಕಾಳಿ.ಈ ಶಕ್ತಿಪೀಠ ಎಲ್ಲದುಕ್ಕಿಂತ ಚೆನ್ನಾಗಿದೆ. ಮಾತೆಯ
ದರ್ಶನ ಚೆನ್ನಾಗಿ ಕಣ್ಣುತುಂಬವಾಯಿತು.ದರ್ಶನ ಮಾಡಿಕೊಂಡು ಹೋರಗೆ ಬಂದೆವು. ಕೆಳಗೆ 165 ಮೆಟ್ಟಿಲು ಇಳಿದು ಶಿವ ಗುಹೆಯನ್ನು ನೋಡಿದೆವು. ಗುಹೆಯಲ್ಲಿ ಅಮೃತಶಿಲೆಯ ಶಿವಲಿಂಗ, ಲಿಂಗದ ಮೇಲೆ ಬಂಡೆಯಿಂದ
ಇಳಿದು ಬರುತ್ತಿದ್ದ, ನೀರಿನ ಧಾರೆ ಶಿವನ ಲಿಂಗದ ಮೇಲೆ ಬೀಳುತ್ತಿತ್ತು. ಬಹಳ ಸುದಂರವಾಗಿತ್ತು. ಪ್ರಸಾದ
ತೆಗೆದುಕೊಂಡು ಇಳಿಯಲು ತಯಾರಾದೆವು. ದೇವಸ್ಥಾನ 365 ದಿನಗಳು, 24 ಗಂಟೆಗಳು, ತೆರೆದೇ ಇರುತ್ತೆ.
ಶಕ್ತಿ ಇರುವರು ನಡೆದುಕೊಂಡೆ ಹೋಗುತ್ತಾರೆ. ರಾತ್ರೆಯು ಸಹ ಕೆಲವರು ದರ್ಶನಕ್ಕೆ ಹೊರಟು, ಬೆಳಗಿನ ಜಾವ ಬಂದರು. ಉತ್ತರ ಭಾರತದ ಜನ, ಅಗ ತಾನೆ ಹುಟ್ಟಿದ ಮಗುವಿನಿಂದ ಹಿಡಿದು, ಮುದುಕರವರೆಗೂ, ಜೈಕಾರ
ಮಾಡಿಕೊಂಡು ನಡೆದುಕೊಂಡು ಹೋಗುತ್ತಿದ್ದರು. ದಾರಿ ಉದ್ದಕ್ಕೂ, ನವವಧುವರಗಳು. ಮಕ್ಕಳು, ಯುವಕರು,
ಯುವತಿಯರು, ಅಗದವರನ್ನು ಹೆಗಲ ಮೇಲೆ ಹೋತ್ತಿಕೊಂಡು ಹೋಗುತ್ತಿದ್ದ ಶ್ರವಣ ಕುಮಾರರಂತ ಮಕ್ಕಳುನ್ನು,
ನೋಡಿ ಆಶ್ಛರ್ಯ ಹಾಗು ಸಂತೋಷವಾಯಿತು. ದೇವಿಯ ಸನ್ನಿಧಿಯಲ್ಲಿ, ಕೈಮುಗಿದು ನಿಂತಾಗ ಅಗಿದ ದಣಿವು
ಛಳಿ ಎಲ್ಲಾ ಮಾಯ ವಾಯಿತು. ಮನಸ್ಸು ಪ್ರಪುಲ್ಲನಾಯಿತು. ದಾರಿಯಲ್ಲಿ ತಿನ್ನಲು ಪೂರಿ ಪಲ್ಯ ಕೊಟ್ಟಿದ್ದರು.
ವಾಪಸ್ಸು 4.30ಕ್ಕೆ ಬಂದೆವು. ದೀವಿಯ ಎಡ ಭುಜ ಬಿದ್ದ ಸ್ಥಳ. ರುಚಿಕಟ್ಟಾದ ಊಟ ಮಾಡಿ ವಿರಾಮ ತೆಗೆದು
ಕೊಡೆವು.
29-3-2014 ರಂದು, ಬೆಳಿಗ್ಗೆ ವೈಷ್ಟವಿ ದೇವಿ ಬೇಸ್ ಕ್ಯಾಂಪ್‍ನಿಂದ ಅಮೃತ ಸರಕ್ಕೆ ಪ್ರಯಾಣ.
ಮಳೆ ಜಿನಗುತ್ತಿತ್ತು. ಕಿಟಿಕಿಯಿಂದ ದೇವಿಯ ಬೆಟ್ಟದ ಶ್ರೇಣಿಯ ದೃಶ್ಯ, ಹಾಥಿ ಸೂಂಡ್‍ಮಾರ್ಗ ಎಲ್ಲಾ ನೋಡಿ
ಅನಂದಿಸಿದೆವು. ಪ್ರತಿಯೊಬ್ಬ ಯಾತ್ರಿಕನಿಂದ ಅವರವರ ಅನುಭವದ ಹೇಳಿಕೆಯನ್ನು ಕೇಳಿದೆವು. ಒಬ್ಬರದೂ
ಒಂದೊಂದು ಅನುಭವ. ಇನು ಅನೇಕ ವಿಷಯಳ ಪ್ರಸ್ತಾಪ. ದೇವಿ ಕರೆಸಿದಾಗಲೇ ಮನದಾಸೆ ನೆರವೇರುವುದು.
ನಮಗೂ ನನ್ನ ತಂಗಿ ಇಲ್ಲೆ ಹತ್ತಿರ ಇದ್ದರೂ, ಕಾರಾಣಾತಂರದಿಂದ ದೇವಿಯ ದರ್ಶನದ ಬಗ್ಗೆ ಯೋಚಿಸಿರಲಿಲ್ಲ.
ಮನದಲ್ಲೊಂದು ಅಸೆ ಇತ್ತೋ ಎನೋ! ನಡೆಯುನ ಕಾಲಕ್ಕೆ ನಡೆದು, ಅಸೆ ಪೊರೈಸಿಕೊಂಡೆವು, ದೇವಿಯ
ಅನುಗ್ರಹದಿಂದ.
