
ಇರುವೆ ಇರುವೆ ಏಲ್ಲಿರಯವೆ? ಎಲ್ಲಾ ಕಡೆ ಇರುವೆ. ಹಗಲಿರುಳು ದುಡಿಯುವೆ. ನಿನ್ನ ದೇಹಕ್ಕಿಂತ 20
ಪಟ್ಟು ಹೊರೆ ಹೊರೆಯುವೆ. ವೈಟ್ ಲಿಫ್ಟರ ಗೆ ನಿನ್ನ ಗುಟ್ಟು ಬಿಟ್ಟಿ ಕೊಡದೆ ಇರುವೆ. ನಿನ್ನ ಮೆದುಳಿ ಕೆಲಸಕ್ಕೆ
ನಮಿಸುವೆ. ಪುರಸ್ಕಾರ ಕೊಡುವೆ. ಅಣುವಿಗಿಂತ ಕಡೆಮೆ ನಿನ್ನ ಮೆದುಳು ಇರುವೆ. ಕೆಂಪಿರುವೆ, ಕಪ್ಪಿರುವೆ,
ಗೊಂದಿರುವೆ, ಗುಪ್ತಚಾರ ಇರುವೆ, ಸಿಪಾಯಿ ಇರುವೆ,ರಾಣಿ ಇರುವೆ,ಬಹು ತರತರಹದ ಇರುವೆ. ನಿನ್ನ ಕಾರ್ಯವೈಖರಿ ನೋಡಿ ಸೃಷ್ಠಿಕರ್ತನಿಗೆ ನಮಿಸುವೆ.
ಇರುವೆಗೆ ತಿನ್ನಲು ಏನು ಸಿಗಬಾರದೆಂದು ಸುಳಿವು ಕೊಡದೆ ಇರಲು ನಾನು ಎನೇನೋ ಯೋಚಿಸುವೆ.
ನಿನಗೆ ಸವಾಲು ಹಾಕಿ ನಾನು ಸೊಲುವೆ. ಹಾಲು, ಮೊಸರು, ಅಡಿಗೆಯನ್ನು ಶಾಶ್ವತವಾಗಿ ನಿಶ್ಚಂತೆಯಿಂದ ನೀರಿನ
ತಟ್ಟೆಯಲ್ಲಿ ಇಡುವೆ. ಸಿಹಿ ಮೊದಲಾದ ಇರುವೆ ಮುತ್ತುವ ಸಾಮನನ್ನು ಬಿಗಿಯಾದ ಡಬ್ಬಿಯಲ್ಲಿ ಹಾಕುವೆ,
ಡಿ.ಡಿ,ಟಿ, ಹಾಕಿ ಸಾಯಿಸಲು ನಾನು ಹೆದರುವೆ. ಅರಿಶಿನ ಮಾತ್ರ ಹಾಕಿ ಓಡಿಸುವೆ. ಓಡಿಸಿದರು ಇನೊಂದು ನೆಲೆ
ಯನ್ನು ನೀನು ಹುಡುಕುವೆ. ನೀನು ನನಗೆ ಕಾಟ ಕೊಡದೆ ಇರು ಇರುವೆ. ನಾನು ಸಹ ನಿನ್ನ ಜೊತೆ ಹೊಂದಿ
ಕೊಂಡು ತೊಂದರೆ ಕೊಡದೆ ಇರುವೆ. ನ್ಯಾಚುರಲ್ ಕೊ ಎಕ್ಸಿಸ್ಟೆಸ್ ಅಗಿ ಇರುವೆ.
ನೀನು ನಿನ್ನ ಮೊದಲ ಸೈನಿಕ ಇರುವೆಯನ್ನು ಕಳುಹಿಸಿ ಎನು ಇರುವುದೆಂದು ತಪಾಸಣೆ ಮಾಡುವೆ.
ನಂತರ ಎಲ್ಲಾ ಸೈನಿಕರನ್ನು ಕಳಿಸುವೆ. ಶಿಸ್ತಿನ ಸಿಪಾಯಿ ಇರುವೆಗಳು ಹೊಗುವುದನ್ನು ನೋಡಿ ಆನಂದಿಸುವೆ.
ಈ ಶಿಸ್ತಿನ ಸಿಪಾಯಿಗಳಿಗೆ,ಬೇರೆ ಇರುವೆಗಳು ರಕ್ಷಾಣ ಸೇತುವೆಯನ್ನು ಕಟ್ಟುವುದನ್ನು ನೋಡಿ ಅಶ್ಚಂiÀರ್i ಪಡುತ್ತೆನೆ.
ರಕ್ಷಾಣ ಮಂತ್ರಿಗೂ ಗೊತ್ತಿಲ್ಲ ನಿನ್ನ ಈ ಸುರಕ್ಷಾ ವಿಧಾನದ ಗೊಡವೆ.
ಅಫ್ರಿಕದಲ್ಲಿ ಇರುವ ಕುರುಡು ಇರುವೆ,ಅದೇ ಡ್ರಾಗನ್ ಇರುವೆ. ನೀ ಬರುವುದನ್ನು ನೋಡಿ ಈಡಿ ಊರಿನ
ಜನರನ್ನೆ ಖಾಲಿ ಮಾಡಿಸುವೆ. ದಾರಿಯಲ್ಲಿ ಸಿಕ್ಕಿದ್ದನೆಲ್ಲಾ ತಿಂದು ಅರಗಿಸಿಕೊಳ್ಳುವೆ. ನಿನ್ನ ದಾರಿ ನಿನಗೆ ತೆರುವು
ಮಾಡಿಸಿಕೊಳ್ಳುವೆ. ಬುಡಕಟ್ಟಿನ ಜನರನ್ನೆ ಹೆದರಿಸುವೆ.
