
ನಮ್ಮ ಅತ್ತೆ ಹೇಳುತ್ತಿದ್ದರು,ಕಣ್ಣು ಹೇಡಿ ಕೈ
ರಾಕ್ಷಸ, ಕೆಲಸವನ್ನು ನೋಡಿ ಕಣ್ಣು ಹೆದರುತ್ತೆ.
ಮುನ್ನುಗ್ಗಿದ್ದೆ
ಕೈ ರಾಕ್ಷಸ ಕೆಲಸ ಮುಗಿಸುತ್ತೆ. ಹಿರಿಯರ
ಒಂದೊಂದು ಉಪಮೆ ಎಂತಹದು ಕೊಡುತ್ತಿದ್ದರು
ತಮ್ಮ ಅನುಭವದಿಂದ, ಏನು ಓದಿದ್ದರು? ಎಲ್ಲಿತ್ತು
ಅವರಿಗೆ ವಿದ್ಯೆ ಸಂಪಾದನೆ ಮಾಡುವ
ಟಿವಿಯಾ,ಪುಸ್ತಕವಾ
ಈಗ ನನ್ನ ಕ್ಯೆಗೆ
ಬರೆಯಲು ಅಗುತ್ತಿಲ್ಲ. ರಾತ್ರೆ
ಅದರೆ ನರನರ ಕೈ ಕೀಲು
ನೋವು. 62 ವರ್ಷ
ಬದುಕಿನಲ್ಲಿ
ಬರೆದ್ದದ್ದು ಏಷ್ಟು? ಕಲೆಯ ಕೆಲಸ
ಮಾಡಿದ್ದು ಏಷ್ಟು?ಮರೆಯುವುದೆ ಈ
ಬಲ ಕೈಯನ್ನು.ಕಚ್ ವರ್ಕ,
ಕ್ರೋಷ, ಕಾಂತ,ಕುಂದನ್,ಹಾಕಿದ
ಸೀರೆಗಳು,ಲಂಬಾಣಿ ಕನ್ನಡಿ,ಅಡಿಕೆ
ಬ್ಯಾಗು,ಬುದ್ದಿವಂತರ ಹೆಗಲಿಗೆ
ಏರುವ ಊದ್ದನೆ ಚೀಲ,ಹುಚ್ಚಾಸೆಯ
ಬಟ್ಟೆ ಕಟಿಂಗ್, ತರತರಹದ ಕಮೀಸ್,
ಬ್ಲೊಸ್, ರಜಾಯಿ ಕವರ್,
ಕುಷನ್ ಕವರ್,ಪಿಲ್ಲೋಕವರ್,ಬೆಡ್
ಶಿಟ್ ಡಿಸೈನ್,ಬಂಜಾರ ಕಲೆ,ನಾಳೆ ಏನು ಹೊಸದು
ಅನ್ವೇಷಣೆ ಮಾಡಿ
ಹೊಲಿಬೇಕು,ಕತ್ತರಿಸಬೇಕು ಎಂಬುದರ ಯೋಚನೆ. ಅರ್ಕೆಮಿಡಿಸನಂತೆ
ಯೋಚನೆಮಾಡಿ ಹೊಳೆದಾಗ,ನಿದ್ದೆ
ಬಂದು ಕಲ್ಪಿಸಿದ ನಮ್ಮದೆ ಸ್ವಂತ ಡಿಸೈನ್
ಹಾಕಿ, ಸತತವಾಗಿ,35 ವರ್ಷ ಕೈ ಕೆಲಸ
ಮಾಡಿದ್ದನ್ನು ಮರೆಯುವುದೆ. ಇಂತಹ
ಕೈ ಈಗ ಕೈಕೊಟ್ಟಿದೆ,ಅಂದರೆ
ಬೇಜಾರಾಗುವುದೆ? ಉತ್ಸಾಹದಿಂದ ಕೈ ದುಡಿದುದ್ದನ್ನು
ನೋಡಿ ಸಂತೋಷಪಟ್ಟು,ಅತ್ಮತೃಪ್ತಿಯೊಂದಿಗೆ ಆನಂದವಾಗಿಸಿದ ಈ ಕೈಯನ್ನು ಮರೆಯುವುದುಂಟೆ.