ದಾರಿಯಲ್ಲಿ ಚೀಚೀದೇವಿ ಎಂಬ ಗ್ರಾಮ ದೇವತೆಯ ಸುಂದರವಾದ ದೇವಸ್ಥಾನ. ಅದರ ಸನ್ನಿಧಿಯಲ್ಲೆ ಬೆಳಗ್ಗಿನ ಉಪಹಾರ. ಬಹಳ ಸುಂದರ ಮೂರ್ತಿ. ಮಹಡಿಯ ಮೇಲೇಯೂ ದೇವತೆಗಳ ವಿಗ್ರಹವಿತ್ತು. ಅಲ್ಲಿಂದ ನಾವು "ಧರ್ಮಶಾಲ", ಟಿಬೆಟಿಯನ್ನರ ಭಾರತದ ರಾಜಧಾನಿ. ದಲಾಲಿ ರಾಮ್‍ರವರ ಗೃಹ, ಬೌದ್ಧಮೂರ್ತಿ
ಗಳು ಅವರ ಸಾಹಿತ್ಯ ಭಂಡಾರ ನೋಡಿದೆವು. ಬಹಳ ಸಂಖ್ಯೆಯಲ್ಲಿ ಇದ್ದಾರೆ. ತಮ್ಮದೇ ದೇಶದಿಂದ ಹೊರ-
ಹಾಕಲ್ಪಟ್ಟವರು, ಚೀನಿಯವರಿಂದ. ಟ್ಯಾಕ್ಸಿಯಲ್ಲಿ ಹೊದೆವು. ಬಹಳ ತಿರುವು ಇರುವ, ಪರ್ವತದ ತುದಿಯಲ್ಲಿ
ಇರುವ ಸ್ಥಳ. ತುಪ್ಪದಲ್ಲಿ ಕಲೆಸಿದ ಅವಲಕ್ಕಿ, ಒಣಹಣ್ಣುಗಳ ಜೊತೆಗೆ, ಕೊಟ್ಟ ಪ್ರಸಾದ ಹಾಗು ಉಪ್ಪಿನ ಚಹ
ಕುಡಿದೆವು. ದಾರಿಯಲ್ಲಿ ಊಟವಾಯಿತು. 3,30ಕ್ಕೆ ಅಮೃತಸರಕ್ಕೆ ಬಂದೆವು.
ಅಮೃತಸರದಲ್ಲಿ "ಹೋಟೆಲ್ ಮಾಜಾ" ತಲುಪಿ, ಫ್ರೇಶ್ ಅಗಿ, "ಆಟಾರಿ ಬರ್ಡಾರ್"ಗೆ ಒಂದು ಗಂಟೆ
ಪ್ರಯಾಣ. 4 ಗಂಟೆಗೆ ಜನರು ಬಂದು ಕಾದು ಕುಳಿತ್ತಿದ್ದರು. ಫ್ಲಾಗ್ ಸೆರೆಮೋನಿ ನೋಡಲು. ಸಾಮಾನ್ಯಜನರಿಗೆ
ಹೆಂಗಸರಿಗೆ, ಮಕ್ಕಳಿಗೆ, ಮಿಲಿಟರಿಯವರಿಂದ, ಭಾರತದ ಧ್ವಜ ಹಿಡಿದುಕೊಂಡು ಅಠಾರಿ ಬರ್ಡಾರ್ ಗೇಟ್ ತನಕ
ಹೋಗಿ ಬರುವ ಅವಕಾಶ. 2 ಕಡೆ ಜನ ಜಂಗುಳಿ ಬಹಳ ಇತ್ತು. ಗಂಟಲು ಹರಿದು ಜೈಕಾರ ಮಾಡಲು
ಮಿಲಿಟರಿ ಕಮ್ಯಾಂಡ್ ರವರಿಂದ ಅದೇಶ. 4.30 ಕ್ಕೆ ಸಮಾರಂಭ ಅರಂಭವಾಯಿತು. ಇಬ್ಬರು ಮಹಿಳಾ ಸಿಬ್ಬಂದಿ ವೇಗವಾಗಿ, ನಂತರ ಸಿಪಾಯಿಗಳು ಮಾರ್ಚಮಾಡಿಕೊಂಡು ಗಡಿಯ ವರೆಗೆ ಹೋಗಿ ಬಂದರು. ಸಿಪಾಯಿಗಳು
ಬಹಳ ಜೋರಾಗಿ ಅರಚಿ, ಕಣ್ಣುಗಳನ್ನು ದೊಡ್ಡದು ಮಾಡಿ, ತಲೆ ಎತ್ತರಕ್ಕೆ ಕಾಲು ಎತ್ತಿ, ಇಳಿಸಿ, ಭಿರಿಸಿನಂದ
ಹೋಗುತ್ತಿದ್ದರು. ಎರಡು ಕಡೆ ಫ್ಲಾಗ್ ಇಳಿಸಿ, ಗೌರವದಿಂದ ವಾಪಸ್ಸು ತಂದು ಇಟ್ಟರು. ಮದ್ಯದಲ್ಲಿ, ಭಾರತ
ದಿಂದ ಪಾಕಿಸ್ತಾನಕ್ಕೆ ಬಸ್ಸು ಹೋಗಿದ್ದು ನೋಡಿದೆವು. ನಮ್ಮ ಕಡೆ ಎತ್ತರದ ಜಾಗದಲ್ಲಿ, ಗಾಂಧಿ ಫೋಟೋ,
4-5 ಕಡೆ ಧ್ವಜ ಹಾರುತ್ತಿತ್ತು. ಎಲ್ಲಾ ಧ್ವಜವನ್ನು ಒಟ್ಟಿಗೆ ಇಳಿಸಿದರು. ಅವರ ಕಡೆ ಜಿನ್ನಾ ಫೋಟೋ, ನಮ್ಮದು ಅಠಾರಿ. ಅವರದು ವಾಘ ಬರ್ಡಾರ್. ಜನ ಜಂಗುಳಿಯಲ್ಲಿ ನುಣಿಚಿಕೊಂಡು, ಪಾರ್ಕಿಂಗ್ ಲಾಟ್‍ಗೆ ಬಂದು
ಹೋಟೆಲ್‍ಗೆ ಸೇರಿದೆವು.
ರಾತ್ರೆಯ ಊಟದ ನಂತರ, ಅಮ್ರತ್‍ಸರ "ಸ್ವರ್ಣ ಮಂದಿರ" ನೋಡಲು ಹೋದೆವು. ರಾತ್ರೆಯ
ದೀಪದ ಸೋಬಗು ವಿಶೇಷ ರೀತಿ ಕಂಗೋಳಿಸುತ್ತಿತ್ತು. ವಿಶಾಲ ವಾದ ಸ್ಥಳ. ಸುತ್ತಾಲು ಗುರುದ್ವಾರದ ಕಟ್ಟಡ
ದಿಂದ ಸುತ್ತುವರೆದು, ನೀರಿನ ಮದ್ಯೆಯಲ್ಲಿ ಸ್ವರ್ಣಮಂದಿರ ವಿದೆ. ಸಿಖ್ ರವರ ಪುಣ್ಯ ಕ್ಷೇತ್ರ. ಗುರುರವರ
"ಗ್ರಂಥ ಸಾಹೇಬ್", ದೇವರೆಂದು ಪೂಜಿಸುವರು. ರಾತ್ರೆ ಅದರ ರಥೋತ್ಸವ ನಡೆಯಿತು. ನೀರಿನಲ್ಲಿ ದೇವಸ್ಥಾನದ ಪ್ರತಿಬಿಂಬ ಚೆನ್ನಾಗಿ ಕಾಣುತ್ತಿತ್ತು. ಅವರು ಕೊಟ್ಟ ಪ್ರಸಾಧ, ಚಾಯ್ ತೆಗೆದುಕೊಂಡು ಹೋಟೆಲ್‍ಗೆ
ವಾಪಸ್ಸು.