ಪಾಯಿಖಾನೆಯಲ್ಲಿ ನಿನ್ನ ಸುಳಿವು ಇದ್ದರೆ ಮಧುಮೇಹವೇ. ವಾಸನೆಯನ್ನು ಗ್ರಹಿಸುವೆ. ಒಂದು ದಿನ
ನನನ್ನು ಅಲುಗಾಡಿಸಲಿಲ್ಲವೇ ಹಾಸಿಗೆಯಲ್ಲಿ ಬಂದು. ಬದುಕಿದಾಗಲೇ ಮರಣಾದ ಸುಳಿವು ಇದ್ದರೆ ನೀನು
ಮನುಷ್ಯನನ್ನು ಮುತ್ತುವೆಯೆಂದು ತಿಳೆದು, ಒಂದೆರಡು ಇರುವೆ ನೋಡಿ, ಇನ್ನೇನು ಮರಣ ಸಮೀಪಿಸುತ್ತಿದೆ
ಎಂದು ಹೆದರಿ ತಲ್ಲಣಿಸಲ್ಲಿಲ್ಲವೆ. ನನಗೆ ನಂತರ ಉತ್ತರ ದೊರೆಯಿತ್ತಲ್ಲವೆ. ಹಾಸಿಗೆಯ ಕೆಳಗೆ ಮಂಚದ
ಕಟ್ಟಿಗೆಯ ಕೊಟ್ಟೆಗೆ ನೀನು ಬಂದ್ದದು,ನನಗೆ ಅಲ್ಲಾ ಅಂತ ನಂತರ ಸವiಧಾನವಾಗಲ್ಲವೆ.
ಎರಡು ಹೊಟ್ಟೆ ಇಟ್ಟುಕೊಂಡು,ಒಂದರಲ್ಲಿ ನಿನ್ನ ಆಹಾರ,ಇನೊಂದರಲ್ಲಿ ಬೇರೆ ಇರುವೆಗೆ ಆಹಾರ ಹಂಚಿ
ಕೊಳ್ಳಲು. ಮೆಚ್ಚುವಂತಹುದು ನಿನ್ನ ಆಹಾರ ಸಂಗ್ರಹಣೆಯನ್ನು. ಮಳೆಗಾಲಕ್ಕೆ ಆಹಾರವನ್ನು ಸಂಗ್ರಹಿಸುವೆ.
ಪ್ರಕೃತಿ ಬದಾಲವಣೆಗೆ ನಿನ್ನ ಯೋಜನೆ ಮೆಚ್ಚ ತಕ್ಕದ್ದು. ಜನರೇಕೆ ನಿನ್ನ ಯೋಜನೆಯಿಂದ ಪಾಠ ಕಲಿಯುವುದಿಲ್ಲ.
ನಿನ್ನ ವೇಗದಲ್ಲಿ ಮನುಷ್ಯ ಓಡಿದರೆ ಅವನು ಜೂಜು ಕುದುರೆಯ ವೇಗದಲ್ಲಿ ಓಡಬೇಕು.ಚೊಟುದ್ದ ಇರುವೆ ಕಾಡಿನ
ಮೃಗ ರಾಜನಿಗೂ ಹೆದರಿಸುವೆ. ಅದರೆ ನಿನಗೂ ಇದೆ ಶತ್ರುಗಳ ಭಯ. ಚಿಂಪಾಜಿಗಳು ನಿನ್ನ ಗೊಡಿಗೆ ಕಡ್ಡಿ
ಹಾಕಿ ತಿಂದರೆ, ನೀನೇಕೆ ಅದರ ನಾಲಿಗೆಯನ್ನು ಕಚ್ಚಲ್ಲಾ? ತೋಟದ ಗಿಡಗಳ್ಳಲ್ಲಿ ಪಾತಳ ಗುಂಡಿ ಮಾಡುವೆ.
ಇಲಿ ದೊಗರಿಗಿಂತ ಮೇಲು. ಇಲಿ ದೊಗರಿಗೆ ಹಾವು ಬರಬಹುದು. ನಿನ್ನ ಗೊಡಿಗೆ ಹಾವು ಬರೊಲ್ಲ. ಅದಕ್ಕೆ ಹಾಕುತ್ತಿಲ್ಲವೆ ನಿನಗೆ ಅಹಾರ ತರಕಾರಿ ಹಣ್ನುಗಳ ಸಿಪ್ಪೆ ಉಳಿದ ಅಹಾರ. ನಿನ್ನ ಶತ್ರು ಪಂಗೋಲಿಯನ್,ಚಿಪ್ಪುಹಂದಿ
ಇರುವೆ ಭಕ್ಷಕ ತನ್ನ ಉದ್ದನೆಯ ಅಂಟಿನ ನಾಲಿಗೆಯನ್ನು ಚಾಚಿ ನಿನ್ನು ತಿನ್ನುತ್ತದೆ.
ಇರುವೆ ಇರುವೆ ಸಾಕು ನಿನ್ನ ಪುರಾಣ. ಇಲ್ಲಿ ಮುಗಿಸುವೆ ನಿನ್ನ ರಾಮಯಾಣ. ಸೃಷ್ಟಿಕರ್ತನಿಗೆ ಮಾಡೋಣ ಪ್ರಮಾಣ. ನಿನ್ನ ಇರುವಿಗೆ (ಇರುವುದಕ್ಕೆ) ನಾನು, ನನ್ನ ಇರುವಿಗೆ ನೀನು ಏಂದೂ ತೊಂದರೆ
ಕೊಡದೆ ಇರೋಣ.
No comments:
Post a Comment