ಮನೆಗೆ
ಬರುವ ನೆಂಟರು,ಸ್ನೇಹಿತರು ಡಿನ್ನರ್
ಡಿಪ್ಲೋಮೆಸಿ ಅಂತ ಗಂಡ ಊರೊವರನೆಲ್ಲಾ
ಊಟ
ಹಾಕಿಸಿ
ಭೀಗಿದಾಗ ಮಾಡಲ್ಲವೇ ಈ ಕೈ ಕೆಲಸವನ್ನು.
ಪಾತ್ರೆತೊಳೆಯುವುದನ್ನು.ಕಸಗುಡಿಸುವುದನ್ನು.
ಗಾರ್ಡನಿಂಗ್
ಮಾಡುವುದನ್ನು.ತಿಂಗಳ ಟಾರ್ಗೆಟ್ ಅಂತ
ಎಲ್ಲಾ ಹಿತಾಳೆ ಸಾಮನು.ಕಿಟಕಿ.ಬಾಗಿಲು,ಕಬ್ ಬೋರ್ಡ
ಎಲ್ಲಾ ರಡಿ ಲುಕ್ ಕ್ಲಿನ್
ಅಂತ ಇದೇ ಕೈ ಯಲ್ಲವೇ
ಮಾಡಿದ್ದು? ದೇವರಿಗೆ
ಅಭೀಷೇಕ ಮಾಡಲು ತಾಮ್ರ
ಕಂಚು,ಹಿತ್ತಾಳೆ ಪೂಜಾ ಸಾಮಗ್ರಿಗಳನ್ನು ಥಳಥಳನೆ
ಹೊಳೆಯುವಂತೆ ತೊಳೆದ ಕೈ. ನಮ್ಮ ಯಜಮಾನರು
ಅನ್ನುತ್ತಿದ್ದರು, ಪೊಜೆ
ನಾ ಮಾಡಿದರೇನು? ಅದಕ್ಕೆಅಣಿಮಾಡಿಕೊಟ್ಟ
ನಿನಗೆ ಬರುವುದು ಪುಣ್ಯವೆಂದು,
ಏನೋ ಅಪ್ಪಾ, ಇಷ್ಟು ವರ್ಷಮಾಡಿದುದಕ್ಕೆ
ಬಂದಿದೆ ಕೈ ನೋವಿನ ಬಹುಮಾನ.
ಎಣಸಿಲ್ಲಾ ಪುಣ್ಯಗಳ ಲೆಕ್ಕಾ
ಚಾರ. ಬರೆಯಲು ಕೊತರೆ ಅಕ್ಷರ
ಮುಂದಕ್ಕೆ ಹೋಗೋಲ್ಲ.ಮರತೆಯೆನು ನನ್ನು
ಅನ್ನುತ್ತಿದೆ ಕೈ. 62 ತುಂಬಿ
ದರು ಹುರುಪು 16ದ್ದು. ಅನುಸರಿಸು,ಸಹಿಸಿಕೊ
ಅಂದ್ರೆ ಪಾಪ ಏನು ಮಾಡುತ್ತೆ
ಕೈ?
ಯಾರು ಕೊಟ್ಟಿದ್ದಾರೆ ಬಹುಮಾನ,ಸನ್ಮಾನ,ಸತ್ಕಾರ, ಸೈಟೇಷನ್,ಈ ಬಲ ಕೈಗೆ? ಅತ್ಮ
ಸಂತೋಷ
ಕೊಟ್ಟಿಲ್ಲವೇ
ನನಗೆ? ಇನ್ನಾದರು
ಕೈಯನ್ನು ದುಡಿಸಿಕೊಳ್ಳದೆ ಎಷ್ಟೂ ಬೇಕೋ ಅಷ್ಟು
ಮಿತಿಯಾಗಿ ಮಾಡಿ
ಕೆಲಸದಿಂದ
ಕೊಡಬೇಕು ಸ್ವಲ್ಪ ವಿರಾಮ. ನನ್ನಿಂದಲೇ
ನನ್ನ ಬಲ ಕೈಗೆ ಕೊಡುವೆ
ಈ ಕವನದ ಬಹುಮಾನ,
ನನ್ನ ನಮನ,ನಮೋ ನಮಃ.
--------------------------------------------------------------------
No comments:
Post a Comment