30-3-2014. 6 ಗಂಟೆಗೆ ರೆಡಿಯಾಗಿ ತಿಂಡಿ ತಿಂದು "ಜಲಿಯನ್ ವಾಲ ಬಾಗ್" ನೋಡಲು
ಹೋದ್ವಿ, ದಾರಿಯಲ್ಲಿ "ದುರ್ಗಿಯಾನ" ದೇವಸ್ಥಾನ ನೋಡಲು ಹೊದೆವು. ಸ್ವರ್ಣದ ಗೋಡೆ ಇರುವ, ಸುತ್ತಾಲು
ಕೊಳ ಇರುವ ಗುಡಿ. ಕೊಳದ ಮದ್ಯೆ ಈಶ್ವರ. ಚಾವಡಿಯ ಕೆತ್ತನೆ ಚೆನ್ನಾಗಿದೆ. ಹನುಮಾನ್, ದೇವಿಯ ವಿಗ್ರಹಗಳು ಸುಂದರವಾಗಿದೆ. ಹನುಮಾನ್ ಸ್ವಯಂಬು. ವಿಶಾಲನಾಗಿ ಸ್ವಚ್ಛವಾಗಿ ಇತ್ತು. ತಿಳಿನೀರಿನಲ್ಲಿ ಸ್ವತಂತ್ರ
ನಾಗಿ ಮೀನುಗಳು ವಿಹರಿಸುತ್ತಿದ್ದವು.
ಅಲ್ಲಿಂದ "ಜಲಿಯನ್ ವಾಲಾ ಬಾಗ್"ಗೆ ಹೊರೆಟೆವು. ಸ್ವರ್ಣ ಮಂದಿರ ಹತ್ತಿರವೇ ಇದೆ.
ಬ್ರಿಟಿಷ್‍ರವರ ಕಾಲದಲ್ಲಿ, ಒಳಗೆ ಮೌನವಾಗಿ ಪ್ರಾರ್ಥನೆ ಮಾಡುತ್ತಿದ್ದ ಜನರ ಮೇಲೆ, ಬ್ರಿಟಿಷ್ ಜನರಲ್ ಡೈರ್
ಅಮಾನೀಯವಾಗಿ, ಮೃಗೀಯವಾಗಿ, ದಾರುಣ ಹತ್ಯೆಗೆ ಅದೇಶ ಕೊಟ್ಟ ಸ್ಥಳ. ಸುತ್ತಾಲು ಯಾರು ತಪ್ಪಿಸಿಕೊಂಡು
ಹೊಗದ ಹಂಗೆ, ಸಿಪಾಯಿರನ್ನು ನಿಲ್ಲಿಸಿ, ಕೊಲ್ಲಿಸಿದ ಸ್ಥಳ. ಈಗಲೂ ಗಂಡಿನೇಟಿನ ಕಲೆ ಇದೆ. ಎಷ್ಟೋ ಜನ
ರನ್ನಯ, ಬಾವಿಯಲ್ಲಿ ನೂಕಿ. ಸಾಯಿಸಿದ "ಶಹೀದ್ ಕೂವ" ಬಾವಿ ಇದೆ. ಅದರ ಕುರಹುಗಳನ್ನು ನೋಡಿ
ಮನ ಮಿಡಿಯಿತು. ವಿರರೂ ಅದ, ದೇಶಭಕ್ತಿಯ ಪಂಜಾಬಿ ಜನರು, ನಿಶಸ್ತ್ರರಾದಾಗ, ಮೋಸದಿಂದ ಕೊಲ್ಲಿಸಿದ
ಸ್ಥಳ. ಅಲ್ಲಿ ವೀರರಿಗೆ ಸ್ಮಾರಕ ಮಾಡಿದ್ದಾರೆ. ಸುತ್ತಲು ಪಾರ್ಕ ಮಾಡಿ ಸ್ವಚ್ಛವಾಗಿ ಇಟ್ಟಿಕೊಂಡಿದ್ದಾರೆ. ಕೈಯಲ್ಲಿ
ಬಂದೂಕು ಹಿಡಿದು ಕೊಂಡಿರುವ ಸಿಪಾಯಿಯ ಅಚ್ಚಲ್ಲಿ ಗಿಡ ಬೆಳಸಿದ್ದಾರೆ. 1650 ಸುತ್ತು ಮೃಗೀಯ ಫೈರಿಂಗ್
ನಲ್ಲಿ, ಪರಲೋಕ ಸೇರಿದವರು 3370 ಜನರು. ಬಾವಿಗೆ ದುಮಿಕಿದವರು 120. ಆಗ ನೀರು ಸರಬರಾಜು ಮಾಡು
ತ್ತಿದ್ದ ಕೆಚ್ಚದೆಯ ಕಲಿ "ಉದಯ ಸಿಂಗ್", ದೌಜನ್ಯಕ್ಕೆ ಭುಗಿಲೆದ್ದ ಸೇಡನ್ನು, ಅದೇ ಮೈಕಲ್ ಡೈರ್‍ನನ್ನು, ಲಂಡನ್‍ನಲ್ಲಿ, ಗುಂಡಿಕ್ಕಿ ಸಾಯಿಸಿ ಸೇಡು ತೀರಿಸಿಕೊಂಡನು. ನಂತರ ಬ್ರಿಟಿಷರಿಂದ ಗಲ್ಲಿ ಗೇರಿಸಲ್ಪಟ್ಟನು. ಕೆಲವು ನಿಮಿಷ ಮೌನ ವಾಗಿದ್ದು, ಬಾರ ಹೃದಯದಿಂದ ಹೊರಗೆ ಬಂದ್ವಿ.
ನಂತರ ಶಾಪಿಂಗ್‍ಗೆ ಬಿಟ್ರು. ರೆಡಿ ಮೇಡ್ ಡ್ರಸೆಸ್, ಜರಕಿನ್‍ಗಳು, ಉಲನ್ ಉಡುಪುಗಳು ಎಲ್ಲಾ
ವಿಶೇಷ. ಬೇಕದಷ್ಟು ಜನ ಬಹಳ ವ್ಯಾಪಾರ ಮಾಡಿದರು. ರಗ್ಸ್, ಸ್ವಟರ್, ಟೋಪಿ, ಇನ್ನೇನೊ. ಸಿಮ್ಲಾದಲ್ಲಿ
ಪಾಟಿಯಾಲ ಡ್ರೆಸ್ ಮೇಟಿರೀಯಲ್ ಕೊಂಡಿದ್ದರಿಂದ, ಹಾಗು, ಹೆಚ್ಚಿನ ಉಲನ್, ಮೊದಲೆ ನಮ್ಮ ಹತ್ತಿರ ಇದ್ದು
ದರಿಂದ ನಾವು ಯಾವ ಪರ್‍ಚೇಸ್ ಮಾಡಲಿಲ್ಲ. ಅದರೆ ಪಂಜಾಬಿ ಲಸ್ಸಿ ಕುಡಿದ್ವಿ. ಹೋಟೆಲ್‍ಗೆ ಬಂದು, ಊಟ
ಮಡಿ, ಕುರುಕ್ಷೇತ್ರದ ಕಡೆಗೆ ನಮ್ಮ ಪ್ರಯಾಣ. ಲೂದಿಯಾನ, ಚಂಡಿಗರ್, ಸುಲೈಕಾನ್ ಮೂಲಕ ರಾತ್ರೆ 9 ಗಂಟೆಗೆ ಕುರುಕ್ಷೇತ್ರ ತಲುಪಿದೆವು. 10 ಗಂಟೆಗೆ ಊಟ ಮಾಡಿ ವಿರಾಮ. ಜಾಟ್ ಧರ್ಮಶಾಲದಲ್ಲಿ ವಸತಿ.
