ಪಾಪ ಪುಣ್ಯದ ಭಯಕ್ಕೋನೋ ಮಾಡುವೆವು ಭಗವಂತನ ಪೂಜೆಯನ್ನು.
ಬೆಳಿಗ್ಗೆ ಎದ್ದು ಸ್ನಾನ ಮಾಡಿ,ಮಾಹ ಪೃಸಾದವನ್ನು ತಯಾರು ಮಾಡಿ,
ಭಕ್ತಿಯಿಂದ ಪೂಜೆ ಮಾಡುವವರ ಮುಂದೆ ಇಟ್ಟು.
ಸಮಟ(ಸಾಲಿಗ್ರಾಮ ಇಡುವ ಡಬ್ಬ),ಹಿತ್ತಾಳೆ ಪಾತ್ರೆಯನ್ನು ಶುಭ್ರವಾಗಿ ತೊಳೆದು,
ಹೂವು ಕಿತ್ತು,ಹಾರಹಾಕಿ ದೇವರನ್ನು ಸಿಂಗರಿಸಿ,ಅರತಿ, ತೀರ್ಥವನ್ನು,ತೆಗೆದುಕೊಂಡು,
ಬ್ಯೆದು ಕೊಂಡರೆ,ಭೀತಿಯಿಂದ ಭಗವಂತ ಎನು ಅನ್ನುವನು ಅಂದು,
ಕ್ಯೆಯಲ್ಲಿ ಅಗುವತನಕ ಮಾಡುವುದು ದೇವರ ಕೆಲಸವನ್ನು,
ನಮ್ಮ ಯಜಮಾನರು ಅನ್ನುತ್ತಾರೆ, ಅವರು ಪೂಜೆಮಾಡಿದರೆ ಎನು,
ಪುಣ್ಯ ಬರುವುದು ಹೆಂಡತಿ, ಮಕ್ಕಳಿಗೆ ಎಂದು,
ಇದು ನಿಜವೇ, ವೇದಾಂತವೆ?
ಎಲ್ಲಿರುವೆ ಚಿತ್ರಗುಪ್ತ ತೋರಿಸು ನನ್ನ ಅಕೌಂಟ್,
ಕಣ್ಣು ಇಟ್ಟಿರುವರು ಕೆಲವರು ನನ್ನ ಯಜಮಾನರ ಬ್ಯಾಂಕ್ ಅಕೌಂಟ್ ಗೆ,
ಕಪಟ ನಾಟಕ ಮಾಡಿ,ನಯವಾಗಿ ನಂಬಿಸುವರು,
ಒಳಗೊಳಗೆ ಸಂತೋಷಪಟ್ಟು ಕಾಣುವರು ಕನಸನ್ನು,
ನಿನ್ನ ಯಜಮಾನ ಯಮನು ಬಂದು,
ನಮ್ಮು ಎಂದು ಓಯ್ಯುವನು ಎಂದು,
ಎಂದು ಎಲ್ಲಾವು ಅವರೆಗೆ ಸೇರುವುದೆಂದು,
ಎಲ್ಲಿರುವೆ ಚಿತ್ರಗುಪ್ತ? ತೋರಿಸು ನಿನ್ನಯ ಅಕೌಂಟು,
ನಮ್ಮೆಲ್ಲರ ಪೂಜಫಲದ,ಪಾಪಪುಣ್ಯದ ಅಕೌಂಟು.
No comments:
Post a Comment