31-3-2014ರ ದಿನ ಉಗಾದಿ. ಜಯ ನಾಮ ಸಂವತ್ಸರ. ನಮ್ಮ ಬಸ್ಸಿನ ಬಾಗಲಿಗೆ ಬೇವು,
ಮಾವಿನ ತೋರಣ. ಅದೇ ಈಗ ನಮಗೆ ಮನೆ. ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡೆವು.
ಮೊದಲು ನಮ್ಮ ಗೈಡ್ "ಮಹಾಕಾಳಿ' ಅಥವ "ಭದ್ರಕಾಳಿ" ಮಂದಿರಕ್ಕೆ ಕರೆದುಕೊಂಡು ಹೊದರು. ಇದು ಒಂದು
ಶಕ್ತಿಪೀಠ.ದೇವಿಯ ಅನ್ಕಲ್ (ಪಾದ ಕಟ್ಟು) ಬಿದ್ದ ಸ್ಥಳ, ಬಾವಿಯಲ್ಲಿ. ಸುಂದರವಾದ ಕೆಂಪು ಕಲ್ಲಿನ ದೇವಿ.
ಪಾಂಡವರು, ಹಾಗು ಕೃಷ್ಣ ಮಹಾಭಾರತದ ಯುದ್ದದ ಮೊದಲು, ಇಲ್ಲಿ ಯಜÐ ಯಾಗದಿಯನ್ನು ಮಾಡಿದರೆಂದು ಪ್ರತೀತಿ. ಕೃಷ್ಣ ಇಲ್ಲಿಯ ದೇವಸ್ಥಾನಕ್ಕೆ ಕುದುರೆ ಕೊಟ್ಟನಂತೆ. ಅದಕ್ಕೆ ಇಲ್ಲಿಯ ಜನ ಟೆರಕೋಟದ, ಗಾಜಿನ
ಕುದುರೆಯನ್ನು ಅರ್ಪಿಸುತ್ತಾರೆ. ದೇವಿಯ ಮುಂದೆ ಬಹಳ ದೊಡ್ಡದಾದ ಕಮಲವಿದೆ. ಗೌರವದಿಂದ ಭಕ್ತರು
ಕೊಟ್ಟ ಕುದುರೆಯನ್ನು ಇಲ್ಲಿ ಜೋಡಿಸಿರುತ್ತಾರೆ. ದೇವಿ ಸುಂದರವಾಗಿದೆ. ಇಲ್ಲಿಯೇ ರಾಧಾಕೃಷ್ಣ, ಶಿವ ರವರ
ವಿಗ್ರಹವಿದೆ. ಹುಲಿಯ ಬಾಯಿಯ ಹೊರ ಧ್ವಾರವಿದೆ. ಇಲ್ಲಿಯು 52 ಶಕ್ತಿ ಪೀಠದ ಫಲಕ ಹಾಕಿದ್ದಾರೆ. ದೇವಿ
ದರ್ಶನ ಚೆನ್ನಾಗಿ ಅಯಿತು.
ಮುಂದೆ ನಾವು ಶ್ರೀಕೃಷ್ಣ ಗೀತೋಪದೇಶ ಮಾಡಿದ ಸ್ಥಳಕ್ಕೆ ಹೊದೆವು. ಅರ್ಜುನ ನನ್ನು ಕರೆದು
ಕೊಂಡು ಎರಡು ಮರಗಳ ನಡುವೆ ಉಪದೇಶ ಮಾಡಿದ ಸ್ಥಳ. ಸುತ್ತಾಲು ಸರೋವರಗಳು ಇವೆ. ಇಲ್ಲಿ
ಪಾರ್ಥಸಾರತಿ ರಥವನ್ನು, ಅದರಲ್ಲಿ ಅರ್ಜುನ ಹಾಗು ಕೃಷ್ಣನನ್ನು ಇಟ್ಟಿರುತ್ತಾರೆ. ಇಲ್ಲಿಯೇ ನಾವು ಗ್ರೂಪ್
ಫೋಟೋ ತೆಗೆಸಿದೆವು. ಸುತ್ತಾಲು ಮಹಾಭಾರತಕ್ಕೆ ಸಂಬಂದಿಸಿದ್ದಂತೆ, ರೂಪಕಗಳು, ವಿಗ್ರಹಗಳು ಇತ್ತು. ಸಿಂಹ
ವಾಹಿನಿ ದುರ್ಗೆ, 5 ತಲೆ ಹನುಮಂತ, ರಾಮಕೃಷ್ಣ, ರಾಧಾಕೃಷ್ಣ, ಇನ್ನು ಆನೇಕ ವಿಗ್ರಹಗಳು ಇತ್ತು. ಇಲ್ಲಿ
ಹರಿಯುತ್ತಿರುವ ಸರೋವರ ಭೀಷ್ಮ ಕುಂಡ. ವಟವೃಕ್ಷ ಸಹ ಇದೆ. ಸಾಮನ್ಯವಾಗಿ ಎಲ್ಲಾ ಶಕ್ತಿಪೀಠದಲ್ಲೂ,
ವಟವೃಕ್ಷ ಹಾಗು, ಅದಕ್ಕೆ ಕಟ್ಟಿದ ಕೆಂಪು, ಹಳದಿಯ ದಾರದಿಂದ ತುಂಬಿರುತ್ತೆ. ಅಲ್ಲಿಂದ ನಾವು ಛತ್ರಕ್ಕೆ ಬಂದು,
ತಿಂಡಿ ತಿಂದು, ಬ್ರಹ್ಮ ಸರೋವದ ನೋಡಲು ಹೋದೆವು. ನಾವು ಇರುವ ಸ್ಥಳಕ್ಕೆ ಹತ್ತಿರದಲ್ಲೆ ಇತ್ತು. ಸರೋ
ವರದ ಸುತ್ತಾ ಮುತ್ತಾ ನೀರು ಸ್ವಚ್ಛವಾಗಿದ್ದು, ವಿಶಾಲವಾಗಿ ಇದೆ. ಅಲ್ಲೊಂದು ಸೇತುವೆ ದಾಟಿದ ಮೇಲೆ,
ಶಿವನ ದೇವಸ್ಥಾನ, ಹಾಗು ಬಹಳ ಎತ್ತರದ ಕರಿಕಲ್ಲಿನ ಕೃಷ್ಣ ಪಾರ್ಥ ರೊಳಗೊಂಡ ರಥ ಇಟ್ಟಿರುತ್ತಾರೆ. ಸುತ್ತಲು
ಸ್ನಾನ ಘಟ್ಟ ಬಹಳ ಅಧುನಿಕವಾಗಿ ವ್ಯವಸ್ಥಿತವಾಗಿ ಇದೆ. ಮಹಾಭಾರತದ ಅಧ್ಯಾಯಗಳು 18, ಸಮರ ನಡೆದದ್ದು
18 ದಿನ, 18 ಅಕ್ಷೋಹಿಣಿ ಸೈನ್ಯ, ಸೈನ್ಯದ ವಿವರಗಳ ಅಂಕಿ ಕೂಡಿಸಿದಾಗ ಬರುವುದು 18.
ಕುರುಕ್ಷೇತ್ರವನ್ನು ಗೀತೆಯಲ್ಲಿ ಕೃಷ್ಣ ಧರ್ಮಕ್ಷೇತ್ರವೆಂದು ಕರೆದಿದ್ದಾರೆ. ಇಲ್ಲಿ ಕುರು ಮಹಾರಾಜನ
ಪುಣ್ಯ ಕೆಲಸದಿಂದ, ಅವನ ಶರೀರ ದಾನದಿಂದ ಸಂತುಷ್ಟನಾದ ವಿಷ್ಣುವು, ಈ ಜಾಗದಲ್ಲಿ ಮರಣ ಹೊಂದಿದವರಿಗೆ
ಸೀದಾ ಸ್ವರ್ಗಕ್ಕೆ ಸೇರಿಕೊಳ್ಳಲಿ ಎಂಬ, ಕುರುವಿನ ಅಸೆಯನ್ನಯ ತಥಾಸ್ತು ಅನ್ನುತ್ತಾನೆ. ಇಲ್ಲಿಯ ಮಣ್ಣು,ಅದರ
ಕಣ, ದೂಳು ಸಹ ಪುಣ್ಯವಾದದ್ದು ಅಂತ ಪ್ರತೀತಿ. ಇದು ಸರಸ್ವತಿ ಹಾಗು ದುಷದ್ವತಿ ನದಿಗಳ ಮದ್ಯಪ್ರದೇಶ.
ಕುರುಕ್ಷೇತ್ರ 155 ಸ್ಕ್ವಯರ್ ಫೀಟ್ ಬ್ಯಾಟಲ್ ಫೀಲ್ಡ್. 18 ಅಕ್ಷೋಹಿಣಿ ಸೈನ್ಯ ಹಿಡಿಯುವ ಸ್ಥಳ. ಅಹಾರ
ಹಾಗು ನೀರುಗಳಿಗೆ ಲೋಪವೆಲ್ಲದ ಸ್ಥಳ. 1 ಅಕ್ಷೋಹಿಣಿ ಅಂದರೆ 21, 870 ಅನೆಗಳು,(2+1+8+7+0=18),
21870 ರಕ್ಷಕರು, 1,09,350 ನಡೆಯುವ ಸೇನೆ,(1+09+3+5+0=18), 65, 610 ಕುದುರೆ ಸವಾರಿಗಳು.
(6+5+6+1+0=18), ಹತ್ತಿರ ಹತ್ತಿರ 2 ಲಕ್ಷ ಸೈನ್ಯ. ರಾಜ ಕುರುವಿಗೆ ಸೇರಿದ ಸ್ಥಳ. ವೇದ ಮಂತ್ರಗಳ ಪಠಣ
ಪ್ರಪ್ರಥಮು ವಾಗಿ ಇಲ್ಲಿ ನಡೆಯಿತು. ಬ್ರಹ್ಮಾದಿ ದೇವತೆಗಳು ಇಲ್ಲಿ ಯಜ್ಞ ಯಾಗದಿ ಮಾಡಿರುತ್ತಾರೆ. ವಸಿಷ್ಠ
ಹಾಗು ವಿಶ್ವಾಮಿತ್ರರಿಗೆ ಬ್ರಹ್ಮ ಜ್ಞಾನ ಪ್ರಾಪ್ತಿ ಯಾದ ಸ್ಥಳ. ಋಗ್‍ವೇದ, ಉಪನಿಷದ್, ಮಹಾಭಾರತ, ಅರಣ್ಯ
ಕಗಳು, ಸರಸ್ವತಿ ನದಿಯ ದಡದಲ್ಲೇ ಉದ್ಭವವಾಗಿದೆ. ಇದರಿಂದಲೇ ಗೀತೆ "ಧರ್ಮಕ್ಷೇತ್ರೆ ಕುರುಕ್ಷೇತೆ", ಎಂದು
ಪ್ರಾರಂಭವಾಗುತ್ತೆ.
ಮುಂದೆ ನಾವು ಇನ್ನೊಂದು ಶಕ್ತಿ ಪೀಠ "ಶಾಕಂಬರಿ" ನೋಡಲು ಪಯಣಿಸಿದೆವು. (ಯು.ಪಿ.).
3-4 ಗಂಟೆಯ ಪ್ರಯಾಣದ ನಂತರ, ಭೋರನಾಥ್ ದೇವಸ್ಥಾನದ ಅವರಣದಲ್ಲಿ ಊಟ ಮಾಡಿ, ಸುಮಾರು
2 ಕಿ,ಮಿ., ದೂರವಿರುವ ಗುಡಿಗೆ ನಡೆದು ಹೊರಟೆವು. ಬೆಸಿಗೆಯಲ್ಲಿ ಮಾತ್ರ ಹೋಗಬಹುದು. ಕಡಿಮೆ ನೀರು
ಇರುವ ನದಿ ದಾಟಿ, ಕಾಡಿನ ಮದ್ಯೆ, ಕಲ್ಲುದಾರಿಯಲ್ಲಿ, ನದಿಯ ಒಳಗಡೆನೆ, ಬಿಸಿಲಿನಲ್ಲಿ, ನಡೆದು ದೇವಸ್ಥಾನ
ತಲುಪಿದೆವು. ಇದು ಒಂದು ಶಕ್ತಿ ಪೀಠ. ಸತಿಯ ತಲೆ ಬಿದ್ದಿರುವ ಕ್ಷೇತ್ರ. ಬಹಳ ಬುದ್ಧಿವಂತನಾದ, ಧಾರ್ಮಿಕ
ಗುರು ದುರ್‍ಗಾಮ್, 4 ವೇದದಲ್ಲೂ, ಪಾಂಡಿತ್ಯ ಪಡೆದು, ಬ್ರಹ್ಮ ದೇವನಿಂದ, ಯಾವ ದೇವರಿಂದಲೂ, ಸಾವು
ಬರೆದ ಹಂಗೆ ವರ ಪಡೆದು, ಅಹಂಕರಿಸಿ, 4 ವೇದಗಳನ್ನು, ತನ್ನ ಬಳಿ ಇಟ್ಟುಕೊಂಡು, ಬ್ರಾಹ್ಮಣರಿಗೆ, ಯಾವ
ರೀತಿ ಧಾರ್ಮಿಕ ಕೆಲಸಮಾಡದಂಗೆ ಮಾಡಿ, ಇಂದ್ರನನ್ನು ಸೋಲಿಸಿ, ಮಳೆ ಬರದಹಂಗೆ, ಬೆಳೆ ಬೆಳೆಯದಂಗೆ ಮಾಡಿ, ಬರಗಾಲ ತಂದು, ಜನರನ್ನು ಕಷ್ಟಕ್ಕೆ ಒಳಪಡಿಸಿದನು. ಅವನ ಅಳ್ವಿಕೆಯ ದುರಂತವನ್ನು, ದೇವತೆಗಳು
ದೇವಿಯ ಹತ್ತಿರ ಹೇಳಿಕೊಂಡು ಮೊರೆ ಹೊಕ್ಕರು. ಇದನ್ನು ಕೇಳಿ, ದೇವಿಯ ನೂರು ಕಣ್ಣುಗಳಲ್ಲಿ, ನೀರು
ಹರಿದು, ನದಿ ಸರೋವರ, ಕೆರೆ ಕುಂಟೆ ತುಂಬಿದವು. ಹಸಿರು ಹುಟ್ಟಿ, ಅವಳ ದೇಹದಿಂದ ಕಾಯಿಪಲ್ಯೆ, ತರಕಾರಿ
ಸೃಷ್ಠಿಸಿದಳು. ಅದಕ್ಕೆ "ಶಾಕಾಂಬರಿ"ಅಂತ ಹೆಸರು. ಸದಿಗೂ ಅದೇ ಹೆಸರು. ದುರ್ಗಾಮ್‍ನನ್ನು ಯುದ್ದದಲ್ಲಿ
ಸೋಲಿಸಿದಳು. ಹೀಗಾಗಿ ಇಲ್ಲಿ ದೇವಿ, ದುರ್ಗಾ, ಶತಾಕ್ಷೀ, ಹಾಗು ಶಾಕಾಂಬರಿ ರೂಪದಲ್ಲಿ ಇದ್ದಾರೆ. 3 ಪ್ರತಿಮೆ
ಇದೆ. ಯಾವ ಅತಂಕ ಪಡದೆ, ಮೌನವಾಗಿ, ನಿಧಾನವಾಗಿ, ದರುಶನ ಮಾಡಿಕೊಂಡು ಬಂದ್ವಿ. ಚೈತ್ರ ನವರಾತ್ರೆ
ಯಾದ್ದರಿಂದ ಬಹಳ ನೂಕು ನುಗ್ಗಲು. ಕ್ಯೂ ಮೈಲಿಗಟ್ಟಲೆ ಇತ್ತು. ನಮ್ಮ ಟ್ರಾವೆಲ್ ಸಿಬ್ಬಂದಿ, ಗುರುರವರು, ಬಹಳ ಜನ ಸೀನಿಯರ್ ಸಿಟಿಸನ್, ಅಷ್ಟೂದ್ದ ಕ್ಯೂನಲ್ಲಿ, ಬಿಸಿಲಿನಲ್ಲಿ, ನಿಂತು, ಬರಲು ಕಷ್ಟವೆಂದು, ಪೊಲೀಸ್
ರವರ ಹತ್ತಿರ ಹೇಳಿದಾಗ, ಅವರು ಕನಿನರಸಿ, "ಎಕ್ಸೀಟ್" ಮೂಲಕ ಹೋಗಿ, ದೇವಿಯ ದರ್ಶನಕ್ಕೆ ಅನುವು ಮಾಡಿ ಕೊಟ್ಟರು. ಶರಾಪುರದಲ್ಲಿ ಶಾಕಾಂಬರಿ ಇರುವುದು. ಅಲ್ಲಿಂದ ನಾವು ಹರಿದ್ವಾರಕ್ಕೆ ರಾತ್ರೆ ತಲುಪಿದೆವು. "ಜಮ್ಮು
ಯಾತ್ರ ಭವನ್"ನಲ್ಲಿ ವಸತಿ.
ಈ ದಿನ ತಾರೀಖು 1-4-2014. ಬೆಳಿಗ್ಗೆ ಬೇಗ ಎದ್ದು, ರೂಮಿನಲ್ಲಿ ಸ್ನಾನ ಮಾಡಿಕೊಂಡು, ಮತ್ತೆ ಗಂಗಾ ಸ್ನಾನಕ್ಕೆ ಹೊರಟೆವು. ಘಾಟ್ ನಲ್ಲಿ ಮಂತ್ರಗಳೊಂದಿಗೆ ಗಂಗಾ ಪೂಜೆ. ಸ್ನಾನ, ಅಘ್ರ್ಯ ಎಲ್ಲಾ
ಅಯಿತು. ಅಲ್ಲಿಂದ ಯಾತ್ರೆ ಭವನ್‍ಗೆ ಬಂದು, ತಿಂಡಿ ತಿಂದು, ನಂತರ ಹರಿದ್ವಾರ ಲೋಕಲ್ ಟ್ರೀಪ್.
ಮೊದಲು ಬೆಟ್ಟದ ಮೇಲೆ ಇರುವ "ಮಾನಸ ದೇವಿ" ದೇವಸ್ಥಾನಕ್ಕೆ ಕೇಬಲ್ ಕಾರ್ ನಿಂದ ಪ್ರಯಾಣ. ಬೆಳ್ಳಿಯ ತಗಡಿನಿಂದ ಅಲಂಕರಿಸಿದ, ಸುತ್ತಾಲು ದೇವಸ್ಥಾನವು ಬೆಳ್ಳಿಯ ಲೇಪನವಿದ್ದು, ದೇವಿಯ
ದರ್ಶನ ವಾಯಿತು. ಇಲ್ಲಿ ದೇವಿಗೆ ಮೂರು ಬಾಯಿ, ಐದು ತೋಳು, ಇನ್ನೋಂದಕ್ಕೆ 8 ತೋಳುಗಳು. ಇದೊಂದು ಸಿದ್ದಿಪೀಠ. ಮಾನಸದೇವಿ ಶಕ್ತಿದುರ್ಗದ ರೂಪದಲ್ಲಿ ಇರುವರು.
ಮುಂದೆ ನಾವು "ಚಂಡಿ ದೇವಸ್ಥಾನ"ಕ್ಕೆ ಹೋದ್ವಿ. ಇಲ್ಲಿಗು ಸಹ ಕೇಬಲ್ ಕಾರ್‍ನಲ್ಲಿ. ಬೆಟ್ಟದ
ತುತ್ತ ತುದಿಯಲ್ಲಿ. ದೇವಿಯ ಗುಡಿ ಗೋಪುರ ಕಾಣುತ್ತೆ. ಬಹಳ ಮೇಲೆ ಇದೆ. ಲಿಂಗ ರೂಪದಲ್ಲಿ ಇದೆ.
ಸಣ್ಣನೇ ಕಲ್ಲು, ಹಳದಿ ಹಚ್ಚಿದ್ದರು. ಮೇಲೆ ಹೋಗುವಾಗ, ಕಾಡಿನ ಮದ್ಯೆ ಜನಗಳು ನಡೆದುಕೊಂಡು ಹತ್ತು
ತ್ತಿರುವುದು ಕಾಣುತ್ತಿತ್ತು. ದೇವಿಯ ಮುಂದೆ ನಮಸ್ಕರಿಸಿ, ಮತ್ತೆ ಕೆಳಗೆ ಕೇಬಲ್ ಕಾರ್‍ನಲ್ಲಿ ಬಂದು, ಹೋಟೆಲ್
ನಲ್ಲಿ ಚಾಯ್ ಕುಡಿದು, ಯಾತ್ರೆ ನಿವಾಸ್‍ಗೆ ಬಂದ್ವಿ. ಬಂದ ತಕ್ಷಣ, ಹಿಂದಿನ ದಿನ ಉಗಾದಿ ಹಬ್ಬ. ಇಂದು ವರ್ಷ
ದ ಹೆಚ್ಚಿನ ದಿನವೆಂದು, ಭರ್ಜರಿ ಊಟ. ಒಬ್ಬಟ್ಟು, ಚಿತ್ರನ್ನ, ಅಂಬೋಡೆ, ಪಲ್ಯ, ಕೊಸಂಬರಿ, ವಿವಿಧ ಖಾದ್ಯಗಳ
ಬಾರಿ ಭೋಜನ. ಉಂಡ ಮೇಲೆ ರೂಮಿನಲ್ಲಿ ವಿರಾಮ.
ಸ್ವಲ್ಪ ವಿರಾಮದ ನಂತರ"ಪವನ್ ಧಾಮ್" ನೋಡ ಹೋದೆವು. ದೇವಸ್ಥಾನವೆಲ್ಲಾ ಗ್ಲಾಸ್‍ನಿಂದ
ಹೊಳೆಯುತ್ತಿತ್ತು. ತ್ರೀ ಡೈಮೆನ್ಷನ್, ಸುತ್ತಾಲು ಕನ್ನಡಿಗಳು. ಪ್ರತಿಯೂಂದು ದೇವಿಯ ಪ್ರತಿಬಂಬಗಳು, ಕನ್ನಡಿ
ಯಲ್ಲಿ ಅನೇಕವಾಗಿ ಕಾಣಿತ್ತಿದ್ದವು. ಇಲ್ಲಿ ರಥದಲ್ಲಿ ಇರುವ ಕೃಷ್ಣ ಪಾರ್ಥ, ಸರಸ್ವತಿ, ರಾಮ ಲಕ್ಷಣರನ್ನು ಹೊತ್ತ
ಹನುಮಂತ, ಹಸುಕರು ಜೊತೆಗೆ ಕೃಷ್ಣ, ಕಾಳಿಂಗ ಮರ್ದನ, ಬೆಣ್ಣೆಕಳ್ಳ, ವಿರಾಟ ರೂಪ, ಶಬರಿಯ ಸೇವೆ, ಗುಹನ
ಜೊತೆ ನದಿ ದಾಟುತ್ತಿರುವ ರಾಮ, ಲಿಂಗ ರೂಪಿ ಈಶ್ವರ, ಚಿದಂಬರ ನಟರಾಜ, ಇನ್ನು ಅನೇಕ ದೇವರು ಥಳ
ಥಳಿಸುತ್ತಿದ್ದರು.
ನಂತರ ಪಕ್ಕದಲ್ಲೇ ಇದ್ದ ಇನ್ನೊಂದು ಗುಹೆ ದೇವಸ್ಥಾನಕ್ಕೆ ಹೊದೆವು. ಇಲ್ಲಿ ಗುಹೆಯನ್ನು
ಮಾಡಿದ್ದಾರೆ. ವೈಷ್ಣವೀ ದೇವಿಯ ದೇವಸ್ಥಾನ. ಗುಹೆಯ ಮೂಲಕವೇ ಬಗ್ಗಿ, ಎದ್ದು, ಅಂಬೆಗಾಲಿಟ್ಟು ಹೋಗು
ತ್ತಿದ್ದೆವು. ವೈಷ್ಣವಿ ದೇವಸ್ಥಾನದ ಪಿಂಡಿಯ ಬದಲು ಇಲ್ಲಿ ಮೂರ್ತಿ ಇದೆ. ಜೊತೆಗೆ ನವದರ್ಗೆಯರು, ದುರ್ಗೆ
ಯ ನಾನಾ ರೂಪಗಳ ವಿಗ್ರಹಗಳು ಇತ್ತು.
ಸಂಜೆ 6 ಗಂಟೆಯ ಮೇಲೆ, ಗಂಗಾ ಅರತಿ ನೋಡಲು "ಹರ್‍ಕೀಪೌಡಿ"ಗೆ ಹೋದ್ವಿ. ಶಂಕರಾ
ಚಾರ್ಯರು, ಅವರ ಶಿಷ್ಯರೊಂದಿಗೆ ಇರುವ ಗೋಪುರದ ಗುಡಿಯ ಕೆಳಗೆ, ಕ್ಲಾಕ್ ಟವರ್ ಹತ್ತಿರ ನಿಂತು,
ಅರತಿಯನ್ನು ಅನಂದಿಸಿದೆವು. ಸಮೂಹಿಕ ಅರತಿ ಹಾಡು ಕಿವಿಗೆ ಇಂಪಾಗಿತ್ತು. ಅರತಿಯ ಪ್ರತಿಬಿಂಬ ಗಂಗೆಯ
ಒಳಗೆ ಎದ್ದು ಕಾಣುತ್ತಿತ್ತು. ಅಲ್ಲಿಂದ 7.30ಕ್ಕೆ ಮುಗಿದ ತಕ್ಷಣ, ವಾಪಸ್ಸು, ಜಮ್ಮು ನಿವಾಸ್‍ಗೆ ಬಂದು, ಊಟ
ಮಾಡಿ ರಾತ್ರೆ ವಿರಾಮ.
2-4-2014 ಹರಿದ್ವಾರದಿಂದ ಡಿಲ್ಲಿಗೆ ಪ್ರಯಾಣ. ದಿನವಿಡಿ ಪ್ರಯಾಣ. ದಾರಿಯುದ್ದಕ್ಕೂ
ಅನುಭವಗಳ ಚರ್ಚೆ, ವಿಚಾರ. ದಾರಿಯಲ್ಲಿ ತಿಂಡಿ ಊಟವಾಯಿತು. ಪ್ರತಿಯೊಬ್ಬ ಪ್ರಯಾಣಿಕರಿಂದ 250/-ರೂ.
ಸೇರಿಸಿ ಎಲ್ಲರಿಗೂ ಅಂದರೆ, ಟ್ರಾವೆಲ್ಸ್‍ನ ಅಡಿಗೆ ಸಿಬ್ಬಂದಿ 3 ಜನ, ಸ್ಯಾಫ್ ಇಬ್ಬರು, ಡೈವರ್ ಹಾಗು ಅವರ
ಸಹಾಯಕ, ರವರಿಗೆ "ಟೋಕನ್ ಅಫ್ ರೆಸ್ಪೇಟ್". ಸಂಜೆ ಸಣ್ಣ "ಫೇರ್‍ವೇಲ್" ಪಾರ್ಟಿ. ದೆಲ್ಲಿಯನ್ನು ಸಂಜೆ
ತಲುಪಿದೆವು. "ಹೋಟೆಲ್ ಕಾಂಟಿನೆಂಟಲ್" ಕಾರೋಲ್ ಬಾಗ್ ನಲ್ಲಿ. ಪ್ರಯಾಣದ ಕೊನೆಯ ರಾತ್ರೆ ಹೋಟೆಲ್
ನಲ್ಲಿ.
3-4-2014. ದಿಲ್ಲಿ ಲೋಕಲ್ ಟ್ರೀಪ್ಸ್. ಮೊದಲು ಕುತುಬ್ ಮೀನಾರ್ ಕಂಪ್ಲೆಕ್ಸ್ ನೋಡಿದೆವು.
ಅಲ್ಲಿ ತುಕ್ಕು ಹಿಡಿಯದ ಉಕ್ಕಿನ ಪಿಲ್ಲರ್‍ನಲ್ಲಿ, 6 ಸಾಲು ಸಂಸ್ಕøತ ಶಾಸನವಿದೆ. ಹಿಂದೆ ಇದು ವಿಷ್ಣು ದೇವಸ್ಥಾನ
ವಾಗಿತ್ತು, ಚಂದ್ರಗುಪ್ತ ವಿಕ್ರಮಾದಿತ್ಯನ ಕಾಲದಲ್ಲಿ. ನಂತರ ಹಿಂದು ರಾಜರುಗಳ ಕಾಲ ಮುಗಿದು, ಫೀರೊಜ್
ಷಾ-ತೊಗಲಕ್ ಮತ್ತೆ ಕಟ್ಟಿಸಿರುತ್ತಾರೆ.ಮತ್ತೆ ನೋಡಿದ್ದು "ಇಂದಿರಾ ಗಾಂಧಿ ಮೆಮೋರಿಯಲ್". ಇಂದಿರಾ ಗಾಂಧಿ
ಪಿ.ಎಮ್. ಅಗಿ 17 ವರ್ಷ ಇದ್ದ ಜಾಗ. ದಿಟ್ಟ ಮಹಿಳೆ. ಅವಳಿಗೆ ಸಂಬಂದಿಸಿದ ಫೋಟೋಗಳು, ನಡೆಸಿದ
ಸಭೆಗಳು, ಉಪಯೋಗಿಸುತ್ತಿದ್ದ ಸಾಮನುಗಳು, ದೇಶಕ್ಕೆ ಸಂಬಂದಪಟ್ಟ ಮಹತ್ತರ ಕಾರ್ಯಗಳ ಫೋಟೋ
ಗ್ಯಾಲರಿ, ವಯ್ಯಕ್ತಿಕ ಫೋಟೋಗಳು, ಕೊನೆಯಲ್ಲಿ ಕೊಲೆಯಾದಾಗ, ಉಟ್ಟ ರಕ್ತಸಿಕ್ತ ಸೀರೆ ಇತ್ತು. ಕೊಲೆ ಜಾಗ
ಕೊನೆ ಉಸಿರು ಎಳೆದ ಜಾಗದಲ್ಲಿ ಸ್ಮರಕ ಇದೆ. ನಿಜವಾಗಲು ದಿಟ್ಟ ಮಹಿಳೆ.
ಅಲ್ಲಿಂದ ನಾವು ಬಿರ್ಲಾ ಮಂದಿರದ ಕಾಂಪ್ಲೇಕ್ಸ್‍ನಲ್ಲಿ ಇರುವ ಲಕ್ಷ್ಮೀ ನಾರಾಯಣ ದೇವಸ್ಥಾನ,
ಇಂದಿರಾ ಗೇಟ್‍ನಲ್ಲಿರುವ ಅಮರ ಜ್ಯೋತಿ, ಸೆಕ್ರೇಟೆರೀಯಟ್, ರಾಷ್ರಪತಿ ಭವನ್, ಸಂಸದ್ ಭವನ್, ರಾಜ್‍ಘಾಟ್
ಲೋಟಸ್ಸ್ ಮಂದಿರ ಸರ್ವ ಧರ್ಮಗಳ ಪ್ರಾರ್ಥನ ಸ್ಥಳ, ಚಾಂದಿನಿ ಚೌಕ್, ರೆಡ್ ಫೋರ್ಟ್, ಅಲ್ಲಿರುವ ಮ್ಯುಸಿಯಂ,
ನೋಡಿಕೊಂಡು ಸೀದಾ ರೈಲ್‍ವೇ ಸ್ಟೇಷನ್‍ಗೆ ಬಂದ್ವಿ. 9.15 ಕ್ಕೆ ಇದ್ದ ಕರ್ನಾಟಕ ಎಕ್ಸ್‍ಪ್ರೆಸ್ ನಲ್ಲಿ ಕುಳಿತೆವು.
ಅಲ್ಲಿಗೆ ನಮಗೆ ಪ್ಯಾಕೇಜ್ ಟೂರ್ ರವರ ಕಡೆಯಿಂದ ಮೊಸರನ್ನ, ಪುಳಿಯೋಗರೆ ಪಾರ್ಸಲ್ ಪ್ಯಾಕೇಟ್ ಬಂತು.
ಏ.ಸಿ. ಕಂಪಾರ್ಟ್‍ಮೆಂಟ್ ಅದ್ದರಿಂದ ಅಹಾರ ಚೆನ್ನಾಗಿತ್ತು. 2 ದಿನಕ್ಕೆ ಅಯಿತು. ಒಂದು ತಿಂಡಿ ಗುಂಟೂರ್‍ನಲ್ಲಿ,
ಒಂದು ಊಟ ಪ್ಯಾಟ್ರಿ ಕಾರ್‍ನಲ್ಲಿ ತೆಗೆದುಕೊಂಡ್ವಿ. 2 ರಾತ್ರೆಯ ನಂತರ 3ನೇ ಬೆಳಿಗ್ಗೆ 5-4-2014 ರಂದು,
1 ಗಂಟೆಗೆ ಯಲಹಂಕದಲ್ಲಿ ಇಳಿದೆವು. ಮಗ ಬಂದ್ದಿದ್ದ. 21 ದಿನ ಕಳೆದದ್ದು ಗೊತ್ತೆ ಅಗಲಿಲ್ಲ. ಮನೆಯ
ಚಿಂತೆ ಮಾಡಲಿಲ್ಲ. ಎಲ್ಲಾ ಚೆನ್ನಾಗಿ ಅಯಿತು. ಮುಗಿದೇ ಹೊಯಿತ್ತಲ್ಲ ಅನ್ನಿಸಿತ್ತು. ಮನೆಗೆ ಬಂದು ಊಟ,
ವಿರಾಮ. ಇಲ್ಲಗೆ ನಮ್ಮ ಪ್ಯಾಕೇಜ್ ಟೂರ್ ಮುಗಿಯಿತು. 6ನೇ ತಾರೀಖು, ಬೆಳಿಗ್ಗೆ ಗಣಪತಿ ದೇವಸ್ಥಾನದಲ್ಲಿ
ಅಭೀಷೇಕ ಮಾಡಿಸಿ, ಆ ಸಿಧ್ದಿ ವಿನಾಯಕನ ಕೃಪೆಯಿಂದ ಯಾತ್ರೆ ಪೂರ್ಣವಾಗಿದ್ದಕ್ಕೆ ಧನ್ಯವಾದ ಹಾಗು ನಮಸ್ಕಾರ
ಮಾಡಿದೆವು.
*****************************************